Showing posts with label ಇಸ್ರೋ. Show all posts
Showing posts with label ಇಸ್ರೋ. Show all posts

Wednesday, August 28, 2024

ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

 ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

ಆ. 29ಕ್ಕೆ ಬೆಂಗಳೂರಿನಲ್ಲಿ ಉಪನ್ಯಾಸ ಮಾಲಿಕೆ

ಬೆಂಗಳೂರು: ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನಗಳನ್ನು ತನ್ನ ʼಭುವನʼದಂತಹ ವೇದಿಕೆಯ ಜೊತೆಗೆ ಸಂಯೋಜಿಸುವ ಸಾಧ್ಯತೆ ಬಗ್ಗೆ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ – ಇಸ್ರೋ  ಆಸಕ್ತಿ ತಾಳಿದ್ದು, ಈ ಬಗ್ಗೆ ಚರ್ಚಿಸಲು ಉಪನ್ಯಾಸ ಮಾಲಿಕೆಯೊಂದನ್ನು ಬೆಂಗಳೂರಿನಲ್ಲಿ ಸಂಘಟಿಸಲಾಗಿದೆ.

ಮುಂದುವರಿದ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆ- ನಿಯಾಸ್‌ (ಎನ್‌ ಐ ಎಎಸ್) ಮತ್ತು ಹ್ಯಾನ್ಸ್‌ ಸೀಡೆಲ್‌ ಫೌಂಡೇಷನ್‌ ಜಂಟಿಯಾಗಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ ನಿಯಾಸ್‌ ಸಭಾಂಗಣದಲ್ಲಿ  ಆಗಸ್ಟ್‌ 29ರ ಗುರುವಾರ  ಬೆಳಗ್ಗೆ 10 ಗಂಟೆಗೆ ‘ಸ್ಥಳೀಯ ಆಡಳಿತದ ಬಲವರ್ಧನೆ-ತಂತ್ರಜ್ಞಾನ ಮೂಲಕ ಅಂತರ ನಿವಾರಣೆʼ ಉಪನ್ಯಾಸ ಕಾರ್ಯಕ್ರಮವನ್ನು ಸಂಘಟಿಸಿವೆ.

ಕಾರ್ಯಕ್ರಮದಲ್ಲಿ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಡಾ.ಶಂಕರ ಕೆ. ಪ್ರಸಾದ್‌, ನಿಯಾಸ್‌ನಲ್ಲಿ ʼಇಸ್ರೋ ಚೇರ್‌ ಪ್ರೊಫೆಸರ್‌ ಆಗಿರುವ ಡಾ. ಪಿ.ಜಿ. ದಿವಾಕರ್‌ ಮತ್ತು ನಿಯಾಸ್‌ನಲ್ಲಿ ಸಂಘರ್ಷ ಪರಿಹಾರ  ಮತ್ತು ಶಾಂತಿ ಸಂಶೋಧನಾ ಕಾರ್ಯಕ್ರಮದ ಸಹಾಯಕ ಪ್ರಾಧ್ಯಾಪಕ ಡಾ. ಅಂಶುಮಾನ್‌ ಬೆಹೆರಾ ಪಾಲ್ಗೊಳ್ಳಲಿದ್ದಾರೆ.

ಡಾ. ಶಂಕರ ಪ್ರಸಾದ್‌ ಅವರು ಬ್ಲಾಕ್‌ ಚೈನ್‌, ಇಂಡಿಯಾ ಸ್ಟಾಕ್‌ ಮತ್ತು ಧ್ವನಿ ಸಂವಹನದೊಂದಿಗೆ ಇ-ಆಡಳಿತವನ್ನು ಸಂಯೋಜಿಸುವ ಬಗ್ಗೆ, ಡಾ. ಪಿ. ದಿವಾಕರ್‌ ಅವರು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸಂಶೋಧನಾ ಯೋಜನೆ, ಭೂ ವೀಕ್ಷಣಾ ಉಪಗ್ರಹಗಳು ಮತ್ತು ಜಿಯೋ ಸ್ಪೇಷಿಯಲ್‌ ಟೆಕ್ನಾಲಜಿಗಳ ಮೂಲಕ ಡೇಟಾ ಪ್ರಕ್ರಿಯೆ ಮತ್ತು ಡಾ. ಆಂಶುಮಾನ್‌ ಬೆಹೆರಾ ಭಾರತದಲ್ಲಿ ರಾಜಕೀಯ ಹಿಂಸೆ ಮತ್ತು ಆಂತರಿಕ ಸಂಘರ್ಷಗಳು, ರಾಜಕೀಯ ಸಿದ್ಧಾಂತ ಹಾಗೂ ಅಭಿವೃದ್ಧಿಯ ಸಾಮಾಜಿಕ ಪರಿಣಾಮಗಳ ಬಗ್ಗೆ ಚರ್ಚಿಸುವರು.

ಆಡಳಿತವನ್ನು ವಿಕೇಂದ್ರೀಕರಿಸಲು ಮತ್ತು ಅಂತರ್ಗತ ನಿರ್ಧಾರ ಕೈಗೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ತಳಮಟ್ಟದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಗುರಿಯನ್ನು 73 ನೇ ತಿದ್ದುಪಡಿ ಕಾಯಿದೆ (1992)  ಹೊಂದಿದೆ. ಆದರೆ ಸ್ಥಳೀಯ ಆಡಳಿತದ ತತ್ವಗಳು ಮತ್ತು ಕಾರ್ಯಗಳ ಬಗ್ಗೆ ಸಾಮಾನ್ಯ ಜನರಲ್ಲಿ ಮತ್ತು ಚುನಾಯಿತ ಪ್ರತಿನಿಧಿಗಳಲ್ಲಿ ಅರಿವಿನ ಕೊರತೆಯಿಂದಾಗಿ ಅದರ ಯಶಸ್ಸು ಹೆಚ್ಚಾಗಿ ಸೀಮಿತವಾಗಿದೆ.

ಸ್ಥಳೀಯ ಆಡಳಿತದ ತತ್ವಗಳು ಮತ್ತು ಕಾರ್ಯಗಳ ಬಗ್ಗೆ ಜನ ಸಾಮಾನ್ಯರು ಮತ್ತು ಚುನಾಯಿತ ಪ್ರತಿನಿಧಿಗಳಲ್ಲಿನ ಅರಿವಿನ ಕೊರತೆಯ ಅಂತರದಿಂದಾಗಿ ಪಂಚಾಯತ್‌ ರಾಜ್‌ ಸಂಸ್ಥೆಗಳ ಪರಿಣಾಮಕಾರಿ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳಲು ಅಗತ್ಯವಾದ ಮಾಹಿತಿಗಳನ್ನು ಹೊಂದಿರುವುದಿಲ್ಲ. ಇಂತಹ ಸವಾಲುಗಳನ್ನು ಗೆಲ್ಲಲು ತಂತ್ರಜ್ಞಾನ ಚಾಲಿತ ಉಪಕ್ರಮಗಳು ನೆರವಾಗುತ್ತವೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿದ ಭುವನ್‌ನಂತಹ ಜ್ಞಾನ ವೇದಿಕೆಯು ತಳಮಟ್ಟದಲ್ಲಿ ಉತ್ತಮ ಯೋಜನೆ ಮತ್ತು ನಿರ್ಧಾರ ಕೈಗೊಳ್ಳುವಿಕೆಯನ್ನು ಬೆಂಬಲಿಸಲು ಬೇಕಾದ ಅಮೂಲ್ಯವಾದ ಭೌಗೋಳಿಕ ಮಾಹಿತಿ ಒದಗಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳನ್ನು ಈ ವೇದಿಕೆಯ ಜೊತೆಗೆ ಸಂಯೋಜಿಸುವ ಮೂಲಕ ಪಂಚಾಯಿತ್‌ ರಾಜ್‌ ಸಂಸ್ಥೆಗಳು ಸ್ಥಳೀಯ ಆಡಳಿತವನ್ನು ಬಲಪಡಿಸಬಹುದು. ಈ ಹಿನ್ನೆಲೆಯಲ್ಲಿ ಈ ಕುರಿತ ಚರ್ಚೆಯು ಆಡಳಿತದ ಅಂತರ ನಿವಾರಣೆ ಮತ್ತು ಅದಕ್ಕಾಗಿ ತಾಂತ್ರಿಕ ಪರಿಹಾರಗಳನ್ನು ಸಂಯೋಜಿಸುವ ಮಾರ್ಗಗಳನ್ನು ಅನ್ವೇಷಿಸುತ್ತದೆ ಎಂದು ನಿಯಾಸ್‌ ಪ್ರಜಾತಂತ್ರ ವೇದಿಕೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
Click the image to see closer view:


Saturday, September 2, 2023

ಸೂರ್ಯನೆಡೆಗೆ ʼಆದಿತ್ಯʼಪಯಣ ಯಶಸ್ವೀ ಉಡ್ಡಯನ

 ಸೂರ್ಯನೆಡೆಗೆ ʼಆದಿತ್ಯʼಪಯಣ: ಯಶಸ್ವೀ ಉಡ್ಡಯನ


ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಅಡಿ ಇರಿಸಿದ ಚಂದ್ರಯಾನ-೩ ತ್ರಿವಿಕ್ರಮ ಸಾಧನೆಯ ಬಳಿಕ ಇದೇ ಸೂರ್ಯಶಿಕಾರಿಗೆ ಹೊರಟಿರುವ ಭಾರತದ ಇಸ್ರೋ ಇಂದು ೨೦೨೩ ಸೆಪ್ಟೆಂಬರ್‌ ೨ರ ಶನಿವಾರ ಸೂರ್ಯನ ಅಧ್ಯಯನಕ್ಕಾಗಿ ʼಆದಿತ್ಯ-ಎಲ್-‌೧ ಅಂತರಿಕ್ಷ ವೀಕ್ಷಣಾಲಯವನ್ನು ನಭಕ್ಕೆ ಹಾರಿಸಿತು.

ಬೆಳಗ್ಗೆ ೧೧.೫೦ಕ್ಕೆ ಸರಿಯಾಗಿ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯನ ಕೇಂದ್ರದಿಂದ ಪಿಎಸ್‌ ಎಲ್‌ ವಿ ಸಿ -೫೭ ರಾಕೆಟ್‌ ಮೂಲಕ ಗಗನಕ್ಕೆ ಚಿಮ್ಮುವ ಮೂಲಕ ʼಆದಿತ್ಯʼ ಅಂತರಿಕ್ಷ ವೀಕ್ಷಣಾಲಯ ಉಡ್ಡಯನಗೊಂಡಿತು.

ಕೆಳಗೆ ಕ್ಲಿಕ್ಕಿಸುವ ಮೂಲಕ ಸೂರ್ಯಯಾನ ಸೊಬಗು ವೀಕ್ಷಿಸಬಹುದು:


ಯಾನದ ನೇರ ಪ್ರಸಾರಕ್ಕಾಗಿ ಕೆಳಗೆ ಕ್ಲಿಕ್‌ ಮಾಡಿ:

ಸೂರ್ಯನೆಡೆಗೆ ʼಆದಿತ್ಯʼಪಯಣ

 ಸೂರ್ಯನೆಡೆಗೆ ʼಆದಿತ್ಯʼಪಯಣ

ಇಲ್ಲಿಂದ ನೋಡಿ ನೇರವಾಗಿ

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಅಡಿ ಇರಿಸಿದ ಚಂದ್ರಯಾನ-೩ ತ್ರಿವಿಕ್ರಮ ಸಾಧನೆಯ ಬಳಿಕ ಇದೇ ಸೂರ್ಯಶಿಕಾರಿಗೆ ಹೊರಟಿರುವ ಭಾರತದ ಇಸ್ರೋ ಇಂದು ೨೦೨೩ ಸೆಪ್ಟೆಂಬರ್‌ ೨ರ ಶನಿವಾರ ಸೂರ್ಯನ ಅಧ್ಯಯನಕ್ಕಾಗಿ ʼಆದಿತ್ಯ-ಎಲ್-‌೧ ಅಂತರಿಕ್ಷ ವೀಕ್ಷಣಾಲಯವನ್ನು ನಭಕ್ಕೆ ಹಾರಿಸಲಿದೆ.

ಬೆಳಗ್ಗೆ ೧೧ಕ್ಕೆ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯನ ಕೇಂದ್ರದಿಂದ ಪಿಎಸ್‌ ಎಲ್‌ ವಿ ಸಿ -೫೭ ರಾಕೆಟ್‌ ಮೂಲಕ ಗಗನಕ್ಕೆ ಚಿಮ್ಮಲಿರುವ ʼಆದಿತ್ಯʼ ಅಂತರಿಕ್ಷ ವೀಕ್ಷಣಾಲಯದ ಉಡ್ಡಯನವನ್ನು ಈ ಕೆಳಗಿನ ಚಿತ್ರವನ್ನು ಕ್ಲಿಕ್ಕಿಸುವ ಮೂಲಕ ಇಸ್ರೋ ಸೂರ್ಯಯಾನವನ್ನು ನೇರವಾಗಿ ವೀಕ್ಷಿಸಬಹುದು:

Saturday, August 26, 2023

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭಾರತ ಇಳಿದ ೨೦೨೩ ಆಗಸ್ಟ್‌ ೨೩ರ ದಿನದ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದವರು ಒಬ್ಬಿಬ್ಬರಲ್ಲ. ತಮ್ಮದೇ ಆದ ರೀತಿಯಲ್ಲಿ ಅದನ್ನು ಮಂದಿ ಸಂಭ್ರಮಿಸಿದ್ದಾರೆ. ಈ ದಿನವನ್ನು ಇನ್ನು ಮುಂದೆ ಪ್ರತಿವರ್ಷ ʼರಾಷ್ಟ್ರೀಯ ಬಾಹ್ಯಾಕಾಶ ದಿನʼ ಎಂಬುದಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ೨೦೨೩ ಆಗಸ್ಟ್‌ ೧೬ರಂದು ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ಇಸ್ರೋದಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಿ ಚಂದ್ರಯಾನ-೩ರ ʼವಿಕ್ರಮʼ ಇಳಿದ ಸ್ಥಳವನ್ನು ʼಶಿವಶಕ್ತಿʼ ಎಂಬುದಾಗಿಯೂ, ಚಂದ್ರನಲ್ಲಿ ಇಳಿದ ಆಗಸ್ಟ್‌ ೨೩ರ ದಿನವನ್ನು ʼರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ದಿನʼ ಎಂಬುದಾಗಿ ಆಚರಿಸುವುದಾಗಿಯೂ, ಚಂದ್ರಯಾನ -೨ರ ತನ್ನ ಗುರುತನ್ನು ಬಿಟ್ಟಿ ಚಂದ್ರನ ನೆಲವನ್ನು ʼತಿರಂಗʼ ಎಂಬುದಾಗಿ ಹೆಸರಿಸುವುದಾಗಿಯೂ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಚಂದ್ರಯಾನದ ಯಶಸ್ಸನ್ನು ಸಂಭ್ರಮಿಸಿದ ಹಲವರ ಕಲ್ಪನೆಯ ಕೆಲವು ಚಿತ್ರ, ವಿಡಿಯೋಗಳನ್ನೂ ʼಪರ್ಯಾಯʼ ಇಲ್ಲಿ ಪ್ರಕಟಿಸುತ್ತಿದೆ. ಅದರಲ್ಲಿ ಚಂದ್ರನಲ್ಲಿ ಇಳಿದ ಹರ್ಷವನ್ನು ಹಾಡಿನ ರೂಪದಲ್ಲಿ ಬಣ್ಣಿಸಿದ ಹರ್ಷ ಕಾವೇರಿಪುರ ಅವರ ವಿಡಿಯೋ ಒಂದು. ಇದರ ಸಾಹಿತ್ಯ, ಸಂಗೀತ, ಗಾಯನ ಹಳ್ಳೇರಾವ ಕುಲ್ಕರ್ಣಿ ಕೆಂಭಾವಿ ಅವರದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ
ʼಹರ್ಷ ಕಾವೇರಿಪುರʼ ಅವರ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ:


ಈ ವಿಡಿಯೋ ಕರ್ತೃ ಹರ್ಷ ಅವರ ಬಗ್ಗೆ ತಿಳಿಯಲು ಗೂಗಲ್‌ ಎಂಜಿನ್ನಿನಲ್ಲಿ ಸರ್ಚ್‌ ಮಾಡಿದರೆ ನಿಮಗೆ ಅವರ ಬಗ್ಗೆ ಹೆಚ್ಚಿನ ವಿವರ ಸಿಗುವುದಿಲ್ಲ. ಆದರೆ ಅವರ ಹಲವಾರು ವಿಡಿಯೋ, ರೀಲ್‌ಗಳು ಸಿಗುತ್ತವೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆಂದು ಅನಿಸುವ ವಿಡಿಯೋಗಳು ಇವು. ಆಸಕ್ತರು ಗೂಗಲ್‌ ನಲ್ಲಿ ತಡಕಾಡಿ ʼಹರ್ಷ ಕಾವೇರಿಪುರʼ ಅವರ ವಿಡಿಯೋಗಳ ಸೊಬಗು ಸವಿಯಬಹುದು.

ಆದರೆ ಇಲ್ಲಿ ಹಾಕಿರುವ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ಹರ್ಷ ಕಾವೇರಿಪುರ ಅವರ ವಿಡಿಯೋ ಮಾತ್ರ ನನಗೆ ಅಲ್ಲಿ ಸಿಗಲಿಲ್ಲ. ನಿಮಗೆ ಸಿಕ್ಕಿದರೆ ಖಂಡಿತ ʼಪರ್ಯಾಯʼಕ್ಕೆ ತಿಳಿಸಿ.

ಮೇಲೆ ತಿಳಿಸಿದಂತೆ ಚಂದ್ರಯಾನ ಯಶಸ್ಸಿನ ಸಂದರ್ಭವನ್ನು ಹಲವಾರು ಮಂದಿ ತಮ್ಮದೇ ಕಲ್ಪನೆ, ತಮಗೆ ಕಂಡಂತೆ ಚಿತ್ರ, ತಮ್ಮಿಷ್ಟದಂತೆ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದಾರೆ.

ಯಾರೋ ಒಬ್ಬರು ಉಡುಪಿಯ ಕೃಷ್ಣನನ್ನು ಚಂದ್ರನ ಹಿನ್ನೆಲೆ ಇಟ್ಟು ಚಿತ್ರಿಸಿದರೆ, ಇನ್ನೊಬ್ಬರಿಗೆ ಚಂದ್ರನಲ್ಲಿ ಇಳಿದ ʼವಿಕ್ರಮ್ʼ ʼತಿರುಪತಿʼ ತಿಮ್ಮಪ್ಪನಂತೆ ಕಂಡಿದೆ.

ವ್ಯಂಗ್ಯಚಿತ್ರಕಾರ ಪ್ರಕಾಶ್‌ ಶೆಟ್ಟಿಯವರು ತಮ್ಮದೇ ʼಇಮೋಜಿʼ ರಚಿಸಿದ್ದಾರೆ. 

ನಂಜುಂಡಸ್ವಾಮಿ ಅವರ ಕಲ್ಪನೆಯನ್ನೂ ನೀವಿಲ್ಲಿ ನೋಡಬಹುದು.

ಇದರೊಂದಿಗೆ ಇನ್ನೊಂದು ಪುಟ್ಟ ವಿಡಿಯೋ ಇದೆ. ಅದು ಚಂದ್ರಯಾನದ ಸ್ಫೂರ್ತಿಯ ʼಪುಟ್ಟುʼ.

ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ, ಆನಂದಿಸಿ.








Thursday, December 12, 2019

ಇಸ್ರೋದಿಂದ ರಿಸ್ಯಾಟ್‌ – 2ಬಿಆರ್‌1 ಯಶಸ್ವಿ ಉಡಾವಣೆ

ಇಸ್ರೋದಿಂದ ರಿಸ್ಯಾಟ್‌ – 2ಬಿಆರ್‌1 ಯಶಸ್ವಿ ಉಡಾವಣೆ
ಶ್ರೀಹರಿಕೋಟಾ: ಗೂಢಚರ್ಯೆ- ಭೂಸರ್ವೇಕ್ಷಣಾ ಉಪಗ್ರಹ  ರಿಸ್ಯಾಟ್‌ – 2ಬಿಆರ್‌1 ಸೇರಿದಂತೆ ವಿವಿಧ ದೇಶಗಳ ಇತರ 9 ಉಪಗ್ರಹಗಳನ್ನು ಇಸ್ರೋ 2019 ಡಿಸೆಂಬರ್ 11ರ ಬುಧವಾರ ಯಶಸ್ವಿಯಾಗಿ ನಭಕ್ಕೆ ಕಳುಹಿಸಿತು.

ಬುಧವಾರ 3.25ಕ್ಕೆ ಶ್ರೀಹರಿಕೋಟಾದ ಸತೀಶ ಧವನ್ಬಾಹ್ಯಾಕಾಶ ನೆಲೆಯಿಂದ ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ- ಸಿ48 ರಾಕೆಟ್ನಭಕ್ಕೆ ನೆಗೆದು, ಅಂತರಿಕ್ಷದಲ್ಲಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಯಿತು.

ರಿಸ್ಯಾಟ್‌ – 2ಬಿಆರ್‌1 ರಾಡಾರ್ಇಮೇಜಿಂಗ್ಭೂ ಸರ್ವೇಕ್ಷಣ ಉಪಗ್ರಹವಾಗಿದ್ದು, ಇಸ್ರೋ ಇದನ್ನು ನಿರ್ಮಿಸಿದೆ. ಇದನ್ನು ನಿರ್ದಿಷ್ಟವಾಗಿ ಮಿಲಿಟರಿ ಬಳಕೆಗಾಗಿ ಬಳಸಲಾಗುತ್ತದೆ. ಇದರೊಂದಿಗೆ ಹವಾಮಾನ, ಕೃಷಿ ಸಂಬಂಧಿ ಕೆಲಸಗಳಿಗೂ ಬಳಸುವ ಅನುಕೂಲವನ್ನು ಕಲ್ಪಿಸಲಾಗಿದೆ. ಮುಂದಿನ 5 ವರ್ಷಗಳ ಕಾಲ ಇದು ಕಾರ್ಯನಿರ್ವಹಣೆ ಮಾಡಲಿದೆ. ಇದು ಒಟ್ಟು 628 ಕೆ.ಜಿ. ತೂಕ ಹೊಂದಿದ್ದು, ಭೂಮಿಯಿಂದ 576 ಕಿ.ಮೀ. ಮೇಲ್ಭಾಗದ ಕಕ್ಷೆಯಲ್ಲಿ ಇಡಲಾಗಿದೆ.

ಉಳಿದಂತೆ ಒಟ್ಟು 6 ಉಪಗ್ರಹಗಳು ಅಮೆರಿಕದ ವಿವಿಧ ಸಂಸ್ಥೆಗಳದ್ದಾದರೆ, ಜಪಾನ್‌, ಇಟಲಿ, ಇಸ್ರೇಲಿನ  ತಲಾ ಒಂದು ಉಪಗ್ರಹಗಳನ್ನು ಪಿಎಸ್ಎಲ್ವಿಯೊಂದಿಗೆ ಉಡ್ಡಯನ ಮಾಡಲಾಗಿದೆ.

ರಾಕೆಟ್ನಭಕ್ಕೆ ನೆಗೆದ 16 ನಿಮಿಷದಲ್ಲಿ ರಿಸ್ಯಾಟ್‌ – 2ಬಿಆರ್‌1ನ್ನು ಕಕ್ಷೆಗೆ ಕೂರಿಸಲಾಯಿತು. ಇತರ ಉಪಗ್ರಹಗಳನ್ನು ಅನಂತರದ 5 ನಿಮಿಷಗಳಲ್ಲಿ ಕಕ್ಷೆಗೆ ಕೂರಿಸಲಾಯಿತು.

 ಪಿಎಸ್ಎಲ್ವಿ ನೌಕೆಯ 50ನೇ ಯಶಸ್ವೀ ಉಡ್ಡಯನದ ಬಗ್ಗೆ ಅತೀವ ಹರ್ಷವೆನಿಸುತ್ತದೆ ಎಂದು ಇಸ್ರೋ ಮುಖ್ಯಸ್ಥ ಕೆ ಶಿವನ್ಹೇಳಿದ್ದಾರೆ.

Advertisement