Showing posts with label ಶಬರಿಮಲೈ. Show all posts
Showing posts with label ಶಬರಿಮಲೈ. Show all posts

Tuesday, February 11, 2020

ವಿಸ್ತೃತ ಪೀಠಕ್ಕೆ ಶಬರಿಮಲೈ ವಿವಾದ: ಸುಪ್ರೀಂ ಸಂವಿಧಾನಪೀಠದ ಅಸ್ತು

ವಿಸ್ತೃತ ಪೀಠಕ್ಕೆ ಶಬರಿಮಲೈ ವಿವಾದ: ಸುಪ್ರೀಂ ಸಂವಿಧಾನಪೀಠದ ಅಸ್ತು
ಫೆಬ್ರುವರಿ ೧೭ಕ್ಕೆ ವಿಚಾರಣೆ ಆರಂಭ
ನವದೆಹಲಿ: ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಕಾನೂನು ಸಂಬಂಧಿತ ಪ್ರಶ್ನೆಗಳನ್ನು ವಿಶಾಲ ಪೀಠಕ್ಕೆ ಒಪ್ಪಿಸುವ ಪ್ರಸ್ತಾಪವನ್ನು ಸುಪ್ರೀಂಕೋರ್ಟ್ 2020 ಫೆಬ್ರುವರಿ 10ರ ಸೋಮವಾರ ಎತ್ತಿ ಹಿಡಿಯಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ ನೇತೃತ್ವದ ನ್ಯಾಯಮೂರ್ತಿಗಳ ಪೀಠವು ತನ್ನ ಪುನರ್ ಪರಿಶೀಲನಾ ವ್ಯಾಪ್ತಿಯಲ್ಲಿ ವಿಶಾಲ ಪೀಠಕ್ಕೆ ಒಪ್ಪಿಸಬೇಕಾದ ಕಾನೂನು ಸಂಬಂಧಿತ ಪ್ರಶ್ನೆಗಳನ್ನು ರೂಪಿಸುವ ಅಧಿಕಾರವನ್ನು ಹೊಂದಿದೆ ಎಂದು ತೀರ್ಪು ನೀಡಿತು.

ಪೀಠವು ಆಲಿಸಬೇಕಾದ ಪ್ರಶ್ನೆಗಳನ್ನು ಕೂಡಾ ನ್ಯಾಯಾಲಯವು ಪುನರ್ ನಿರೂಪಣೆ ಮಾಡಿತು.
ನವ ಸದಸ್ಯ ಸಂವಿಧಾನ ಪೀಠದ ಮುಂದೆ ವಿಚಾರಣೆ ಫೆಬ್ರುವರಿ ೧೭ಕ್ಕೆ ಆರಂಭವಾಗಲಿದೆ.

ಪ್ರತಿಯೊಂದು ಕಡೆಯ ವಕೀಲರೂ ಪ್ರಮುಖ ವಾದಗಳನ್ನು ಮುಂದಿಡಲಿದ್ದಾರೆ ಮತ್ತು ವಾದ ಮಂಡನೆಗೆ ಪೂರ್ಣ ದಿನದ ಕಾಲಾವಕಾಶ ಪಡೆಯಲಿದ್ದಾರೆ. ಪ್ರತಿಯೊಬ್ಬ ವಕೀಲರಿಗೂ ಪೂರಕ ವಾದ ಮಂಡನೆಗೆ ಎರಡು ಗಂಟೆಗಳ ಹೆಚ್ಚುವರಿ ಕಾಲಾವಕಾಶವನ್ನು ನ್ಯಾಯಾಲಯ ನೀಡಲಿದೆ.

೨೦೧೯ರ ನವೆಂಬರ್ ೧೪ರಂದು ಪಂಚ ಸದಸ್ಯ ಪೀಠವು ಶಬರಿಮಲೈ ಪುನರ್ ಪರಿಶೀಲನಾ ಅರ್ಜಿಗಳನ್ನು ಆಲಿಸಿ ಏಳು ಪ್ರಶ್ನೆಗಳನ್ನು ವಿಶಾಲ ಪೀಠದ ಉತ್ತರಕ್ಕಾಗಿ ರೂಪಿಸಿತ್ತು. ಪ್ರಶ್ನೆಗಳಲ್ಲಿ ಸಂವಿಧಾನದ ೨೫ ಮತ್ತು ೨೬ನೇ ಪರಿಚ್ಛೇದಗಳ ಅಡಿಯಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಚಲಾವಣೆ ಮತ್ತು ಇತರ ಮೂಲಭೂತ ಹಕ್ಕುಗಳು- ಮುಖ್ಯವಾಗಿ ೧೪ನೇ ಪರಿಚ್ಛೆದದ ಅಡಿಯಲ್ಲಿನ ಸಮಾನತೆಯ ಹಕ್ಕು, ನೈತಿಕತೆ ಅಥವಾ ಸಾಂವಿಧಾನಿಕ ನೈತಿಕತೆ ಅಭಿವ್ಯಕ್ತಿಯ ವ್ಯಾಪ್ತಿ ಮತ್ತು ನಿರ್ದಿಷ್ಟ ಆಚರಣೆಯೊಂದು ಧರ್ಮದ ಅವಿಭಾಜ್ಯ ಅಂಗವೇ ಎಂಬುದಾಗಿ ನ್ಯಾಯಾಲಯವು ಎಷ್ಟರ ಮಟ್ಟಿಗೆ ಪರಿಶೀಲಿಸಬಹುದು ಎಂಬ ವಿಷಯಗಳೂ ಇವುಗಳಲ್ಲಿ ಸೇರಿದ್ದವು.

ಪೂಜಾ ಸ್ಥಳಕ್ಕೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ಆಚರಣೆ ಶಬರಿಮಲೈ ಪ್ರಕರಣಕ್ಕೆ ಮಾತ್ರ ಸೀಮಿತವಾದುದಲ್ಲ, ಸುಪ್ರೀಂಕೋರ್ಟಿನ ಮುಂದೆ ಬಾಕಿ ಉಳಿದಿರುವ ಇತರ ಮೂರು ಪ್ರಕರಣಗಳಲ್ಲೂ ಇದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿತ್ತು. ದರ್ಗಾ / ಮಸೀದಿಗಳಿಗೆ ಮುಸ್ಲಿಂ ಮಹಿಳೆಯರ ಪ್ರವೇಶ ಮತ್ತು ಪಾರ್ಸಿಯೇತರ ವ್ಯಕ್ತಿಯನ್ನು ಮದುವೆಯಾಗುವ ಪಾರ್ಸಿ ಮಹಿಳೆಯರು ಅಗ್ಯಾರಿಯಂತ ಪವಿತ್ರ ಅಗ್ನಿಯ ಸ್ಥಳಕ್ಕೆ ಪ್ರವೇಶಿಸುವುದು ಪ್ರಕರಣಗಳನ್ನು ನ್ಯಾಯಾಲಯ ಉಲ್ಲೇಖಿಸಿತ್ತು. ಮೂರನೇ ಪ್ರಕರಣದಲ್ಲಿ ದಾವೂದಿ ಬೋಹ್ರಾ ಸಮುದಾಯದಲ್ಲಿ ಮುಸ್ಲಿಂ ಮಹಿಳೆಯ ಜನನಾಂಗ ಛೇದನ ಸಂಪ್ರದಾಯವಿದೆ ಎಂದು ನ್ಯಾಯಾಲಯ ಉಲ್ಲೇಖ ಮಾಡಿತ್ತು.

ಮಹಿಳೆಯರ ಹಕ್ಕುಗಳು ಮತ್ತು ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಕಾನೂನಿನ ಪ್ರಶ್ನೆಗಳನ್ನು ಸಪ್ತ ಸದಸ್ಯರಿಗಿಂತ ಕಡಿಮೆಯಲ್ಲದ ವಿಶಾಲ ಪೀಠ ನಿರ್ಧರಿಸಿದ ಬಳಿಕ ಮಾತ್ರವೇ  ಪುನರ್ ಪರಿಶೀಲನಾ ಅರ್ಜಿಗಳನ್ನು ನಿರ್ಧರಿಸಲು ಸಾಧ್ಯ ಎಂದು ನ್ಯಾಯಾಲಯ ಹೇಳಿತ್ತು.

೨೦೧೯ ನವೆಂಬರ್ ೧೪ರ ತೀರ್ಪನ್ನು ಅನುಸರಿಸಿ ನವ ಸದಸ್ಯ ಪೀಠವನ್ನು ರಚಿಸಲಾಗಿತ್ತು.

ಒಂಬತ್ತು ಸದಸ್ಯರ ವಿಶಾಲ ಸಂವಿಧಾನ ಪೀಠವು ವಿಚಾರಣೆಗೆ ಎತ್ತಿಕೊಳ್ಳಲಿರುವ ಪ್ರಶ್ನೆಗಳು:
·         ಧಾರ್ಮಿಕ ಸ್ವಾತಂತ್ರ್ಯದ ತಳಹದಿ ಮತ್ತು ವಿಸ್ತಾರ.
·         ಸಂವಿಧಾನದ ೨೫ನೇ ಪರಿಚ್ಛೇದದ ಮೇರೆಗೆ ನಾಗರಿಕರಿಗೆ ಲಭ್ಯವಿರುವ ಅವಕಾಶಗಳು ಹಾಗೂ ೨೬ನೇ ಪರಿಚ್ಛೇದದ ಮೇರೆಗೆ ಧಾರ್ಮಿಕ ಸಂಸ್ಥೆಗಳಿಗೆ ಇರುವ ಧಾರ್ಮಿಕ ಹಕ್ಕುಗಳು.
·         ಧಾರ್ಮಿಕ ಪಂಗಡಗಳ ಹಕ್ಕುಗಳು ಸಂವಿಧಾನದ ಭಾಗ ೩ರಲ್ಲಿ ಅಳವಡಿಸಲಾಗಿರುವ ಅವಕಾಶಗಳು ಪರಸ್ಪರ ಪೂರಕ ಆಗಿವೆಯೇ ಹೇಗೆ?
·         ೨೫ ಮತ್ತು ೨೬ನೇ ಪರಿಚ್ಛೆದಗಳ ಪ್ರಕಾರ ಇರುವ ನೈತಿಕತೆ ಅವಕಾಶಗಳು ಹಾಗೂ ಪ್ರಯೋಜನಗಳು ಸಂವಿಧಾನ ಚಾರಿತ್ರ್ಯಕ್ಕೆ ಒಳಪಟ್ಟಿವೆಯೇ ಹೇಗೆ?
·         ಭಾರತದ ಸಂವಿಧಾನದ ೨೫ ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವಂತೆ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿ ಮತ್ತು ವ್ಯಾಪ್ತಿ ಏನು?
·         ಧಾರ್ಮಿಕ ವಿಭಜನೆಗಳಿಗೆಲ್ಲ ಹಕ್ಕುಗಳ ಪ್ರಯೋಜನಗಳು ಒಳಪಡುತ್ತವೆಯೇ ಹೇಗೆ?
·         ೨೫()(ಬಿ) ಪರಿಚ್ಛೇದದ ಪ್ರಕಾರ ಹಿಂದುಗಳ ಒಂದು ಭಾಗ ಎಂಬ ಪದದ ಅರ್ಥವ್ಯಾಪ್ತಿ.
·         ಒಂದು ಧಾರ್ಮಿಕ ಸಂಘಟನೆಗೆ ಸೇರದವರು ಅದೇ ಧರ್ಮದ ಆಚರಣೆಗಳನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬಹುದೇ?

Wednesday, January 8, 2020

ಕರ್ನಾಟಕದ ಮಾಜಿ ರಾಜ್ಯಪಾಲ ಟಿ ಎನ್ ಚತುರ್ವೇದಿ ನಿಧನ

ಕರ್ನಾಟಕದ ಮಾಜಿ ರಾಜ್ಯಪಾಲ ಟಿ ಎನ್ ಚತುರ್ವೇದಿ ನಿಧನ
ನೋಯ್ಡಾ: ಕರ್ನಾಟಕದ ಮಾಜಿ ರಾಜ್ಯಪಾಲ ಟಿ ಎನ್ ಚತುರ್ವೇದಿಅವರು 2020 ಜನವರಿ 06ರ ಭಾನುವಾರ ರಾತ್ರಿ ಕೊನೆಯುಸಿರೆಳೆದರು. ಅವರಿಗೆ ೯೦ ವರ್ಷ ವಯಸ್ಸಾಗಿತ್ತು.

ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ನೋಯ್ಡಾದ ಖಾಸಗಿ ಆಸ್ಪತ್ರೆಗೆ ನಿನ್ನೆ ರಾತ್ರಿ ದಾಖಲಿಸಲಾಗಿತ್ತು. ಆದರೆ ಅವರು ಅದಾಗಲೇ ಇಹಲೋಕ ತ್ಯಜಿಸಿದ್ದರು.

ಚತುರ್ವೇದಿಯವರು ೨೦೦೨ರಿಂದ ೨೦೦೭ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು.

ಉತ್ತರ ಪ್ರದೇಶದ ಕನೌಜ್ ನಲ್ಲಿ ಜನಿಸಿದ್ದ ತ್ರಿಲೋಕನಾಥ್ ಚತುರ್ವೇದಿ ಅವರು ಐಎಎಸ್ ಅಧಿಕಾರಿಯಾಗಿದ್ದರು. ಭಾರತ ಸರ್ಕಾರದ  ಸಿಎಜಿ ಆಗಿ ಕಾರ್ಯ ನಿರ್ವಹಿಸಿದ್ದ ಅವರಿಗೆ ೧೯೯೧ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು.

ಟಿ ಎನ್ ಚತುರ್ವೇದಿ ಅವರ ಪಾರ್ಥೀವ ಶರೀರವನ್ನು ಸದ್ಯ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಎರಡು ದಿನಗಳ ನಂತರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವರದಿ ತಿಳಿಸಿತು.

Tuesday, January 7, 2020

ಶಬರಿಮಲೈ: ಜ.೧೩ರಿಂದ ೯ ಸದಸ್ಯ ಸಂವಿಧಾನ ಪೀಠದ ವಿಚಾರಣೆ

       ಶಬರಿಮಲೈ: .೧೩ರಿಂದ ಸದಸ್ಯ ಸಂವಿಧಾನ ಪೀಠದ                                                               ವಿಚಾರಣೆ  
ನವದೆಹಲಿ: ಕೇರಳದ ಶಬರಿಮಲೈಯ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಕ್ಕೆ ೧೦-೫೦ರ ನಡುವಣ ವಯೋಮಾನದ ಮಹಿಳೆಯರ ಮೇಲೆ ಇದ್ದ ನಿಷೇಧವನ್ನು ರದ್ದು ಪಡಿಸಿ ತಾನು ೨೦೧೮ರಲ್ಲಿ ನೀಡಿದ್ದ ತೀರ್ಪಿನ ಪುನರ್ ಪರಿಶೀಲನೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟಿನ ಸದಸ್ಯರ ಸಂವಿಧಾನ ಪೀಠವು ಮುಂದಿನ 2020 ಜನವರಿ 13ರ ಸೋಮವಾರ  ಹೊಸದಾಗಿ ವಿಚಾರಣೆ ಆರಂಭಿಸಲಿದೆ.

ಸಪ್ತ
ಸದಸ್ಯ ಪೀಠವು ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸುವುದು ಎಂದು ಸುಪ್ರಿಂಕೋರ್ಟ್ ಕಳೆದ ತಿಂಗಳು ಇಂಗಿತ ವ್ಯಕ್ತ ಪಡಿಸಿತ್ತು. ಆದಾಗ್ಯೂ ಸುಪ್ರೀಕೋರ್ಟ್  2020 ಜನವರಿ 06ರ ಸೋಮವಾರ ನೀಡಿದ ಹೊಸ ಸೂಚನೆಯು ಪ್ರಕರಣವನ್ನು ಸದಸ್ಯ ಪೀಠವು ಜನವರಿ ೧೩ರಿಂದ (ಮುಂದಿನ ಸೋಮವಾರ) ವಿಚಾರಣೆ ನಡೆಸುವುದು ಎಂದು ತಿಳಿಸಿತು.

೨೦೧೮ರಲ್ಲಿ
ದೇವಾಲಯಕ್ಕೆ ಋತುಮತಿ ಮಹಿಳೆಯರ ಪ್ರವೇಶ ನಿಷೇಧಕ್ಕೆ ಸಂಬಂಧಿಸಿದಂತೆ ನಡೆಸಿದ್ದ ವಿಚಾರಣೆಯ ಬಳಿಕ ಸುಪ್ರೀಕೋರ್ಟಿನ  ಪಂಚ ಸದಸ್ಯ ಸಂವಿಧಾನಪೀಠವು ದಕ್ಷಿಣ ಕೇರಳದ ೮೦೦ ವರ್ಷಗಳಷ್ಟು ಪುರಾತನವಾದ ದೇವಾಲಯದಲ್ಲಿ ಅನಾದಿ ಕಾಲದಿಂದ ಇದ್ದ ಋತುಮತಿ ವಯೋಮಾನದ ಮಹಿಳಾ ಪ್ರವೇಶ ನಿಷೇಧ ಪದ್ಧತಿಯನ್ನು : ಬಹುಮತದ ತೀರ್ಪಿನಲ್ಲಿ ರದ್ದು ಪಡಿಸಿತ್ತು.

ಕೇರಳದ
ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂಬುದಾಗಿ ೨೦೧೮ರ ಸೆಪ್ಟೆಂಬರ್ ೨೮ರಂದು ನೀಡಲಾಗಿದ್ದ ತನ್ನ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿದ್ದ ಸುಮಾರು ೬೦ಕ್ಕೂ ಹೆಚ್ಚಿನ ಅರ್ಜಿಗಳ ವಿಚಾರಣೆಯನ್ನು  ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವು ಮುನ್ನ ವಿಸೃತ ಸಪ್ತ ಸದಸ್ಯ ಸಂವಿಧಾನ ಪೀಠಕ್ಕೆ  ವರ್ಗಾವಣೆ ಮಾಡಿತ್ತು.

ಭಾರತದ
ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ  ರೋಹಿಂಟನ್ ನಾರಿಮನ್, ಡಿ.ವೈ. ಚಂದ್ರಚೂಡ್, .ಎಂ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರನ್ನು ಒಳಗೊಂಡ ನ್ಯಾಯಪೀಠವು ಪ್ರಕರಣವನ್ನು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿತ್ತು.

ಇದೀಗ
ನವ ಸದಸ್ಯ ಪೀಠವು ಮಸೀದಿಗಳಿಗೆ ಮಹಿಳಾ ಪ್ರವೇಶ ಮತ್ತು ದಾವೂದಿ ಬೊಹ್ರಾ ಸಮುದಾಯದಲ್ಲಿನ ಮಹಿಳಾ ಜನನಾಂಗ ಛೇದನ ಪದ್ಧತಿ ಸೇರಿದಂತೆ ವಿವಿಧ ಧಾರ್ಮಿಕ ವಿಷಯಗಳನ್ನೂ ಪುನರ್ ಪರಿಶೀಲನೆ ಮಾಡಲಿದೆ.

ದೇವಾಲಯ ಪ್ರವೇಶಕ್ಕೆ ಯಾರನ್ನೂ ನಿರ್ಬಂಧಿಸಲು ಸಾಧ್ಯವಿಲ್ಲ. ಇದು ಕೇವಲ ಹಿಂದೂ ಮಹಿಳೆಯರ ದೇವಾಲಯ ಪ್ರವೇಶ ವಿಚಾರವಷ್ಟೇ ಅಲ್ಲ. ಮುಸ್ಲಿಮರು, ಪಾರ್ಸಿಗಳ ವಿಚಾರವೂ ಇದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವಿಚಾರವೂ ಇದರಲ್ಲಿದೆ. ಹೀಗಾಗಿ, ಬಗ್ಗೆ ವಿಸ್ತೃತವಾದ ಮತ್ತು ಚರ್ಚೆಯಾಗಬೇಕಾಗಿದೆ. ಆದ್ದರಂದ ಏಳು ನ್ಯಾಯಮೂರ್ತಿಗಳ ವಿಸ್ತೃತ ಸಂವಿಧಾನ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಗಿದೆಎಂದು ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಹೇಳಿತ್ತು.

ವಿಸ್ತೃತ
ವಿಚಾರಣೆಗೆ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ನಾರಿಮನ್ ವಿರೋಧ ವ್ಯಕ್ತಪಡಿಸಿದ್ದರು. 
ವಿಸ್ತೃತ
ಪೀಠಕ್ಕೆ ಒಪ್ಪಿಸಲು ಪಂಚ ಸದಸ್ಯ ಪೀಠವು ಸರ್ವಾನುಮತಿಯ ಒಪ್ಪಿಗೆ ನೀಡಿದರೂ, ೨೦೧೮ರ ಸುಪ್ರೀಂಕೋರ್ಟ್ ನಿರ್ಣಯದ ಪುನರ್ ಪರಿಶೀಲನೆ ಕೋರಿದ ಅರ್ಜಿಗಳನ್ನು ಸಪ್ತ ಸದಸ್ಯ ಪೀಠಕ್ಕೆ ಒಪ್ಪಿಸುವ ಬಗ್ಗೆ ಪೀಠವು : ಬಹುಮತದ ಭಿನ್ನ ಅಭಿಪ್ರಾಯಗಳ ತೀರ್ಪು ನೀಡಿತ್ತು.

ಬಹುಮತದ
ತೀರ್ಪಿನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ .ಎಂ. ಖಾನ್ವಿಲ್ಕರ್ ಹಾಗೂ ಇಂದು ಮಲ್ಹೋತ್ರ ಅವರು ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ತನ್ನ ನಿರ್ಣಯ ಪುನರ್ ವಿಮರ್ಶೆ ಕೋರಿದ ಮನವಿಗಳನ್ನು ಬಾಕಿ ಇರಿಸಲು ನಿರ್ಧರಿಸಿತ್ತು ಮತ್ತು ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶ ನಿರ್ಬಂಧವು ಶಬರಿಮಲೈಗೆ ಮಾತ್ರವೇ ಸೀಮಿತವಲ್ಲ, ಇತರ ಧರ್ಮಗಳಲ್ಲೂ ಇಂತಹ ಆಚರಣೆಗಳು ಇವೆ ಎಂದು ಹೇಳಿತ್ತು.

ಆದಾಗ್ಯೂ
, ಬಹುಮತದ ತೀರ್ಪು ಸುಪ್ರೀಂಕೋರ್ಟಿನ ೨೦೧೮ ಸೆಪ್ಟೆಂಬರ್ ೨೮ರ ತೀರ್ಪಿಗೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ನೀಡಿರಲಿಲ್ಲ್ಲ ಮತ್ತು ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ ತನ್ನ ಹಿಂದಿನ ತೀರ್ಪಿಗೆ ತಡೆಯಾಜ್ಞೆಯನ್ನು ನೀಡಿರಲಿಲ್ಲ.

ಬಹುಮತದ
ತೀರ್ಪಿನ ಕೆಲವು ಭಾಗಗಳನ್ನು ಓದಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು, ’ಧರ್ಮ ಮತ್ತು ನಂಬಿಕೆಯ ಮೇಲಿನ ಚರ್ಚೆಯನ್ನು ಪುನರುಜ್ಜೀನಗೊಳಿಸಲು ಅರ್ಜಿದಾರರು ಪ್ರಯತ್ನಿಸುತ್ತಿದ್ದಾರೆಎಂದು ಹೇಳಿದ್ದರು. ಶಬರಿಮಲೈಯಂತಹ ಧಾರ್ಮಿಕ ಸ್ಥಳಗಳು, ಮಸೀದಿಗಳಿಗೆ ಮಹಿಳೆಯರಿಗೆ ಪ್ರವೇಶ ಮತ್ತು ಮಹಿಳಾ ಜನನಾಂಗ ಛೇದನದಂತಹ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಾಮಾನ್ಯ ನೀತಿಯೊಂದನ್ನು ರೂಪಿಸಬೇಕಾಗಿದೆ ಎಂದು ಅವರು ಹೇಳಿದ್ದರು.

ನ್ಯಾಯಮೂರ್ತಿಗಳಾದ
ಆರ್.ಎಫ್ ನಾರಿಮನ್ ಮತ್ತು ಡಿ.ವೈ. ಚಂದ್ರಚೂಡ್ ಅವರ ಅಲ್ಪಮತದ ತೀರ್ಪು ಪುನರ್ ಪರಿಶೀಲನೆ ಕೋರಿದ ಎಲ್ಲ ಮನವಿಗಳನ್ನೂ ವಜಾಗೊಳಿಸಿ ಸೆಪ್ಟೆಂಬರ್ ೨೮ರ ನಿರ್ಧಾರಕ್ಕೆ ಬದ್ಧವಾಗುವಂತೆ ನಿರ್ದೇಶನ ನೀಡಿತ್ತು.

ಕೇರಳದಲ್ಲಿ
ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾದ ೨೦೧೮ ಸೆಪ್ಟೆಂಬರ್ ೨೮ರ ಸುಪ್ರೀಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾದ ೫೬ ಮರುಪರಿಶೀಲನಾ ಅರ್ಜಿಗಳು,  ನಾಲ್ಕು ಹೊಸ ರಿಟ್ ಅರ್ಜಿಗಳು ಮತ್ತು ವರ್ಗಾವಣೆ ಅರ್ಜಿಗಳು ಸೇರಿದಂತೆ ಒಟ್ಟು ೬೫ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಂವಿಧಾನ ಪೀಠದಿಂದ ಭಿನ್ನಮತದ ತೀರ್ಪು ಬಂದಿತ್ತು.

ಇದಕ್ಕೂ
ಮುನ್ನ ಪಂಚ ಸದಸ್ಯ ಸಂವಿಧಾನ ಪೀಠವು ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಮುಕ್ತ ನ್ಯಾಯಾಲಯದಲ್ಲಿ ನಡೆಸಿ, ನಾಯರ್ ಸೇವಾ ಸಮಾಜ, ದೇಗುಲದ ತಂತ್ರಿ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ರಾಜ್ಯ ಸರ್ಕಾರ ಸೇರಿದಂತೆ ವಿವಿಧ ಕಕ್ಷಿದಾರರ ಅಹವಾಲು ಆಲಿಸಿದ ಬಳಿಕ ಪಂಚ ಸದಸ್ಯ ಸಂವಿಧಾನ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ವರ್ಷದಿಂದ ೫೦ ವರ್ಷ ವಯಸ್ಸಿನವರೆಗಿನ ಮಹಿಳೆಯರು ಅಯ್ಯಪ್ಪದೇಗುಲ ಪ್ರವೇಶಿಸಬಾರದು ಎಂಬ ನಿಯಮವನ್ನು ೨೦೧೮ರ ಸೆಪ್ಟೆಂಬರ್ ೨೮ರಂದು ರದ್ದುಪಡಿಸಿ, ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಮತ್ತು ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್, .ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಇಂದು ಮಲ್ಹೋತ್ರ  ಅವರ ನ್ಯಾಯಪೀಠ : ಬಹುಮತದ ತೀರ್ಪು ನೀಡಿತ್ತು. 
ತನ್ಮೂಲಕ ಕೇರಳದ ಪ್ರತಿಷ್ಠಿತ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ೧೦ರಿಂದ ೫೦ ವರ್ಷಗಳ ನಡುವಣ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ತೆರವುಗೊಳಿಸಿತ್ತು. ಶತಮಾನಗಳಿಂದ ಅನುಸರಿಸುತ್ತಾ ಬರಲಾಗಿದ್ದ ಹಿಂದು ಧಾರ್ಮಿಕ ಪದ್ಧತಿಯು ಅಕ್ರಮ ಹಾಗೂ ಸಂವಿಧಾನಬಾಹಿರ ಎಂದು ಕೋರ್ಟ್ ಹೇಳಿತ್ತು.

ಇತಿಹಾಸ
ನಿರ್ಮಿಸಿದ ಇಬ್ಬರು ಮಹಿಳೆಯರು: ಸುಪ್ರೀಂಕೋರ್ಟ್ತೀರ್ಪಿನ ಬಳಿಕ ವರ್ಷ (೨೦೧೯) ಜನವರಿ ೦೨ರಂದು ಬಿಂದು ಅಮ್ಮಿನಿ ಮತ್ತು ಆಕೆಯ ಸ್ನೇಹಿತೆ ಕನಕದುರ್ಗ ಶಬರಿಮಲೆಯ ತಳಶಿಬಿರದಿಂದ ಶಬರಿಮಲೈ ಮೆಟ್ಟಿಲುಗಳನ್ನು ಏರಿ ಇತಿಹಾಸ ನಿರ್ಮಿಸಿದ್ದರು.

ರಾಜಧಾನಿಯ ’ಗದ್ದುಗೆ ಗುದ್ದಾಟ’ಕ್ಕೆ ರಂಗ ಸಜ್ಜು

ರಾಜಧಾನಿಯಗದ್ದುಗೆ ಗುದ್ದಾಟಕ್ಕೆ ರಂಗ ಸಜ್ಜು
ದೆಹಲಿ ಅಸೆಂಬ್ಲಿ ಚುನಾವಣೆ ಘೋಷಣೆ, ಮತದಾನ ಫೆಬ್ರುವರಿ , ಫಲಿತಾಂಶ ಫೆ.೧೧ಕ್ಕೆ
ನವದೆಹಲಿ: ಇಡೀ ದೇಶದ ಕೇಂದ್ರ ಬಿಂದುವಾಗಿರುವ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣಾ ದಿನಾಂಕ 2020 ಜನವರಿ 06ರ ಸೋಮವಾರ ಪ್ರಕಟಗೊಳ್ಳುವುದರೊಂದಿಗೆ ಇನ್ನೊಂದು ಸುತ್ತಿನ ಪ್ರತಿಷ್ಠಿತ ರಾಜಕೀಯ ಸಮರಕ್ಕೆ ರಂಗ ಸಜ್ಜುಗೊಂಡಿದೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಧ್ಯ ಜಿದ್ದಾಜಿದ್ದಿ ಸಮರ ನಡೆಯಲಿದೆ.

೭೦
ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ ೮ರಂದು ಚುನಾವಣೆ ನಡೆಯಲಿದ್ದು, ಫೆಬ್ರುವರಿ ೧೧ರಂದು ಮತಗಳ ಎಣಿಕೆ ನಡೆಯಲಿದೆ. ದೆಹಲಿ ವ್ಯಾಪ್ತಿಯಲ್ಲಿ ಈದಿನದಿಂದಲೇ  ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ದೆಹಲಿಯ
ಹಾಲಿ ವಿಧಾನಸಭೆಯ ಅವಧಿ ಫೆಬ್ರುವರಿ ೨೨ರಂದು ಮುಕ್ತಾಯಗೊಳ್ಳಲಿದ್ದು, ನೂತನ ವಿಧಾನಸಭೆ ಅದಕ್ಕೆ ಮುನ್ನ ರಚನೆಯಾಗಬೇಕಾಗಿದೆ.

೨೦೧೫ರ
ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು (ಆಪ್) ಚುನಾವಣೆಯಲ್ಲಿ ಪುನರಾಯ್ಕೆ ಬಯಸುತ್ತಿದೆ. ೨೦೧೫ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ೬೭ ಸ್ಥಾನಗಳನ್ನು ಗೆದ್ದಿತ್ತು. ಉಳಿಕ ಸ್ಥಾನಗಳನ್ನು  ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆದ್ದಿತ್ತು. ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿತ್ತು.

೨೦೨೦ರ ಫೆಬ್ರುವರಿ ೮ರಂದು ದೆಹಲಿ ವಿಧಾನಸಭೆಗೆ ಏಕಹಂತದ ಚುನಾವಣೆ ನಡೆಯಲಿದ್ದು, ಮತಗಳ ಎಣಿಕೆ ಫೆಬ್ರುವರಿ ೧೧ರಂದು ನಡೆಯಲಿದೆ. ನಾಮಪತ್ರ ಸಲ್ಲಿಕೆಗಾಗಿ ಜನವರಿ ೧೪ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಜನವರಿ ೨೨ ಅಂತಿಮ ದಿನವಾಗಿರುತ್ತದೆ. ನಾಮಪತ್ರ ವಾಪಸಿಗೆ ಜನವರಿ ೨೪ ಕೊನೆಯ ದಿನ ಎಂದು ಸುನಿಲ್ ಅರೋರಾ ಹೇಳಿದರು.

ಮಾದರಿ
ನೀತಿ ಸಂಹಿತೆ: ಮಾದರಿ ನೀತಿ ಸಂಹಿತೆಯು ದೆಹಲಿಯಲ್ಲಿ ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಿಇಸಿ ನುಡಿದರು.

ರಾಜಕೀಯ
ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಚುನಾವಣೆ ಕಾಲದಲ್ಲಿ ಮುಖ್ಯವಾಗಿ ಭಾಷಣಗಳ ವೇಳೆಯಲ್ಲಿ ಅನುಸರಿಸಬೇಕಾದ ನಿಯಮಗಳು ಹಾಗೂ ಮತದಾನದ ದಿನ, ಮತಗಟ್ಟೆಗಳಲ್ಲಿ, ಚುನಾವಣಾ ಪ್ರಣಾಳಿಕೆಗಳಲ್ಲಿ, ಮೆರವಣಿಗೆಗಳಲ್ಲಿ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಾಗಿದೆ ಹಾಗೂ ಸಾಮಾನ್ಯ ಮಾದರಿ ಸಂಹಿತೆಯನ್ನೂ ಹೊರಡಿಸಲಾಗಿದೆ. ಮಾಧ್ಯಮ ನಿಗಾ ಘಟಕವನ್ನೂ ಚುನಾವಣೆ ಸಲುವಾಗಿ ರಚಿಸಲಾಗುವುದು ಎಂದು ವಿವರಿಸಿದ ಅರೋರಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟು  ಜಾರಿಗೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು.

ರಾಷ್ಟ್ರದ
ರಾಜಧಾನಿ ಪ್ರದೇಶದಲ್ಲಿ ಒಟ್ಟು ,೪೬,೯೨,೧೩೬ ಮತದಾರರಿದ್ದಾರೆ. ಇವರ ಪೈಕಿ ೮೦.೫೫ ಲಕ್ಷ ಮಂದಿ ಪುರುಷರು ಮತ್ತು  ೬೬.೩೫ ಲಕ್ಷ ಮಂದಿ ಮಹಿಳೆಯರು. ಒಟ್ಟು ೧೩,೭೫೦ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಅರೋರಾ ನುಡಿದರು.

ಚುನಾವಣಾ
ಪ್ರಕ್ರಿಯೆ ಶಾಂತಿಯುತ ಹಾಗೂ ಸುರಳೀತವಾಗಿ ನಡೆಯಲು ೯೦,೦೦೦ ಪೊಲೀಸರನ್ನು ನಿಯೋಜಿಸಲಾಗುವುದು. ಹೆಚ್ಚುವರಿ ಕಾರ್ಯದರ್ಶಿಯವರು ಯಾರೇ ಹೆಚ್ಚುವರಿ ಅಧಿಕಾರಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬೇಕಾಗಿ ಬಂದಲ್ಲಿ ಹೊಣೆಗಾರಿಕೆಯನ್ನು ನಿಭಾಯಿಸುವರು ಎಂದು ಸಿಇಸಿ ಹೇಳಿದರು.

ಚುನಾವಣಾ
ವೇಳಾಪಟ್ಟಿ ಅಂತಿಮಗೊಳಿಸುವುದಕ್ಕೆ ಮುನ್ನ ಮೂವರು ಕಾರ್ಯದರ್ಶಿಗಳ ಜೊತೆಗೆ ಸಮಾಲೋಚನೆಗಳನ್ನು ನಡೆಸಲಾಗಿದೆ. ಆಯೋಗವು ಡಿಸೆಂಬರ್ ೨೬ರಂದು ಚುನಾವಣಾ ಸಿದ್ಧತೆ ಪರಿಶೀಲನೆಗಾಗಿ ದೆಹಲಿ ಪೊಲೀಸ್ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಸಭೆ ನಡೆಸಿತ್ತು ಎಂದು ಅರೋರಾ ತಿಳಿಸಿದರು.

ಆಪ್- ಬಿಜೆಪಿ ಜಿದ್ದಾಜಿದ್ದಿ: ದೆಹಲಿ ವಿಧಾನಸಭೆಯ ಚುನಾವಣಾ ಪ್ರಚಾರ ಸಮರವನ್ನು ಬಿಜೆಪಿಯ ಪ್ರಧಾನಿ ಮೋದಿ ಬ್ರ್ಯಾಂಡ್ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಆಧರಿಸಿಯೇ ನಡೆಸಲಿದೆ.

ಬಿಜೆಪಿ
ಅಧ್ಯಕ್ಷ ಅಮಿತ್ ಶಾ ಅವರು ಬಿಜೆಪಿ ಕಾರ್ಯಕರ್ತರಿಗೆ ದಲಿತರು, ಸಿಕ್ಖರು ಮತ್ತು ನಿರಾಶ್ರಿತರನ್ನು ಮನೆ ಮನೆಗೆ ತೆರಳಿ ಭೇಟಿ ಮಾಡುವಂತೆ ಮತ್ತು ಪ್ರಚಾರ ನಡೆಸುವಂತೆ ಸೂಚನೆ ನೀಡಿದ್ದಾರೆ. ’ಮೋದಿಜಿ ಅವರಿಗೆ ಪೌರತ್ವ ನೀಡಬಯಸಿದ್ದಾರೆ, ಆದರೆ ದಲಿತ ವಿರೋಧಿ ಕೇಜ್ರಿವಾಲ್ ಮತ್ತು ದಲಿತ ವಿರೋಧಿ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ ಎಂಬುದನ್ನು ದಲಿತರು, ನಿರಾಶ್ರಿತರಿಗೆ ತಿಳಿಹೇಳಬೇಕುಎಂದು ಅಮಿತ್ ಶಾ ಸೂಚಿಸಿದ್ದಾರೆ.

ಪುನರಾಯ್ಕೆ
ಕೋರುತ್ತಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಆಪ್) ರಾಜಧಾನಿಯ ಚುನಾವಣೆ ಪ್ರತಿಷ್ಠೆಯ ಸಮರವಾಗಿದೆ. ಚುನಾವಣಾ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆಯೇ ಆಮ್ ಆದ್ಮಿ ಪಕ್ಷದ ರಾಘವ ಛಢಾ ಅವರು ತಮ್ಮ ಪಕ್ಷವು ಚುನಾವಣಾ ಸಮರಕ್ಕೆ ಸಜ್ಜಾಗಿದ್ದು, ಸ್ಥಳೀಯ ವಿಷಯಗಳನ್ನು ಆಧರಿಸಿ ಹೋರಾಡಲಿದೆ ಎಂದು ಹೇಳಿದ್ದಾರೆ.

ವಿವಾದಾತ್ಮಕ
ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ), ಪೌರತ್ವ ತಿದ್ದುಪಡಿ ಕಾಯ್ದೆ, ವಾಯುಮಾಲಿನ್ಯ, ಮಹಿಳಾ ಸುರಕ್ಷತೆ ಮತ್ತು  ದೆಹಲಿಗೆ ರಾಜ್ಯ ಸ್ಥಾನ ಕುರಿತ ಬೇಡಿಕೆ ಚುನಾವಣಾ ಪ್ರಚಾರ ಸಮರದಲ್ಲಿ ಪ್ರಮುಖ ವಿಚಾರಗಳಾಗುವ ಸಾಧ್ಯತೆ ಇದೆ.

ಕೇಜ್ರಿವಾಲ್ ಅವರು ಮೊಹಲ್ಲಾ ಕ್ಲಿನಿಕ್ಗಳು ಮತ್ತು ಮಾದರಿ ಶಾಲೆಗಳಂತಹ ತಮ್ಮ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಬೆಳಕು ಚೆಲ್ಲುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಮಾಡಿದ್ದಂತೆ, ಕೇಜ್ರಿವಾಲ್ ಅವರೂ ಮರು ಆಯ್ಕೆಯ ಸಲುವಾಗಿ ಚುನಾವಣಾ ವ್ಯೂಹಗಾರ ಪ್ರಶಾಂತ ಕಿಶೋರ್ ಅವರ ರಾಜಕೀಯ ಸಮಾಲೋಚನಾ ಸಂಸ್ಥೆ -ಪ್ಯಾಕ್ ನೆರವನ್ನು ಈಗಾಗಲೇ ಪಡೆದುಕೊಂಡಿದ್ದಾರೆ. 
ಆಮ್ ಆದ್ಮಿ ಪಕ್ಷವುಅಚ್ಛೆ ಬೀತೆ ಸಾಲ್ ಲಗೇ ರಹೋ ಕೇಜ್ರಿವಾಲ್ (ಕಳೆದ ವರ್ಷಗಳು ಉತ್ತಮವಾಗಿದ್ದವು, ಕೇಜ್ರಿವಾಲ್ ಜೊತೆ ಹೆಜ್ಜೆ ಹಾಕಿ) ಘೋಷಣೆಯೊಂದಿಗೆ ಕಳೆದ ತಿಂಗಳು ತನ್ನ ಪ್ರಚಾರ ಅಭಿಯಾನವನ್ನು ಆರಂಭಿಸಿತ್ತು. ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರೂ ಪಕ್ಷದ ಯಶಸ್ಸಿನ ಬಗ್ಗೆ ವಿಶ್ವಾಸ ವ್ಯಕ್ತ ಪಡಿಸಿದ್ದರು.

ಭಾರತೀಯ
ಜನತಾ ಪಕ್ಷ ಕೂಡಾ ರಾಮಲೀಲಾ ಮೈದಾನದಲ್ಲಿ ತನ್ನ ತಾರಾ ಪ್ರಚಾರಕ ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯೊಂದಿಗೆ ಕಳೆದ ತಿಂಗಳು ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿತ್ತು. ಮೋದಿಯವರು ಪೌರತ್ವ ಕಾಯ್ದೆ ವಿರೋಧೀ ರಾಷ್ಟ್ರವ್ಯಾಪಿ ಚಳವಳಿಯನ್ನೇ ಬಳಸಿಕೊಂಡು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಆಮ್
ಆದ್ಮಿ ಪಕ್ಷದ ವಿರುದ್ಧ ಹೆಚ್ಚುತ್ತಿರುವ ಜನರ ಅಸಮಾಧಾನದ ಹಿನ್ನೆಲೆಯಲ್ಲಿ ರಾಷ್ಟ್ರದ ರಾಜಧಾನಿಯಲ್ಲಿ ಈಗ ಕೇಸರಿ ಪಕ್ಷವು ಪರ್ಯಾಯವಾಗಿ ಬೆಳೆದಿದೆ ಎಂದು ಕೇಂದ್ರ ಗೃಹ ಸಚಿವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ತೋರಿದ ಕಳಪೆ ಸಾಧನೆಯಿಂದ ಎದೆಗುಂದದ ಶಾ, ೨೦೨೦ರ ದೆಹಲಿ ವಿಧಾನಸಭಾ ಚುನಾವಣೆ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದರು.

೨೦೧೯ರ
ಲೋಕಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಯತ್ನಿಸಿದ್ದ ಕಾಂಗ್ರೆಸ್ ಯತ್ನದಲ್ಲಿ ವಿಫಲಗೊಂಡಿತ್ತು. ಆದರೂ, ಈಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಪಕ್ಷದ ದೆಹಲಿ ಘಟಕದ ಮುಖ್ಯಸ್ಥ ಸುಭಾಶ್ ಛೋಪ್ರಾ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿಧನವು ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ.

ಕೇಂದ್ರ ಬಜೆಟ್ ಪರಿಣಾಮ?: ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಯು ಫೆಬ್ರುವರಿ ೮ರಂದು ನಡೆಯುವುದಾಗಿ ಚುನಾವಣಾ ಆಯೋಗವು ಘೋಷಿಸಿರುವುದರಿಂದ ಫೆಬ್ರುವರಿ ೧ರಂದು ಮಂಡನೆಯಾಗಲಿರುವ ಕೇಂದ್ರ ಮುಂಗಡಪತ್ರದ ಪರಿಣಾಮ ಮತದಾರರ ಮೇಲೆ ಆಗಬಹುದೇ ಎಂಬ ಪ್ರಶ್ನೆ ಎದ್ದಿದೆ. ಸಾಧ್ಯತೆ ಇದೆ. ಆಡಳಿತಾರೂಢ ಬಿಜೆಪಿಯು ಮುಂಗಡಪತ್ರದಲ್ಲಿ ದೆಹಲಿ ಮತದಾರರಿಗೆ ಅನುಕೂಲವಾಗುವಂತಹ ಘೋಷಣೆಗಳನ್ನು ಮುಂಗಡಪತ್ರದಲ್ಲಿ ಪ್ರಕಟಿಸಲಿದೆಯೇ, ಪ್ರಕಟಿಸಿದರೆ ಅದು ಮತದಾರರ ಮೇಲೆ ಪರಿಣಾಮ ಬೀರಬಹುದೇ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚಿಸಲ್ಪಟ್ಟಿವೆ.

ರಾಜ್ಯ ರಚನೆಯ ಬಳಿಕ ಯಾರು ಯಾರು ಗೆದ್ದಿದ್ದರು?
೨೦೧೩ರ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಬಿಜೆಪಿ ೩೧, ಆಮ್ ಆದ್ಮಿ ಪಕ್ಷವು ೨೮ ಹಾಗೂ ಕಾಂಗ್ರೆಸ್ ಸ್ಥಾನ ಗೆದ್ದಿದ್ದವು. ಬಿಜೆಪಿ ಸರ್ಕಾರ ರಚಿಸಲು ಮುಂದೆ  ಬರಲಿಲ್ಲ. ರಾಷ್ಟ್ರಪತಿ ಆಳ್ವಿಕೆ ಸನ್ನಿಹಿತ ಎಂದೆನಿಸುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಕೆಲವೇ ತಿಂಗಳ ಹಿಂದೆ ಜನ್ಮ ತಾಳಿದ್ದ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಿ, ಜನಿಸಿದ ಒಂದೇ ವರ್ಷದೊಳಗೆ ಸರ್ಕಾರ ರಚಿಸಿದ ಹೆಗ್ಗಳಿಕೆಯನ್ನು ಗಳಿಸಿಕೊಂಡಿತ್ತು. ಆದರೆ ಬಳಿಕ ಕಾಂಗ್ರೆಸ್ ಜೊತೆಗಿನ ಘರ್ಷಣೆಯನ್ನು ಅನುಸರಿಸಿ ಕೇಜ್ರಿವಾಲ್ ರಾಜೀನಾಮೆ ನೀಡಿ ಪುನಃ ಜನರ ಮುಂದೆ ಹೋಗಿ, ೨೦೧೫ರಲ್ಲಿ ಪ್ರಚಂಡ ಬಹುಮತದೊಂದಿಗೆ ಗೆದ್ದು ಬಂದಿದ್ದರು.

ದೆಹಲಿ ರಾಜ್ಯ ರಚನೆಯಾದ ಬಳಿಕ ೧೯೯೩ರಿಂದ ಇಲ್ಲಿಯವರೆಗೆ ಚುನಾವಣೆಗಳು ನಡೆದಿದ್ದು, ಮೊದಲ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರ ಹಿಡಿದಿತ್ತು. ಮದನ್ ಲಾಲ್ ಖುರಾನಾ, ಸಾಹಿಬ್ ಸಿಂಗ್ ವರ್ಮ  ಮತ್ತು ಸುಷ್ಮಾ ಸ್ವರಾಜ್ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದರು. ನಂತರ ನಡೆದ ಮೂರು ಚುನಾವಣೆಗಳಲಿ ಕಾಂಗ್ರೆಸ್ ಪಕ್ಷ ಹ್ಯಾಟ್ರಿಕ್ ಗೆಲವು ಸಾಧಿಸಿತ್ತು. ಶೀಲಾ ದೀಕ್ಷಿತ್ ಅವರು ಮುಖ್ಯಮಂತ್ರಿಯಾಗಿ ದೆಹಲಿಯಲ್ಲಿ ತಮ್ಮ ಛಾಪು ಮೂಡಿಸಿದ್ದರು.

ಬಳಿಕ ಆಮ್ ಆದ್ಮಿ ಪಕ್ಷವು ಎರಡು ಬಾರಿ ಸರ್ಕಾರ ರಚಿಸಿದ್ದು, ಇದೀಗ ಮೂರನೇ ಬಾರಿಗೆ ಗದ್ದುಗೆ ಏರಲು ಯತ್ನ ನಡೆಸಿದೆ.

ದೆಹಲಿ ವಿಧಾನಸಭಾ ಚುನಾವಣೆ
ಒಟ್ಟು ಸ್ಥಾನ- 70
ಮತದಾನ - ಫೆಬ್ರುವರಿ 8
ಮತಗಳ ಎಣಿಕೆ - ಫೆಬ್ರುವರಿ 11
ಒಟ್ಟು ಮತದಾರರು- 1,46,92,136
ಒಟ್ಟು ಮತಗಟ್ಟೆ-13,750

Advertisement