Showing posts with label ಐಎನ್‌ ಎಸ್‌ ವಿಕ್ರಾಂತ್‌. Show all posts
Showing posts with label ಐಎನ್‌ ಎಸ್‌ ವಿಕ್ರಾಂತ್‌. Show all posts

Monday, October 20, 2025

ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ

 ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ

ದೀಪಾವಳಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ, ಈದಿನ (೨೦.೧೦.೨೦೨೫) ಭಾರತದ ನೌಕಾಕಾಪಡೆಯ ಯೋಧರ ಜೊತೆಗೆ ಆಚರಿಸಿದರು.

ಗೋವಾದ ಕರಾವಳಿಯಲ್ಲಿ ಮತ್ತು ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ಯೋಧರ ಜೊತೆಗೆ ಸಂವಾದ ನಡೆಸಿದ ಪ್ರಧಾನಿ, ಅವರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪಾಲ್ಗೊಂಡರು.

ಐಎನ್‌ ಎಸ್‌ ವಿಕ್ರಾಂತ್‌ ನಲ್ಲಿ ಯೋಧರು ಮತ್ತು ಸಿಬ್ಬಂದಿ ಪ್ರದರ್ಶಿಸಿದ “ಕಸಮ್‌ ಸಿಂದೂರ್‌ ಕಿʼ ಹಾಡನ್ನು ಮೆಚ್ಚಿಕೊಂಡರು.

ಐಎನ್‌ಎಸ್‌ ಮುಖಾಂತರ ಪ್ರದರ್ಶನಗೊಂಡ ವಾಯುಬಲದ ವಿಡಿಯೋವನ್ನೂ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡರು.

ಪ್ರಧಾನಿ ಹಂಚಿಕೊಂಡ ವಿಡಿಯೋಗಳು ಇಲ್ಲಿವೆ.

Friday, September 2, 2022

ಐಎನ್‌ಎಸ್‌ ವಿಕ್ರಾಂತ್‌ ಗೆ ಪ್ರಧಾನಿ ಮೋದಿ ಚಾಲನೆ, ನೂತನ ನೌಕಾಧ್ವಜ ಅನಾವರಣ

 ಐಎನ್‌ಎಸ್‌ ವಿಕ್ರಾಂತ್‌ ಗೆ ಪ್ರಧಾನಿ ಚಾಲನೆ, ನೂತನ ನೌಕಾಧ್ವಜ ಅನಾವರಣ


ಕೋಚಿ (ಕೇರಳ):
ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಭಾರತದ ಮೊತ್ತ ಮೊದಲ ಐಎನ್‌ ಎಸ್‌  ವಿಕ್ರಾಂತ್ ವಿಮಾನವಾಹಕ ನೌಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು 2022 ಸೆಪ್ಟೆಂಬರ್‌ 2ರ ಶುಕ್ರವಾರ ಚಾಲನೆ ನೀಡಿದರು.

ಇದರೊಂದಿಗೆ ಇಂತಹ ದೊಡ್ಡ ಯುದ್ಧನೌಕೆಗಳನ್ನು ನಿರ್ಮಿಸಲು ದೇಶೀಯ ಸಾಮರ್ಥ್ಯವನ್ನು ಹೊಂದಿರುವ ಆಯ್ದ ದೇಶಗಳ ಸಾಲಿಗೆ ಭಾರತ ಸೇರ್ಪಡೆಗೊಂಡಿತು. ಕೋಚಿಯ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ 20,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಾಹಕ ನೌಕೆಗೆ ಪ್ರಧಾನಿ ಚಾಲನೆ ನೀಡಿದರು.

(ವಿಡಿಯೋ ನೋಡಿ)


ಇಂದು, ಭಾರತವು ದೇಶೀಯ ತಂತ್ರಜ್ಞಾನದೊಂದಿಗೆ ಇಂತಹ ದೊಡ್ಡ ವಿಮಾನವಾಹಕ ನೌಕೆಗಳನ್ನು ನಿರ್ಮಿಸುವ ದೇಶಗಳ ಸಾಲಿಗೆ ಸೇರಿದೆ. ಐಎನ್‌ಎಸ್ ವಿಕ್ರಾಂತ್ ಭಾರತಕ್ಕೆ ಹೊಸ ವಿಶ್ವಾಸವನ್ನು ತುಂಬಿದೆ. ಈ ಐತಿಹಾಸಿಕ ಸಂದರ್ಭದಲ್ಲಿ, ನಾನು ಭಾರತೀಯ ನೌಕಾಪಡೆ, ಲ್ಲ ಇಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಕೊಚ್ಚಿನ್ ಶಿಪ್‌ಯಾರ್ಡ್‌ನ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಐಎನ್ ಎಸ್‌ ವಿಕ್ರಾಂತ್‌ ? ಹೇಗಿದೆ?

ದೇಶಸೇವೆಗೆ ಸಜ್ಜಾಗಿರುವ ಐಎನ್‌ ಎಸ್‌ ವಿಕ್ರಾಂತ್‌ ಹೀಗಿದೆ ನೋಡಿ ವಿಡಿಯೋ:


ನೌಕಾಪಡೆಯ ಹೊಸ ನಿಶಾನೆ ಅನಾವರಣ

ಮಹಾನ್ ಮರಾಠಾ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜರಿಂದ ಸ್ಫೂರ್ತಿ ಪಡೆದ ಹೊಸ 'ನಿಶಾನ್' ಅಥವಾ ನೌಕಾಧ್ವಜವನ್ನು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು. ವಿಮಾನವಾಹಕ ನೌಕೆ ವಿಕ್ರಾಂತ್ ಕಾರ್ಯಾರಂಭದ ಜೊತೆಗೆ ನೌಕಾಧ್ವಜವನ್ನು ಅನಾವರಣಗೊಳಿಸಲಾಯಿತು. ಕಳೆದ ಹಲವಾರು ವರ್ಷಗಳಿಂದ, ಬಿಳಿ ಹಿನ್ನೆಲೆಯಲ್ಲಿ ಕೆಂಪು ಶಿಲುಬೆ, ಮೂಲೆಯಲ್ಲಿ ರಾಷ್ಟ್ರಧ್ವಜ ಮತ್ತು ಮಧ್ಯದಲ್ಲಿ ಅಶೋ ಸ್ತಂಭವು ಭಾರತೀಯ ನೌಕಾಪಡೆಯ ಧ್ವಜವಾಗಿತ್ತು.

ಹೊಸ ವಿನ್ಯಾಸವನ್ನು ಗುರುವಾರದವರೆಗೆ ಮುಚ್ಚಿಡಲಾಗಿತ್ತಾದರೂ, "ಇದು ನಮ್ಮ ವಸಾಹತುಶಾಹಿ ಗತಕಾಲದ ಸಮಾಧಿಯಾಗುತ್ತದೆ" ಎಂದು ಪ್ರಧಾನ ಮಂತ್ರಿಗಳ ಕಚೇರಿ ಹೇಳಿತು.ಈ ಕಾರ್ಯಕ್ರಮದ ಸಮಯದಲ್ಲಿ, ವಸಾಹತುಶಾಹಿ ಭೂತಕಾಲವನ್ನು ತೊಡೆದುಹಾಕುವ ಮತ್ತು ಶ್ರೀಮಂತ ಭಾರತೀಯ ಕಡಲ ಪರಂಪರೆಗೆ ಸೂಕ್ತವಾದ ಹೊಸ ನೌಕಾ ಧ್ವಜವನ್ನು (ನಿಶಾನ್) ಪ್ರಧಾನ ಮಂತ್ರಿ ಅನಾವರಣಗೊಳಿಸಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಇದಕ್ಕೆ ಮುನ್ನ ಹೇಳಿಕೆಯಲ್ಲಿ ತಿಳಿಸಿತ್ತು.

Advertisement