Showing posts with label ಗಣೇಶ. Show all posts
Showing posts with label ಗಣೇಶ. Show all posts

Friday, September 18, 2026

ಗಣೇಶೋತ್ಸವ ೨೦೨೬

 ಗಣೇಶೋತ್ಸವ ೨೦೨೬

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ೨೦೨೬ ಸೆಪ್ಟೆಂಬರ್‌ ೧೮ರ ಶುಕ್ರವಾರ ಬೆಳಗ್ಗೆ ಬಡಾವಣೆಯ ೨೬ನೇ ಹಾಗೂ ದೇವಸ್ಥಾನದ ಮೂರನೇ ಗಣೇಶೋತ್ಸವ ವಿಧಿವತ್ತಾಗಿ ಆರಂಭವಾಯಿತು.

ಮೂರು ದಿನಗಳ ನಡೆಯುವ ಈ ಗಣೇಶೋತ್ಸವದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳು, ಮಹಿಳೆಯರು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ಮಹಿಳೆಯರು ಮತ್ತು ಪುರುಷರಿಗೆ ಬಡಾವಣೆಯ ನಿವಾಸಿಗಳು ಹಾಗೂ ಮಹಿಳಾ ತಂಡದ ಸದಸ್ಯೆಯರಾದ ಹೇಮಾ ಮತ್ತು ದೇವಕಿ ಅವರು ಆಟೋಟಗಳನ್ನು ನಡೆಸಿಕೊಡಲಿದ್ದು, ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ನಾಯಕ ಉಮೇಶ ಕೆ ಬಹುಮಾನ ಪ್ರಾಯೋಜನೆ ಮಾಡಿದ್ದಾರೆ.

ಸಂಜೆ ೬ ಗಂಟೆಗೆ ವಿದುಷಿ ಶ್ರೀಮತಿ ಸುಮಾ ಶ್ರೀಧರ್‌ ನೇತೃತ್ವದಲ್ಲಿ ನೂಪುರ ಕಲಾನಿಕೇತನ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಪ್ರದೀಪ ಶಾಸ್ತ್ರಿ ಮತ್ತು ಕುಟುಂಬದವರು ಪ್ರಾಯೋಜಿಸಿದ್ದಾರೆ.

ಸೆಪ್ಟೆಂಬರ್‌ ೧೯ರ ಶನಿವಾರ ಬೆಳಗ್ಗೆ ೧೦ ಗಂಟೆಗೆ ದೇವಸ್ಥಾನದ ಅರ್ಚಕ ನಾಗೇಂದ್ರ ಭಟ್‌ ನೇತೃತ್ವದಲ್ಲಿ ಗಣಹವನ ಕಾರ್ಯಕ್ರಮ, ಮಧ್ಯಾಹ್ನ ೨ ಗಂಟೆಗೆ ಶಬನಮ್‌ ನೇತೃತ್ವದಲ್ಲಿ ಬಡಾವಣೆಯ ಮಹಿಳಾ ತಂಡದಿಂದ ಮಕ್ಕಳು, ಮಹಿಳೆಯರು, ಪುರುಷರಿಗೆ ಆಟೋಟ ಸ್ಪರ್ಧೆ ನಡೆಯಲಿದ್ದು ಯುವ ಮುಖಂಡ ಶಿವಕುಮಾರ್‌ ಬಹುಮಾನ ಪ್ರಾಯೋಜನೆ ಮಾಡಿದ್ದಾರೆ. ಸಾಯಂಕಾಲ ೬.೩೦ ಗಂಟೆಗೆ ದೇವಸ್ಥಾನದಲ್ಲೇ ಯಕ್ಷಗಾನ ಕಲಿಯುತ್ತಿರುವ ಮಕ್ಕಳು, ಮಹಿಳೆಯರಿಂದ ʼಲವ-ಕುಶ ಕಾಳಗʼ ಯಕ್ಷಗಾನ. ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ ಯಕ್ಷ ಕಲಾ ಕೌಸ್ತುಭ ತಂಡ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದೆ.

ಸೆಪ್ಟೆಂಬರ್‌ ೨೦ರ ಭಾನುವಾರ ಬೆಳಗ್ಗೆ ೯.೩೦ಗಂಟೆಗೆ ಗಣಪತಿ ಉಪನಿಷತ್‌ ಸಹಿತ ಪೂಜೆ, ಸಂಜೆ ೪ ಗಂಟೆಗೆ ಎಂಸಿಎಚ್‌ ಬಡಾವಣೆಯ ಭಕ್ತಿ ಸಂಗಮ ಭಜನಾ ಮಂಡಳಿಯಿಂದ ಭಜನೆ, ಸಂಜೆ ೬ಕ್ಕೆ ಬಾಣಸವಾಡಿಯ ಶ್ರೀ ಧರ್ಮ ಶಾಸ್ತಾ ವಾದ್ಯ ಕಲಾಕೇಂದ್ರ ತಂಡದಿಂದ ಕೇರಳ ಚೆಂಡೆವಾದನ ನಡೆಯಲಿದೆ. ಬಳಿಕ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಗಣಪನ ಶೋಭಾಯಾತ್ರೆಯೊಂದಿಗೆ ಗಣಪತಿ ವಿಸರ್ಜನೆ ನಡೆಯಲಿದೆ. ಶ್ರೀ ಸುಗುಣನ್‌ ಮತ್ತು ಬಡಾವಣೆಯ ಮಲಯಾಳಿ ಮಿತ್ರರು ಕೇರಳ ಚೆಂಡೆಯನ್ನು ಪ್ರಾಯೋಜಿಸಿದ್ದಾರೆ.

ಗಣೇಶೋತ್ಸವಕ್ಕೆ ಭಕ್ತರು ದೇಣಿಗೆಯೊಂದಿಗೆ ಸಹಕರಿಸಿದ್ದಲ್ಲದೆ, ಶ್ರೀ ಮುನಿರಾಜು ಮತ್ತು ಕುಟುಂಬ, ಶ್ರೀ ರಾಜೇಶ್‌ ಮತ್ತು ಕುಟುಂಬ, ಹೇಮಾವತಿ, ಶಾರದಮ್ಮ, ದೇವಕಿ, ಶಬನಮ್ ಮತ್ತು ಲತಾ  ನೇತೃತ್ವದ ಮಹಿಳಾ ತಂಡ, ಶ್ರೀ ಗುಣವರ್ಧನ್‌ ಶೆಟ್ಟಿ, ಲಂಡನ್ನಿನಲ್ಲಿ ಇರುವ ಅನೂಪ್‌ ಶೆಟ್ಟಿ, ಶೋಭನಾ ಶೆಟ್ಟಿ, ವಿಹಾ ಶೆಟ್ಟಿ ಮತ್ತು ಕುಟುಂಬ, ಶ್ರೀಮತಿ ಪ್ರಮೀಳಾನಾಥನ್‌, ಶ್ರೀಮತಿ ಪ್ರಭಾವತಿ, ಪ್ರಶಾಂತ್‌, ಚರಣ್‌ - ಶ್ವೇತಾ ನೇತೃತ್ವದಲ್ಲಿ ಬಡಾವಣೆಯ ೮ನೇ ಅಡ್ಡರಸ್ತೆಯ ಭಕ್ತರು, ಶ್ರೀ ನಾಗೇಶ್‌ ಮತ್ತು ಸರಸ್ವತಿ ಕುಟುಂಬ, ಮತ್ತಿತರರು ವಿವಿಧ ದಿನಗಳಂದು ಅನ್ನದಾನ, ಪ್ರಸಾದ, ಗಣಹವನ, ಟ್ರ್ಯಾಕ್ಟರ್‌ ಇತ್ಯಾದಿಗಳ ವ್ಯವಸ್ಥೆ ಮಾಡಿದ್ದರು. ಶ್ರೀ ಸಿರಾಜ್‌ ಸಾಗರ್‌  ಅವರು ವೇದಿಕೆ ಮತ್ತು ಪೆಂಡಾಲ್‌ ವ್ಯವಸ್ಥೆಯನ್ನು ಪ್ರಾಯೋಜಿಸಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಚಿತ್ರಗಳ ಸಮೀಪ ನೋಟಕ್ಕಾಗಿ ಅವುಗಳನ್ನು ಕ್ಲಿಕ್‌ ಮಾಡಿರಿ.





Tuesday, May 5, 2026

ಅಂಗಾರಕ ಸಂಕಷ್ಟಿ ಪೂಜಾ

 ಅಂಗಾರಕ ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಮೇ ೫ರ ಮಂಗಳವಾರ ವೈಶಾಖ ಮಾಸದ ಶ್ರೀ ಅಂಗಾರಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.


ಭಕ್ತರು ಶ್ರೀ ಮಹಾಗಣಪತಿಗೆ ಮೋದಕ ಹಾರ, ಕರ್ಜಿಕಾಯಿ ಹಾರ ಅರ್ಪಣೆಯೊಂದಿಗೆ ಸಂಗೀತ ಸೇವೆಯನ್ನೂ ಸಲ್ಲಿಸಿದರು.


೨೦೨೬ ಮೇ ೧ರ ಶುಕ್ರವಾರ ಹುಣ್ಣಿಮೆಯ ದಿನ ದೇವಸ್ಥಾನದಲ್ಲಿ ವೈಶಾಖ ಮಾಸದ ಶ್ರೀ ಸತ್ಯ ನಾರಾಯಣ ಪೂಜೆಯನ್ನೂ ನೆರವೇರಿಸಲಾಗಿತ್ತು.

ಭಕ್ತರು ಭಾರೀ ಸಂಖ್ಯೆಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.


ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿವೆ. ಮಹಾಮಂಗಳಾರತಿಯವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

Sunday, April 5, 2026

ಚೈತ್ರ ಮಾಸದ ಸಂಕಷ್ಟಿ ಪೂಜಾ

 ಚೈತ್ರ ಮಾಸದ ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಏಪ್ರಲ್‌ ೫ರ ಭಾನುವಾರ ಚೈತ್ರ ಮಾಸದ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಭಕ್ತರು ಭಜನಾ ಕೈಂಕರ್ಯದಲ್ಲೂ ಪಾಲ್ಗೊಂಡು ಶ್ರೀ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.

ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿ ವಿಡಿಯೋ ನೋಡಬಹುದು.


Wednesday, January 7, 2026

ಅಂಗಾರಕ ಸಂಕಷ್ಟಿ ಪೂಜಾ

 ಅಂಗಾರಕ ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಜನವರಿ ೬ರ ಮಂಗಳವಾರ ಅಂಗಾರಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಭಕ್ತರು ವಿಘ್ನೇಶ್ವರನಿಗೆ ಕಡುಬಿನ ಹಾರದ ಸೇವೆಯನ್ನೂ ಸಲ್ಲಿಸಿದರು. ಭಕ್ತರು ಅಪಾರ ಸಂಖ್ಯೆಯಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದ ಕೆಲವು ಚಿತ್ರಗಳು, ವಿಡಿಯೋ ಇಲ್ಲಿದೆ. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿರಿ: https://youtu.be/yzDZdbkfa58



Sunday, June 23, 2024

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?

 ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?


ಪ್ರಥ್ವೀ
ಪುತ್ರ ಮಂಗಳನು ಗಣೇಶನನ್ನು ಒಲಿಸಿಕೊಳ್ಳಲು 21 ಸಂಕಷ್ಟಿ ವ್ರತಗಳನ್ನು ಮಾಡಿದ.

ಆತನಿಗೆ ಒಲಿದ ಗಣೇಶ ಮಂಗಳವಾರದಂದು ಸಂಕಷ್ಟಿ ವ್ರತ ಆಚರಿಸಿದವರಿಗೆ 21 ಸಂಕಷ್ಟಿ ವ್ರತ ಆಚರಿಸಿದ ಫಲ ಲಭಿಸುವುದು ಎಂದು ಆಶೀರ್ವದಿಸಿದ.

ಆದ್ದರಿಂದ ಮಂಗಳವಾರ ಸಂಕಷ್ಟಿ ವ್ರತ ಆಚರಿಸಿದವರಿಗೆ 21 ಸಂಕಷ್ಟಿ ಆಚರಣೆಯ ಫಲ ಲಭಿಸುತ್ತದೆ ಎಂಬುದು ನಂಬಿಕೆ.

ಹೋಮ ಮಾಡುವುದರಿಂದ ದೇವರ ಶಕ್ತಿವರ್ಧನೆಯ ಜೊತೆಗೆ ಭಕ್ತರ
ಶಕ್ತಿಯೂ ಹೆಚ್ಚುತ್ತದೆ.

ಇದರೊಂದಿಗೆ ಪರಿಸರವೂ ಶುದ್ಧವಾಗುತ್ತದೆ. ನಕಾರಾತ್ಮಕ ಶಕ್ತಿಗಳು ಕುಗ್ಗಿ
ಸಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ.

ಇದರೊಂದಿಗೆ ಪರಿಸರವೂ ಶುದ್ಧವಾಗುತ್ತದೆ. ನಕಾರಾತ್ಮಕ ಶಕ್ತಿಗಳು ಕುಗ್ಗಿ
ಸಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ.

ಇದಕ್ಕಾಗಿಯೇ ಸಂಕಷ್ಟಿ ವ್ರತವನ್ನು ಬೆಳಗ್ಗೆ
ಗಣ ಹವನದೊಂದಿಗೆ ಆರಂಭಿಸಿ,
ಸಂಜೆ ಪೂಜೆಯೊಂದಿಗೆ ಮುಗಿಸುವುದು ಶ್ರೇಯಸ್ಕರ.

ಬಾರಿಯ ಅಂಗಾರಕ ಸಂಕಷ್ಟಿ: 25 ಜೂನ್‌ 2024 ಮಂಗಳವಾರ

ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ  ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ

ದೇವಾಲಯದಲ್ಲಿ ಅಂಗಾರಕ ಸಂಕಷ್ಟಿ

 
ಗಣ ಹವನ ಬೆಳಗ್ಗೆ 8.30ಕ್ಕೆ.

ಪೂಜೆ ಸಂಜೆ 6ಕ್ಕೆ.

ತಪ್ಪದೆ ಪಾಲ್ಗೊಳ್ಳಿ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ:


Background Music Courtesy: Ganesha Pancharatnam

Shalmalee Srinivas

ಇದನ್ನೂ ಓದಿರಿ:

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

Advertisement