Showing posts with label Moon. Show all posts
Showing posts with label Moon. Show all posts

Saturday, April 25, 2026

ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು, ಮಳೆ ಬಂದರೂ ಕರೆಂಟು!

 ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು, ಮಳೆ ಬಂದರೂ ಕರೆಂಟು!

ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು,
  
ಮಳೆ ಬಂದರೂ ಕರೆಂಟು!

ಬ್ಯಾಟ್ರಿಯ ಚಾರ್ಜು ಮಾಡಿ ಉಪಯೋಗಿಸುವ ಹಾಂಗೆ ಮತ್ತೆ ಮತ್ತೆ ಉಪಯೋಗಿಸುಲೆ ಸಾಧ್ಯ ಅಪ್ಪಂತ ಇಂಧನದ ವಿಷಯಲ್ಲಿ ಈ ಹವಾಮಾನ ಹೇಳ್ತದು ಯಾವಾಗಲೂ ಒಂದು ದೊಡ್ಡ ಸವಾಲು. ಸಾಧಾರಣ ಮೋಡ ಕವಿದ ವಾತಾವರಣ ಇಪ್ಪಗ ಅಥವಾ ಮಳೆ ಬಪ್ಪಗ ಸೋಲಾರ್ ಪ್ಯಾನೆಲುಗ ಕೈಕೊಡ್ತವು ಹೇಳ್ತದು ಎಂಗೊಗೆಲ್ಲ ಗೊಂತಿಪ್ಪ ವಿಷಯವೇ. ಆದರೆ ಈಗ ವಿಜ್ಞಾನಿಗೋ ಇದಕ್ಕೆ ಒಂದು ಬಾರಿ ಲಾಯ್ಕದ ಉಪಾಯ ಕಂಡುಹಿಡುದ್ದವು. ಬೆಶಿಲು ಇಪ್ಪಗ ಸೂರ್ಯಂದ, ಮಳೆ ಬಪ್ಪಗ ಮಳೆ ನೀರ ಹನಿಂದ ಕರೆಂಟ್ ತಯಾರು ಮಾಡುವ ‘ಹೈಬ್ರಿಡ್ […]

ಮುಂದೆ ಓದಿ »

 ಇಲ್ಲವೇ ಪರ್ಯಾಯ.ಕಾಮ್‌ ವೆಬ್‌ ಸೈಟಿನ ಹವ್ಯಕ ಪುಟ ನೋಡಿ.

ಚಂದ್ರನ ಪ್ರವಾಸ ಯಶಸ್ವಿ

ಮೊನ್ನೆ ನಾವೊಂದು ಸುದ್ದಿ ಮಾತಾಡಿದ್ದಪ್ಪೋ, ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ, ನಾಸಾ ಚಂದ್ರನ ಪ್ರವಾಸಕ್ಕೆ ಹೇಳಿ ನಾಲ್ಕು ಜನರ ಕಳಿಸಿದ್ದು ಹೇಳಿ. ಆ ಪ್ರವಾಸ ಯಶಸ್ವಿ ಆಯಿದು. ಆ ನಾಲ್ಕು ಜೆನವೂ ಯಶಸ್ವಿಯಾಗಿ ಭೂಮಿಗೆ ಬೈಂದವು. ಇದು ಜಗತ್ತಿನ ಬಾಹ್ಯಾಕಾಶ ಕ್ಷೇತ್ರಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು. 2028ಕ್ಕೆ ಚಂದ್ರನ ನೆಲಲ್ಲಿ ಇಳಿವಲೆ, ನಂತ್ರ ಮಂಗಳ ಗ್ರಹದ ಹೊಡೆಂಗೆ ಹೋಪಲೆ ಈ ಪ್ರವಾಸಂದ ನಾಸಾಕ್ಕೆ ಅನುಕೂಲ ಆವುತ್ತು. ಆರ್ಟೆಮಿಸ್‌-2 ಹೇಳ್ತ ಯೋಜನೆಯ ಭಾಗವಾಗಿ ಕ್ರಿಸ್ಟಿನಾ ಕೋಚ್‌, ಜೆರೆಮಿ ಹ್ಯಾನ್ಸನ್‌, […]

ಮುಂದೆ ಓದಿ »

 ಇಲ್ಲವೇ ಪರ್ಯಾಯ.ಕಾಮ್‌ ವೆಬ್‌ ಸೈಟಿನ ಹವ್ಯಕ ಪುಟ ನೋಡಿ

Saturday, December 5, 2020

ಚಂದ್ರನ ಮೇಲೆ ಧ್ವಜ ನೆಟ್ಟ ಚೀನಾ

 ಚಂದ್ರನ ಮೇಲೆ ಧ್ವಜ ನೆಟ್ಟ ಚೀನಾ

ಬೀಜಿಂಗ್: ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿಯಾಗಿದ್ದು, ಚಂದ್ರ ಗ್ರಹದ ಮೇಲೆ ತನ್ನ ರಾಷ್ಟ್ರಧ್ವಜವಾದ ಕೆಂಬಾವುಟವನ್ನು ಅದು ನೆಟ್ಟಿದೆ. ಇದರೊಂದಿಗೆ ಚಂದ್ರನಲ್ಲಿ ಇಳಿದು ರಾಷ್ಟ್ರಧ್ವಜ ನೆಡುವ ಸಾಧನೆ ಮಾಡಿದ  ಜಗತ್ತಿನ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಯಿತು.

೫೦ ವರ್ಷಗಳ ಹಿಂದೆ ಅಮೆರಿಕ ಈ ಸಾಧನೆ ಮಾಡಿದ ಮೊದಲ ರಾಷ್ಟ್ರ ಎನಿಸಿತ್ತು.

ತೀವ್ರ ಕಸರತ್ತಿನ ಬಳಿಕ ಚೀನಾ ಚಂದ್ರನ ಅಧ್ಯಯನಕ್ಕೆ ನೌಕೆ ಕಳಿಸಿತ್ತು. ಅದರ ಈ ಸಾಹಸ ಯಾತ್ರೆ ಯಾವುದೇ ಅಡ್ಡಿ ಎದುರಾಗದೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹೆಮ್ಮೆಯ ಸಂಕೇತವಾಗಿ ನೌಕೆ ಭೂಮಿಯತ್ತ ವಾಪಸಾಗುವ ಮುನ್ನ ಚಂದ್ರನ ಮೇಲೆ ಚೀನಾದ ರಾಷ್ಟ್ರಧ್ವಜವನ್ನು ನೆಟ್ಟಿದೆ.

ಚಾಂಗ್’ಇ -೫ ನೌಕೆಗೆ ಅಳವಡಿಸಿದ್ದ ಕ್ಯಾಮರಾ ಮೂಲಕ ಧ್ವಜ ಹಾರಾಟದ ಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಆ ಚಿತ್ರಗಳನ್ನು 2020 ಡಿಸೆಂಬರ್ 05ರ ಶನಿವಾರ ಹಂಚಿಕೊಂಡಿತು.  ಚಂದ್ರನ ಮೇಲೆ ಹಾರಿಸಿರುವ ಚೀನಾ ಧ್ವಜವು ೨ ಮೀ. ಉದ್ದ ೯೦ ಸೆಂ.ಮೀ ಅಗಲ ಇದೆ.

 ಚಾಂಗ್’ಇ-೫ ನೌಕೆಯನ್ನು ನವೆಂಬರ್ ೨೩ರಂದು ಬಾನಿನತ್ತ ಕಳಿಸಲಾಗಿತ್ತು. ಡಿಸೆಂಬರ್ ೦೧ರ ಮಂಗಳವಾರ ಅದು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದ್ದು, ನಿರ್ದೇಶಿತ ಕಾರ್ಯ ಸಾಧನೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ ಹಲವು ರಾಷ್ಟ್ರಗಳು ಚಂದ್ರಯಾನಕ್ಕೆ ಪ್ರಯತ್ನ ಮಾಡಿದ್ದು, ಅಮೆರಿಕ, ರಷ್ಯಾ ನಂತರ ಚೀನಾ ದೇಶವು ಚಂದ್ರನ ಮೇಲ್ಭಾಗದಿಂದ ಮಣ್ಣು ಸಂಗ್ರಹಿಸಿ ತಂದ ಮೂರನೇ ಯಶಸ್ವಿ ರಾಷ್ಟ್ರ ಎನಿಸಿತ್ತು.

Sunday, October 18, 2020

ಚಂದ್ರನಲ್ಲಿ ೪ಜಿ ಮೊಬೈಲ್ ಜಾಲ ಸ್ಥಾಪನೆಗೆ ನಾಸಾ ಸಿದ್ಧತೆ

 ಚಂದ್ರನಲ್ಲಿ ೪ಜಿ ಮೊಬೈಲ್ ಜಾಲ ಸ್ಥಾಪನೆಗೆ ನಾಸಾ ಸಿದ್ಧತೆ

ಸ್ಯಾನ್ ಫ್ರಾನ್ಸಿಸ್ಕೋ: ಚಾಂದ್ರ ನೆಲದಲ್ಲಿ ೪ಜಿ ನೆಟ್ ವರ್ಕ್ ಸ್ಥಾಪಿಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸಿದ್ಧತೆ ನಡೆಸಿದೆ. ಭೂಮಿಯ ಸಹಜ ಉಪಗ್ರಹವಾಗಿರುವ ಚಂದ್ರನಲ್ಲಿ ೪ಜಿ ಎಲ್ ಟಿಇ  ಮೊಬೈಲ್ ನೆಟ್ ವರ್ಕ್  ಸಂಪರ್ಕ ಕಲ್ಪಿಸಲು ತಯಾರಿ ಆರಂಭಿಸಿರುವ ನಾಸಾ, ಖ್ಯಾತ ಟೆಲಿಕಾಂ ಕಂಪೆನಿ ನೋಕಿಯಾಕ್ಕೆ ೧೪.೧ ಮಿಲಿಯನ್ (1.41 ಕೋಟಿ) ಡಾಲರ್ ಮೊತ್ತದ ಕಾಮಗಾರಿಯನ್ನು ಗುತ್ತಿಗೆ ನೀಡಿದೆ.

ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಉತ್ತುಂಗಕ್ಕೇರಲು ಅಮೆರಿಕ ‘ಟಿಪ್ಪಿಂಗ್ ಪಾಯಿಂಟ್’ ಎಂಬ ೨೭೭೫ ಕೋಟಿ ರೂ. ಮೌಲ್ಯದ ಯೋಜನೆ ರೂಪಿಸಿದೆ. ಅದರ ಭಾಗವಾಗಿ ಚಾಂದ್ರ ನೆಲದಲ್ಲಿ ಮೊಬೈಲ್ ನೆಟ್ ವರ್ಕ್ ಸಿಗುವಂತೆ ಮಾಡುವ ಮೂಲಕ ಭೂಮಿ ಹಾಗೂ ಚಂದ್ರನ ನಡುವೆ ಅತ್ಯುತ್ತಮ ಗುಣಮಟ್ಟದ ಫೋಟೋ, ವಿಡಿಯೋ ವಿನಿಮಯವನ್ನು ವೇಗವಾಗಿ ಮಾಡಿಕೊಳ್ಳುವುದು ನಾಸಾದ ಗುರಿ.

ಚಂದ್ರನ ಮೇಲೆ ೪ಜಿ ನೆಟ್ ವರ್ಕ್ ಸ್ಥಾಪನೆಯಾದ ಬಳಿಕ ರೋವರ್ ಗಳನ್ನು ಭೂಮಿಯಿಂದಲೇ ಸುಲಭವಾಗಿ ನಿಯಂತ್ರಿಸಬಹುದು. ಆ ರೋವರ್ ಗಳ ಮೂಲಕ ಉತ್ಕೃಷ್ಟ ಗುಣಮಟ್ಟದ ಲೈವ್ ವಿಡಿಯೋಗಳನ್ನು ಪಡೆಯಬಹುದಾಗಿದ್ದು, ಚಂದ್ರನ ಮೇಲ್ಮೈ ಅಧ್ಯಯನಕ್ಕೆ ಇನ್ನಷ್ಟು ನೆರವನ್ನು ೪ಜಿ ನೆಟ್ ವರ್ಕ್ ನೀಡಲಿದೆ.

ಚಂದ್ರನ ಮೇಲೇ ವಿಜ್ಞಾನಿಗಳು ಕುಳಿತು ಸಂಶೋಧನೆ ನಡೆಸುವಂತಹ ವ್ಯವಸ್ಥೆಯನ್ನು ೨೦೨೮ರೊಳಗೆ ರೂಪಿಸಲು ನಾಸಾ ನಿರ್ಧರಿಸಿದೆ. ಮಾನವರು ಚಂದ್ರನ ಮೇಲೆ ಉಳಿದುಕೊಂಡು, ಅಲ್ಲಿಂದಲೇ ಕೆಲಸ ಮಾಡಲು ಸಾಧ್ಯವಾಗುವಂತೆ ಮಾಡುವುದು ನಾಸಾದ ಉದ್ದೇಶ. ಸಂವಹನ ಸುಧಾರಣೆಯಿಂದು ಇದು ಸಾಧ್ಯ ಎಂಬುದು ನಾಸಾ ಅಂಬೋಣ. ಇದಕ್ಕಾಗಿ ಮೊಬೈಲ್ ನೆಟ್ ವರ್ಕ್ ಅಗತ್ಯವಾಗಿದೆ. ಇದರ ಜೊತೆಗೆ ಚಂದ್ರನ ಮೇಲೆ ದೀರ್ಘಕಾಲ ಬಾಳಿಕೆ ಬರುವ ವಿದ್ಯುತ್ ವ್ಯವಸ್ಥೆ ರೂಪಿಸಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ಯೋಜನೆ ರೂಪಿಸುತ್ತಿದೆ.

೨೦೧೮ರಲ್ಲೇ ಚಂದ್ರನ ಮೇಲೆ ಅಮೆರಿಕದ ಅಪೋಲೋ-೧೭ ಬಾಹ್ಯಾಕಾಶ ನೌಕೆ ಇಳಿಯುವ ಜಾಗದಲ್ಲಿ ಎಲ್ ಟಿಇ ನೆಟ್ ವರ್ಕ್ ಸಿಗುವಂತೆ ಮಾಡಲು ಜರ್ಮನಿಯ ಬಾಹ್ಯಾಕಾಶ ಕಂಪನಿಯಾದ ಪಿಟಿಸೈಂಟಿಸ್ಟ್ ಹಾಗೂ ಬ್ರಿಟನ್ನಿನ ವೊಡಾಫೋನ್ ಜೊತೆ ನಾಸಾ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಕಾರಣಾಂತರಗಳಿಂದ ಆ ಯೋಜನೆ ಕಾರ್ಯಗತಗೊಂಡಿರಲಿಲ್ಲ.

Advertisement