ರಾಜ್ಯೋತ್ಸವ ಪ್ರಶಸ್ತಿ: ಸಂಭ್ರಮದ ಕ್ಷಣಗಳು
೨೦೨೬ ನವೆಂಬರ್ ೦೧ರ ಭಾನುವಾರ ನಡೆದ ಪ್ರಸ್ತುತ ಸಾಲಿನ ಕರ್ನಾಟಕ
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂಭ್ರಮದ ಕ್ಷಣಗಳು ಇಲ್ಲಿವೆ. (ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್ ಮಾಡಿ).
ಇದನ್ನೂ ಓದಿರಿ:
ರಾಜ್ಯೋತ್ಸವ ಪ್ರಶಸ್ತಿ: ಸಂಭ್ರಮದ ಕ್ಷಣಗಳು
೨೦೨೬ ನವೆಂಬರ್ ೦೧ರ ಭಾನುವಾರ ನಡೆದ ಪ್ರಸ್ತುತ ಸಾಲಿನ ಕರ್ನಾಟಕ
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂಭ್ರಮದ ಕ್ಷಣಗಳು ಇಲ್ಲಿವೆ. (ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್ ಮಾಡಿ).
ಇದನ್ನೂ ಓದಿರಿ:
ಅಭಿನಂದನೆಗಳು ವಿಶ್ವನಾಥ ಸುವರ್ಣ…
೨೦೨೬ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ರಾಜ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಹೆಸರು ಸೇರ್ಪಡೆಯಾಗಿರುವುದಕ್ಕೆ ಅಭಿನಂದನೆಗಳು.
ವಿಶ್ವನಾಥ ಸುವರ್ಣ ಅವರು ಈ ಪ್ರಶಸ್ತಿಗೆ ಅತ್ಯಂತ ಯೋಗ್ಯ ವ್ಯಕ್ತಿ. ಏಕೆಂದರೆ ಒಂದು ಸರ್ಕಾರ ಮಾಡಬೇಕಾಗಿದ್ದ
ಕೆಲಸವನ್ನು ಅವರು ಮಾಡಿದ್ದಾರೆ.
ಕರ್ನಾಟಕ
ರಾಜ್ಯದ ೧೧೬ ಕೋಟೆಗಳ ಛಾಯಾಚಿತ್ರಗಳನ್ನು ತೆಗೆದು ಸಂಗ್ರಹಿಸಿ ʼಕರುನಾಡಿನ ಕೋಟೆಗಳುʼ ಎಂಬ ವಿಶಿಷ್ಟ ಪುಸ್ತಕವನ್ನು ಪ್ರಕಟಿಸಿದ್ದಾರೆ. ಹಳೆಯ ಕೋಟೆಗಳ ಚಿತ್ರಗಳು ಮರೆತುಹೋಗದಂತೆ
ಜೀವಂತವಾಗಿ ಇರಿಸಿದ್ದಾರೆ.
ಮೂಲತಃ
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಬಲ್ಲಾಳ್ ಬಾಗ್ ನಿವಾಸಿಯಾದ ಸುವರ್ಣ, ಈ ಪುಸ್ತಕಕ್ಕಾಗಿ ಸುಮಾರು
೧೮ ತಿಂಗಳ ಕಾಲ ಇಡೀ ರಾಜ್ಯವನ್ನು ಸುತ್ತಾಡಿದ್ದರು.ದುರ್ಗಮ ಕೋಟೆಗಳು ಇರುವ ಸ್ಥಳಗಳನ್ನು ಹುಡುಕಿಕೊಂಡು
ಹೋಗಿ ತಮ್ಮ ಕ್ಯಾಮರಾದಲ್ಲಿ ಅವುಗಳನ್ನು ಸೆರೆ ಹಿಡಿದಿದ್ದರು. ಕನ್ನಡದಲ್ಲಿ ಆ ಕೋಟೆಗಳ ಬಗೆಗಿನ ವಿವರವನ್ನೂ
ದಾಖಲಿಸಿದ್ದರು.
ಬಳಿಕ ಈ ೨೦೧೭ರಲ್ಲಿ ಈ ಪುಸ್ತಕದ ಇಂಗ್ಲಿಷ್ ಆವೃತ್ತಿಯನ್ನು ಹೊರತಂದಿದ್ದಾರೆ. ಕರ್ನಾಟಕದ ಕೋಟೆ ಪರಂಪರೆಯನ್ನು ಛಾಯಾಚಿತ್ರಗಳ ಮೂಲಕ ಪರಿಚಯಿಸುವ ಈ ಕಾರ್ಯ ನಿಜಕ್ಕೂ ಅಪೂರ್ವವಾದದ್ದು.
ಪತ್ರಿಕಾ
ಛಾಯಾಗ್ರಾಹಕರಾಗಿ ಸುಮಾರು ನಾಲ್ಕೂವರೆ ದಶಕಗಳ ಸೇವೆ ಸಲ್ಲಿಸಿರುವ ಸುವರ್ಣ ಅವರಿಗೆ ಪ್ರಕೃತಿ, ಪ್ರಾಣಿ,
ಪಕ್ಷಿಗಳ ಚಿತ್ರಗಳನ್ನು ಸೆರೆ ಹಿಡಿಯುವ ವಿಶಿಷ್ಟ ಆಸಕ್ತಿ ಇದೆ. ಅವರ ಈ ಆಸಕ್ತಿ ʼಕನ್ನಡ ನಾಡಿನ ಬಣ್ಣದ ಬಾನಾಡಿಗಳುʼ ಪುಸ್ತಕದಲ್ಲಿ ಪಡಿಮೂಡಿದೆ. ಈ ಛಾಯಾ ಸಂಪುಟ ಪಕ್ಷಿ ಲೋಕದ ಜೀವನದ ಪಕ್ಷಿಗಳ ಬದುಕಿನ ಸುಂದರ
ಚಿತ್ರಣವನ್ನು ನೀಡುತ್ತದೆ.
ʼಪ್ರಜಾವಾಣಿʼ
ದಿನಪತ್ರಿಕೆಯಲ್ಲಿ ಮುಖ್ಯ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು ಅದಕ್ಕೂ ಮುನ್ನ
ʼಅಭಿಮಾನಿʼ ʼಅರಗಿಣಿʼ ಇತ್ಯಾದಿ ಪತ್ರಿಕೆಗಳಲ್ಲಿ ಸೇವೆ
ಸಲ್ಲಿಸಿದವರು. ತಮ್ಮ ವೃತ್ತಿ ಜೀವನದಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾರ್ವಜನಿಕ
ಜೀವನದ ಅನೇಕ ಘಟನೆಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ʼಪರ್ಯಾಯ.ಕಾಮ್ʼ ವಿಶ್ವನಾಥ ಸುವರ್ಣ ಅವರ ಚಿತ್ರಗಳ ಸಂಪುಟಗಳನ್ನು ʼಇದು ಸುವರ್ಣ ನೋಟʼ ಶೀರ್ಷಿಕೆಯಲ್ಲಿ ಪ್ರಕಟಿಸುತ್ತಾ ಬಂದಿದೆ. ಅವುಗಳನ್ನು ಇಲ್ಲಿ ನೋಡಬಹುದು.
ಇತ್ತೀಚೆಗೆ
ಕುಂದಾಪುರಕ್ಕೆ ಭೇಟಿ ನೀಡಿದ್ದಾಗ ಸೂರ್ಯಾಸ್ತ ಕಾಲದಲ್ಲಿ ತೆಗೆದ ಸುಂದರ ಚಿತ್ರಗಳ ಜೊತೆಗೆ, ಮೊನ್ನೆ
ಮೊನ್ನೆ ಕಳೆದ ʼವಿಶ್ವ ವಿಖ್ಯಾತ ಮೈಸೂರುʼ ದಸರ ಸಂದರ್ಭದ ಕೆಲವು ಸುಂದರ ಚಿತ್ರಗಳು ಇಲ್ಲಿವೆ.
ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್ ಮಾಡಿರಿ.
ಜೊತೆಗೇ ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಇತರ ಎಲ್ಲರಿಗೂ ಪರ್ಯಾಯದ ಅಭಿನಂದನೆಗಳು.
ಮಂಗಳೂರು ದಸರಾ: ಕುದ್ರೋಳಿ ವೈಭವ
ಇದು
ಸುವರ್ಣ ನೋಟ
ದಸರಾ ಅಂದೊಡನ ಸಾಮಾನ್ಯವಾಗಿ ಸೂಜಿಗಲ್ಲಿನ ಹಾಗೆ ಎಲ್ಲರ ಗಮನ ಸೆಳೆಯುವುದು ಮೈಸೂರು ದಸರಾ ವೈಭವ. ಆದರೆ ಕರ್ನಾಟಕದಲ್ಲಿ ಮೈಸೂರಿನ ಹೊರತಾಗಿ ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತಿತರ ಅನೇಕ ಕಡೆಗಳಲ್ಲೂ ವೈಭವಯುತವಾಗಿ ದಸರಾ ಹಬ್ಬದ ಆಚರಣೆ ನಡೆಯುತ್ತದೆ.
ಇಂತಹ ದಸರಾ ಉತ್ಸವಾಚರಣೆಯಲ್ಲಿ ಗಮನ ಸೆಳೆಯುವ ಒಂದು ಹಬ್ಬ ಮಂಗಳೂರಿನ ಕುದ್ರೋಳಿಯ ಗೋಕರ್ಣನಾಥ ದೇವಾಲಯದಲ್ಲಿ ನಡೆಯುವ ದಸರಾ ಮಹೋತ್ಸವ. ಇಲ್ಲಿನ ದೀಪಾಲಂಕಾರ, ದಸರಾ ಸಡಗರಕ್ಕೆ ಸ್ವತಃ ಸಾಕ್ಷಿಯಾದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಸೆರೆ ಹಿಡಿದ ಚಿತ್ರಗಳು ಇಲ್ಲಿವೆ. ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್ ಮಾಡಿರಿ.
ಫ್ರೀಡಂ ಹಬ್ಬ: ಇದು ʼಸುವರ್ಣ ನೋಟʼ
೨೦೨೬ರ
ಆಗಸ್ಟ್ ೧೫ರಂದು ನಡೆದ ೮೦ನೇ ಸ್ವಾತಂತ್ರ್ಯೋತ್ಸವವನ್ನು ವಿಧಾನ ಸೌಧದ ಮುಂಭಾಗದಲ್ಲಿ ʼಫ್ರೀಡಂ ಹಬ್ಬʼ ಆಗಿ ಆಚರಿಸಲಾಯಿತು.
ಈ
ಸಂದರ್ಭದಲ್ಲಿ ಕಣ್ಮನ ಸೆಳೆದ ದೃಶ್ಯಗಳನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು
ಸೆರೆ ಹಿಡಿದದ್ದು ಹೀಗೆ.
ವಿಡಿಯೋ ನೋಡಿ.
ಯೂಟ್ಯೂಬ್ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ.
ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ?
ಇದು
ʼಸುವರ್ಣʼ ನೋಟ
ಹವಾಮಾನ
ವೈಪರೀತ್ಯದಿಂದ ಈ ಬಾರಿ ಮುಂಗಾರು ಕಣ್ಣಾ ಮುಚ್ಚಾಲೆ ಆಡುತ್ತಿದೆ. ವಾರ ಮುಂಚಿತವಾಗಿ ಬರುವುದೆಂದು
ಹವಾಮಾನ ಇಲಾಖೆ ಭವಿಷ್ಯ ನುಡಿದಿದ್ದರೂ, ಬರುವುದು ತಡವಾಗಿದೆ.
ಸೆಕೆಗಾಲದ ಬಿಸಿಲ ಝಳವೂ ಈ ಸಾಲು ಅಂದರೆ ೨೦೨೬ನೇ ವರ್ಷದಲ್ಲಿ ಮಿತಿ ಮೀರಿತು. ಚಳಿಕಾಲದ ಕಥೆಯೂ ಅಷ್ಟೇ. ವಿಪರೀತ ಚಳಿ.
ಗಿಡ,
ಮರ, ಬಳ್ಳಿಗಳ ಮೇಲೂ ಹವಾಮಾನದ ವೈಪರೀತ್ಯ ತನ್ನದೇ ಆದ ರೀತಿಯಲ್ಲಿ ಪ್ರಭಾವ ಬೀರಿದೆ. ಬೀರುತ್ತಿದೆ.
ನೋಡಿ.
ಸಾಮಾನ್ಯವಾಗಿ ವರ್ಷಕ್ಕೆ ಒಂದೇ ಬಾರಿ ಅರಳುವ ಹೂ ಅದ್ಭುತ ಸೊಗಸಿನ ʼಬಹ್ಮ ಕಮಲʼ.
ಸಾಮಾನ್ಯವಾಗಿ ಈ ಹೂ ಅರಳುವುದು ಜುಲೈ-ಆಗಸ್ಟ್ ತಿಂಗಳಲ್ಲಿ ಹುಣ್ಣಿಮೆ, ಅಮಾವಾಸ್ಯೆಯ ಸಮಯದಲ್ಲಿ.
ಈ ಬಾರಿ ಅದು ಕೂಡಾ ತಿಂಗಳು ಮುಂಚಿತವಾಗಿಯೇ ಅರಳಿ ಬಿಟ್ಟಿದೆ. ಮೊನ್ನೆ, ಮೊನ್ನೆ ಅಂದರೆ ೨೦೨೬ರ ಜೂನ್ ತಿಂಗಳ ೧೩ರ ಶನಿವಾರ ರಾತ್ರಿ ಅರಳಿತು. ಹೀಗೆ ಅರಳಿದ ಬ್ರಹ್ಮ ಕಮಲ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಬಂಧಿಯಾಗಿ ಬಿಟ್ಟಿತು. ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್ ಮಾಡಿರಿ.
ಅಂದಹಾಗೆ, ಈ ಶನಿವಾರ ಪುಣ್ಯಪ್ರದವಾದ ಅಧಿಕ ಮಾಸದ ಕೊನೆಯ ಶನಿವಾರ. ಅಧಿಕ ಮಾಸದಲ್ಲೇ ಅರಳಲು ʼಬ್ರಹ್ಮಕಮಲʼಕ್ಕೂ ಅವಸರವಾಗಿರಬಹುದೇನೋ? ಏನೇ ಆಗಲಿ, ಪುಣ್ಯದಿನದಂದೇ ಅರಳಿದ ಈ ಹೂವನ್ನು ನೋಡಿದವರಿಗೆ ಲಭಿಸುವ ಪುಣ್ಯ ಅಧಿಕವಾಗಲಿ ಎಂದು ಹಾರೈಸೋಣ.
ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ!
ಇದು ಸುವರ್ಣ ನೋಟ
ದೀಪಾವಳಿ ದೀಪಗಳ ಹಬ್ಬ, ಪಟಾಕಿ ಬಾಣಗಳ
ಬಿರುಸಿನ ಹಬ್ಬ.
ಶ್ರೀರಾಮಚಂದ್ರನು ರಾವಣನನ್ನು ವಧಿಸಿದ ಬಳಿಕ ಅಯೋಧ್ಯೆಗೆ ವಾಪಸಾಗಿ ಪಟ್ಟವನ್ನೇರಿದ ಹಬ್ಬ. ಅಸುರ ನರಕಾಸುರನನ್ನು ವಧಿಸಿದ ದಿನದ ಹಬ್ಬ. ವಿಷ್ಣುವು ವಾಮನರೂಪಿಯಾಗಿ ಬಂದು ಮೂರು ಅಡಿ ಭೂಮಿಯನ್ನು ದಾನವಾಗಿ ಪಡೆದು ಬಲಿಯೇಂದ್ರ ಚಕ್ರವರ್ತಿಯನ್ನು ಪಾತಾಳಕ್ಕೆ ಕಳುಹಿಸಿದ ಹಬ್ಬ. ಪಾರ್ವತಿಯ ಕೇದಾರೇಶ್ವರನನ್ನಪೂಜಿಸಿ ಈಶ್ವರನನ್ನು ಪತಿಯಾಗಿ ಪಡೆದ ಹಬ್ಬ. ಲಕ್ಷ್ಮಿಯು ಪೂಜೆ ಸ್ವೀಕರಿಸಿ ಭಕ್ತರನ್ನು ಹರಸುವ ಹಬ್ಬ.ಗೋಮಾತೆಯನ್ನು ಪೂಜಿಸುವ ಹಬ್ಬ.
ಈ ಹಬ್ಬಕ್ಕೆ ದೇವರಿಗೆ ಹೂಗಳ ಸಿಂಗಾರದೊಂದಿಗೆ
ಸಾಲು ದೀಪಗಳ ಹಣತೆ ಬೆಳಗಿಸುವುದರ ಜೊತೆಗೆ ಪಟಾಕಿ ಬಾಣಗಳ ಬಿರುಸು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.
ಈ ದೃಶ್ಯಗಳನ್ನು ಸೆರೆ ಹಿಡಿದು ದೀಪಾವಳಿ
ಹಬ್ಬದ ಸಂಭ್ರಮಕ್ಕೆ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಕಳೆಗಟ್ಟಿಸಿರುವುದು
ಹೀಗೆ.
ಪಟಾಕಿ ಬಾಣಗಳ ಸುಂದರ ಛಾಯಾಚಿತ್ರಗಳನ್ನು ಪರ್ಯಾಯದ ʼಸುವರ್ಣ
ನೋಟʼಕ್ಕೆ ಒದಗಿಸಿದ್ದಾರೆ.
ಈ ಚಿತ್ರಗಳಿಗೆ ಚಲನೆ ನೀಡಿ ವಿಡಿಯೋ ರೂಪಿಸಿದ್ದು ನೆತ್ರಕೆರೆ ಉದಯಶಂಕರ.
ಚಿತ್ರ ಹಾಗೂ ವಿಡಿಯೋದ ಸಂಗಮ ಇಲ್ಲಿದೆ.👇
ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್ ಮಾಡಿ. ವಿಡಿಯೋದ ವೀಕ್ಷಣೆಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿ. ಇಲ್ಲವೇ ಇಲ್ಲಿರುವ ಯೂ ಟ್ಯೂಬ್‌ವಿಡಿಯೋ ಲಿಂಕ್ ಕ್ಲಿಕ್ ಮಾಡಿ: https://youtu.be/ZqJD3In5guY?list=PLv2kXf-8UHyK3E-4qT6ApslDz_pUNsCZO
ಗುರು ಪೂರ್ಣಿಮಾ
ನಮೋsಸ್ತು ತೇ ವ್ಯಾಸ ವಿಶಾಲಬುದ್ಧೇ
ಫುಲ್ಲಾರವಿಂದಾಯತಪತ್ರನೇತ್ರ
|
ಯೇನ ತ್ವಯಾ
ಭಾರತತೈಲಪೂರ್ಣಃ
ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃII
ಇದು ವ್ಯಾಸ ಮಹರ್ಷಿಗಳನ್ನು ಸ್ತುತಿಸುವ ಶ್ಲೋಕ..
ಇದರ ಅರ್ಥ ಹೀಗಿದೆ:
ಸಾರಾಂಶ:
ವ್ಯಾಸ
ಪೂರ್ಣಿಮೆಯನ್ನೇ ಗುರುಪೂರ್ಣಿಮೆ ಎಂದು ಕರೆಯಲಾಗುತ್ತದೆ.
ಇದು ಹಿಂದೂ
ಸಂಪ್ರದಾಯದಲ್ಲಿ ಗುರುಗಳಿಗೆ ಗೌರವ ಸಲ್ಲಿಸುವ ಒಂದು ಪ್ರಮುಖ ಹಬ್ಬವಾಗಿದೆ. ಈ ದಿನದಂದು ಮಹರ್ಷಿ
ವೇದವ್ಯಾಸರು ಜನಿಸಿದರು ಎಂದು ನಂಬಲಾಗಿದೆ. ವೇದವ್ಯಾಸರು ಮಹಾಭಾರತವನ್ನು ರಚಿಸಿದವರು ಮತ್ತು
ವೇದಗಳನ್ನು ವಿಭಾಗಿಸಿದವರು. ಹಾಗಾಗಿ, ಅವರನ್ನು ಆದಿಗುರು ಎಂದು
ಪರಿಗಣಿಸಲಾಗುತ್ತದೆ.
ಆದ್ದರಿಂದ, ವ್ಯಾಸ ಪೂರ್ಣಿಮೆಯು ಗುರುಪೂರ್ಣಿಮೆಯಾಗಿದ್ದು, ಸಮಸ್ತ
ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ.ಇಂದು ಗುರು ಪೂರ್ಣಿಮೆ.
ಗುರು ಎಂದರೆ ನಗು, ಬೆಳಕು, ಜ್ಞಾನ
ಮತ್ತು ಮಾರ್ಗದರ್ಶನ ನೀಡುವ ನಮ್ಮ ಗುರುಗಳು.
ಗುರು ಪೂರ್ಣಿಮೆಯು ಶ್ರದ್ಧೆ, ಗೌರವದೊಂದಿಗೆ ಗುರುಗಳಿಗೆ ಧನ್ಯವಾದ ತಿಳಿಸಲು ಸಮರ್ಪಿತವಾದ
ದಿನ.
ಈ ಹಬ್ಬವನ್ನು ಆಚಾರ್ಯರ
ದಿನವಾಗಿ ಮತ್ತು ವಿಶ್ವದಾದ್ಯಾಂತ ಗುರುಗಳಿಗಾಗಿ ಆಚರಿಸಲಾಗುತ್ತದೆ. ಗುರುಗಳು ತಮ್ಮ
ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಜೀವನದ ತತ್ತ್ವಗಳನ್ನು, ಜ್ಞಾನವನ್ನು ಮತ್ತು
ಕರ್ಮವನ್ನು ದಿನನಿತ್ಯ ಬೋಧಿಸುತ್ತಾರೆ.
ಈ ದಿನ, ವಿದ್ಯಾರ್ಥಿಗಳು
ತಮ್ಮ ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ವಿಶೇಷವಾಗಿ ಸಿದ್ಧವಾಗುತ್ತಾರೆ. ಗುರುಗಳು
ಏನೇನು ನೀಡಿದರೋ,
ಅವು ನಿಖರವಾಗಿ ಪೂರೈಸುತ್ತದೆ ಎಂಬ ನಂಬಿಕೆಯನ್ನು
ಹೊಂದುತ್ತಾರೆ.
ಜೀವನದಲ್ಲಿ ಗುರುಗಳು
ನಮ್ಮ ಮಾರ್ಗದರ್ಶನ ನೀಡಲು ಸದಾ ಇರುತ್ತಾರೆ. ಆದ್ದರಿಂದ, ಅವರು
ನೀಡುವ ಬೋಧನೆಗಳನ್ನು ಎಂದಿಗೂ ಮರೆಯಬಾರದು.
ಗುರುಪೂರ್ಣಿಮೆಯ ಈ ಸಂದರ್ಭಕ್ಕೆ
ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ತಾವು ಬೆಳಗಾವಿಯಲ್ಲಿ ಸೆರೆ ಹಿಡಿದ ಸುಂದರ
ಚಿತ್ರಗಳನ್ನು ಕಳುಹಿಸಿದ್ದಾರೆ.
ಅವುಗಳನ್ನು ಇಲ್ಲಿ ನೋಡಿ. ಸಮೀಪ ನೋಟಕ್ಕೆಕೆ ಚಿತ್ರಗಳನ್ನು ಕ್ಲಿಕ್ ಮಾಡಿ. ಕೆಳಗೆ ಕ್ಲಿಕ್ ಮಾಡಿ ವಿಡಿಯೋ ನೋಡಲು ಮರೆಯಬೇಡಿ.