Showing posts with label Rama Mandira. Show all posts
Showing posts with label Rama Mandira. Show all posts

Tuesday, November 25, 2025

ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!

ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ 2025 ನವೆಂಬರ್‌ 25ರ ಸೋಮವಾರ ಧರ್ಮ ಧ್ವಜವನ್ನು ಹಾರಿಸಿದರು.

ಇದರೊಂದಿಗೆ ದೇವಾಲಯ ನಿರ್ಮಾಣದ ಆಚರಣೆಯ ಪ್ರತಿವಿಧಿಯೂ ಶುದ್ಧತೆ ಮತ್ತು ಶ್ರದ್ಧೆಯೊಂದಿಗೆ ಸಂಪೂರ್ಣಗೊಂಡಿತು.

ಈ ಕ್ಷಣವು ಕೋಟ್ಯಂತರ ಜನರ ಭಕ್ತಿ ಮತ್ತು ತಲೆತಲಾಂತರದ ಪ್ರಾರ್ಥನೆಗಳಿಂದ ಸಂಪನ್ನಗೊಂಡಿದೆ.

ಯಾವುದೇ ದೇವಾಲಯದ ಆಚರಣೆಗಳು ಅಂತಿಮ ಹಂತಕ್ಕೆ ತಲುಪಿದಾಗ, ಪ್ರತಿ ವಿಧಿಯು ಶುದ್ಧತೆ ಮತ್ತು ಶ್ರದ್ಧೆಯಿಂದ ಸಂಪೂರ್ಣಗೊಂಡಿದೆ ಎಂಬುದನ್ನು ಸೂಚಿಸಲು ಈ ಪವಿತ್ರ ಧ್ವಜವನ್ನು ಏರಿಸಲಾಗುತ್ತದೆ.

ಶ್ರೀರಾಮ ಮತ್ತು ಸೀತಾಮಾತೆಯ ಕಲ್ಯಾಣ ಸಂಪನ್ನಗೊಂಡ ದಿನ ಎಂಬುದಾಗಿ ನಂಬಲಾಗಿರುವ ಈದಿನ ನಡೆದ ಈ ಸಮಾರಂಭದೊಂದಿಗೆ, ಶ್ರೀ ರಾಮ ಜನ್ಮಭೂಮಿ ಮಂದಿರವು ಈಗ ವಿಧ್ಯುಕ್ತವಾಗಿ ಪೂರ್ಣಗೊಂಡಿತು. ಇದು ಪ್ರತಿಯೊಬ್ಬ ಭಕ್ತನ ಹೃದಯವನ್ನೂ ಭಾವನೆಗಳಿಂದ ತುಂಬುವಂತೆ ಮಾಡಿತು.

ಧರ್ಮಧ್ವಜಾರೋಹಣದ ಈ ಸಂದರ್ಭಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ನೂರಾರು ಮಂದಿ ಸಂತರು ಸೇರಿದಂತೆ ಸಹಸ್ರಾರು ಗಣ್ಯರು ಸಾಕ್ಷಿಯಾದರು.

(ವೀಡಿಯೊ ಕೃಪೆ: Instagram ನಲ್ಲಿ MyGovindia)

Monday, January 8, 2024

ಅಯೋಧ್ಯಾ ರಾಮಮಂದಿರ: ಕತ್ತಲ ಬೆಳಕಲ್ಲಿ ಭವ್ಯನೋಟ

ಅಯೋಧ್ಯಾ ರಾಮಮಂದಿರ: ಕತ್ತಲ ಬೆಳಕಲ್ಲಿ ಭವ್ಯನೋಟ

ಬೆಂಗಳೂರು: ಅಯೋಧ್ಯಾ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದ ಹಾಲಿ ಸ್ಥಿತಿಗತಿಯ ಚಿತ್ರ ಹಾಗೂ ವಿಡಿಯೋಗಳನ್ನು ೨೦೨೩ ಜನವರಿ ೮ರ ಸೋಮವಾರ ಬಿಡುಗಡೆ ಮಾಡಿದೆ.

ಈ ಚಿತ್ರಗಳಲ್ಲಿ ಕತ್ತಲೆಯಲ್ಲಿ ದೀಪಗಳ ಬೆಳಕಿನಲ್ಲಿ ಮಿನುಗುತ್ತಿರುವ ದೇವಾಲಯದ ಭವ್ಯ ಚಿತ್ರಗಳು ಹಾಗೂ ವಿಡಿಯೋ ಇದೆ.

ದೇವಾಲಯದ ಕುಬೇರ ಕೋಟೆಯಲ್ಲಿ ಸ್ಥಾಪಿಸಲಾಗಿರುವ ಭವ್ಯ ಜಟಾಯು ಶಿಲ್ಪ, ದೇವಾಲಯದ ಒಳಗಿನ ಸ್ಥಂಭಗಳ ನೋಟ, ಸ್ಥಂಭಗಳಲ್ಲಿನ ಅಲಂಕೃತ ದೇವತೆಗಳು, ದೇವಾಲಯದ ಒಳನೋಟ, ಮೇಲ್ಛಾವಣಿಯ ಕೆತ್ತನೆಯ ಸೊಬಗು ಕಣ್ಸೆಳೆಯುತ್ತಿದೆ.

ಕಳೆದ ತಿಂಗಳು ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವ ಹಿಂದೂ ಪರಿಷದ್‌ ನಾಯಕ ಚಂಪತ್‌ ರಾಯ್‌ ಅವರು ದೇವಾಲಯದ ಗರ್ಭಗುಡಿಯ ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಗರ್ಭಗುಡಿಯಲ್ಲಿ ಜನವರಿ ೨೨ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ.

ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ.

Image, Music video Courtesy:
 Shree Rama Janmabhoomi Thirtha Kshetra Trust, Ayodhya.

ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:


Advertisement