Showing posts with label ನೆತ್ರಕೆರೆ. Show all posts
Showing posts with label ನೆತ್ರಕೆರೆ. Show all posts

Saturday, June 6, 2026

ಬ್ರಹ್ಮಾವರದಲ್ಲಿ ವಿಶ್ವ ಪರಿಸರ ದಿನ

ಬ್ರಹ್ಮಾವರದಲ್ಲಿ ವಿಶ್ವ ಪರಿಸರ ದಿನ 

ಡುಪಿ ಜಿಲ್ಲೆಯ ಬ್ರಹ್ಮಾವರದ ಮಿನಿ ವಿಧಾನಸೌಧದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ೨೦೨೬ ಜೂನ್‌ -೫ರ ಶುಕ್ರವಾರ ಆಚರಿಸಲಾಯಿತು. ಬ್ರಹ್ಮಾವರ ಜಯಂಟ್ಸ್‌ ಗ್ರೂಪ್‌ ವತಿಯಿಂದ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶ್ರೀಮತಿ ಅನುಷಾ ಭಟ್‌ ನೆತ್ರಕೆರೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪರಿಸರ ಸಂರಕ್ಷಣೆ ಮತ್ತು ಗಿಡ ನೆಡುವಿಕೆಯ ಮಹತ್ವವನ್ನು ವಿವರಿಸಿದರು. ಬ್ರಹ್ಮಾವರ ಉಪ ತಹಶೀಲ್ದಾರ್‌ ಶ್ರೀ ಅಶೋಕ ಎನ್‌ ಭಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಹೇಗೆ ಮಹತ್ವ ಪೂರ್ಣ ಎಂದು ವಿವರಿಸಿದರು. ಈ ಸಂದರ್ಭದ ಚಿತ್ರಗಳು ಹಾಗೂ ಸ್ಥಳೀಯ PublicNext  ವೆಬ್‌ ಸೈಟ್‌ ಪುಟಗಳಲ್ಲಿ ಬಂದ ವರದಿ, ವಿಡಿಯೋ ಇಲ್ಲಿದೆ. 
ವರದಿಗಳ ಸಮೀಪ ನೋಟಕ್ಕೆ ಮೇಲಿನ ಬರಹ ಚಿತ್ರಗಳನ್ನು ಕ್ಲಿಕ್‌ ಮಾಡಿ. ಈ ಪರ್ಯಾಯ.ಕಾಮ್ ವೆಬ್‌ ಸೈಟಿನ ʼವಾಟ್‌-ಸುದ್ದಿʼ ಪುಟ ಕ್ಲಿಕ್‌ ಮಾಡಿ.

Friday, January 23, 2026

ಪಂಚಲಿಂಗೇಶ್ವರನ ಅವಭೃತ

 ಪಂಚಲಿಂಗೇಶ್ವರನ ಅವಭೃತ

ವಭೃತ (ದೇವನಾಗರಿಯಲ್ಲಿ ʼವಭೃʼ) ಎಂದರೆ ವೈದಿಕ ಯಜ್ಞಗಳು ಅಥವಾ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಮುಗಿದ ನಂತರ ಯಜಮಾನನು ಮಾಡುವ ಪವಿತ್ರವಾದ ಮಂಗಳಸ್ನಾನ. ಇದು ಯಜ್ಞದ ಸಮಾಪ್ತಿಯನ್ನು ಸೂಚಿಸುವ ವಿಧಿಯಾಗಿದ್ದು, ಪಾಪ ಪರಿಹಾರ ಮತ್ತು ಶುದ್ಧೀಕರಣದ ಸಂಕೇತ. 


ಅವಭೃತದ ಮುಖ್ಯಾಂಶಗಳು:

  • ಯಜ್ಞಾಂತ ಸ್ನಾನ: ಪ್ರಧಾನ ಯಾಗ ಅಥವಾ ಯಜ್ಞ ಪೂರ್ಣಗೊಂಡ ನಂತರ ಮಾಡಲಾಗುವ ವಿಶೇಷ ಜಳಕ.
  • ಶುದ್ಧೀಕರಣ: ಯಜ್ಞದ ಸಮಯದಲ್ಲಿ ಉಂಟಾಗಬಹುದಾದ ದೋಷಗಳನ್ನು ಕಳೆದು, ಯಜಮಾನನನ್ನು ಶುದ್ಧಗೊಳಿಸುವ ಪ್ರಕ್ರಿಯೆ.
  • ಮಂಗಳ ಕಾರ್ಯ: ಇದು ಯಜ್ಞದ ಮುಕ್ತಾಯದ ಸೂಚಕವಾಗಿದ್ದು, ಯಶಸ್ಸನ್ನು ಸೂಚಿಸುತ್ತದೆ.
  • ನದಿ/ತೀರ್ಥ ಸ್ನಾನ: ಸಾಮಾನ್ಯವಾಗಿ ಹರಿಯುವ ನದಿ ಅಥವಾ ಪವಿತ್ರ ತೀರ್ಥಗಳಲ್ಲಿ ಈ ಸ್ನಾನವನ್ನು ಆಚರಿಸಲಾಗುತ್ತದೆ. 

ಸರಳವಾಗಿ ಹೇಳುವುದಾದರೆಯಜ್ಞದ ಕೊನೆಯಲ್ಲಿ ಆಚರಿಸಲಾಗುವ ಸಮಾರೋಪ ಸ್ನಾನವೇ 'ಅವಭೃತ'. ದೇವಾಲಯದ ವಾರ್ಷಿಕೋತ್ಸವ, ಜಾತ್ರೆ, ಆಯನ ಕೂಡಾ ದೇವರ ಶಕ್ತಿಯನ್ನು ಜಾಗೃತಗೊಳಿಸುವ ಯಜ್ಞ, ಹಾಗಾಗಿಯೇ ಆಯನದ ಕೊನೆಗೆ ಅವಭೃತ ನಡೆಯುತ್ತದೆ.

ವಿಟ್ಲಾಯನದ ಸಡಗರದ ರಥೋತ್ಸವದ ಮರುದಿನ ಕೊಡಂಗಾಯಿ ಹೊಳೆಯಲ್ಲಿ ವಿಟ್ಲದೊಡೆಯ ಪಂಚಲಿಂಗೇಶ್ವರನ ಅವಭೃತ ನಡೆಯುತ್ತದೆ. ಈ ಅವಭೃತಕ್ಕಾಗಿ ದೇವಸ್ಥಾನದಿಂದ ಕೊಡಂಗಾಯಿವರೆಗೆ ಸಾಗುವಾಗ  ದೇವಸ್ಥಾನದ ಕಟ್ಟೆಯಿಂದ ತೊಡಗಿ, ವಿವಿಧ ಕಟ್ಟೆಗಳಲ್ಲಿ ಪಂಚಲಿಂಗೇಶ್ವರನಿಗೆ ಪೂಜೆ ಸಲ್ಲುತ್ತದೆ. ಪ್ರತಿವರ್ಷವೂ ಈ ಕಟ್ಟೆಗಳಿಗೆ ದೇವರು ಬರುವ ಹೊತ್ತಿನಲ್ಲಿ ಆಸುಪಾಸಿನ ಜನರು ಭಕ್ತಿ ಪೂರ್ವಕವಾಗಿ ನೆರೆದು ಭಗವಂತನಿಗೆ ಕೈ ಮುಗಿಯುತ್ತಾರೆ.

ಅವಭೃತಕ್ಕಾಗಿ ಪಂಚಲಿಂಗೇಶ್ವರನು ಸಾಗುವ ದೃಶ್ಯದ ವಿಡಿಯೋ ಹಾಗೂ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಸಮೀಪದ ನೆತ್ರಕೆರೆಯ ಎರಡು ಕಟ್ಟೆಗಳಲ್ಲಿ ನಡೆದ ಪಂಚಲಿಂಗನ ಪೂಜೆಯ ಚಿತ್ರ, ವಿಡಿಯೋಗಳು ಮೇಲಿವೆ. (ಚಿತ್ರ, ವಿಡಿಯೋ ಕೃಪೆ: ಸದಾಶಿವ ಬನ, ವಿಟ್ಲ ಸುದ್ದಿಗಳು ಗ್ರೂಪ್‌, ನೆತ್ರಕೆರೆ ಮಠ ಗ್ರೂಪ್)

ಅವಭೃತದ ಮರುದಿನ ಧ್ವಜಾವರತಣದೊಂದಿಗೆ ವಿಟ್ಲಾಯನದ ಸಡಗರ ಕೊನೆಗೊಳ್ಳುತ್ತದೆ.

Monday, January 23, 2023

ವಿಟ್ಲಾಯನದ ಕೊನೆಯದಿನ: ನೆತ್ರಕೆರೆಯಲ್ಲಿ ಕಟ್ಟೆಪೂಜೆ

 ವಿಟ್ಲಾಯನದ ಕೊನೆಯದಿನ: ನೆತ್ರಕೆರೆಯಲ್ಲಿ ಕಟ್ಟೆಪೂಜೆ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯ ಕೊನೆಯ ದಿನ (೨೩ ಜನವರಿ ೨೦೨೩) ದೇವಸ್ಥಾನದ ಓಕುಳಿ ಕಟ್ಟೆಯಲ್ಲಿ ಪೂಜೆಯ ಬಳಿಕ ಕೊಡಂಗಾಯಿಗೆ ಅವಭೃತ ಸ್ನಾನಕ್ಕೆ ಹೋಗುವುದು ಕ್ರಮ.

ಹೀಗೆ  ಹೋಗುವ ದಾರಿಯಲ್ಲಿ  ವಿಟ್ಲ ಪ್ರಾಥಮಿಕ ಶಾಲೆ, ಕೂಡೂರು ಕಟ್ಟೆ, ನೆತ್ರಕೆರೆ ಕಟ್ಟೆಗಳು, ಕಡಂಬು ಕಟ್ಟೆ ಸೇರಿದಂತೆ ವಿವಿಧ ಕಟ್ಟೆಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ಕೊಡಂಗಾಯಿಯಲ್ಲಿ ಅವಭೃತ ಸ್ನಾನ ಪೂರೈಸಿ ಪಂಚಲಿಂಗೇಶ್ವರನು ಸ್ವಸ್ಥಾನಕ್ಕೆ ವಾಪಸಾಗುತ್ತಾನೆ.


ಅವಭೃತ ಸ್ನಾನಕ್ಕಾಗಿ ಪಂಚಲಿಂಗೇಶ್ವರನು ಸವಾರಿ ನಡೆಸುವ ದೃಶ್ಯ ಮತ್ತು ನೆತ್ರಕೆರೆ ಕಟ್ಟೆಗಳಲ್ಲಿ ಪೂಜೆ ಸ್ವೀಕರಿಸುವ ಸಂಭ್ರಮದ ವಿಡಿಯೋ ಇಲ್ಲಿದೆ. (ವಿಡಿಯೋ, ಚಿತ್ರಗಳು: ಎನ್.‌ ಶ್ಯಾಮ್‌, ಎನ್‌.ಟಿ. ಗಣೇಶ್)



೨೦೨೩ರ ವಿಟ್ಲ ಜಾತ್ರೋತ್ಸವವನ್ನು ಮತ್ತೊಮ್ಮೆ ಮೆಲುಕು ಹಾಕುವಿರಾದರೆ ಕೆಳಗೆ ಕ್ಲಿಕ್‌ ಮಾಡಿರಿ:

ವಿಟ್ಲಾಯನದ ಕೊನೆಯ ದಿನ

 ವಿಟ್ಲ ರಥೋತ್ಸವ ಸಂಭ್ರಮ

ವಿಟ್ಲ ಜಾತ್ರೆ ಬಯ್ಯದ ಬಲಿ

 ವಿಟ್ಲಾಯನ ವೈಭವ

ವಿಟ್ಲ ಜಾತ್ರೋತ್ಸವ ಸಂಭ್ರಮ

Advertisement