Showing posts with label Gen Bipin Rawat. Show all posts
Showing posts with label Gen Bipin Rawat. Show all posts

Wednesday, September 28, 2022

ಭಾರತದ ನೂತನ ಸಿಡಿಎಸ್‌: ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ)

 ಭಾರತದ ನೂತನ ಸಿಡಿಎಸ್‌: ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ)

ನವದೆಹಲಿ: ದೇಶದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಹೆಲಿಕಾಪ್ಟರ್‌ ದುರಂತದಲ್ಲಿ ಮೃತರಾದ ಸುಮಾರು 10 ತಿಂಗಳ ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 28 ಸೆಪ್ಟೆಂಬರ್ 2022 ಬುಧವಾರ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ಭಾರತದ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ (ಸಿಡಿಎಸ್) ನೇಮಿಸಿದೆ..

ಚೌಹಾಣ್‌ ಅವರು ಮಿಲಿಟರಿ ವ್ಯವಹಾರಗಳ ಇಲಾಖೆ (DMA) ಕಾರ್ಯದರ್ಶಿಯೂ ಆಗಿರುತ್ತಾರೆ. ಇದರೊಂದಿಗೆ, ಸಿಡಿಎಸ್‌  ಮತ್ತು ಕಾರ್ಯದರ್ಶಿ ಡಿಎಂಎ  ಹುದ್ದೆಗಳನ್ನು ವಿಭಜಿಸುವ ಕುರಿತ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.

61ರ ಹರೆಯದ ಲೆಫ್ಟಿನೆಂಟ್ ಜನರಲ್ ಚೌಹಾಣ್, ಅವರು ಪೂರ್ವ ಸೇನಾ ಕಮಾಂಡರ್ ಆಗಿ ಸೇನೆಯಿಂದ ನಿವೃತ್ತರಾದ ನಂತರ ಲೆಫ್ಟಿನೆಂಟ್ ಜನರಲ್ ವಿಜಿ ಖಂಡಾರೆ (ನಿವೃತ್ತ) ಅವರಿಂದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದಲ್ಲಿ ಸೇನಾ  ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದರು.  40 ವರ್ಷಗಳ ವಿಶಿಷ್ಟ ವೃತ್ತಿಜೀವನದಲ್ಲಿ  ಅವರು ಹಲವಾರು ಕಮಾಂಡ್, ಸಿಬ್ಬಂದಿ ಮತ್ತು ನೇಮಕಾತಿಗಳಲ್ಲಿ ಪ್ರಮುಖ ಸ್ಥಾನ ಹೊಂದಿದ್ದರು. ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯದಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದರು.

ಈ ತಿಂಗಳ ಆರಂಭದಲ್ಲಿ, ಅವರು ಕಿಬಿತು ಮಿಲಿಟರಿ ನಿಲ್ದಾಣಕ್ಕೆ ʼಜನರಲ್ ಬಿಪಿನ್ ರಾವತ್ ಮಿಲಿಟರಿ ಗ್ಯಾರಿಸನ್ʼ ಎಂದು ಮರುನಾಮಕರಣ ಮಾಡಿದ ಸಮಾರಂಭದಲ್ಲಿ ಜನರಲ್ ರಾವತ್ ಅವರ ಪುತ್ರಿ ತಾರಿಣಿ ರಾವತ್ ಮತ್ತು ಇತರ ಗಣ್ಯರೊಂದಿಗೆ ಭಾಗವಹಿಸಿದ್ದರು. ಅವರು ಜನರಲ್ ರಾವತ್ ಅವರ ಘಟಕದಿಂದಲೇ ಬಂದವರು.

Thursday, January 16, 2020

ಭಾರತದಲ್ಲಿವೆ ತೀವ್ರಗಾಮಿ ಪರಿವರ್ತನಾ ಶಿಬಿರಗಳು: ಜನರಲ್ ಬಿಪಿನ್ ರಾವತ್

ಭಾರತದಲ್ಲಿವೆ ತೀವ್ರಗಾಮಿ ಪರಿವರ್ತನಾ ಶಿಬಿರಗಳು: ಜನರಲ್ ಬಿಪಿನ್ ರಾವತ್
ನವದೆಹಲಿ: ಇದೇ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವತೀವ್ರಗಾಮಿ ಪರಿವರ್ತನಾ ಶಿಬಿರಗಳ ಮಾತನಾಡಿರುವ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಶಿಬಿರಗಳಲ್ಲಿ ಸಂಪೂರ್ಣವಾಗಿ ತೀವ್ರಗಾಮಿಗಳಾಗಿರುವ ಯುವ ಕಾಶ್ಮೀರಿಗಳನ್ನು ಪ್ರತ್ಯೇಕಿತರನ್ನಾಗಿ ಮಾಡಿ ಇರಿಸಲಾಗುತ್ತದೆಎಂದು ಬಹಿರಂಗ ಪಡಿಸಿದರು.

ಪಾಕಿಸ್ತಾನದಲ್ಲಿ ಕೂಡಾ ಇಂತಹ ಶಿಬಿರಗಳು ಇವೆಎಂದು ರಾವತ್ ಹೇಳಿದರು.

ನವದಹಲಿಯಲ್ಲಿ ನಡೆದರೈಸೀನಾ ಸಂಭಾಷಣೆ ೨೦೨೦ರಲ್ಲಿ ನಡೆದ ಚರ್ಚಾಕೂಟದಲ್ಲಿ ಮಾತನಾಡಿದ ಜನರಲ್ ರಾವತ್ ಅವರುಕಾಶ್ಮೀರದಲ್ಲಿ ಇಂದು ೧೦-೧೨ರ ವಯಸ್ಸಿನಲ್ಲೇ ಮಕ್ಕಳನ್ನು ತೀವ್ರವಾದಿಗಳನ್ನು ಪರಿವರ್ತಿಸಲಾಗುತ್ತಿದೆಎಂದು ನುಡಿದರು.

ಇಂತಹ ಜನರನ್ನು ಈಗಲೂ ತೀವ್ರವಾದಿತ್ವದಿಂದ ಪ್ರತ್ಯೇಕಿಸಿ ಕ್ರಮೇಣ ಮಂದಗಾಮಿಗಳನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಆದರೆ ಸಂಪೂರ್ಣವಾಗಿ ತೀವ್ರವಾದಿಗಳಾಗಿರುವ ಜನರಿದ್ದಾರೆ. ಇವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ ತೀವ್ರವಾದದಿಂದ ಮುಕ್ತಗೊಳಿಸುವತೀವ್ರಗಾಮಿ ಪರಿವರ್ತನಾ ಶಿಬಿರಗಳಿಗೆ ಕಳುಹಿಸಬೇಕಾಗುತ್ತದೆ. ನಮ್ಮ ರಾಷ್ಟ್ರದಲ್ಲಿ ನಾವು ಇಂತಹ ತೀವ್ರಗಾಮಿ ಪರಿವರ್ತನಾ ಶಿಬಿರಗಳನ್ನು ಹೊಂದಿದ್ದೇವೆ. ನಿಮಗೆ ಹೇಳಬೇಕೆಂದರೆ, ಪಾಕಿಸ್ತಾನದಲ್ಲೂ ಇಂತಹುದೇ ಶಿಬಿರಗಳಿವೆ. ಅವರು ತೀವ್ರವಾದಿಗಳನ್ನಾಗಿ ಯಾರನ್ನು ಮಾಡಿದ್ದಾರೋ ಅವರಲ್ಲಿ ಕೆಲವರು ಅವರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ ಎಂಬುದು ಅವರಿಗೂ ಗೊತ್ತಾಗಿದೆಎಂದು ಜನರಲ್ ರಾವತ್ ಹೇಳಿದರು.

ವ್ಯಕ್ತಿಗಳನ್ನು ಸರಿಯಾಗಿ ಗುರಿ ಇಡುವ ಮೂಲಕ ತೀವ್ರವಾದವನ್ನು ತಡೆಯಲು ಸಾಧ್ಯವಿದೆ. ’ಸರಿಯಾದ ವ್ಯಕ್ತಿಗಳನ್ನು ಗುರಿಮಾಡುವ ಮೂಲಕ ಅಂತರ್ಜಾಲ ತೀವ್ರವಾದಿತ್ವವನ್ನು  (ಆನ್ ಲೈನ್ ರಾಡಿಕಲಿಸಂ) ಕೊನೆಗೊಳಿಸಲು ಸಾಧ್ಯವಿದೆ. ನಾವು ತೀವ್ರವಾದದ ಸಿದ್ಧಾಂತದಿಂದ ಅವರನ್ನು ಮುಕ್ತರನ್ನಾಗಿ ಮಾಡಬೇಕಾಗುತ್ತದೆಎಂದು ರಾವತ್  ನುಡಿದರು.

೨೦೧೬ರಲ್ಲಿ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಬುರ್ಹಾನ್ ವನಿ ಸಾವಿನ ಬಳಕ ಕಾಶ್ಮೀರದಲ್ಲಿ ಯುವ ಜನರನ್ನು ತೀವ್ರವಾದಿಗಳನ್ನಾಗಿ ಮಾಡುವುದು ಹೆಚ್ಚಿದೆ. ಆರು ತಿಂಗಳುಗಳಿಗೂ ಹೆಚ್ಚು ಕಾಲ ಕಾಶ್ಮೀರವು ಕಲ್ಲೆಸೆಯುವ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಇವುಗಳಲ್ಲಿ ಅತ್ಯಂತ ಎಳೆವಯಸ್ಸಿನ ಮಕ್ಕಳೇ ಶಾಮೀಲಾಗುತ್ತಿದ್ದರು ಎಂದು ಜನರಲ್ ರಾವತ್ ವಿವರಿಸಿದರು.

ನಂತರದ ವರ್ಷ ಪುಲ್ವಾಮ, ಕುಲಗಂ, ಶೋಪಿಯಾನ್ ಮತ್ತು ಅನಂತನಾಗ್ ಸೇರಿದಂತೆ ಇಡೀ ದಕ್ಷಿಣ ಕಾಶ್ಮೀರ ಭಯೋತ್ಪಾದಕರಿಗೆ ಸುಳಿದಾಣವಾಗಿತ್ತು. ಅವರಿಗೆ ಇಷ್ಟ ಬಂದಾಗ ಅವರು ದಾಳಿ ನಡೆಸುತ್ತಿದ್ದರು ಎಂದು ರಾವತ್ ನುಡಿದರು.

ಕಳೆದ ಆಗಸ್ಟ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿ ರಾಜ್ಯವು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನಗೊಂಡವು. ಭಯೋತ್ಪಾದಕರ ದಾಳಿಗಳ ನಿಗ್ರಹಕ್ಕಾಗಿ ಕೇಂದ್ರವು ಸರಣಿ ನಿರ್ಬಂಧಗಳನ್ನು ಹೇರಿತು ಎಂದು ರಾವತ್ ಹೇಳಿದರು.

Thursday, January 2, 2020

ಸೇನಾ ಪಡೆಗಳು ರಾಜಕೀಯದಿಂದ ದೂರ: ಸಿಡಿಎಸ್ ಜನರಲ್ ರಾವತ್ ಪ್ರಥಮ ಸಂದೇಶ

ಸೇನಾ ಪಡೆಗಳು ರಾಜಕೀಯದಿಂದ ದೂರಸಿಡಿಎಸ್ ಜನರಲ್ ರಾವತ್ ಪ್ರಥಮ ಸಂದೇಶ
ನವದೆಹಲಿ: ಭಾರತದ ಮೂರೂ ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿ (ಸಿಡಿಎಸ್) 2020 ಜನವರಿ 01ರ ಬುಧವಾರ ಅಧಿಕಾರ ವಹಿಸಿಕೊಂಡಿರುವ ಜನರಲ್ ಬಿಪಿನ್ ರಾವತ್ ಅವರು ತಮ್ಮ ಮೊದಲ ಸಂದೇಶದಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲನೆ ಮಾಡುವ ಸೇನಾ ಪಡೆಗಳು ರಾಜಕೀಯದಿಂದ ದೂರ ಇರುತ್ತವೆ ಎಂದು ಹೇಳಿದರು.

ಅಧಿಕಾರ
ಸ್ವೀಕರಿಸಿದ ಬಳಿಕ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ರಾವತ್ ಅವರು ಸ್ಮಾರಕಕ್ಕೆ ಹೂಗುಚ್ಛ ಇಡುವ ಮೂಲಕ ಗೌರವ ಸಲ್ಲಿಸಿ ಬಳಿಕ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರ ನೀಡಿದರು.

ಮೂರೂ ರಕ್ಷಣಾ ಪಡೆಗಳು ಸಂಘಟಿತ ರೀತಿಯಲ್ಲಿ ಒಂದೇ ತಂಡದಂತೆ ಕಾರ್ಯವೆಸಗಬೇಕು. ರಾಜಕೀಯದಿಂದ ದೂರವಿದ್ದು, ಸರ್ಕಾರ ನೀಡಿದ ನಿರ್ದೇಶನದಂತೆ ಕೆಲಸ ಮಾಡೋಣ ಎಂದು ಅವರು ಹೇಳಿದರು.

++ ಎಂಬ ರೀತಿಯಲ್ಲಿ ತಂಡದ ಗುರಿ ಮೂರು ಅಲ್ಲ, ಅದು ಐದು ಅಥವಾ ಏಳು ಆಗಿರಬಹುದು. ಸಂಘಟಿತ ರೀತಿಯಲ್ಲಿ ನಮ್ಮ ಪ್ರಯತ್ನ ಮತ್ತಷ್ಟು ಹೆಚ್ಚು ಇರಬೇಕು. ಏಕೀಕರಣದ ಮೂಲಕ ನಾವು ಮತ್ತಷ್ಟು ಸಾಧಿಸಬೇಕು ಎಂದು ರಾವತ್ ನುಡಿದರು.

ಸಂಪನ್ಮೂಲಗಳ ಸರಿಯಾದ ಬಳಕೆ ಮತ್ತು ಜಂಟಿ ತರಬೇತಿ ನೀಡುವುದರ ಬಗ್ಗೆ ಸಿಡಿಎಸ್ ಹೆಚ್ಚಿನ ಗಮನ ಹರಿಸುವುದು ಎಂದು  ಅವರು ಹೇಳಿದರು.

ಭೂಸೇನೆ, ವಾಯುಸೇನೆ, ಹಾಗೂ ನೌಕಾಸೇನೆಗಳಿಗೆ ಒಟ್ಟಾಗಿ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದಾರೆ ಬಿಪಿನ್ ರಾವತ್.

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ, ರಾವತ್ ಅವರಿಗೆ ಗೌರವಾದರಗಳಿಂದ ಸ್ವಾಗತ ಕೋರಲಾಯಿತು. ಭೂಸೇನಾ ಮುಖ್ಯಸ್ಥ ಹುದ್ದೆಯಿಂದ ಮಂಗಳವಾರ ನಿವೃತ್ತಿಯಾದ ರಾವತ್, ಭಾರತದ ಮೊದಲ ಸಿಡಿಎಸ್ ಎಂಬ ಹೆಗ್ಗಳಿಕೆಗೆ  ಪಾತ್ರರಾಗಿದ್ದಾರೆ.

೬೨
ವರ್ಷದ ಜನರಲ್ ಬಿಪಿನ್ ರಾವತ್ ಅವರು ಸೇನಾ ಮುಖ್ಯಸ್ಥರಾಗಿ ಮಂಗಳವಾರ ನಿವೃತ್ತಿ ಹೊಂದಿದ್ದರು. ಇದಕ್ಕೂ ಮುನ್ನವೇ ರಾವತ್ ಅವರನ್ನು ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಸ್) ಸರ್ಕಾರ ನೇಮಕ ಮಾಡಿತ್ತು. ಹುದ್ದೆಯನ್ನು ಕೆಲದಿನಗಳ ಹಿಂದಷ್ಟೇ ಸೃಷ್ಟಿಸಲಾಗಿತ್ತು.

ಭಾರತದ
ರಕ್ಷಣಾ ಪಡೆಯ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಮಧ್ಯೆ ಸಹಕಾರ, ಸಮನ್ವಯ ಮತ್ತು ಹೊಂದಾಣಿಕೆ ಏರ್ಪಡಿಸುವ ಜವಾಬ್ದಾರಿ ಸಿಡಿಎಸ್ ಅವರಿಗೆ ಇರುತ್ತದೆ. ತುರ್ತು ಸಂದರ್ಭಗಳಲ್ಲಿ ತ್ವರಿತ ನಿರ್ಧಾರ ಕೈಗೊಳ್ಳಲು ಹುದ್ದೆ ಸಹಾಯಕವಾಗುವ ನಿರೀಕ್ಷೆ ಇದೆ.

ಸರ್ಕಾರವು
ಮೂರೂ ಪಡೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಬೇಕಾದ ಅಗತ್ಯ ಇರುವುದಿಲ್ಲ. ಸೇನಾ ವಿಚಾರದಲ್ಲಿ ಸಿಡಿಎಸ್ ಅವರೇ ಏಕಗವಾಕ್ಷಿಯಾಗಿ ರಕ್ಷಣಾ ಸಚಿವರಿಗೆ ಸಲಹೆ ನೀಡಲಿದ್ದಾರೆ.

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಮಾತನಾಡಿ ಬೆಂಕಿ ಹಚ್ಚಲು ಪ್ರೇರೇಪಿಸುವವರು ನಾಯಕರಲ್ಲ ಎಂಬುದಾಗಿ ನೀಡಿದ್ದ ರಾವತ್ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗಳು ಎದುರಾಗಿದ್ದವು.

Wednesday, January 1, 2020

ನೂತನ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇನಾ ವ್ಯವಹಾರ ಇಲಾಖೆಗೂ ಮುಖ್ಯಸ್ಥ

ನೂತನ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇನಾ ವ್ಯವಹಾರ ಇಲಾಖೆಗೂ ಮುಖ್ಯಸ್ಥ
ನವದೆಹಲಿ: ಭಾರತದ ಮೂರು ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್- ಸಿಡಿಎಸ್)  ಜನರಲ್ ಬಿಪಿನ್ ರಾವತ್ ಅವರು 2020 ಜನವರಿ 01ರ ಬುಧವಾರ ಅಧಿಕಾರ ವಹಿಸಿಕೊಳ್ಳಲಿದ್ದು,  ಇದೇ ವೇಳಗೆ ಕೇಂದ್ರ ಸರ್ಕಾರವು ಸೇನಾ ವ್ಯವಹಾರಗಳ ಇಲಾಖೆಯನ್ನು ಸೃಷ್ಟಿಸಿದ್ದು, ಇದರ ಮುಖ್ಯಸ್ಥರನ್ನಾಗಿಯೂ ಜನರಲ್ ರಾವತ್ ಅವರನ್ನೆ ನೇಮಕ ಮಾಡಿತು.

ರಕ್ಷಣಾ ಪಡೆಗಳ ಮುಖ್ಯಸ್ಥರೇ (ಸಿಡಿಎಸ್) ಸೇನಾ ವ್ಯವಹಾರಗಳ ಇಲಾಖೆಗೂ ಮುಖ್ಯಸ್ಥರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರದ ಆದೇಶ ತಿಳಿಸಿತು.

ಸರ್ಕಾರದ ಆದೇಶದಂತೆ ಸಿಡಿಎಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಜನರಲ್ ಬಿಪಿನ್ ರಾವತ್ ಸೇನಾ ವ್ಯವಹಾರಗಳ ಇಲಾಖೆಯ ಇಲಾಖೆಯ ನೇತೃತ್ವ ವಹಿಸಲಿದ್ದಾರೆ.

ಹೊಸ ಇಲಾಖೆಯ ವ್ಯಾಪ್ತಿಯಲ್ಲಿ ಭೂ ಸೇನೆ, ವಾಯು ಮತ್ತು ನೌಕಾಪಡೆಯ ನೀತಿ, ಯೋಜನೆ ಮತ್ತು ಖರೀದಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.


ಜನರಲ್ ಬಿಪಿನ್ ರಾವತ್ ಅವರು ಭಾರತದ ಮೂರೂ ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿ 2020 ಜನವರಿ 01 ರ ಬುಧವಾರ ಅಧಿಕಾರ ವಹಿಸಿಕೊಳ್ಳುವರು.

ಕೆಲ ದಿನಗಳ ಹಿಂದಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಭಾರತದ ರಕ್ಷಣಾ ಪಡೆಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಮೂರೂ ವಿಭಾಗಗಳಲ್ಲಿ ಸಹಕಾರ- ಸಮನ್ವಯ ಸಾಧನೆಯ ಜವಾಬ್ದಾರಿ ಸಿಡಿಎಸ್ ಆವರದಾಗಿರುತ್ತದೆ. ಮೂರೂ ಇಲಾಖೆಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರಿಗೆ ಸಿಡಿಎಸ್ ಅವರೇ ಏಕಗವಾಕ್ಷಿ ಸಲಹೆಗಾರರಾಗಿರುತ್ತಾರೆ.

ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿರುವ ಜನರಲ್ ರಾವತ್ ಅವರು ೨೦೧೭ರಲ್ಲಿ ಭೂ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರ ಸೇವಾವಧಿ ಈದಿನಕ್ಕೆ  ಮುಕ್ತಾಯಗೊಂಡಿತ್ತು.

ಜನರಲ್ ಬಿಪಿನ್ ರಾವತ್ ಅವರ ಸ್ಥಾನಕ್ಕೆ, ಭೂಸೇನಾ ದಂಡನಾಯಕರಾಗಿ ನೇಮಕಗೊಂಡಿರುವ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಣೆ ಅವರೂ ಮಂಗಳವಾರ ಭೂ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.

ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ ನರವಣೆ ಅವರು ’ಭಯೋತ್ಪಾದನೆಯ ಮೂಲಗಳ ವಿರುದ್ಧ ಮುಂಚಿತವಾಗಿಯೇ ದಾಳಿ ನಡೆಸುವ ತನ್ನ ಹಕ್ಕುಗಳನ್ನು ಭಾರತ ಮೀಸಲಿರಿಸಿಕೊಂಡಿದೆ ಎಂಬುದಾಗಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಟೀಕೆ
: ರಕ್ಷಣಾ ಪಡೆಗಳ ಮುಖ್ಯಸ್ಥರ (ಸಿಡಿಎಸ್) ನೇಮಕವನ್ನು ಪ್ರಶ್ನಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರ ಈ ಮೂಲಕ ತಪ್ಪು ಹೆಜ್ಜೆಯಿಡುತ್ತಿದೆ ಎಂದು ದೂರಿತು.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ಮನಿಷ್ ತಿವಾರಿ, ’ಸಿಡಿಎಸ್ ನೇಮಿಸುವ ಮೂಲಕ ಸರ್ಕಾರ ತಪ್ಪು ಹೆಜ್ಜೆಯಿಟ್ಟಿದೆ. ಸಮಯವೇ ಅದರ ಪರಿಣಾಮಗಳನ್ನು ಬಹಿರಂಗಪಡಿಸಲಿದೆ ಎಂದು ಹೇಳಿದರು.

Tuesday, December 31, 2019

ಭಾರತದ ಪ್ರಪ್ರಥಮ ತ್ರಿಸೇನಾ ಪಡೆಗಳ ಮಹಾದಂಡನಾಯಕ ಜನರಲ್ ಬಿಪಿನ್ ರಾವತ್

ಭಾರತದ ಪ್ರಪ್ರಥಮ ತ್ರಿಸೇನಾ ಪಡೆಗಳ ಮಹಾದಂಡನಾಯಕ ಜನರಲ್ ಬಿಪಿನ್ ರಾವತ್
ನವದೆಹಲಿ: ಭಾರತದ ಮೂರೂ ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿ (ತ್ರಿಸೇನಾ ಮಹಾದಂಡನಾಯಕ- ಚೀಫ್ ಆಫ್ ಡಿಫೆನ್ಸ್ ಸ್ಟಾಫ್- ಸಿಡಿಎಸ್) ಹೊರಹೊಗುತ್ತಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್  ಅವರನ್ನು ಕೇಂದ್ರ ಸರ್ಕಾರವು 2019 ಡಿಸೆಂಬರ್ 30ರ ಸೋಮವಾರ ನೇಮಕ ಮಾಡಿತು.

ತ್ರಿಸೇನಾ ಪಡೆಗಳ ಮಹಾದಂಡನಾಯಕ ಭೂಸೇನೆ, ವಾಯುಸೇನೆ ಮತ್ತು ಜಲಪಡೆ – ಈ ಮೂರೂ ಸೇವೆಗಳಿಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿಯೂ ರಕ್ಷಣಾ ಸಚಿವರಿಗೆ ಮುಖ್ಯ  ಸೇನಾ ಸಲಹೆಗಾರರಾಗಿ ಕೆಲಸ ಮಾಡುತ್ತಾರೆ.

‘ಜನರಲ್ ಬಿಪಿನ್ ರಾವತ್ ಅವರನ್ನು 31.12.2019ರಿಂದ ಜಾರಿಯಾಗುವಂತೆ ತ್ರಿಸೇನಾ ಪಡೆಗಳ ಮಹಾದಂಡನಾಯಕರಾಗಿ (ಸಿಡಿಎಸ್) ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ. ಮುಂದಿನ ಆದೇಶಗಳವರೆಗೆ ಮತ್ತು ಸೇವಾ ವಿಸ್ತರಣೆಯವರೆಗೆ ಅವರು ಹುದ್ದೆಯಲ್ಲಿ ಮುಂದುವರೆಯುವರು’ ಎಂದು ರಕ್ಷಣಾ ಸಚಿವಾಲಯದ ಆದೇಶ ತಿಳಿಸಿದೆ.

ರಾವತ್ ಅವರು 1978ರಲ್ಲಿ ಸೇನೆಗೆ ಸೇರ್ಪಡೆಯಾಗಿದ್ದರು ಮತ್ತು ಪ್ರಸ್ತುತ 2017ರ ಜನವರಿ 1ರಿಂದ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅಧಿಕಾರಾವಧಿ 2019 ಡಿಸೆಂಬರ್ 31ಕ್ಕೆ ಮುಕ್ತಾಯವಾಗಲಿತ್ತು.

ಭಾರತೀಯ ಸೇನಾಪಡೆಯ ಮುಖ್ಯಸ್ಥರಾಗಿ ಬಿಪಿನ್ ರಾವತ್ ಅವರು ಮೂರು ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿದ್ದು, ಇದೀಗ ಸೇವೆಯಿಂದ ನಿವೃತ್ತಿಗೊಳ್ಳಲು ಒಂದು ದಿನ ಇರುವ ಮುನ್ನ ಜನರಲ್ ರಾವತ್ ಅವರನ್ನು ಸೇನಾಮಹಾದಂಡನಾಯಕನನ್ನಾಗಿ ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿತು.
ಡಿಸೆಂಬರ್ ೨೪ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಸಿಡಿಎಸ್ (ಸೇನಾಮಹಾದಂಡನಾಯಕ) ಹುದ್ದೆ ಹಾಗೂ ಇದರ ಕರ್ತವ್ಯಗಳ ನಿರ್ಣಯಕ್ಕೆ ಅನುಮತಿ ನೀಡಲಾಗಿದೆ ಎಂದು ವರದಿ ವಿವರಿಸಿತ್ತು.

Sunday, December 29, 2019

‘ನಿಮ್ಮ ಕೆಲಸ ನೋಡಿಕೊಳ್ಳಿ’: ಸೇನಾ ಮುಖ್ಯಸ್ಥ ಜನರಲ್ ರಾವತ್‌ಗೆ ಚಿದಂಬರಂ ಸಲಹೆ

ನಿಮ್ಮ ಕೆಲಸ ನೋಡಿಕೊಳ್ಳಿ: ಸೇನಾ ಮುಖ್ಯಸ್ಥ ಜನರಲ್ ರಾವತ್ಗೆ ಚಿದಂಬರಂ ಸಲಹೆ
ನವದೆಹಲಿ: ತಮ್ಮ ಮಿತಿಗೆ ಸೀಮಿತ ಪಡಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು 2019 ಡಿಸೆಂಬರ್ 28ರ ಶನಿವಾರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ತಿರುವನಂತಪುರಂನಲ್ಲಿ ಸಲಹೆ ಮಾಡಿದರು.

ಪೌರತ್ವ
(ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಯ ದೇಶದ ವಿವಿಧ ಕಡೆಗಳಲ್ಲಿ ಹಿಂಸೆಗೆ ತಿರುಗಿದ್ದನ್ನು ಅನುಸರಿಸಿ ಜನರಲ್ ರಾವತ್ ಅವರು ಗುರುವಾರ  ಜನಸಮೂಹವನ್ನು ಕಿಚ್ಚಿಡುವಿಕೆ ಮತ್ತು ಹಿಂಸಾಚಾರದತ್ತ ಒಯ್ಯುವವರು ಜನ ನಾಯಕರಲ್ಲಎಂಬುದಾಗಿ ಹೇಳಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳನ್ನು ಗುರುವಾರ ಟೀಕಿಸಿದ್ದ ಜನರಲ್ ಬಿಪಿನ್ ರಾವತ್ ಅವರು ಅಸಮರ್ಪಕ ದಿಕ್ಕಿನತ್ತ ಜನ ಸಮೂಹವನ್ನು  ಒಯ್ಯುತ್ತಿರುವುದಕ್ಕಾಗಿ ನಾಯಕತ್ವವನ್ನು ಪ್ರಶ್ನಿಸಿದ್ದರು.

ಚಿದಂಬರಂ ಅವರು ನಿವೃತ್ತರಾಗುತ್ತಿರುವ ಸೇನಾ ಮುಖ್ಯಸ್ಥ ರಾವತ್ ಅವರಿಗೆರಾಜಕಾರಣಿಗಳು ಸೇನಾ ಅಧಿಕಾರಿಗಳಿಗೆ ಅವರ ಕೆಲಸ ಮಾಡುವ ಬಗೆ ಹೇಗೆ ಎಂದು ಹೇಳುವುದಿಲ್ಲಎಂದು ಶನಿವಾರ ನೆನಪಿಸಿದರು.

ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಮತ್ತು ಸೇನಾ ಜನರಲ್ಗಳಿಗೆ ಸರ್ಕಾರವನ್ನು ಬೆಂಬಲಿಸುವಂತೆ ಹೇಳಲಾಗುತ್ತಿದೆ. ಇದು ನಾಚಿಕೆಗೇಡು. ನೀವು ಸೇನಾ ಮುಖ್ಯಸ್ಥರಾಗಿದ್ದೀರಿ ಮತ್ತು ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ನಾನು ಜನರಲ್ ರಾವತ್ ಅವರಿಗೆ ಮನವಿ ಮಾಡಬಯಸುತ್ತೇನೆಎಂದು ಚಿದಂಬರಂ ಅವರು ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಕಾಂಗ್ರೆಸ್ ಸಂಘಟಿಸಿದ್ದ ಮಹಾ ರ್ಯಾಲಿಯಲ್ಲಿ ಮಾತನಾಡುತ್ತಾ ಹೇಳಿದರು.

ಯುದ್ಧ ಮಾಡುವುದು ಹೇಗೆ ಎಂದು ನಿಮಗೆ ಹೇಳುವುದು ಹೇಗೆ ನಮ್ಮ ಕೆಲಸ ಅಲ್ಲವೋ ಹಾಗೆಯೇ ರಾಜಕಾರಣಿಗಳಿಗೆ ನಾವು ಏನು ಮಾಡಬೇಕು ಎಂದು ಹೇಳುವುದು ಸೇನೆಯ ಕೆಲಸವಲ್ಲಎಂದು ಕಾಂಗ್ರೆಸ್ ನಾಯಕ ನುಡಿದರು.

ದೇಶಾದ್ಯಂತ
ನಡೆಯುತ್ತಿರುವ ಪ್ರತಿಭಟನೆಗಳು ಹಿಂಸೆಗೆ ತಿರುಗಿದಾಗ ಹಲವರು ಮೃತರಾಗಿ ಇತರ ಹಲವರು ಗಾಯಗೊಂಡಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಮಾನತು ಪಡಿಸಬೇಕು ಮತ್ತು ರಾಷ್ಟ್ರೀಯ ಪೌರ ನೋಂದಣಿಯನ್ನು (ಎನ್ಆರ್ಸಿ) ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂಬುದು ನಮ್ಮ ಬೇಡಿಕೆ. ಅವುಗಳು ಅತಾರ್ಕಿಕವಷ್ಟೇ ಅಲ್ಲ ಸಂವಿಧಾನಬಾಹಿರ ಕೂಡಾಎಂದು ಚಿದಂಬರಂ ನುಡಿದರು.

ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆಎಂದು ಕಾಂಗ್ರೆಸ್ ನಾಯಕ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು ನಮ್ಮ ಸಂವಿಧಾನದ ಅಡಿಪಾಯವನ್ನೇ ನಾಶ ಮಾಡುತ್ತದೆ. ಅವರಿಗೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಇದ್ದಿದ್ದರೆ ಅವರು ಸಂವಿಧಾನವನ್ನೇ ತಿದ್ದುಪಡಿ ಮಾಡುತ್ತಿದ್ದರುಎಂದು ಚಿದಂಬರಂ ನುಡಿದರು.

ಕೇಂದ್ರದಲ್ಲಿನ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರವು ಸಂವಿಧಾನವನ್ನು ತಿದ್ದುಪಡಿ ಮಾಡಲು ಅಶಕ್ತವಾಗಿರುವುದರಿಂದ ಅವರುಹಿಂಬಾಗಿಲಮೂಲಕ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ದೂರಿದರು.

ಚಿದಂಬರಂ ಅವರು ಟೀಕೆ ಮಾಡುವುದಕ್ಕೆ ಮುನ್ನ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರುಒಬ್ಬನ ಕಚೇರಿಯ ಮಿತಿಗಳನ್ನು ತಿಳಿದುಕೊಂಡಿರಬೇಕುಎಂದು ಜನರಲ್ ರಾವತ್ ಅವರಿಗೆ ಸೂಚಿಸಿದ್ದರು.

ಅಖಿಲ
ಭಾರತ ಕಾಂಗ್ರೆಸ್ ಸಮಿತಿಯು (ಏಐಸಿಸಿ) ಕೇರಳದಲ್ಲಿ ಸಂಘಟಿಸಿದ  ಸಂವಿಧಾನ ರಕ್ಷಿಸಿ- ಭಾರತ ರಕ್ಷಿಸಿಅಭಿಯಾನದ ಅಂಗವಾಗಿ ಪ್ರತಿಭಟನಾ ಪ್ರದರ್ಶನ ಸಂಘಟಿಸಲಾಗಿತ್ತು.ಕಾಂಗ್ರೆಸ್ ಪಕ್ಷವು ಪೌರತ್ವ ಕಾಯ್ದೆ ವಿರುದ್ಧದ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಶನಿವಾರ  ಕೇರಳ ಕಾಂಗ್ರೆಸ್ ಘಟಕದ ಮುಖ್ಯಸ್ಥ ಮುಲ್ಲಂಪಲ್ಲಿ ರಾಮಚಂದ್ರನ್ ಮತ್ತು ಕೇರಳ ವಿಧಾನಸಭೆಯಲ್ಲಿ ವಿರೋಧಿ ನಾಯಕರಾದ ರಮೇಶ ಚೆನ್ನಿತ್ತಲ ಸೇರಿದಂತೆ ನೂರಾರು ಮಂದಿ ಪಕ್ಷ ಕಾರ್ಯಕರ್ತರು, ಶಾಸಕರು ಮತ್ತು ಕಾನೂನು ಕರ್ತರು ಪ್ರತಿಭಟನಾ  ಪ್ರರ್ಶನದಲ್ಲಿ  ಪಾಲ್ಗೊಂಡಿದ್ದರು..

Advertisement