Showing posts with label students. Show all posts
Showing posts with label students. Show all posts

Saturday, August 1, 2026

ಜಂತರ್ ಮಂತರ್ ಪ್ರತಿಭಟನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ

 ಜಂತರ್ ಮಂತರ್ ಪ್ರತಿಭಟನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆದರೆ, ಈ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಈ ವಿಡಿಯೋ ಡಿಜಿಟಲ್ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ 'ಡೀಪ್ ಫೇಕ್' (Deepfake) ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB), 2026 ಆಗಸ್ಟ್‌ 01ರ ಶನಿವಾರ ಸ್ಪಷ್ಟಪಡಿಸಿದೆ.

1. ಪ್ರಧಾನಿ ಮೋದಿಯವರ ಹೆಸರಿನಲ್ಲಿದ್ದ ವಿಡಿಯೋ ಸಂಪೂರ್ಣ ನಕಲಿ

PIB ಫ್ಯಾಕ್ಟ್-ಚೆಕ್ ಘಟಕವು ಶನಿವಾರ ಈ ಕುರಿತು ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣ X (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ತಿರುಚಲಾಗಿದೆ ಎಂದು ತಿಳಿಸಿದೆ.

  • ವಿದ್ಯಾರ್ಥಿ ಪ್ರತಿಭಟನಾಕಾರರ ಕುರಿತು ಪ್ರಧಾನಿಯವರು ಇಂತಹ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.
  • ಈ ನಕಲಿ ವಿಡಿಯೋವನ್ನು ಪಾಕಿಸ್ತಾನ ಮೂಲದ ಪ್ರೊಪಗಾಂಡಾ (ಪ್ರಚಾರ) ಖಾತೆಗಳ ಮೂಲಕ ಭಾರತದಲ್ಲಿ ಗೊಂದಲ ಸೃಷ್ಟಿಸಲು ಹರಡಲಾಗುತ್ತಿದೆ ಎಂದು PIB ಬಹಿರಂಗಪಡಿಸಿದೆ.

ಸಾರ್ವಜನಿಕರು ಅಸಲಿ ಮತ್ತು ನಕಲಿ ವಿಡಿಯೋದ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಲು PIB ಅಸಲಿ ವಿಡಿಯೋದ ಲಿಂಕ್ ಅನ್ನು (PIB Fact Check (@PIBFactCheck) / X ) ಸಹ ಹಂಚಿಕೊಂಡಿದೆ.

ಪಿಐಬಿ ಪ್ರಕಟಿಸಿರುವ ವಿಡಿಯೋ ಕೆಳಗಿದೆ.

2. ದೆಹಲಿ ಡಿಸಿಪಿ ರಾಜೀನಾಮೆ ನೀಡಿದರೆಂಬ ಸುದ್ದಿಯೂ ಸುಳ್ಳು!

ಇಷ್ಟೇ ಅಲ್ಲದೆ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ CJP ಬೆಂಬಲಿತ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಒತ್ತಡ ಹೇರುತ್ತಿದ್ದರಿಂದ ದೆಹಲಿ ಪೊಲೀಸ್ ಡಿಸಿಪಿ ಸುಮಿತ್ ಝಾ ರಾಜೀನಾಮೆ ನೀಡಿದ್ದಾರೆ ಎಂಬ ಮತ್ತೊಂದು ವಿಡಿಯೋ ವೈರಲ್ ಆಗಿತ್ತು.

ಆದರೆ 'ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ' (PTI) ನಡೆಸಿದ ತನಿಖೆಯಲ್ಲಿ, ಡಿಸಿಪಿ ಸುಮಿತ್ ಝಾ ಅವರ ಹಳೆಯ ವಿಡಿಯೋ ಒಂದಕ್ಕೆ AI ಮೂಲಕ ಬೇರೆ ಧ್ವನಿಯನ್ನು (Audio) ಸೇರಿಸಿ ನಕಲಿ ವಿಡಿಯೋ ಸೃಷ್ಟಿಸಲಾಗಿದೆ ಎಂದು ತಿಳಿದುಬಂದಿದೆ. ವಾಸ್ತವವಾಗಿ, ದೆಹಲಿ ಪೊಲೀಸರ ಅಧಿಕೃತ ಖಾತೆಯಲ್ಲಿದ್ದ ಈ ಅಸಲಿ ವಿಡಿಯೋದಲ್ಲಿ ಡಿಸಿಪಿ ಅವರು ಪಾಕಿಸ್ತಾನ ಮೂಲದ ಖಾತೆಗಳು ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರು.

3. ಪಾಕಿಸ್ತಾನ ಮೂಲದ 480ಕ್ಕೂ ಹೆಚ್ಚು ನಕಲಿ ಖಾತೆಗಳ ಗುರುತು

ದೆಹಲಿ ಪೊಲೀಸರ ಪ್ರಕಾರ, ಜಂತರ್ ಮಂತರ್ ಪ್ರತಿಭಟನೆಯ ಸಂದರ್ಭದಲ್ಲಿ ಸುಳ್ಳು ಸುದ್ದಿ ಹಾಗೂ ದ್ವೇಷಪೂರಿತ ವಿಷಯಗಳನ್ನು ಹರಡಲು ಪಾಕಿಸ್ತಾನ ಮೂಲದ 480ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣದ ಖಾತೆಗಳು ಸಕ್ರಿಯವಾಗಿದ್ದವು. ಈ ಹಿಂದೆ 'ಆಪರೇಷನ್ ಸಿಂಧೂರ್' ಸಮಯದಲ್ಲೂ ಇದೇ ಖಾತೆಗಳು ಸುಳ್ಳು ಸುದ್ದಿ ಹರಡಲು ಬಳಕೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದು, ಪ್ರಸ್ತುತ ಆ ಎಲ್ಲ ಖಾತೆಗಳನ್ನು ಬ್ಲಾಕ್ (Block) ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ: ಸರ್ಕಾರದ ಮನವಿ

ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಪರಿಶೀಲಿಸದ ಯಾವುದೇ ವಿಡಿಯೋ ಅಥವಾ ಸುದ್ದಿಗಳನ್ನು ತಕ್ಷಣವೇ ನಂಬಬೇಡಿ ಮತ್ತು ಇಂತಹ ವಿಷಯಗಳಿಗೆ ಅಧಿಕೃತ ಸರ್ಕಾರಿ ಮೂಲಗಳನ್ನೇ ಆಶ್ರಯಿಸಿ ಎಂದು PIB ನಾಗರಿಕರಲ್ಲಿ ವಿನಂತಿ ಮಾಡಿದೆ.

ಸಂದೇಹಾಸ್ಪದ ಸುದ್ದಿಗಳನ್ನು ವರದಿ ಮಾಡಲು:

ಭಾರತ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ನಕಲಿ ಅಥವಾ ಸಂದೇಹಾಸ್ಪದ ವಿಷಯಗಳು ಕಂಡುಬಂದಲ್ಲಿ ಸಾರ್ವಜನಿಕರು ಕೆಳಗಿನ ವಿವರಗಳ ಮೂಲಕ PIB ಗೆ ದೂರು ನೀಡಬಹುದು:

  • ವಾಟ್ಸಾಪ್/ಫೋನ್ ಸಂಖ್ಯೆ: +91 8799711259
  • ಇಮೇಲ್: factcheck@pib.gov.in

Saturday, January 11, 2020

ಜೆಎನ್ ಯು ಹಿಂಸಾಚಾರ: ಐಶೆ ಘೋಷ್ ಸಹಿತ 8 ಮಂದಿ ಶಂಕಿತರ ಪಟ್ಟಿ ಬಿಡುಗಡೆ

ಜೆಎನ್ ಯು  ಹಿಂಸಾಚಾರ: ಐಶೆ ಘೋಷ್ ಸಹಿತ 8 ಮಂದಿ ಶಂಕಿತರ ಪಟ್ಟಿ ಬಿಡುಗಡೆ
ನವದೆಹಲಿ: ಕಳೆದ  2020  ಜನವರಿ 5ರ ಭಾನುವಾರ ಜವಹರಲಾಲ್  ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಂಟು ಮಂದಿ ಶಂಕಿತರ ಪಟ್ಟಿಯನ್ನು 2020 ಜನವರಿ 10ರ ಶುಕ್ರವಾರ  ಬಿಡುಗಡೆಗೊಳಿಸಿದರು. ಜನವರಿ 5ರ  ರವಿವಾರ ಮಧ್ಯಾಹ್ನ ಪೆರಿಯಾರ್ ಹಾಸ್ಟೆಲ್ ನಲ್ಲಿ ನಡೆದಿದ್ದ ಘರ್ಷಣೆಗೆ ಸಂಬಂಧಿಸಿದ ಶಂಕಿತರ ಪಟ್ಟಿ ಇದಾಗಿದೆ.

ಇವರಲ್ಲಿ
ಜೆ.ಎನ್.ಯು. ವಿದ್ಯಾರ್ಥಿ ಸಂಘಟನೆಯ ಮುಖ್ಯಸ್ಥೆ ಐಶೆ ಘೋಷ್ ಅವರ ಹೆಸರೂ ಸೇರಿದೆ. ಘರ್ಷಣೆಯಲ್ಲಿ ಮುಸುಕುಧಾರಿ ವ್ಯಕ್ತಿಗಳಿಂದ ಹಲ್ಲೆಗೊಳಗಾಗಿದ್ದ ಐಶೆ ಘೋಷ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಪೋಲಿಸರು ಗುರುತಿಸಿರುವ ಶಂಕಿತರಲ್ಲಿ ಹೆಚ್ಚಿನವರು ಎಡಪಂಥೀಯ ಸಂಘಟನೆಗಳಿಗೆ ಸೇರಿದವರಾಗಿದವರಾಗಿದ್ದಾರೆ.

ದೆಹಲಿಯಲ್ಲಿ
ಪತ್ರಿಕಾಗೋಷ್ಠಿ ನಡೆಸಿದ ಡಿಸಿಪಿ (ಕ್ರೈಂ) ಜಾಯ್ ತಿರ್ಕೆ ಅವರು ಶಂಕಿತರ ಹೆಸರು ಮತ್ತು ಅವರ ಭಾವಚಿತ್ರಗಳನ್ನು ಬಹಿರಂಗಗೊಳಿಸಿದ್ದಾರೆ. ಆದರೆ ಹಿಂಸಾಚಾರಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಕಲೆಹಾಕಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಘರ್ಷಣೆ ಸಂಭವಿಸುವುದಕ್ಕೂ ಒಂದು ದಿನ ಮೊದಲೇ ಸರ್ವರ್ ಕೊಠಡಿಯನ್ನು ಹಾನಿಗೊಳಿಸಿ ಪುಡಿಗೈಯಲಾಗಿತ್ತು ಎಂಬ ಮಾಹಿತಿಯನ್ನು ತಿರ್ಕೆ ಅವರು ಇದೆ ಸಂದರ್ಭದಲ್ಲಿ ನೀಡಿದರು.

ಶಂಕಿತರ ಹೆಸರುಗಳು ಈ ರೀತಿಯಾಗಿವೆ:
೧. ಐಶೆ ಘೋಷ್ - ಜೆ.ಎನ್.ಎಸ್.ಯು. ಅಧ್ಯಕ್ಷೆ, ೨. ವಿಕಾಸ್ ಪಟೇಲ್ - ಎಂ.ಎ. ಕೊರಿಯನ್ ಸ್ಟಡೀಸ್, ೩. ಪಂಕಜ್ ಮಿಶ್ರಾ - ಸ್ಕೂಲ್ ಆಫ್ ಸೋಷಿಯಲ್ ಸೈನ್ಸ್, ೪. ಚುಂಚುನ್ ಕುಮಾರ್ - ಜೆ.ಎನ್.ಯು. ಹಳೇ ವಿದ್ಯಾರ್ಥಿ, ೫. ಯೋಗೇಂದ್ರ ಭಾರಧ್ವಾಜ್ - ಸಂಸ್ಕೃತ ಪಿ.ಹೆಚ್.ಡಿ. ವಿದ್ಯಾರ್ಥಿ, ೬. ಡೋಲನ್ ಸಮನಾಟ - ಸ್ಕೂಲ್ ಆಫ್ ಸೋಷಿಯಲ್ ಸೈನ್ಸ್, ೭. ಸುಚೇತಾ ತಾಲೂಕ್ದಾರ್ - ಸ್ಕೂಲ್ ಆಫ್ ಸೋಷಿಯಲ್ ಸೈನ್ಸ್, ೮. ಪ್ರಿಯಾ ರಂಜನ್ - ಸ್ಕೂಲ್ ಆಫ್ ಲ್ಯಾಂಗ್ವೇಜ್ ಆಂಡ್  ಕಲ್ಚರಲ್ ಸ್ಟಡೀಸ್.
ಆದರೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಯಾರನ್ನೂ ವಶಕ್ಕೆ ಪಡೆದುಕೊಂಡಿಲ್ಲ ಮತ್ತು ಶಂಕಿತರೆಲ್ಲರಿಗೂ ನೊಟೀಸ್ ನೀಡಿ ಅವರಿಂದ ವಿವರಣೆಯನ್ನು ಪಡೆದುಕೊಳ್ಳಲಾಗುವುದು ಎಂದು ಡಿಸಿಪಿ ಜಾಯ್ ತಿರ್ಕೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.  ಮುಂಬರುವ ದಿನಗಳಲ್ಲಿ ಇನ್ನಷ್ಟು ಶಂಕಿತರ ಹೆಸರುಗಳನ್ನು ಬಹಿರಂಗಪಡಿಸುವ ಸುಳಿವನ್ನು ಡಿಸಿಪಿ ಅವರು ನೀಡಿದರು.
ಏನಿದ್ದರೂ, ಭಾನುವಾರ  ಸಾಯಂಕಾಲ ಜೆ.ಎನ್.ಯು. ಆವರಣದೊಳಗೆ ದಾಂಧಲೆ ನಡೆಸಿದ್ದ ಮುಸುಕುಧಾರಿಗಳ ಗುರುತು ಪತ್ತೆಯಾಗಿದೆಯೇ ಎಂಬ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಘಟನೆಗೆ
ಸಂಬಂಧಿಸಿದಂತೆ ಶಂಕಿತರ ಪಟ್ಟಿಯಲ್ಲಿ ತನ್ನ ಹೆಸರು ಉಲ್ಲೇಖವಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಐಶೆ ಘೋಷ್ ಅವರು, ‘ದೆಹಲಿ ಪೊಲೀಸರು ಅವರ ತನಿಖೆಯನ್ನು ನಡೆಸಲಿ, ನನ್ನ ಮೇಲೆ ದಾಳಿ ನಡೆದಿರುವುದಕ್ಕೆ ನನ್ನ ಬಳಿ ಸಾಕ್ಷ್ಯಗಳಿವೆ’ ಎಂದು ಪ್ರತಿಕ್ರಿಯಿಸಿದರು.

Friday, January 10, 2020

ರಾಷ್ಟ್ರಪತಿ ಭವನಕ್ಕೆ ಜೆಎನ್‌ಯು ವಿದ್ಯಾರ್ಥಿಗಳ ಮೆರವಣಿಗೆ

ರಾಷ್ಟ್ರಪತಿ ಭವನಕ್ಕೆ ಜೆಎನ್‌ಯು ವಿದ್ಯಾರ್ಥಿಗಳ ಮೆರವಣಿಗೆ
ಪೊಲೀಸರ ತಡೆ, ಬಂಧನ; ವಿಸಿ ವಜಾಕ್ಕೆ ಆಗ್ರಹ, ಒಪ್ಪದ ಸರ್ಕಾರ

ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ವಾರ ಸಂಭವಿಸಿದ ಹಿಂಸಾಚಾರದ ವಿರುದ್ಧ ಪ್ರತಿಭಟಿಸುತ್ತಿರುವ ಜೆಎನ್‌ಯು ವಿದ್ಯಾರ್ಥಿಗಳು ಉಪಕುಲಪತಿ ಜಗದೀಶ್ ಕುಮಾರ್ ವಜಾಕ್ಕೆ ಆಗ್ರಹಿಸಿ 2020 ಜನವರಿ 09ರ ಗುರುವಾರ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸಿದರು. ಆದರೆ ಮಾರ್ಗಮಧ್ಯದಲ್ಲಿಯೇ ತಡೆದ ಪೊಲೀಸರು ಅವರನ್ನು ಬಂಧಿಸಿದರು.


ಸರ್ಕಾರದ ಜೊತೆಗಿನ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಬಹುತೇಕ ವಿದ್ಯಾರ್ಥಿಗಳನ್ನು ಪೊಲೀಸರು ತಡೆದು ಬಸ್ಸು ಒಂದಕ್ಕೆ ಹತ್ತಿಸಿದರು. ಮೆರವಣಿಗೆ ತಡೆಯುವ ಯತ್ನ ನಡೆಸಿದ ಪೊಲೀಸರು, ಜನಪಥದಲ್ಲಿ ಸಂಚಾರ ಅಡ್ಡಗಟ್ಟಲು ಯತ್ನಿಸಿದ ಪ್ರತಿಭಟನಕಾರರನ್ನು ನಿಯಂತ್ರಿಸಲು ಲಾಠಿ ಪ್ರಹಾರವನ್ನೂ ನಡೆಸಿದರು ಎಂದು ವರದಿಗಳು ತಿಳಿಸಿವೆ.

ಇದಕ್ಕೆ ಮುನ್ನ ಧ್ವನಿವರ್ಧಕಗಳ ಮೂಲಕ ಪೊಲೀಸರು ಶಾಂತಿ ಕಾಯ್ದುಕೊಳ್ಳುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಮನವಿ ಮಾಡಿದರು.

ಪೊಲೀಸರು ಕೆಲವು ಮಹಿಳಾ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಯತ್ನಿಸಿದಾಗ ಮಾತಿನ ಚಕಮಕಿ ನಡೆಯಿತು. ಆಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಬೆತ್ತ ಬೀಸಿದರು ಎಂದು ವರದಿಗಳು ಹೇಳಿವೆ.


ಮುಂಜಾಗರೂಕತಾ ಕ್ರಮವಾಗಿ ಪೊಲೀಸರು ರಾಷ್ಟ್ರಪತಿ ಭವನದ ಉತ್ತರ- ದಕ್ಷಿಣ ಬ್ಲಾಕ್‌ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು  ನಿಯೋಜಿಸಿದ್ದರು.
ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ತೆರಳುವ ಮುನ್ನ ಜೆಎನ್‌ಯು ವಿದ್ಯಾರ್ಥಿ ಸಂಘ ಮತ್ತು ಜೆಎನ್‌ಯು ಶಿಕ್ಷಕರ ಸಂಘದ ನಿಯೋಗವೊಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಅಧಿಕಾರಿಗಳನ್ನು ಭೇಟಿ ಮಾಡಿ ಉಪಕುಲಪತಿ ಜಗದೀಶ್ ಕುಮಾರ್ ಅವರನ್ನು ಹುದ್ದೆಯಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿತು.

ಜಗದೀಶ್
 ಕುಮಾರ್ ಅವರನ್ನು ಕಿತ್ತು ಹಾಕಲು ಸರ್ಕಾರವು ಈವರೆಗೂ ನಿರಾಕರಿಸಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಕಾರ್‍ಯದರ್ಶಿ ಅಮಿತ್ ಖಾರೆ ಹೇಳಿದರು.

‘ಜೆಎನ್‌ಯು ಉಪಕುಲಪತಿಯವರನ್ನು ಹುದ್ದೆಯಿಂದ ಕಿತ್ತು ಹಾಕುವುದು ಸಮಸ್ಯೆಗೆ ಪರಿಹಾರವಲ್ಲ. ಸಚಿವಾಲಯದ ಗಮನ ಇರುವುದು ಶೈಕ್ಷಣಿಕ ವಿಷಯಗಳ ಕಡೆಗೆ, ರಾಜಕೀಯ ವಿಷಯಗಳ ಬಗೆಗಲ್ಲ’ ಎಂದು ಖಾರೆ ನುಡಿದರು.

‘ಕುಮಾರ್ ಅವರನ್ನು ಶುಕ್ರವಾರ ಭೇಟಿ  ಮಾಡಿದ ಬಳಿಕ ಸಚಿವಾಲಯದ ಅಧಿಕಾರಿಗಳು ಜೆಎನ್‌ಯು ವಿದ್ಯಾರ್ಥಿ ಸಂಘವನ್ನು ಭೇಟಿ ಮಾಡಲಿದ್ದಾರೆ’ ಎಂದು ಖಾರೆ ಹೇಳಿದರು.

‘ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜೊತೆಗೆ ಸಂಧಾನ ಮಾಡಿಕೊಳ್ಳುವ ಸ್ಥಿತಿಯಲ್ಲಿ ನಾವು ಇಲ್ಲ. ಸಚಿವಾಲಯವು ಈಗಲೂ ಉಪಕುಲಪತಿಯನ್ನು ಕಿತ್ತು ಹಾಕಬೇಕೇ ಎಂಬುದಾಗಿ ಯೋಚಿಸುತ್ತಿದೆ’ ಎಂದು ಜೆಎನ್‌ಯುಎಸ್‌ಯು ಅಧ್ಯಕ್ಷೆ ಐಶೆ ಘೋಷ್ ಗುರುವಾರದ ಭೇಟಿ ಬಳಿಕ ಹೇಳಿದರು.
ಭಾನುವಾರ ದಾಳಿ ನಡೆಸಿದ್ದ ದಾಳಿಕೋರರ ಜೊತೆಗೆ ಉಪಕುಲಪತಿ ಜಗದೀಶ್ ಕುಮಾರ್ ಶಾಮೀಲಾಗಿದ್ದಾರೆ. ಆದ್ದರಿಂದ ಅವರು ರಾಜೀನಾಮೆ ನೀಡಬೇಕು ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆಗ್ರಹಿಸುತ್ತಿದ್ದಾರೆ.

ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಮುಸುಕುಧಾರಿಗಳ ಗುಂಪೊಂದು ದಕ್ಷಿಣ ದೆಹಲಿಯ ವಿಶ್ವ ವಿದ್ಯಾಲಯದ ಆವರಣಕ್ಕೆ ಭಾನುವಾರ ನುಗ್ಗಿ ಮೂರು ವಸತಿ ನಿಲಯಗಳಲ್ಲಿ ಇದ್ದ ವಿದ್ಯಾರ್ಥಿಗಳ ಮೇಲೆ ಕಲ್ಲುಗಳು, ದೊಣ್ಣೆ ಮತ್ತು ಕಬ್ಬಿಣದ ಸಲಾಕೆಗಳಿಂದ ಹಲ್ಲೆ ನಡೆಸಿತ್ತು. ಜೊತೆಗೆ ಕಿಟಕಿಗಳು, ಪೀಠೋಪಕರಣಗಳು ಮತ್ತು ವಿದ್ಯಾರ್ಥಿಗಳ ವೈಯಕ್ತಿಕ ಸಾಮಗ್ರಗಳನ್ನು ಧ್ವಂಸಗೊಳಿಸಿತ್ತು. ಗುಂಪು ಮಹಿಳಾ ವಸತಿ ಗೃಹದ ಮೇಲೂ ದಾಳಿ ನಡೆಸಿತು ಎಂದು ಆಪಾದಿಸಲಾಗಿದೆ.

ಜೆಎನ್
‌ಯು ಶಿಕ್ಷಕರ ಸಂಘವು (ಜೆಎನ್‌ಯುಟಿಎ) ಇದಕ್ಕೆ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಹಿಂಸಾಚಾರಕ್ಕೆ ಜಗದೀಶ್ ಕುಮಾರ್ ಅವರೇ ಸಂಪೂರ್ಣಹೊಣೆ ಎಂದು   ಆಪಾದಿಸಿತ್ತು.

ವಿದ್ಯಾರ್ಥಿ, ಶಿಕ್ಷಕರ ನಿಯೋಗದ ಜೊತೆಗೆ ಮಾತುಕತೆ ನಡೆಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ’ವಿದ್ಯಾರ್ಥಿಗಳ ಜೊತೆಗೆ ಹೆಚ್ಚು ಸಂವಹನ ನಡೆಸುವಂತೆ ಜಗದೀಶ್ ಕುಮಾರ್ ಅವರಿಗೆ ’ಸಲಹೆ’ ಮಾಡಿದರು ಎಂದು ಮಾಧ್ಯಮವೊಂದು ವರದಿ ಮಾಡಿತು.

ಈ ಮಧ್ಯೆ ಗೃಹ ಸಚಿವ ಅಮಿತ್ ಶಾ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅವರು ಹಿಂಸಾಚಾರಕ್ಕೆ ಹೊಣೆ. ಅವರು ಅಧಿಕೃತವಾಗಿ ಗೂಂಡಾಗಿರಿಯನ್ನು ಪ್ರಾಯೋಜಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಆಪಾದಿಸಿತು.

Advertisement