ದೇವ
ದುರ್ಲಭ ಮಾತೃಪ್ರೇಮ…!
(ಸುವರ್ಣ ನೋಟ)
ಮೇ 10 ಮಾತೆಯರ ದಿನ. ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ತಾಯಂದಿರ ಗುಣಗಾನ ನಡೆಯುತ್ತಿದೆ. ಈ ಭೂಮಿಗೆ ಕಾಲಿಡುವ ಪ್ರತಿಯೊಂದು ಜೀವಿಗೂ ಮೊತ್ತ ಮೊದಲ ಆಸರೆ ನೀಡಿ, ಲಾಲನೆ ಪಾಲನೆ ಮಾಡಿ ಪೊರೆಯುವ ಮಹಾ ಜೀವಿಯೇ ಮಾತೆ. ಮನುಷ್ಯರಿರಲಿ, ಪ್ರಾಣಿಗಳಿರಲಿ ಹುಟ್ಟುವ ಪ್ರತಿಜೀವಿಗೂ ಮಾತೆಯ ಎದೆಹಾಲೇ ಅಮೃತ. ಅದನ್ನು ಕುಡಿದೇ ಪ್ರತಿ ಜೀವಿಗಳೂ ಬೆಳೆಯುತ್ತವೆ.ಸಸ್ತನಿ ವರ್ಗದ ಎಲ್ಲ ಜೀವಿಗಳಲ್ಲೂ ಭಗವಂತ ಅವುಗಳ ಸಂತಾನವನ್ನು ಬೆಳೆಸಲೆಂದೇ ಸ್ತನಗಳಲ್ಲಿ ಅಮೃತ ಸ್ವರೂಪಿಯಾದ ಹಾಲನ್ನು ಕರುಣಿಸಿದ್ದಾನೆ. ಮನುಷ್ಯರಿರಲಿ ಅಥವಾ ಪ್ರಾಣಿಗಳಿರಲಿ ಬೆಳೆಯುತ್ತಾ ಹೋದಂತೆ ಸ್ವತಂತ್ರವಾಗಿ ಆಹಾರ ಹುಡುಕಲು ಆರಂಭಿಸುವುದು ಕ್ರಮ. ಮನುಷ್ಯರು, ಪ್ರಾಣಿಗಳಲ್ಲಿ ಆಹಾರ ಹುಡುಕಿ ತಿನ್ನುವುದರ ಹಿಂದೆ ತಮ್ಮ ಜೀವ ಪೊರೆದುಕೊಳ್ಳುವುದರ ಜೊತೆಗೆ ತಮ್ಮ ಮಕ್ಕಳು, ಮರಿಗಳಿಗೆ ಹಾಲು ಒದಗಿಸುವ ಘನ ಉದ್ದೇಶವೂ ಇರುತ್ತದೆ.
ಆದರೆ ಇವೆಲ್ಲವನ್ನೂ ಮೀರಿದ ಮಾತೃ ಮಮತೆಯು ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳ ಗಮನ ಸೆಳೆದಿಲ್ಲವೆಂದೇ ಹೇಳಬೇಕು. ಏಕೆಂದರೆ ಈ ಅತ್ಯಮೋಘ ಮಾತೃ ವಾತ್ಸಲ್ಯದ ಚಿತ್ರಗಳನ್ನು ಮುಂದಿಟ್ಟ ಮಾಧ್ಯಮಗಳನ್ನು ನೀವು ಕಂಡಿರಲಾರಿರಿ.
ಹೌದು ಇಲ್ಲಿ ನೋಡಿ. ತನ್ನ ಪುಟ್ಟ ಕಂದಮ್ಮಗಳಿಗೆ ತನ್ನ ಕೊಕ್ಕಿನಿಂದಲೇ ಆಹಾರ ಉಣಿಸುತ್ತಿರುವ ವಿವಿಧ ಜಾತಿಯ ಪಕ್ಷಿಗಳ ಚಿತ್ರ.
ಬಾಲದಿಂದ ಬೆನ್ನಿನವರೆಗೆ ಜೀಬ್ರಾದಂತಹ ಪಟ್ಟಿಗಳು, ಬೆನ್ನಿನಿಂದ ತಲೆಯವರೆಗೆ ನಸುಕಂದು ಬಣ್ಣ, ತೆಳುವಾದ, ಮೊನಚಾದ ಉದ್ದ ಕೊಕ್ಕು, ತಲೆಯ ಮೇಲೆ ತುದಿ ಕಪ್ಪಗಿರುವ ಪುಕ್ಕಗಳ ಕಿರೀಟ ಹೊಂದಿರುವ ಅತ್ಯಂತ ಸುಂದರವಾದ ಚಂದ್ರ ಮುಕುಟ ಪಕ್ಷಿ ಅಥವಾ ಇಂಗ್ಲಿಷಿನಲ್ಲಿ ‘ಹುಪು’ ಎಂಬುದಾಗಿ ಕರೆಯಲಾಗುವ ಪಕ್ಷಿ ಇರಬಹುದು ಇಲ್ಲವೇ ಕೊಳವೆಯಾಕಾರದ ಹೂಗಳತ್ತ ಶರವೇಗದಲ್ಲಿ ಬಂದು ಉದ್ದನೆಯ ಚೂಪಾದ ಕೊಕ್ಕಿನಿಂದ ಕ್ಷಣ ಮಾತ್ರದಲ್ಲಿ ಮಕರಂಗ ಹೀರುವ ಝೇಂಕಾರ ಪಕ್ಷಿಗಳೆಂದೇ ಕರೆಯಲಾಗುವ ಸೂರಕ್ಕಿ ಇಲ್ಲವೇ ಸನ್ ಬರ್ಡ್ ಇರಬಹುದು, ಅಥವಾ ನಿಮ್ಮ ಆಸುಪಾಸಿನಲ್ಲಿ ಕಾಣುವ ಶಿಕ್ರವಿರಬಹುದು ಅಥವಾ ಮುದ್ದು ಮುದ್ದಾಗಿ ಮನುಷ್ಯರ ಸ್ವರ ಅನುಕರಿಸುವ ಗಿಳಿಯೇ ಇರಬಹುದು-ತಮ್ಮ ಮರಿಗಳನ್ನು ಪೊರೆಯುವುದು ತಮ್ಮ ಕೊಕ್ಕಿನಿಂದ ತಂದ ಆಹಾರವನ್ನು ಅವುಗಳ ಕೊಕ್ಕಿನ ಒಳಕ್ಕೆ ಸುರಿಯವ ಮೂಲಕವೇ.
ಮರಿಗಳ ಪ್ರತಿದಿನದ ಪ್ರತಿ
ಕ್ಷಣದ ಆಹಾರಕ್ಕೂ ಅವುಗಳು ಪರಿಸರದಲ್ಲಿ ಎಲ್ಲೆಲ್ಲೋ ಸುತ್ತಬೇಕು, ಮರಿಗಳಿಗೆ ಸೂಕ್ತವಾದ ಆಹಾರ
ಹುಡುಕಬೇಕು,
ಅವುಗಳನ್ನು
ತಮ್ಮ ಕೊಕ್ಕಿನಲ್ಲೇ ಇಟ್ಟುಕೊಂಡು ಬಂದು
ಪುಟ್ಟ ಮರಿಗಳ ಕೊಕ್ಕಿನ ಒಳಕ್ಕೆ ಸುರಿಯಬೇಕು.
ಈ ಕಾಯಕ ಒಂದೆರಡು ದಿನವಲ್ಲ, ಮರಿಗಳು ರೆಕ್ಕೆ ಪುಕ್ಕ ಬಲಿತು ತಾವಾಗಿಯೇ ಹಾರಿ ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳುವವರೆಗೂ. ಜೊತೆಗೆ ಈ ಹಕ್ಕಿಗಳಿಗೆ ತಮ್ಮ ಹೊಟ್ಟೆಗೂ ತಮ್ಮದೇ ಕೈ, ಕ್ಷಮಿಸಿ, ತಮ್ಮದೇ ಕೊಕ್ಕು. ತಮ್ಮ ಆಹಾರವನ್ನೂ ಅದೇ ಕೊಕ್ಕಿನಿಂದ ಪೂರೈಸಿಕೊಳ್ಳಬೇಕು!
ಈ ಕಾಯಕ ಒಂದೆರಡು ದಿನವಲ್ಲ, ಮರಿಗಳು ರೆಕ್ಕೆ ಪುಕ್ಕ ಬಲಿತು ತಾವಾಗಿಯೇ ಹಾರಿ ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳುವವರೆಗೂ. ಜೊತೆಗೆ ಈ ಹಕ್ಕಿಗಳಿಗೆ ತಮ್ಮ ಹೊಟ್ಟೆಗೂ ತಮ್ಮದೇ ಕೈ, ಕ್ಷಮಿಸಿ, ತಮ್ಮದೇ ಕೊಕ್ಕು. ತಮ್ಮ ಆಹಾರವನ್ನೂ ಅದೇ ಕೊಕ್ಕಿನಿಂದ ಪೂರೈಸಿಕೊಳ್ಳಬೇಕು!
ಜಗತ್ತಿನ ಮಾತೆಯರ ಪುತ್ರ
ಪ್ರೇಮದಲ್ಲಿ
ಹಕ್ಕಿಗಳ ಪುತ್ರ ಪ್ರೇಮವೇ ಮಹಾನ್
ಎಂಬ ವಾದವನ್ನು ಈಗಲಾದರೂ ಒಪ್ಪ
ಬಲ್ಲಿರಾ?
ಹಕ್ಕಿ
ಜಗತ್ತಿನ ದೇವ ದುರ್ಲಭ ಮಾತೃ
ವಾತ್ಸಲ್ಯದ
ದೃಶ್ಯಗಳನ್ನು
ಇಲ್ಲಿ ಸೆರೆ
ಹಿಡಿದಿದ್ದಾರೆ
ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ.
ಸಮೀಪ
ದೃಶ್ಯದ ಅನುಭವಕ್ಕೆ ಫೊಟೋ
ಗಳನ್ನು ಕ್ಲಿಕ್ಕಿಸಿ.
No comments:
Post a Comment