Showing posts with label Ram Vilas Paswan. Show all posts
Showing posts with label Ram Vilas Paswan. Show all posts

Thursday, October 15, 2020

ಎಲ್‌ಜೆಪಿ ವಿರೋಧ ನಿತೀಶ ಕುಮಾರ್ ವರ್ತನೆಗೆ: ಚಿರಾಗ್

 ಎಲ್‌ಜೆಪಿ ವಿರೋಧ ನಿತೀಶ ಕುಮಾರ್ ವರ್ತನೆಗೆ: ಚಿರಾಗ್

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀ ಕುಮಾರ್ ಅವರ ಜನತಾದಳದಿಂದ (ಯು) ಬೇರ್ಪಡೆಗೊಳ್ಳಲು ವಿಧಾನಸಭಾ ಚುನಾವಣೆಗಾಗಿ ಸೀಟು ಹಂಚಿಕೆ ಕಾರಣವಲ್ಲ ಎಂಬುದಾಗಿ 2020 ಅಕ್ಟೋಬರ್ 15ರ ಗುರುವಾರ ಇಲ್ಲಿ ಸ್ಪಷ್ಟ ಪಡಿಸಿ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ನಿತೀಶ ಕುಮಾರ್ ವರ್ತನೆಯೇ ನಿರ್ಧಾರಕ್ಕೆ ಕಾರಣ ಎಂದು ಹೇಳಿದರು..

ನಾವು ನಿತೀಶ ಕುಮಾರ್ ಅವರ ರಾಜಕೀಯವನ್ನು ವಿರೋಧಿಸುತ್ತೇವೆ ಎಂದು ಚಿರಾಗ್ ವಿವರಿಸಿದರು.

ಕಳೆದ ವರ್ಷ ಎನ್‌ಡಿಎಗೆ ಮರಳಿದ ಬಳಿಕ ಅನಿವಾರ್ಯವಾಗಿ ತಮ್ಮ ಪಕ್ಷವು ಜೆಡಿಯು ಜೊತೆಗೆ ಮೈತ್ರಿ ಮಾಡಿಕೊಂಡು ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಹೋರಾಡಿತು, ಆದರೆ ಚುನಾವಣೆಯಲ್ಲಿ ನಿತೀಶ ಕುಮಾರ್ ಎಲ್‌ಜೆಪಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದರು. ಇದು ಪಕ್ಷ ಸಮ್ಮಿಶ್ರ ಧರ್ಮದ ಉಲ್ಲಂಘನೆ ಎಂದು ಎಲ್‌ಜೆಪಿ ನಾಯಕ ನುಡಿದರು.

ಎಲ್‌ಜೆಪಿ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಇತ್ತೀಚೆಗೆ ಕಳೆದುಕೊಂಡಿರುವ ೩೭ ವರ್ಷದ ಚಿರಾಗ್, ಬಿಹಾರದ ಮುಖ್ಯಮಂತ್ರಿ ಕಳೆದ ವರ್ಷ ಜೆಡಿಯು ಮುಖ್ಯಸ್ಥರನ್ನು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ಕರೆಸಿಕೊಂಡಾಗ ಅಹಂಕಾರಿ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದರು.

ರಾಮ್ ವಿಲಾಸ ಪಾಸ್ವಾನ್ ಅವರು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ತಮ್ಮೊಂದಿಗೆ ಬರುವಂತೆ ವಿನಂತಿಸಿದ್ದರು. ಆದರೆ ಮುಹೂರ್ತ ಮುಗಿದ ಬಳಿಕ ನಿತೀಶ ಕುಮಾರ್ ಆಗಮಿಸಿದರು. ಇಷ್ಟಲ್ಲದೆ ಎಲ್‌ಜೆಪಿಯು ಕೇವಲ ಇಬ್ಬರು ಸದಸ್ಯರನ್ನು ಹೊಂದಿರುವುದರಿಂದ ಜೆಡಿಯು ಬೆಂಬಲವಿಲ್ಲದೆ ನನ್ನ ತಂದೆ ರಾಜ್ಯಸಭೆಗೆ ಆಯ್ಕೆಯಾಗಲು ಸಾಧ್ಯವಲ್ಲ ಎಂದು ಅಪಹಾಸ್ಯ ಮಾಡಿದ್ದರು ಎಂದು ಚಿರಾಗ್ ಪಾಸ್ವಾನ್ ಹೇಳಿದರು.

ಇಂತಹ ಅಹಂಕಾರಿ ವರ್ತನೆಯನ್ನು ಯಾರಾದರೂ ತನ್ನ ತಂದೆಯ ಎದುರು ತೋರಿಸಿದಾಗ ಯಾರೇ ಪುತ್ರ ಅದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ನನ್ನ ತಂದೆಗೆ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ಸ್ವತಃ ರಾಜ್ಯಸಭಾ ಸ್ಥಾನದ ಭರವಸೆ ನೀಡಿದ್ದರು ಎಂಬುದನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿತ್ತು ಎಂದು ಪಾಸ್ವಾನ್ ನುಡಿದರು.

ಎನ್‌ಡಿಎಯ ಕಿರಿಯ ಪಕ್ಷಕ್ಕೆ ನ್ಯಾಯಯುತವಾದ ಸೀಟುಗಳನ್ನು ನಿರಾಕರಿಸಲು ಪ್ರಯತ್ನಿಸಿದ ನಂತರ ಜೆಡಿಯು ವಿರುದ್ಧ ದಂಗೆಯ ಬ್ಯಾನರ್ ಎತ್ತಲಾಯಿತು ಎಂಬುದನ್ನು ಎಲ್‌ಜೆಪಿ ಮುಖ್ಯಸ್ಥ ತಳ್ಳಿಹಾಕಿದರು. "ನಾನು ಕೇಂದ್ರ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರನ್ನು ಇತ್ತೀಚಿನ ದಿನಗಳಲ್ಲಿ ಬಹಳ ಬಾರಿ ಭೇಟಿ ಮಾಡಿದ್ದೇನೆ. ಸೀಟು ಹಂಚಿಕೆ ಸಮಸ್ಯೆ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ ಎಂದು ಅವರು ಹೇಳಿದರು.

"ಎಲ್‌ಜೆಪಿ ಎಂದಿಗೂ ನಿತೀಶ ಕುಮಾರ್ ಶೈಲಿಯ ರಾಜಕೀಯದ ಅಭಿಮಾನಿಯಾಗಿರಲಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಮಹಾದಾಲಿತ ಉಪ-ಗುಂಪನ್ನು ರಚಿಸುವ ಮೂಲಕ ದಲಿತರಿಗೆ ಹಾನಿ ಮಾಡಿದ್ದಾರೆ ಎಂದು ಪಾಸ್ವಾನ್ ಹೇಳಿದರು.

ಬಿಹಾರ ಮುಖ್ಯಮಂತ್ರಿಯ ಏಳು ನಿಶ್ಚಯಗಳನ್ನು (ಸಾತ್ ನಿಶ್ಚಯ್) ಕೂಡಾ ಎಲ್‌ಜೆಡಿ ಅಧ್ಯಕ್ಷರು ಟೀಕಿಸಿದರು. ದೇಶದ ಉಳಿದ ಭಾಗಗಳು ತ್ವರಿತವಾಗಿ ತುಂಬಾ ಪ್ರಗತಿ ಸಾಧಿಸುತ್ತಿವೆ. ಇಲ್ಲಿ ಅವರು ನಲ್ಲಿ ನೀರು ಮತ್ತು ಕಾಂಕ್ರೀಟ್ ರಸ್ತೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

"ಭ್ರಷ್ಟಾಚಾರ, ಅಪರಾಧ ಮತ್ತು ಕೋಮುವಾದಕ್ಕೆ ಶೂನ್ಯ ಸಹನೆ ಘೋಷಿಸಲು ಮುಖ್ಯಮಂತ್ರಿ ಎಂದಿಗೂ ಸುಸ್ತಾಗುವುದಿಲ್ಲ. ರಾಜ್ಯದ ಪ್ರತಿಯೊಂದು ಸರ್ಕಾರಿ ಯೋಜನೆಗಳ ಅನುಷ್ಠಾದಲ್ಲೂ ಭ್ರಷ್ಟಾಚಾರ ನಡೆಯುತ್ತಿರುವುದು ಮುಖ್ಯಮಂತ್ರಿಗಳ ಮುಖಕ್ಕೇ ರಾಚುತ್ತದೆ. ಅತ್ಯಾಚಾರದ ನಂತರ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಟ್ಟುಹಾಕುವಂತಹ ಭಯಾನಕ ಘಟನೆ ಬಕ್ಸಾರ್ ಜಿಲ್ಲೆಯಲ್ಲಿ ನಡೆಯಿತು. ಆಮೇಲೆ, ಕೋಮುವಾದ? ನಿತ್ಯಾನಂದ ರಾಯ್ ಅವರ ಹೇಳಿಕೆಗಳ ಬಗ್ಗೆ ನಿತೀಶ ಕುಮಾರ್ ಏನು ಹೇಳುತ್ತಾರೆ? ಉತ್ತರ ನೀಡಲಿ. ನಮ್ಮಂತಲ್ಲ, ಅವರು ಈಗಲೂ ಬಿಹಾರದ ಎನ್‌ಡಿಎಯ ಭಾಗವಾಗಿದ್ದಾರೆ ಎಂದು ಚಿರಾಗ್ ಹೇಳಿದರು.

ಕೇಂದ್ರ ಗೃಹ ರಾಜ್ಯ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ನಿತ್ಯಾನಂದ ರಾಯ್ ಅವರು ತಮ್ಮ ಇತ್ತೀಚಿನ ರ್‍ಯಾಲಿಯೊಂದರಲ್ಲಿ ಚುನಾವಣೆಯಲ್ಲಿ ಆರ್‌ಜೆಡಿ ನೇತೃತ್ವದ ವಿರೋಧದ ಗೆಲುವು ಬಿಹಾರವನ್ನು ಕಾಶ್ಮೀರ ಮೂಲದ ಭಯೋತ್ಪಾದಕರಿಗೆ ಸುರಕ್ಷಿತ ತಾಣವನ್ನಾಗಿ ಮಾಡಬಹುದು ಎಂಬುದಾಗಿ ಹೇಳುವ ಮೂಲಕ ಬಿರುಗಾಳಿ ಎಬ್ಬಿಸಿದ್ದಾರೆ. ಅಲ್ಪಸಂಖ್ಯಾತರ ವಿರುದ್ಧ ಮತದಾರರನ್ನು ಧ್ರುವೀಕರಿಸುವ ಪ್ರಯತ್ನ ಇದು ಎಂದು ವಿರೋಧ ಪಕ್ಷಗಳು ಇದರ ವಿರುದ್ಧ ಕಿಡಿ ಕಾರಿವೆ.

Thursday, October 8, 2020

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ

 ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ

ನವದೆಹಲಿ: ಇತ್ತೀಚೆಗೆ ದೆಹಲಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ (1946-2020) ಅವರು 2020 ಅಕ್ಟೋಬರ್ 08ರ ಗುರುವಾರ ರಾತ್ರಿ ನಿಧನರಾದರು. ಅವರಿಗೆ ೭೪ ವರ್ಷ ವಯಸ್ಸಾಗಿತ್ತು.

ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಸಕ್ರಿಯ ರಾಜಕೀಯದಲ್ಲಿದ್ದ ಮತ್ತು ದೇಶದ ಅತ್ಯಂತ ಪ್ರಸಿದ್ಧ ದಲಿತ ನಾಯಕರಲ್ಲಿ ಒಬ್ಬರಾದ ಪಾಸ್ವಾನ್ (೭೪) ಕಳೆದ ಕೆಲವು ವಾರಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಮುಖ್ಯಸ್ಥ, ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಟ್ವೀಟ್ ಮೂಲಕ ತಮ್ಮ ತಂದೆಯ ನಿಧನದ ಸುದ್ದಿಯನ್ನು ತಿಳಿಸಿದರು.

"ಕಳೆದ ಹಲವು ದಿನಗಳಿಂದ ಅಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಸಂಜೆ ಕೆಲವು ಹಠಾತ್ ಬೆಳವಣಿಗೆಗಳಿಂದಾಗಿ, ಅವರ ಹೃದಯದ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು.  ಅಗತ್ಯವಿದ್ದಲ್ಲಿ, ಕೆಲವು ವಾರಗಳ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಬೇಕಾಗಬಹುದು. ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಜೊತೆಗೆ ಬೆಂಬಲವಾಗಿ ನಿಂತಿದ್ದ ಎಲ್ಲರಿಗೂ ಧನ್ಯವಾದಗಳು ಎಂದು ಚಿರಾಗ್ ಪಾಸ್ವಾನ್ ಕಳೆದವಾರ ಟ್ವೀಟ್ ಮಾಡಿದ್ದರು.

ಚಿರಾಗ್ ಚಿಕಿತ್ಸೆ ಪಡೆಯಬೇಕೆಂದು ಒತ್ತಾಯಿಸಿದ ನಂತರ ಅಂತಿಮವಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ರಾಮ್ ವಿಲಾಸ್ ಪಾಸ್ವಾನ್ ಕೂಡಾ ಇದಕ್ಕೆ ಮುನ್ನ ಹೇಳಿದ್ದರು.

ಆದಾಗ್ಯೂ, ಅನಾರೋಗ್ಯ ಏನು ಎಂದು ಅವರು ಬಹಿರಂಗಪಡಿಸಿರಲಿಲ್ಲ. ಕೆಲವು ಮಾಧ್ಯಮ ವರದಿಗಳು ಅವರು ಹೃದಯದ ಸಮಸ್ಯೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದವು. ಅವರು ಮೊದಲು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

" ಸಮಯದಲ್ಲಿ ನನ್ನ ಮಗ ಚಿರಾಗ್ ನನ್ನೊಂದಿಗಿದ್ದಾನೆ ಮತ್ತು ಸಾಧ್ಯವಿರುವ ಎಲ್ಲ ಸೇವೆಯನ್ನು ಮಾಡುತ್ತಿದ್ದಾನೆ ಎಂದು ನನಗೆ ಸಂತೋಷವಾಗಿದೆ. ನನ್ನನ್ನು ನೋಡಿಕೊಳ್ಳುವುದರ ಜೊತೆಗೆ, ಅವರು ಪಕ್ಷದ ಬಗ್ಗೆ ತಮ್ಮ ಜವಾಬ್ದಾರಿಗಳನ್ನು ಸಹ ಪೂರೈಸುತ್ತೇವೆ ಎಂದು ಟ್ವೀಟ್ ಮಾಡಿದ್ದರು.

ವೈಯಕ್ತಿಕ ಆರೋಗ್ಯದ ಸುದ್ದಿಗಳ ಜೊತೆಗೆ, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಎಲ್ಜೆಪಿಯ ಮೈತ್ರಿ ವಿಚಾರಗಳಲ್ಲಿ ಪಾಸ್ವಾನ್ ಪುತ್ರನನ್ನು ಬೆಂಬಲಿಸಿದ್ದರು.

"ನಾನು ಅವರ ಪ್ರತಿಯೊಂದು ನಿರ್ಧಾರದೊಂದಿಗೆ ದೃಢವಾಗಿ ನಿಲ್ಲುತ್ತೇನೆ. ಅವರ ಯೌವ್ವನದ ಚಿಂತನೆಯಿಂದ, ಚಿರಾಗ್ ಪಕ್ಷ ಮತ್ತು ಬಿಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಪಾಸ್ವಾನ್ ಹೇಳಿದ್ದರು.

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟದ ಮುಖವಾಗಿ ನಿತೀಶ್ ಕುಮಾರ್ ನಾಯಕತ್ವವನ್ನು ವಿರೋಧಿಸಿ ಎನ್ ಡಿಎಯಿಂದ ಎಲ್ಜೆಪಿ ಹೊರನಡೆದಿದೆ ಎಂದು ಚಿರಾಗ್ ತಿಳಿಸಿದ್ದಾರೆ.

Advertisement