Showing posts with label ISIS. Show all posts
Showing posts with label ISIS. Show all posts

Saturday, March 15, 2025

ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮುಖ್ಯಸ್ಥ ಖತಂ

 ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮುಖ್ಯಸ್ಥ ಖತಂ

ವದೆಹಲಿ: ಇರಾಕಿನ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದೊಂದಿಗೆ, ಇರಾಕ್‌ನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆಸಿದ ನಿಖರವಾದ ವೈಮಾನಿಕ ದಾಳಿಯಲ್ಲಿ "ಅಬು ಖದೀಜಾ" ಎಂಬ ಅಡ್ಡ ಹೆಸರಿನ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿ ಹತನಾಗಿದ್ದಾನೆ ಎಂದು ಅಮೆರಿಕ ೨೦೨೫ ಮಾರ್ಚ್‌ ದಿನಾಂಕ ೧೫ರಂದು ಘೋಷಿಸಿದೆ.

ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದ ಮತ್ತು ಜಾಗತಿಕವಾಗಿ ಗುಂಪಿನ ಎರಡನೇ ಕಮಾಂಡರ್ ಸ್ಥಾನವನ್ನು ಹೊಂದಿದ್ದ. ಮಾರ್ಚ್ 13 ರಂದು ನಡೆದ ದಾಳಿಯಲ್ಲಿ ಮತ್ತೊಬ್ಬ ಐಸಿಸ್ ಭಯೋತ್ಪಾದಕ ಕೂಡಾ ಹತನಾಗಿದ್ದಾನೆ.

ಯುಎಸ್ ಮಿಲಿಟರಿ ಅಧಿಕಾರಿಗಳ ಪ್ರಕಾರ, ಅಬು ಖದೀಜಾ ವಿಶ್ವಾದ್ಯಂತ ಭಯೋತ್ಪಾದಕ ಗುಂಪಿನ ಸಾಗಣೆ, ಯೋಜನೆ ಮತ್ತು ಹಣಕಾಸು ನಿರ್ವಹಣೆಯ ಮೇಲ್ವಿಚಾರಣೆ ಮಾಡುತ್ತಿದ್ದ.

ವಾಯುದಾಳಿಯ ನಂತರ, ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಮತ್ತು ಇರಾಕಿ ಪಡೆಗಳು ಸ್ಥಳಕ್ಕೆ ಆಗಮಿಸಿ ಅಬು ಖದೀಜಾ ಮತ್ತು ಇನ್ನೊಬ್ಬ ಐಸಿಸ್ ಹೋರಾಟಗಾರನ ಸಾವನ್ನು ದೃಢಪಡಿಸಿದವು. CENTCOM ಪ್ರಕಾರ, ರು ಕೂಡಾ ಸ್ಫೋಟಗೊಳ್ಳದ ಆತ್ಮಹತ್ಯಾ ಜಾಕೆಟ್‌ಗಳನ್ನು ಧರಿಸಿದ್ದುದು ಕಂಡುಬಂದಿದೆ ಮತ್ತು ಅವರ ಬಳಿ ಬಹುವಿಧದ ಶಸ್ತ್ರಾಸ್ತ್ರಗಳಿದ್ದವು. ಅಬು ಖದೀಜಾನ ಗುರುತನ್ನು ಹಿಂದಿನ ದಾಳಿ ಕಾಲದಲ್ಲಿ ಸೆರೆ ಹಿಡಿದ ಸಂದರ್ಭದಲ್ಲಿ ಸಂಗ್ರಹಿಸಲಾದ ಮಾದರಿಗಳನ್ನು ಬಳಸಿ, ಡಿಎನ್‌ಎ ಹೊಂದಾಣಿಕೆಯ ಮೂಲಕ ದೃಢಪಡಿಸಲಾಯಿತು.

"ಇಡೀ ಜಾಗತಿಕ ಐಸಿಸ್ ಸಂಘಟನೆಯಲ್ಲಿ ಅಬು ಖದೀಜಾ ಪ್ರಮುಖ ಐಸಿಸ್ ಸದಸ್ಯರಲ್ಲಿ ಒಬ್ಬನಾಗಿದ್ದ. ನಮ್ಮ ತಾಯ್ನಾಡು ಪ್ರದೇಶ ಮತ್ತು ಅದರಾಚೆಗಿನ  ಅಮೆರಿಕದ ಮಿತ್ರರು ಹಾಗೂ ಪಾಲುದಾರ ಸಿಬ್ಬಂದಿಗೆ ಬೆದರಿಕೆ ಹಾಕುವ ಭಯೋತ್ಪಾದಕರ ಹತ್ಯೆ, ಅವರ ಸಂಘಟನೆಗಳ ನಾಶವನ್ನು ನಾವು ಮುಂದುವರಿಸುತ್ತೇವೆ" ಎಂದು ಯುಎಸ್ ಸೆಂಟ್ರಲ್ ಕಮಾಂಡ್‌ನ ಕಮಾಂಡರ್ ಜನರಲ್ ಮೈಕೆಲ್ ಎರಿಕ್ ಕುರಿಲ್ಲಾ ಹೇಳಿದ್ದಾರೆ.

ಸೆಂಟ್ರಲ್‌ ಕಮಾಂಡ್‌ ಸೆರೆ ಹಿಡಿದ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.

Tuesday, October 20, 2020

ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರ, ‘ಜಿಹಾದ್’ಗೆ ಐಸಿಸ್ ಕರೆ

 ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರ, ‘ಜಿಹಾದ್ಗೆ ಐಸಿಸ್ ಕರೆ

ನವದೆಹಲಿ: ಭಾರತದ ವಿರುದ್ಧ ಭಯೋತ್ಪಾದಕ ಸಂಘಟನೆ ಐಸಿಸ್ ಭೀಕರ ಯೋಜನೆಯನ್ನು ಮತ್ತೊಮ್ಮೆ ಅನಾವರಣಗೊಂಡಿದೆ. ಭಾರತದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಜಿಹಾದ್ ನಡೆಸುವಂತೆ ಐಸಿಸ್ ಭಯೋತ್ಪಾದಕ ಸಂಘಟನೆಯ ಡಿಜಿಟಲ್ ನಿಯತಕಾಲಿಕದ ಕಪಟ ಸಾಹಿತ್ಯ್ಕ ಕರೆ ನೀಡಿರುವುದು ಬಹಿರಂಗಕ್ಕೆ ಬಂದಿದೆ.

ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರನ್ನು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಮತ್ತು ಭಾರತ ಸರ್ಕಾರದ ವಿರುದ್ಧ ಜಿಹಾದ್ ನಡೆಸಲು ಪ್ರೇರೇಪಿಸಲು ಸಾಹಿತ್ಯವನ್ನು ಬಳಸಲಾಗುತ್ತಿದೆ ಎಂಬುದೂ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಭದ್ರತೆಗೆ ದೊಡ್ಡ ಬೆದರಿಕೆಯೆಂದು ತೋರುತ್ತಿರುವ ಪತ್ರಿಕೆ ಇದೀಗ ಭದ್ರತಾ ಸಂಸ್ಥೆಗಳ ನಿಗಾಕ್ಕೆ  ಒಳಪಟ್ಟಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ಜನರಿಗೆ ಕರೆ ನೀಡುವ ಪತ್ರಿಕೆಯು, ಹೋರಾಟದಲ್ಲಿ ಅವರೊಂದಿಗೆ ದೃಢವಾಗಿ ನಿಲ್ಲುವುದಾಗಿ ಎಂದು ಭರವಸೆ ನೀಡುತ್ತದೆ ಎಂದು ಮೂಲಗಳು ಹೇಳಿವೆ.

ವಾಯ್ಸ್ ಆಫ್ ಇಂಡಿಯಾಎಂದು ಹೆಸರಿಸಲಾದ ಐಸಿಸ್ ಡಿಜಿಟಲ್ ನಿಯತಕಾಲಿಕವನ್ನು ರಹಸ್ಯ ಟೆಲಿಗ್ರಾಮ್ ಚಾನೆಲ್ಗಳು ಮತ್ತು ವೆಬ್ ಮೂಲಕ ದೇಶದ ಜನರಲ್ಲಿ ದ್ವೇಷವನ್ನು ಹರಡಲು ಬಳಸಲಾಗುತ್ತಿದೆ. ಮ್ಯಾಗಜೀನ್ ಇತ್ತೀಚೆಗೆ ತನ್ನ ಒಂಬತ್ತನೇ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರನ್ನು ಪ್ರಚೋದಿಸಲಾಗಿದೆ.

ಮ್ಯಾಗಜೀನ್ ಬಾಬರಿ ಮಸೀದಿಯ ಉರುಳಿಸುವಿಕೆಯ ಚಿತ್ರಗಳನ್ನು ಪ್ರಕಟಿಸಿದೆ ಮತ್ತು "ಬಾಬರಿಗೆ ಪ್ರತೀಕಾರ ತೀರಿಸಲಾಗುವುದು" ಎಂದು ಚಿತ್ರದ ಜೊತೆಗೆ ಬರೆಯಲಾಗಿದೆ. ಇದು ಸಿಎಎಗೆ ಸಂಬಂಧಿಸಿದ ಸುಳ್ಳು ಪ್ರಚಾರ ಮತ್ತು ವಿಷಯದ ಹಲವಾರು ಉದಾಹರಣೆಗಳನ್ನು ಸಹ ಹೊಂದಿದೆ. ಇದಲ್ಲದೆ, ನ್ಯಾಯಾಲಯಗಳ ತೀರ್ಮಾನಕ್ಕೆ ಜನರು ಬದ್ಧರಾಗಿರಬಾರದು ಎಂದು ಅದು ಸೂಚಿಸಿದೆ ಎಂದೂ ಮೂಲಗಳು ತಿಳಿಸಿವೆ.

ಅದರ ಹಿಂದಿನ ಆವೃತ್ತಿಯ ಪ್ರಕಾರ, ಪತ್ರಿಕೆಯ ಇತ್ತೀಚಿನ ಆವೃತ್ತಿಯು ಕೇಂದ್ರದಲ್ಲಿ ಜನರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟಲು ಪ್ರಯತ್ನಿಸಲಿದೆ ಎಂದು ಹೇಳಿದೆ ಎಂದು ಮೂಲಗಳು ಹೇಳಿವೆ.

Saturday, April 4, 2020

ಕಾಬೂಲ್ ಗುರುದ್ವಾರ ದಾಳಿ: ಸೂತ್ರಧಾರಿ ಫರೂಕಿ ಬಂಧನ

ಕಾಬೂಲ್ ಗುರುದ್ವಾರ ದಾಳಿ: ಸೂತ್ರಧಾರಿ ಫರೂಕಿ ಬಂಧನ

ನವದೆಹಲಿ: ಕಾಬೂಲ್ ಗುರುದ್ವಾರದ ಮೇಲೆ ಮಾರ್ಚ್ ೨೫ರಂದು ನಡೆದ ದಾಳಿಯ ಸೂತ್ರಧಾರಿ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾವಿನ್ಸ್ (ಐಎಸ್‌ಕೆಪಿ) ಭಯೋತ್ಪಾದಕ ಸಂಘಟನೆಯ ಸ್ವಯಂಘೋಷಿ ಅಮೀರ್ ಮೌಲವಿ ಅಬ್ದುಲ್ಲ ಅಕ ಅಸ್ಲಂ ಫರೂಖಿಯನ್ನು ಅಪ್ಘನ್ ಭದ್ರತಾ ಪಡೆಗಳು 2020 ಏಪ್ರಿಲ್ 04ರ ಶನಿವಾರ ವಿಶೇಷ ಕಾರ್‍ಯಾಚರಣೆಯೊಂದರಲ್ಲಿ ಬಂಧಿಸಿದವು.

ಪಾಕಿಸ್ತಾನಿ ಪ್ರಜೆಯಾದ ಮೌಲವಿ ಅಬ್ದುಲ್ಲ ಹಿಂದೆ ಲಷ್ಕರ್--ತಯ್ಬಾ(ಎಲ್ ಇಟಿ) ಮತ್ತು ಆಗಿನ ತೆಹ್ರೀಕ್ -- ತಾಲಿಬಾನ್ ಭಯೋತ್ಪಾದಕ ಗುಂಪುಗಳ ಜೊತೆಗೆ ಕೆಲಸ ಮಾಡಿದ್ದು,  ೨೦೨೯ರ ಏಪ್ರಿಲ್‌ನಲ್ಲಿ ಮೌಲವಿ ಜಿಯಾ-ಉಲ್-ಹಕ್ ಅಕ ಅಬು ಒಮರ್ ಖೊರಾಸಾನಿ ಜಾಗದಲ್ಲಿ ಐಎಸ್ ಕೆಪಿ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದ.

ಹಖ್ಖಾನಿ ಜಾಲ ಮತ್ತು ಎಲ್ ಇಟಿ ಸೂಚನೆ ಮೇರೆಗೆ ಕಾಸರಗೋಡಿನ ನಿವಾಸಿ ಮುಶಿನ್ ಟಿಕಾರಿಪುರ ಮತ್ತು ಇನ್ನೊಬ್ಬ ಉರ್ದು ಪಂಜಾಬಿ ಮಾತನಾಡುವ ವ್ಯಕ್ತಿಯನ್ನು ಬಳಸಿಕೊಂಡು ಮೌಲವಿ ಫರೂಕಿ, ಕಾಬೂಲಿನ ೨೭ ಮಂದಿ ಮುಗ್ಧ ಸಿಕ್ ಪುರುಷರು ಹಾಗೂ ಮಹಿಳೆಯರನ್ನು ಕಾಬೂಲಿನ ಶೋರ್ ಬಜಾರ್ ಪ್ರದೇಶದ ಗುರುದ್ವಾರದಲ್ಲಿ ಕೊಲ್ಲಿಸಿದ್ದ. ಹತ್ಯಾಕಾಂಡದಲ್ಲಿ ಕಾಸರಗೋಡಿನ ಯುವಕನಾದ ಮುಶಿನ್ ಸಾವನ್ನಪ್ಪಿದ್ದು, ಆತನ ತಾಯಿಗೆ ಮಗನ ಸಾವಿನ ಬಗ್ಗೆ ತಿಳಿಸಲಾಗಿತ್ತು

Wednesday, March 25, 2020

ಕಾಬೂಲ್ ಗುರುದ್ವಾರದ ಮೇಲೆ ಐಸಿಸ್ ಉಗ್ರರ ದಾಳಿ: ೨೭ ಜನರ ಬಲಿ

ಕಾಬೂಲ್ ಗುರುದ್ವಾರದ ಮೇಲೆ ಐಸಿಸ್ ಉಗ್ರರ ದಾಳಿ:  ೨೭ ಜನರ ಬಲಿ
ಕಾಬೂಲ್: ಭಾರೀ ಶಸ್ತ್ರ ಸಜ್ಜಿತ ಉಗ್ರರ ಗುಂಪು ಗುರುದ್ವಾರದ ಮೇಲೆ ಏಕಾಏಕಿ ದಾಳಿ ನಡೆಸಿ ೨೭ ಮಂದಿಯನ್ನು ಹತ್ಯೆಗೈದ  ಘಟನೆ ಅಪ್ಘಾನಿಸ್ಥಾನದ  ಕಾಬೂಲ್ ಶೋರ್ ಬಜಾರ್ ಪ್ರದೇಶದಲ್ಲಿ  2020 ಮಾರ್ಚ್ 25ರ ಬುಧವಾರ ಘಟಿಸಿತು.

ಸಿಖ್ ಗುರುದ್ವಾರದ ಮೇಲೆ ದಾಳಿ ನಡೆಸಿರುವ ಘಟನೆಯನ್ನು ಭಾರತಹೇಡಿ ಕೃತ್ಯ’ ಎಂಬುದಾಗಿ  ಖಂಡಿಸಿತು.

ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿದ  ಕೇಂದ್ರ ಸರ್ಕಾರ ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿತು.  ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಹಿಂದೂ ಮತ್ತು ಸಿಖ್ ಸಮುದಾಯದ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಭಾರತ ಸಿದ್ದವಾಗಿದೆ ಎಂದು ಸರ್ಕಾರ ತಿಳಿಸಿತು.

ಕಾಬೂಲ್ ನಲ್ಲಿರುವ ಸಿಖ್ ಗುರುದ್ವಾರದ ಮೇಲೆ ನಡೆಸಿರುವ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿರುವುದಾಗಿ ಎಸ್ ಐಟಿಇ ಇಂಟೆಲಿಜೆನ್ಸ್ ಗ್ರೂಪ್ ತಿಳಿಸಿತು.   ದಾಳಿಯ ಹಿಂದೆ ಪಾಕಿಸ್ತಾನದ ಐಎಸ್ ಕೈವಾಡ ಇದ್ದಿರಬಹುದು ಎಂದು ಭಾರತದ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿತು.

Sunday, March 8, 2020

ಜಾಮಿಯಾ ನಗರದಲ್ಲಿ ಐಎಸ್ ಸಂಪರ್ಕದ ದಂಪತಿ ಸೆರೆ

ಭಯೋತ್ಪಾದಕ ದಾಳಿಗೆ ಸಿಎಎ ಪ್ರತಿಭಟನೆ ಬಳಕೆ ಸಂಚು
ಜಾಮಿಯಾ ನಗರದಲ್ಲಿ ಐಎಸ್ ಸಂಪರ್ಕದ ದಂಪತಿ ಸೆರೆ
ನವದೆಹಲಿ: ಭಯೋತ್ಪಾದಕ ದಾಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳನ್ನು ಬಳಸಿಕೊಳ್ಳುತ್ತಿದ್ದ, ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ (ಐಎಸ್ಕೆಪಿ) ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದ ಕಾಶ್ಮೀರದ ದಂಪತಿಯನ್ನು ದಕ್ಷಿಣ ದೆಹಲಿ ಜಾಮಿಯಾ ನಗರದ ಪೊಲೀಸರು 2020 ಮಾರ್ಚ್  08ರ ಭಾನುವಾರ ಬೆಳಗ್ಗೆ ಬಂಧಿಸಿದರು.

ದಂಪತಿ ಅಫ್ಘಾನಿಸ್ಥಾನದ ಉನ್ನತ ಐಎಸ್ಕೆಪಿ ಸದಸ್ಯರ ಜೊತೆಗೆ ಸಂಪರ್ಕ ಇಟ್ಟುಕೊಂಡು ಪೌರತ್ವ  ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯನ್ನು ಬಳಸಿಕೊಂಡು ಭಯೋತ್ಪಾದಕ ದಾಳಿಗಳನ್ನು ನಡೆಸುವಂತೆ ಮುಸ್ಲಿಂ ಯುವಕರನ್ನು ಪ್ರಚೋದಿಸುತ್ತಿದ್ದರು ಎಂದು ಸುದ್ದಿ ಮೂಲಗಳು ತಿಳಿಸಿದವು.

ಕಾಶ್ಮೀರದ ಶ್ರೀನಗರದ ದಂಪತಿ ಜಹಾನ್ಜೈಬ್ ಸಮಿ ಮತ್ತು ಆತನ ಪತ್ನಿ ಹೀನಾ ಬಶೀರ್ ಬೇಗ್ ಇವರನ್ನು ಬಂಧಿಸಲಾಗಿದೆ. ಅವರನ್ನು ಬಂಧನಕ್ಕೆ ಒಳಪಡಿಸುವ ವಿಧಿವಿಧಾನದ ಪ್ರಕ್ರಿಯೆಯನ್ನು ನಾವು ಪೂರ್ಣಗೊಳಿಸುತ್ತಿದ್ದೇವೆಎಂದು ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದರು.

ಅಫ್ಘಾನಿಸ್ಥಾನದ ಐಎಸ್ಕೆಪಿ ಉಗ್ರ ಸಂಘಟನೆಯ ಜೊತೆಗೆ ಸಂಪರ್ಕ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜಹಾನ್ಜೈಬ್ ಸಮಿ ಮೇಲೆ ಭಾರತೀಯ ಗುಪ್ತದಳ ಕೆಲ ದಿನಗಳಿಂದ ಕಣ್ಣಿಟ್ಟಿತ್ತು.

ಐಎಸ್
ಕೆಪಿಯು ಅಫ್ಘಾನಿಸ್ಥಾನ ಮೂಲದ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆಯ ಆಧೀನ ಸಂಘಟನೆಯಾಗಿದೆ. ಆತ್ಮಹತ್ಯಾ ದಾಳಿ ಸೇರಿದಂತೆ ಭಯೋತ್ಪಾದಕ ದಾಳಿ ನಡೆಸುವ ಉದ್ದೇಶ ಸಂಘಟನೆ ಇದ್ದಂತೆ ಕಂಡು ಬರುತ್ತದೆ. ಉದ್ದೇಶಕ್ಕಾಗಿ ಶಸ್ತ್ರಾಸ್ತ್ರ ಸಂಗ್ರಹಿಸುವ ಯತ್ನವನ್ನು ಅದು ನಡೆಸುತ್ತಿತ್ತು ಎಂದು ಅಧಿಕಾರಿ ನುಡಿದರು.

ಜಹಾನ್ಜೈಬ್ ಸಮಿಯ ಚಟುವಟಿಕೆಗಳು ಸಧ್ಯಕ್ಕೆ ಭಯೋತ್ಪಾದಕ ಗುಂಪಿನ ಪರವಾಗಿ ಸೈಬರ್ ಸ್ಪೇಸ್ನಲ್ಲಿ ಪ್ರಚಾರ ನಡೆಸುವುದಕ್ಕೆ ಮಾತ್ರ ಸೀಮಿತವಾಗಿತ್ತು. ಗುಂಪು ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರವೇ ಸೀಮಿತವಾಗುವ ಬದಲು ಭಾರತದ ಒಳನಾಡಿನತ್ತ  ತನ್ನ ಗಮನ ಹರಿಸಬೇಕು ಎಂದು ಜಹಾನ್ಜೈಬ್ ಸಲಹೆ ಮಾಡಿದ್ದ.

ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಘಟಕದ ಪಾಕಿಸ್ತಾನಿ ಕಮಾಂಡರ್ ಹುಜೈಫಾ ಅಲ್-ಬಾಕಿಸ್ತಾನಿ ಜೊತೆಗೆ ಜಹಾನ್ಜೈಬ್ ಸಂಪರ್ಕ ಹೊಂದಿದ್ದ ಎಂದು ಗುಪ್ತಚರ ಅಧಿಕಾರಿಗಳು ಹೇಳಿದರು. ಹುಜೈಫಾ ಅಲ್ ಬಾಕಿಸ್ತಾನಿ ಕಾಶ್ಮೀರಿ ಯುವಕರನ್ನು ಭಯೋತ್ಪಾದಕ ಗುಂಪಿಗೆ ಸೇರಿಸುವ ಸಲುವಾಗಿ ಅವರನ್ನು ತೀವ್ರವಾದಿಗಳನ್ನಾಗಿಸುವ ಕೆಲಸದಲ್ಲಿ ಮಹತ್ವದ ಪಾತ್ರ ವಹಿಸಿದ್ದ. ಪಾಕ್ ಪ್ರಜೆಯಾಗಿರುವ ಹುಜೈಫಾ ಮೊತ್ತ ಮೊದಲಿಗೆ ಲಷ್ಕರ್--ತೊಯ್ಬಾ ಸಂಘಟನೆಯನ್ನು ಸೇರಿದ್ದ, ಬಳಿಕ ಐಎಸ್ ಗೆ ಬಡ್ತಿ ಪಡೆದಿದ್ದ. ಐಎಸ್ಗೆ ಅಂತರ್ಜಾಲದ (ಆನ್ ಲೈನ್) ಮೂಲಕ ನೇಮಕಾತಿಗಳನ್ನು ಮಾಡಿಕೊಳ್ಳುವಲ್ಲಿ ಅವನು ಸಿದ್ಧ ಹಸ್ತನಾಗಿದ್ದ.

ಅಫ್ಘಾನಿಸ್ಥಾನದಲ್ಲಿ ನಡೆದ ಡ್ರೋಣ್ ದಾಳಿಯೊಂದರಲ್ಲಿ ಹುಜೈಫಾ ಅಲ್ -ಬಾಕಿಸ್ತಾನಿ ಹತನಾಗಿದ್ದ. ಆತನ ಸಾವನ್ನು ಕಳೆದ ವರ್ಷ ಜುಲೈ ತಿಂಗಳಲ್ಲಿ ಐಎಸ್ ಮಾಧ್ಯಮ ಒಂದು ದೃಢಪಟ್ಟಿತ್ತು. ಹುಜೈಫಾ ಭಾರತೀಯ ಸಂಸ್ಥೆಗಳಿಗೆ ರಾತ್ರಿ ನಿದ್ದೆ ಬರದಂತೆ ಮಾಡಿದ್ದ ಎಂದು ಐಎಸ್ ಮಾಧ್ಯಮ ಪ್ರತಿಪಾದಿಸಿತ್ತು.

ಜಹಾನ್ಜೈಬ್ ಪತ್ನಿ ಹೀನಾ ಬಶೀರ್ ಬೇಗ್ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಐಸ್ ಪರವಾಗಿ ಸಕ್ರಿಯಳಾಗಿದ್ದಳು ಮತ್ತು ಐಎಸ್ ಭಯೋತ್ಪಾದಕ ಚಟುವಟಿಕೆಗಳಿಗಾಗಿಪ್ರತಿಭಾವಂತರನ್ನುಪತ್ತೆ ಹಚ್ಚಲು ವಾಟ್ಸಪ್ ಸವಲತ್ತನ್ನು ಒದಗಿಸಿದ್ದಳು ಎಂದು ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರು ನುಡಿದರು.

ಸೌತ್ ಅಲ್ ಹಿಂದ್ (ವಾಯ್ಸ್ ಆಫ್ ಇಂಡಿಯಾ) ಹೆಸರಿನ ಐಎಸ್ ನಿಯತಕಾಲಿಕದ (ಮ್ಯಾಗಜೈನ್) ಫೆಬ್ರುವರಿ ಆವೃತ್ತಿಯನ್ನು ಪ್ರಕಟಿಸುವಲ್ಲಿ ತನ್ನ ಪಾತ್ರ ಇದ್ದುದನ್ನು  ಜಹಾನಜೈಬ್ ಸಮಿ ತನಿಖಾ ತಂಡ ಒಂದಕ್ಕೆ ಪ್ರಾಥಮಿಕ ತನಿಖೆಯ ವೇಳೆಯಲ್ಲಿ ತಿಳಿಸಿದ್ದಾನೆ.

ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಸಿಟ್ಟಿಗೆದ್ದಿರುವ ಭಾರತೀಯ ಮುಸ್ಲಿಮರಿಗೆ  ರಾಜಕೀಯ ಪ್ರತಿಭಟನೆ ತ್ಯಜಿಸಿ ಜಿಹಾದೀ ಹಿಂಸಾಚಾರಕ್ಕೆ ಇಳಿಯುವಂತೆ  ಡಿಜಿಟಲ್ ನಿಯತಕಾಲಿಕದಲ್ಲಿ, ಇಸ್ಲಾಮಿಕ್ ಸ್ಟೇಟ್ ಉಪಖಂಡ ಶಾಕೆಯು ಕರೆ ಕೊಟ್ಟಿದೆ.

ಪ್ರಜಾಪ್ರಭುತ್ವವು ನಿಮ್ಮನ್ನು ರಕ್ಷಿಸುವುದಿಲ್ಲಎಂದು ಫೆಬ್ರುವರಿ ೨೪ರಂದು ಬಿಡುಗಡೆ ಮಾಡಲಾಗಿರುವ   ಭಯೋತ್ಪಾದಕ ಗುಂಪಿನ ನಿಯತಕಾಲಿಕ ಹೇಳಿದೆ.

ಸಮುದಾಯದ ಹಿತಾಸಕ್ತಿಗಳಿಗೆ ಮುಖ್ಯ ಪ್ರವಾಹದ ಮುಸ್ಲಿಮ್ ನಾಯಕರು ವಂಚನೆ ಎಸಗುತ್ತಿದ್ದಾರೆ ಎಂದು ದೂಷಿಸಿರುವ ನಿಯತಕಾಲಿಕವು ಸಮಾಜದ ಒಂದು ವರ್ಗ, ನಿರ್ದಿಷ್ಟವಾಗಿ ಮುಸ್ಲಿಮ್ ಯುವಕರ ಮೇಲೆ ಪ್ರಭಾವ ಬೀರಿರಬಹುದು ಎಂದು ಜಹಾನ್ಜೈಬ್ ಸಮಿಯ ವಿರುದ್ಧ ತನಿಖೆ ನಡೆಸುತ್ತಿರುವ ಗುಪ್ತಚರ ಅಧಿಕಾರಿ ಹೇಳಿದರು.

ಜಿಹಾದಿ ಹಿಂಸಾಚಾರಕ್ಕೆಸೇರ್ಪಡೆಯಾಗುವಂತೆ ಯುವಕರನ್ನು ಪ್ರಚೋದಿಸಲು ಯತ್ನಿಸಿರುವ ನಿಯತಕಾಲಿಕದ ಜೊತೆಗೆ ಸಂಪರ್ಕ ಹೊಂದಿರುವ ಇತರ ಕೆಲವು ವ್ಯಕ್ತಿಗಳ ಬಗ್ಗೆ ಜಹಾನ್ಜೈಬ್ ಸಮಿ ತಿಳಿಸಿದ್ದಾನೆ.  ಅಲ್ ಹಿಂದ್ಎಂಬುದಾಗಿ ಒಬ್ಬನನ್ನು ಸಮಿ ಗುರುತಿಸಿದ್ದು ಆತನೂ ಸೇರಿದಂತೆ ಆರೋಪಿತ ಸಹಚರರನ್ನು ಪತ್ತೆ ಹಚ್ಚಲು ಯತ್ನಗಳು ನಡೆದಿವೆ ಎಂದು ಅಧಿಕಾರಿ ನುಡಿದರು.

Advertisement