Showing posts with label Vishwanatha Suvarna. Show all posts
Showing posts with label Vishwanatha Suvarna. Show all posts

Monday, June 30, 2025

ಕರ್ನಾಟಕದಲ್ಲಿ ಪತ್ರಿಕಾ ದಿನ: ಇತಿಹಾಸ ಗೊತ್ತಾ?

 ಕರ್ನಾಟಕದಲ್ಲಿ ಪತ್ರಿಕಾ ದಿ: ಇತಿಹಾಸ ಗೊತ್ತಾ?

ಇದು ಸುವರ್ಣ ನೋಟ

ಪ್ರತಿ ವರ್ಷ ಜುಲೈ 1 ರಂದು ಕರ್ನಾಟಕದಲ್ಲಿ 'ಪತ್ರಿಕಾ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನಕ್ಕೆ ವಿಶೇಷ ಮಹತ್ವವಿದೆ, ಏಕೆಂದರೆ ಇದು ಕನ್ನಡದ ಮೊಟ್ಟಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಪ್ರಕಟಗೊಂಡ ದಿನ. 1843ರ ಜುಲೈ 1 ರಂದು ಮಂಗಳೂರಿನಲ್ಲಿ ಬಾಸೆಲ್ ಮಿಷನ್‌ನ ಮುದ್ರಣಾಲಯದಿಂದ ಈ ಪತ್ರಿಕೆ ಹೊರಬಂದಿತು.

ಕನ್ನಡ ಪತ್ರಿಕೋದ್ಯಮದ ಪಿತಾಮಹ: ರೆವರೆಂಡ್ ಹರ್ಮನ್ ಮೋಗ್ಲಿಂಗ್

'ಮಂಗಳೂರು ಸಮಾಚಾರ'ದ ಸಂಪಾದಕರು ರೆವರೆಂಡ್ ಹರ್ಮನ್ ಮೋಗ್ಲಿಂಗ್. ಜರ್ಮನ್‌ನ ಮತ ಪ್ರಚಾರಕರಾದ ಇವರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ ಅಥವಾ ಪಿತಾಮಹ ಎಂದು ಕರೆಯಲಾಗುತ್ತದೆ. ಯುರೋಪಿಯನ್ ಪತ್ರಿಕೆಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಮೋಗ್ಲಿಂಗ್, 1840ರಲ್ಲಿ ಮಂಗಳೂರಿಗೆ ಬಂದ ನಂತರ ತುಳು, ಕೊಂಕಣಿ, ಕನ್ನಡ ಭಾಷೆಗಳನ್ನು ಕಲಿತರು. ಮಿಷನರಿಯಾಗಿದ್ದರೂ, ಸ್ಥಳೀಯ ಸಾಹಿತ್ಯ ಮತ್ತು ಶಿಕ್ಷಣದಲ್ಲಿ ಅವರು ತೀವ್ರ ಆಸಕ್ತಿ ತೋರಿಸಿದರು.

'ಮಂಗಳೂರು ಸಮಾಚಾರ'ದ ಪ್ರಕಟಣೆ ಮತ್ತು ಪ್ರಭಾವ

'ಮಂಗಳೂರು ಸಮಾಚಾರ'ವು ಆರಂಭದಲ್ಲಿ 8 ತಿಂಗಳ ಕಾಲ ಪಾಕ್ಷಿಕವಾಗಿ ಪ್ರಕಟವಾಯಿತು. ಇದು ಕಲ್ಲಚ್ಚಿನಲ್ಲಿ ಪ್ರಕಟವಾಗುತ್ತಿತ್ತು ಮತ್ತು ನಾಲ್ಕು ಪುಟಗಳನ್ನು ಒಳಗೊಂಡಿತ್ತು, ಅದರ ಬೆಲೆ ಕೇವಲ ಒಂದು ಪೈಸೆ. ಮೋಗ್ಲಿಂಗ್ ಅವರೇ ಸುದ್ದಿಗಳನ್ನು ಆಯ್ಕೆ ಮಾಡುತ್ತಿದ್ದರು. ಸ್ಥಳೀಯ, ಸರ್ಕಾರಿ ಅಧಿಸೂಚನೆಗಳು, ಕಾನೂನು ವಿಷಯಗಳು, ಹಾಡುಗಳು, ಕಥೆಗಳು, ಅಂತರರಾಜ್ಯ ವರ್ತಮಾನಗಳು, ಮತ್ತು ಓದುಗರ ವಾಣಿಗಳಂತಹ ವೈವಿಧ್ಯಮಯ ವಿಷಯಗಳನ್ನು ಈ ಪತ್ರಿಕೆ ಪ್ರಕಟಿಸುತ್ತಿತ್ತು. ಜನರಿಗೆ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಕೋರ್ಟ್ ಪ್ರಕರಣಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಹೆಚ್ಚಾಗಿ ಪ್ರಕಟಿಸಲಾಗುತ್ತಿತ್ತು. ನಂತರ, ಈ ಪತ್ರಿಕೆಯ ಹೆಸರನ್ನು 'ಕನ್ನಡ ಸಮಾಚಾರ' ಎಂದು ಬದಲಾಯಿಸಿ ಬಳ್ಳಾರಿಯಿಂದ ಪ್ರಕಟಿಸಲು ಪ್ರಾರಂಭಿಸಲಾಯಿತು.

ಮೋಗ್ಲಿಂಗ್‌ಗೆ ಗೌರವ ಡಾಕ್ಟರೇಟ್

ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಮೋಗ್ಲಿಂಗ್ ನೀಡಿದ ಅನನ್ಯ ಕೊಡುಗೆಗಾಗಿ, ಟ್ಯೂಬಿಂಗೆನ್‌ನ ಎಬರ್‍ಹಾರ್ಡ್ ಕಾರ್ಲ್ಸ್ ವಿಶ್ವವಿದ್ಯಾನಿಲಯವು 1858ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿತು. ಕನ್ನಡಕ್ಕಾಗಿ ಇಂತಹ ಗೌರವ ಪಡೆದ ಮೊದಲ ವ್ಯಕ್ತಿ ಇವರಾಗಿದ್ದರು.

ಆಧುನಿಕ ಪತ್ರಿಕೋದ್ಯಮದ ಬೆಳವಣಿಗೆ

'ಮಂಗಳೂರು ಸಮಾಚಾರ'ದೊಂದಿಗೆ ಆರಂಭವಾದ ಕನ್ನಡ ಪತ್ರಿಕಾರಂಗವು ಇಂದು ಆಧುನಿಕ ತಂತ್ರಜ್ಞಾನದೊಂದಿಗೆ ಅಗಾಧವಾಗಿ ಬೆಳೆದಿದೆ. ಈಗ ಅನೇಕ ಪತ್ರಿಕೆಗಳು, ಸ್ಯಾಟಲೈಟ್ ಚಾನೆಲ್‌ಗಳು, ಬಹುಭಾಷಾ ಪ್ರಾದೇಶಿಕ ಚಾನೆಲ್‌ಗಳು, ಆನ್‌ಲೈನ್ ಆವೃತ್ತಿಗಳು, ವೆಬ್‌ಸೈಟ್‌ಗಳು, ವೆಬ್ ಪತ್ರಿಕೆಗಳು, ಸಾಮಾಜಿಕ ಮಾಧ್ಯಮ (ಫೇಸ್‌ಬುಕ್, ವಾಟ್ಸಪ್), ಮತ್ತು ನೇರ ಪ್ರಸಾರ ನೀಡುವ ಸುದ್ದಿವಾಹಿನಿಗಳ ಮೂಲಕ ಮಾಧ್ಯಮವು ಕ್ಷಣಕ್ಷಣದ ಸುದ್ದಿಗಳನ್ನು ಜನರಿಗೆ ತಲುಪಿಸುತ್ತಿದೆ.

ಛಾಯಾಗ್ರಹಣ ಮತ್ತು ವ್ಯಂಗ್ಯಚಿತ್ರ

ಇಂದಿನ ದಿನಗಳಲ್ಲಿ ಪತ್ರಿಕೆಗಳು ಜೀವಂತಿಕೆಯನ್ನು ತಳೆಯುವುದು ಛಾಯಾಚಿತ್ರಗಳು ಮತ್ತು ವ್ಯಂಗ್ಯ ಚಿತ್ರಗಳ ಮೂಲಕ. ಸಾವಿರ ಪದಗಳಲ್ಲಿ ಹೇಳಬಹುದಾದ ವಿಷಯವನ್ನು ಒಂದು ಛಾಯಾಚಿತ್ರ ಪ್ರಭಾವಶಾಲಿಯಾಗಿ ಹೇಳಬಲ್ಲುದು.

ಹಾಗೆಯೇ ವ್ಯಂಗ್ಯಚಿತ್ರ ಕೂಡಾ ಅತ್ಯಂತ ಪರಿಣಾಮಕಾರಿಯಾಗಿ ರಾಜಕೀಯ, ಜನರ ಬದುಕು, ವರ್ತನೆ, ಮಾತುಗಳನ್ನು ಮೊನಚಾಗಿ ತಿವಿಯಬಲ್ಲುದು.

ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ತಮ್ಮ ಛಾಯಾಚಿತ್ರಗಳ ಮೂಲಕ ಬಹುರೂಪೀ ವಿದ್ಯಮಾನಗಳನ್ನು ದಾಖಲಿಸಿದ್ದಾರೆ. ವಿಧಾನಸಭಾ ಕಲಾಪ, ಪೊಲೀಸ್‌ ಗೋಲೀಬಾರ್‌, ವಾಹನಗಳಿಗೆ ಬೆಂಕಿ, ಜನರ ಅಭಿವ್ಯಕ್ತಿಗಳು – ಹೀಗೆ ಹತ್ತಾರು ಸಂದರ್ಭಗಳು ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ. ಅವುಗಳ ಸುಂದರ ಕಂತು ಇಲ್ಲಿದೆ.

ಜುಲೈ 01ರ ಪತ್ರಿಕಾ ದಿನಕ್ಕಾಗಿ ವಿಶ್ವನಾಥ ಸುವರ್ಣ ಅವರು ಈ ಚಿತ್ರಗಳನ್ನು ಇಲ್ಲಿ ಒದಗಿಸಿದ್ದಾರೆ. ಸಮೀಪ ನೋಟಕ್ಕಾಗಿ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.










-ನೆತ್ರಕೆರೆ ಉದಯಶಂಕರ
 ಹಿಂದಿನ ಸುವರ್ಣ ನೋಟಗಳಿಗಾಗಿ
                                                            ಇಲ್ಲಿ ಕ್ಲಿಕ್‌ ಮಾಡಿರಿ   👉👉👉


Monday, June 2, 2025

ಬಣ್ಣ ಬದಲಿಸುವಾಗ ಸಿಕ್ಕಿಹಾಕಿಕೊಂಡ ಓತಿಕ್ಯಾತ..!

 ಬಣ್ಣ ಬದಲಿಸುವಾಗ ಸಿಕ್ಕಿಹಾಕಿಕೊಂಡ ಓತಿಕ್ಯಾತ..!

ತಿಕ್ಯಾತ ಬಣ್ಣ ಬದಲಿಸುತ್ತದೆ ಎಂಬುದು ಬಹಳ ಜನಕ್ಕೆ ಗೊತ್ತು. ಆದರೆ ಹಾಗೆ ಬಣ್ಣ ಬದಲಿಸುವಾಗ ಕಾಣ ಸಿಗುವುದು ಬಲು ಅಪರೂಪ. ಸಿಕ್ಕಿದರೂ ಅದನ್ನೆಲ್ಲ ನೋಡುವಷ್ಟು ಹೊತ್ತು ಅದೇನು ಫೋಸ್‌ ನೀಡುತ್ತಾ ನಿಲ್ಲುತ್ತದೆಯೇ?

ಮನುಷ್ಯರ ಕಾಲಿನ ಸಪ್ಪಳ ಕೇಳುವಷ್ಟರಲ್ಲೇ ಅದು ಸ್ಥಳದಿಂದ ಪರಾರಿ ಆಗಿ ಬಿಡುತ್ತದೆ.

ಅಂತಹ ಓತಿಕ್ಯಾತ ಬಣ್ಣ ಬದಲಿಸುತ್ತಾ ವರ್ಣಮಯ ರೂಪದಲ್ಲಿ ನಿಂತು ಫೋಸ್‌ ಕೊಟ್ಟು ಬಿಟ್ಟಿದೆ ನೋಡಿ- ನಮ್ಮ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರಿಗೆ.

ನಮ್ಮ ಕರ್ನಾಟಕದ ಮಧ್ಯಭಾಗದಲ್ಲಿ ಇರುವ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವನ್ಯಜೀವಿ ಅಭಯಾರಣ್ಯಕ್ಕೆ ನೆಲೆ. ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯದಲ್ಲಿ ಕೃಷ್ಣಮೃಗ, ಗ್ರೇಟ್ ಇಂಡಿಯನ್ ಬಸ್ಟರ್ಡ್ ಮತ್ತು ತೋಳಗಳು ಸಾಕಷ್ಟವೆ. ಆದರೆ ಇಲ್ಲಿದ್ದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿ ಈಗ ಬಹುತೇಕ ಅಳಿದು ಹೋದಂತಿದೆ. ಕೊನೆಯ ಬಾರಿಗೆ 2005 ರಲ್ಲಿ ಈ ಪಕ್ಷಿ ಕಾಣಿಸಿಕೊಂಡಿತ್ತು. ಆ ನಂತರ ಈ ಯಾರಿಗೂ ಕಂಡದ್ದಿಲ್ಲವಂತೆ.

ವಿಶ್ವನಾಥ ಸುವರ್ಣ ಇತ್ತೀಚಿನ ದಿನಗಳಲ್ಲಿ ಅಳಿಯುತ್ತಿರುವ ಚಿಕ್ಕಪುಟ್ಟ ಪ್ರಾಣಿಗಳು, ಪಕ್ಷಿಗಳ ಹುಡುಕಾಟದಲ್ಲಿದ್ದಾರೆ. ಅವುಗಳನ್ನು ಸೆರೆ ಹಿಡಿದು (ಕ್ಯಾಮರಾದಲ್ಲಿ ಮಾರಾಯರೆ) ಜನರಿಗೆ ತೋರಿಸಬೇಕೆಂಬ ತವಕದಲ್ಲಿ ಇದ್ದಾರೆ. ಹೀಗಾಗಿ ತಮ್ಮ ಕ್ಯಾಮರಾ ಹಿಡಿದುಕೊಂಡು ಊರೂರು ಸುತ್ತುತ್ತಿದ್ದಾರೆ.

ಇತ್ತೀಚೆಗೆ ಅವರು ಹಾವೇರಿ ಜಿಲ್ಲೆಯ ರಾಣೆ ಬೆನ್ನೂರಿಗೆ ಭೇಟಿ ಕೊಟ್ಟಿದ್ದರು. ಹಾಗೆಯೇ ಹೆಗಲಿಗೆ ಕ್ಯಾಮರಾ ಏರಿಸಿಕೊಂಡು ಸುತ್ತಾಡುತ್ತಿದ್ದಾಗ, ಹೊಲ ಒಂದರಲ್ಲಿ ಬಣ್ಣ ಬದಲಿಸುತ್ತಿದ್ದ ಓತಿ ಕ್ಯಾತ ಇವರ ಕ್ಯಾಮರಾಕ್ಕೆ ಫೋಸ್‌ ಕೊಟ್ಟೇ ಬಿಟ್ಟಿತು.

ಆ ಓತಿಕ್ಯಾತನ ಚಿತ್ರಗಳು ಇಲ್ಲಿವೆ ನೋಡಿ.

ಇದೇ ಸಮಯದಲ್ಲಿ ಸುವರ್ಣರಿಗೆ ಅಪರೂಪದ ಪಕ್ಷಿಯಾದ ಫ್ಲೈ ಕ್ಯಾಚರ್‌ ಹಕ್ಕಿಯೂ ಕಾಣ ಸಿಕ್ಕಿತು. ಫ್ಲೈ ಕ್ಯಾಚರ್‌ ಪಕ್ಷಿಗಳನ್ನು ʼಇಂಡಿಯನ್‌ ಪ್ಯಾರಡೈಸ್‌ ಫ್ಲೈ ಕ್ಯಾಚರ್‌ʼ ಎಂಬುದಾಗಿಯೂ ಕರೆಯುತ್ತಾರೆ.

ಅತ್ಯಂತ ಆಕರ್ಷಕವಾದ ಈ ಪಕ್ಷಿ ಜಾತಿಯ ಗಂಡು ಹಕ್ಕಿಗಳು ಉದ್ದವಾದ ರಿಬ್ಬನ್‌ ಮಾದರಿಯ ಬಾಲ ಹೊಂದಿರುತ್ತವೆ. ಗಂಡು ಹಕ್ಕಿಗಳು ದಾಲ್ಚಿನ್ನಿ ಮತ್ತು ಬಿಳಿ ಎರಡು ಬಣ್ಣಗಳಲ್ಲಿ ಇರುತ್ತವೆ. ಎರಡೂ ಬಣ್ಣದ ಹಕ್ಕಿಗಳು ಕಣ್ಣಿನ ಸುತ್ತಲೂ ನೀಲಿ ಉಂಗುರವನ್ನು ಹೊಂದಿರುತ್ತವೆ. ಕಪ್ಪುಬಣ್ಣದ ಹೊಳಪುಳ್ಳ ತಲೆಯನ್ನು ಹೊಂದಿರುತ್ತವೆ. ಆದರೆ ಬಿಳಿ ಹಕ್ಕಿ ಕೆಳಗೆ ಸಂಪೂರ್ಣವಾಗಿ ಬೆಳ್ಳಗಿರುತ್ತದೆ. ದಾಲ್ಚಿನ್ನಿ ಹಕ್ಕಿ ದಾಲ್ಚಿನ್ನಿ ಮೇಲ್ಭಾಗ ಮತ್ತು ಬಾಲ ಮತ್ತು ಮಾಸಿದ ಬಿಳಿಬಣ್ಣದ  ಒಳಭಾಗವನ್ನು ಹೊಂದಿರುತ್ತದೆ.

ಹೆಣ್ಣು ಹಕ್ಕಿಗಳು ಬೂದು ಬಣ್ಣದ ಗಂಟಲು, ಚಿಕ್ಕ ಬಾಲವನ್ನು ಹೊಂದಿರುತ್ತವೆ. ಬಾಲದ ಮೇಲ್ಭಾಗದಲ್ಲಿ ದಾಲ್ಚಿನ್ನಿ ಬಣ್ಣವಿರುತ್ತದೆ. ಹೆಣ್ಣು ಹಕ್ಕಿಯು ಗಂಡು ಹಕ್ಕಿಯಂತೆ ನೀಲಿ ಕಣ್ಣುರೆಪ್ಪೆಯನ್ನು ಹೊಂದಿರುವುದಿಲ್ಲ.

ಈ ಹಕ್ಕಿಗಳು ಕೀಟಗಳ ಮೇಲೆ ಸಣ್ಣ ವಿಮಾನದಂತೆ ಎರಗುತ್ತವೆ. ಕೀಟಗಳನ್ನು ಹಿಡಿಯಲು ಸಾಂದರ್ಭಿಕವಾಗಿ ನೆಲಕ್ಕೆ ಇಳಿಯುತ್ತವೆ. ಮುಖ್ಯವಾಗಿ ಕಾಡಿನ ಆವಾಸಸ್ಥಾನಗಳಲ್ಲಿ ಇವು ಕಂಡು ಕಂಡುಬರುತ್ತವೆ.

ಅಪರೂಪದ ಈ ಕ್ಯಾಚ್‌ ಫ್ಲೈಯರ್‌ ಹಕ್ಕಿ ತನ್ನ ಮರಿಗಳಿಗೆ ಆಹಾರ ನೀಡುತ್ತಿದ್ದಾಗ ಸುವರ್ಣರ ಕ್ಯಾಮರಾದಲ್ಲಿ ಸೆರೆಯಾಗಿ ಬಿಟ್ಟದ್ದನ್ನು ಇಲ್ಲಿ ನೋಡಬಹುದು.


ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ.




ನೆತ್ರಕೆರೆ ಉದಯಶಂಕರ

ಸುವರ್ಣ ನೋಟದ ಇತರ ಕಂತುಗಳಿಗೆ ಕೆಳಗೆ 👇ಕ್ಲಿಕ್‌ ಮಾಡಿ


Friday, May 23, 2025

ಕಟ್ಟಿಗೆ ಸೋಮೀ, ಕಟ್ಟಿಗೆ…!

 ಕಟ್ಟಿಗೆ ಸೋಮೀ, ಕಟ್ಟಿಗೆ…!

ಇದು ಸುವರ್ಣ ನೋಟ!

ವಿಯ ಕಣ್ಣಿಗೆ ಕಾಣದ್ದು ಕವಿಯ ಕಣ್ಣಿಗೆ ಕಾಣುತ್ತದಂತೆ. ಕವಿಯ ಕಣ್ಣಿಗೆ ಕಾಣದ್ದು?

ಛಾಯಾಗ್ರಾಹಕನ ಕಣ್ಣಿಗೆ ಕಾಣುತ್ತದೆ ನೋಡಿ.

ವಿಧಾನ ಸೌಧದ ಮುಂದೆ ಕಟ್ಟಿಗೆ ಸೋಮೀ ಕಟ್ಟಿಗೆ ಎನ್ನುತ್ತಾ ಕಟ್ಟಿಗೆ ಹೊರೆ ಹೊತ್ತುಕೊಂಡು ಹೋಗುವ  ದೃಶ್ಯ ಕಂಡದ್ದು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಅಂತರದೃಷ್ಟಿಗೆ. ತಕ್ಷಣ ಅದನ್ನು ಸೆರೆ ಹಿಡಿದದ್ದು ಅವರ ಕ್ಯಾಮರಾ ಕಣ್ಣು. 

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.




ಕೆಳಗಿನವುಗಳನ್ನೂ ಓದಿರಿ: 
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ

ಬದುಕಿನ ಹೋರಾಟ….!

ಬದ್ಧ ವೈರಿಗಳ ಅಪರೂಪದ ಮೈತ್ರಿ.!

ಡಾ. ರಾಜಕುಮಾರ್ ಆರೋಗ್ಯ ಸೂತ್ರ…!

ಕಥೆ ಹೇಳುವೆ… ನನ್ನ ಕಥೆ ಹೇಳುವೆ..!

ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!

Monday, April 7, 2025

ವಿಧಾನಸೌಧಕ್ಕೆ ವರ್ಣಾಲಂಕಾರ

 ವಿಧಾನಸೌಧಕ್ಕೆ ವರ್ಣಾಲಂಕಾರ

ಇದು ಸುವರ್ಣ ನೋಟ

ನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ – ಹೀಗೆ ವಿಶೇಷ ಸಂದರ್ಭಗಳಲ್ಲಿ ವರ್ಣಾಲಂಕಾರದಿಂದ ಜಗಮಗಿಸುತ್ತಿದ್ದ ಕರ್ನಾಟಕದ ವಿಧಾನಸೌಧ ಇದೀಗ ನಿತ್ಯವೂ ವರ್ಣಾಲಂಕಾರದಿಂದ ಸಂಭ್ರಮಿಸುತ್ತಿದೆ.

ವಿಧಾನಸೌಧದ ನಿತ್ಯ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೫ ಏಪ್ರಿಲ್‌ ೦೬ರ ಶ್ರೀರಾಮ ನವಮಿಯಂದು ಉದ್ಘಾಟಿಸಿದ್ದಾರೆ.

ಅಧಿಕಾರಿಗಳ ಪ್ರಕಾರ ವಿಧಾನಸೌಧ ಇನ್ನು ಮುಂದೆ ಪ್ರತಿದಿನವೂ ಬಣ್ಣ ಬಣ್ಣದ ವಿದ್ಯುತ್‌ ದೀಪಾಲಂಕಾರದೊಂದಿಗೆ ಜಗಮಗಿಸಲಿದೆ.

ವಿಧಾನಸೌಧ ಬಣ್ಣದ ದೀಪಗಳ ಬೆಳಕಿನಲ್ಲಿ ಕಣ್ಸೆಳೆದ ಚಿತ್ರಗಳನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಆ ಚಿತ್ರಗಳು ಇಲ್ಲಿವೆ. ಜೊತೆಗೆ ಈ ಚಿತ್ರಗಳನ್ನಾಧರಿಸಿ ʼಪರ್ಯಾಯʼ ನಿರ್ಮಿಸಿದ ಒಂದು ವಿಡಿಯೋ ಕೂಡಾ ಇಲ್ಲಿದೆ.

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ


ಶಕ್ತಿ ಸೌಧದ ಹೊಳಪು,

ಬಣ್ಣಗಳ ಚಿತ್ತಾರ!
ವಿಶೇಷ ದಿನದ ಸಂಭ್ರಮ,
ನಿತ್ಯವೂ ಬೆಳಗುವ ಸಿಂಗಾರ!
ಕತ್ತಲೆಗೆ ಬೆಳಕು,
ಮನಗಳಿಗೆ ಹರ್ಷ!
ನಾಡಿನ ಹೆಮ್ಮೆಯ ಪ್ರತೀಕ,
ಸದಾ ಬೆಳಗಲಿ ಈ ಸ್ಪರ್ಶ!

ಕಟ್ಟಿದರು ಕನಸನು ಹೊತ್ತು,
ನಾಡಿನ ಭವ್ಯತೆಯ ನೆಲೆ.
ಶಿಲ್ಪಿಗಳ ಕೈಚಳಕದ ಕಲೆ,
 
ಕಲ್ಲಿನಲಿ ಮೂಡಿದ ಬೆಲೆ.

ಸ್ವಾತಂತ್ರ್ಯದ ಉಸಿರು ಸೇರಿ,
ಪ್ರಜಾಪ್ರಭುತ್ವದ ಗುಡಿ.
ಕಾಲದ ಪುಟಗಳಲಿ ಮೆರೆದಿಹುದು,
ಕರುನಾಡಿನ ಕೀರ್ತಿ ನುಡಿ.

ಕನಸುಗಾರರ ದೃಷ್ಟಿಯ ಫಲ,
ಕೆಂಗಲ್ ಹನುಮಂತಯ್ಯನವರ ಶ್ರಮ.
ನಾಡಿನ ಆಡಳಿತದ ತಾಣವಿದು,
ಕನ್ನಡಿಗರ ಹೆಮ್ಮೆಯ ಧ್ವಜ ಸ್ತಂಭ.


ವಿಡಿಯೋ ನೋಡಲು ಯುಟ್ಯೂಬ್‌ ವಿಡಿಯೋ ಕೊಂಡಿ ಅಥವಾ ಅದರ ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿ.

ಕೆಳಗಿನವುಗಳನ್ನೂ ಓದಿರಿ: 
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ
೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!
ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ
ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!
ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ
ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)
ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ
ಬದುಕಿನ ಹೋರಾಟ….!
ಬದ್ಧ ವೈರಿಗಳ ಅಪರೂಪದ ಮೈತ್ರಿ.!
ಡಾ. ರಾಜಕುಮಾರ್ ಆರೋಗ್ಯ ಸೂತ್ರ…!
ಕಥೆ ಹೇಳುವೆ… ನನ್ನ ಕಥೆ ಹೇಳುವೆ..!
‘ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಕೇವಲ ಅರ್ಧ ಬೆಲೆ ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

Tuesday, February 25, 2025

ಬರುತಿದೆ ಬರುತಿದೆ ವಸಂತ!

 ಬರುತಿದೆ ಬರುತಿದೆ ವಸಂತ!

ಇದು ಸುವರ್ಣ ನೋಟ

ಹಾಶಿವರಾತ್ರಿ ಶಿಶಿರ ಋತುವಿನ ಮಹಾ ಹಬ್ಬ. ಶಿವನಿಗೆ ಮೀಸಲಾದ ಹಬ್ಬ. ಶಿಶಿರ ಋತುವಿನಲ್ಲಿ ಪ್ರಕೃತಿಯಲ್ಲಿ ಬದಲಾವಣೆಗಳು ಪ್ರಾರಂಭವಾಗುತ್ತವೆ. ಗಿಡಮರಗಳು ಎಲೆಗಳನ್ನು ಉದುರಿಸಿ ಹೊಸ ಚಿಗುರುಗಳಿಗೆ ಸಿದ್ಧವಾಗುತ್ತದೆ. ಈ ಋತುವು ವಸಂತ ಋತುವಿನ ಆಗಮನದ ಮುನ್ಸೂಚನೆಯನ್ನು ನೀಡುತ್ತದೆ.

ವಸಂತ ಋತು ಪ್ರಕೃತಿಯ ಪುನರುತ್ಥಾನದ ಸಂಕೇತ. ಹೊಸ ಚಿಗುರು, ಅರಳುವ ಹೂಗಳೊಂದಿಗೆ ಪ್ರಕೃತಿ ವರ್ಣಮಯವಾಗಿ ಕಂಗೊಳಿಸುತ್ತದೆ.


ಚಳಿಗಾಲ ಮುಗಿದು, ಅದೇ ತಾನೇ ಆರಂಭವಾಗುವ ಬೆಚ್ಚಗಿನ ವಾತಾವರಣ, ಹೂವುಗಳ ಸುವಾಸನೆ ಮತ್ತು ಪಕ್ಷಿಗಳ ಕಲರವವು ಸಂತೋಷ ಮತ್ತು ಆಶಾವಾದವನ್ನು ಹೆಚ್ಚಿಸುತ್ತದೆ.

ವಸಂತ ಕಾಲವು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ದೃಷ್ಟಕೋನವನ್ನು ಹುಟ್ಟುಹಾಕುತ್ತದೆ.


ಯುಗ ಯುಗಗಳು ಕಳೆದರೂ ಮತ್ತೆ ಮತ್ತೆ ಬರುವ ಯುಗಾದಿ ವಸಂತಕಾಲ ಸಂಭ್ರಮವನ್ನು ದ್ವುಗುಣಗೊಳಿಸುತ್ತದೆ.

ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ನಾಂದಿ ಹಾಡುತ್ತಾರೆ. ಚೈತನ್ಯಶಾಲೀ ಪ್ರಕೃತಿಯ ಮಡಿಲಲ್ಲಿ ಯೋಗ, ಧ್ಯಾನ, ನಡಿಗೆ ದೇಹ, ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.


ವಸಂತಾಗಮನಕ್ಕೆ ಮೊದಲಿನ ಋತುವಾದ ಈಗಿನ ಶಿಶಿರ ಋತುವಿನಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಬೆಳ್ಳಂಬೆಳಗ್ಗೆ ಮಿತ್ರರೊಬ್ಬರ ಮನೆಗೆ ಹೋಗಿದ್ದರು. ಅಲ್ಲಿ ಅದೇ ತಾನೇ ಚಿಗುರುತ್ತಿದ್ದ ಗಿರಮರ, ಅರಳಲು ಸಜ್ಜಾಗಿದ್ದ ಹೂವುಗಳ ಸಂಭ್ರಮ ಕಣ್ಣಿಗೆ ಬಿತ್ತು.

ಸುವರ್ಣರ ಕ್ಯಾಮರಾ ಹೆಗಲೇರಿತು. ಹತ್ತಾರು ಕ್ಲಿಕ್‌ಗಳು. ಕ್ಯಾಮರಾದಿಂದ ಹೊರಬಂದ ʼಸುವರ್ಣನೋಟʼದ ಪುಷ್ಪಗಳು ಇಲ್ಲಿವೆ. ನೋಡಿ ಅನುಭವಿಸಿ, ಆಸ್ವಾದಿಸಿ, ಸಂಭ್ರಮಿಸಿ.


ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ,

ಹಾಂ. ಹಾಗೆಯೇ ಇಲ್ಲೊಂದು ಕವನವಿದೆ- ವಸಂತ ಕಾಲಕ್ಕೆ ಸಂಬಂಧಿಸಿದ್ದು.

ವಸಂತ ಕಾಲದ ಸೊಬಗು

ಪಲ್ಲವಿ:

ವಸಂತ ಬಂದಿದೆ, ವನಸಿರಿ ನಲಿದಿದೆ,

ಹೂಗಳ ಚಿತ್ತಾರ, ಬಣ್ಣಗಳ ಸಂಭ್ರಮ.

ಚರಣ 1:

ಗಿಡಮರಗಳೆಲ್ಲಾ ಚಿಗುರೊಡೆದಿವೆ,
ಹಕ್ಕಿಗಳ ಕಲರವ, ಇಂಪಾಗಿ ಮೊಳಗಿದೆ.
ತಂಗಾಳಿಯ ತಂಪನು, ಮನವು ಬಯಸಿದೆ,
ಹೊಸತನದ ಆನಂದ, ಎಲ್ಲೆಡೆ ತುಂಬಿದೆ.

ಚರಣ 2:

ನದಿ ತೊರೆಗಳು, ತಿಳಿಯಾಗಿ ಹರಿಯುತಿವೆ,
ದುಂಬಿಗಳ ಝೇಂಕಾರ, ಕಿವಿಗೆ ಇಂಪಿದೆ.
ಹೊಲ ಗದ್ದೆಗಳಲ್ಲಿ, ಹಸಿರು ನಲಿಯುತಿದೆ,
ಕೃಷಿಕರ ಮುಖದಲ್ಲಿ, ಸಂತಸ ಮೂಡಿದೆ.

ಚರಣ 3:

ಉಗಾದಿ ಹಬ್ಬದ, ಸಂಭ್ರಮವಿದು,

ಹೊಸ ವರ್ಷದ, ಹರುಷವಿದು.
ಬೆಲ್ಲದ ಸಿಹಿಯ, ಸವಿಯುವ ಸಮಯವಿದು,
ಬೇವು-ಬೆಲ್ಲದ, ಸಮಭಾವವಿದು.

ಚರಣ 4:

ವಸಂತ ಕಾಲವು, ಜೀವನದ ಸಂಕೇತ,
ಹೊಸ ಆಸೆಗಳ, ಚಿಗುರುವ ಸಮಯ.
ನಾವೆಲ್ಲರೂ, ಒಂದಾಗಿ ನಲಿಯೋಣ,
ಪ್ರಕೃತಿಯ ಸೌಂದರ್ಯವನು, ಸವಿಯೋಣ.

ಬರೆದವನು ನಾನಲ್ಲ- ಗೂಗಲ್‌ ಜೆಮಿನಿ. ಯಾರಾದರೂ ರಾಗ ಹಾಕಿ, ಹಾಡುವುದಿದ್ದರೆ ದಯವಿಟ್ಟು ಹಾಡಿ, ರೆಕಾರ್ಡ್‌ ಮಾಡಿ ನನಗೂ ಕಳುಹಿಸಿಕೊಡಿ.

-ನೆತ್ರಕೆರೆ ಉದಯಶಂಕರ

ಕೆಳಗಿನವುಗಳನ್ನೂ ಓದಿರಿ: 

ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಇದು ಹಕ್ಕಿಯಲ್ಲ.. ಶತಕೋಟಿ ಅವಕಾಶಗಳ ರನ್‌ ವೇ…!

ಈ ಪುಸ್ತಕ ಓದಿದ್ದೀರಾ?
ಕೆಳಗೆ ಕ್ಲಿಕ್‌ ಮಾಡಿ ಓದಿ. ಪುಸ್ತಕ / ಇ-ಪುಸ್ತಕಕ್ಕಾಗಿ ಸಂಪರ್ಕಿಸಿ: 9480215706/ 9845049970 - ಇ-ಪುಸ್ತಕಕ್ಕೆ ಅರ್ಧ ಬೆಲೆ- ಯುಪಿಐ ಮಾಡಿರಿ.

Advertisement