Showing posts with label ಲಾಕ್‌ಡೌನ್. Show all posts
Showing posts with label ಲಾಕ್‌ಡೌನ್. Show all posts

Wednesday, August 5, 2020

ಭಾರತೀಯರಿಗೆ ಮರಳಲು ಚೀನಾ ಒಪ್ಪಿಗೆ

ಭಾರತೀಯರಿಗೆ ಮರಳಲು ಚೀನಾ ಒಪ್ಪಿಗೆ

ನವದೆಹಲಿ: ನವದೆಹಲಿಯಿಂದ ಚೀನಾದ ಗುವಾಂಗ್ ಝೊವುಗೆ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ರಾಜತಾಂತ್ರಿಕರ ಕುಟುಂಬಗಳು, ಬಹುರಾಷ್ಟ್ರೀಯ ಬ್ಯಾಂಕುಗಳ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳು ಸೇರಿದಂತೆ ಸುಮಾರು ೧೫೦ ಭಾರತೀಯರು ಚೀನಾಕ್ಕೆ ಮರಳುವ ನಿರೀಕ್ಷೆಯಿದ್ದು, ಅವರ ಯಾನಕ್ಕೆ 2020  ಆಗಸ್ಟ್ 05ರ ಬುಧವಾರ ಒಪ್ಪಿಗೆ ನೀಡಿರುವ ಚೀನಾ ಕಟ್ಟುನಿಟ್ಟಿನ ಕೋವಿಡ್-೧೯ ವೈದ್ಯಕೀಯ ಶಿಷ್ಟಾಚಾರ ಪಾಲನೆಯ ಷರತ್ತು ವಿಧಿಸಿತು.

ಜೂನ್ ೨೯ ರಂದು ನಡೆಸಲಾಗಿದ್ದ ಕೊನೆಯ ವಿಶೇಷ ಹಾರಾಟದಲ್ಲಿ ಬೀಜಿಂಗ್, ಭಾರತೀಯರಿಗೆ  ಚೀನಾ ಪ್ರವೇಶಕ್ಕೆ  ಅನುಮತಿ ನೀಡದ ಹಿನ್ನೆಲೆಯಲ್ಲಿ ಭಾರತೀಯ ಮತ್ತು ಚೀನಾದ ಅಧಿಕಾರಿಗಳ ನಡುವೆ ತೀವ್ರ ಚರ್ಚೆಗಳು ನಡೆದಿದ್ದವು.

ಪ್ರತಿಯೊಬ್ಬ ವ್ಯಕ್ತಿಯು ಐದು ದಿನಗಳಲ್ಲಿ (ಬೋರ್ಡಿಂಗ್ ಮೊದಲು) ಸೀರಮ್ ಆಂಟಿಬಾಡಿ ಪತ್ತೆ ಮತ್ತು ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗಳನ್ನು ಮಾಡಿದ್ದರೆ ಮತ್ತು ಅವರ ವೈಯಕ್ತಿಕ ಆರೋಗ್ಯ ಫಾರಂಗಳನ್ನು ನವದೆಹಲಿಯ ಚೀನೀ ರಾಯಭಾರ ಕಚೇರಿಯಿಂದ ಅನುಮೋದಿಸಿದ್ದರೆ ಮಾತ್ರ ಭಾರತೀಯರಿಗೆ ಗುರುವಾರ ಹಾರಾಟದಲ್ಲಿ ಅವಕಾಶ ನೀಡಲಾಗುವುದು ಎಂದು ಚೀನಾದ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಪ್ರಯಾಣಿಕರು ಗುವಾಂಗ್ ಝೊವುನಲ್ಲಿ ಇಳಿದ ನಂತರ ಹೊಸ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಯನ್ನು  ಎದುರಿಸಬೇಕಾಗುತ್ತದೆ. ಸಕಾರಾತ್ಮಕವಾಗಿದ್ದರೆ, ಪ್ರಯಾಣಿಕರು ಅದೇ ವಿಮಾನದಲ್ಲಿ ನವದೆಹಲಿಗೆ ಮರಳಬೇಕಾಗುತ್ತದೆ.

ಚೀನಾಕ್ಕೆ ಮರಳಲು ಯೋಜಿಸುತ್ತಿರುವ ಖಾಸಗಿ ಉದ್ಯೋಗದಲ್ಲಿರುವ ಭಾರತೀಯರು ಮತ್ತೊಂದು ಕಡ್ಡಾಯ ಅವಶ್ಯಕತೆಯನ್ನು ಪೂರ್ಣಗೊಳಿಸಬೇಕಾಗಿದೆ. ಅವರು ಕೆಲಸ ಮಾಡುವ ಚೀನಾದ ಸ್ಥಳೀಯ ಕಂಪೆನಿ ಕಳುಹಿಸಿದ ವಿದೇಶಾಂಗ ವ್ಯವಹಾರಗಳ ಕಚೇರಿಯಿಂದ ಸಹಿ ಆಗಿರುವ ಕರೆ ಪತ್ರ ಇರಬೇಕು ಎಂದು ಚೀನಾ ಹೇಳಿದೆ.

ಗುರುವಾರ ಬೆಳಿಗ್ಗೆ ದಕ್ಷಿಣ ಚೀನಾದ ನಗರವಾದ ಗುವಾಂಗ್ ಝೊವುದಿಂದ ನವದೆಹಲಿಗೆ ಹಿಂದಿರುಗುವಾಗ, ಸಾಂಕ್ರಾಮಿಕ ರೋಗದಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ವಂದೇ ಭಾರತ್ ಮಿಷನ್ ಐದನೇ ಹಂತದ ಭಾಗವಾದ ವಿಮಾನವು ೨೦೦ ಕ್ಕೂ ಹೆಚ್ಚು ಭಾರತೀಯರನ್ನು ಹಿಂದಕ್ಕೆ ಕರೆತರುವ  ನಿರೀಕ್ಷೆಯಿದೆ .

ಹಿಂದಿರುಗುತ್ತಿರುವ ಹೆಚ್ಚಿನ ಭಾರತೀಯರು ಚೀನಾದಲ್ಲಿ ವೈದ್ಯಕೀಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಾಗಿದ್ದಾರೆ.

ಜೂನ್ ೨೦ ರಂದು ಶಾಂಘೈಗೆ ತೆರಳುವ ವಿಶೇಷ ವಿಮಾನದಲ್ಲಿ ಹಿಂದಿರುಗಿದ್ದ ಇಬ್ಬರು ಭಾರತೀಯರು ಕೋವಿಡ್ -೧೯ ಸೋಂಕು ಕಂಡುಬಂದದ್ದರಿಂದ ಅವರನ್ನು ವಾಪಸ್ ಕಳುಹಿಸಿದ್ದ ಚೀನಾ ಸರ್ಕಾರ, ಈಗ ಗುರುವಾರದ ವಿಬಿಎಂ ಹಾರಾಟಕ್ಕೆ ಒಂದು ತಿಂಗಳಿಗಿಂತ ಹೆಚ್ಚು ಕಾಲದ ಬಳಿಕ ಅನುಮತಿ ನೀಡಿದೆ.

ಗುರುವಾರ ಚೀನಾಕ್ಕೆ ಮರಳುವವರಲ್ಲಿ ಬಹುರಾಷ್ಟ್ರೀಯ ಬ್ಯಾಂಕುಗಳು, ಹೊಸ ಅಭಿವೃದ್ಧಿ ಬ್ಯಾಂಕ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿಗಾಗಿ ಕೆಲಸ ಮಾಡುವ ಭಾರತೀಯರು ಸೇರಿದ್ದಾರೆ.

ಆಗಮಿಸುವ ಭಾರತೀಯರನ್ನು ಗುವಾಂಗ್ ಝೊವುನಲ್ಲಿ ಸ್ಥಳೀಯ ಆರೋಗ್ಯ ಅಧಿಕಾರಿಗಳು ಗೊತ್ತುಪಡಿಸಿದ ಹೋಟೆಲ್ಗಳಲ್ಲಿ ಎರಡು ವಾರಗಳವರೆಗೆ ನಿರ್ಬಂಧದಲ್ಲಿ ಇರಿಸಲಾಗುತ್ತದೆ.

Tuesday, August 4, 2020

ಯೋಗ ಸಂಸ್ಥೆ, ಜಿಮ್‌ಗಳು ಆರಂಭ: ಅನ್ ಲಾಕ್ ೩ ಮಾರ್ಗಸೂಚಿ

ಯೋಗ ಸಂಸ್ಥೆ, ಜಿಮ್‌ಗಳು ಆರಂಭ: ನ್ ಲಾಕ್ ಮಾರ್ಗಸೂಚಿ

ನವದೆಹಲಿ: ಕೋವಿಡ್ -೧೯ ದಿಗ್ಬಂಧನವನ್ನು (ಲಾಕ್‌ಡೌನ್) ತೆರವುಗೊಳಿಸುವ (ಅನ್ಲಾಕ್) ಮಾಡುವ ಮೂರನೇ ಹಂತದ ಅಡಿಯಲ್ಲಿ ಆಗಸ್ಟ್ ರಿಂದ ಜಿಮ್ನಾಷಿಯಂಗಳು ಮತ್ತು ಯೋಗ ಸಂಸ್ಥೆಗಳಿಗೆ ತೆರೆಯಲು ಕೇಂದ್ರ  ಸರ್ಕಾರ ಅನುಮತಿ ನೀಡಿದೆ.

ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) 2020 ಆಗಸ್ಟ್ 03ರ ಸೋಮವಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಕೋವಿಡ್ -೧೯ ಕಂಟೈನ್ ಮೆಂಟ್ (ಧಾರಕ ವಲಯ) ಪ್ರದೇಶಗಳಲ್ಲಿನ ಯೋಗ ಸಂಸ್ಥೆಗಳು ಮತ್ತು ವ್ಯಾಯಾಮಶಾಲೆಗಳಿಗೆ ಮಾತ್ರ ತೆರೆಯಲು ಅನುಮತಿ ನೀಡಲಾಗುವುದಿಲ್ಲ.

೬೫ ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು, ಸಹ-ಅಸ್ವಸ್ಥತೆ ಹೊಂದಿರುವ ಜನರು, ಗರ್ಭಿಣಿಯರು ಮತ್ತು ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮುಚ್ಚಿದ ಸ್ಥಳಗಳಲ್ಲಿ ಇರುವ ಜಿಮ್ನಾಷಿಯಂ ಅಥವಾ ಯೋಗ ಸಂಸ್ಥೆಗಳನ್ನು ಬಳಸದಂತೆ ನಿರ್ದೇಶನ ನೀಡಲಾಗಿದೆ.

ಯೋಗ ಕ್ರಿಯೆಗಳನ್ನು ತೆರೆದ ಸ್ಥಳಗಳಲ್ಲಿ ನಡೆಸಬೇಕು. ಫಿಟ್‌ನೆಸ್ ಕೇಂದ್ರಕ್ಕೆ ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಜನಸಂದಣಿಯನ್ನು ತಪ್ಪಿಸಲು ಬಳಕೆದಾರರಿಗೆ ತಂಡಗಳಲ್ಲಿ ಪ್ರವೇಶ ನೀಡಬೇಕು ಮತ್ತು ಅವರಿಗೆ ಸಮಯಗಳನ್ನು ನಿಗದಿ ಪಡಿಸಬೇಕು. ಪ್ರತಿ ಎರಡು ತಂಡಗಳ ನಡುವೆ ೧೫-೩೦ ನಿಮಿಷಗಳ ಅಂತರವನ್ನು ಹೊಂದಿರಬೇಕು. ಅವಧಿಯಲ್ಲಿ ಸ್ವಚ್ಛತೆ ಮತ್ತು ಸೋಂಕು ನಿವಾರಣೆ ಪ್ರಕ್ರಿಯೆ ನಡೆಸಬೇಕು ಎಂದು ಮಾರ್ಗಸೂಚಿಸಿ ತಿಳಿಸಿದೆ.

ಶೇಕಡಾ ೯೫ಕ್ಕಿಂತ ಕಡಿಮೆ ಮಟ್ಟದ ಆಮ್ಲಜನಕದ ಸ್ಯಾಚುರೇಷನ್ ಹೊಂದಿರುವವರಿಗೆ ವ್ಯಾಯಾಮ ಮಾಡಲು ಅನುಮತಿ ನೀಡಬಾರದು" ಎಂದು ಪ್ರಕಟಣೆ ತಿಳಿಸಿತು.

 "ವ್ಯಕ್ತಿಗಳು ಸಾಧ್ಯವಾದಷ್ಟು ಕನಿಷ್ಠ ಅಡಿಗಳಷ್ಟು ದೂರವನ್ನು ಕಾಯ್ದುಕೊಳ್ಳಬೇಕುಎಂದು ಮಾರ್ಗಸೂಚಿ ತಿಳಿಸಿದೆ. ಮುಖಗವಸು (ಮಾಸ್ಕ್)  ಮತ್ತು ಮುಖದ ಹೊದಿಕೆ ಧರಿಸುವುದು ಕಡ್ಡಾಯವಾಗಿದೆ, ಆದಾಗ್ಯೂ, ಅವು ವ್ಯಾಯಾಮದ ಸಮಯದಲ್ಲಿ ಉಸಿರಾಟದ ತೊಂದರೆ ಉಂಟುಮಾಡಬಹುದಾದ ಕಾರಣ, ಜನರು ಇದರ ನಿವಾರಣೆಗಾಗಿ ತಡೆಗಟ್ಟುವ ಮುಂಜಾಗರೂಕತಾ ಕ್ರಮವಾಗಿ ಮುಸುಕು (ವೀಸರ್) ಬಳಸಬಹುದು ಎಂದು ಸರ್ಕಾರ ಹೇಳಿದೆ.

ಆಗಾಗ್ಗೆ ಕೈ ತೊಳೆಯುವುದು ಮತ್ತು ಕೈ ಸ್ಯಾನಿಟೈಸರ್ಗಳನ್ನು ಬಳಸುವುದನ್ನು ಗೃಹ ವ್ಯವಹಾರಗಳ ಇಲಾಖೆ ಒತ್ತಿಹೇಳಿದೆ ಮತ್ತು "ಉಸಿರಾಟದ ಶಿಷ್ಟಾಚಾರಗಳಕಟ್ಟುನಿಟ್ಟಿನ ಅಭ್ಯಾಸವನ್ನು ಸಹ ಸೂಚಿಸಿದೆ.

"ಸೀನುವಾಗ / ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಟಿಶ್ಯೂ ಪೇಪರ್ ಅಥವಾ ಬಟ್ಟೆಯಿಂದ ಮುಚ್ಚಿ, ಬಳಿಕ ಟಿಶ್ಯೂಪೇಪರನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕುಎಂದು ಮಾರ್ಗಸೂಚಿ ತಿಳಿಸಿದೆ.

ವ್ಯಾಯಾಮಶಾಲೆಗಳು ಮತ್ತು ಯೋಗ ಸಂಸ್ಥೆಗಳ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ಫಿಟ್‌ನೆಸ್ ಚಟುವಟಿಕೆಗಳನ್ನು ಯೋಜಿಸಲು ನಿರ್ದೇಶಿಸಲಾಗಿದೆ. ಉಪಕರಣ ಮತ್ತು ಯಂತ್ರಗಳನ್ನು ಅಡಿ ದೂರದಲ್ಲಿ ಇಡಬೇಕು. ಯಾವುದಾದರೂ ಹೊರಾಂಗಣ ಸ್ಥಳಾವಕಾಶ ಇದ್ದರೆ ಅದರ ಬಳಕೆಯನ್ನು ಪ್ರೋತ್ಸಾಹಿಸಲಾಗಿದೆ. ನೆಲ ಅಥವಾ ಗೋಡೆಯ ಗುರುತುಗಳನ್ನು ಬಳಸಿಕೊಂಡು ಆವರಣಕ್ಕೆ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಿಗೆ ನಿರ್ದಿಷ್ಟ ಮಾರ್ಗಗಳನ್ನು ರಚಿಸಲು ಸಂಸ್ಥೆಗಳಿಗೆ ಸೂಚಿಸಲಾಗಿದೆ. ಆವರಣ, ಯಂತ್ರೋಪಕರಣಗಳನ್ನು ನಿಯಮಿತವಾಗಿ ಮತ್ತು ಸಕಾಲಿಕವಾಘಿ ಶುಚಿ ಹಾಗೂ ಸೋಂಕುಮುಕ್ತಗೊಳಿಸಬೇಕು ಎಂದು ಮಾರ್ಗಸೂಚಿ ಹೇಳಿದೆ.

ಕಾರ್ಡ್ ಆಧಾರಿತ, ಸಂಪರ್ಕವಿಲ್ಲದ ಪಾವತಿಯನ್ನು ಉತ್ತೇಜಿಸಿಎಂದು ತಿಳಿಸಿರುವ ಮಾರ್ಗಸೂಚಿ, ಸಾಮಾನ್ಯ ಜಿಮ್ ಮಹಡಿಯಲ್ಲಿ ಅಥವಾ ನಿರ್ದಿಷ್ಟ ತಾಲೀಮು ಪ್ರದೇಶಗಳಲ್ಲಿ ಸಿಬ್ಬಂದಿಯನ್ನು ಮಿತಿಗೊಳಿಸುವ ಅಗತ್ಯವನ್ನು ಪ್ರತಿಪಾದಿಸಿದೆ.

ಲಕ್ಷಣರಹಿತ ಜನರಿಗೆ ಮಾತ್ರ ಪ್ರವೇಶ ಅವಕಾಶ ನೀಡಬೇಕು. ಎಲ್ಲಾ ಬಳಕೆದಾರರ ಉಷ್ಣ ತಪಾಸಣೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಎಲ್ಲಾ ಸಮಯದಲ್ಲೂ ಕನಿಷ್ಠ ಆರು ಅಡಿ ಅಂತರ ಇಟ್ಟುಕೊಳ್ಳಬೇಕು. ಜನಸಂದಣಿಯನ್ನು ತಪ್ಪಿಸಲು ಮತ್ತು ಸಾಮಾಜಿಕ ಅಂತರ ಖಚಿತಪಡಿಸಿಕೊಳ್ಳಲು ಪಾರ್ಕಿಂಗ್ ಸ್ಥಳಗಳು, ಕಾರಿಡಾರ್ ಮತ್ತು ಎಲಿವೇಟರ್‌ಗಳಲ್ಲಿ ತಂಡಗಳ ವ್ಯವಸ್ಥೆ ಮಾಡಬೇಕು. ಹೆಸರು, ವಿಳಾಸ ಮತ್ತು ಸಂಪರ್ಕ ಮಾಹಿತಿ ಸೇರಿದಂತೆ ಬಳಕೆದಾರರ ವಿವರಗಳೊಂದಿಗೆ ಚೆಕ್-ಇನ್ ಮತ್ತು ಚೆಕ್-ಔಟ್ ಸಮಯದ ವಿವರವಾದ ಖಾತೆಯನ್ನು ನಿರ್ವಹಿಸಲು ವ್ಯವಸ್ಥೆ ಮಾಡಬೇಕು ಎಂದೂ ಮಾರ್ಗಸೂಚಿ ತಿಳಿಸಿದೆ.

ಸ್ಪಾಗಳು, ಸೌನಾ, ಉಗಿ ಸ್ನಾನಗೃಹಗಳು ಮತ್ತು ಈಜುಕೊಳಗಳಿಗೆ ಇನ್ನೂ ತೆರೆಯಲು ಅವಕಾಶ ನೀಡಲಾಗಿಲ್ಲ.

Saturday, August 1, 2020

ದೇಶದಲ್ಲಿ ಚೇತರಿಕೆಯ ಪ್ರಮಾಣ ೧೦,೯೪,೩೭೪ಕ್ಕೆ ಏರಿಕೆ

ದೇಶದಲ್ಲಿ ಚೇತರಿಕೆಯ ಪ್ರಮಾಣ ೧೦,೯೪,೩೭೪ಕ್ಕೆ ಏರಿಕೆ

ನವದೆಹಲಿ: ಭಾರತದಲ್ಲಿ ಒಂದೇ ದಿನ ೫೭,೧೧೮ ಪ್ರಕರಣಗಳ ದಾಖಲೆಯೊಂದಿಗೆ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 2020 ಆಗಸ್ಟ್ 01ರ ಶನಿವಾರ ೧೬,೯೫,೯೮೮ಕ್ಕೆ ತಲುಪಿತು. ಇದೇ ವೇಳೆಗೆ ರೋಗದಿಂದ ಗುಣಮುಖರಾಗಿ ಚೇತರಿಸಿದರ ಸಂಖ್ಯೆ ೧೦,೯೪,೩೭೪ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದವು.

ಕೋವಿಡ್-೧೯ಕ್ಕೆ ಬಲಿಯಾದವರ ಸಂಖ್ಯೆ ೩೬,೫೧೧ ಕ್ಕೆ ಏರಿದ್ದು, ೨೪ ಗಂಟೆಗಳ ಅವಧಿಯಲ್ಲಿ ೭೬೪ ಜನರು ಕಾಯಿಲೆಗೆ ತುತ್ತಾಗಿದ್ದಾರೆ. ಪ್ರಸ್ತುತ, ದೇಶದಲ್ಲಿ ,೬೫,೧೦೩ ಸಕ್ರಿಯ ಪ್ರಕರಣಗಳಿವೆ.

ಕೋವಿಡ್ -೧೯ ರೋಗಿಗಳಲ್ಲಿ ಚೇತರಿಕೆಯ ಪ್ರಮಾಣವು ಶೇಕಡಾ ೬೪.೫೩ಕ್ಕೆ ಏರಿದ್ದರೆ, ಸಾವಿನ ಪ್ರಮಾಣವು ಶೇಕಡಾ .೧೫ಕ್ಕೆ ಇಳಿದಿದೆ ಎಂದು ಅಂಕಿಸಂಖ್ಯೆಗಳು ತಿಳಿಸಿದವು.

ಕೋವಿಡ್ -೧೯ ಪ್ರಕರಣಗಳು ಸತತ ಮೂರನೇ ದಿನ ೫೦,೦೦೦ ಕ್ಕಿಂತ ಹೆಚ್ಚು ದಾಖಲಾಗಿವೆ.

ಐಸಿಎಂಆರ್ ಪ್ರಕಾರ, ಜುಲೈ ೩೧ ರವರೆಗೆ ಒಟ್ಟು ,೯೩,೫೮,೬೫೯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ,೨೫,೬೮೯ ಮಾದರಿಗಳನ್ನು ಶುಕ್ರವಾರ ಪರೀಕ್ಷಿಸಲಾಗಿದೆ.

ವರದಿಯಾದ ಹೊಸ ೭೬೪ ಸಾವುಗಳಲ್ಲಿ ಮಹಾರಾಷ್ಟ್ರದಿಂದ ೨೬೫, ತಮಿಳುನಾಡಿನಿಂದ ೯೭, ಕರ್ನಾಟಕದಿಂದ ೮೪, ಆಂಧ್ರಪ್ರದೇಶದಿಂದ ೬೮, ಪಶ್ಚಿಮ ಬಂಗಾಳದಿಂದ ೪೫, ಉತ್ತರ ಪ್ರದೇಶದಿಂದ ೪೩, ದೆಹಲಿಯಿಂದ ೨೭, ಗುಜರಾತಿನಿಂದ ೨೩, ಪಂಜಾಬಿನಿಂದ ೧೬, ಬಿಹಾರ ಮತ್ತು ತೆಲಂಗಾಣದಿಂದ ತಲಾ ೧೪, ಜಮ್ಮು ಮತ್ತು ಕಾಶ್ಮೀರದಿಂದ ೧೨ ಮತ್ತು ರಾಜಸ್ಥಾನದಿಂದ ೧೧ ಪ್ರಕರಣಗಳ ದಾಖಲಾಗಿವೆ.

ಮಧ್ಯಪ್ರದೇಶದಿಂದ ಹತ್ತು, ಒಡಿಶಾದಿಂದ ಎಂಟು, ಅಸ್ಸಾಂ, ಹರಿಯಾಣ ಮತ್ತು ಉತ್ತರಾಖಂಡದಿಂದ ತಲಾ ನಾಲ್ಕು, ಗೋವಾ, ಜಾರ್ಖಂಡ್, ಕೇರಳದಿಂದ ತಲಾ ಮೂರು, ಛತ್ತೀಸ್‌ಗಢದಿಂದ ಎರಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಗಢ, ಮಣಿಪುರ ಮತ್ತು ಪುದುಚೇರಿಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ.

Advertisement