Showing posts with label Melenia Trump. Show all posts
Showing posts with label Melenia Trump. Show all posts

Friday, October 2, 2020

ಚುನಾವಣೆಗೆ ಮುನ್ನ ಆಘಾತ: ಡೊನಾಲ್ಡ್ ಟ್ರಂಪ್, ಮೆಲಾನಿಯಾಗೆ ಕೊರೋನಾ

 ಚುನಾವಣೆಗೆ ಮುನ್ನ ಆಘಾತ: ಡೊನಾಲ್ಡ್ ಟ್ರಂಪ್, ಮೆಲಾನಿಯಾಗೆ ಕೊರೋನಾ

ವಾಷಿಂಗ್ಟನ್: ಚುನಾವಣಾ ಪ್ರಚಾರದ ಅಂತಿಮ ಘಳಿಗೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಅಮೆರಿಕದ ಮೊದಲ ಮಹಿಳೆ ಮೆಲಾನಿಯಾ ಅವರಿಗೆ ಕೋವಿಡ್-೧೯ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಬೆನ್ನಲ್ಲೇ ತಾವಿಬ್ಬರೂ ಪ್ರತ್ಯೇಕತಾವಾಸದ ನಿರ್ಬಂಧಕ್ಕೆ ಒಳಗಾಗಿರುವುದಾಗಿ ಟ್ರಂಪ್ 2020 ಅಕ್ಟೋಬರ್ 02ರ ಶುಕ್ರವಾರ ತಿಳಿಸಿದ್ದಾರೆ.

ಕೊರೋನಾ ಸೋಂಕಿನ ಪರಿಣಾಮವಾಗಿ ಟ್ರಂಪ್ ಅವರು ಚುನಾವಣಾ ಪ್ರಚಾರದ ನಿರ್ಣಾಯಕ ಹಂತದಲ್ಲಿ ಪ್ರಚಾರದಿಂದ ದೂರ ಉಳಿಯಬೇಕಾಗಿ ಬಂದಿದ್ದು, ನಿಗದಿತ ಸಾರ್ವಜನಿಕ ಸಭೆಗಳಿಗೆ ಅಡ್ಡಿ ಉಂಟಾಗಿದೆ.

ಟ್ರಂಪ್ ಚುನಾವಣಾ ಪ್ರಚಾರದ ಹಿರಿಯ ಸಹಾಯಕ ಹೋಪ್ ಹಿಕ್ಸ್ ವಾರ ಅಧ್ಯಕ್ಷರೊಂದಿಗೆ ಹಲವಾರು ಬಾರಿ ಪ್ರಯಾಣಿಸಿದ ನಂತರ ಸೋಂಕಿಗೆ ಒಳಗಾಗಿದ್ದಾರೆ ಎಂಬುದಾಗಿ ಶ್ವೇತಭವನ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಅವರಿಗೂ ಸೋಂಕು ತಗುಲಿದ್ದು ಬೆಳಕಿಗೆ ಬಂದಿದೆ. ಗುರುವಾರ ಸಂಜೆ ವರದಿಗಾರರು ಶ್ವೇತಭವನಕ್ಕೆ ತೆರಳಿದ್ದಾಗ ಟ್ರಂಪ್ ಆರೋಗ್ಯವಾಗಿದ್ದುದನ್ನು ಕಂಡಿದ್ದರು.

ಟ್ರಂಪ್ ಅವರಿಗೆ ಈಗ ೭೪ ವರ್ಷ ವಯಸ್ಸಾಗಿದ್ದು, ದೇಶಾದ್ಯಂತ ,೦೦,೦೦೦ ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿರುವ ವೈರಸ್ನಿಂದ ಗಂಭೀರ ತೊಂದರೆಯಾಗಬಹುದಾದ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

ಇಂದು ರಾತ್ರಿ ನನಗೆ ಕೋವಿಡ್ -೧೯ ಪಾಸಿಟಿವ್ ವರದಿ ಬಂದಿದೆ. ನಾವು ತತ್ ಕ್ಷಣವೇ ಸಂಪರ್ಕ ತಡೆ ಮತ್ತು ಚೇತರಿಕೆ ಪ್ರಕ್ರಿಯೆ ಆರಂಭಿಸುತ್ತೇವೆ. ನಾವಿಬ್ಬರೂ ಒಟ್ಟಾಗಿ ಇದನ್ನು ಮಾಡುತ್ತೇವೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಹಿಕ್ಸ್ ಅವರಿಗೆ ಕೊರೋನಾವೈರಸ್ ತಗುಲಿದ ಹಿನ್ನೆಲೆಯಲ್ಲಿ ತಾವು ಮತ್ತು ಪ್ರಥಮ ಮಹಿಳೆ ಮೆಲಾನಿಯಾಸಂಪರ್ಕ ತಡೆ ಆರಂಭಿಸುತ್ತಿರುವುದಾಗಿ ಟ್ರಂಪ್ ಗುರುವಾರ ತಡವಾಗಿ ಘೋಷಿಸಿದರು. ಆದರೆ ವಾಸ್ತವ ಸ್ಥಿತಿ ಏನು ಎಂಬುದು ಸ್ಪಷ್ಟವಾಗಿಲ್ಲ. ಪರೀಕ್ಷೆಯ ಮೂಲಕ ಸೋಂಕನ್ನು ಪತ್ತೆಹಚ್ಚಲು ಕೆಲವು ದಿನಗಳು ಬೇಕಾಗುತ್ತವೆ.

ಚುನಾವಣಾ ದಿನಕ್ಕಿಂತ ನಾಲ್ಕು ತಿಂಗಳಿಗಿಂತಲೂ ಕಡಿಮೆ ಅವಧಿ ಉಳಿದಿದ್ದು, ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಾಂಕ್ರಾಮಿಕ ರೋಗವು ಬೆನ್ನ ಹಿಂದೆಯೇ ಇದೆ ಎಂದು ಅಮೆರಿಕಾದ ಸಾರ್ವಜನಿಕರಿಗೆ ಮನವರಿಕೆ ಮಾಡಲು ತೀವ್ರ ಯತ್ನ ನಡೆಸುತ್ತಿರುವ ಅಧ್ಯಕ್ಷರಿಗೆ ರೋಗನಿರ್ಣಯವು ಒಂದು ದೊಡ್ಡ ಹೊಡೆತವಾಗಿದೆ.

ಇತ್ತೀಚಿನ ಇತಿಹಾಸದಲ್ಲಿ ಅಮೆರಿಕದ ಯಾವುದೇ ಅಧ್ಯಕ್ಷರು ಎದುರಿಸುತ್ತಿರುವ ಅತ್ಯಂತ ಗಂಭೀರವಾದ ಸಾರ್ವಜನಿಕ ಆರೋಗ್ಯ ಬೆದರಿಕೆ ಇದಾಗಿದೆ.

ಕೋವಿಡ್-೧ರ ಲಕ್ಷಣಗಳು ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳನ್ನು ಒಳಗೊಂಡಿರಬಹುದು. ಹೆಚ್ಚಿನ ಜನರಲ್ಲಿ ಸೌಮ್ಯ ರೋಗಲಕ್ಷಣಗಳು ಮಾತ್ರ ಕಾಣುತ್ತವೆ. ಆದರೆ ಕೆಲವು ಜನರು, ಸಾಮಾನ್ಯವಾಗಿ ನ್ಯುಮೋನಿಯಾ ಸೇರಿದಂತೆ ಇತರ ವೈದ್ಯಕೀಯ ತೊಡಕುಗಳನ್ನು ಹೊಂದಿರುವವರಲ್ಲಿ ಕೊರೋನಾ ರೋಗಲಕ್ಷಣ ತೀವ್ರವಾಗಿ ಕಂಡು ಬರುತ್ತದೆ. ಅವರಿಗೆ ಇದು ಮಾರಕವಾಗಲೂ ಬಹುದು.

ಸುದ್ದಿ ಸಂಸ್ಥೆಯೊಂದಕ್ಕೆ ಗುರುವಾರ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು ಕೋವಿಡ್-೧೯ ಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿರುವುದಾಗಿ ಹೇಳಿದರು. "ನಾವು ಸಂಪರ್ಕತಡೆಯನ್ನು ಹೊಂದಿದ್ದೇವೆ. ಆದರೆ ನಮ್ಮಲ್ಲಿ ಅದು ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಟ್ರಂಪ್ ಹೇಳಿದ್ದರು. ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸಹ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ.

ಅಧ್ಯಕ್ಷರ ಹೆಲಿಕಾಪ್ಟರ್ ಮೆರೈನ್ ಒನ್ ಮತ್ತು ಏರ್ ಫೋರ್ಸ್ ಒನ್ ನಲ್ಲಿ ಮಿನ್ನೆಸೋಟದಲ್ಲಿ ಬುಧವಾರ ನಡೆದ ರ್ಯಾಲಿಯಲ್ಲಿ ಮತ್ತು ಇತರ ಈವಾರ ಹಲವಾರು ಸಂದರ್ಭಗಳಲ್ಲಿ ಅಧ್ಯಕ್ಷರ ಜೊತೆಗೆ ಹಿಕ್ಸ್ ಜೊತೆಗೆ ಪ್ರಯಾಣಿಸಿದ್ದರು ಮತ್ತು ಕ್ಲೀವ್ಲ್ಯಾಂಡಿನಲ್ಲಿ ಏರ್ ಫೋರ್ಸ್ ಒನ್ ನಿಂದ ಮಂಗಳವಾರ ರಾತ್ರಿಯ ಮೊದಲ ಅಧ್ಯಕ್ಷೀಯ ಚರ್ಚೆಯಲ್ಲೂ ಹಿಕ್ಸ್ ಪಾಲ್ಗೊಂಡಿದ್ದರು.

ವೈಯಕ್ತಿಕವಾಗಿ ಅಸ್ವಸ್ಥತೆಗೆ ಗುರಿಯಾಗಬಹುದೆಂದು ಶ್ವೇತಭವನದ ಸಿಬ್ಬಂದಿ ಮತ್ತು ಮಿತ್ರರು ವ್ಯಕ್ತ ಪಡಿಸಿದ್ದ ಕಳವಳವನ್ನು ಟ್ರಂಪ್ ನಿರ್ಲಕ್ಷಿಸಿದ್ದರು. "ನಾನು ಯಾವುದೇ ದುರ್ಬಲತೆಯನ್ನು ಅನುಭವಿಸಲಿಲ್ಲ ಎಂದು ಅವರು ಮೇ ತಿಂಗಳಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

ಬದಲಿಗೆ ತಮ್ಮ ಪ್ರಾಂತಗಳನ್ನು ಪುನಃ ತೆರೆಯುವಂತೆ ಅವರು ಗವರ್ನರ್ಗಳನ್ನು ಪ್ರೋತ್ಸಾಹಿಸಿದ್ದರು ಮತ್ತು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳ ಮೇಲೆ ರಾಷ್ಟ್ರದ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸಿದ್ದರು.

ಕೆಲವು ಅಧ್ಯಯನಗಳು ಬೊಜ್ಜು ಹೊಂದಿರುವ ಕೋವಿಡ್-೧೯ ರೋಗಿಗಳು ವೈರಸ್ನಿಂದ ಗಂಭೀರವಾಗಿ ಕಾಯಿಲೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸೂಚಿಸುತ್ತವೆ. ಆದರೂ ಅದಕ್ಕೆ ಅಂತಹವರು ಹೃದಯ ಕಾಯಿಲೆ ಅಥವಾ ಮಧುಮೇಹದಂತಹ ಸಮಸ್ಯೆಗಳನ್ನು ಹೊಂದಿರುವುದು ಕಾರಣವೇ ಎಂಬುದು ಸ್ಪಷ್ಟವಾಗಿಲ್ಲ.  ಟ್ರಂಪ್ ಅವರಿಗೆ ಬೊಜ್ಜು ಇರುವುದೂ ಕಳವಳಕ್ಕೆ ಕಾರಣವಾಗಿದೆ.

Sunday, February 23, 2020

ಮೆಲನಿಯಾ ಟ್ರಂಪ್ ಶಾಲಾ ಭೇಟಿ: ಕೇಜ್ರಿವಾಲ್, ಸಿಸೋಡಿಯಾ ಔಟ್

ಮೆಲನಿಯಾ ಟ್ರಂಪ್ ಶಾಲಾ ಭೇಟಿ: ಕೇಜ್ರಿವಾಲ್, ಸಿಸೋಡಿಯಾ ಔಟ್
ನವದೆಹಲಿ: ಅಮೆರಿಕದ ಮೊದಲ ಮಹಿಳೆ ಮೆಲನಿಯಾ ಟ್ರಂಪ್ ಅವರು ಮಂಗಳವಾರ ದೆಹಲಿಯ ಸರ್ಕಾರಿ ಶಾಲೆಗೆ ನೀಡಲಿರುವ ಭೇಟಿಯ ವೇಳೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಹಾಜರಿರುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ (ಆಪ್) ಹಿರಿಯ ಕಾರ್ಯಕರ್ತರೊಬ್ಬರು 2020 ಫೆಬ್ರುವರಿ 22ರ ಶನಿವಾರ  ಇಲ್ಲಿ ತಿಳಿಸಿದರು.

ಅಮೆರಿಕದ ಮೊದಲ ಮಹಿಳೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2020 ಫೆಬ್ರುವರಿ ೨೪ರ ಸೋಮವಾರದಿಂದ ಎರಡು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ಮಂಗಳವಾರ ಬೆಳಗ್ಗೆ ಅಮೆರಿಕದ ಮೊದಲ ಮಹಿಳೆ ಮೆಲನಿಯಾ ಟ್ರಂಪ್ ಅವರು ದೆಹಲಿಯ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡುವ ಕಾರ್ಯಕ್ರಮಬಿ ಬೆಸ್ಟ್ಉಪಕ್ರಮ ನಿಗದಿಯಾಗಿದೆ.

ಅವರ
ಶಾಲಾ ಭೇಟಿಯ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಶಿಕ್ಷಣ ಸಚಿವ ಮನಿಶ್ ಸಿಸೋಡಿಯಾ ಅವರು ಶಾಲೆಯಲ್ಲಿ ಮೆಲನಿಯಾ ಟ್ರಂಪ್ ಅವರನ್ನು ಸ್ವಾಗತಿಸಿ ವಿದ್ಯಾರ್ಥಿಗಳು ಪಡೆಯುತ್ತಿರುವಸಂತಸ ಪಠ್ಯಸೂಚಿ (ಹ್ಯಾಪಿನೆಸ್ ಕರಿಕುಲಂ) ಶಿಕ್ಷಣದ ಬಗ್ಗೆ ವಿವರಿಸಬೇಕಾಗಿತ್ತು.

ಏನಿದ್ದರೂ, ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರ ಹೆಸರುಗಳನ್ನು ಶಾಲಾ ಸಮಾರಂಭದಲ್ಲಿ ಹಾಜರಿರುವ ವ್ಯಕ್ತಿಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದಾಗಿ ಮುಖ್ಯಮಂತ್ರಿಯವರ ಕಚೇರಿಗೆ ಶನಿವಾರ ಬೆಳಗ್ಗೆ ತಿಳಿಸಲಾಗಿದೆ ಎಂದು ದೆಹಲಿ ಸರ್ಕಾರದ ಅಧಿಕಾರಿಗಳು ಹೇಳಿದರು.

೨೦೧೮ರಲ್ಲಿ ದೆಹಲಿ ಸರ್ಕಾರವೇಸಂತಸ ಪಠ್ಯಸೂಚಿ (ಹ್ಯಾಪಿ ಕರಿಕುಲಂ) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು ಸಂತಸ ಪಠ್ಯಸೂಚಿ ಮೇಲೆಯೇ ಶಾಲಾ ಕಾರ್ಯಕ್ರಮ ಬೆಳಕು ಚೆಲ್ಲಲಿದೆ. ಆದರೆ ಅದನ್ನು ಅನುಷ್ಠಾನಗೊಳಿಸಿದ ನಗರ ಸರ್ಕಾರದ ಶಿಕ್ಷಣ ಸಚಿವರು ಕೂಡಾ ಅತಿಥಿ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವುದು ವಿಲಕ್ಷಣಎಂದು ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದರು.

ಪಠ್ಯಸೂಚಿಯ ಬಗ್ಗೆ ಅಮೆರಿಕದ ಮೊದಲ ಮಹಿಳೆಗೆ ಯಾರು ವಿವರಣೆ ನೀಡಲಿದ್ದಾರೆ ಎಂಬ ಬಗ್ಗೆ ನಮಗೆ ಇನ್ನೂ ತಿಳಿಸಲಾಗಿಲ್ಲ. ಮುಖ್ಯಮಂತ್ರಿ  ಮತ್ತು ಉಪ ಮುಖ್ಯಮಂತ್ರಿಯವರ ಹೆಸರುಗಳನ್ನು ಕೇಂದ್ರ ಸರ್ಕಾರದ ಒತ್ತಡವನ್ನು ಅನುಸರಿಸಿ ಕೈಬಿಡಲಾಗಿದೆ ಎಂಬುದು ನಮಗೆ ತಿಳಿದುಬಂದಿದೆಎಂದು ಅವರು ನುಡಿದರು.

ಇದಕ್ಕೆ ಮುನ್ನ, ಸಿಸೋಡಿಯಾ ಅವರು ಮಾಧ್ಯಮಗಳಿಗೆ ರಾಷ್ಟ್ರೀಯ ರಾಜಧಾನಿಯ ಕೆಲವು ಶಾಲೆಗಳಲ್ಲಿ ಮೆಲನಿಯಾ ಟ್ರಂಪ್ ಅವರುಸಂತಸ ತರಗತಿಗೆ ಹಾಜರಾಗಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಸರ್ಕಾರದ ಪ್ರಕಾರ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಹೌದು, ಕೆಲವು ಶಾಲೆಗಳಲ್ಲಿ, ಮೆಲನಿಯಾ ಟ್ರಂಪ್ ಅವರ ಭೇಟಿಗೆ ಸಂಬಂಧಿಸಿದಂತೆ ಕೆಲವು ಸಿದ್ಧತೆಗಳು ನಡೆಯುತ್ತಿವೆ. ಆದರೆ ಭದ್ರತಾ ಕಾರಣಗಳಿಗಾಗಿ ನಾನು ನಿಮಗೆ ಹೆಚ್ಚಿನ ವಿಷಯ ಹೇಳಲಾಗದುಎಂದು ಸಿಸೋಡಿಯಾ ಅವರು ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದರು.

ಸಂತಸ ತರಗತಿಗಳನ್ನು ಆಮ್ ಆದ್ಮಿ ಪಕ್ಷವು ೨೦೧೮ರಲ್ಲಿ ರಾಜಧಾನಿಯಲ್ಲಿ ಆರಂಭಿಸಿತ್ತು. ಪಠ್ಯಸೂಚಿಯ ಭಾಗವಾಗಿ ವಿದ್ಯಾರ್ಥಿಗಳಿಗೆ ಧ್ಯಾನ, ಬೀದಿನಾಟಕ, ಮೂಲಭೂತ ವಿಧೇಯತೆ ಮತ್ತು ಮಕ್ಕಳಲ್ಲಿ ಒತ್ತಡ ಹಾಗೂ ಉದ್ವೇಗ ಕಡಿಮೆಗೊಳಿಸುವ ವಿಧಾನಗಳನ್ನು ಕಲಿಸಲಾಗುತ್ತದೆ.

ಕ್ಷುಲ್ಲಕ ರಾಜಕಾರಣ ಸಲ್ಲದು: ಆದಾಗ್ಯೂ, ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರನ್ನು ಮೆಲನಿಯಾ ಟ್ರಂಪ್ ಅವರ ಶಾಲಾ ಭೇಟಿ ಕಾರ್ಯಕ್ರಮದಿಂದ ಕೈಬಿಡಲಾದ ವರದಿಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಬಿಜೆಪಿ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಸಲ್ಲದುಎಂದು ಹೇಳಿದೆ.

ಮಹತ್ವದ ಸಂದರ್ಭಗಳಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದು. ಭಾರತ ಸರ್ಕಾರವು ಎಲ್ಲ ಭಾರತೀಯರನ್ನೂ ಪ್ರತಿನಿಧಿಸುತ್ತದೆ. ರಾಜಕೀಯ ಅಂಗಸಂಸ್ಥೆಗಳನ್ನು ಇಂತಹ ಸಂದರ್ಭಗಳಲ್ಲಿ ಲೆಕ್ಕಹಾಕಬಾರದು.  ಇದರ ಬಗ್ಗೆ ಕ್ಷುಲ್ಲಕ ರಾಜಕಾರಣ ಮಾಡಬಾರದುಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ  ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

Advertisement