Showing posts with label ಇಂದಿನ ಇತಿಹಾಸ History Today (December 11-20).. Show all posts
Showing posts with label ಇಂದಿನ ಇತಿಹಾಸ History Today (December 11-20).. Show all posts

Monday, January 18, 2010

ಇಂದಿನ ಇತಿಹಾಸ History Today ಡಿಸೆಂಬರ್ 20

ಇಂದಿನ ಇತಿಹಾಸ

ಡಿಸೆಂಬರ್ 20

ನಂದಿತಾ ದಾಸ್ ನಿರ್ದೇಶನದ 'ಫಿರಾಕ್' ಮತ್ತು ದೀಪಾ ಮೆಹ್ತಾ ಅವರ 'ಹೆವನ್ ಆನ್ ಅರ್ಥ್' ಚಿತ್ರಗಳು ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದುಕೊಂಡವು. ಏಷ್ಯಾ-ಆಫ್ರಿಕಾ ವಿಭಾಗದಲ್ಲಿಯ ಸ್ಪರ್ಧೆಗೆ ಈ ಪ್ರಶಸ್ತಿ ಲಭಿಸಿದ್ದು, ಫಿರಾಕ್ ಚಿತ್ರದ ಸಂಕಲನಕಾರ ಶ್ರೀಕರ್ ಪ್ರಸಾದ್ ಅವರಿಗೆ ಉತ್ತಮ ಸಂಕಲನಕಾರ ಪ್ರಶಸ್ತಿ ದೊರಕಿತು.

2008: ಗಣಿಗಾರಿಕೆ ಅಕ್ರಮಗಳ ಕುರಿತು ಲೋಕಾಯುಕ್ತರು ನೀಡಿರುವ ವರದಿ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಜನಪತ್ರಿನಿಧಿಗಳ ವಿರುದ್ಧ ಯಾವ ರೀತಿ ಕ್ರಮಕೈಗೊಳ್ಳಬಹುದು ಎಂಬುದನ್ನು ಸೂಚಿಸಲು ಮೂರು ಮಂದಿಯನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗಾವಿಯಲ್ಲಿ ಪ್ರಕಟಿಸಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಒಂದು ತಿಂಗಳ ಒಳಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ಅವರು ನುಡಿದರು.

2008: ತಾವು ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡ ಆಕಸ್ಮಿಕದಲ್ಲಿ ಜಾರ್ಖಂಡಿನ ಮಾಜಿ ಮುಖ್ಯಮಂತ್ರಿ ಅರ್ಜುನ ಮುಂಡಾ ಹಾಗೂ ಬಿಜೆಪಿಯ ಇನ್ನಿಬ್ಬರು ಹಿರಿಯ ಮುಖಂಡರು ಜೀವಾಪಾಯದಿಂದ ಪಾರಾದರು. ಡಿ.29ರ ವಿಧಾನಸಭಾ ಉಪಚುನಾವಣೆ ಸಂಬಂಧ ತಮರ್ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ವಾಪಸ್ಸಾಗುತ್ತಿದ್ದಾಗ ದುರಂತ ಸಂಭವಿಸಿತು.

2008: ನಂದಿತಾ ದಾಸ್ ನಿರ್ದೇಶನದ 'ಫಿರಾಕ್' ಮತ್ತು ದೀಪಾ ಮೆಹ್ತಾ ಅವರ 'ಹೆವನ್ ಆನ್ ಅರ್ಥ್' ಚಿತ್ರಗಳು ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದುಕೊಂಡವು. ಏಷ್ಯಾ-ಆಫ್ರಿಕಾ ವಿಭಾಗದಲ್ಲಿಯ ಸ್ಪರ್ಧೆಗೆ ಈ ಪ್ರಶಸ್ತಿ ಲಭಿಸಿದ್ದು, ಫಿರಾಕ್ ಚಿತ್ರದ ಸಂಕಲನಕಾರ ಶ್ರೀಕರ್ ಪ್ರಸಾದ್ ಅವರಿಗೆ ಉತ್ತಮ ಸಂಕಲನಕಾರ ಪ್ರಶಸ್ತಿ ದೊರಕಿತು.

2008: ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಎಎಸ್‌ಆರ್) ಉಪ ನ್ಯಾಸಕಿ ಡಾ. ರಮಾ ಗೋವಿಂದರಾಜನ್ ಸೇರಿದಂತೆ ಬೆಂಗ ಳೂರಿನ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ 7 ವಿಜ್ಞಾನಿಗಳಿಗೆ 2007ರ ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿ ಲಭಿಸಿತು. ಡಾ. ರಮಾ ಗೋವಿಂದರಾಜನ್ (ಎಂಜಿನಿಯರಿಂಗ್ ವಿಜ್ಞಾನ), ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಡಾ. ನಾರಾಯಣಸ್ವಾಮಿ ಶ್ರೀನಿವಾಸನ್, ರಾಷ್ಟ್ರೀಯ ಜೀವಶಾಸ್ತ್ರ ವಿಜ್ಞಾನಗಳ ಸಂಸ್ಥೆಯ (ಎನ್‌ಸಿಬಿಎಸ್) ಡಾ. ಉಪಿಂದರ್ ಸಿಂಗ್ ಭಲ್ಲಾ ಜೀವಶಾಸ್ತ್ರ ವಿಜ್ಞಾನ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾದರು. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ (ಐಎಸ್‌ಐ) ಉಪನ್ಯಾಸಕ ಡಾ. ಬಿ.ವಿ. ರಾಜಾರಾಮ ಭಟ್ (ಗಣಿತ ವಿಜ್ಞಾನ), ಐಐಎಸ್‌ಸಿಯ ಉಪನ್ಯಾಸಕ ಡಾ. ಪುಂಡಿ ನರಸಿಂಹನ್ ರಂಗರಾಜನ್ (ವೈದ್ಯಕೀಯ ವಿಜ್ಞಾನ), ಜೆಎನ್‌ಸಿಎಎಸ್‌ಆರ್ ಸಂಸ್ಥೆ ಉಪನ್ಯಾಸಕ ಡಾ. ಶ್ರೀಕಾಂತ್ ಶಾಸ್ತ್ರಿ (ಭೌತಿಕ ವಿಜ್ಞಾನ) ಮತ್ತು ಐಐಎಸ್‌ಸಿ ಸಂಸ್ಥೆಯ ಡಾ. ಪಿ.ಎನ್. ವಿನಯ್ ಚಂದ್ರನ್ (ಭೂಮಿ, ಪರಿಸರ, ಸಮುದ್ರ ಮತ್ತು ಗ್ರಹ ವಿಜ್ಞಾನ) ಪ್ರಶಸ್ತಿಗೆ ಪಾತ್ರರಾದರು.

2008: ಹಿಜಡಾಗಳ ಕುತಂತ್ರಕ್ಕೆ ಬಲಿಯಾಗಿ ಹೆಣ್ಣಾಗಿದ್ದ ಬೆಂಗಳೂರಿನ ಟಿ.ದಾಸರಹಳ್ಳಿಯ ಚಂದ್ರಶೇಖರ್ (17) ಎಂಬಾತನಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ಅಪೊಲೋ ಆಸ್ಪತ್ರೆ ವೈದ್ಯರು ಆತನನ್ನು ಪುನಃ ಬಾಲಕನನ್ನಾಗಿ ಪರಿವರ್ತಿಸಿದರು. ಎರಡು ಹಂತದಲ್ಲಿ ಒಟ್ಟು 17 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಆತನನ್ನು ಮೊದಲಿನಂತೆ ಮಾಡುವಲ್ಲಿ ಯಶಸ್ವಿಯಾದರು. ಚಂದ್ರಶೇಖರ್ ಮೂತ್ರ ವಿಸರ್ಜನೆ ಮಾಡಬಲ್ಲ. ಕೆಲ ದಿನಗಳ ನಂತರ ಲೈಂಗಿಕ ಕ್ರಿಯೆ ಸಹ ನಡೆಸಬಲ್ಲ ಎಂದು ವೈದ್ಯರು ತಿಳಿಸಿದರು. 'ಬಾಲಕನಿಗೆ ಪುನರ್‌ನಿರ್ಮಾಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ, ತೋಳಿನ ಮಾಂಸಖಂಡಗಳನ್ನು ಬಳಸಿ ಆತನ ಜನನೇಂದ್ರಿಯವನ್ನು ನಿರ್ಮಿಸಲಾಗಿದೆ. ಸರ್ಜಿಕಲ್ ಮೈಕ್ರೋಸ್ಕೋಪ್ ಬಳಸಿ ನರಗಳನ್ನು ಜೋಡಿಸಲಾಗಿದೆ. ಆತನ ತೊಡೆಯ ಮೇಲಿದ್ದ ನಾಡಿಯನ್ನು ಸೀಳಿ ಕಾಲಿನ ನರಗಳಿಗೆ ಜೋಡಿಸಲಾಗಿದೆ. ಜನನೇಂದ್ರಿಯಕ್ಕೆ ರಕ್ತ ಪೂರೈಕೆ ಮಾಡಲು ಈ ರೀತಿ ಮಾಡಲಾಗಿದೆ ಎಂದು ವೈದ್ಯರು ಹೇಳಿದರು. ಒಟ್ಟು 8 ಮಂದಿ ವೈದ್ಯರು ಮತ್ತು ಐದು ಮಂದಿ ಆಸ್ಪತ್ರೆ ಸಿಬ್ಬಂದಿಯ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿತು.. ಶಸ್ತ್ರಚಿಕಿತ್ಸೆಗೆ ಸುಮಾರು ಎಂಟು ಲಕ್ಷ ರೂಪಾಯಿ ವೆಚ್ಚವಾಗಿದ್ದು ಇದನ್ನು ಆಸ್ಪತ್ರೆಯೇ ಭರಿಸಿತು.

2007: ಹಿಂದೂಗಳ ಭಾವನೆಗಳಿಗೆ ಗೌರವ ನೀಡುವ ಸಲುವಾಗಿ ಬಕ್ರೀದ್ ಹಬ್ಬದಲ್ಲಿ ಗೋವುಗಳ ಹತ್ಯೆ ಮಾಡಬಾರದು ಎಂದು ಧಾರ್ಮಿಕ ತರಬೇತಿ ಸಂಸ್ಥೆ `ದಾರುಲ್ ಉಲೂಮ್ ದೇವಬಂದ್' ಮುಸ್ಲಿಮ್ ಬಾಂಧವರನ್ನು ಕೋರಿತು. ಈ ಸಂಬಂಧ ಕಿರುಹೊತ್ತಿಗೆಯೊಂದನ್ನು ಹೊರತಂದ ಧಾರ್ಮಿಕ ತರಬೇತಿ ಸಂಸ್ಥೆ, ಅದರಲ್ಲಿ ಧಾರ್ಮಿಕ ಬಲಿ `ಕುರ್ಬಾನಿ' ಕುರಿತು ಮಾಹಿತಿಯನ್ನು ಪ್ರಕಟಿಸಿತು.

2007: ಯಾವುದೇ ಕಾರಣಕ್ಕೂ ಕೋಲ್ಕತ್ತಕ್ಕೆ ತೆರಳದೇ ದೆಹಲಿಯ `ಅಜ್ಞಾತ ಸ್ಥಳ'ದಲ್ಲೇ ಮುಂದುವರೆಯಬೇಕು ಎಂದು ಕೇಂದ್ರ ಸರ್ಕಾರ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಅವರಿಗೆ ತಾಕೀತು ಮಾಡಿತು.
ಇದಕ್ಕೆ ಪ್ರತಿಯಾಗಿ ಕೋಲ್ಕತದಲ್ಲಿ ವಾಸಿಸಲು ಅವಕಾಶ ನೀಡದಿದ್ದರೆ ಭಾರತವನ್ನು ತೊರೆಯುವುದಾಗಿ ತಸ್ಲಿಮಾ ಸ್ಪಷ್ಟಪಡಿಸಿದರು. ಕೋಲ್ಕತದಲ್ಲಿ ಕಳೆದ ನವೆಂಬರಿನಲ್ಲಿ ನಡೆದ ಘರ್ಷಣೆಯ ಬಳಿಕ ತಸ್ಲಿಮಾ ದೆಹಲಿಯ ಗುಪ್ತ ಸ್ಥಳಕ್ಕೆ ತೆರಳಿದ್ದರು.

2007: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ವೊಕಾರ್ಡ್ ಆಸ್ಪತ್ರೆಯಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ವಿವೇಕ್ ಜವಳಿ ನೇತೃತ್ವದ ಎಂಟು ಮಂದಿ ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ನಡೆಸಿತು.

2007: ಜೈಪುರದ ಕೊರಾಪುಟ್ ನ 60 ವರ್ಷದ ಟೈಲರ್ ಎ.ವಿ.ಗಿರಿ ಬೃಹತ್ ಗಾತ್ರದ ಒಳಉಡುಪು (ಚಡ್ಡಿ) ಹೊಲಿಯುವ ಮೂಲಕ `ಗಿನ್ನೆಸ್ ಬುಕ್' ನಲ್ಲಿ ತಮ್ಮ ಹೆಸರು ದಾಖಲಿಸಲು ಮುಂದಾದರು. ಐದು ದಿನಗಳ ಕಾಲ ನಿರಂತರ ಶ್ರಮಿಸಿ 38 ಅಡಿ 10 ಅಂಗುಲ ಉದ್ದ ಮತ್ತು 50.3 ಅಡಿ ಸೊಂಟದ ಸುತ್ತಳತೆಯ ಈ ಉಡುಪು ಸಿದ್ಧಪಡಿಸಿದರು. ಈ ಭಾಗದಲ್ಲಿ ಖ್ಯಾತ ಟೈಲರ್ ಎಂದು ಹೆಸರು ಮಾಡಿದ ಗಿರಿ ಅವರು ಈ ಒಳಉಡುಪು ಹೊಲಿಯಲು 450 ಮೀಟರ್ ಬಟ್ಟೆ ಬಳಸಿದರು. ಸಿದ್ದ ಪಡಿಸಿದ ಈ ಒಳಉಡುಪನ್ನು ಮುಂದಿನ ಪರೀಕ್ಷೆಗಾಗಿ ಲಂಡನ್ನಿನ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಗೆ ಕೊರಿಯರ್ ಮೂಲಕ ಕಳುಹಿಸಲಾಗುವುದು ಎಂದು ಗಿರಿ ಹೇಳಿದರು. ಗಿರಿ ಅವರು ಈ ಹಿಂದೆ ಥರ್ಮಾಕೋಲಿನಲ್ಲಿ `ಸರಪಳಿ' ರಚಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಸರು ದಾಖಲಿಸಿ, ಸುದ್ದಿಯಾಗಿದ್ದರು.

2007: ಮೂವರು ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಂಡ ಧರ್ಮಪುರಿ ಬಸ್ಸಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆಗೆ ಒಳಗಾದ ಮೂವರು ಎಐಎಡಿಎಂಕೆಯ ಅಂದಿನ ಧರ್ಮಪುರಿ ಘಟಕದ ಕಾರ್ಯದರ್ಶಿನೆಡುಂಚೆಳಿಯನ್, ಎಂಜಿಆರ್ ಫೋರಂನ ಮಧಿ ಅಲಿಯಾಸ್ ರವಿಚಂದ್ರನ್ ಮತ್ತು ಮಾಜಿ ಪಂಚಾಯತ್ ಅಧ್ಯಕ್ಷ ಪಿ. ಮುನಿಯಪ್ಪನ್ ಅವರನ್ನು 2008ರ ಜನವರಿ 10ರಂದು ಗಲ್ಲಿಗೆ ಏರಿಸಬೇಕು ಎಂದು ಸೇಲಂನ ಪ್ರಥಮ ದರ್ಜೆ ನ್ಯಾಯಾಲಯ ಆದೇಶ ನೀಡಿತು. ಮರಣದಂಡನೆಯ ವಿರುದ್ಧ ಅಪರಾಧಿಗಳು ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿದ್ದರಿಂದ ನ್ಯಾಯಾಲಯ ಈ ಆದೇಶ ಹೊರಡಿಸಿತು. ಜನವರಿ 10ರಂದು ಬೆಳಿಗ್ಗೆ 6 ಗಂಟೆಗೆ ಮರಣದಂಡನೆ ಜಾರಿಗೊಳಿಸಬೇಕೆಂದು ನ್ಯಾಯಾಧೀಶ ಮಾಣಿಕಂ ಜೈಲು ಅಧಿಕಾರಿಗಳಿಗೆ ಸೂಚಿಸಿದರು. 2000ದ ಫೆಬ್ರುವರಿ ಎರಡರಂದು ಧರ್ಮಪುರಿಯಲ್ಲಿ ವಿದ್ಯಾರ್ಥಿಗಳಿದ್ದ ಬಸ್ಸಿಗೆ ಎಐಎಡಿಎಂಕೆ ಕಾರ್ಯಕರ್ತರು ಬೆಂಕಿ ಹಚ್ಚಿದ್ದರಿಂದ ಮೂವರು ವಿದ್ಯಾರ್ಥಿನಿಯರು ಸುಟ್ಟು ಕರಕಲಾಗಿದ್ದರು. ಇದನ್ನು ಅತ್ಯಂತ ಕ್ರೂರ ಹತ್ಯೆ ಎಂದು ಬಣ್ಣಿಸಿದ್ದ ಸೇಲಂ ಕೋರ್ಟಿನ ನ್ಯಾಯಾಧೀಶ ಮಾಣಿಕಂ ಅವರು ಕಳೆದ ಫೆಬ್ರುವರಿ 16ರಂದು ಮೂವರಿಗೆ ಮರಣ ದಂಡನೆ ವಿಧಿಸಿದ್ದರು. ಇತರ 25 ಮಂದಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಪರಾಧಿಗಳು ಇದರ ವಿರುದ್ಧ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ಯ ವಿಚಾರಣೆ ನಡೆಸಿದ ಹೈಕೋರ್ಟ್ `ಇಂಥ ಹೀನಾಯ ಕೃತ್ಯಕ್ಕೆ ಮರಣದಂಡನೆಗಿಂತ ಕಡಿಮೆ ಶಿಕ್ಷೆ ನೀಡುವುದು ಸಾಧ್ಯವಿಲ್ಲ' ಎಂದು ಕಟುವಾಗಿ ಹೇಳಿತ್ತು.

2007: ವಿವಾದಿತ ಭದ್ರತಾ ಕಾಯ್ದೆಯಡಿ ಮಲೇಷ್ಯಾದಲ್ಲಿ ಭಾರತೀಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಧ್ವನಿ ಎತ್ತಿದ್ದಕ್ಕಾಗಿ ಬಂಧನಕ್ಕೆ ಒಳಗಾದ ಹಿಂದೂ ಹಕ್ಕುಗಳ ಕ್ರಿಯಾ ವೇದಿಕೆಯ (ಹಿಂಡ್ರಾಫ್) ಐವರು ನಾಯಕರನ್ನು ತಕ್ಷಣ ಬಿಡುಗಡೆಗೊಳಿಸಲು ಆಗ್ರಹಿಸಿ ಭಾರತೀಯ ಮೂಲದವರು ಕ್ವಾಲಾಲಂಪುರದಲ್ಲಿ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದರು.

2007: ಮದ್ಯದ ದೊರೆ ವಿಜಯ್ ಮಲ್ಯ ನೇತೃತ್ವದ ಕಿಂಗ್ಫಿಶರ್ ಮತ್ತು ಅಗ್ಗದ ದರದ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್ ವಿಲೀನಗೊಳ್ಳಲು ನಿರ್ಧರಿಸಿದವು. ಬೆಂಗಳೂರಿನಲ್ಲಿ ನಡೆದ ಎರಡೂ ಕಂಪೆನಿಗಳ ಆಡಳಿತ ಮಂಡಳಿಗಳ ಜಂಟಿ ಸಭೆಯಲ್ಲಿ ವಿಲೀನ ಸಂಬಂಧ ಸರ್ವ ಸಮ್ಮತ ನಿರ್ಧಾರಕ್ಕೆ ಬರಲಾಯಿತು.

2006: ಐದು ವರ್ಷಗಳ ಹಿಂದೆ ಭಯೋತ್ಪಾದಕರು ಆತ್ಮಹತ್ಯಾ ದಾಳಿ ನಡೆಸಿ ಅಪಹೃತ ವಿಮಾನಗಳ ಮೂಲಕ ಧ್ವಂಸಗೊಳಿಸಿದ್ದ ನ್ಯೂಯಾಕರ್ಿನ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡ ಸ್ಥಳದಲ್ಲಿ ಸ್ವಾತಂತ್ರ್ಯ ಗೋಪುರ (ಫ್ರೀಡಂ ಟವರ್) ಸ್ಮಾರಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಇಲ್ಲಿ ಉಕ್ಕಿನ ಮೂರು ಗೋಪುರಗಳನ್ನು ನಿರ್ಮಿಸಿ ಅದರಲ್ಲಿ ಒಂದಕ್ಕೆ `ಫ್ರೀಡಂ ಟವರ್' ಎಂಬುದಾಗಿ ನಾಮಕರಣ ಮಾಡಲಾಗುವುದು. ಉಳಿದೆರಡು ಗೋಪುರಗಳಲ್ಲಿ ದುರಂತದ ಬಗ್ಗೆ ಸಾರ್ವಜನಿಕರು ನೀಡಿದ ಶೋಕ ಸಂದೇಶಗಳು ಇರುತ್ತವೆ. 2001ರ ಸೆಪ್ಟೆಂಬರ್ 11ರ ದಾಳಿಯಲ್ಲಿ 2,749 ಜನ ಮೃತರಾಗಿದ್ದರು.

2006: ಡಿಸ್ಕವರಿ ನೌಕೆಯ ಗಗನಯಾತ್ರಿಗಳು 13 ದಿನಗಳ ಬಾಹ್ಯಾಕಾಶ ವಾಸ್ತವ್ಯ ಪೂರೈಸಿ ಭೂಮಿಯೆಡೆಗೆ ಮರುಪಯಣ ಆರಂಭಿಸಿದರು. ಈ ಸಲ ಗಗನಯಾತ್ರೆ ಕೈಗೊಂಡ ಭಾರತ ಮೂಲದ ಸುನೀತಾ ವಿಲಿಯಮ್ಸ್ ಅವರು ಮುಂದಿನ ಆರು ತಿಂಗಳ ಕಾಲ ಬಾಹ್ಯಾಕಾಶದ ಅಟ್ಟಣಿಗೆಯಲ್ಲಿ ಉಳಿಯಲಿದ್ದು, ಕಳೆದ 6 ತಿಂಗಳಿಂದ ಬಾಹ್ಯಾಕಾಶದಲ್ಲಿದ್ದ ಜರ್ಮನಿಯ ಥಾಮಸ್ ರೈಟರ್ ಭೂಮಿಯತ್ತ ಹೊರಟರು. ಸುನೀತಾ ಅವರು ತಮ್ಮ ತಲೆಗೂದಲನ್ನು ಕೂದಲು ಕಳೆದುಕೊಂಡಿರುವ ರೋಪೀಡಿತ ವ್ಯಕ್ತಿಗೆ `ವಿಗ್' ಮಾಡಿಸಲು ಬಾಹ್ಯಾಕಾಶದಿಂದ ಭೂಮಿಗೆ ಕೊಡುಗೆಯಾಗಿ ಕಳುಹಿಸಿದರು. ಗಗನಯಾತ್ರಿ ಜಾನ್ ಹಿಗ್ಗಿಮ್ ಬಾತಮ್ ಮತ್ತು ಮತ್ತೊಬ್ಬ ಮಹಿಳಾ ಗಗನಯಾತ್ರಿ ಸುನೀತಾಗೆ ಬಾಹ್ಯಾಕಾಶದಲ್ಲಿ ಕೇಶಮುಂಡನ ಮಾಡಿದ್ದರು.

2006: ರೂಪದರ್ಶಿ ಜೆಸ್ಸಿಕಾಲಾಲ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಮನು ಶರ್ಮಾಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ನ್ಯಾಯಮೂರ್ತಿ ಆರ್. ಎಸ್. ಸೋಧಿ ಮತ್ತು ನ್ಯಾಯಮೂರ್ತಿ ಪಿ.ಕೆ. ಭಾಸಿನ್ ಶಿಕ್ಷೆಯ ಸ್ವರೂಪವನ್ನು ಕಿಕ್ಕಿರಿದ ನ್ಯಾಯಾಲಯದಲ್ಲಿ ಪ್ರಕಟಿಸಿದರು.

2006: ಕರ್ನಾಟಕದಲ್ಲಿ ಪೆಪ್ಸಿ ಕೋಲಾ ಸಹಿತ ರಾಸಾಯನಿಕ ಅಂಶಗಳಿರುವ ತಂಪು ಪಾನೀಯಗಳನ್ನು ಶಾಲಾ- ಕಾಲೇಜು, ವಸತಿಗೃಹ ಮತ್ತು ಆಸ್ಪತ್ರೆ ಆವರಣಗಳಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಡಿಸೆಂಬರ್ 18ರಿಂದಲೇ ಜಾರಿಗೆ ಬರುವಂತೆ ಆದೇಶವನ್ನು ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವ ಆರ್. ಅಶೋಕ್ ಬೆಂಗಳೂರಿನಲ್ಲಿ ಪ್ರಕಟಿಸಿದರು.

2006: ಹಿರಿಯ ಪತ್ರಕರ್ತ ಸುರೇಂದ್ರ ದಾನಿ ಅವರಿಗೆ ಹುಬ್ಬಳ್ಳಿಯಲ್ಲಿ ಗೃಹ ಸಚಿವ ಎಂ.ಪಿ. ಪ್ರಕಾಶ್ ಅವರು ಟಿಯೆಸ್ಸಾರ್ ಪ್ರಶಸ್ತಿ ಪ್ರದಾನ ಮಾಡಿದರು.

2006: ಗುಜರಾತಿನ ನದಿಯಾಡ್ ಪಟ್ಟಣದ ಅನಾಥ ಬಾಲಕಿ ಆಶಾಳನ್ನು ಅಮೆರಿಕ ಉಟಾ ರಾಜ್ಯದ ಗವರ್ನರ್ ಹಂಟ್ಸ್ ಮ್ಯಾನ್ ಮತ್ತು ಪತ್ನಿ ಮೇರಿ ಕಾಯ್ನೆ ಅವರು ಅಹಮದಾಬಾದಿನಲ್ಲಿ ದತ್ತು ಪಡೆದುಕೊಂಡರು.

2005: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರಿಗೆ ಪ್ರತಿಷ್ಠಿತ ಜಾಯದ್ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಅನ್ನಾನ್ ಅವರು ನೀಡಿರುವ ಕೊಡುಗೆ ಗಮನಿಸಿ ನೀಡಲಾಗಿರುವ ಈ `ಜಾಗತಿಕ ನಾಯಕತ್ವಕ್ಕಾಗಿ ಜಾಯದ್ ಅಂತಾರಾಷ್ಟ್ರೀಯ ಪ್ರಶಸ್ತಿ'ಯು ಒಂದು ಲಕ್ಷ ಡಾಲರ್ ನಗದು ಮೊತ್ತವನ್ನು ಒಳಗೊಂಡಿದೆ.

2005: ಆಪರೇಷನ್ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದ ಲೋಕಸಭೆಯ ಐವರು ಸದಸ್ಯರ ವಿರುದ್ಧ ತನಿಖೆಗೆ ಆದೇಶಿಸಿದ ಸಭಾಧ್ಯಕ್ಷ ಸೋಮನಾಥ ಚಟರ್ಜಿ ಇದಕ್ಕಾಗಿ ಪವನಕುಮಾರ್ ಬನ್ಸಲ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದರು. ತಪ್ಪಿತಸ್ಥರಲ್ಲ ಎಂದು ಸಾಬೀತಾಗದ ಹೊರತು ಸದನಕ್ಕೆ ಬರಬೇಡಿ ಎಂದೂ ಕಳಂಕಿತ ಸದಸ್ಯರಿಗೆ ಸಭಾಧ್ಯಕ್ಷರು ತಾಕೀತು ಮಾಡಿದರು. ರಾಜ್ಯಸಭೆಯಲ್ಲಿ ಇಬ್ಬರು ಕಳಂಕಿತ ಸದಸ್ಯರ ನಡವಳಿಕೆಯನ್ನು ಸಭಾಪತಿ ಭೈರೋನ್ಸಿಂಗ್ ಶೆಖಾವತ್ ನೀತಿ ಸಂಹಿತೆ ಸಮಿತಿಗೆ ಒಪ್ಪಿಸಿದರು.

2000: ಅಮಿತಾಭ್ ಬಚ್ಚನ್ ಅವರು ಲಂಡನ್ನಿನ ಮ್ಯಾಡಮ್ ಟುಸ್ಸಾಡ್ಸ್ ವ್ಯಾಕ್ಸ್ ಮ್ಯೂಸಿಯಮ್ಮಿನಲ್ಲಿ ತಮ್ಮದೇ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ರೀತಿ ಗೌರವಿತರಾದ ಭಾರತದ ಐದನೆಯ ವ್ಯಕ್ತಿ ಹಾಗೂ ಇಂತಹ ಗೌರವಕ್ಕೆ ಪಾತ್ರರಾದ ಭಾರತೀಯ ಚಿತ್ರರಂಗದ ಮೊದಲಿಗರು ಇವರು. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಪಿವಿ ನರಸಿಂಹರಾವ್ ಅವರ ಪ್ರತಿಮೆಗಳು ಅಲ್ಲಿ ಇವೆ.

1998: ಖ್ಯಾತ ಜ್ಯೋತಿಷಿ ಬಿ.ವಿ. ರಾಮನ್ ಬೆಂಗಳೂರಿನಲ್ಲಿ ನಿಧನರಾದರು.

1996: ಖಗೋಳ ವಿಜ್ಞಾನಿ, ಕಾದಂಬರಿಕಾರ ಕಾರ್ಲ್ ಸಾಗನ್ ಅವರು ತಮ್ಮ 62ನೇ ವಯಸ್ಸಿನಲ್ಲಿ ಸಿಯಾಟೆಲ್ನಲ್ಲಿ ಮೃತರಾದರು.

1989: ಅಮೆರಿಕಾವು `ಆಪರೇಷನ್ ಜಸ್ಟ್ ಕಾಸ್' ಆರಂಭಿಸಿತು. ಈ ಕಾರ್ಯಾಚರಣೆಯನ್ವಯ ಜನರಲ್ ಮ್ಯಾನ್ಯುಯೆಲ್ ನೊರಿಯೇಗಾ ಸರ್ಕಾರವನ್ನು ಉರುಳಿಸುವ ಸಲುವಾಗಿ ಪಡೆಗಳನ್ನು ಪನಾಮಾಕ್ಕೆ ಕಳುಹಿಸಿತು.

1987: ಫಿಲಿಪ್ಪೀನ್ಸ್ ದ್ವೀಪದ ಸಮೀಪ ಪ್ರಯಾಣಿಕರ ಹಡಗೊಂದು `ಫೆರಿ' ತೈಲ ತುಂಬಿಸಿಕೊಂಡು ಬರುತ್ತಿದ್ದ ಇನ್ನೊಂದು ಹಡಗಿಗೆ ಡಿಕ್ಕಿ ಹೊಡೆದು ಸಂಭಸಿದ ಭೀಕರ ದುರಂತದಲ್ಲಿ 3000ಕ್ಕೂ ಹೆಚ್ಚು ಮಂದಿ ಮೃತರಾದರು. 657ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಯಿತು. ಹೆಚ್ಚಿನ ಮಂದಿ ಕಣ್ಮರೆಯಾದರು. ಸಮುದ್ರದಲ್ಲಿ ಎದ್ದ ಹಠಾತ್ ಚಂಡಮಾರುತ ಹಾಗೂ ಸಾಮರ್ಥ್ಯಕ್ಕಿಂತ 614 ಮಂದಿ ಹೆಚ್ಚು ಪ್ರಯಾಣಿಕರು ಹಡಗಿನಲ್ಲಿ ಇದ್ದುದು ಈ ಭೀಕರ ಅವಘಡಕ್ಕೆ ಕಾರಣ ಎಂದು ಮನಿಲಾ ನೌಕಾಪಡೆ ವರದಿ ತಿಳಿಸಿತು.

1959: ಕಾನ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಜಸುಭಾಯಿ ಪಟೇಲ್ ಅವರು 69 ರನ್ನುಗಳಿಗೆ 9 ವಿಕೆಟುಗಳನ್ನು ಉರುಳಿಸಿ ದಾಖಲೆ ಸೃಷ್ಟಿಸಿದರು. 1999ರವರೆಗೂ ಇದು ಭಾರತೀಯನೊಬ್ಬರ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿ ಉಳಿಯಿತು. 1999ರಲ್ಲಿ ನವದೆಹಲಿಯಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಈ ದಾಖಲೆಯನ್ನು ಮುರಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಡಿಸೆಂಬರ್ 19

ಇಂದಿನ ಇತಿಹಾಸ

ಡಿಸೆಂಬರ್ 19


2014: ಅಹಮದಾಬಾದ್: ಗುಜರಾತಿನಲ್ಲಿ 'ಚುನಿ ಕಾಕಾ' ಎಂದೇ ಖ್ಯಾತರಾಗಿದ್ದ ಹಿರಿಯ ಗಾಂಧಿವಾದಿ ಹಾಗೂ ಭೂಮಿಯ ಹಕ್ಕುಗಳ ಹೋರಾಟಗಾರ ಚುನಿಭಾಯಿ ವೈದ್ಯ (97) ಅವರು ವಯೋಮಾನ ಸಂಬಂಧಿ ಅಸ್ವಸ್ಥತೆ ಕಾರಣ ಈದಿನ ಅಹಮದಾಬಾದಿನಲ್ಲಿ ನಿಧನರಾದರು. ತಮ್ಮ ಮನೆಯಲ್ಲೇ ನಸುಕಿನ ವೇಳೆಯಲ್ಲಿ ಅವರು ಅಸು ನೀಗಿದರು ಎಂದು ಅವರ ನಿಕಟವರ್ತಿಗಳು ತಿಳಿಸಿದರು. ಚುನಿಭಾಯಿ ಅವರು ಪುತ್ರಿ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದರು. ಗಾಂಧಿವಾದಿ ಹಾಗೂ ಸವೋದಯ ನೇತಾರ ಚುನಿಭಾಯಿ ಅವರು ಸ್ವಾತಂತ್ರ್ಯಹೋರಾಟ ಮತ್ತು ವಿನೋಬಾ ಭಾವೆ ಅವರ ಭೂದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಅಸ್ಸಾಮಿನಲ್ಲಿ 60ರ ದಶಕದಲ್ಲಿ ಹಿಂಸಾಚಾರ ಸ್ಪೋಟಗೊಂಡಾಗ ಅಲ್ಲಿ 12 ವರ್ಷಗಳ ಕಾಲ ಶಾಂತಿ ಕಾರ್ಯಕರ್ತನಾಗಿ ಅವರು ದುಡಿದಿದ್ದರು. 1975ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಸಮರ ಸಾರಿದ್ದ ಚುನಿಭಾಯಿ ಸೆರೆವಾಸವನ್ನೂ ಎದುರಿಸಿದ್ದರು. ಅವರನ್ನು 'ಸಾಣೆ ಗುರೂಜಿ ನಿರ್ಭಯ ಪತ್ರಕರಿತಾ' ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಿಶ್ವ ಗುಜರಾತಿ ಸಮಾಜವು 'ವಿಶ್ವ ಗುಜರಾತಿ ಪ್ರತಿಭಾ' ಪ್ರಶಸ್ತಿಯನ್ನು ನೀಡಿ ಅವರನ್ನು ಪುರಸ್ಕರಿಸಿತ್ತು. ರೈತರ ಹಕ್ಕುಗಳ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಚುನಿಭಾಯಿ 1986ರಲ್ಲಿ ಎರಡು ವರ್ಷ ಕಾಲ ಗುಜರಾತಿನಲ್ಲಿ ಬರಪರಿಹಾರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಉತ್ತರ ಗುಜರಾತಿನ ಪಾಟನ್ ಜಿಲ್ಲೆಯಲ್ಲಿ ಹಲವಾರು ತಡೆ ಅಣೆಕಟ್ಟುಗಳನ್ನು (ಚೆಕ್ ಡ್ಯಾಮ್) ನಿರ್ವಿುಸುವ ಮೂಲಕ 12,000 ಹೆಕ್ಟೇರ್ಗಳಿಗೂ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. 2010ರಲ್ಲಿ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿತ್ತು. ಇತರ ಹಲವಾರು ಪ್ರಶಸ್ತಿಗಳೂ ಅವರ ಮುಡಿಗೇರಿದ್ದವು. 'ಗಾಂಧಿ ಹತ್ಯೆ: ವಾಸ್ತವಾಂಶಗಳು ಮತ್ತು ತಪ್ಪು ಕಲ್ಪನೆಗಳು' ಎಂಬ ಅವರ ಗ್ರಂಥ 11ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡು ಪ್ರಕಟಿಸಿಲ್ಪಟ್ಟಿತ್ತು. 2002ರ ಗುಜರಾತ್ ದಂಗೆಗಳ ವಿರುದ್ಧವೂ ಚುನಿಭಾಯಿ ತಮ್ಮ ಸ್ವರ ಎತ್ತಿದ್ದರು. ಚುನಿಭಾಯಿ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು 'ಖ್ಯಾತ ಗಾಂಧಿವಾದಿ ಶ್ರೀ ಚುನಿಭಾಯಿ ವೈದ್ಯ ಅವರ ನಿಧನದಿಂದ ನಾನು ದುಃಖಿತನಾಗಿದ್ದೇನೆ. ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಅವರಿಗೆ ಚಿರಶಾಂತಿ ಲಭಿಸಲಿ' ಎಂದು ಟ್ವೀಟ್ ಮಾಡಿದರು. ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸೇರಿದಂತೆ ಹಲವಾರು ನಾಯಕರೂ ವೈದ್ಯ ಅವರ ನಿಧನಕ್ಕೆ ಶೋಕ ವ್ಯಕ್ತ ಪಡಿಸಿದರು.

2014: ನವದೆಹಲಿ/ಬೆಂಗಳೂರು: ನಾಡಿನ ಹಿರಿಯ ವಿಮರ್ಶಕ, ಕವಿ, ಸಾಹಿತಿ ಜಿ.ಹೆಚ್.ನಾಯಕ ಅವರ 'ಉತ್ತರಾರ್ಧ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

 ಮೂಲತಃ ಉತ್ತರಕನ್ನಡದ ಅಂಕೋಲ ತಾಲೂಕಿನವರಾದ ಜಿ.ಹೆಚ್.ನಾಯಕ ಸದ್ಯ ಮೈಸೂರಿನಲ್ಲಿ ನೆಲೆಸಿದ್ದು, ಅವರಿಗೆ 2010ರ ಪಂಪ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿದ್ದವು. ಈಗ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅವರ ಮುಡಿಗೇರಿತು,

 ಅಂಕೋಲದ ಸುರ್ವೆ ಜಿ.ಹೆಚ್. ನಾಯಕರ ಹುಟ್ಟೂರು. ಅವರಿಗೀಗ 79 ವರ್ಷ ವಯಸ್ಸು. ಗೋವಿಂದರಾಯ ಹಮ್ಮಣ್ಣ ನಾಯಕ ಅವರ ಪೂರ್ಣ ಹೆಸರು. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿರುವ ಜಿ.ಹೆಚ್. ನಾಯಕರ 'ನಿರಪೇಕ್ಷ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತ್ತು.

2014: ಜೋಧಪುರ: ಗೋಹತ್ಯೆಯನ್ನು ವಿರೋಧಿಸಿ, ಗೋ ಸಂರಕ್ಷಣೆಯ ಕಾಳಜಿ ಮೆರೆದದ್ದಕ್ಕಾಗಿ ಜೋಧಪುರದ ಮುಸ್ಲಿಂ ಸಂಸ್ಥೆ ಮುಸ್ಲಿಂ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (ಎಂಸಿಸಿಐ. ಜೋಧಪುರ ಮೂಲದ ಸರ್ಕಾರೇತರ ಸಂಘಟನೆ ನೀಡುವ 'ಆಚಾರ್ಯ ಹಸ್ತಿ ಕರುಣಾರತ್ನ ಪ್ರಶಸ್ತಿ'ಗೆ ಪಾತ್ರವಾಯಿತು. ಆಚಾರ್ಯ ಹಸ್ತಿ ಕರುಣಾರತ್ನ ಪ್ರಶಸ್ತಿಯು ಪ್ರಶಸ್ತಿ ಪತ್ರದ ಜೊತೆಗೆ 50,000 ರೂಪಾಯಿಗಳ ಚೆಕ್ನ್ನು ಹೊಂದಿರುತ್ತದೆ. ಪ್ರಾಣಿಗಳ ಮೇಲೆ ದಯೆ, ಅವುಗಳ ಸಂರಕ್ಷಣೆ, ಪರಿಸರ ಸಂರಕ್ಷಣೆ ಇತ್ಯಾದಿ ಸಮಾಜಸೇವಾ ಕಾರ್ಯಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಂಸ್ಥೆಗೆ ಈ ತಿಂಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತದ ಜಾನುವಾರುಗಳು ಅದರಲ್ಲೂ ವಿಶೇಷವಾಗಿ ಗೋವುಗಳ ಸಂಖ್ಯೆ ರಾಷ್ಟ್ರದಲ್ಲಿ ಕುಗ್ಗುತ್ತಿದೆ. ಪರಿಣಾಮವಾಗಿ ಹಾಲಿನ ಕೊರತೆಯನ್ನು ರಾಷ್ಟ್ರ ಎದುರಿಸುತ್ತಿದೆ ಎಂದು ಎಂಸಿಸಿಐ ವಕ್ತಾರರು ಪ್ರಶಸ್ತಿ ಲಭಿಸಿದ ಸುದ್ದಿ ತಿಳಿಸುತ್ತಾ ಹೇಳಿದರು. ಹಿಂದುಗಳಿಂದ ಪೂಜಿಸಲ್ಪಡುವ ಗೋವುಗಳನ್ನು ರಕ್ಷಿಸುವ ಅಗತ್ಯವಿದೆ ಎಂದು ಅವರು ನುಡಿದರು.

2014: ಇಸ್ಲಾಮಾಬಾದ್: ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ 18-12-2014ರ ಗುರುವಾರ ಜಾಮೀನು ಪಡೆದ ಮುಂಬೈ ದಾಳಿಯ ರೂವಾರಿ ಝುಕಿ-ಉರ್-ರಹಮಾನ್ ಲಖ್ವಿಯನ್ನು ಈದಿನ ಸಾರ್ವಜನಿಕ ಸುವ್ಯವಸ್ಥೆ ಪಾಲನೆ (ಎಂಪಿಒ) ಕಾಯ್ದೆಯ ಅಡಿಯಲ್ಲಿ ಪುನಃ ಬಂಧಿಸಿ ರಾವಲ್ಪಿಂಡಿಯ ಅಡಿಲಾ ಸೆರೆಮನೆಯಲ್ಲಿ ಇರಿಸಲಾಯಿತು. ಆತನನ್ನು ಮೂರು ತಿಂಗಳ ಅವಧಿಗೆ ಸೆರೆಮನೆಯಲ್ಲಿ ಇರಿಸಲು ಸರ್ಕಾರ ನಿರ್ಧರಿಸಿತು ಎಂದು ಮಾಧ್ಯಮ ವರದಿಯೊಂದು ತಿಳಿಸಿತು. ಲಖ್ವಿಗೆ ಜಾಮೀನು ಮಂಜೂರು ಮಾಡಿದ್ದರ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಸರ್ಕಾರಿ ಮೂಲವೊಂದು 'ಡಾನ್'ಗೆ ತಿಳಿಸಿತು. 2008ರ ನವೆಂಬರ್ 26-29ರ ಅವಧಿಯಲ್ಲಿ 166 ಜನರನ್ನು ಬಲಿ ತೆಗೆದುಕೊಂಡ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯನ್ನು ಯೋಜಿಸಿ ನೆರವು ನೀಡಿದ ಆರೋಪವಿದ್ದ ಏಳು ಮಂದಿಯ ಪೈಕಿ ಲಖ್ವಿ ಒಬ್ಬನಾಗಿದ್ದು, ಇಸ್ಲಾಮಾಬಾದಿನ ಭಯೋತ್ಪಾದಕ ನಿಗ್ರಹ ನ್ಯಾಯಾಲಯವು ಈತನಿಗೆ ಜಾಮೀನು ಮಂಜೂರು ಮಾಡಿತ್ತು. ಮುಂಬೈ ದಾಳಿ ಘಟನೆಯಲ್ಲಿ ವಿದೇಶೀಯರೂ ಸೇರಿದಂತೆ 166 ಜನರು ಮೃತರಾಗಿದ್ದುದರ ಜೊತೆಗೆ ಇತರ ನೂರಾರು ಮಂದಿ ಗಾಯಗೊಂಡಿದ್ದರು. ಮುಂಬೈ ದಾಳಿ ಕಾಲದಲ್ಲಿ ಲಖ್ವಿಯು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸಂಘಟನೆಯ ಕಾರ್ಯಾಚರಣಾ ವಿಭಾಗದ ಮುಖ್ಯಸ್ಥನಾಗಿದ್ದ ಎನ್ನಲಾಗಿದ್ದು, ಈ ಸಂಘಟನೆಯೇ ಈ ದಾಳಿಯನ್ನು ನಡೆಸಿತ್ತು ಎಂದು ಭಾರತ ಆಪಾದಿಸಿತ್ತು.

2014: ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಝುಕಿ-ಉರ್-ರಹಮಾನ್-ಲಖ್ವಿಗೆ ಜಾಮೀನು ಮಂಜೂರು ಮಾಡಿದ್ದರ ವಿರುದ್ಧ ಭಾರತ ಸರ್ಕಾರದ ಕಳವಳ ಮತ್ತು ಜನತೆಯ ತೀವ್ರ ಅಸಮಾಧಾನವನ್ನು ಭಾರತವು ಈದಿನ ಪಾಕಿಸ್ತಾನಕ್ಕೆ ತಿಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ನವದೆಹಲಿಯಲ್ಲಿ ಹೇಳಿದರು. 'ನಮಗೆ ತಲುಪಿರುವ ಪುನರಪಿ ಭರವಸೆಗಳ ಹೊರತಾಗಿಯೂ ಇಸ್ಲಾಮಾಬಾದಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಮುಂಬೈ ಭಯೋತ್ಪಾದನಾ ದಾಳಿಯ ಹಿಂದಿನ ಷಡ್ಯಂತ್ರದ ವಿಚಾರಣೆ ಅತ್ಯಂತ ನಿಧಾನಗತಿಯಲ್ಲಿ ಮುಂದುವರೆದಿದೆ. ಜೊತೆಗೆ ಝಕೀರ್-ಉರ್-ರಹಮಾನ್ ಲಖ್ವಿಗೆ ಜಾಮೀನು ಮಂಜೂರು ಮಾಡಿದ ಕ್ರಮವು ಈ ವಿಚಾರಣೆಯನ್ನು ಬೇರೆಯೇ ಹಂತಕ್ಕೆ ಒಯ್ದಿದೆ' ಎಂದು ಸೈಯದ್ ಅಕ್ಬರುದ್ದೀನ್ ಹೇಳಿದರು. 'ಆದ್ದರಿಂದ ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ವಿಷಯದ ಬಗ್ಗೆ ಪಾಕಿಸ್ತಾನಕ್ಕೆ ನಮ್ಮ ಬಲವಾದ ಆಕ್ಷೇಪ, ಕಳವಳ ಮತ್ತು ಭಾರತೀಯ ಸಮಾಜದ ಭಾವನೆಗಳನ್ನು ಕಳುಹಿಸಿದ್ದೇವೆ. ಈ ಘಟನೆಯು ಭಯೋತ್ಪಾದಕ ಗುಂಪುಗಳ ವಿರುದ್ಧ ಹೋರಾಡುವ ಪಾಕಿಸ್ತಾನದ ಬದ್ಧತೆಯನ್ನೇ ನಗೆಪಾಟಲು ಮಾಡಿದೆ' ಎಂದು ವಕ್ತಾರರು ನುಡಿದರು. 2008ರ ನವೆಂಬರ್ 26ರಂದು 166 ಮಂದಿಯನ್ನು ಬಲಿತೆಗೆದುಕೊಂಡ ಮುಂಬೈ ಮೇಲಿನ ದಾಳಿಯ ಯೋಜನೆ ರೂಪಿಸಿ, ಪ್ರಚೋದಿಸುವ ಷಡ್ಯಂತ್ರವನ್ನು ಹೆಣೆದ 7 ಮಂದಿ ಪಾಕಿಸ್ತಾನೀಯರ ಪೈಕಿ ಲಖ್ವಿ ಒಬ್ಬನಾಗಿದ್ದಾನೆ. ಲಖ್ವಿ ಬಿಡುಗಡೆಗಾಗಿ ಜಾಮೀನು ನೀಡಲಾಗಿರುವುದನ್ನು ಒಪ್ಪಲಾಗದು ಎಂದು 18-12-2014ರಂದೇ ಪಾಕಿಸ್ತಾನಕ್ಕೆ ತಿಳಿಸಿದ್ದ ಭಾರತ ಈ ನಿರ್ಣಯವನ್ನು ತತ್ಕ್ಷಣ ಹಿಂತೆಗೆದುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು.

2014: ಇಸ್ಲಾಮಾಬಾದ್: ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಆರು ಮಂದಿ ಭಯೋತ್ಪಾದಕರ ಗಲ್ಲು ಶಿಕ್ಷೆ ಜಾರಿಗೆ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಅನುಮೋದನೆ ನೀಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿತು. 'ಸೇನಾ ಸಿಬ್ಬಂದಿ ಮುಖ್ಯಸ್ಥರು ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಕಾನೂನು ಪ್ರಕಾರ ಶಿಕ್ಷೆ ವಿಧಿಸಿರುವ 6 ಮಂದಿ ಕಟ್ಟಾ ಭಯೋತ್ಪಾದಕರ 'ಡೆತ್ ವಾರಂಟ್'ಗಳಿಗೆ ಈದಿನ ಸಹಿ ಮಾಡಿದ್ದಾರೆ' ಎಂದು ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್ಪಿಆರ್) ನಿರ್ದೇಶಕ ಜನರಲ್ ಮೇಜರ್ ಅಸಿಮ್ಬಜ್ವಾ ಹಿಂದಿನ ರಾತ್ರಿ ತಡವಾಗಿ ಟ್ವೀಟ್ ಮಾಡಿದರು. ಭಯೋತ್ಪಾದಕರ ಮರಣದಂಡನೆ ಜಾರಿ ಮೇಲಿನ ನಿಷೇಧ ರದ್ದು ಪಡಿಸಲಾಗಿದೆ ಎಂದು ಪ್ರಧಾನಿ ನವಾಜ್ ಷರೀಫ್ ಅವರು ಪ್ರಕಟಿಸಿದ ಒಂದು ದಿನದ ಬಳಿಕ ಈ ಕುರಿತ ಪ್ರಕಟಣೆ ಹೊರ ಬಿದ್ದಿದೆ ಎಂದು 'ಡಾನ್' ಆನ್ಲೈನ್ ವರದಿ ಮಾಡಿತು. ಸೇನೆಯು ಅಪರಾಧಿಗಳ ಹೆಸರುಗಳನ್ನು ತಡೆಹಿಡಿದಿದೆ ಮತ್ತು ಗಲ್ಲು ಶಿಕ್ಷೆ ಜಾರಿ ಪೂರ್ಣಗೊಂಡ ಬಳಿಕ ಹೆಸರುಗಳನ್ನು ಬಹಿರಂಗ ಪಡಿಸಲಾಗುವುದು ಎಂದು ಹೇಳಿತು. ಆರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ಜಾರಿಯ ಶಾಸನ ಸಂಬಂಧಿ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಸೇನಾ ವಕ್ತಾರರು ಹೇಳಿದ್ದನ್ನು ಮಾಧ್ಯಮ ಉಲ್ಲೇಖಿಸಿತು. ಪಾಕಿಸ್ತಾನಿ ಸೇನೆಯ ಕೇಂದ್ರ ಕಚೇರಿ ಮೇಲೆ ನಡೆದ ದಾಳಿ ಮತ್ತು ಚೇನಾಬ್ ನದಿ ತೀರದ ಸೇನಾ ಶಿಬಿರದ ಮೇಲೆ ನಡೆದ ದಾಳಿ ಹಾಗೂ ಇತರ ಪ್ರಕರಣಗಳಿಗೆ ಸಂಬಂಧಿಸಿದ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿತ್ತು.

2014: ನವದೆಹಲಿ: ಶ್ವಾಸನಾಳದ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ದೇಹಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಂಡರು. 'ಅವರ ದೇಹಸ್ಥಿತಿ ಸ್ಥಿರವಾಗಿದೆ. ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ' ಎಂದು ಸರ್. ಗಂಗಾರಾಮ್ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಅಜಯ್ ಸ್ವರೂಪ್ ಹೇಳಿದರು. ಶ್ವಾಸನಾಳದ ಸೋಂಕು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 68ರ ಹರೆಯದ ಕಾಂಗ್ರೆಸ್ ಅಧ್ಯಕ್ಷೆಯನ್ನು ಹಿಂದಿನ ದಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

2014: ಶ್ರೀನಗರ: ರಾತ್ರಿ ವೇಳೆಯಲ್ಲಿ ತಾಪಮಾನವು ಶೈತ್ಯಗಟ್ಟುವಿಕೆಯ ಬಿಂದುವಿಗಿಂತಲೂ ಕೆಳಗಿಳಿದ ಪರಿಣಾಮವಾಗಿ ಕಾಶ್ಮೀರ ಕಣಿವೆ ಚಳಿಯಿಂದ ಗಡ ಗಡ ನಡುಗಿತು. ಕಾಶ್ಮೀರ ಕಣಿವೆ ಪ್ರದೇಶದ ಹಾಲಿ ಶೀತಗಾಳಿಯ ಸ್ಥಿತಿ ಇನ್ನೂ ಮೂರುದಿನ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಎಂದು ಹವಾಮಾನ ಕಚೇರಿ ತಿಳಿಸಿತು. ಶ್ರೀನಗರದಲ್ಲಿ ಈದಿನ ಕನಿಷ್ಠ ತಾಪಮಾನ ಮೈನಸ್ 4.2 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಗುಲ್ಮಾರ್ಗ್ನಲ್ಲಿ ಮೈನಸ್ 2.6 ಮತ್ತು ಪಹಲ್ಗಾಂವದಲ್ಲಿ ಮೈನಸ್ 7.2 ಡಿಗ್ರಿ ಸೆಲ್ಸಿಯಸ್ ಇತ್ತು ಎಂದು ಹವಾಮಾನ ಕಚೇರಿ ಹೇಳಿತು. ಲಡಾಖ್ ಪ್ರದೇಶದ ಲೆಹ್ ಪಟ್ಟಣದಲ್ಲಿ ಕನಿಷ್ಠ ತಾಪಮಾನ ಮೈನಸ್ 12.5 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕಾರ್ಗಿಲ್ ಪಟ್ಟಣದಲ್ಲಿ ಅದು ಮೈನಸ್ 12.1 ಡಿಗ್ರಿಯಾಗಿತ್ತು. ಜಮ್ಮು ನಗರದಲ್ಲಿ ಹಿಂದಿನ ರಾತ್ರಿಯ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಗರಿಷ್ಠ ತಾಪಮಾನ 10.2 ಡಿಗ್ರಿಯಾಗಿತ್ತು.

2014: ನವದೆಹಲಿ: ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಒಡಿಶಾದ ಪೊಲೀಸ್ ಸುಪರಿಂಟೆಂಡೆಂಟ್ ಅವರನ್ನು ಬಂಧಿಸಿದರು. ಚಿಟ್ ಫಂಡ್ ಅವ್ಯವಹಾರ ನಡೆಸಿರುವ ಕಂಪನಿಯಿಂದ ಆರ್ಥಿಕ ನೆರವು ಪಡೆದಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿರುವ ಸಿಬಿಐ ಪೊಲೀಸರು ಹಿರಿಯ ಪೊಲೀಸ್ ಅಧಿಕಾರಿಯನ್ನೇ ಬಂಧಿಸಿರುವುದು ಒಡಿಶಾದಲ್ಲಿ ಪ್ರಕರಣದ ಬಗ್ಗೆ ಇನ್ನಷ್ಟು ಕುತೂಹಲ ಹುಟ್ಟಿಸಿತು. ಸಿಬಿಐ ಮೂಲಗಳು ತಿಳಿಸಿರುವಂತೆ ಡಿಎಸ್ಪಿ ಪ್ರಮೋದ್ ಪಾಂಡಾ ಬಂಧನಕ್ಕೊಳಗಾದ ಪೊಲೀಸ್ ಅಧಿಕಾರಿಯಾಗಿದ್ದು, ಅರ್ಥ ತತ್ವ ಗ್ರೂಪ್ನ ಯೋಜನೆಯಡಿ ಹೂಡಿಕೆ ಕೂಡ ಮಾಡಿದ್ದರು ಎನ್ನಲಾಯಿತು..

2008: ಚಿತ್ರದುರ್ಗದಲ್ಲಿ ಜನವರಿ 29ರಿಂದ ನಡೆಯುವ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ. ಎಲ್.ಬಸವರಾಜು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್ ಪ್ರಕಟಿಸಿದರು.

2008: ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಹತ್ಯೆ ಸಂಬಂಧ ತಾವು ನೀಡಿದ್ದ ಹೇಳಿಕೆಗೆ ವ್ಯಕ್ತವಾದ ಒಕ್ಕೊರಲ ವಿರೋಧಕ್ಕೆ ಮಣಿದು ಕೇಂದ್ರದ ಅಲ್ಪ ಸಂಖ್ಯಾತ ವ್ಯವಹಾರ ಇಲಾಖೆ ಸಚಿವ ಎ.ಆರ್.ಅಂತುಳೆ ರಾಜೀನಾಮೆ ಸಲ್ಲಿಸಿದರು. ಸ್ವತಃ ಅಂತುಳೆ ತಾವು ರಾಜೀನಾಮೆ ನೀಡಿರುವ ಬಗ್ಗೆ ಖಚಿತ ಪಡಿಸದಿದ್ದರೂ ಅವರು ಕಳುಹಿಸಿದ ಪತ್ರ ಪ್ರಧಾನಿ ಸಿಂಗ್ ಅವರನ್ನು ತಲುಪಿರುವುದನ್ನು ಮೂಲಗಳು ಖಚಿತಪಡಿಸಿದವು.

2008: ಸುಮಾರು 59 ಜನರನ್ನು ಬಲಿತೆಗೆದುಕೊಂಡ 1997 ರ ಉಪಹಾರ್ ಚಿತ್ರಮಂದಿರ ಅಗ್ನಿ ದುರಂತ ಪ್ರಕರಣದಲ್ಲಿ ಕೆಳ ನ್ಯಾಯಾಲಯವು ರಿಯಲ್ ಎಸ್ಟೇಟ್ ಉದ್ಯಮಿಗಳಾದ ಗೋಪಾಲ್ ಹಾಗೂ ಸುಶೀಲ್ ಅನ್ಸಲ್ ಅವರನ್ನು ತಪ್ಪಿತಸ್ಥರೆಂದು ನೀಡಿದ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿಯಿತು. ಆದರೆ ಅನ್ಸಲ್ ಸಹೋದರರಿಗೆ ಕೆಳ ನ್ಯಾಯಾಲಯ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಯನ್ನು ಒಂದು ವರ್ಷಕ್ಕೆ ಇಳಿಸಿತು. ದೆಹಲಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅನ್ಸಲ್ ಸಹೋದರರು ಸಲ್ಲಿಸಿದ ಮೇಲ್ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ರವೀಂದ್ರ ಭಟ್ ಅವರು, ತಮ್ಮ ಒಡೆತನದ ಉಪಹಾರ್ ಚಿತ್ರಮಂದಿರದಲ್ಲಿ ಜನರಿಗೆ ಸುರಕ್ಷತೆ ಒದಗಿಸಲು ಅನ್ಸಲ್ ಸಹೋದರರು ವಿಫಲರಾಗಿದ್ದಾರೆ ಎಂದು ಹೇಳಿದರು.

2007: ಇಂಗ್ಲಿಷ್ ಕಾನೂನಿನಲ್ಲಿ ಮಾನವ ಹಕ್ಕುಗಳನ್ನು ವಿವರಿಸಿರುವ ರಾಜಮುದ್ರೆಯುಳ್ಳ 800 ವರ್ಷಗಳಷ್ಟು ಹಳೆಯದಾದ ಅತ್ಯಮೂಲ್ಯ `ಮ್ಯಾಗ್ನಕಾರ್ಟ' ಹಸ್ತಪ್ರತಿ ಈದಿನ ನ್ಯೂಯಾರ್ಕಿನಲ್ಲಿ 2.13 ಕೋಟಿ (21.3 ಮಿಲಿಯನ್) ಡಾಲರುಗಳಿಗೆ ಹರಾಜಾಯಿತು. `ಮಾಗ್ನಕಾರ್ಟ' ಜಗತ್ತಿನಲ್ಲಿ ಉಳಿದಿರುವುದೆನ್ನಲಾದ ಏಕೈಕ ಪ್ರತಿಯಾಗಿರುವ ಈ ಮ್ಯಾಗ್ನಕಾರ್ಟ 1297ರಷ್ಟು ಹಳೆಯದಾಗಿದ್ದು ಒಂದನೇ ದೊರೆ ಎಡ್ವರ್ಡನ ಮೇಣದ ಮೊಹರನ್ನು ಹೊಂದಿದೆ. ಕಳೆದ ಎರಡು ದಶಕಗಳಿಂದ ಇದನ್ನು ವಾಷಿಂಗ್ಟನ್ನಿನ ರಾಷ್ಟ್ರೀಯ ಪುರಾತನ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಟೆಲಿಫೋನ್ ಬಿಡ್ಡರ್ ಒಬ್ಬ ಅದನ್ನು ಅಪಹರಿಸಿ ಮಾರಾಟ ಮಾಡಿದ್ದ. ಈ ಹಸ್ತಪ್ರತಿಯನ್ನು ಖರೀದಿಸಿದ ವ್ಯಕ್ತಿಯನ್ನು ಕಾರ್ಲೈಲ್ ಈಕ್ವಿಟಿ ಗುಂಪಿನ ಸ್ಥಾಪಕ ಡೇವಿಡ್ ರುಬೆನ್ ಸ್ಟೀನ್ ಎಂಬುದಾಗಿ ನಂತರ ಪತ್ತೆಹಚ್ಚಲಾಯಿತು. ಇವರು ಅಧ್ಯಕ್ಷ ಕಾರ್ಟರ್ ಅವರ ಗೃಹನೀತಿ ಉಪ ಸಲಹೆಗಾರರೂ ಆಗಿದ್ದರು. ವಿಷಯ ಬಹಿರಂಗಗೊಂಡ ಬಳಿಕ ರುಬೆನ್ ಸ್ಟೀನ್ ಅವರು ಹಸ್ತಪ್ರತಿಯನ್ನು ಮತ್ತೆ ವಾಷಿಂಗ್ಟನ್ನಿನ ರಾಷ್ಟ್ರೀಯ ಪುರಾತನ ವಸ್ತುಗಳ ಸಂಗ್ರಹಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡುವುದಾಗಿ ಪ್ರಕಟಿಸಿದ್ದರು.

2007: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಈದಿನ ಬೆಳಗ್ಗೆ ಸಂಭವಿಸಿದ ರೈಲು ಅಪಘಾತದಲ್ಲಿ 58ಕ್ಕೂ ಹೆಚ್ಚು ಜನ ದುರ್ಮರಣಕ್ಕೀಡಾದರು. 120 ಜನರು ಗಾಯಗೊಂಡರು. ಕರಾಚಿಯಿಂದ 300 ಕಿ.ಮೀ ದೂರದಲ್ಲಿರುವ ನೌಶೇರ್ ಫೆರೊಜ್ ಎಂಬಲ್ಲಿ ಕರಾಚಿ ಎಕ್ಸ್ ಪ್ರೆಸ್ ಅಪಘಾತಕ್ಕೀಡಾಯಿತು. ವೇಗವಾಗಿ ಚಲಿಸುತ್ತಿದ್ದಾಗ, ರೈಲಿನ ಎಂಜಿನ್ನಿನಿಂದ 15 ಬೋಗಿಗಳು ಪ್ರತ್ಯೇಕಗೊಂಡು ಹಳಿ ತಪ್ಪಿದ ಕಾರಣ ದುರ್ಘಟನೆ ಸಂಭವಿಸಿತು.

2007: ಐಎಎಸ್ ಅಧಿಕಾರಿ ಡಾ.ವಿ. ಚಂದ್ರಶೇಖರ್, ಇಬ್ಬರು ಮುಖ್ಯ ಎಂಜಿನಿಯರುಗಳು, ವಾಣಿಜ್ಯ ತೆರಿಗೆ ಇಲಾಖೆಯ ಒಬ್ಬ ಜಂಟಿ ಆಯುಕ್ತ, ಒಬ್ಬ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ 13 ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 30 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಆರೋಪದ ಮೇರೆಗೆ ಬೆಂಗಳೂರು ನಗರ, ಗ್ರಾಮಾಂತರ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಈ 13 ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಯಿತು.

2007: ತನ್ನ ಊರಿನ 50 ಸಾವಿರ ಜನರಿಗೆ ಕುಡಿಯುವ ನೀರು ಒದಗಿಸಲೇ ಬೇಕು ಎಂದು ಹಠ ಹಿಡಿದ ಯುವಕ ಬಸವರಾಜ ನಂದಿಕೇಶ್ವರ ಎಂಬ ಯುವಕನೊಬ್ಬ ತಲೆಯ ಮೇಲೆ 25 ಕೆ.ಜಿ ಭಾರದ ಕಲ್ಲು ಹೊತ್ತುಕೊಂಡು ವಿಜಾಪುರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಸತತ ಮೂರು ಗಂಟೆಗಳ ಕಾಲ `ಗಾಂಧೀಗಿರಿ' ನಡೆಸುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಿದರು. ಮುದ್ದೇಬಿಹಾಳ ಪಟ್ಟಣದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ನಡೆಸುತ್ತಾ ಬಂದ ನಾಲ್ಕು ವರ್ಷಗಳ ಹೋರಾಟ ಇದರೊಂದಿಗೆ ವಿಶಿಷ್ಟ ಸ್ವರೂಪ ಪಡೆದುಕೊಂಡಿತು.

2007: ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು ಮೂವರಿಗೆ ತಲಾ ಒಂದು ಕೋಟಿ ರೂಪಾಯಿ ದಂಡದ ಜತೆ 6 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. 1991-92ರ ಅವಧಿಯಲ್ಲಿ 6.29 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಡೆದ ಮೇವು ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬಿನಯ್ ಕುಮಾರ್ ಸಹಾಯ್ ಅವರು 43 ಜನರು ತಪ್ಪಿತಸ್ಥರು ಎಂದು ತೀರ್ಪು ನೀಡಿದರು. ಈ ಪೈಕಿ ಜೆ. ಬೆಂಗರಾಜ್, ಡಾ.ಕೃಷ್ಣಮೋಹನ್ ಪ್ರಸಾದ್ ಮತ್ತು ಡಾ.ಕೀರ್ತಿ ನಾರಾಯಣ್ ಝಾ ಅವರಿಗೆ ತಲಾ ಒಂದು ಕೋಟಿ ರೂಪಾಯಿ ದಂಡ ಮತ್ತು 6 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಯಿತು. ಉಳಿದ 40 ಮಂದಿಗೆ 5 ಲಕ್ಷ ದಿಂದ 45 ಲಕ್ಷ ರೂಪಾಯಿವರೆಗೆ ದಂಡ ಹಾಗೂ 5 ರಿಂದ 6 ವರ್ಷಗಳ ಶಿಕ್ಷೆ ನೀಡಲಾಯಿತು. ಮೇವು ಹಗರಣದ ಇತರ ಪ್ರಕರಣಗಳಿಗೆ ಹೋಲಿಸಿದರೆ ಈ ತೀರ್ಪು ಅಭೂತಪೂರ್ವ. ಇಲ್ಲಿಯವರೆಗೆ ಮೇವು ಹಗರಣದಲ್ಲಿ ಯಾರಿಗೂ ಇಷ್ಟು ದಂಡ ವಿಧಿಸಿರಲಿಲ್ಲ.

2007: ಅಮೆರಿಕದ ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ `ಬಿಕಿನಿ ಕೊಲೆಗಾರ' ಚಾರ್ಲ್ಸ್ ಶೋಭರಾಜ್ ಗೆ ವಿಧಿಸಲಾದ ಮರಣ ದಂಡನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಲು ನಿರಾಕರಿಸಿದ ನೇಪಾಳದ ಸುಪ್ರೀಂಕೋರ್ಟ್ `ಯಥಾಸ್ಥಿತಿ' ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ ತೀರ್ಪು ನೀಡಿದ ಸುಪ್ರೀಂಕೋರ್ಟ್, ಶೋಭರಾಜ್ ವಿರುದ್ಧದ ಮತ್ತೊಂದು ನಕಲಿ ಪಾಸ್ ಪೋರ್ಟ್ ಪ್ರಕರಣದ ವಿಚಾರಣೆಯನ್ನು ಪುನಃ ಆರಂಭಿಸುವಂತೆ ಆದೇಶ ನೀಡಿತು. ಎರಡೂ ಪ್ರಕರಣಗಳ ವಿಚಾರಣೆಯನ್ನು ಏಕಕಾಲದಲ್ಲಿ ನಡೆಸಲೂ ನ್ಯಾಯಪೀಠ ನಿರ್ಧರಿಸಿತು. ಅಮೆರಿಕದ ಮಹಿಳೆ ಕೊನಿ ಬ್ರೊಂಜಿಕ್ ಅವರ ಕೊಲೆಗೆ ಸಂಬಂಧಿಸಿದಂತೆ ಶೋಭರಾಜ್ ಗೆ ಕಠ್ಮಂಡು ಜಿಲ್ಲಾ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು. ಇದನ್ನು ಶೋಭರಾಜ್ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದ. 1970ರ ದಶಕದಲ್ಲಿ ಭಾರತ, ಥಾಯ್ಲೆಂಡ್, ನೇಪಾಳದಲ್ಲಿ 12ಕ್ಕೂ ಹೆಚ್ಚು ಪ್ರವಾಸಿಗರನ್ನು ಕೊಲೆ ಮಾಡಿದ ಆರೋಪ ಶೋಭರಾಜ್ ಮೇಲಿತ್ತು.

2007: ಮೂಡಬಿದಿರೆಯ ಮಿಜಾರಿನ ಶೋಭಾವನದಲ್ಲಿ ನಡೆಯುವ `2008ರ ಆಳ್ವಾಸ್ ವಿರಾಸತ್'ನಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರನ್ನು 'ವಿರಾಸತ್ ಪ್ರಶಸ್ತಿ- 2007' ನೀಡಿ ಗೌರವಿಸಲು ನಿರ್ಧರಿಸಲಾಯಿತು.

2007: ಧಾರವಾಡ ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟಿನ `ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ'ಯನ್ನು ಈ ವರ್ಷ ದೆಹಲಿಯ ಕರ್ನಾಟಕ ಸಂಘಕ್ಕೆ ನೀಡಲಾಯಿತು.

2006: ವಿಶ್ವಕಪ್ ಚಾಂಪಿಯನ್ ಇಟಲಿ ಫುಟ್ಬಾಲ್ ತಂಡದ ನಾಯಕ ಫ್ಯಾಬಿಯೋ ಕನಾವಾರೋ ಅವರು ಫಿಫಾ `ವರ್ಷದ ಶ್ರೇಷ್ಠ ಆಟಗಾರ' ಪ್ರಶಸ್ತಿ ಗೆದ್ದರು. ಇದರೊಂದಿಗೆ ಈ ಪ್ರಶಸ್ತಿಯನ್ನು ಗೆದ್ದ ಮೊತ್ತ ಮೊದಲ ರಕ್ಷಣಾ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕನಾವಾರೋ ಅವರು ಈ ಹಾದಿಯಲ್ಲಿ ಫ್ರಾನ್ಸಿನ ಜೆನಡಿನ್ ಜಿಡಾನ್ ಹಾಗೂ ಬ್ರೆಜಿಲಿನ ರೋನಾಲ್ಡಿನೋ ಅವರನ್ನು ಹಿಂದೆ ಹಾಕಿದರು.

2006: ಡಿಸ್ಕವರಿ ಬಾಹ್ಯಾಕಾಶ ನೌಕೆಯ ಸೌರಶಕ್ತಿ ಸಂಗ್ರಹ ಪೆಟ್ಟಿಗೆಯಲ್ಲಿ ಕಾಣಿಸಿಕೊಂಡ ದೋಷವನ್ನು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಾಹ್ಯಾಕಾಶ ನಡಿಗೆ ನಡೆಸಿ ಸರಿ ಪಡಿಸಿದರು.

2005: ಖ್ಯಾತ ಗ್ಲೈಡರ್ ಹಾರಾಟಗಾರ ಹಾಗೂ ರೇಮಂಡ್ ಲಿಮಿಟೆಡ್ ಅಧ್ಯಕ್ಷ ವಿಜಯಪಥ್ ಸಿಂಘಾನಿಯಾ ಮುಂಬೈ ಷರೀಫ್ ಆಗಿ ಅಧಿಕಾರ ಸ್ವೀಕರಿಸಿದರು. ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ಅವರು ಸಿಂಘಾನಿಯಾ ಅವರಿಗೆ ಮುಂಬೈಯ ರಾಜಭವನದಲ್ಲಿ ಪ್ರಮಾಣವಚನ ಬೋಧಿಸಿದರು.

2005: ತಾರ್ ಶಹನಾಯಿ ವಾದಕ ಹಾಗೂ ಭಾರತೀಯ ಅರಣ್ಯಪಡೆ ಸೇವೆಯ ನಿವೃತ್ತ ಅಧಿಕಾರಿ ಎಚ್.ಟಿ. ಕೊಪ್ಪಿಕರ್ (88) ಹೊಸಪೇಟೆಯಲ್ಲಿ ನಿಧನರಾದರು. ಕೊಪ್ಪಿಕರ್ ಮೂಲದವರಾದ ಕೊಪ್ಪಿಕರ್ ಅವರು ತಮ್ಮ ಸಂಬಂಧಿಯೊಬ್ಬರು ಸೃಷ್ಟಿಸ್ದಿದ `ತಾರ್ ಶಹನಾಯಿ' ಎಂಬ ಆಧುನಿಕ ತಂತಿವಾದ್ಯ ಕಂಡು ಆಕರ್ಷಿತರಾಗಿ ಅವರಿಂದ ಒಂದು ಉಪಕರಣ ಮಾಡಿಸಿಕೊಂಡು ಅಭ್ಯಾಸ ಮಾಡಿದರು. ಅದರಲ್ಲೇ ಸಾಧನೆಗೈದು ರಾಷ್ಟ್ರದಲ್ಲಿ ಆಧುನಿಕ ವಾದ್ಯವನ್ನು ಪರಿಚಯಿಸಿ, ಆಕಾಶವಾಣಿ ಸೇರಿದಂತೆ ಹಲವೆಡೆ ಕಾರ್ಯಕ್ರಮವನ್ನೂ ನೀಡಿದರು. ಈ ಸಂಗೀತ ಸಾಧನೆಗೆ ಇವರಿಗೆ ಹಲವು ಸನ್ಮಾನ ಮತ್ತು ಪ್ರಶಸ್ತಿ ಬಂದಿದ್ದವು.

2005: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷರಾಗಿ ಓಮರ್ ಅಬ್ದುಲ್ಲಾ ಸತತ ಎರಡನೇ ಬಾರಿಗೆ ಆಯ್ಕೆಯಾದರು.

2005: ಸಂಸದರ ಪ್ರದೇಶಾಭಿವೃದ್ಧಿ ನಿಧಿುಂದ ಹಣ ಮಂಜೂರು ಮಾಡಲು ವಿವಿಧ ರಾಜಕೀಯ ಪಕ್ಷಗಳ ಸಂಸತ್ ಸದಸ್ಯರು ರುಷುವತ್ತು ಕೇಳಿದ ಇನ್ನೊಂದು ಸ್ಫೋಟಕ ಸುದ್ದಿಯನ್ನು ಸ್ಟಾರ್ ನ್ಯೂಸ್ ಪ್ರಸಾರ ಮಾಡಿತು. 'ಚಕ್ರವ್ಯೂಹ' ಹೆಸರಿನ ಈ ಕಾರ್ಯಾಚರಣೆಯಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲೆಮಾವೊ, ಎನ್ ಡಿ ಎ ಸರ್ಕಾರದಲ್ಲಿ ಸಚಿವರಾಗಿದ್ದ ಫಗನ್ ಸಿಂಗ್ ಕುಲಾಸ್ತೆ ಸೇರಿದಂತೆ 7 ಮಂದಿ ಸಂಸತ್ ಸದಸ್ಯರು ಸಿಕ್ಕಿ ಬಿದ್ದಿರುವುದಾಗಿ ಸ್ಟಾರ್ ನ್ಯೂಸ್ ಪ್ರಕಟಿಸಿತು. ಆರೋಪಿ ಸಂಸದರು: ಅಲೆಮಾವೊ ಚರ್ಚಿಲ್ (ಕಾಂಗ್ರೆಸ್), ಫಗನ್ ಸಿಂಗ್ ಕುಲಾಸ್ತೆ, ರಾಮಸ್ವರೂಪ ಕೋಲಿ, ಚಂದ್ರಪ್ರತಾಪ ಸಿಂಗ್ (ಎಲ್ಲರೂ ಬಿಜೆಪಿ), ಪಾರಸನಾಥ್ ಯಾದವ್ (ಎಸ್ ಪಿ). ರಾಜ್ಯಸಭೆಯಲ್ಲಿ ಆರೋಪಿಗಳು: ಸಾಕ್ಷಿ ಮಹಾರಾಜ್ (ರಾಷ್ಟ್ರೀಯ ಕ್ರಾಂತಿದಳ), ಈಶನ್ ಸಿಂಗ್ (ಬಿ ಎಸ್ ಪಿ).

2001: ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ವ್ಯಂಗ್ಯಚಿತ್ರಕಾರ ಆರ್. ಕೆ. ಲಕ್ಷ್ಮಣ್ ಅವರ ಖ್ಯಾತ ಸೃಷ್ಟಿ `ದಿ ಕಾಮನ್ ಮ್ಯಾನ್' ಪ್ರತಿಮೆಯನ್ನು ಅನಾವರಣಗೊಳಿಸಿದರು. ಪುಣೆಯ ಸಿಂಬಿಯೋಸಿಸ್ ಸೊಸೈಟಿಯ ನೂತನ ಕಟ್ಟಡ ವಿಶ್ವಭವನದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. `ಕಾರ್ಟೂನ್ ವ್ಯಕ್ತಿತ್ವ' ಒಂದರ ಅತ್ಯಂತ ಎತ್ತರದ ಲೋಹದ ಪ್ರತಿಮೆ ಇದು. ಈ ಕಂಚಿನ ಪ್ರತಿಮೆಯ ಎತ್ತರ ಎಂಟು ಅಡಿಗಳು.

1997: ಜೇಮ್ಸ್ ಕ್ಯಾಮೆರೋನ್ ಅವರ `ಟೈಟಾನಿಕ್' ಚಲನಚಿತ್ರ ಅಮೆರಿಕಾದ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಂಡಿತು.

1988: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗುಜರಾತಿ ಸಾಹಿತಿ ಉಮಾಶಂಕರ ಜೋಶಿ ನಿಧನ.

1984: ಹಾಂಕಾಂಗನ್ನು 1997ರ ಜುಲೈ 1ರಂದು ಚೀನೀ ಸಾರ್ವಭೌಮತ್ವಕ್ಕೆ ಹಿಂತಿರುಗಿಸುವ ಒಪ್ಪಂದಕ್ಕೆ ಬ್ರಿಟನ್ ಮತ್ತು ಚೀನಾ ಸಹಿ ಹಾಕಿದವು.

1961: ಪೋರ್ಚುಗೀಸ್ ಆಳ್ವಿಕೆಯಿಂದ ಗೋವಾ ಮುಕ್ತಗೊಂಡಿತು. ದಾಮನ್ ಹಾಗೂ ದಿಯು ಕೂಡಾ ಇದೇ ದಿನ ವಿದೇಶೀ ಆಳ್ವಿಕೆಯಿಂದ ವಿಮುಕ್ತಗೊಂಡಿತು. ಮೇಜರ್ ಜನರಲ್ ಜೆ.ಪಿ. ಕ್ಯಾಂಡೆತ್ ಗೋವಾದ ಸೇನಾ ಗವರ್ನರ್ ಆಗಿ ನೇಮಕಗೊಂಡರು.

1956: ವಿನಯಶೀಲರಾದ 48ರ ಹರೆಯದ ಸದಸ್ಯ ಎಸ್. ಆರ್. ಕಂಠಿ ಅವರನ್ನು ಈದಿನ ಆರಂಭಗೊಂಡ ವಿಧಾನಸಭೆಯು ತನ್ನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಚುನಾಯಿಸಿತು.

1952: ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆಂಧ್ರಪ್ರದೇಶ ರಾಜ್ಯ ಸ್ಥಾಪನೆಯ ಘೋಷಣೆ ಮಾಡಿದರು.

1918: ರಾಬರ್ಟ್ ರಿಪ್ಲೀ ಅವರ ಕಾಮಿಕ್ `ಬಿಲೀವ್ ಇಟ್ ಆರ್ ನಾಟ್!' ನ್ಯೂಯಾರ್ಕ್ ಗ್ಲೋಬ್ನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಇದಕ್ಕೆ ಓದುಗರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಹೀಗಾಗಿ ಇದು ವಾರಕ್ಕೊಮ್ಮೆ ಹಾಗೂ ನಂತರ ಪ್ರತಿದಿನ ಬರಲು ಆರಂಭವಾಯಿತು.

1916: ಬರ್ಮಾದ (ಈಗಿನ ಮ್ಯಾನ್ಮಾರ್) ಕೊನೆಯ ದೊರೆ ಥೈಬಾ ಅವರು ಭಾರತದ ರತ್ನಗಿರಿ ಕೋಟೆಯಲ್ಲಿ ದೇಶಭ್ರಷ್ಟರಾಗಿದ್ದಾಗ ನಿಧನರಾದರು. ಬ್ರಿಟಿಷರು 1885ರಲ್ಲಿ ಅಪ್ಪರ್ ಬರ್ಮಾ ಮೇಲೆ ದಾಳಿ ನಡೆಸಿ ಥೈಬಾ ಅವರನ್ನು ಪದಚ್ಯುತಿಗೊಳಿಸಿದ್ದರು. ಅಪ್ಪರ್ ಬರ್ಮಾವನ್ನು ಬ್ರಿಟಿಷ್ ಬರ್ಮಾದೊಳಗಿನ ರಾಜ್ಯಕ್ಕೆ ಸೇರಿಸಿಕೊಳ್ಳಲಾಗಿತ್ತು.

1906: ಲಿಯೋನಿದ್ ಇಲಿಚ್ ಬ್ರೆಜ್ನೇವ್ (1906-1982) ಹುಟ್ಟಿದ ದಿನ. ಸೋವಿಯತ್ ಮುತ್ಸದ್ದಿ ಹಾಗೂ ಕಮ್ಯೂನಿಸ್ಟ್ ಪಕ್ಷದ ಮುಖ್ಯಸ್ಥರಾಗಿದ್ದ ಇವರು 18 ವರ್ಷಗಳ ಕಾಲ ಸೋವಿಯತ್ ಒಕ್ಕೂಟದ ನಾಯಕರಾಗಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Sunday, January 17, 2010

ಇಂದಿನ ಇತಿಹಾಸ History Today ಡಿಸೆಂಬರ್ 18

ಇಂದಿನ ಇತಿಹಾಸ

ಡಿಸೆಂಬರ್ 18

ಖ್ಯಾತ ನೀರಾವರಿ ತಜ್ಞ, ಮಾಜಿ ಸಂಸದ ಹಾಗೂ ಮಾಜಿ ಸಚಿವ ಎಚ್.ಎನ್. ನಂಜೇಗೌಡ (74) ಅವರು ತೀವ್ರ ಹೃದಯಾಘಾತದಿಂದ ಈದಿನ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಅವರು ಮೂರು ಬಾರಿ ವಿಧಾನಸಭೆಯ ಸದಸ್ಯರಾಗಿ, ಎರಡು ಬಾರಿ ಲೋಕಸಭಾ ಸದಸ್ಯರಾಗಿ ಹಾಗೂ ಒಮ್ಮೆ ರಾಜ್ಯದ ಬೃಹತ್ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

2008: ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಪ್ರವಾಸಕ್ಕೆ ಭಾರತ ತಂಡವನ್ನು ಕಳುಹಿಸದಿರುವಂತೆ ಕೇಂದ್ರ ಸರ್ಕಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಸೂಚಿಸಿತು. ಇದರಿಂದ 2009ರ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ನಡೆಯಬೇಕಿದ್ದ ಭಾರತ ತಂಡದ ಪಾಕ್ ಪ್ರವಾಸ ಅಧಿಕೃತವಾಗಿ ರದ್ದಾಯಿತು. ಸರ್ಕಾರ ತನ್ನ ಮಹತ್ವದ ನಿರ್ಧಾರವನ್ನು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಗೆ ತಿಳಿಸಿತು.

2008: ಹತ್ತು ಮಂದಿ ಭ್ರಷ್ಟ ಅಧಿಕಾರಿಗಳ ಕೋಟೆಯನ್ನು ಭೇದಿಸಿದ ಲೋಕಾಯುಕ್ತ ಪೊಲೀಸರು 16 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿ ಸಿ.ಶ್ರೀನಿವಾಸನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಆರ್.ಪಟೇಲಪ್ಪ (ಬೆಂಗಳೂರು), ಗೊರೂರು ಹೇಮಾವತಿ ಯೋಜನೆ ಮುಖ್ಯ ಎಂಜಿನಿಯರ್ ಎಸ್.ಸಿ. ಜಯಚಂದ್ರ, ವಿಜಾಪುರ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜ ರಾಜಶೇಖರಯ್ಯ ಚೌಕಿಮಠ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಜಯಶಂಕರ್ (ಬೆಂಗಳೂರು), ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಮೈಸೂರು) ಚಂದ್ರೇಗೌಡ, ಆಲಮಟ್ಟಿ ಕೃಷ್ಣ ಭಾಗ್ಯಜಲ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ವೆಂಕಣ್ಣ ಚವಾಣ್, ಬಿಬಿಎಂಪಿ ಸಹಾಯಕ ಎಂಜಿನಿಯರ್ ದೇವರಾಜ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರೀಕ್ಷಕ ನಾಗಲಿಂಗಯ್ಯ (ಬೆಂಗಳೂರು) ಮತ್ತು ರಾಜಾನುಕುಂಟೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ವೀರೇಗೌಡ ಅವರ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಯಿತು.

2008: ರಾಜ್ಯದ ವಿವಿಧೆಡೆ 2000ದಿಂದ 2006ರವರೆಗೆ ನಡೆದ ಗಣಿಗಾರಿಕೆ ಅಕ್ರಮಗಳ ಕುರಿತ ತನಿಖಾ ವರದಿಯನ್ನು ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು. ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಪರವಾಗಿ ಸಂಸ್ಥೆಯ ರಿಜಿಸ್ಟ್ರಾರ್ ಎಲ್.ಸುಬ್ರಹ್ಮಣ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರರಾವ್ ಅವರನ್ನು ಭೇಟಿ ಮಾಡಿ, 274 ಪುಟಗಳ ವರದಿ ಮತ್ತು ಆರೋಪಗಳನ್ನು ಪುಷ್ಟೀಕರಿಸುವ 1,000 ದಾಖಲೆಗಳನ್ನು ಸಲ್ಲಿಸಿದರು.

2008: ಖ್ಯಾತ ನೀರಾವರಿ ತಜ್ಞ, ಮಾಜಿ ಸಂಸದ ಹಾಗೂ ಮಾಜಿ ಸಚಿವ ಎಚ್.ಎನ್. ನಂಜೇಗೌಡ (74) ಅವರು ತೀವ್ರ ಹೃದಯಾಘಾತದಿಂದ ಈದಿನ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಅವರು ಮೂರು ಬಾರಿ ವಿಧಾನಸಭೆಯ ಸದಸ್ಯರಾಗಿ, ಎರಡು ಬಾರಿ ಲೋಕಸಭಾ ಸದಸ್ಯರಾಗಿ ಹಾಗೂ ಒಮ್ಮೆ ರಾಜ್ಯದ ಬೃಹತ್ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂಜೇಗೌಡರು ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದಿಂದ 1967 (ಸ್ವತಂತ್ರ ಪಕ್ಷ) ಹಾಗೂ 1972ರಲ್ಲಿ ಶಾಸಕರಾಗಿ (ಕಾಂಗ್ರೆಸ್‌ನಿಂದ) ಆಯ್ಕೆ ಆಗಿದ್ದರು. 1972ರಲ್ಲಿ ದೇವರಾಜ ಅರಸು ಅವರ ಸಂಪುಟದಲ್ಲಿ ನೀರಾವರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1994ರಲ್ಲಿ ಬಸವನಗುಡಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆ ಆಗಿದ್ದರು. 1980 ಹಾಗೂ 1984 ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ ಆಗಿದ್ದರು.

2008: ಸೋಮಾಲಿಯಾದ ತೀರದಲ್ಲಿ ಉಪಟಳ ನೀಡುತ್ತಿರುವ ಕಡಲ್ಗಳ್ಳರನ್ನು ಮಣಿಸಲು ಇದೇ ಪ್ರಥಮ ಬಾರಿ ವಿಶ್ವಸಂಸ್ಥೆಯು ಸದಸ್ಯ ರಾಷ್ಟ್ರಗಳಿಗೆ ಅಧಿಕೃತ ಒಪ್ಪಿಗೆ ನೀಡಿತು. ವಿಶ್ವಸಂಸ್ಥೆಯ ಸದಸ್ಯ ದೇಶಗಳು ಭೂದಾಳಿ ಹಾಗೂ ವೈಮಾನಿಕ ದಾಳಿ ನಡೆಸಿ ಸೋಮಾಲಿಯಾದಲ್ಲಿರುವ ಕಡಲ್ಗಳ್ಳರ ನೆಲೆಗಳನ್ನು ನಾಶಪಡಿಸಬಹುದು ಎಂದು ಭದ್ರತಾ ಮಂಡಳಿ ಹೇಳಿತು. ಕಳೆದ 17 ವರ್ಷಗಳಿಂದ ಸೋಮಾಲಿಯಾದಲ್ಲಿ ಸರ್ಕಾರ ನೆಪಮಾತ್ರಕ್ಕೆ ಇದೆ. ದೇಶದ ದಕ್ಷಿಣದ ಬಹುಭಾಗ ಮುಸ್ಲಿಮ್ ಮೂಲಭೂತವಾದಿಗಳ ಹಿಡಿತದಲ್ಲಿದೆ. ಅಂತರ್ಯುದ್ಧದಿಂದ ಜರ್ಝರಿತಗೊಂಡಿರುವ ಈ ದೇಶದಲ್ಲಿ ಶಾಂತಿಪಡೆ ನಿಯೋಜಿಸಲು ಇದೇ ಮೊದಲ ಬಾರಿ ಅಮೆರಿಕ ಒಪ್ಪಿಕೊಂಡಿತು.

2008: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ರಚನೆಗೆ ಶಾಸನಬದ್ಧ ಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ತಿದ್ದುಪಡಿ ಕಾಯ್ದೆ (ಯುಎಪಿಎ)ಗೆ ಬಲ ತುಂಬುವ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆಯಿತು. ಇದರೊಂದಿಗೆ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮಂಡಿಸಿದ ಈ ಎರಡೂ ಮಸೂದೆಗಳಿಗೆ ಸಂಸತ್ತಿನ ಸಮ್ಮತಿಯ ಮುದ್ರೆ ಬಿದ್ದಂತಾಯಿತು.

2008: ಅಮೆರಿಕ ಅಧ್ಯಕ್ಷ ಗದ್ದುಗೆಗೆ ಆಯ್ಕೆಯಾಗಿರುವ ಮೊದಲ ಕಪ್ಪು ವರ್ಣೀಯ ವ್ಯಕ್ತಿ ಎಂದು ಖ್ಯಾತಿ ಗಳಿಸಿರುವ ಬರಾಕ್ ಒಬಾಮ ಅವರನ್ನು ಪ್ರತಿಷ್ಠಿತ ಟೈಮ್ ನಿಯತಕಾಲಿಕ ವರ್ಷದ ವ್ಯಕ್ತಿ ಎಂದು ಆಯ್ಕೆ ಮಾಡಿತು. ಅಧ್ಯಕ್ಷೀಯ ಸ್ಥಾನಕ್ಕೆ ಮತ್ತೋರ್ವ ಅಭ್ಯರ್ಥಿಯಾಗಿದ್ದ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಒಬಾಮ ಈ ಗೌರವಕ್ಕೆ ಪಾತ್ರರಾದರು.

2008: ಅನಿವಾಸಿ ಭಾರತೀಯ ಹಾಗೂ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಬ್ರಿಟನ್ನಿನ ಹೌಸ್ ಆಫ್ ಲಾರ್ಡ್ಸ್‌ ಉಪ ಸಭಾಧ್ಯಕ್ಷ ಸ್ವರಾಜ್ ಪಾಲ್ ಅವರು ಹೌಸ್ ಆಫ್ ಲಾರ್ಡ್ಸ್‌ ಕಲಾಪ ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಮೂಲಕ ಭಾರತೀಯ ಹಾಗೂ ಏಷ್ಯಾ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ ಸಂಸತ್ತಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಂತಹ ಉನ್ನತ ಹುದ್ದೆಯಲ್ಲಿ ಕುಳಿತು ಕಲಾಪ ನಿರ್ವಹಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ಬಿಜೆಪಿ ಮುಖಂಡ ಪ್ರಮೋದ್ ಮಹಾಜನ್ ಅವರನ್ನು ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಸಹೋದರ ಪ್ರವೀಣ್ ಮಹಾಜನ್ ಗೆ ಸ್ಥಳೀಯ ಮುಂಬೈ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಪ್ರವೀಣ್ ವಿರುದ್ಧ ಪೊಲೀಸರು ದಾಖಲಿಸಿದ ಕೊಲೆ ಆರೋಪವನ್ನು ನ್ಯಾಯಾಲಯ ಡಿಸೆಂಬರ್ 17ರಂದು ದೃಢಪಡಿಸಿತ್ತು. ಈದಿನ ಶಿಕ್ಷೆಯನ್ನು ಪ್ರಕಟಿಸಿದ ನ್ಯಾಯಾಧೀಶ ಎಸ್.ಪಿ. ದಾವರೆ ಅವರು ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ ದಂಡ ವಿಧಿಸಿದರು. ಪ್ರಮೋದ್ ಮಹಾಜನ್ ಅವರ ಮನೆಗೆ ಅಕ್ರಮವಾಗಿ ನುಗ್ಗಿದ ಅಪರಾಧಕ್ಕಾಗಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ ದಂಡ ವಿಧಿಸಿದರು. ಕೊಲೆಗಾರನಿಗೆ ಮರಣದಂಡನೆ ವಿಧಿಸಬೇಕು ಎಂದು ಸರ್ಕಾರಿ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಾಧೀಶರು `ಈ ಕೊಲೆ ಅಪರೂಪದಲ್ಲಿ ಅಪರೂಪದ್ದೇನಲ್ಲ. ಆದ್ದರಿಂದ ಮರಣದಂಡನೆಯ ಅಗತ್ಯವಿಲ್ಲ. ಮರಣದಂಡನೆ ವಿಧಿಸುವಷ್ಟು ಕ್ರೂರ ಅಪರಾಧವೂ ಅಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

2007: ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಕೊಳ್ಯೂರು ರಾಮಚಂದ್ರರಾವ್ ಅವರು ಪ್ರಸಕ್ತ ಸಾಲಿನ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು. ಕೊಳ್ಯೂರು ಅವರು ಕರ್ನಾಟಕ ಯಕ್ಷಗಾನ ನಾಟಕ ಸಭಾದ `ಕಾಡಮಲ್ಲಿಗೆ, `ಪಟ್ಟದ ಪದ್ಮಲೆ, ಸೊರ್ಕುದ ಸಿರಿಗಿಂಡೆ ಮೊದಲಾದ ಜನಪ್ರಿಯ ಪ್ರಸಂಗಗಳಲ್ಲಿನ ಮುಖ್ಯ ಸ್ತ್ರಿಪಾತ್ರದ ಮೂಲಕ ರಾಜ್ಯದ ಕರಾವಳಿಯಲ್ಲಿ ಮನೆಮಾತಾಗಿದ್ದವರು. ತನ್ನ ಹನ್ನೆರಡನೇ ವರ್ಷದಲ್ಲಿಪುಂಡುವೇಷದ ಮೂಲಕ ಯಕ್ಷಗಾನ ರಂಗಕ್ಕೆ ಕಾಲಿಟ್ಟು ನಂತರ ಸ್ತ್ರೀ ವೇಷ ಹಾಕತೊಡಗಿದ ಕೊಳ್ಯೂರು ಇತ್ತೀಚಿನವರೆಗೂ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಧರ್ಮಸ್ಥಳ ಮಂಜುನಾಥೇಶ್ವರ ಮೇಳ ಮತ್ತು ಕಟೀಲು ದುರ್ಗಾಪರಮೇಶ್ವರಿ ಮೇಳದಲ್ಲಿಯೂ ಸೇವೆ ಸಲ್ಲಿಸಿದ್ದರು. ಇಲ್ಲಿಯವರೆಗೆ ನಾಲ್ಕು ಬಾರಿ ಬಡುಗುತಿಟ್ಟಿನ ಯಕ್ಷಗಾನ ಕಲಾವಿದರಿಗೆ (ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ ಮತ್ತು ಕುಮಟಾ ಗೋವಿಂದ ನಾಯ್ಕ) ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಬಂದಿದ್ದು ಇದೇ ಮೊದಲ ಬಾರಿ ತೆಂಕುತಿಟ್ಟಿನ ಕಲಾವಿದರಿಗೆ ಈ ಗೌರವ ಸಂದಿದೆ.

2008: ನಕ್ಸಲ್ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ 350ಕ್ಕೂ ಹೆಚ್ಚು ನಕ್ಸಲೀಯ ಕೈದಿಗಳು ಜೈಲು ಸಿಬ್ಬಂದಿ ಮತ್ತು ಇತರ ಕೈದಿಗಳೊಂದಿಗೆ ಘರ್ಷಣೆಗೆ ಇಳಿದ ಘಟನೆ ಬಿಹಾರಿನ ಪಟ್ನಾದ ಬೆವೂರ್ ಜೈಲಿನಲ್ಲಿ ನಡೆಯಿತು. ತಮ್ಮ ಪ್ರತಿಭಟನೆಗೆ ಬೆಂಬಲ ನೀಡುವಂತೆ ನಕ್ಸಲೀಯರು ಇತರ ಕೈದಿಗಳನ್ನು ಪೀಡಿಸಿದರು. ಇದನ್ನು ಭದ್ರತಾ ಸಿಬ್ಬಂದಿ ಆಕ್ಷೇಪಿಸಿದಾಗ ನಕ್ಸಲ್ ಕೈದಿಗಳು ಘರ್ಷಣೆಗೆ ಇಳಿದರು. ಹೆಚ್ಚುವರಿ ಪಡೆಗಳು ಜೈಲು ಆವರಣ ಪ್ರವೇಶಿಸಿದಾಗ ಕ್ರುದ್ಧರಾದ ಧರಣಿ ನಿರತ ನಕ್ಸಲರು ಇಟ್ಟಿಗೆ ಹಾಗೂ ಕಲ್ಲು ತೂರಾಟ ನಡೆಸಿದರು. ಕೊನೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಾಗ ನಕ್ಸಲೀಯರು ಜೈಲಿನ ಆವರಣದಲ್ಲಿದ್ದ ಬುದ್ಧ ಪ್ರತಿಮೆಯ ಎದುರು ಧರಣಿ ನಡೆಸಿದರು. ನಕ್ಸಲ್ ಪೀಡಿತ ಗಯಾ ಜಿಲ್ಲೆಯ ನಗಿನಾ ಮಾಂಝಿ ಎಂಬಾತನನ್ನು ನಕ್ಸಲೀಯ ಚಟುವಟಿಕೆಗಳನ್ನು ನಡೆಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಡಿಸೆಂಬರ್ 14ರಂದು ಆತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

2008: ಶಸ್ತ್ರಚಿಕಿತ್ಸೆಯ ನಂತರ ರೋಗಿಗಳಲ್ಲಿ ನೋವು ಕಂಡುಬರುತ್ತದೆ. ಆ ಸಮಯದಲ್ಲಿ ದೇಹಕ್ಕೆ ಮಾಡುವ ಮಸಾಜಿನಿಂದಾಗಿ ನೋವಿನ ಪ್ರಮಾಣ ಕಡಿಮೆಯಾಗುತ್ತದೆ ಎಂದು ಅಮೆರಿಕದ ಶಸ್ತ್ರಚಿಕಿತ್ಸಾ ತಜ್ಞ ಡಾ.ಡೇನಿಯಲ್ ತಮ್ಮ ಅಧ್ಯಯನದಲ್ಲಿ ತಿಳಿಸಿದರು. ಶಸ್ತ್ರಚಿಕಿತ್ಸಾ ನೋವಿನ ಶಮನಕ್ಕಾಗಿ ರೋಗಿಗಳಿಗೆ ನೀಡುವ ಮಾರ್ಫಿನ್ (ಮತ್ತು ತರುವ ಮದ್ದು) ಔಷಧಿಯಷ್ಟೇ ಮಸಾಜ್ ಪರಿಣಾಮ ಬೀರುತ್ತದೆ ಎಂದೂ ಡೇನಿಯಲ್ ಅಭಿಪ್ರಾಯ.

2007: ಹಿಂದಿ ಮತ್ತು ಕನ್ನಡ ಭಾಷೆಯ ಪ್ರತಿಭಾವಂತ ಲೇಖಕ, ಹೈದರಾಬಾದಿನ ಮೌಲಾನ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಅಧ್ಯಕ್ಷ ಡಾ.ತೇಜಸ್ವಿ ವಿ.ಕಟ್ಟೀಮನಿ ಅವರಿಗೆ ಕೇಂದ್ರ ಸರ್ಕಾರವು ಪ್ರತಿಷ್ಠಿತ `ಗಂಗಾಶರಣ ಸಿಂಹ ಪುರಸ್ಕಾರ' ನೀಡಿ ಗೌರವಿಸಿತು. ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿಫಲಕವನ್ನು ಒಳಗೊಂಡಿದೆ. ರಾಷ್ಟ್ರಪತಿ ಭವನದ ಅಶೋಕಾ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು. ಮಾನವ ಸಂಪನ್ಮೂಲ ಇಲಾಖೆಯಡಿ ಸ್ವಾಯತ್ತ ಸಂಸ್ಥೆಯಾದ ಆಗ್ರಾ ಕೇಂದ್ರೀಯ ಹಿಂದಿ ಸಂಸ್ಥಾನ ಈ ಪ್ರಶಸ್ತಿಯನ್ನು ಪ್ರತಿಷ್ಠಾಪಿಸಿದೆ. ಕೊಪ್ಪಳ ಜಿಲ್ಲೆಯ ಅಳವಂಡಿಯವರಾದ ಡಾ.ಕಟ್ಟೀಮನಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಪ್ರೊಫೆಸರ್ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕನ್ನಡದಲ್ಲಿ ಹದಿನೇಳು ಹಾಗೂ ಹಿಂದಿಯಲ್ಲಿ ಐದು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಪ್ರಸ್ತುತ ಯುಜಿಸಿಯ ಸಂಶೋಧನಾ ಯೋಜನೆಯಡಿ `ಕನ್ನಡ ಮತ್ತು ಹಿಂದಿ ನಡುವಿನ ಕೊಡು-ಕೊಳ್ಳು' ಬಗ್ಗೆ ಅಧ್ಯಯನ ನಿರತರು. 2004ರ ಮಹಾತ್ಮ ಜ್ಯೋತಿಬಾ ಪುಲೆ ಸಮ್ಮಾನ್, 2005ರ ಹಿಂದಿ-ಉರ್ದು ಪ್ರಶಸ್ತಿ ಹಾಗೂ 2006ರ ಲಖನೌದ ಸಾಹಿತ್ಯ ಶಿರೋಮಣಿ ಸಮ್ಮಾನ್ ಗೌರವಕ್ಕೆ ಡಾ.ಕಟ್ಟೀಮನಿ ಪಾತ್ರರಾಗಿದ್ದರು.

2007: ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಹತ್ಯೆ ನಂತರ 1984ರಲ್ಲಿ ದೆಹಲಿಯಲ್ಲಿನಡೆದ ಸಿಖ್ಖರ ಹತ್ಯಾಕಾಂಡ ವಿಚಾರಣೆಗೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಜಗದೀಶ ಟೈಟ್ಲರ್ ಅವರ ವಿರುದ್ಧ ಹೂಡಲಾಗಿರುವ ಪ್ರಕರಣದ ಮರುವಿಚಾರಣೆ ನಡೆಸಬೇಕು ಎಂದು ದೆಹಲಿ ಮೆಟ್ರೋಪಾಲಿಟನ್ ನ್ಯಾಯಾಲಯ ಕೇಂದ್ರೀಯ ತನಿಖಾ ತಂಡಕ್ಕೆ (ಸಿಬಿಐ) ಆದೇಶಿಸಿತು. `ಟೈಟ್ಲರ್ ವಿರುದ್ಧದ ಪ್ರಕರಣವನ್ನು ಮುಚ್ಚಬಹುದು' ಎಂಬ ಸಿಬಿಐ ಅರ್ಜಿಯನ್ನು ತಿರಸ್ಕರಿಸುತ್ತ ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶ ಸಂಜೀವ ಜೈನ್, `ಈ ವಿಷಯದ ಬಗ್ಗೆ ಇನ್ನಷ್ಟು ಕೂಲಂಕಷ ತನಿಖೆ ನಡೆಸಬೇಕಾದ ಅವಶ್ಯಕತೆಯಿದೆ ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ ಹೆಚ್ಚಿನ ವಿಚಾರಣೆ ನಡೆಸಿ ಜನವರಿ 16ರೊಳಗೆ ವರದಿ ಸಲ್ಲಿಸಬೇಕು' ಎಂದು ಸಿಬಿಐಗೆ ಆದೇಶ ನೀಡಿದರು. ಇದಕ್ಕೂ ಮುನ್ನ ಸೆಪ್ಟೆಂಬರ್ 29ರಂದು ತನ್ನ ವರದಿ ಸಲ್ಲಿಸಿದ್ದ ಸಿಬಿಐ, `ಇಂದಿರಾ ಹತ್ಯೆ ನಂತರ ನಡೆದ ಗಲಭೆಯಲ್ಲಿ, ಸಿಖ್ಖರನ್ನು ಕೊಲ್ಲುವಂತೆ ಕೇಂದ್ರದ ಮಾಜಿ ಸಚಿವ ಜಗದೀಶ ಟೈಟ್ಲರ್ ಗುಂಪೊಂದಕ್ಕೆ ಪ್ರಚೋದನೆ ನೀಡುತ್ತಿರುವುದನ್ನು ಕೇಳಿದ್ದಾಗಿ ಜಸ್ಬೀರ್ ಸಿಂಗ್ ಎಂಬುವವರು ಹೇಳಿದ್ದಾರೆ. ಆದರೆ, ಸದ್ಯ ಅವರು ಅಮೆರಿಕದಲ್ಲಿ ನೆಲೆಸಿರುವುದರಿಂದ ಹೇಳಿಕೆ ಪಡೆಯಲಾಗಿಲ್ಲ' ಎಂದು ತಿಳಿಸಿತ್ತು. ಆದರೆ, ಸಾಕ್ಷಿ ಜಸ್ಬೀರ್ ಸಿಂಗ್ ಪರ ವಕೀಲರು, ಟೈಟ್ಲರ್ ವಿರುದ್ಧದ ವಿಚಾರಣೆಯಲ್ಲಿ ಪಾಲ್ಗೊಳ್ಳಲು ತಮ್ಮ ಕಕ್ಷಿದಾರರು ಸಿದ್ಧರಿರುವುದಾಗಿ ಹೇಳಿದ ನಂತರ, ಮರು ವಿಚಾರಣೆ ನಡೆಸುವಂತೆ ನ್ಯಾಯಾಲಯ ಸಿಬಿಐಗೆ ಆದೇಶಿಸಿತು.

2007: ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು ಜನಾಂದೋಲನವನ್ನೇ ರೂಪಿಸಿದ ಕರ್ನಾಟಕ ಸರ್ಕಾರಕ್ಕೆ ವಿಶ್ವಸಂಸ್ಥೆಯ ಪ್ರಶಂಸೆ ಲಭಿಸಿತು. ಕರ್ನಾಟಕದ ಪ್ರಯತ್ನಗಳಿಂದಾಗಿ ವಿಶ್ವಸಂಸ್ಥೆ ನಿಗದಿಪಡಿಸಿದ `ಶತಮಾನದ ಅಭಿವೃದ್ಧಿಯ ಗುರಿ'ಗಳನ್ನು ತಲುಪುವುದು ಕಷ್ಟವಾಗಲಿಕ್ಕಿಲ್ಲ. 2015ರ ವೇಳೆಗೆ ಶೇ 60ರಷ್ಟು ಜನರು ಶುಚಿತ್ವಕ್ಕೆ ಮಹತ್ವ ನೀಡಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿತು.

2007: ಆಡಳಿತಾರೂಢ ಆಫ್ರಿಕಾ ರಾಷ್ಟ್ರೀಯ ಕಾಂಗ್ರೆಸ್ಸಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೇಕಬ್ ಜುಮಾ ಅವರಿಗೆ ಮಾಜಿ ಅಧ್ಯಕ್ಷ ಥಾಬೋ ಎಂಬೆಕಿ ಅಧಿಕಾರ ಹಸ್ತಾಂತರಿಸಿದರು. ಜೇಕಬ್ ಜುಮಾ ಕಾಂಗ್ರೆಸ್ಸಿನ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅನೇಕ ಆರೋಪಗಳನ್ನು ಹೊತ್ತು ಅಧಿಕಾರ ಕಳೆದುಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಹುಮತ ಗಳಿಸಿ, ತಮಗೆ ಅಂಟಿದ್ದ ಕಳಂಕವನ್ನು ತೊಳೆದುಕೊಂಡರು.

2006: ವಿವಾದಾತ್ಮಕ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಮಸೂದೆಗೆ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ವಾಷಿಂಗ್ಟನ್ನಿನಲ್ಲಿ ಸಹಿ ಹಾಕಿದರು. ಮಸೂದೆಗೆ ಬುಷ್ ಸಹಿ ಬೀಳುವುದರೊಂದಿಗೆ ಭಾರತ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಿಂದ ಪರಮಾಣು ಇಂಧನ ಹಾಗೂ ತಂತ್ರಜ್ಞಾನ ಖರೀದಿಸುವ ಹಾದಿ ಸುಗಮಗೊಳ್ಳಲಿದೆ. ಹಲವಾರು ವಿರೋಧಗಳ ನಡುವೆ ಡಿಸೆಂಬರ್ 9ರಂದು ಅಮೆರಿಕದ ಕಾಂಗ್ರೆಸ್ಸಿನಲ್ಲಿ ಬಹುಮತದಿಂದ ಅಂಗೀಕಾರವಾದರೂ ಒಪ್ಪಂದದ ಮಸೂದೆಯು ಪರಮಾಣು ಪೂರೈಕೆಯ 45 ರಾಷ್ಟ್ರಗಳ ಗುಂಪು ಹಾಗೂ ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯಿಂದ ಇನ್ನೂ ಒಪ್ಪಿಗೆ ಪಡೆಯಬೇಕಾಗಿದೆ.

2006: ಹ್ಯಾನಾ -ಬಾರ್ಬರಾ ಕಾರ್ಟೂನ್ ಕಂಪೆನಿಯ ಸಹ ಸ್ಥಾಪಕ ಜೋಸೆಫ್ ಬಾರ್ಬರಾ (95) ನಿಧನರಾದರು. ಇವರು ಸೃಷ್ಟಿಸಿದ ಸ್ಕೂಬಿ-ಡೂ, ಫ್ಲಿಂಟ್ ಸ್ಟೋನ್ಸ್ ಎಂಬ ಕಥಾ ಪಾತ್ರಗಳು ಜನಪ್ರಿಯತೆ ಗಳಿಸಿದ್ದವು. ಬಿಲ್ ಹ್ಯಾನಾ ಅವರ ಜೊತೆಗೆ ಅನಿಮೇಷನ್ ಚಿತ್ರಗಳನ್ನು ನಿಮರ್ಿಸುವಲ್ಲಿ ಮುಂಚೂಣಿಯ ಸ್ಥಾನದಲ್ಲಿದ್ದ ಬಾರ್ಬರಾ `ಅನಿಮೇಷನ್ ದಂತಕಥೆ'ಯಾಗಿದ್ದರು.

2006: ಖ್ಯಾತ ಚಿತ್ರ ಕಲಾವಿದ ವಿಕಾಸ ಭಟ್ಟಾಚಾರ್ಯ (66) ಕೋಲ್ಕತದಲ್ಲಿ ನಿಧನರಾದರು. 1940ರಲ್ಲಿ ಉತ್ತರ ಕೋಲ್ಕತದಲ್ಲಿ ಜನಿಸಿದ್ದ ಭಟ್ಟಾಚಾರ್ಯ ಲಲಿತ ಕಲಾ ಅಕಾಡೆಮಿ ಮತ್ತು ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 1960ರಲ್ಲಿ `ಗೊಂಬೆ' ಚಿತ್ರದ ಸರಣಿಯೊಂದಿಗೆ ಮನೆ ಮಾತಾಗಿದ್ದರು.

2006: ದೇಶವ್ಯಾಪಿ ಕುತೂಹಲ ಕೆರಳಿಸಿದ್ದ ರೂಪದರ್ಶಿ ಜೆಸ್ಸಿಕಾಲಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮನು ಶರ್ಮಾ ಅಪರಾಧಿ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತು. ದಂಡ ಸಂಹಿತೆಯ ವಿಧಿ 302 ಮತ್ತು 201 (ಸಾಕ್ಷ್ಯನಾಶ) ಪ್ರಕಾರ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿತು. ಹರಿಯಾಣದ ಸಚಿವ ವಿನೋದ ಶರ್ಮಾ ಅವರ ಪುತ್ರ ಮನು ಶರ್ಮಾ 1989ರ ಏಪ್ರಿಲಿನಲ್ಲಿ ನಡೆದ ಜೆಸ್ಸಿಕಾಲಾಲ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ.

2006: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಸಂಪತ್ತು ಪ್ರಕರಣದಲ್ಲಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ಬಿಹಾರಿನ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಅವರನ್ನು ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿತು.

2005: ವಿಶ್ವ ವ್ಯಾಪಾರ ಸಂಘಟನೆಯ ಆರನೇ ಸಚಿವ ಮಟ್ಟದ ಸಮ್ಮೇಳನವು ಕೃಷಿ ರಫ್ತು ಸಬ್ಸಿಡಿಯನ್ನು 2013ರ ವೇಳೆಗೆ ಸಂಪೂರ್ಣವಾಗಿ ಕಿತ್ತು ಹಾಕಲು ಒಪ್ಪಿತು. ಈ ದಿನ ಬಿಡುಗಡೆ ಮಾಡಲಾದ ಅಂತಿಮ ಪರಿಷ್ಕತ ಕರಡು ಪ್ರತಿಯಲ್ಲಿ ಇದನ್ನು ತಿಳಿಸಲಾಯಿತು. 149 ರಾಷ್ಟ್ರಗಳ ವಾಣಿಜ್ಯ ಸಚಿವರು ಈ ಅಂತಿಮ ಪರಿಷ್ಕತ ಕರಡು ಪ್ರತಿಗೆ ಒಪ್ಪಿಗೆ ಸೂಚಿಸಿದರು.

2005: ತಮಿಳುನಾಡಿನ ಚೆನ್ನೈಯ ಎಂಜಿಆರ್ ನಗರದಲ್ಲಿ ಪ್ರವಾಹ ಪರಿಹಾರ ಕೂಪನ್ ಪಡೆಯಲು ಸಾಲುಗಟ್ಟಿದ್ದ ಜನರ ಕಾಲ್ತುಳಿತಕ್ಕೆ ಸಿಲುಕಿದ ಪರಿಣಾಮವಾಗಿ 42 ಮಂದಿ ಅಸು ನೀಗಿದರು. 37ಕ್ಕೂ ಹೆಚ್ಚು ಜನ ಗಾಯಗೊಂಡರು. ತಿಂಗಳ ಒಳಗಾಗಿ ಇಲ್ಲಿ ಸಂಭಸಿದ ಎರಡನೇ ಕಾಲ್ತುಳಿತ ಘಟನೆ ಇದು. ನವೆಂಬರ್ 6ರಂದು ಇದೇ ರೀತಿ ಪ್ರವಾಹ ಪರಿಹಾರ ವಿತರಣೆ ಸಂದರ್ಭದಲ್ಲೇ ಕಾಲ್ತುಳಿತ ಸಂಭಸಿ 6 ಜನ ಮೃತರಾಗಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

2005: ಪಿತ್ತಕೋಶದ ಕಾಯಿಲೆಗೆ ಚಿಕಿತ್ಸೆ ಪಡೆಯಲು ದಕ್ಷಿಣ ಕೊರಿಯಾದ ಸೋಲ್ ಗೆ ಹೋಗಿದ್ದ ಕೇಂದ್ರ ಇಂಧನ ಸಚಿವ ಪಿ.ಎಂ. ಸಯೀದ್ (65) ಅಲ್ಲಿನ ಹ್ಯೂಂಡೈ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಓದಿದ್ದ ಸಯೀದ್ ತುಳು, ಕನ್ನಡ ಸೇರಿದಂತೆ 8 ಭಾಷೆ ಬಲ್ಲವರಾಗಿದ್ದರು. ಕಿರಿಯ ವಯಸ್ಸಿನಲ್ಲೇ ಲಕ್ಷದ್ವೀಪದಿಂದ ನಾಲ್ಕನೇ ಲೋಕಸಭೆಗೆ (1967) ಮೊದಲ ಸಲ ಪಕ್ಷೇತರರಾಗಿ ಆಯ್ಕೆಯಾದ ಅವರು 1999ರವರೆಗೆ ಸತತ 10 ಬಾರಿ ಇದೊಂದೇ ಕ್ಷೇತ್ರದಿಂದ ಗೆದ್ದು ಇತಿಹಾಸ ನಿರ್ಮಿಸಿದ್ದರು. 1979-80ರಲ್ಲಿ ಚೌಧುರಿ ಚರಣ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಅವರು ನಂತರ ಕಾಂಗ್ರೆಸ್ ಸೇರಿದರು. 13ನೇ ಲೋಕಸಭೆಯ ಉಪಾಧ್ಯಕ್ಷರಾಗಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಸಲ ಸೋಲು ಅನುಭವಿಸಿದ್ದರು. ಅವರ ಅನುಭವ, ದಕ್ಷತೆ ಪರಿಗಣಿಸಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಇಂಧನ ಖಾತೆ ಕೊಡಲಾಗಿತ್ತು. ನಂತರ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು.

2005: ಶಿವಸೇನೆಯ ಬಂಡಾಯ ನಾಯಕ ರಾಜ್ ಠಾಕ್ರೆ ಅವರು ಪಕ್ಷವನ್ನು ತ್ಯಜಿಸಿ ನೂತನ ರಾಜಕೀಯ ಪಕ್ಷ ರಚಿಸುವುದಾಗಿ ಮುಂಬೈಯಲ್ಲಿ ಪ್ರಕಟಿಸಿದರು.

1980: ಸೋವಿಯತ್ ಒಕ್ಕೂಟದ ಮಾಜಿ ಪ್ರಧಾನಿ ಅಲೆಕ್ಸಿ ಎನ್. ಕೊಸಿಗಿನ್ ಅವರು ಮಾಸ್ಕೋದಲ್ಲಿ ತಮ್ಮ 76ನೇ ವಯಸ್ಸಿನಲ್ಲಿ ನಿಧನರಾದರು.

1958: ಸಾಹಿತಿ ಎಂ. ಕೃಷ್ಣೇ ಗೌಡ ಜನನ.

1945: ಸಾಹಿತಿ ರತ್ನಾಕರ ಶೆಟ್ಟಿ ಜನನ.

1942: ವಚನ ಸಾಹಿತ್ಯದಲ್ಲಿ ಆಳವಾದ ಆಧ್ಯಯನ ನಡೆಸಿ ವೈಜ್ಞಾನಿಕ ದೃಷ್ಟಿಕೋನ ರೂಢಿಸಿಕೊಂಡು ಕೃತಿಗಳನ್ನು ರಚಿಸಿರುವ ಸಾಹಿತಿ ಡಾ. ಪಿ.ವಿ. ನಾರಾಯಣ ಅವರು ಪಿ. ವೆಂಕಪ್ಪಯ್ಯ- ನರಸಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1934: ಸಾಹಿತಿ ರಾಜಲಕ್ಷ್ಮಿ ಎನ್. ರಾವ್ ಜನನ.

1930: ಬಾಂಬೆ ಸೆಂಟ್ರಲ್ ಸ್ಟೇಷನ್ ಆಗಿನ ಬಾಂಬೆ (ಈಗಿನ ಮುಂಬೈ) ಗವರ್ನರ್ ಸರ್ ಫ್ರೆಡರಿಕ್ ಸೈಕ್ಸ್ ಅವರಿಂದ ಉದ್ಘಾಟನೆಗೊಂಡಿತು.

1916: ಮೊದಲನೇ ವಿಶ್ವ ಸಮರ ಸಂದರ್ಭದಲ್ಲಿ ವೆರ್ಡನ್ನಿನಲ್ಲಿ ನಡೆದ ಕದನದಲ್ಲಿ ಫ್ರೆಂಚರು ಜರ್ಮನ್ನರನ್ನು ಸೋಲಿಸಿದರು. ಈ ಕದನ ಫೆಬ್ರುವರಿಯಲ್ಲಿ ಆರಂಭವಾಗಿತ್ತು. ಜರ್ಮನಿ ಮತ್ತು ಮಿತ್ರಪಡೆಗಳಿಗೆ ಸೇರಿದ 7 ಲಕ್ಷಕ್ಕೂ ಹೆಚ್ಚು ಮಂದಿ ಈ ಕದನದಲ್ಲಿ ಅಸು ನೀಗಿದರು.

1899: ಊಧಮ್ಸಿಂಗ್ ಜನ್ಮದಿನ. ಜಲಿಯನ್ ಬಾಗ್ ಹತ್ಯಾಕಾಂಡದ ರೂವಾರಿ ಮೈಕೆಲ್ ಒ'ಡೈಯರನನ್ನು ಕ್ಲೊಲುವ ಮೂಲಕ ಊಧಮ್ಸಿಂಗ್ ಈ ಹತ್ಯಾಕಾಂಡದ ಸೇಡು ತೀರಿಸಿದರು.

1885: ಭಾರತೀಯ ತತ್ವಜ್ಞಾನಿ ಸುರೇಂದ್ರನಾಥ ದಾಸಗುಪ್ತ (1885-1952) ಹುಟ್ಟಿದ ದಿನ. `ಹಿಸ್ಟರಿ ಆಫ್ ಇಂಡಿಯನ್ ಫಿಲಾಸಫಿ' ಗ್ರಂಥದ ಮೂಲಕ ಇವರು ಖ್ಯಾತರಾಗಿದ್ದಾರೆ.

1863: ಆಸ್ಟ್ರಿಯಾದ ಆರ್ಕ್ ಡ್ಯೂಕ್ ಫ್ರಾನ್ಸಿಸ್ ಫರ್ಡಿನಾಂಡ್ (1863-1914) ಹುಟ್ಟಿದ ದಿನ. ಇವರ ಕೊಲೆ ಮೊದಲ ಜಾಗತಿಕ ಸಮರಕ್ಕೆ ತತ್ ಕ್ಷಣದ ಕಾರಣವಾಯಿತು.

1856: ಸರ್. ಜೋಸೆಫ್ ಜಾನ್ ಥಾಮ್ಸನ್ (1856-1940) ಹುಟ್ಟಿದ ದಿನ. ಇಂಗ್ಲಿಷ್ ಭೌತ ತಜ್ಞರಾದ ಇವರು ನ್ಯೂಟ್ರಾನ್ ಸಂಶೋಧನೆಯ ಮೂಲಕ ಪರಮಾಣು ರಚನೆಗೆ ಸಂಬಂಧಿಸಿದ ಜ್ಞಾನವನ್ನು ಹೆಚ್ಚಿಸಲು ನೆರವಾದರು.

ಇಂದಿನ ಇತಿಹಾಸ History Today ಡಿಸೆಂಬರ್ 17


ಇಂದಿನ ಇತಿಹಾಸ

ಡಿಸೆಂಬರ್ 17


ಸತತ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರುವ ಮೂಲಕ ಶೀಲಾ ದೀಕ್ಷಿತ್ ಅವರು ಇಡೀ ದೇಶದಲ್ಲಿಯೇ ಅತ್ಯಂತ ಪ್ರಭಾವಶಾಲಿ ರಾಜಕಾರಣಿಗಳಲ್ಲಿ ತಾವೂ ಒಬ್ಬರು ಎನ್ನುವುದನ್ನು ಸಾಬೀತುಪಡಿಸಿದರು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತೇಜೇಂದರ್ ಖನ್ನಾ ತಮ್ಮ ಅಧಿಕೃತ ನಿವಾಸದಲ್ಲಿ ದೀಕ್ಷಿತ್ ಅವರಿಗೆ ಅಧಿಕಾರ ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಇತರ ಆರು ಸಚಿವರು ದೀಕ್ಷಿತ್ ಜೊತೆಗೆ ಪ್ರಮಾಣವಚನ ಸ್ವೀಕರಿಸಿದರು.

2014: ಲಂಡನ್: ಪ್ರಪಂಚದಾದ್ಯಂತ ಸಮುದ್ರಗಳು ಪ್ಲಾಸ್ಟಿಕ್ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿದ್ದು ಸಾಗರದ ಜಲಚರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಅಧ್ಯಯನವೊಂದು ತಿಳಿಸಿತು.. ಪ್ಲೆಮೌತ್ ವಿಶ್ವವಿದ್ಯಾಲಯ ಮತ್ತು ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ಸಾಗರ ತಳದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಅತೀ ಹೆಚ್ಚಿನ ಪ್ರಮಾಣದಲ್ಲಿ ಜಮೆಯಾಗಿರುವುದು ತಿಳಿದು ಬಂದಿತು. ಸಮುದ್ರದ ತಳದಲ್ಲಿ ಪ್ರತೀ ಚದರ ಕಿ.ಮೀ. ನಲ್ಲಿ ನಾಲ್ಕು ಬಿಲಿಯನ್ ಸೂಕ್ಷ್ಮ ಪ್ಲಾಸ್ಟಿಕ್ ತುಂಡುಗಳು ಜಮೆಯಾಗಿವೆ ಎಂಬ ಆಘಾತಕಾರಿ ಅಂಶ ಬಯಲಾಯಿತು. ಸಮುದ್ರದಲ್ಲಿ ಜಮೆಯಾಗಿರುವ ಪ್ಲಾಸ್ಟಿಕ್ನಿಂದಾಗಿ ಜಲಚರಗಳ ಜೀವನ ಚಕ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದೊಂದು ಜಾಗತಿಕ ಸಮಸ್ಯೆಯಾಗಿದ್ದು, ಇದರಿಂದಾಗಿ ಪ್ರವಾಸೋದ್ಯಮ, ಮೀನುಗಾರಿಕೆ ಮತ್ತು ನೌಕಾಯಾನದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಕಸದ ರೂಪದಲ್ಲಿ ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್ ಸಣ್ಣ ಸಣ್ಣ ಚೂರುಗಳಾಗಿ ವಿಭಜನೆ ಹೊಂದಿ ಸಮುದ್ರದ ತಳದಲ್ಲಿ ಜಮೆಯಾಗುತ್ತಿವೆ. 2-3 ಮಿ.ಮೀ. ಗಾತ್ರದ ತುಂಡುಗಳಾಗಿ ವಿಭಜನೆ ಹೊಂದುವ ಪ್ಲಾಸ್ಟಿಕ್ ಸಾಮಾನ್ಯವಾಗಿ ನೀಲಿ, ಕಪ್ಪು, ಹಸಿರು ಅಥವಾ ಕೆಂಪು ಬಣ್ಣ ಹೊಂದಿರುತ್ತವೆ. ಜತೆಗೆ ಮಾನವ ನಿರ್ವಿುತ ಪಾಲಿಮರ್ಗಳಾದ ಪಾಲಿಯಸ್ಟರ್, ಪಾಲಿಮೈಡ್ಸ್, ಅಸಿಟೇಟ್ ಮತ್ತು ಆಕ್ರಲಿಕ್ ಹೆಚ್ಚಾಗಿ ಸಮುದ್ರದಲ್ಲಿ ಕಂಡು ಬಂದಿದೆ ಎಂದು ತಜ್ಞರು ತಿಳಿಸಿದರು.

2014:  ನವದೆಹಲಿ: ಪಾಕಿಸ್ತಾನದ ಪೇಶಾವರ ನಗರದಲ್ಲಿ 16-12-2014ರ ಮಂಗಳವಾರ ನಡೆದ ಭೀಭತ್ಸ ತಾಲಿಬಾನ್ ದಾಳಿಯಲ್ಲಿ ತಮ್ಮ ಪ್ರಾಣಗಳನ್ನು ಕಳೆದುಕೊಂಡವರ ಸ್ಮರಣೆಗಾಗಿ ಲೋಕಸಭೆಯು ಈದಿನ ಸಂಕ್ಷಿಪ್ತ ಮೌನ ಪ್ರಾರ್ಥನೆ ಸಲ್ಲಿಸಿತು. ಸದನ ಸಮಾವೇಶಗೊಂಡ ತತ್ ಕ್ಷಣವೇ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಮೌನ ಆಚರಿಸುವಂತೆ ಮತ್ತು ದಾಳಿಯನ್ನು ಖಂಡಿಸುವಂತೆ ಸದಸ್ಯರನ್ನು ಕೋರಿದರು. ಪ್ರಧಾನಿ ನರೇಂದ್ರ ಮೋದಿ ಅವರೂ ಈ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದರು. ಪಾಕಿಸ್ತಾನಿ ತಾಲೀಬಾನ್ ಸಂಘಟನೆ ಸಶಸ್ತ್ರಧಾರಿ, ಆತ್ಮಾಹುತಿ ಬಾಂಬ್ ದಾಳಿಕೋರರ ಮೂಲಕ ಪೇಶಾವರ ನಗರದಲ್ಲಿ ಸೇನೆಯ ವತಿಯಿಂದ ನಡೆಯುವ ಶಾಲೆಯಲ್ಲಿ ರಕ್ತಪಾತ ಎಸಗಿ 148ಕ್ಕೂ ಹೆಚ್ಚು ಜನರನ್ನು ಕೊಂದಿತ್ತು. ಮೃತರಲ್ಲಿ 132ಕ್ಕೂ ಹೆಚ್ಚಿನ ಮಂದಿ ಮಕ್ಕಳಾಗಿದ್ದರು. ಅನಧಿಕೃತ ವರದಿಗಳ ಪ್ರಕಾರ ಸತ್ತವರ ಸಂಖ್ಯೆ 160ಕ್ಕೂ ಹೆಚ್ಚು. ಮಕ್ಕಳನ್ನು ಭಯಭೀತರನ್ನಾಗಿ ಮಾಡಲು ಭಯೋತ್ಪಾದಕರು ಅವರ ಎದುರಿನಲ್ಲಿಯೇ ಶಿಕ್ಷಕರೊಬ್ಬರನ್ನು ಸಜೀವವಾಗಿ ಸುಟ್ಟು ಹಾಕಿದ್ದರು.

2014:  ನವದೆಹಲಿ: ಇಂಚೋನ್ ಏಷಿಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸಿದ್ದ ಭಾರತದ ಬಾಕ್ಸರ್ ಸರಿತಾ ದೇವಿ ಅವರನ್ನು ವಿಶ್ವ ಬಾಕ್ಸರ್ ಸಂಸ್ಥೆ ಎಐಬಿಎ ಒಂದು ವರ್ಷದ ಅವಧಿಗೆ ನಿಷೇಧಿಸಿತು. 1000 ಸಿಎಚ್ಎಫ್ (ಸ್ವಿಸ್ ಫ್ರಾಂಕ್) ದಂಡವನ್ನೂ ಆಕೆಗೆ ವಿಧಿಸಲಾಯಿತು. ವಿವಾದಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸರಿತಾ ದೇವಿ ಅವರ ಬಗೆಗಿನ ನಿರ್ಧಾರವನ್ನು ದೀರ್ಘಕಾಲದಿಂದ ನನೆಗುದಿಯಲ್ಲಿ ಇಟ್ಟಿದ್ದ ಎಐಬಿಎ ಕಡೆಗೂ ಗುಮಾನಿಗೆ ತೆರೆ ಎಳೆಯಿತು. ಸರಿತಾ ಪ್ರತಿಭಟನೆ ಸಂದರ್ಭದಲ್ಲಿ ಅವರ ಪಕ್ಷ ವಹಿಸಿದ್ದಕ್ಕಾಗಿ ಭಾರತದ ವಿದೇಶೀ ಕೋಚ್ ಬಿ.ಐ. ಫರ್ನಾಂಡೆಸ್ ಅವರಿಗೂ ಎಐಬಿಎ ಎರಡು ವರ್ಷಗಳ ನಿಷೇಧ ಹೇರಿತು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕೋಚ್ ಜಿ.ಎಚ್. ಸಂಧು ಅವರನ್ನು ಆರೋಪಮುಕ್ತ ಗೊಳಿಸಿತು.

2014: ಮುಂಬೈ: ಭಾರತೀಯ ಬಾಕ್ಸರ್ ಎಲ್. ಸರಿತಾ ದೇವಿ ವೃತ್ತಿಜೀವನ ಅಂತ್ಯಗೊಳ್ಳುವ ರೀತಿಯಲ್ಲಿ ಯಾವುದೇ ಕ್ರಮ ಜರುಗಿಸದಂತೆ ವಿಶ್ವ ಬಾಕ್ಸಿಂಗ್ ಸಂಸ್ಥೆಗೆ (ಎಐಬಿಎ) ಪತ್ರ ಬರೆದಿರುವುದಾಗಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮುಂಬೈಯಲ್ಲಿ ತಿಳಿಸಿದರು. ಮಹಿಳಾ ಬಾಕ್ಸಿಂಗ್ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿನ್, ಸರಿತಾ ದೇವಿ ಮಾಡಿರುವ ಸಣ್ಣ ತಪ್ಪಿಗೆ ವೃತ್ತಿಜೀವನವೇ ಅಂತ್ಯಗೊಳ್ಳಬಾರದು. ಈ ಕಾಳಜಿಯೊಂದಿಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾಗಿ ಹೇಳಿದರು. ಇಂಚೋನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಸರಿತಾದೇವಿ ವಿವಾದಾತ್ಮಕ ನಿರ್ಣಯವನ್ನು ಪ್ರತಿಭಟಿಸಿ, ಆಕ್ರೋಶದಿಂದ ಸ್ಥಳದಲ್ಲೇ ತಮ್ಮ ಪಾಲಿಗೆ ಸಂದ ಕಂಚಿನ ಪದಕ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದರು. ಇದು ಎಐಬಿಎ ಕಣ್ಣು ಕೆಂಪಗಾಗಿಸಿತ್ತು. ನಿಯಮದಂತೆ ಅಂಪೈರ್ ನಿರ್ಣಯವನ್ನು ಗೌರವಿಸಬೇಕಿದ್ದ ಸರಿತಾ ಟೀಕೆಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸರಿತಾಗೆ ಎಐಬಿಎ ಒಂದು ವರ್ಷ ನಿಷೇಧ ಮತ್ತು ಸಾವಿರ ರೂ. ದಂಡ ವಿಧಿಸಿತ್ತು.  ಸರಿತಾದೇವಿಗೆ ಒಂದು ವರ್ಷ ನಿಷೇಧ ಹೇರಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಕೂಡಾ ನಿಷೇಧ ತೆರವುಗೊಳಿಸಲು ಪರಿಶೀಲಿಸುವಂತೆ ಮನವಿ ಮಾಡುವುದಾಗಿ ಹೇಳಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ರೀಡಾ ಸಚಿವ ಸರನಾನಂದ ಸೊನೊವಾಲ್, ನಿಷೇಧದಿಂದ ಸರಿತಾದೇವಿ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಭಾವಂಥ ಬಾಕ್ಸರ್ ಇದರಿಂದ ಆತ್ಮವಿಶ್ವಾಸ ಕಳೆದುಕೊಳ್ಳಬಹುದು. ಜೊತೆಗೆ ಮಹಿಳಾ ಬಾಕ್ಸಿಂಗ್ ಕ್ಷೇತ್ರದ ಪ್ರಗತಿ ಮೇಲೂ ಪರಿಣಾಮ ಬೀರಲಿದೆ. ಕಾರಣ ನಿಷೇಧ ತೆರವು ಮಾಡಲು ಪರಿಶೀಲಿಸುವಂತೆ ಮನವಿ ಮಾಡುವುದಾಗಿ ಹೇಳಿದರು

2014: ನವದೆಹಲಿ: ತೈಲ ಕಂಪೆನಿಗಳು ಇಂಧನ ಪೂರೈಕೆಗೆ ನಿರಾಕರಿಸಿದ್ದನ್ನು ಅನುಸರಿಸಿ ಕಡಿಮೆ ಬಜೆಟ್ ವಾಹಕ ಸ್ಪೈಸ್ ಜೆಟ್ ಕಾರ್ಯಾಚರಣೆ ಈದಿನ ಬೆಳಗ್ಗೆಯಿಂದ ಸ್ಥಗಿತಗೊಂಡರೂ ಸಂಜೆ 4 ಗಂಟೆ ವೇಳೆಗೆ ಸಂಚಾರ ಪುನರಾರಂಭಿಸಿತು.  ಸ್ಪೈಸ್ ಜೆಟ್ ಹೇಳಿಕೆ ಪ್ರಕಾರ ಸಂಸ್ಥೆಗೆ ಇಂಧನ ಸರಬರಾಜಿಗೆ ತೈಲ ಕಂಪೆನಿಗಳು ನಿರಾಕರಿಸಿದ ಬಳಿಕ ಒಂದೇ ಒಂದು ಸ್ಪೈಸ್ ಜೆಟ್ ವಿಮಾನವೂ ಸಂಚರಿಸಲಿಲ್ಲ. ಈ ಮಧ್ಯೆ, ಬಿಕ್ಕಟ್ಟಿನಿಂದ ಪಾರಾಗುವ ಸಲುವಾಗಿ ಸ್ಪೈಸ್ ಜೆಟ್ಗೆ 600 ಕೋಟಿ ರೂಪಾಯಿಗಳಷ್ಟು ಕೆಲಸ ಬಂಡವಾಳ ಸಾಲ ಒದಗಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ಬ್ಯಾಂಕುಗಳಿಗೆ ಸೂಚಿಸಿತು. ಪ್ರವರ್ತಕರಿಂದ ಖಚಿತ ಸಾಲದ ಭರವಸೆ ಬಂದ ಬಳಿಕ ಸ್ಪೈಸ್ ಜೆಟ್ಗೆ ಈ ತಾತ್ಕಾಲಿಕ ಪರಿಹಾರ ಸಿಕ್ಕಿತು. ಸಚಿವಾಲಯದಿಂದ ಈ ಪ್ರಕಟಣೆ ಹೊರಬೀಳುವುದಕ್ಕೆ ಮುನ್ನ ಬ್ಯಾಂಕುಗಳು ಸಾಲ ನೀಡುವ ಸಾಧ್ಯತೆಗಳಿಲ್ಲ ಎಂದು ಪ್ರವರ್ತಕರು ಭ್ರಮನಿರಸನಗೊಂಡಿದ್ದರು. ಕಿಂಗ್ಫಿಶರ್ ಏರ್ಲೈನ್ಸ್ ವಿಮಾನಯಾನ ಸಂಸ್ಥೆ ನೆಲಕಚ್ಚಿದ ಅನುಭವದ ಹಿನ್ನೆಲೆಯಲ್ಲಿ ಸ್ಪೈಸ್ಜೆಟ್ಗೆ ಸಾಲರೂಪದ ನೆರವು ನೀಡಲು ಬ್ಯಾಂಕುಗಳು ಹಿಂದೇಟು ಹಾಕಿದ್ದವು. 'ಹಾಲಿ ಪರಿಸ್ಥಿತಿ ಮುಂದುವರೆದರೆ, ಏರ್ಲೈನ್ಗೆ ದಯಾಮರಣ ನೀಡುವುದರ ಹೊರತು ಬೇರೆ ಪರ್ಯಾಯವೇ ಇಲ್ಲ' ಎಂದು ಸನ್ಗ್ರೂಪ್ನ ಎಕ್ಸಿಕ್ಯೂಟಿವ್ ಒಬ್ಬರು ಹೇಳಿದ್ದರು. ಆದರೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಸ್ಪೈಸ್ ಜೆಟ್ಗೆ ಎರಡು ವಾರಗಳ ಸಾಲ ಸವಲತ್ತು ಆಧಾರದಲ್ಲಿ ಇಂಧನ ಸರಬರಾಜು ಮಾಡುವ ಬಗ್ಗೆ ಸಂಜೆವರೆಗೂ ನಿರ್ಧಾರ ಕೈಗೊಂಡಿರಲಿಲ್ಲ. 'ವಿಮಾನಗಳ ಹಾರಾಟ ಶೀಘ್ರದಲ್ಲೇ ಮಾಮೂಲಿಗೆ ಬರುವ ನಿರೀಕ್ಷೆ ಇದೆ ಎಂದು ಏರ್ಲೈನ್ ವಕ್ತಾರರು ತಮ್ಮನ್ನು ಸಂರ್ಪಸಿದ ಮಾಧ್ಯಮಗಳಿಗೆ ತಿಳಿಸಿದರು. ನಷ್ಟದೆಡೆಗೆ ಹೊರಳಿದ ವಿಮಾನಯಾನ ಕಂಪೆನಿಯ ನೆರವಿಗೆ ಬಂದ ನಾಗರಿಕ ವಿಮಾನಯಾನ ಸಚಿವಾಲಯವು 'ಏರ್ ಲೈನ್ಸ್ ರಕ್ಷಣೆ ಸಲುವಾಗಿ ಸ್ಪೈಸ್ ಜೆಟ್ಗೆ 15 ದಿನಗಳ ಸಾಲ ಸವಲತ್ತು ಕಲ್ಪಿಸುವಂತೆ ತೈಲ ಕಂಪೆನಿಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರಿಗೆ  ಮನವಿ ಮಾಡುವುದಾಗಿ ಭರವಸೆ ನೀಡಿತ್ತು.

2014: ಆಗ್ರಾ: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಜನವರಿ 26ರ ಭಾರತ ಭೇಟಿಗೆ ಮುಂಚಿತವಾಗಿಯೇ ಅಮೆರಿಕದ ಭದ್ರತಾ ಸಲಹೆಗಾರರು, ಉಭಯ ಸದನಗಳ ಪ್ರತಿನಿಧಿಗಳು ಮತ್ತು ಪತ್ರಕರ್ತರನ್ನು ಒಳಗೊಂಡ 40 ಮಂದಿಯ ತಂಡವೊಂದು ಆಗ್ರಾದ ತಾಜ್ ಮಹಲ್ಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಹಾಗೂ ಸಾಮಾನು ಸರಂಜಾಮು ಇಳಿಸುವ ಸ್ಥಳ ಪರಿಶೀಲನೆ ನಡೆಸಿತು. ಅಮೆರಿಕದ ಅಧ್ಯಕ್ಷರು ಆಗ್ರಾದಲ್ಲಿನ ತಾಜ್ವುಹಲ್ಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದರು. ಏನಿದ್ದರೂ ಆಗ್ರಾ ಭೇಟಿಯ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ ಎಂದು ಅವರು ನುಡಿದರು. ಅಮೆರಿಕದ ಭದ್ರತಾ ತಂಡ 16-12-2014ರಂದು ಮಧ್ಯಾಹ್ನ ಖೇರಿಯಾ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭಾರತೀಯ ಪುರಾತತ್ವ ಸಮೀಕ್ಷಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತು.

2014: ನವದೆಹಲಿ: ಪಾಕಿಸ್ತಾನದ ಪೇಶಾವರದಲ್ಲಿ ಶಾಲೆಯ ಮೇಲೆ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ಎಲ್ಲ ಕಡೆ ಅದರಲ್ಲೂ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಭದ್ರತೆ ಬಿಗಿಗೊಳಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚನೆ ನೀಡಿತು. 'ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸಲಹಾತ್ಮಕ ನಿರ್ದೇಶನ ನೀಡಲಾಗಿದೆ' ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿನ ಹೊರಗೆ ಪತ್ರಕರ್ತರ ಜೊತೆಗೆ ಮಾತನಾಡುತ್ತಾ ಹೇಳಿದರು. ಪೇಶಾವರ ಶಾಲೆಯ ಮೇಲೆ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ರಾಷ್ಟ್ರದ ಶಾಲೆಗಳಲ್ಲಿ ಭದ್ರತಾ ಖಾತರಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬುದಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

2014: ನವದೆಹಲಿ: ಭಾರತದಲ್ಲಿ 5,200 ಪಾಕಿಸ್ತಾನೀಯರು ನಿಗದಿತ ಅವಧಿ ಮೀರಿದ ವಾಸ್ತವ್ಯ ಹೊಂದಿದವರಾಗಿದ್ದಾರೆ ಎಂದು ಸರ್ಕಾರ ಅಧಿಕೃತವಾಗಿ ತಿಳಿಸಿತು. ದಾಖಲೆಗಳ ಸಹಿತ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನಿಗಳಲ್ಲಿ ಇಷ್ಟು ಮಂದಿ ಅವಧಿ ಮುಗಿದರೂ ಇನ್ನೂ ವಾಸವಿದ್ದಾರೆ ಎನ್ನುವುದನ್ನು ರಾಜ್ಯಸಭೆಗೆ ಲಿಖಿತವಾಗಿ ತಿಳಿಸಿದ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರೆಣ್ ರಿಜಿಜು, 2014, ಜೂನ್ನಲ್ಲಿ ದಾಖಲಿಸಲಾದ ಮಾಹಿತಿಯಂತೆ ದೇಶದಲ್ಲಿ 5,200 ಪಾಕಿಸ್ತಾನೀಯರು ಅನಧಿಕೃತವಾಗಿ ವಾಸವಿದ್ದಾರೆ ಎನ್ನುವ ಮಾಹಿತಿ ನೀಡಿದರು. ಪಾಕಿಸ್ತಾನದಲ್ಲಿ ನಡೆದ ವಿಶ್ವವನ್ನೇ ನಡುಗಿಸಿದ ಉಗ್ರರ ಅಟ್ಟಹಾಸದ ಹಿನ್ನೆಲೆಯಲ್ಲಿ ಮತ್ತು ಸಿಡ್ನಿಯಲ್ಲಿ ನಡೆದ ಘಟನೆಯ ಬಳಿಕ ಭಾರತದಲ್ಲೂ ಇದೇ ಮಾದರಿಯಲ್ಲೇ ದಾಳಿ ನಡೆಸುತ್ತೇವೆಂದು ಉಗ್ರರು ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಈಗ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಾರಣ ಭಾರತದಲ್ಲಿರುವ ಪಾಕಿಸ್ತಾನೀಯರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿದವು.

2014: ಪೇಶಾವರ: ಪೇಶಾವರ ನಗರದ ಸೇನಾ ಶಾಲೆಯ ಮೇಲೆ ದಾಳಿ ನಡೆಸಿದ ತಾಲಿಬಾನ್ ಭಯೋತ್ಪಾದಕರು ಬಹುತೇಕ ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ಒಂದು ದಿನದ ಬಳಿಕ ಪೇಶಾವರದಲ್ಲಿ ಮಾತನಾಡಿದ ಪಾಕಿಸ್ತಾನಿ ಪ್ರಧಾನಿ ನವಾಜ್ ಷರೀಫ್ ಅವರು ಭಯೋತ್ಪಾದನಾ ಪ್ರಕರಣಗಳಲ್ಲಿ ಮರಣ ದಂಡನೆ ಮೇಲಿನ ನಿಷೇಧವನ್ನು ರದ್ದು ಪಡಿಸಲಾಗುವುದು ಎಂದು ಘೋಷಿಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ರಾಷ್ಟ್ರವು ಏಕತೆಯಿಂದಿದೆ ಎಂದು ಅವರು ನುಡಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ಎಲ್ಲಾ ಪಕ್ಷಗಳೂ ಒಂದಾಗಿವೆ ಎಂದು ನವಾಜ್ ಷರೀಫ್ ತಿಳಿಸಿದರು. ಮಕ್ಕಳ ಮಾರಣಹೋಮ ಘಟನೆಯ ಹಿನ್ನೆಲೆಯಲ್ಲಿ ಇಲ್ಲಿನ ಗವರ್ನರ್ ಭವನದಲ್ಲಿ ಪ್ರಧಾನಿ ಕರೆದಿದ್ದ ಸಭೆಯಲ್ಲಿ ಎಲ್ಲಾ ಪಕ್ಷಗಳ ಧುರೀಣರೂ ಪಾಲ್ಗೊಂಡಿದ್ದರು. 'ಪಾಕಿಸ್ತಾನದ ಇತಿಹಾಸದಲ್ಲಿ ಇದು ಅತ್ಯಂತ ಬೇಸರದ ದಿನ' ಎಂದು ಸಭೆಯಲ್ಲಿ ಪಾಲ್ಗೊಂಡದ್ದಕ್ಕಾಗಿ ಎಲ್ಲಾ ಪಕ್ಷಗಳ ಧುರೀಣರಿಗೆ ಧನ್ಯವಾದ ಹೇಳುತ್ತಾ ಷರೀಫ್ ನುಡಿದರು. 'ನಮ್ಮ ಮಕ್ಕಳ ಬಲಿದಾನ ವ್ಯರ್ಥವಾಗಲು ನಾವು ಬಿಡಬಾರದು. ಪೇಶಾವರ ಮುತ್ತಿಗೆ ಕ್ಷಣಗಳ ಎಲ್ಲಾ ಚಿತ್ರಗಳನ್ನೂ ನಾವು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಮತ್ತು ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಹೆಚ್ಚಿನ ಹುಮ್ಮಸ್ಸಿನೊಂದಿಗೆ ಸಾಗಬೇಕು. ತಾಲಿಬಾನ್ ಜೊತೆಗಿನ ಮಾತುಕತೆಯಿಂದ ಯಾವ ಪ್ರಯೋಜನವೂ ಆಗಿಲ್ಲ' ಎಂದು ಅವರು ಹೇಳಿದರು. ಪಾಕಿಸ್ತಾನವು ದೀರ್ಘಕಾಲದಿಂದ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿದೆ. ಈ ಹೋರಾಟವು ನಮ್ಮ ಆರ್ಥಿಕತೆ ಮೇಲೂ ಪರಿಣಾಮ ಬೀರಿದೆ. ಮಕ್ಕಳ ಮೇಲಿನ ದಾಳೀಯ ಭೀಕರ ಘಟನೆ ನಮ್ಮ ಕಣ್ಣು ತೆರೆಸಬೇಕು. ನಾವು ಝುರ್ಬ್-ಇ-ಅಝರ್  ಕಾರ್ಯಾಚರಣೆ ಮೂಲಕ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದೇವೆ. ನಾವು ಯಶಸ್ವಿಯಾಗುತ್ತಿದ್ದೇವೆ. ಈ ಹಾವಳಿಯನ್ನು ಮಟ್ಟಹಾಕಲು ನಾವು ಇನ್ನೂ ಸ್ವಲ್ಪ ಶ್ರಮ ಹಾಕಬೇಕು ಎಂದು ಷರೀಫ್ ನುಡಿದರು. ಭಯೋತ್ಪಾದನೆ ಪ್ರಕರಣಗಳಲ್ಲಿ ಮರಣದಂಡನೆ ಮೇಲೆ ವಿಧಿಲಾಗಿರುವ ನಿಷೇಧವನ್ನು ರದ್ದು ಪಡಿಸಲಾಗುವುದು. ಇದರಿಂದ ಮರಣದಂಡನೆಗೆ ಗುರಿಯಾಗಿರುವ ಭಯೋತ್ಪಾದಕರನ್ನು ಗಲ್ಲಿಗೇರಿಸಲು ಅನುಕೂಲವಾಗುವುದು ಎಂದು ಅವರು ಹೇಳಿದರು.

2014: ಬಾಗಲಕೋಟೆ: ಕರ್ನಾಟಕದ ನಾರಾಯಣಪುರ ಜಲಾಶಯ ಹಿನ್ನೀರಿನಲ್ಲಿ ತೆಪ್ಪ ಮುಳುಗಿ 6 ಜನರು ನಾಪತ್ತೆಯಾದರು. ಇಬ್ಬರು ಈಜಿ ದಡ ಸೇರಿ ಅಪಾಯದಿಂದ ಪಾರಾದರು. ಕೌಜಗನೂರ ಗ್ರಾಮದ ಒಂದೇ ಕುಟುಂಬಕ್ಕೆ ಸೇರಿದ ಮಲ್ಲವ್ವ ಯಲ್ಲಪ್ಪ ಮಡಿವಾಳರ(38), ಸಾವಿತ್ರಿ ಯಮನಪ್ಪ ಮಡಿವಾಳರ(6), ಸಚಿನ್ ಯಮನಪ್ಪ ಮಡಿವಾಳರ(5), ಮಂಜುಳಾ ಭೀಮಪ್ಪ ಮಡಿವಾಳರ(18), ಹುಲಿಗೆವ್ವ ಮಹಾಂತೇಶ ಮಡಿವಾಳರ(16) ಹಾಗೂ ಅಮರವಾಡಿ ಗ್ರಾಮದ ನಾವಿಕ ಕರಿಯಪ್ಪ ಪರಸಪ್ಪ ಅಂಬಿಗೇರ(29) ಹಿನ್ನೀರಿನಲ್ಲಿ ನಾಪತ್ತೆ ಆದವರು. ಇದೇ ಗ್ರಾಮದ ಮಹಾಂತೇಶ ಮಡಿವಾಳರ(20) ಹಾಗೂ ರೇಣುಕಾ ಮಡಿವಾಳರ(35) ಹಿನ್ನೀರಿನಲ್ಲಿ ಈಜಿ ಇಂದವಾರ ದಡ ತಲುಪಿದರು. ಹುನಗುಂದ ತಾಲೂಕಿನ ಕೌಜಗನೂರ ಗ್ರಾಮದಿಂದ ಅಮರವಾಡಿ ಗ್ರಾಮಕ್ಕೆ ಮದುವೆಗೆಂದು ಮಡಿವಾಳ ಕುಟುಂಬದ ಏಳು ಜನರು ತೆರಳಿದ್ದರು. ತಮ್ಮೂರಿನಿಂದ ಇಂದವಾರ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಸಾಗಿ ಅಲ್ಲಿಂದ ತೆಪ್ಪದ ಮೂಲಕ ಅಮರವಾಡಿಗೆ ಹೋಗಿದ್ದರು. ಮದುವೆ ಮುಗಿಸಿ ಬರುತ್ತಿದ್ದಾಗ ಭಾರ ಹೆಚ್ಚಾಗಿ ತೆಪ್ಪ ಮುಳುಗಿ ಈ ದುರ್ಘಟನೆ ಸಂಭವಿಸಿತು.

2014:ಪೇಶಾವರ: ಸೇನಾ ಆಡಳಿತದ ಶಾಲೆಯ ಮೇಲೆ ನಡೆದ ಉಗ್ರರ ದಾಳಿಯಿಂದ ತತ್ತರಿಸಿದ ಪಾಕಿಸ್ತಾನದಲ್ಲಿ ಈದಿನ ಸಂಜೆ ಇನ್ನೆರಡು ಭಾರಿ ಪ್ರಮಾಣದ ಬಾಂಬ್ ಸ್ಪೋಟಗಳು ಸಂಭವಿಸಿದವು. ಪೇಶಾವರ ಸಮೀಪದ ದೇರಾ ಇಸ್ಮೇಲ್ ಖಾನ್ನಲ್ಲಿರುವ ಬಾಲಕಿಯರ ಕಾಲೇಜು ಬಳಿ ಘಟನೆ ಸಂಭವಿಸಿತು. ಸ್ಪೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದವು.

2008: ಮುಂಬೈ ಮೇಲಿನ ಉಗ್ರರ ದಾಳಿ ಹಿನ್ನೆಲೆಯಲ್ಲಿ ಸರ್ಕಾರ ಮಂಡಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ರಚನೆಯ ಮಸೂದೆ (ಎನ್‌ಐಎ) ಮತ್ತು ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ತಿದ್ದುಪಡಿ ಮಸೂದೆಗಗಳಿಗೆ (ಯುಎಪಿಎ) ಲೋಕಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ಲಭಿಸಿತು. ಇದಕ್ಕೂ ಮುನ್ನ, ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಈ ಮಸೂದೆಗಳನ್ನು ಒಮ್ಮತದಿಂದ ಅಂಗೀಕರಿಸುವಂತೆ ಎಲ್ಲ ಲೋಕಸಭಾ ಸದಸ್ಯರಿಗೂ ಕೈಜೋಡಿಸಿ ಮನವಿ ಮಾಡಿದರು. ವಿವಿಧ ರಾಜಕೀಯ ಪಕ್ಷಗಳು ಹಾಗೂ ಕಾನೂನು ತಜ್ಞರ ಸಲಹೆಗಳನ್ನು ಪಡೆದೇ ಈ ಮಸೂದೆಗಳನ್ನು ಮಂಡಿಸಲಾಗಿದೆ ಎಂದು ಅವರು ಸದನಕ್ಕೆ ಸ್ಪಷ್ಟಪಡಿಸಿದ್ದರು. ಈ ಮಸೂದೆಗಳಲ್ಲಿರುವ ಕೆಲವೊಂದು ಅನುಕೂಲಗಳ ಕುರಿತು ಮಾತನಾಡಿದ ಅವರು, 'ಇದು ಒಕ್ಕೂಟ ವ್ಯವಸ್ಥೆ ವಿರೋಧಿಸುವುದಿಲ್ಲ, ಭಯೋತ್ಪಾದನಾ ಪ್ರಕರಣಗಳ ತನಿಖೆ ನಡೆಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನೂ ಗೌರವಿಸುತ್ತದೆ' ಎಂದು ಹೇಳಿದ್ದರು.

2008: ಬ್ರಿಟಿಷ್ ನಿರ್ದೇಶಕ ಡ್ಯಾನಿ ಬಾಯ್ಲೆ ಅವರ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರಕ್ಕೆ ನೀಡಿದ ಸಂಗೀತಕ್ಕಾಗಿ ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದರು. ಈ ಚಿತ್ರಕ್ಕೆ ಒದಗಿಸಿದ ಅತ್ಯುತ್ತಮ ಸಂಗೀತ ಸಂಯೋಜನೆಗಾಗಿ ಅಂತಾರಾಷ್ಟ್ರೀಯ ಪ್ರೆಸ್ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ರೆಹಮಾನ್ ಬಾಚಿಕೊಂಡರು. ಇದೇ ಚಿತ್ರಕ್ಕಾಗಿ ಬಾಯೆಗ್ಲೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಯಿತು. ಅತ್ಯುತ್ತಮ ಕಥಾ ರೂಪಕದ ಪ್ರಶಸ್ತಿಯೂ ಚಿತ್ರದ ಪಾಲಾಯಿತು. ಮುಂಬೈಯ ಕೊಳೆಗೇರಿಯ 18 ವರ್ಷದ ಅನಾಥ ಗೌತಮ ಬಾಲಕ ಗೇಮ್ ಷೋ ಒಂದರಲ್ಲಿ 2 ಕೋಟಿ ರೂ. ಬಹುಮಾನ ಗೆದ್ದು ರಾತ್ರೋರಾತ್ರಿ ಸಿರಿವಂತನಾಗುವ ಮನಮಿಡಿಯುವ ಕಥೆಯನ್ನು ಈ ಚಿತ್ರ ಹೊಂದಿದೆ.

2008: ಸತತ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರುವ ಮೂಲಕ ಶೀಲಾ ದೀಕ್ಷಿತ್ ಅವರು ಇಡೀ ದೇಶದಲ್ಲಿಯೇ ಅತ್ಯಂತ ಪ್ರಭಾವಶಾಲಿ ರಾಜಕಾರಣಿಗಳಲ್ಲಿ ತಾವೂ ಒಬ್ಬರು ಎನ್ನುವುದನ್ನು ಸಾಬೀತುಪಡಿಸಿದರು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತೇಜೇಂದರ್ ಖನ್ನಾ ತಮ್ಮ ಅಧಿಕೃತ ನಿವಾಸದಲ್ಲಿ ದೀಕ್ಷಿತ್ ಅವರಿಗೆ ಅಧಿಕಾರ ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಇತರ ಆರು ಸಚಿವರು ದೀಕ್ಷಿತ್ ಜೊತೆಗೆ ಪ್ರಮಾಣವಚನ ಸ್ವೀಕರಿಸಿದರು.

2008: ಸೆಪ್ಟೆಂಬರ್ 13ರಂದು ದೆಹಲಿಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನವದೆಹಲಿ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರು. ಶಂಕಿತ 'ಇಂಡಿಯನ್ ಮುಜಾಹಿದ್ದೀನ್' ಸಂಘಟನೆಯ ಐವರು ಉಗ್ರರನ್ನು ಆರೋಪಪಟ್ಟಿಯಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಯಿತು. ಸೆಪ್ಟೆಂಬರ್ 13ರಂದು ದೆಹಲಿಯ ಕರೋಲ್ ಬಾಗ್‌ನಲ್ಲಿ ಸಂಭವಿಸಿದ ಈ ಬಾಂಬ್ ಸ್ಫೋಟದಲ್ಲಿ ಒಟ್ಟು 26 ಜನರು ಮೃತರಾಗಿದ್ದರು.

2008: ಕನ್ನಡಿಗ ಎಚ್.ಎಲ್.ದತ್ತು ಸೇರಿದಂತೆ ಅಶೋಕ ಕುಮಾರ ಗಂಗೂಲಿ ಮತ್ತು, ಆರ್.ಎಂ.ಲೋಧಾ ಅವರು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾಗಿ ನವದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂವರೂ ನ್ಯಾಯಮೂರ್ತಿಗಳ ನೇಮಕದಲ್ಲಿ ಸೇವಾ ಹಿರಿತನ ನಿರ್ಲಕ್ಷಿಸಲಾಗಿದೆ ಎನ್ನುವ ಕೇಂದ್ರ ಸರ್ಕಾರದ ಅಕ್ಷೇಪಗಳನ್ನು ಸುಪ್ರೀಂಕೋರ್ಟ್ ಕಡೆಗಣಿಸಿತು. ಸರಳ ಸಮಾರಂಭವೊಂದರಲ್ಲಿ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರು ಪ್ರಮಾಣ ವಚನ ಬೋಧಿಸಿದರು. ಸುಪ್ರೀಂಕೋರ್ಟಿನಲ್ಲಿ 26 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಸದ್ಯಕ್ಕೆ 24 ಹುದ್ದೆಗಳನ್ನು ಭರ್ತಿ ಮಾಡಿದಂತಾಯಿತು.

2008: ಪ್ರಸಕ್ತ ವರ್ಷದ ವಾರ್ಷಿಕ ತೀರ್ಥ ಯಾತ್ರೆಯ ಮೊದಲ ತಿಂಗಳಾಂತ್ಯದಲ್ಲೇ ಕೇರಳದ ಖ್ಯಾತ ಶಬರಿಮಲೆ ದೇವಸ್ಥಾನದ ಆದಾಯ 51 ಕೋಟಿ ರೂಪಾಯಿಯ ಗಡಿ ದಾಟಿತು. ರಾಜ್ಯದ ಮುಜರಾಯಿ ಇಲಾಖೆ ಸಚಿವ ಜಿ. ಸುಧಾಕರನ್ ಅವರು ಈ ದಾಖಲೆ ಗಳಿಕೆಗೆ ಹೆಚ್ಚಿದ ಭಕ್ತಾದಿಗಳ ಸಂಖ್ಯೆಯೆ ಕಾರಣ ಎಂದು ಹೇಳಿದರು.

2008: ಭಾರತೀಯ ಮೂಲದ ಕಫಿಲ್ ಅಹ್ಮದ್ ಜೊತೆ ಬರ್ಸೊಲ್ ವಿಮಾನ ನಿಲ್ದಾಣ ಉಡಾಯಿಸುವ ಸಂಚು ರೂಪಿಸಿದ್ದ ಇರಾಕ್ ವೈದ್ಯ ಬಿಲಾಲ್ ಅಬ್ದುಲ್ಲಾಗೆ ಲಂಡನ್ ನ್ಯಾಯಾಲಯ 32 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ವೂಲ್‌ವಿಚ್ ಕ್ರೌನ್ ನ್ಯಾಯಾಲಯದಲ್ಲಿ ಒಂಬತ್ತು ವಾರಗಳ ಕಾಲ ಬಿಲಾಲ್ ಅಬ್ದುಲ್ಲಾ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಆತ ತಪ್ಪಿತಸ್ಥ ಎಂದು ಘೋಷಿಸಿದ್ದರು. ಸಾಮೂಹಿಕ ಕೊಲೆ ಹಾಗೂ ಸ್ಫೋಟದ ಸಂಚು ರೂಪಿಸಿದ ಆರೋಪ ಬಿಲಾಲ್ ಮೇಲಿತ್ತು. ಈದಿನ ಆತನಿಗೆ ಶಿಕ್ಷೆಯ ಪ್ರಮಾಣ ಘೋಷಿಸಲಾಯಿತು. ಅಬ್ದುಲ್ಲಾ ಧಾರ್ಮಿಕ ಮೂಲಭೂತವಾದಿ ಹಾಗೂ ಮತಾಂಧ ಎಂದು ನ್ಯಾಯಾಧೀಶ ಮೆಕಾಯ್ ಹೇಳಿದರು. 2007ರ ಜೂನ್ 30ರಂದು ಬಿಲಾಲ್ ಅಬ್ದುಲ್ಲಾ ಹಾಗೂ ಕಫೀಲ್ ಅಹ್ಮದ್ ಬರ್ಸೋಲ್ ವಿಮಾನ ನಿಲ್ದಾಣಕ್ಕೆ ಸ್ಫೋಟಕ ತುಂಬಿದ್ದ ಜೀಪ್ ನುಗ್ಗಿಸಿ ನಿಲ್ದಾಣ ಉಡಾಯಿಸಲು ಯತ್ನಿಸಿದ್ದರು.

2008: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ರೀಡರ್ ಡಾ. ಪ್ರೀತಿ ಶುಭಚಂದ್ರ ಅವರ 'ಸೃಜನೆಯ ಮೂಡು' ಕೃತಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ 'ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಯೋಜನೆ'ಯ ಬಹುಮಾನ ದೊರಕಿತು. ಬಹುಮಾನದ ಮೊತ್ತ ರೂ 10 ಸಾವಿರ. ಡಾ. ಪ್ರೀತಿ ಶುಭಚಂದ್ರ ಅವರು ಕಳೆದ ಮೂವತ್ತು ವರ್ಷಗಳಲ್ಲಿ ಬರೆದ ಮೂವತ್ತೊಂದು ಮಹಿಳಾ ಪರ ಕಾಳಜಿಯ ಲೇಖನಗಳನ್ನು ಒಳಗೊಂಡ 'ಸೃಜನೆಯ ಮೂಡು' ಕೃತಿಗೆ ಈ ಬಹುಮಾನ ಲಭಿಸಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ. ಬಿ.ವಿ. ಗುಂಜೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದರು.

2007: ಬಿಜೆಪಿ ಧುರೀಣ ಪ್ರಮೋದ್ ಮಹಾಜನ್ ಅವರನ್ನು 2006ರಲ್ಲಿ ಕೊಲೆಗೈಯಲಾದ ಪ್ರಕರಣದಲ್ಲಿ ಅವರ ಸಹೋದರ ಪ್ರವೀಣ್ ಮಹಾಜನ್ ತಪ್ಪಿತಸ್ಥ ಎಂದು ಮುಂಬೈ ಸೆಷನ್ಸ್ ನ್ಯಾಯಾಲಯ ಘೋಷಿಸಿತು. ಪ್ರವೀಣ್ ಮಹಾಜನ್ ಗಂಭೀರ ಅಪರಾಧ ಎಸಗುವ ಉದ್ದೇಶದಿಂದಲೇ ಮನೆಯೊಳಕ್ಕೆ ಅತಿಕ್ರಮ ಪ್ರವೇಶ ಮಾಡಿ, ಕೊಲೆ ನಡೆಸಿದ ಅಪರಾಧಿ ಎಂದು ಎಂದು ಸೆಷನ್ಸ್ ನ್ಯಾಯಾಧೀಶ ಎಸ್.ಪಿ. ದಾವರೆ ತೀರ್ಪು ನೀಡಿದರು. 2006ರ ಏಪ್ರಿಲ್ 22ರಂದು ಪ್ರಮೋದ್ ಮಹಾಜನ್ ಅವರ ಮನೆಯಲ್ಲಿ ಪ್ರವೀಣ್ ಮಹಾಜನ್ ತನ್ನ ಹಿರಿಯ ಸಹೋದರನ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದರು. ಮುಂಬೈ ಆಸ್ಪತ್ರೆಯಲ್ಲಿ 12 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಬಳಿಕ ಪ್ರಮೋದ್ ಮಹಾಜನ್ ಅಸು ನೀಗಿದ್ದರು. ಹತ್ತೊಂಬತ್ತು ತಿಂಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಪಿ.ದಾವರೆ ಒಟ್ಟು 32 ಸಾಕ್ಷಿಗಳ ವಿಚಾರಣೆಯ ನಂತರ ಭಾರತೀಯ ದಂಡ ಸಂಹಿತೆ (ಐಪಿಸಿ) 302 ಮತ್ತು 449ರ ಅಡಿಯಲ್ಲಿ ಪ್ರವೀಣ್ ತಪ್ಪಿತಸ್ಥ ಎಂದು ತೀರ್ಪು ನೀಡಿದರು.

2007: ಜಾಗತಿಕ ಷೇರುಪೇಟೆಯ ಕುಸಿತವು ಮುಂಬೈ ಷೇರುಪೇಟೆ ಮೇಲೆ ಕರಾಳ ಛಾಯೆ ಬೀರಿತು. ಸಂವೇದಿ ಸೂಚ್ಯಂಕವು, ಅನಿರೀಕ್ಷಿತವಾಗಿ 769 ಅಂಶಗಳಷ್ಟು ಕುಸಿತ ದಾಖಲಿಸಿತು. ಈ ಮೂಲಕ 20 ಸಾವಿರ ಅಂಶಗಳ ಗಡಿಯಿಂದ ಸೂಚ್ಯಂಕವು ಹಠಾತ್ತಾಗಿ ಹಿನ್ನಡೆ ಕಂಡಿತು. ಷೇರುಪೇಟೆ ಇತಿಹಾಸದಲ್ಲಿ ಇದು ಎರಡನೇ ದೊಡ್ಡ ಕುಸಿತ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗಮನಾರ್ಹ ಪ್ರಮಾಣದಲ್ಲಿ (ಎಫ್ ಐ ಐ) ಬಂಡವಾಳ ಹಿಂದೆ ತೆಗೆದುಕೊಂಡದ್ದೇ ಈ ಹಿನ್ನಡೆಗೆ ಮುಖ್ಯ ಕಾರಣ.

2007: ವಿದ್ಯುನ್ಮಾನ ಸಮಾಜ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ `ಕಂಪ್ಯೂಟಿಂಗ್ ಮತ್ತು ಇಂಟರ್ನೆಟ್ ತಾಂತ್ರಿಕತೆ' ಕುರಿತ ನಾಲ್ಕನೇ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಒರಿಸ್ಸಾದ ಕಳಿಂಗ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆ ವಿಶ್ವವಿದ್ಯಾಲಯ ಹಾಗೂ ಮಕಾವೊದ ಸಂಯುಕ್ತ ಸಂಸ್ಥಾನ ವಿಶ್ವವಿದ್ಯಾಲಯಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ನಾಲ್ಕು ದಿನಗಳ ಸಮ್ಮೇಳನವನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಉದ್ಘಾಟಿಸಿದರು.

2007: ಭೂದಾಖಲೆ ನೀಡಲು ಲಂಚ ಪಡೆದ ಗ್ರಾಮ ಲೆಕ್ಕಿಗನಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ಕರ್ನಾಟಕ ರಾಜ್ಯ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಹಾಸನ ಜಿಲ್ಲೆಯ ಕೌಶಿಕ ವೃತ್ತದ ಗ್ರಾಮ ಲೆಕ್ಕಿಗನಾಗಿದ್ದ ಡಿ.ಕೆ. ರಾಮಸ್ವಾಮಿ ಭೂದಾಖಲೆ ನೀಡಲು ರಮೇಶ ಎಂಬುವವರಿಂದ 600 ರೂಪಾಯಿ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ರಾಮಸ್ವಾಮಿ ಅವರನ್ನು ಆರೋಪಮುಕ್ತಗೊಳಿಸಿತ್ತು. ಆದರೆ ಸರ್ಕಾರದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ರಾಮಸ್ವಾಮಿ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

2007: ಬ್ರಿಟಿಷ್ ರಾಣಿ ದ್ವಿತೀಯ ಎಲಿಜಬೆತ್ ಅವರು ದೇಶದ ಇತಿಹಾಸದಲ್ಲೇ `ದೀರ್ಘಾವಧಿ ಬದುಕಿದ ಅತ್ಯಂತ ಹಿರಿಯ ರಾಣಿ' ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಎಂದು ಅರಮನೆ ಮೂಲಗಳು ತಿಳಿಸಿದವು. ಎಲಿಜಬೆತ್ ಅವರಿಗೆ 2008ರ ಏಪ್ರಿಲ್ 21ಕ್ಕೆ 82 ವರ್ಷ ತುಂಬಲಿದೆ. ಇವರು 1901ರ ಜನವರಿ 22ರಂದು ಮೃತರಾದ ತಮ್ಮ ಮುತ್ತಜ್ಜಿ ವಿಕ್ಟೋರಿಯಾ ಅವರ 81 ವರ್ಷ ಬದುಕಿದ ದಾಖಲೆಯನ್ನು ಮುರಿಯಲಿದ್ದಾರೆ. 81 ವರ್ಷ 239 ದಿನ ಬದುಕಿ, 1820ರಲ್ಲಿಮೃತರಾದ ತೃತೀಯ ಜಾರ್ಜ್ ಬ್ರಿಟನ್ನಿನ ಅತ್ಯಂತ ಹಿರಿಯ ರಾಜ ಎಂಬ ದಾಖಲೆ ಹೊಂದಿದ್ದಾರೆ.

2006: ಪೋಪ್ 16ನೇ ಬೆನೆಡಿಕ್ಟ್ ಅವರು ಭಾರತದ ಬಾಹ್ಯಾಕಾಶ ವಿಜ್ಞಾನಿ, 2003ರವರೆಗೆ ಇಸ್ರೋ ಸಂಸ್ಥೆಯ ಮುಖ್ಯಸ್ಥರಾಗಿದ್ದ ಕೆ. ಕಸ್ತೂರಿ ರಂಗನ್ ಅವರನ್ನು ರೋಮ್ ಮೂಲದ ಪ್ರತಿಷ್ಠಿತ `ಪಾಂಟಿಫಿಕಲ್ ವಿಜ್ಞಾನ ಅಕಾಡೆಮಿ'ಯ ಸದಸ್ಯರನ್ನಾಗಿ ನೇಮಕ ಮಾಡಿದರು. 403 ವರ್ಷಗಳಷ್ಟು ಹಳೆಯದಾದ ಈ ಅಕಾಡೆಮಿಗೆ 89-90 ಮಂದಿ ಸದಸ್ಯರನ್ನು ವ್ಯಾಪಕ ಪರಿಶೀಲನೆಯ ಬಳಿಕ ನೇಮಿಸಲಾಗುತ್ತದೆ. ಗಣಿತ, ಭೌತ, ಸಹಜ ವಿಜ್ಞಾನಗಳ ಪ್ರಗತಿ ಸಾಧನೆಯ ಗುರಿ ಹೊಂದಿರುವ ಈ ಅಕಾಡೆಮಿಗೆ ಸ್ವತಃ ಪೋಪ್ ಅವರ ರಕ್ಷಣೆಯಲ್ಲೇ ಕಾರ್ಯ ಎಸಗುತ್ತದೆ. ಈ ಗೌರವ ಪ್ರಾಪ್ತಿಯಾದುದು ತಮಗೆ ಅತೀವ ಸಂತಸ ಉಂಟು ಮಾಡಿದೆ, ಸ್ವತಃ ಪೋಪ್ ಅವರಿಂದ ನೇಮಕಾತಿ ಪತ್ರ ಪಡೆಯುವುದು ಅತ್ಯಂತ ದೊಡ್ಡ ಗೌರವ ಎಂದು ಕಸ್ತೂರಿ ರಂಗನ್ ಹರ್ಷ ವ್ಯಕ್ತಪಡಿಸಿದರು.

2006: ಸಮುದ್ರ ಈಜಿನಲ್ಲಿ ಈ ಹಿಂದೆ ದಾಖಲೆ ಮಾಡಿದ್ದ ಉಡುಪಿ ತಾಲ್ಲೂಕಿನ ಬ್ರಹ್ಮಾವರ ಕೋಡಿ ಕನ್ಯಾನದ ನಿವಾಸಿ ಗೋಪಾಲ ಖಾರ್ವಿ ತನ್ನ ಕೈ ಕಾಲುಗಳಿಗೆ ಬೇಡಿ ತೊಟ್ಟು ಸಮುದ್ರದಲ್ಲಿ 10 ಕಿ.ಮೀ. ದೂರವನ್ನು ನಿರಂತರ 2 ಗಂಟೆ 20 ನಿಮಿಷದಲ್ಲಿ ಈಜಿ ಹೊಸ ದಾಖಲೆ ನಿರ್ಮಿಸಿದರು. ಬೆಳಗ್ಗೆ 6.55ಕ್ಕೆ ಸೈಂಟ್ ಮೇರೀಸ್ ದ್ವೀಪದಿಂದ ಕೈಗೆ ಕೋಳ ತೊಡಿಸಿಕೊಂಡು ಕಾಲುಗಳನ್ನು ಕಟ್ಟಿ ಸಮುದ್ರಕ್ಕೆ ಧುಮುಕಿದ ಅವರು ಬೆಳಗ್ಗೆ 9.15ಕ್ಕೆ ಮಲ್ಪೆ ಕರಾವಳಿಗೆ ತಲುಪಿ ನೂತನ ದಾಖಲೆ ಸೃಷ್ಟಿಸಿದರು.

2006: ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಬಂದು ಬಾಹ್ಯಾಕಾಶದಲ್ಲಿ ತಮ್ಮ ಚೊಚ್ಚಲ ನಡಿಗೆ ನಡೆಸಿದರು.

2006: ಶಿಯಾಗಳ ಪವಿತ್ರ ನಗರವಾದ ಕರ್ಬಾಲಾದಲ್ಲಿ 30 ಶವಗಳಿದ್ದ ಸದ್ದಾಂ ಹುಸೇನ್ ಕಾಲದ ಗೋರಿಯೊಂದು ಪತ್ತೆಯಾಯಿತು. ವ್ಯಕ್ತಿಯೊಬ್ಬ ಮನೆ ಕಟ್ಟಿಸಲು ಪಾಯ ತೋಡುವಾಗ ಮನುಷ್ಯರ ಮೂಳೆಗಳು ಹಾಗೂ ಜೀರ್ಣವಾದ ಬಟ್ಟೆಗಳು ದೊರಕಿದವು. ಇದು 1991ರ ಕೊಲ್ಲಿ ಯುದ್ಧದ ಸಮಯದಲ್ಲಿ ಬಂಡೆದ್ದ ಶಿಯಾಗಳನ್ನು ಸಾಮೂಹಿಕವಾಗಿ ಹತ್ಯೆ ನಡೆಸಿದ್ದಾಗಿರಬಹುದು ಎಂದು ನಂಬಲಾಗಿದೆ.

2005: ಆಸ್ಟ್ರೇಲಿಯಾ ತಂಡದ ಶೇನ್ ವಾರ್ನ್ ಅವರು ಪರ್ತ್ನಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೂರು ವಿಕೆಟ್ ಉರುಳಿಸುವ ಮೂಲಕ ವರ್ಷವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ವಿಶ್ವದಾಖಲೆಯ ಸಾಧನೆ ಮಾಡಿದರು. ಆಸ್ಟ್ರೇಲಿಯಾ ಪರ ಉತ್ತಮ ದಾಳಿ ನಡೆಸಿದ ಶೇನ್ ವಾರ್ನ್ ಈ ವರ್ಷದಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 87ಕ್ಕೆ ಹೆಚ್ಚಿಸಿಕೊಂಡರು. ಇದರೊಂದಿಗೆ ಶೇನ್ ವಾರ್ನ್ 1981ರಲ್ಲಿ ಡೆನ್ನಿಸ್ ಲಿಲ್ಲಿ ಸ್ಥಾಪಿಸಿದ್ದ 85 ವಿಕೆಟುಗಳ ವಿಶ್ವದಾಖಲೆ ಬದಿಗೊತ್ತಿದರು.

2005: ಇಂದೋರಿನ ಉನ್ನತ ತಂತ್ರಜ್ಞಾನ ಕೇಂದ್ರಕ್ಕೆ (ಸಿಎಟಿ) ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಖ್ಯಾತ ಪರಮಾಣು ವಿಜ್ಞಾನಿ ದಿವಂಗತ ರಾಜಾರಾಮಣ್ಣ ಉನ್ನತ ತಂತ್ರಜ್ಞಾನ ಕೇಂದ್ರ ಎಂಬುದಾಗಿ ಮರುನಾಮಕರಣ ಮಾಡಿದರು.

1998: ಲೋಕಸಭೆಯ ಉಪಾಧ್ಯಕ್ಷರಾಗಿ ಕಾಂಗ್ರೆಸ್ಸಿನ ಪಿ.ಎಂ. ಸಯೀದ್ ಅವಿರೋಧ ಆಯ್ಕೆಯಾದರು.

1988: ನ್ಯೂಜಿಲ್ಯಾಂಡಿನ ವಿರುದ್ಧ ಬರೋಡದಲ್ಲಿ ನಡೆದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮಹಮ್ಮದ್ ಅಜರ್ದುದೀನ್ ಅವರು ಕೇವಲ 62 ಚೆಂಡೆಸೆತಗಳಿಗೆ 100 ರನ್ ಸೇರಿಸಿ ಭಾರತದ ಅತ್ಯಂತ ವೇಗದ ಶತಕ ಸಿಡಿಸಿದರು.

1931: ಪಿ.ಸಿ. ಮಹಾಲನಾವೊಬಿಸ್ ಅವರು ಭಾರತೀಯ ಸಾಂಸ್ಥಿಕ ಸಂಸ್ಥೆಯನ್ನು (ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್) ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತ) ಸ್ಥಾಪಿಸಿದರು.

1929: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಬ್ರಿಟಿಷ್ ಪೊಲೀಸ್ ಅಧಿಕಾರಿ ಜೆ.ಪಿ. ಸ್ಯಾಂಡರ್ಸ್ ನನ್ನು ಗುಂಡಿಟ್ಟು ಕೊಲೆಗೈದರು. ಈ ಅಧಿಕಾರಿಯನ್ನು ಲಾಲಾ ಲಜಪತರಾಯ್ ಅವರ ಮೇಲೆ ಲಾಠಿ ಪ್ರಹಾರ ಮಾಡಲು ಆದೇಶಿಸಿದ ಸ್ಕಾಟ್ ಎಂಬುದಾಗಿ ಭಗತ್ಸಿಂಗ್ ತಪ್ಪಾಗಿ ಭಾವಿಸಿದ್ದರು.

1903: ಒರಿವಿಲ್ ರೈಟ್ ಅವರು ಇಂಧನ ಚಾಲಿತ ವಿಮಾನದ (ಏರ್ ಪ್ಲೇನ್) ಮೊದಲ ಹಾರಾಟವನ್ನು ದಾಖಲಿಸಿದರು. ಉತ್ತರ ಕರೋಲಿನಾದ ಕಿಟ್ಟಿ ಹಾಕ್ ಸಮೀಪ 12 ಸೆಕೆಂಡುಗಳ ಕಾಲ ಬಾನಿನಲ್ಲಿ ಹಾರಿದ ಈ ವಿಮಾನ 120 ಅಡಿಗಳಷ್ಟು ದೂರ ಚಲಿಸಿತು.

Saturday, January 16, 2010

ಇಂದಿನ ಇತಿಹಾಸ History Today ಡಿಸೆಂಬರ್ 16

ಇಂದಿನ ಇತಿಹಾಸ

ಡಿಸೆಂಬರ್ 16

ತೆಲುಗು ಚಲನಚಿತ್ರ ರಂಗದ ಉದಯೋನ್ಮುಖ ನಟಿ ಭಾರ್ಗವಿ ಅವರನ್ನು ಹತ್ಯೆ ಮಾಡಿರುವ ಜೊತೆಗಾರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಗರದಲ್ಲಿ ನಡೆಯಿತು. ಭಾರ್ಗವಿ ಅವರ ಬಂಜಾರ ಹಿಲ್ ಫ್ಲ್ಯಾಟ್‌ನಲ್ಲಿ ಜೋಡಿ ಶವಗಳ ಜೊತೆಗೆ ್ಗಳಿ ವಿಷದ ಖಾಲಿ ಬಾಟಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು. ಜೊತೆಗಾರ ಪ್ರವೀಣ್ ಕುಮಾರ್ ಮೊದಲು ಭಾರ್ಗವಿಯನ್ನು ಹತ್ಯೆ ಮಾಡಿ ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ.

2008: ಭಯೋತ್ಪಾದನೆ ವಿರುದ್ಧದ ಸಮರವನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿತು. ಉಗ್ರಗಾಮಿಗಳ ಪ್ರಕರಣಗಳನ್ನು ತ್ವರಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆ ವಿಧಿಸುವುದಕ್ಕೆ ಅವಕಾಶ ನೀಡುವ ಹಾಗೂ ಭಯೋತ್ಪಾದನೆ ನಿಗ್ರಹ ಕಾನೂನುಗಳ ದುರ್ಬಳಕೆ ತಡೆಗಟ್ಟುವ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಇದರ ಪ್ರಕಾರ ರಾಷ್ಟ್ರೀಯ ತನಿಖಾ ಸಂಸ್ಥೆ ಮಸೂದೆಯು ದೇಶದೆಲ್ಲೆಡೆ ನಡೆಯುವ ಭಯೋತ್ಪಾದನೆ ಮತ್ತು ರಾಷ್ಟ್ರಮಟ್ಟದ ಪರಿಣಾಮ ಬೀರುವ ಇತರ ಅಪರಾಧಗಳ ಬಗ್ಗೆ ತನಿಖೆ ನಡೆಸುವ ತನಿಖಾ ಸಂಸ್ಥೆಯೊಂದರ ಸ್ಥಾಪನೆಗೆ ಅವಕಾಶ ಮಾಡಿಕೊಡಲಿದೆ.

2008: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮುರಕಿಬಾವಿ ಗ್ರಾಮದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಎರಡನೇ ತ್ವರಿತಗತಿ ನ್ಯಾಯಾಲಯವು ಒಂಬತ್ತು ಮಂದಿ ಆರೋಪಿಗಳಿಗೆ ಮರಣ ದಂಡನೆ ಹಾಗೂ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿತು. ಕುಡಿಯುವ ನೀರಿಗೆ ಸಂಬಂಧಿಸಿದಂತೆ 2005ರ ಆ.30 ರಂದು 2 ಕುಟುಂಬಗಳ ಮಧ್ಯೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಒಬ್ಬ ಮಹಿಳೆ ಸೇರಿ ನಾಲ್ವರ ಕಗ್ಗೊಲೆಯಲ್ಲಿ ಅಂತ್ಯ ಕಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶ ಸಿ.ಆರ್. ಜಾವೀದ್ ಪಾಷಾ ಅವರು ಈದಿನ ಶಿಕ್ಷೆ ಪ್ರಕಟಿಸಿದರು. ಒಟ್ಟು 66 ಸಾಕ್ಷ್ಯಗಳನ್ನು ಆಲಿಸಿದ ನ್ಯಾಯಾಲಯ ಆರೋಪಿಗಳಾದ ಸುಂದರೇಶ ಉಡಕೇರಿ, ಸಿದಟಪ್ಪ ರೇವಣ್ಣವರ, ಸಿದಟಲಿಂಗಪ್ಪ ರೇವಣ್ಣವರ, ಕಲ್ಮೇಶ ಉಡಕೇರಿ, ರಾಜಶೇಖರ ಉಡಕೇರಿ, ಭಗವಂತ ಉಡಕೇರಿ, ಚಂದ್ರನಾಯಕ ರೇವಣ್ಣವರ, ಈರಪ್ಪ ಉಡಕೇರಿ, ಶಂಕರಪ್ಪ ಉಡಕೇರಿ ಅವರಿಗೆ ಮರಣ ದಂಡನೆ ವಿಧಿಸಿತು. ಅಲ್ಲದೇ ಉಳಿದ ಆರೋಪಿಗಳಾದ ಮಲ್ಲವ್ವ ರೇವಣ್ಣವರ, ಗೌರವ್ವ ಉಡಕೇರಿ, ಬಸವಣ್ಣೆಪ್ಪ ಉಡಕೇರಿ, ನಾಗಪ್ಪ ಉಡಕೇರಿ, ಸಕ್ರನಾಯಕ ರೇವಣ್ಣವರ, ದೊಡ್ಡನಾಯಕ ರೇವಣ್ಣವರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು..

2008: ಶನಿಯ ಪುಟ್ಟ ಉಪಗ್ರಹವಾದ 'ಎನ್‌ಸೆಲ್‌ಡಸ್'ನಲ್ಲಿ ಸಕ್ರಿಯ ಜಗತ್ತಿನ ಕುರುಹುಗಳಿರುವುದಾಗಿ ನಾಸಾ ವಿಜ್ಞಾನಿಗಳು ತಿಳಿಸಿದರು. ಶನಿ ಹಾಗೂ ಅದರ ಉಪಗ್ರಹಗಳ ವಿವರ ಸಂಗ್ರಹಿಸುವ ಕ್ಯಾಸಿನಿ ಅಂತರಿಕ್ಷ ನೌಕೆ ಈ ವಿವರಗಳನ್ನು ಸಂಗ್ರಹಿಸಿದೆ. ಕ್ಯಾಸಿನಿ ರವಾನಿಸಿದ ಛಾಯಾಚಿತ್ರಗಳಿಂದ 'ಎನ್‌ಸೆಲ್‌ಡಸ್'ನ ದಕ್ಷಿಣ ಧ್ರುವ ಪ್ರದೇಶ ಆಗಾಗ್ಗೆ ಬಗದಲಾವಣೆಗೆ ಒಳಪಡುತ್ತದೆ ಎಂಬುದು ಸ್ಪಷ್ಟವಾಯಿತು. ದಕ್ಷಿಣ ಧ್ರುವ ಪ್ರದೇಶದಲ್ಲಿ ಸಮೀಪದಿಂದ ಸೆರೆಹಿಡಿದ ಛಾಯಾಚಿತ್ರಗಳು ಅಲ್ಲಿ ನೀರಿನ ಆವಿ, ಹಿಮಕಣ ಇರುವುದನ್ನು ತೋರಿಸಿದೆ. ಅಲ್ಲದೇ ಭೂಮಿಯ ಮಾದರಿಯಲ್ಲಿ ಅಲ್ಲಿನ ನೆಲ ಸಹ ಹಲವು ಫಲಕಗಳಿಂದ ನಿರ್ಮಾಣಗೊಂಡಿದೆ ಎಂಬುದನ್ನು ತೋರಿಸಿದೆ ಎಂದು ವಿಜ್ಞಾನಿಗಳು ತಿಳಿಸಿದರು. ಭೂಮಿಯ ಧ್ರುವ ಪ್ರದೇಶಗಳಲ್ಲಿ ಹಿಮಗಡ್ಡೆ ಹಾಗೂ ಫಲಕಗಳು ಚಲಿಸಿದಂತೆ 'ಎನ್‌ಸೆಲ್‌ಡಸ್'ನಲ್ಲಿಯೂ ಹಿಮಫಲಕಗಳು ಚಲಿಸುತ್ತವೆ. ಆದರೆ, ಅಲ್ಲಿ ಕನ್ವೇಯರ್ ಬೆಲ್ಟ್ ಮಾದರಿಯಲ್ಲಿ ಒಂದೇ ದಿಕ್ಕಿನಲ್ಲಿ ಹಿಮಫಲಕಗಳು ಚಲಿಸುತ್ತವೆ ಎಂದು ವಿಜ್ಞಾನಿಗಳು ವಿವರಿಸಿದರು.

2008: ತೆಲುಗು ಚಲನಚಿತ್ರ ರಂಗದ ಉದಯೋನ್ಮುಖ ನಟಿ ಭಾರ್ಗವಿ ಅವರನ್ನು ಹತ್ಯೆ ಮಾಡಿರುವ ಜೊತೆಗಾರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಗರದಲ್ಲಿ ನಡೆಯಿತು. ಭಾರ್ಗವಿ ಅವರ ಬಂಜಾರ ಹಿಲ್ ಫ್ಲ್ಯಾಟ್‌ನಲ್ಲಿ ಜೋಡಿ ಶವಗಳ ಜೊತೆಗೆ ್ಗಳಿ ವಿಷದ ಖಾಲಿ ಬಾಟಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು. ಜೊತೆಗಾರ ಪ್ರವೀಣ್ ಕುಮಾರ್ ಮೊದಲು ಭಾರ್ಗವಿಯನ್ನು ಹತ್ಯೆ ಮಾಡಿ ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಆತನ ಬಳಿ ಮರಣ ಪತ್ರವೂ ದೊರೆತಿದೆ. 2006ರಿಂದ ಅವರಿಬ್ಬರೂ ಸಹಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಆಕೆ ತನ್ನ ಬಗ್ಗೆ ತಾತ್ಸಾರ ಧೋರಣೆ ತಳೆದದ್ದರಿಂದ ಈ ಕೃತ್ಯ ಎಸಗಿರುವುದಾಗಿ ಪ್ರವೀಣ್ ಕುಮಾರ್ ಬರೆದಿಟ್ಟ ಪತ್ರವೋ ಪೊಲೀಸರಿಗೆ ಲಭಿಸಿತು.

2008: ಲೋಕಸಭೆಯಲ್ಲಿ ಜುಲೈ 22ರಂದು ನಡೆದ ವಿಶ್ವಾಸಮತ ಗೊತ್ತುವಳಿ ಮೇಲಿನ ಮತದಾನದ ಸಂದರ್ಭದಲ್ಲಿ ಹಣದ ಆಮಿಷ ಒಡ್ಡಿದ ಪ್ರಕರಣದಲ್ಲಿ ಹೆಸರಿಸಲಾದ ಮೂವರ ವಿರುದ್ಧ ಗೃಹ ಸಚಿವಾಲಯದಿಂದ ತನಿಖೆ ನಡೆಸಲು ಸ್ಪೀಕರ್ ಸೋಮನಾಥ ಚಟರ್ಜಿ ಶಿಫಾರಸು ಮಾಡಿದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಸಂಸದೀಯ ಸಮಿತಿ ತನ್ನ ವರದಿ ಮಂಡಿಸಿದ ಮರುದಿನವೇ ಸ್ಪೀಕರ್ ಅವರು ಈ ಕ್ರಮ ಕೈಗೊಂಡರು. ಅದರಂತೆ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಅವರ ಸಹಾಯಕ ಸಂಜೀವ್ ಸಕ್ಸೇನಾ, ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರ ಸಹಾಯಕ ಸುಧೀಂದ್ರ ಕುಲಕರ್ಣಿ ಮತ್ತು ಚಾಲಕ ಸುಹೈಲ್ ಹಿಂದೂಸ್ತಾನಿ ವಿರುದ್ಧ ತನಿಖಾ ಸಂಸ್ಥೆಯೊಂದರಿಂದ ತನಿಖೆ ನಡೆಯುವುದು ಬಹುತೇಕ ಖಚಿತವಾಯಿತು. ವಿ. ಕಿಶೋರ್‌ಚಂದ್ರ ದೇವ್ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ ಎಸ್‌ಪಿ ನಾಯಕ ಅಮರ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು ದೋಷಮುಕ್ತರು ಎಂದು ಹೇಳಿತ್ತು.

2008: ಖ್ಯಾತ ಇತಿಹಾಸ ತಜ್ಞ ಪ್ರೊ. ಎಸ್.ಶೆಟ್ಟರ್ ಅವರಿಗೆ 2007ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ 'ಭಾಷಾ ಸಮ್ಮಾನ್' ಪ್ರಶಸ್ತಿ ದೊರೆಕಿತು. ಪುರಾತನ ಮತ್ತು ಮಧ್ಯಕಾಲೀನ ಇತಿಹಾಸಕ್ಕೆ ಸಂಬಂಧಿಸಿದಂತೆ ಶೆಟ್ಟರ್ ಕೈಗೊಂಡಿರುವ ಸಂಶೋಧನೆಗಳು, ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಕಂಚಿನ ಪದಕವನ್ನು ಒಳಗೊಂಡಿರುತ್ತದೆ. ಶೆಟ್ಟರ್ ಅವರ ಇತ್ತೀಚಿನ 'ಸಂಗಮ್ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಪುಸ್ತಕದ ಮೂಲಕ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಇತಿಹಾಸಕ್ಕೆ ನೀಡಿರುವ ಸಮಗ್ರವಾದ ಕೊಡುಗೆಯನ್ನು ಸಹ ಪರಿಗಣಿಸಲಾಗಿದೆ ಎಂದು ಅಕಾಡೆಮಿಯ ಮೂಲಗಳು ತಿಳಿಸಿದವು.

2007: ಮಾವೊವಾದಿ ಪೀಡಿತ ಛತ್ತೀಸ್ ಗಢ ರಾಜ್ಯದ ದಾಂತೆವಾಡ ಜಿಲ್ಲಾ ಜೈಲಿನಿಂದ 105 ನಕ್ಸಲರು ಸೇರಿದಂತೆ ಸುಮಾರು 299 ಕೈದಿಗಳು ಪರಾರಿಯಾದರು. ಸಂಜೆ 4.35ರ ಸುಮಾರಿಗೆ ಊಟ ನೀಡುತ್ತಿದ್ದಾಗ ನಕ್ಸಲ್ ಕಮಾಂಡರ್ ಸುಜಿತ್ ಕುಮಾರ್ ಜೈಲು ಸಿಬ್ಬಂದಿಯ ಬಂದೂಕು ಕಸಿದುಕೊಂಡು ಗುಂಡು ಹಾರಿಸಿದ. ಆಗ ಸಂಭವಿಸಿದ ಗದ್ದಲದಲ್ಲಿ ಇತರ ಕೈದಿಗಳು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರು. 15 ನಿಮಿಷಗಳ ಘರ್ಷಣೆ ಬಳಿಕ ಪರಾರಿಯಾಗುವ ಮುನ್ನ ಕೈದಿಗಳು ಪೊಲೀಸರಿಂದ ಬಂದೂಕು ಕಸಿದುಕೊಂಡರು.

2007: ಪುಸಾದ ರಾಜೇಂದ್ರ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬಿಹಾರದ ಕೊತಿಯಾ ಗ್ರಾಮವನ್ನು ಪ್ರಪ್ರಥಮ ಜೈವಿಕ ಕೃಷಿ ಗ್ರಾಮವನ್ನಾಗಿ ಪರಿವರ್ತಿಸಿರುವುದನ್ನು ಬಹಿರಂಗಪಡಿಸಿದರು. ರಾಸಾಯನಿಕಗಳ ಬಳಕೆಯಿಂದಾಗಿ ಕೃಷಿ ಭೂಮಿಯ ಮೇಲಾಗುವ ವ್ಯತಿರಿಕ್ತ ಪರಿಣಾಮ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೃಷಿ ವಿವಿ ಈ ಗ್ರಾಮದಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡಿತ್ತು. ಕೃಷಿ ಭೂಮಿಗೆ ಹೆಚ್ಚು ಜೈವಿಕ ಗೊಬ್ಬರ ಬಳಸಲು ಬಡ ರೈತರಿಗೆ ಉತ್ತೇಜನ ನೀಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು. ಇದೀಗ ಕೊತಿಯಾ ಗ್ರಾಮದಲ್ಲಿ ಒಟ್ಟು 70 ರೈತರು ಜೈವಿಕ ಕೃಷಿ ಮಾಡುವ ಮೂಲಕ ಈ ಗ್ರಾಮವನ್ನು ಬಿಹಾರದಲ್ಲೇ ಪ್ರಪ್ರಥಮ ಜೈವಿಕ ಕೃಷಿ ಗ್ರಾಮವನ್ನಾಗಿ ಪರಿವರ್ತಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಎಂದು ವಿವಿಯ ಹಿರಿಯ ಕೃಷಿ ವಿಜ್ಞಾನಿ ಡಾ. ಆರ್. ಕೆ. ಸೊಹಾನೆ ಹೇಳಿದರು.

2007: ಜಗತಾಪ ಏರಿಕೆ (ಜಾಗತಿಕ ತಾಪಮಾನ) ತಡೆಗಟ್ಟಲು ಅಳಿಲು ಸೇವೆಯಾಗಿ ಬೆಂಗಳೂರು ಕನಕಪುರ ರಸ್ತೆಯ ಟೆಂಪಲ್ ಟ್ರೀ ಅಪಾರ್ಟ್ಮೆಂಟ್ (ಎಫ್ ಬ್ಲಾಕ್) ನಿವಾಸಿಗಳು ಈದಿನ ಸಂಜೆ 7.30 ರಿಂದ 9 ಗಂಟೆಯ ತನಕ ವಿದ್ಯುತ್ ದೀಪಗಳನ್ನು ಆರಿಸಿ ಆದರ್ಶ ಮೆರೆದರು. 50 ಮನೆಗಳಿರುವ ಈ ಅಪಾರ್ಟ್ ಮೆಂಟಿನಲ್ಲಿನ ಸುಮಾರು 25 ಮನೆಗಳ ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡರು. ಸರಿಯಾಗಿ 7.30ಕ್ಕೆ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಿದ ನಿವಾಸಿಗಳು ಕತ್ತಲೆ ಓಡಿಸಲು ಮೇಣದ ಬತ್ತಿ ಉರಿಸಿದರು. ಕೇವಲ 2 ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟೆಂಪಲ್ ಟ್ರೀ ಅಪಾಟರ್್ಮೆಂಟ್ಸ್ ಅಸೋಸಿಯೇಷನ್ ಈ ಸಾಧ್ಯತೆಯನ್ನು ಮಾಡಿ ತೋರಿಸಿತು.

2007: ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿ ನಾಲ್ಕು ತಿಂಗಳು ಕಳೆದ ನಂತರ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ರಾಜಧಾನಿಯಲ್ಲಿ ಅಧಿಕೃತ ವಸತಿ ಕಲ್ಪಿಸಿಕೊಡಲಾಯಿತು. 2007ರ ಜುಲೈ 25 ರಂದು ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಕಲಾಂ ಅವರು, ಸೇನಾಧಿಕಾರಿಗಳು ವಾಸಿಸುವ ದೆಹಲಿ ದಂಡು ಪ್ರದೇಶದ ವಸತಿಗೃಹದಲ್ಲಿ ನೆಲೆಸಿದ್ದರು. ಈಗ `10 ರಾಜಾಜಿ ಮಾರ್ಗ'ದಲ್ಲಿ ವಸತಿ ಕಲ್ಪಿಸಿಕೊಡಲಾಗಿದ್ದು, ಕಲಾಂ ತಮ್ಮ ಹೊಸ ಅಧಿಕೃತ ನಿವಾಸಕ್ಕೆ ವಾಸ್ತವ್ಯ ಬದಲಾಯಿಸಿದರು.

2007: ವರದಕ್ಷಿಣೆ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಯಸ್ಕ ಪುರುಷರನ್ನು ಮಾತ್ರ ವಿಚಾರಣೆಗೆ ಒಳಪಡಿಸಬಹುದೇ ಹೊರತು ಕುಟುಂಬದ ಇತರ ಮಹಿಳೆಯರನ್ನಲ್ಲ ಎಂದು ದೆಹಲಿ ನ್ಯಾಯಾಲಯ ಹೇಳಿತು. ತನ್ನ ಪತಿ, ಆತನ ಇಬ್ಬರು ಸೋದರಿಯರು ಹಾಗೂ ಆತನ ತಾಯಿಯ ವಿರುದ್ಧ ಸುನೀಲ್ ಕುಮಾರ್ ಎಂಬವರ ಪತ್ನಿ ಹೂಡಿದ್ದ ವರದಕ್ಷಿಣೆ ಹಿಂಸೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ದೇವಿಂದರ್ ಕುಮಾರ್ ಜಂಗಾಲಾ `ಕೌಟುಂಬಿಕ ಹಿಂಸೆ ತಡೆ ಕಾಯಿದೆ' ಕುರಿತು ಈ ವಿವರಣೆ ನೀಡಿದರು. ವರದಕ್ಷಿಣೆ ಕಾಯಿದೆ ಪ್ರಕಾರ `ಪ್ರತಿವಾದಿ' ಎಂದರೆ ದೂರು ನೀಡಿದ ಮಹಿಳೆ ಜತೆಗೆ ಕೌಟುಂಬಿಕ ಸಂಬಂಧ ಹೊಂದಿರುವ ವಯಸ್ಕ ಪುರುಷರು ಎಂದರ್ಥ. ಪ್ರತಿವಾದಿಯ ಕುಟುಂಬದ ಮಹಿಳೆಯರ ಹಿತರಕ್ಷಣೆಯನ್ನೂ ಇದು ಒಳಗೊಂಡಿದೆ ಎಂದ ಅವರು, ಪ್ರಕರಣದಲ್ಲಿ ಹೆಸರಿಸಲಾದ ಮಹಿಳೆಯರ ವಿರುದ್ಧದ ವಿಚಾರಣೆಯನ್ನು ತಳ್ಳಿ ಹಾಕಿದರು.

2007: ನಾರಾಯಣ ಕಾರ್ತಿಕೇಯನ್ ಅವರು ಚೀನಾದ ಜುಹಾಯ್ ಅಂತಾರಾಷ್ಟ್ರೀಯ ರೇಸಿಂಗ್ ಸರ್ಕಿಟಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು. ಇದೇ ವೇಳೆ ಅವರು ಭಾರತಕ್ಕೆ ಮೊತ್ತ ಮೊದಲ `ಎ 1 ಜಿಪಿ' ಪ್ರಶಸ್ತಿಯನ್ನು ಗೆದ್ದುಕೊಟ್ಟರು. ವಿಲಿಯಮ್ಸ್ ಟೆಸ್ಟ್ ಡ್ರೈವರ್ ಆಗುವಲ್ಲಿ ವಿಫಲರಾಗಿದ್ದ ಕಾರ್ತಿಕೇಯನ್ ಅವರು ಸರ್ಕಿಟಿನಲ್ಲಿ ಮಿಂಚು ಹರಿಸಿದರು. ಕಾರ್ತಿಕೇಯನ್ ಅವರು ಒಂದು ಗಂಟೆ 8 ನಿಮಿಷ 30.759 ಸೆಕೆಂಡುಗಳಲ್ಲಿ ದೂರವನ್ನು ಕ್ರಮಿಸಿದರು. ಇದರೊಂದಿಗೆ ಭಾರತ ಎ 1 ಗ್ರ್ಯಾಂಡ್ ಪ್ರೀಯಲ್ಲಿ ಪ್ರಶಸ್ತಿ ಗೆದ್ದ ಹದಿನಾಲ್ಕನೇ ರಾಷ್ಟ್ರ ಎನ್ನುವ ಖ್ಯಾತಿಗೆ ಪಾತ್ರವಾಯಿತು.

2006: ಕೇರಳದಲ್ಲಿ ನಕ್ಸಲೀಯ ಚಳವಳಿಯ ಮುಂಚೂಣಿಯಲ್ಲಿದ್ದ ಹಿರಿಯ ನಾಯಕಿ ಮಂದಾಕಿನಿ ನಾರಾಯಣನ್ (81) ಕೋಯಿಕ್ಕೋಡಿನ ತಮ್ಮ ನಿವಾಸದಲ್ಲಿ ಈದಿನ ಬೆಳಗ್ಗೆ ನಿಧನರಾದರು. ಮೂಲತಃ ಗುಜರಾತಿಯಾದ ಮಂದಾಕಿನಿ, 1968ರಲ್ಲಿ ತಲಶ್ಶೇರಿ -ಪುಲಪಲ್ಲಿ ಪ್ರಕರಣ ಎಂದೇ ಖ್ಯಾತಿ ಪಡೆದ ಕೇರಳದ ಮೊತ್ತ ಮೊದಲ ನಕ್ಸಲೀಯ ದಾಳಿಯಲ್ಲಿ ಪತಿ ನಾರಾಯಣನ್ ಮತ್ತು ಪುತ್ರಿ ಅಜಿತಾ ಜೊತೆಗೆ ಪಾಲ್ಗೊಂಡಿದ್ದರು. 1968ರ ನವೆಂಬರ್ 22ರಂದು ಸುಮಾರು 300 ಮಂದಿಯ ಸಶಸ್ತ್ರ ತಂಡ ತಲಶ್ಶೇರಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲು ವಿಫಲ ಯತ್ನ ನಡೆಸಿತು. 48 ಗಂಟೆಗಳ ಬಳಿಕ ರೈತ ಕ್ರಾಂತಿಕಾರಿಗಳ ಗುಂಪೊಂದು ವೇನಾಡಿನ ಪುಲಪಲ್ಲಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಪೊಲೀಸ್ ವೈರ್ ಲೆಸ್ ಆಪರೇಟರನನ್ನು ಕೊಂದು ಇತರ ಹಲವರನ್ನು ಗಾಯಗೊಳಿಸಿತ್ತು. 1970ರಲ್ಲಿ ಒಮ್ಮೆ ಮತ್ತು 1975ರ ತುರ್ತು ಪರಿಸ್ಥಿತಿ ಕಾಲದಲ್ಲಿ ಇನ್ನೊಮ್ಮೆ ಮಂದಾಕಿನಿ ಅವರನ್ನು ಬಂಧಿಸಲಾಗಿತ್ತು. ಗುಜರಾತಿನ ಭಾವನಗರದ ಬ್ರಾಹ್ಮಣ ಕುಟುಂಬ ಒಂದರಲ್ಲಿ ಜನಿಸಿದ ಮಂದಾಕಿನಿ ಮುಂಬೈಯಲ್ಲಿ ಇದ್ದಾಗ ಕಮ್ಯೂನಿಸಂ ಕಡೆಗೆ ಆಕರ್ಷಿತರಾದರು. ಅಲ್ಲೇ ಅವರಿಗೆ, ಮುಂದೆ ಪತಿಯಾದ ಮಲಯಾಳಿ ನಾರಾಯಣನ್ ಭೇಟಿಯೂ ಆಯಿತು. ಮದುವೆಯ ಬಳಿಕ ಅವರು ಕೋಯಿಕ್ಕೋಡಿನಲ್ಲಿ ನೆಲೆಸಿದರು. ಅಲ್ಲಿ ಮಂದಾಕಿನಿ ಗುಜರಾತಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದರು. ಕೇರಳದಲ್ಲಿ ನಕ್ಸಲೀಯ ಚಳವಳಿಯ ಕಾವು ತಗ್ಗಿದ ಬಳಿಕ ಮಂದಾಕಿನಿ ಮಾನವ ಹಕ್ಕುಗಳ ಚಳವಳಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಎಡಪಂಥೀಯ ಮಹಿಳಾ ಹಕ್ಕುಗಳ ಗುಂಪುಗಳು ಮಂದಾಕಿನಿಯನ್ನು ಅಮ್ಮನಂತೆ ಆದರಿಸಿದವು.

2006: ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಸಂಸತ್ ಸದಸ್ಯ ಡಿ.ವಿ. ಸದಾನಂದ ಗೌಡ ಮುಂದಿನ ಮೂರು ವರ್ಷಗಳ ಅವಧಿಗೆ ಪುನರಾಯ್ಕೆಗೊಂಡರು.

2006: ನೇಪಾಳದ ದೊರೆ ಜ್ಞಾನೇಂದ್ರ ಅವರನ್ನು ಪದಚ್ಯುತಗೊಳಿಸಲು ಹಾಗೂ ಸಂವಿಧಾನ ರಚನಾ ಸಭೆಗೆ ಜೂನ್ ತಿಂಗಳಲ್ಲಿ ಚುನಾವಣೆ ನಡೆಯುವವರೆಗೆ ಪ್ರಧಾನಿ ಕೊಯಿರಾಲಾ ಅವರು ದೇಶದ ಮುಖ್ಯ ಕಾರ್ಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಬೇಕು ಎಂಬ ಒಮ್ಮತದ ತೀರ್ಮಾನಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ಬಂದವು.

2005: ಖ್ಯಾತ ಉಕ್ಕು ಉದ್ಯಮಿ ಲಕ್ಷ್ಮಿ ನಿವಾಸ ಮಿತ್ತಲ್ 2000 ಕೋಟಿ ಆಸ್ತಿಯೊಂದಿಗೆ ಭಾರತದ ಅತಿ ಹೆಚ್ಚು ಶ್ರೀಮಂತರ ಪಟಿಯಲ್ಲಿ ಮೊದಲ ಸ್ಥಾನ ಪಡೆದರು. ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್ ಜಿ 1100 ಕೋಟಿ ಬೆಲೆಯ ಆಸ್ತಿಯೊಂದಿಗೆ ದ್ವಿತೀಯ ಸ್ಥಾನವನ್ನೂ, 700 ಕೋಟಿ ಆಸ್ತಿಯೊಂದಿಗೆ ಮುಖೇಶ ಅಂಬಾನಿ ತೃತೀಯ ಸ್ಥಾನವನ್ನೂ, 550 ಕೋಟಿ ರೂಪಾಯಿ ಬೆಲೆಯ ಆಸ್ತಿಯೊಂದಿಗೆ ಅನಿಲ್ ಅಂಬಾನಿ ಚತುರ್ಥ ಸ್ಥಾನವನ್ನೂ ಪಡೆದರು. ಫೋಬ್ಸ್ ನಿಯತಕಾಲಿಕ ಭಾರತದ 40 ಶ್ರೀಮಂತರ ಈ ಪಟ್ಟಿಯನ್ನು ಪ್ರಕಟಿಸಿತು.

2005: ಹಿರಿಯ ವಿದ್ವಾಂಸ ಪ್ರೊ. ಎಸ್. ಕೆ. ರಾಮಚಂದ್ರರಾವ್, ಚಿತ್ರನಟ ವಿಷ್ಣುವರ್ಧನ್, ನೃತ್ಯಗುರು ಮಾಯಾರಾವ್ ಹಾಗೂ ಕಲಾವಿದ ಬಾಲು ಅವರಿಗೆ ಗೌರವ ಡಾಕ್ಟರೇಟ್ ನೀಡುವ ಪ್ರಸ್ತಾವಕ್ಕೆ ಬೆಂಗಳೂರು ವಿವಿ ಅಕೆಡಮಿಕ್ ಕೌನ್ಸಿಲ್ ಒಪ್ಪಿಗೆ ನೀಡಿತು.

2005: ಸಂಸತ್ ಭವನವನ್ನು ಸ್ಫೋಟಿಸುವುದಾಗಿ ತಿರುನಲ್ವೇಲಿಯಿಂದ ಬಂದ ಮಿಂಚಂಚೆ (ಇ-ಮೇಲ್) ಪರಿಣಾಮವಾಗಿ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ದಿಢೀರನೆ ಸ್ಥಗಿತಗೊಳಿಸಿ ಸದನಗಳನ್ನು ಹಠಾತ್ತನೆ ಮೂರು ಗಂಟೆಗಳ ಅವಧಿಗೆ ಮುಂದೂಡಲಾಯಿತು. ಎರಡು ಗಂಟೆ ಕಾಲದ ಶೋಧದ ಬಳಿಕ ಬೆದರಿಕೆ ಹುಸಿ ಎಂಬುದು ಖಚಿತಗೊಂಡಿತು.

2005: ಬೆಂಗಳೂರಿನ ಹ್ಯೂಲೆಟ್ ಪ್ಯಾಕಾರ್ಡ್ (ಎಚ್ ಪಿ) ಕಾಲ್ ಸೆಂಟರಿನ ಉದ್ಯೋಗಿ ಕಂಪ್ಯೂಟರ್ ಎಂಜಿನಿಯರ್ ಪ್ರತಿಭಾ (24) ಎಂಬವರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಾರು ಚಾಲಕ ಕತ್ತು ಕತ್ತರಿಸಿ ಕೊಂದ ಘಟನೆ ಬೆಳಕಿಗೆ ಬಂತು. ಈಕೆಯನ್ನು ಮೂರು ದಿನ ಹಿಂದೆಯೇ (12-12-06) ಕೊಲೆಗೈಯಲಾಗಿದ್ದು, ಶವ ಅಂಜನಾಪುರ ಬಳಿಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಯಿತು.

1997: ವಿಡಿಯೋಟೇಪ್ ಕಾರ್ಟೂನನ್ನು ವೀಕ್ಷಿಸಿದ ಬಳಿಕ ರಕ್ತ ಕಾರಲು ಆರಂಭಿಸಿದ ಹಿನ್ನೆಲೆಯಲ್ಲಿ 700ಕ್ಕೂ ಹೆಚ್ಚು ಮಕ್ಕಳನ್ನು ಜಪಾನಿನಲ್ಲಿ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಯಿತು. ವಿಡಿಯೋವನ್ನು ಸಮೀಪದಿಂದ ವೀಕ್ಷಿಸಿದಾಗ ಬೆಳಕಿನ ಅಲೆಗಳ ತೀವ್ರತೆಯಿಂದ `ಲಘು ಮೂರ್ಛೆಗೆ'ಗೆ (ಲೈಟ್ ಎಪಿಲೆಪ್ಸಿ) ತುತ್ತಾಗಿ ಇಂತಹ ಪರಿಸ್ಥಿತಿ ಉಂಟಾಯಿತು.

1971: ಪಾಕಿಸ್ಥಾನಿ ಪಡೆಗಳು ಭಾರತೀಯ ಸೇನೆಗೆ ಶರಣಾಗತವಾದವು. ಬಾಂಗ್ಲಾದೇಶದಲ್ಲಿನ ಪಾಕಿಸ್ತಾನಿ ಪಡೆಗಳ ಮಹಾದಂಡನಾಯಕ ಜನರಲ್ ಎ.ಎ.ಕೆ. ನಿಯಾಜಿ ಅವರು ಭಾರತದ ಪೂರ್ವ ಕಮಾಂಡಿನ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಜೆ. ಎಸ್. ಅರೋರಾ ಅವರ ಮುಂದೆ ಶರಣಾದರು. 90,000 ಕ್ಕೂ ಹೆಚ್ಚು ಪಾಕಿಸ್ಥಾನಿ ಸೈನಿಕರನ್ನು ಭಾರತವು `ಸಮರ ಕೈದಿ'ಗಳಾಗಿ ತನ್ನ ವಶಕ್ಕೆ ತೆಗೆದುಕೊಂಡಿತು. ಬಾಂಗ್ಲಾದೇಶದಲ್ಲಿ ಈ ದಿನವನ್ನು `ವಿಕ್ಟರಿ ಡೇ' ಆಗಿ ಆಚರಿಸಲಾಯಿತು. ಭಾರತದಲ್ಲೂ ಈ ದಿನವನ್ನು `ವಿಜಯ ದಿವಸ್' ಆಗಿ ಆಚರಿಸಲಾಯಿತು.

1952: ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯ ಸ್ಥಾಪನೆಗೆ ಒತ್ತಾಯಿಸಿ ಆಮರಣ ನಿರಶನ ಕೈಗೊಂಡಿದ್ದ ಪೊಟ್ಟಿ ಶ್ರೀರಾಮುಲು ಅವರು ತಮ್ಮ ನಿರಶನದ 58ನೇ ದಿನ ಮೃತರಾದರು. 1953ರಲ್ಲಿ ಆಂಧ್ರಪ್ರದೇಶವು ಭಾಷಾ ಆಧಾರದಲ್ಲಿ ರಚನೆಗೊಂಡ ಭಾರತದ ಪ್ರಥಮ ರಾಜ್ಯವಾಯಿತು.

1951: ಹೈದರಾಬಾದಿನಲ್ಲಿ ಸಾಲಾರ್ ಜಂಗ್ ಮ್ಯೂಸಿಯಮ್ ಉದ್ಘಾಟನೆಗೊಂಡಿತು. ಮ್ಯೂಸಿಯಮ್ಮಿನಲ್ಲಿ ಮೀರ್ ಯೂಸುಫ್ ಆಲಿ (ಸಾಲಾರ್ ಜಂಗ್ 3) ಅವರ ಸಂಗ್ರಹವಿದೆ.

1939: ಪ್ರಾಧ್ಯಾಪಕ , ಜಾನಪದ ತಜ್ಞ, ಸಾಹಿತಿ ಪ್ರೊ. ಡಿ. ಲಿಂಗಯ್ಯ ಅವರು ದೇವೇಗೌಡ- ಸಿದ್ದಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪೀಹಳ್ಳಿಯಲ್ಲಿ ಜನಿಸಿದರು.

1917: ಇಂಗ್ಲಿಷ್ ವಿಜ್ಞಾನ ಕಥೆಗಾರ ಆರ್ಥರ್ ಚಾರ್ಲ್ಸ್ ಕ್ಲಾರ್ಕ್ ಹುಟ್ಟಿದ ದಿನ. ಇವರು ಸಂಪರ್ಕ ಉಪಗ್ರಹಗಳ ಬಳಕೆ ಬಗ್ಗೆ ಭವಿಷ್ಯ ನುಡಿದ ವ್ಯಕ್ತಿ.

1826: ಇಟಲಿಯ ಖಗೋಳ ತಜ್ಞ ಗಿಯೊವನ್ನಿ ಬಟ್ಟಿಸ್ಟಾ ಡೊನಾಟಿ (1826-73) ಹುಟ್ಟಿದ ದಿನ. ಈತ ದೂಮಕೇತುವಿನ ಬಾಲದಲ್ಲಿ `ಮಿನುಗುವ ಅನಿಲ' (luminous gas) ಇದೆ ಎಂಬುದನ್ನು ಮೊತ್ತ ಮೊದಲ ಬಾರಿಗೆ ಗಮನಿಸಿದ. ಹಾಗೂ ಧೂಮಕೇತುವಿನ ಬಾಲ ಹೊಳೆಯುವುದು ಕೇವಲ ಸೂರ್ಯನ ಬೆಳಕಿನ ಪ್ರತಿಫಲನದಿಂದ ಅಲ್ಲ ಎಂದು ವಿವರಿಸಿದ.

ಇಂದಿನ ಇತಿಹಾಸ History Today ಡಿಸೆಂಬರ್ 15

ಇಂದಿನ ಇತಿಹಾಸ

ಡಿಸೆಂಬರ್ 15


ಭಾರತದಲ್ಲಿ ಸಾಲದ ಶೂಲಕ್ಕೆ ಸಿಲುಕಿ ಪ್ರತಿ ದಿನ 46 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು. ರೈತರ ಆತ್ಮಹತ್ಯೆ ಪ್ರಮಾಣ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅಧಿಕ!. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗವು (ಎನ್‌ಸಿಆರ್‌ಬಿ) ಹೊರತಂದಿರುವ ಅಪಘಾತ ಮತ್ತು ಆತ್ಮಹತ್ಯೆ ಮೇಲಿನ ವರದಿಯಲ್ಲಿ ಇದನ್ನು ತಿಳಿಸಲಾಯಿತು. ಕಳೆದ ವರ್ಷ ದೇಶದ ಎಲ್ಲೆಡೆ 2,369 ಮಹಿಳೆಯರ ಸಹಿತ ಒಟ್ಟು 16,632 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.

2008: ಭಾರತದಲ್ಲಿ ಸಾಲದ ಶೂಲಕ್ಕೆ ಸಿಲುಕಿ ಪ್ರತಿ ದಿನ 46 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು. ರೈತರ ಆತ್ಮಹತ್ಯೆ ಪ್ರಮಾಣ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅಧಿಕ!. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗವು (ಎನ್‌ಸಿಆರ್‌ಬಿ) ಹೊರತಂದಿರುವ ಅಪಘಾತ ಮತ್ತು ಆತ್ಮಹತ್ಯೆ ಮೇಲಿನ ವರದಿಯಲ್ಲಿ ಇದನ್ನು ತಿಳಿಸಲಾಯಿತು. ಕಳೆದ ವರ್ಷ ದೇಶದ ಎಲ್ಲೆಡೆ 2,369 ಮಹಿಳೆಯರ ಸಹಿತ ಒಟ್ಟು 16,632 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2007ರಲ್ಲಿ ದೇಶದಲ್ಲಿ ಒಟ್ಟು 1,22,637 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪೈಕಿ ರೈತರ ಪ್ರಮಾಣ ಶೇ 14.4ರಷ್ಟಿದೆ. 2006ರಲ್ಲಿ 17,060 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 1997ರಿಂದೀಚೆಗೆ ದೇಶದಲ್ಲಿ ಒಟ್ಟು 1,82,936 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ 2007ರಲ್ಲಿ 4,238 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2006ಕ್ಕೆ ಹೋಲಿಸಿದರೆ ಇದು 215ರಷ್ಟು ಕಡಿಮೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ (2,135), ಆಂಧ್ರಪ್ರದೇಶ (1,797), ಛತ್ತೀಸ್‌ಗಡ (1,593), ಮಧ್ಯಪ್ರದೇಶ (1,263), ಕೇರಳ (1,263), ಪಶ್ಚಿಮ ಬಂಗಾಳ (1,102) ನಂತರದ ಸ್ಥಾನಗಳಲ್ಲಿದ್ದವು. 2006ರಲ್ಲೂ ಇದೇ ಏಳು ರಾಜ್ಯಗಳೇ ರೈತರ ಆತ್ಮಹತ್ಯೆಯಲ್ಲಿ ಮುಂಚೂಣಿಯಲ್ಲಿದ್ದವು. 2006ಕ್ಕೆ ಹೋಲಿಸಿದರೆ 2007ರಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಸ್ವಲ್ಪ ಇಳಿದ್ದಿದರೆ, ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಹೆಚ್ಚಳವಾಗಿದ್ದುದು ಬೆಳಕಿಗೆ ಬಂತು.

2008: ಇರಾಕಿಗೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಮೇಲೆ ಇರಾಕಿ ಪತ್ರಕರ್ತನೊಬ್ಬ ಬೂಟು ಎಸೆದ ಘಟನೆ ಬಾಗ್ದಾದಿನಲ್ಲಿ ನಡೆಯಿತು. ಇರಾಕ್ ಪ್ರಧಾನಿ ನೂರಿ-ಅಲ್-ಮಲಿಕಿ ಜೊತೆ ಬುಷ್ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆಯಿತು. ಬುಷ್ ಹಾಗೂ ಮಲಿಕಿ ಪರಸ್ಪರ ಕೈಕುಲುಕಲು ಅಣಿಯಾಗುತ್ತಿದ್ದಾಗ 20 ಅಡಿ ದೂರದಲ್ಲಿ ಕುಳಿತಿದ್ದ ಕೈರೋದಿಂದ ಪ್ರಸಾರ ಮಾಡುವ ಅಲ್-ಬಾಗ್ದಾದಿಯಾ ಟಿವಿ ಚಾನೆಲ್‌ನ ವರದಿಗಾರ ಮುಂತಾಜೀರ್ ಅಲ್-ಜೈದಿ ಕುರ್ಚಿಯಿಂದ ಎದ್ದು 'ಏ ನಾಯಿ, ಇದು ನಿನಗೆ ಬೀಳ್ಕೊಡುಗೆಯ ಮುತ್ತು. ಇದು ವಿಧವೆಯರು, ಅನಾಥರು ಹಾಗೂ ಸತ್ತವರ ಕೊಡುಗೆ' ಎಂದು ಅರೆಬಿಕ್‌ನಲ್ಲಿ ಅರಚುತ್ತ ಬುಷ್‌ಅವರತ್ತ ಒಂದಾದ ಮೇಲೆ ಒಂದು ಬೂಟುಗಳನ್ನು ಎಸೆದ. ಬೂಟುಗಳು ಗುರಿತಪ್ಪಿ ಹಿಂದಿನ ಗೋಡೆಗೆ ತಾಗಿದವು. ಕೂಡಲೇ ಸಭಾಂಗಣದಲ್ಲಿ ಗೊಂದಲ, ಗೌಜು ಆರಂಭವಾಯಿತು. ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಬುಷ್ ಹೇಳಿದರು. ಇರಾಕ್ ಪತ್ರಕರ್ತರು ಒಮ್ಮಿಂದೊಮ್ಮೆಲೆ ಕಿರುಚತೊಡಗಿದರು. ಆ ಪತ್ರಕರ್ತರೆಲ್ಲ ಘಟನೆಗಾಗಿ ಕ್ಷಮೆ ಯಾಚಿಸುತ್ತಿದ್ದರು ಎಂದು ಬುಷ್ ಆನಂತರ ಹೇಳಿದರು. ಆ ವ್ಯಕ್ತಿ ನನ್ನೆಡೆಗೆ ಬೂಟು ಎಸೆದರೆ ಏನಾಯಿತು. ಅಮೆರಿಕದ ರಾಜಕೀಯ ಪ್ರತಿಭಟನೆಗೆ ಇದು ಸಮನಾಗಿದೆ ಎಂದು ಬುಷ್ ಪತ್ರಕರ್ತರಿಗೆ ಹೇಳಿದರು. ನಿಮಗೆ ವಿವರ ಬೇಕಿದ್ದಲ್ಲಿ ಹೇಳುತ್ತೇನೆ. ಇದು 10ನೇ ನಂಬರ್ ಬೂಟು ಎಂದು ಬುಷ್ ತಮಾಷೆ ಮಾಡಿದರು. ಕೂಡಲೇ ಭದ್ರತಾ ಸಿಬ್ಬಂದಿ ಜೈದಿಯನ್ನು ನೆಲದ ಮೇಲೆ ಕೆಡವಿ ಥಳಿಸಿದರಲ್ಲದೇ ಎಳೆದುಕೊಂಡು ಹೋದರು. ಭದ್ರತಾ ಸಿಬ್ಬಂದಿ ಎಳೆದೊಯ್ಯುವಾಗ ಆತ ನೋವಿನಿಂದ ಅರಚುತ್ತಿದ್ದ. ಕಾರ್ಪೆಟ್ ಮೇಲೆ ರಕ್ತದ ಕಲೆಯೂ ಆಗಿತ್ತು. ಇರಾಕ್ ಸಂಸ್ಕೃತಿಯಲ್ಲಿ ಬೂಟು ಎಸೆಯುವುದು ವ್ಯಕ್ತಿಯೊಬ್ಬನಿಗೆ ಘೋರ ಅವಮಾನ ಮಾಡಿದಂತೆ. 2003ರಲ್ಲಿ ಅಮೆರಿಕದ ಸೈನಿಕರು ಸದ್ದಾಂ ಹುಸೇನ್ ಪ್ರತಿಮೆ ಹೊಡೆದು ಉರುಳಿಸಿದಾಗ ನೆರೆದಿದ್ದ ಜನ ಪ್ರತಿಮೆಗೆ ಬೂಟು ಎಸೆದಿದ್ದರು.

2008: ಜುಲೈ 22ರಂದು ನಡೆದ ಯುಪಿಎ ಸರ್ಕಾರದ ವಿಶ್ವಾಸಮತ ಗೊತ್ತುವಳಿ ಮೇಲಿನ ಮತದಾನದ ಸಂದರ್ಭದಲ್ಲಿ ಸಂಸದರಿಗೆ ಹಣದ ಆಮಿಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಸಂಸದೀಯ ಸಮಿತಿಯು ಸಮಾಜವಾದಿ ಪಕ್ಷದ ಅಮರ್ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷದ ಅಹ್ಮದ್ ಪಟೇಲ್ ಅವರನ್ನು ನಿರ್ದೋಷಿಗಳೆಂದು ಘೋಷಿಸಿತು. ಈ ಇಬ್ಬರೂ ರಾಜ್ಯಸಭಾ ಸದಸ್ಯರ ವಿರುದ್ಧ ಮಾಡಿದ ಆರೋಪಗಳಿಗೆ ಸೂಕ್ತ ಪುರಾವೆಗಳಿಲ್ಲ. ಹೀಗಾಗಿ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗದು ಎಂದು ಸಮಿತಿಯು ತನ್ನ 466 ಪುಟಗಳ ವರದಿಯಲ್ಲಿ ತಿಳಿಸಿತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೀಯ ಸಮಿತಿ ಅಮರ್ ಸಿಂಗ್ ಮತ್ತು ಅಹ್ಮದ್ ಪಟೇಲ್ ಅವರು ದೋಷಮುಕ್ತರು ಎಂದು ಹೇಳಿದ್ದರಿಂದ ಸತ್ಯ ಹೊರಬರದಂತೆ ಆಗಿದೆ ಎಂದು ಬಿಜೆಪಿ ಸಂಸದ ಹಾಗೂ ಈ ಎಲ್ಲ ಪ್ರಕರಣಗಳ ರೂವಾರಿ ಅಶೋಕ್ ಅರ್ಗಾಲ್ ಹೇಳಿದರು. 'ಸಂಸದೀಯ ಸಮಿತಿಯ ತನಿಖೆಯಿಂದ ನನಗೆ ನ್ಯಾಯ ಸಿಕ್ಕಿಲ್ಲ. ಸಮಿತಿಯು ಮುಖ್ಯ ಆರೋಪಿ ಅಮರ್ ಸಿಂಗ್ ಅವರನ್ನು ಪ್ರಶ್ನಿಸಿಯೇ ಇಲ್ಲ. ಅವರ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗಿತ್ತು, ಆದರೆ ಅದು ನಡೆದೇ ಇಲ್ಲ' ಎಂದು ಅವರು ತಿಳಿಸಿದರು. ಯುಪಿಎ ನಾಯಕರು ಬಿಜೆಪಿ ಸಂಸದರ ಮಂಪರು ಪರೀಕ್ಷೆಗೆ ಒತ್ತಾಯಿಸಿದ್ದರು. ಅದಕ್ಕೆ ನಾನು ತಯಾರಾಗಿದ್ದೆ. ಸಂಜೀವ್ ಸಕ್ಸೇನಾಗೇ ಮಂಪರು ಪರೀಕ್ಷೆ ನಡೆಸಬೇಕಿತ್ತು. ಆಗ ಆತ ಹಣ ಎಲ್ಲಿಂದ ಬಂತು ಎಂಬುದನ್ನು ತಿಳಿಸುತ್ತಿದ್ದ ಎಂದು ಅವರು ಹೇಳಿದರು.

2008: ಮಕ್ಕಳ ಆಪ್ತಮಿತ್ರನಂತಿರುವ ಪೊಗೊ ಚಾನೆಲ್ ಮುಂಬೈಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಬೆಂಗಳೂರಿನ ಹನ್ನೊಂದು ವರ್ಷದ ಬಾಲಕ ಆಕಾಶ್ ಪ್ರತಿಷ್ಠಿತ 'ಪೊಗೊ ಅಮೇಜಿಂಗ್ ಕಿಡ್ಸ್ ಅವಾರ್ಡ್ 2008' ಪ್ರಶಸ್ತಿಯನ್ನು ಗೆದ್ದುಕೊಂಡರು. ಐದು ವರ್ಷಗಳಿಂದ ಪೊಗೊ ಆಯೋಜಿಸುತ್ತಾ ಬಂದ 'ಅಮೇಜಿಂಗ್ ಕಿಡ್ಸ್ ಅವಾರ್ಡ್'ನಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಆಕಾಶ್ ತನ್ನ ಮಾಂತ್ರಿಕ ಕೊಳಲು ವಾದನದಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು (ಸಂಗೀತಗಾರ ವಿಭಾಗದಲ್ಲಿ) ಗೆದ್ದು ಅತ್ಯುತ್ತಮ ಸಾಧನೆ ಮಾಡಿದರು.

2008: ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ತಿಂಗಳ ಸಂಬಳವನ್ನು ಮೂರು ಪಟ್ಟು ಹೆಚ್ಚಿಸುವ ಪ್ರಸ್ತಾವಕ್ಕೆ ಸಂಸತ್ ತನ್ನ ಅನುಮತಿ ನೀಡಿತು. ಲೋಕಸಭೆಯಲ್ಲಿ ಈ ಮೊದಲೇ ಅಂಗೀಕಾರಗೊಂಡಿದ್ದ ಈ ಪ್ರಸ್ತಾವಕ್ಕೆ ಈದಿನ ರಾಜ್ಯಸಭೆಯೂ ಸಮ್ಮತಿ ಸೂಚಿಸಿತು. ರಾಷ್ಟ್ರಪತಿ ಸಂಬಳ ಈಗಿನ 50 ಸಾವಿರದಿಂದ ರೂಪಾಯಿಗಳಿಂದ 1.5 ಲಕ್ಷ ರೂಪಾಯಿಗಳಿಗೆ ಹೆಚ್ಚಿದರೆ, ಉಪರಾಷ್ಟ್ರಪತಿ ಸಂಬಳ 40 ಸಾವಿರದಿಂದ 1.25 ಲಕ್ಷಕ್ಕೆ ಹಾಗೂ ರಾಜ್ಯಪಾಲರ ಸಂಬಳ 36 ಸಾವಿರದಿಂದ ರೂ 1.10 ಲಕ್ಷಕ್ಕೆ ಹೆಚ್ಚುವುದು. ಜೊತೆಗೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಅವರ ಪಿಂಚಣೆ ಪ್ರಮಾಣವು ವೇತನದ ಶೇ 50ರಷ್ಟಾಗುವುದು.. ಈ ಎಲ್ಲ ಹೆಚ್ಚಳ 2006ರ ಜನವರಿಯಿಂದಲೇ ಪೂರ್ವಾನ್ವಯವಾಗುವುದು.

2008: ಇತರೆ ಹಿಂದುಳಿದ ವರ್ಗದ (ಒಬಿಸಿ) ಜನರ ಪೈಕಿ ವರ್ಷಕ್ಕೆ 4.5 ಲಕ್ಷ ರೂಪಾಯಿ ಆದಾಯ ಗಳಿಸುವವರನ್ನು ಮಾತ್ರ ಕೆನೆಪದರ ವಿಭಾಗದಲ್ಲಿ ಸೇರಿಸಬಹುದು ಎಂದು ಕಳೆದ ಅಕ್ಟೋಬರಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿತು. ಹಿರಿಯ ಶಿಕ್ಷಣ ತಜ್ಞ ಪಿ. ವಿ. ಇಂದಿರೇಶನ್ ಮತ್ತು ಇತರರು ಸಲ್ಲಿಸಿದ ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಮತ್ತು ಪಿ. ಸದಾಶಿವಂ ಅವರ ಪೀಠ ಸರ್ಕಾರದ ನಿರ್ಧಾರಕ್ಕೆ ಏನು ಕಾರಣ ಎಂದು ನಾಲ್ಕು ವಾರಗಳ ಒಳಗೆ ಉತ್ತರ ನೀಡುವಂತೆ ತಿಳಿಸಿ ನೋಟಿಸ್ ಜಾರಿಗೊಳಿಸಿತು. ಸರ್ಕಾರವು ಕಳೆದ ಅಕ್ಟೋಬರ್ 13ರಂದು ಹೊರಡಿಸಿದ ತನ್ನ ಆದೇಶದಲ್ಲಿ ಒಬಿಸಿ ಕೆನೆಪದರದ ಆದಾಯ ಮಿತಿಯನ್ನು ವಾರ್ಷಿಕ 2.5 ಲಕ್ಷ ರೂಪಾಯಿಯಿಂದ 4.5 ಲಕ್ಷಕ್ಕೆ ಹೆಚ್ಚಿಸಿತ್ತು. ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠವೊಂದು ಕಳೆದ ಏಪ್ರಿಲ್ 10ರಂದು ತೀರ್ಪು ನೀಡಿ ಸರ್ಕಾರಿ ಅನುದಾನದಿಂದ ನಡೆಯುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಯವರಿಗೆ ಶೇ 27ರಷ್ಟು ಮೀಸಲಾತಿ ನೀಡುವುದನ್ನು ಎತ್ತಿ ಹಿಡಿದಿತ್ತು ಮತ್ತು 'ಕೆನೆಪದರ'ಕ್ಕೆ ಒಳಪಟ್ಟ ವಿದ್ಯಾರ್ಥಿಗಳನ್ನು ಈ ಮೀಸಲಾತಿಯಿಂದ ಹೊರಗೆ ಇಡಬೇಕು ಎಂದೂ ಹೇಳಿತ್ತು.

2008: ಡಾ. ಪು.ತಿ.ನ. ಟ್ರಸ್ಟ್ ವತಿಯಿಂದ ನೀಡಲಾಗುವ 2007ನೇ ಸಾಲಿನ ಪು.ತಿ.ನ. ಕಾವ್ಯ ಪುರಸ್ಕಾರಕ್ಕೆ ಜಿ.ಎನ್. ಮೋಹನ್ ಅವರ 'ಪ್ರಶ್ನೆಗಳಿ ರುವುದು ಷೇಕ್ಸ್‌ಪಿಯರನಿಗೆ' ಮತ್ತು ಅವರ 'ಒಡೆಯಲಾರದ ಪ್ರತಿಮೆ' ಕೃತಿಗಳನ್ನು ಆಯ್ಕೆ ಮಾಡಲಾಯಿತು.

2008: ದೇಶದ ಪ್ರಥಮ ಹವಾನಿಯಂತ್ರಿತ ಬಸ್ ತಂಗುದಾಣವನ್ನು (ಬಸ್ ಶೆಲ್ಟರ್) ಬಿಬಿಎಂಪಿ ಜಂಟಿ ಆಯುಕ್ತ (ಜಾಹೀರಾತು) ಗೋವಿಂದರಾಜು ಬೆಂಗಳೂರಿನಲ್ಲಿ ಉದ್ಘಾಟಿಸಿದರು. ರಿಲಯನ್ಸ್ ಸಮೂಹದ ಬಿಗ್‌ ಸ್ಟ್ರೀಟ್, ಟೆಲಿಕಾಂ ರಂಗದ ಪ್ರಮುಖ ಕಂಪೆನಿ ಭಾರತಿ ಏರ್‌ಟೆಲ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಕಸ್ತೂರಬಾ ರಸ್ತೆಯಲ್ಲಿ (ಕಬ್ಬನ್ ಉದ್ಯಾನ ಪ್ರವೇಶ ದ್ವಾರದ ಬಳಿ) ಮೊದಲ ಹವಾನಿಯಂತ್ರಿತ ಬಸ್ ಶೆಲ್ಟರ್ ನಿರ್ಮಾಣವಾಗಿದೆ. ಒಮ್ಮೆಗೆ 20 ಜನರು ಕುಳಿತುಕೊಳ್ಳಬಹುದಾದ ಈ ತಂಗುದಾಣಕ್ಕೆ ಸಮವಸ್ತ್ರಧಾರಿ ಭದ್ರತಾ ಸಿಬ್ಬಂದಿಯಿಬ್ಬರು ನಿರಂತರ ರಕ್ಷಣೆ ಒದಗಿಸುವರು. ಈ ಶೆಲ್ಟರ್ ನಿರ್ಮಾಣಕ್ಕೆ ಎಂಟು ಲಕ್ಷ ರೂಪಾಯಿ ವೆಚ್ಚವಾಗಿದೆ. ಬಿಗ್ ಸ್ಟ್ರೀಟ್ ಕಂಪೆನಿ ನಗರದಲ್ಲಿ 172 ಸಾಮಾನ್ಯ ಬಸ್ ಶೆಲ್ಟರುಗಳ ನಿರ್ಮಾಣದ ಗುತ್ತಿಗೆಯನ್ನೂ ಪಡೆದಿದೆ.

2008: ದೂರ ಸಂಪರ್ಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎಂದು ಹೇಳಲಾಗುವ ತ್ರೀಜಿ ತಂತ್ರಜ್ಞಾನ ಸೇವೆಯನ್ನು ದೆಹಲಿ ವ್ಯಾಪ್ತಿಯಲ್ಲಿ ಸರ್ಕಾರಿ ಸ್ವಾಮ್ಯದ ಮಹಾನಗರ ದೂರ ಸಂಪರ್ಕ ನಿಗಮ (ಎಂಟಿಎಂಎಲ್)ವು ಆರಂಭಿಸುತ್ತಿದ್ದು , ಪ್ರಧಾನಿ ಮನಮೋಹನ್ ಸಿಂಗ್ ಅವರು ನವದೆಹಲಿಯಲ್ಲಿ ಇದಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಹೊಸ ತ್ರೀಜಿ ತಂತ್ರಜ್ಞಾನವನ್ನು 'ಜಾದೂ' ಹೆಸರಿನಿಂದ ಕರೆಯಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಹಾಜರಿದ್ದ ಕೇಂದ್ರ ದೂರ ಸಂಪರ್ಕ ಸಚಿವ ಎ.ರಾಜಾ ಅವರು ವೀಡಿಯೋ ಕರೆ ಮಾಡುವ ಮೂಲಕ ತ್ರೀಜಿ ತಂತ್ರಜ್ಞಾನ ಸಾಮರ್ಥ್ಯವನ್ನು ಪ್ರದರ್ಶಿಸಿದರು.

2008: ಚೆನ್ನೈ ನಗರದ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟಿನ ಅಂತಿಮ ದಿನದ ಪಂದ್ಯದಲ್ಲಿ ಹರ್ಷೋದ್ಘಾರಗಳ ಮಧ್ಯೆ ಭಾರತವು ಇಂಗ್ಲೆಂಡ್ ವಿರುದ್ಧ ಆರು ವಿಕೆಟುಗಳ ವಿಜಯ ಸಾಧಿಸಿತು. ಅನುಭವಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ತಮ್ಮ 41ನೇ ಶತಕ ಬಾರಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುನ್ನತ ಶತಕ ಸಿಡಿಸಿದವರ ಸಾಲಿಗೆ ನಾಲ್ಕನೆಯವರಾಗಿ ಸೇರಿದ ದಾಖಲೆಯೂ ಕ್ರೀಡಾ ಇತಿಹಾಸದ ಪುಟಕ್ಕೆ ಸೇರ್ಪಡೆಯಾಯಿತು.

2007: ತಮಗೆ ಅನುಕೂಲವಾಗುವಂತೆ ಸಂವಿಧಾನ ತಿದ್ದುಪಡಿ ಮಾಡಿದ ನಂತರ ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಆರು ವಾರಗಳ ತುರ್ತುಪರಿಸ್ಥಿತಿಯನ್ನು ತೆಗೆದುಹಾಕಿದರು. ತುರ್ತುಪರಿಸ್ಥಿತಿ, ತಾತ್ಕಾಲಿಕ ಸಾಂವಿಧಾನಿಕ ವ್ಯವಸ್ಥೆ ಹಾಗೂ ಮೂಲಭೂತ ಹಕ್ಕುಗಳ ಮೇಲಿನ ನಿರ್ಬಂಧ ತೆಗೆದು ಹಾಕುವ ಮೂರಂಶಗಳ ರಾಷ್ಟ್ರಪತಿ ಆದೇಶಗಳಿಗೆ ಅವರು ಸಹಿ ಹಾಕಿದರು. ತನ್ಮೂಲಕ 1973ರ ಸಂವಿಧಾನ ವ್ಯವಸ್ಥೆ ಮತ್ತೆ ಜಾರಿಗೆ ಬಂತು. ಆದರೆ, ನವೆಂಬರ್ 29ರಂದು ಸೇನಾ ಮುಖ್ಯಸ್ಥನ ಪದವಿ ತ್ಯಜಿಸಿದರೂ, ಆರು ವಾರಗಳ ತುರ್ತುಪರಿಸ್ಥಿತಿ ಅವಧಿಯಲ್ಲಿ ಕೈಗೊಂಡ ಸಂವಿಧಾನ ತಿದ್ದುಪಡಿಗಳು ಹಾಗೂ ಈ ಕ್ರಮಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ಮಾಡಿದ್ದು ಪ್ರತಿಪಕ್ಷಗಳಲ್ಲಿ ಅಸಮಾಧಾನ ಮೂಡಿಸಿತು.

2007: ಇಂಟರ್ನೆಟ್ ಮೂಲಕ ಅಕ್ರಮವಾಗಿ ಔಷಧ ವ್ಯಾಪಾರ ಮಾಡುತ್ತಿದ್ದ ಭಾರತೀಯ ವೈದ್ಯನೊಬ್ಬನಿಗೆ ಫಿಲಡಲ್ಫಿಯಾ ನ್ಯಾಯಾಲಯ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಫಿಲಡೆಲ್ಫಿಯಾದ ಟೆಂಪಲ್ ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್ ಪದವಿ ವ್ಯಾಸಂಗ ಮಾಡುತ್ತಿದ್ದ ವೈದ್ಯ ಅಖಿಲ್ ಬನ್ಸಾಲ್ (29) ತಮ್ಮ ಕುಟುಂಬದೊಂದಿಗೆ ಇಂಟರ್ನೆಟ್ ಮೂಲಕ ಅಕ್ರಮವಾಗಿ ಔಷಧ ವ್ಯಾಪಾರ ಮಾಡುತ್ತಿದ್ದು, ಭಾರತದಿಂದ ಅಕ್ರಮವಾಗಿ ತರಿಸಿಕೊಂಡ 11 ದಶಲಕ್ಷ ಔಷಧ ಮಾತ್ರೆಗಳನ್ನು ಅಮೆರಿಕದಲ್ಲಿರುವ 60,000 ಮಂದಿಗೆ ವಿತರಿಸಿದ್ದಾರೆ ಎಂಬುದು ಸರ್ಕಾರಿ ವಕೀಲರ ಆರೋಪ. `ನೀವು ಇಡೀ ದೇಶದ ತುಂಬ ವಿಷ ಹಂಚಿದ್ದೀರಿ' ಎಂದು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಪೌಲ್ ಡೈಮಂಡ್ ಅವರು ಆರೋಪಿ ಅಖಿಲ್ ಬನ್ಸಾಲ್ ಗೆ ಛೀಮಾರಿ ಹಾಕಿದರು.

2007: ಮಾಹಿತಿ ತಂತ್ರಜ್ಞಾನ ಸಂಸ್ಥೆ `ಇನ್ಫೋಸಿಸ್' ಅಧ್ಯಕ್ಷ ಎನ್. ಆರ್. ನಾರಾಯಣ ಮೂರ್ತಿ ಅವರು ಸಾಫ್ಟವೇರ್ ಉದ್ದಿಮೆ, ವ್ಯಾಪಾರ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯನ್ನು ಗುರುತಿಸಿ ಬ್ರಿಟನ್ನಿನ ಲ್ಯಾನ್ಸೆಸ್ಟರ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತು. ಲ್ಯಾನ್ಸೆಸ್ಟರ್ ವಿಶ್ವವಿದ್ಯಾಲಯದಲ್ಲಿ ನಡೆದ ವಿಶೇಷ ಪದವಿ ಪ್ರದಾನ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಸರ್ ಕ್ರಿಸ್ ಬೊನಿಂಗ್ಟನ್ ಅವರು ನಾರಾಯಣ ಮೂರ್ತಿ ಅವರಿಗೆ `ಗೌರವ ಡಾಕ್ಟರೇಟ್' ಪದವಿ ಪ್ರದಾನ ಮಾಡಿದರು. ನಾರಾಯಣ ಮೂರ್ತಿ ಅವರು 1981 ರಲ್ಲಿ ಆರು ಜನ ಸಾಫ್ಟವೇರ್ ತಂತ್ರಜ್ಞರೊಂದಿಗೆ ಸೇರಿಕೊಂಡು ಇನ್ಫೋಸಿಸ್ ಸಂಸ್ಥೆ ಸ್ಥಾಪಿಸಿ, 21 ವರ್ಷಗಳ ಕಾಲ ಅದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

2007: ಪೂರ್ವ ಇಂಡೋನೇಷ್ಯಾದ ಮಲುಕಾ ದ್ವೀಪದಲ್ಲಿ ಭಾರಿ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.1 ರಷ್ಟು ಇತ್ತು. ಸೌಮ್ ಲಕಿ ಪಟ್ಟಣದ ವಾಯವ್ಯ ಭಾಗದಿಂದ 128 ಕಿ.ಮೀ ದೂರದಲ್ಲಿ ಕಂಪನವು ಕೇಂದ್ರೀಕೃತವಾಗಿತ್ತು.

2007: ಕುದುರೆಗಳ ಹೆಜ್ಜೆಗಳ ಸದ್ದು ಮತ್ತು ಹೃದಯಕ್ಕೆ ತಂಪು ನೀಡುವ ಇಂಪಾದ ಮೆಲು ಸಂಗೀತದ ಮಧ್ಯೆ ಸಮವಸ್ತ್ರ ಧರಿಸಿದ ಮರದಗಲ ಎದೆಯ ರಾಷ್ಟ್ರಪತಿಗಳ ಅಂಗರಕ್ಷಕರು ಪ್ರತಿ ಶನಿವಾರ ಭಾರತದ ರಾಷ್ಟ್ರಪತಿ ಭವನದಲ್ಲಿ ನಡೆಸುವ ಕರ್ತವ್ಯದ ಹಸ್ತಾಂತರ (ಚೇಂಜ್ ಆಫ್ ಗಾರ್ಡ್) ಈ ಬಾರಿ ಐತಿಹಾಸಿಕ ದಿನವಾಗಿ ಮಾರ್ಪಟ್ಟಿತು. ಭಾರತದ ರಾಷ್ಟ್ರಪತಿ ಭವನದ ಇತಿಹಾಸದಲ್ಲಿ 2007ರ ಡಿಸೆಂಬರ್ 15 ಸ್ಮರಣೀಯ ದಿನವಾಯಿತು. ಇದೇ ಮೊದಲ ಬಾರಿಗೆ ಈ ಸಾಂಪ್ರದಾಯಿಕ ವಿಧಿಯನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಯಿತು. ರಾಷ್ಟ್ರಪತಿ ಭವನವನ್ನು ಜನರಿಗೆ ಹತ್ತಿರವಾಗಿಸುವ ಪ್ರಯತ್ನವಾಗಿ ಈಗ ಈ `ಚೇಂಜ್ ಆಫ್ ಗಾರ್ಡ್' ನ್ನು ಸಾರ್ವಜನಿಕರಿಗೆ ಮುಕ್ತವಾಗಿಸಿ, ಅದರಲ್ಲಿ ಹಲವು ಮಾರ್ಪಾಟು ಸಹ ಮಾಡಲಾಯಿತು.

2007: ಖ್ಯಾತ ಬ್ಯಾಟ್ಸ್ ಮನ್ನರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಅನುಭವಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ನೀಡುವ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದರು.

2007: ಬೆಂಗಳೂರು ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಿಹಾರ ಗಡಿ ಭಾಗದ ರಾಂಪುರ್ ಗ್ರಾಮದ ಶಂಭು- ಪೂನಮ್ ದಂಪತಿಯ ಎರಡು ವರ್ಷದ ಬಾಲಕಿ ಲಕ್ಷ್ಮಿ ಈದಿನ ಸ್ಪರ್ಶ ಆಸ್ಪತ್ರೆಯಿಂದ ಮನೆಗೆ ಮರಳಿದಳು. ಈ ಬಾಲಕಿ ನಾಲ್ಕು ಹೆಚ್ಚುವರಿ ಕೈಕಾಲುಗಳನ್ನು ಹೊಂದಿದ್ದ ಪರಿಣಾಮ ಹುಟ್ಟಿನಿಂದಲೂ ತೊಂದರೆ ಅನುಭವಿಸುತ್ತಿದ್ದಳು. ಸ್ಪರ್ಶ ಆಸ್ಪತ್ರೆ ಮುಖ್ಯಸ್ಥ ಡಾ. ಶರಣ ಪಾಟೀಲ್ ನೇತೃತ್ವದ 30 ತಜ್ಞ ವೈದ್ಯರ ತಂಡ 2007ರ ನವಂಬರ್ 6 ಹಾಗೂ 7ರಂದು ಸತತ 27 ಗಂಟೆಗಳ ಕಾಲ ಲಕ್ಷ್ಮಿಗೆ ಶಸ್ತ್ರಚಿಕಿತ್ಸೆ ನಡೆಸಿತ್ತು. ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ತಂಡ ರುಂಡವಿಲ್ಲದ ಲಕ್ಷ್ಮಿಯ ಅವಳಿ ದೇಹದ ಭಾಗವನ್ನು (2ಕೈ, 2ಕಾಲು) ಕತ್ತರಿಸಿ ತೆಗೆದಿತ್ತು. ನಂತರ ಅತ್ಯಂತ ಸೂಕ್ಷ್ಮವಾದ ಬೆನ್ನುಹುರಿ ಬೇರ್ಪಡಿಸುವ ಕಾರ್ಯ, ಸೊಂಟದ ಭಾಗವನ್ನು ಸಮರ್ಪಕಗೊಳಿಸುವ ಕಾರ್ಯ, ಮೂತ್ರಪಿಂಡ ಮರುಜೋಡಣೆ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗಳನ್ನು ಲಕ್ಷ್ಮಿಗೆ ಯಶಸ್ವಿಯಾಗಿ ಮಾಡಲಾಗಿತ್ತು.

2007: ಏಷ್ಯಾದಲ್ಲಿಯೇ ಅತಿ ಎತ್ತರದ ಆನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ `ಶಿವಶಂಕರನ್' ಉತ್ತರ ಕೇರಳದ ಒಟ್ಟಪಾಲಮ್ಮಿನಲ್ಲಿ ಸಾವನ್ನಪ್ಪಿತು. ನೂರಾರು ದೇಗುಲಗಳ ಉತ್ಸವಗಳಲ್ಲಿ ಪಾಲ್ಗೊಂಡಿದ್ದ 56 ವರ್ಷ ವಯಸ್ಸಿನ `ಶಿವಶಂಕರನ್' 10 ಅಡಿ 9 ಅಂಗುಲ ಎತ್ತರವಿತ್ತು. ಈ ಎತ್ತರದಿಂದಲೇ ಜನರ ಗಮನ ಸೆಳೆದಿತ್ತು. ಒಟ್ಟಪಾಲಮ್ಮಿನ ದೇಗುಲ ಒಂದರ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಈ ಆನೆ ಟ್ರಕ್ಕಿನಿಂದ ಕೆಳಗಿಳಿಸುವಾಗ ಆಯತಪ್ಪಿ ಕೆಳಗೆ ಬಿದ್ದಿತು. ಪಶುವೈದ್ಯರ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆಯಿತು.

2007: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸರೆಡ್ಡಿ ಅವರನ್ನು ತತ್ ಕ್ಷಣ ಹುದ್ದೆಯಿಂದ ವಜಾಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ರೆಡ್ಡಿ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ನೇಮಕಾತಿಯ ಗುತ್ತಿಗೆ ರದ್ದು ಮಾಡುವಂತೆ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

2007: ಎಚ್ ಎಂ ಟಿ ಕಂಪೆನಿಯಿಂದ ಎರಡು ಲಕ್ಷ ರೂಪಾಯಿ ಪಡೆದು ನಕಲಿ ಛಾಪಾ ಕಾಗದ ನೀಡಿ (ಎಂಬೋಸ್ ಮೆಂಟ್) ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂಲಾಲಾ ತೆಲಗಿ, ವಜೀರ್ ಅಹ್ಮದ್ ಸಾಲಿಕ್, ಬದ್ರುದಿನ್ ಜಮಾದಾರ್ ಅವರಿಗೆ ಐದು ವರ್ಷ ಶಿಕ್ಷೆ ವಿಧಿಸಿ ಪರಪ್ಪನ ಅಗ್ರಹಾರ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. ಮೂವರಿಗೂ ತಲಾ 4.50 ಲಕ್ಷ ರೂ ದಂಡ ಮತ್ತು ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಪ್ರದೀಪ್ ಕುಮಾರ್ ಗೆ ಒಂದು ವರ್ಷ ಕಠಿಣ ಸಜೆ ವಿಧಿಸಿ ವಿಶೇಷ ನ್ಯಾಯಾಧೀಶರಾದ ಸಿ.ಜಿ. ಹುನಗುಂದ್ ಅವರು ತೀರ್ಪು ನೀಡಿದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಆರೋಪಿಗಳಾದ ಅನೀಸ್ ಖಾನ್, ಇರ್ಫಾನ್ ಅಹಮ್ಮದ್ ಮತ್ತು ಸಮೀವುಲ್ಲಾ ಅವರನ್ನು ಖುಲಾಸೆಗೊಳಿಸಿದರು.

2007: ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಕಾರ್ಯಕ್ರಮ ಚಂದ್ರಯಾನ -1ಕ್ಕೆ ದ್ವಿಮುಖ ಸಂಪರ್ಕ ಸಾಧಿಸುವ ಆಂಟೆನಾವನ್ನು ಬೆಂಗಳೂರಿನ ಹೊರವಲಯದಲ್ಲಿ ಇಸ್ರೋ ಸ್ಥಾಪಿಸಿದ್ದು, ಅದನ್ನು ಈದಿನ ಪತ್ರಕರ್ತರಿಗೆ ತೋರಿಸಲಾಯಿತು. ದೊಡ್ಡ ಆಲದಮರದ ಬಳಿಯ ಬ್ಯಾಲಾಳುವಿನಲ್ಲಿ ಸ್ಥಾಪಿಸಿರುವ 32 ಮೀಟರ್ ವ್ಯಾಸದ ಆಂಟೆನಾ ಮತ್ತು ಇದಕ್ಕೆ ಪೂರಕ ಸಂಪರ್ಕ ಸಾಧನಗಳಿಂದ ಚಂದ್ರಯಾನ-1 ಉಪಗ್ರಹ ಹಾಗೂ ಭೂಮಿಯ ನಡುವೆ ದ್ವಿಮುಖ ಸಂಪರ್ಕ ಸಾಧ್ಯವಾಗುತ್ತದೆ.

2006: ಹತ್ತೊಂಬತ್ತು ವರ್ಷಗಳ ಹಿಂದೆ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರನ್ನು ಹಿಂಸೆ ನೀಡಿ ಕೊಂದ ಪ್ರಕರಣದಲ್ಲಿ ದೆಹಲಿಯ ಮಾಜಿ ಎಸಿಪಿ ಋಷಿಪ್ರಕಾಶ್ ತ್ಯಾಗಿ (65) ಅವರಿಗೆ ನವದೆಹಲಿಯ ತ್ವರಿತ ಗತಿ ನ್ಯಾಯಾಲಯವು ಮರಣದಂಡನೆ ವಿಧಿಸಿತು. ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪದ ತೀರ್ಪು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು.

2006: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರುವ ಗಗನಯಾತ್ರಿಗಳಾದ ಬಾಬ್ ಕರ್ಬಿಮ್ ಮತ್ತು ಕ್ರಿಸ್ಟರ್ ಫಗ್ ಸ್ಯಾಂಗ್ ಮತ್ತೊಮ್ಮೆ ಬಾಹ್ಯಾಕಾಶ ನಡಿಗೆ ನಡೆಸಿ ನಿಲ್ದಾಣದ ಅರ್ಧ ಭಾಗಕ್ಕೆ ವಿದ್ಯುತ್ ಪೂರೈಸುವ ತಂತಿಗಳ ಮರುಜೋಡಣೆ ಕಾರ್ಯ ಕೈಗೊಂಡರು.

2006: ದೋಹಾದಲ್ಲಿ ನಡೆಯುತ್ತಿದ್ದ ಏಷ್ಯನ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ.

2006: ಹಾಡುಹಗಲೇ ತರಗತಿಯಲ್ಲಿ ಮಕ್ಕಳೆದುರು ನಡೆದ ಶಿಕ್ಷಕನ ಘೋರ ಕಗ್ಗೊಲೆಯ ಮುಖ್ಯ ಆರೋಪಿ, ಕೇರಳದ ಸಿಪಿಎಂ ಕಾರ್ಯಕರ್ತ ಎ. ಪ್ರದೀಪನ್ ಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ನ್ಯಾಯಮೂರ್ತಿ ಎಸ್. ಬಿ. ಸಿನ್ಹ ಮತ್ತು ಮಾರ್ಕಾಂಡೇಯ ಕಟ್ಜು ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ಜೀವಾವಧಿ ಸಜೆಗೆ ಇಳಿಸಿ ತೀರ್ಪು ನೀಡಿತು. ಭಾರತೀಯ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗ್ದಿದ ಶಾಲಾ ಶಿಕ್ಷಕ ಕೆ.ಪಿ. ಜೈಕೃಷ್ಣನ್ ಅವರನ್ನು ತರಗತಿಯಲ್ಲೇ ಶಾಲಾ ಮಕ್ಕಳ ಎದುರು ಮಾರಕ ಅಸ್ತ್ರಗಳಿಂದ ಹಲ್ಲೆ ನಡೆಸಿ ಅಟ್ಟಿಸಿಕೊಂಡು ಹೋಗಿ ಕೊಲೆಗೈದುದಕ್ಕಾಗಿ ಆರೋಪಿ ಎ. ಪ್ರದೀಪನ್ ಮತ್ತು ಇತರ ಐವರು ಆಪಾದಿತರಿಗೆ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ನಂತರ ಹೈಕೋರ್ಟ್ ಅದನ್ನು ದೃಢಪಡಿಸಿತ್ತು. ಕೇರಳದ ಕಣ್ಣೂರು ಜಿಲ್ಲೆಯ ಪರಮೇಲ್ನ ಮೊಕೇರಿ ಈಸ್ಟ್ ಯು.ಪಿ. ಸ್ಕೂಲಿನಲ್ಲಿ 1999ರ ಡಿಸೆಂಬರ್ 1ರಂದು ಈ ಭೀಕರ ಘಟನೆ ನಡೆದಿತ್ತು. ಘಟನೆ ನಡೆದ 7 ದಿನಗಳ ಬಳಿಕ ಅಂದರೆ ಡಿಸೆಂಬರ್ 8ರಂದು ಪ್ರಕರಣದ ತನಿಖೆ ಆರಂಭವಾಗಿತ್ತು.

2005: ಸೂರ್ಯನನ್ನು ಹೋಲುವ ನಕ್ಷತ್ರವೊಂದನ್ನು ಪತ್ತೆ ಹಚ್ಚಿರುವುದಾಗಿ ಖಗೋಳ ವಿಜ್ಞಾನಿಗಳು ನ್ಯೂಯಾರ್ಕಿನಲ್ಲಿ ಪ್ರಕಟಿಸಿದರು. ಈ ನಕ್ಷತ್ರದ ಸುತ್ತ ಚಲನಶೀಲ ಅವಶೇಷಗಳು ಕಾಣಿಸಿಕೊಂಡಿದ್ದು ಭೂಮಿಯನ್ನು ಹೋಲುವ ಗ್ರಹದ ರಚನೆ ನಡೆಯುತ್ತಿರಬಹುದು ಎನ್ನಲಾಗಿದೆ. 137 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರ ತನ್ನ ಸುತ್ತ ಗ್ರಹಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ. ನಕ್ಷತ್ರ ಸುಮಾರು 3ಕೋಟಿ ವರ್ಷಗಳಷ್ಟು ಹಳೆಯದು. ಅಲ್ಲಿನ ತಾಪಮಾನ ಮೈನಸ್ 262 ಡಿಗ್ರಿ ಫ್ಯಾರನ್ ಹೀಟ್ ಎಂಬುದು ವಿಜ್ಞಾನಿಗಳ ಅಭಿಮತ.

2005: ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿದ್ದ ಉತ್ತರ ಕರೋಲಿನಾದ ಅಥ್ಲೀಟ್ ಟಿಮ್ ಮಾಂಟ್ಗೊಮರಿ ಸಾಲ್ವೊ ಪಟ್ಟಣದಲ್ಲಿ ತಮ್ಮ ನಿವೃತ್ತಿ ಘೋಷಿಸಿದರು. ಉದ್ದೀಪನ ಮದ್ದು ಸೇವನೆ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಕ್ರೀಡಾ ನ್ಯಾಯ ಪಂಚಾಯ್ತಿಯು ಇವರನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿ ಎರಡು ವರ್ಷದ ಅವಧಿಗೆ ನಿಷೇಧ ಹೇರಿದ ಮರುದಿನವೇ ಮಾಂಟ್ಗೊಮರಿ ನಿವೃತ್ತಿ ಪ್ರಕಟಿಸಿದರು.

2005: ಯಹೂದ್ಯರ ನರಮೇಧದ ಅವಧಿಯ ಗ್ರಾಹಕರಿಗೆ ನಾಜಿಗಳ ಪರ ಸ್ವಿಸ್ ಬ್ಯಾಂಕ್ ನಡೆಸಿದ ವಂಚನೆ ಪ್ರಕರಣ ಸಂಬಂಧದಲ್ಲಿ ಖ್ಯಾತ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಮೊಮ್ಮಗ ಅನ್ಟೋನ್ ವಾಲ್ಟರ್ ಫ್ರಾಯ್ಡ್ ಅವರಿಗೆ 1,68,000 ಡಾಲರ್ ಪರಿಹಾರ ನೀಡುವಂತೆ ಕ್ಯಾಲಿಫೋರ್ನಿಯಾದ ಪ್ಯಾಸಡೇನಾದ ನ್ಯಾಯಾಲಯವೊಂದು ಆದೇಶ ನೀಡಿತು.

2005: ಜನಾಂಗೀಯ ಕಲಹ, ಹಿಂಸಾಚಾರ, ಯುದ್ಧ ಮತ್ತು ಸರ್ವಾಧಿಕಾರದ ಮುಷ್ಠಿಯಲ್ಲಿ ಬಸವಳಿದ ಇರಾಕಿನಲ್ಲಿ ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿತು.

2005: ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ನೀಡುವ ನಾಡೋಜ ಪ್ರಶಸ್ತಿಯ ಗೌರವಕ್ಕೆ ಪ್ರಜಾವಾಣಿಯ ಇಗೋ ಕನ್ನಡ ಅಂಕಣದ ಖ್ಯಾತಿಯ ನಿಘಂಟು ತಜ್ಞ ಬೆಂಗಳೂರಿನ ಪ್ರೊ. ಜಿ. ವೆಂಕಟಸುಬ್ಬಯ್ಯ, ಮೈಸೂರು ವಿ.ವಿ. ಪ್ರಾಧ್ಯಾಪಕಿ ಪ್ರೊ.ಸಿ. ಪಾರ್ವತಮ್ಮ, ಬರಹಗಾರ್ತಿ ಮಂಗಳೂರಿನ ಸಾರಾ ಅಬೂಬಕ್ಕರ್, ರಂಗಭೂಮಿಯ ಹಿರಿಯ ಚೇತನ ಬೆಳಗಾವಿಯ ಏಣಗಿ ಬಾಳಪ್ಪ, ಕಾಷ್ಠ ಶಿಲ್ಪ ಕಲಾವಿದ ಗುಲ್ಬರ್ಗದ ನಾಗಣ್ಣ ಮೋನಪ್ಪ ಬಡಿಗೇರ, ಖ್ಯಾತ ಹರಿದಾಸ ಉಡುಪಿ ಭದ್ರಗಿರಿ ಅಚ್ಯುತದಾಸರು ಆಯ್ಕೆಯಾದರು.

2001: ಪೀಸಾ ವಾಲುಗೋಪುರವನ್ನು 12 ವರ್ಷಗಳ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಭೇಟಿಗಾಗಿ ತೆರೆದಿಡಲಾಯಿತು. 1990ರಲ್ಲಿ ತಜ್ಞರ ಸಲಹೆಯಂತೆ ಗೋಪುರವನ್ನು ಮುಚ್ಚಲಾಗಿತ್ತು.

1966: ಚಿತ್ರ ನಿರ್ಮಾಪಕ ಹಾಗೂ ಅನಿಮೇಟರ್ ವಾಲ್ಟ್ ಡಿಸ್ನಿ ಅವರು ಲಾಸ್ ಏಂಜೆಲಿಸಿನಲ್ಲಿ ತಮ್ಮ 65ನೇ ವಯಸ್ಸಿನ್ಲಲಿ ಮೃತರಾದರು.

1950: ಭಾರತದ `ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭ ಭಾಯಿ ಪಟೇಲ್ ಬಾಂಬೆಯಲ್ಲಿ (ಈಗಿನ ಮುಂಬೈ) ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು.

1944: ಅಮೆರಿಕದ ಸೇನಾ ಮೇಜರ್ ಬ್ಯಾಂಡ್ ಲೀಡರ್ ಗ್ಲೆನ್ನ್ ಮಿಲ್ಲರ್ ಅವರನ್ನು ಪ್ಯಾರಿಸ್ಸಿನತ್ತ್ತ ಒಯ್ಯುತ್ತಿದ್ದ ಏಕ ಎಂಜಿನ್ ವಿಮಾನ ಬ್ರಿಟಿಷ್ ಕಡಲ್ಗಾಲುವೆಯ ಮೇಲೆ ನಾಪತ್ತೆಯಾಯಿತು.

1938: ಸಾಹಿತಿ ಕೆ.ಎಚ್. ಶ್ರೀನಿವಾಸ್ ಜನನ.

1935: ನಟ, ನಾಟಕಕಾರ, ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ ಬಿ.ಎಸ್. ಕೇಶವರಾವ್ ಅವರು ಬಿ.ಕೆ. ಸುಬ್ಬರಾವ್- ನಾಗಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1911: ದೊರೆ ಐದನೇ ಜಾರ್ಜ್ ನವದೆಹಲಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ. ದಿಲ್ಲಿ ದರ್ಬಾರಿನಲ್ಲಿ ರಾಜಧಾನಿಯು ಕಲ್ಕತ್ತಾದಿಂದ (ಈಗಿನ ಕೋಲ್ಕತ್ತಾ) ದೆಹಲಿಗೆ ಸ್ಥಳಾಂತರಗೊಳ್ಳಲಿದೆ ಎಂದು ಪ್ರಕಟಿಸಲಾಯಿತು.

1902: ಸಾಹಿತಿ ಚಂಪಾಬಾಯಿ ದೇಶಪಾಂಡೆ ಜನನ.

1832: ಫ್ರೆಂಚ್ ಸಿವಿಲ್ ಎಂಜಿನಿಯರ್ ಅಲೆಗ್ಸಾಂಡರ್ ಗುಸ್ಟಾವ್ ಐಫೆಲ್ (1832-1923) ಜನ್ಮದಿನ. ನೈಸ್ನಲ್ಲಿ ಖಗೋಳ ವೀಕ್ಷಣಾಲಯಕ್ಕೆ ಚಲಿಸುವಂತಹ ಗುಮ್ಮಟ ಹಾಗೂ ನ್ಯೂಯಾರ್ಕಿನ ಸ್ಟ್ಯಾಚ್ಯು ಆಫ್ ಲಿಬರ್ಟಿಯ ಚೌಕಟ್ಟಿನ ವಿನ್ಯಾಸ ರೂಪಿಸಿದ ಐಫೆಲ್ ಅವರ ಹೆಸರನ್ನು ಫ್ರಾನ್ಸಿನಲ್ಲಿ ನಿರ್ಮಿಸಿದ ಗೋಪುರಕ್ಕೆ ಇರಿಸಲಾಗಿದೆ.

Advertisement