Showing posts with label ರಾಮಲಲ್ಲಾ. Show all posts
Showing posts with label ರಾಮಲಲ್ಲಾ. Show all posts

Monday, January 22, 2024

ʼಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆʼ ಪ್ರಕಟಿಸಿದ ಪ್ರಧಾನಿ

 ʼಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆʼ ಪ್ರಕಟಿಸಿದ ಪ್ರಧಾನಿ

ವದೆಹಲಿ: "ಅಯೋಧ್ಯೆಯಿಂದ ಹಿಂದಿರುಗಿದ ನಂತರ ಇದು ನನ್ನ ಮೊದಲ ನಿರ್ಧಾರ" ಎಂಬುದಾಗಿ ಹೇಳಿದ ಪ್ರಧಾನಿ  ನರೇಂದ್ರ ಮೋದಿ ಅವರು ಹೊಸ ʼಪ್ರಧಾನಮಂತ್ರಿ ಸೂರ್ಯೋದಯ ಯೋಜನೆʼಯನ್ನು 2024 ಜನವರಿ 22ರ ಸೋಮವಾರ ಸಂಜೆ ಪ್ರಕಟಿಸಿದರು.

"ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ" ಯೋಜನೆಯು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ಲನ್ನು ಕಡಿಮೆ ಮಾಡುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲಿದೆ ಎಂದು ಪ್ರಧಾನಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಿಂದ ಹಿಂದಿರುಗಿದ ನಂತರ, ಜನರು ತಮ್ಮ ಮನೆಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು ಸಹಾಯ ಮಾಡುವ ಹೊಸ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ನಿರ್ಧಾರವು "ಜಗತ್ತಿನ ಎಲ್ಲಾ ಭಕ್ತರು ಸೂರ್ಯವಂಶಿ ಭಗವಾನ್ ಶ್ರೀರಾಮನ ಬೆಳಕಿನಿಂದ ಶಕ್ತಿಯನ್ನು ಪಡೆಯುತ್ತಾರೆ" ಎಂಬ ಅರಿವಿನಿಂದ ಪ್ರೇರಿತವಾಗಿದೆ ಎಂದು ಅವರು ನುಡಿದರು.

"ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ನಮ್ಮ ಸರ್ಕಾರವು "ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ" ಯನ್ನು 1 ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರ ಅಳವಡಿಸುವ ಗುರಿಯೊಂದಿಗೆ ಪ್ರಾರಂಭಿಸುವುದುʼ ಎಂದು ಪ್ರಧಾನಿ ಮೋದಿ ಟ್ವಿಟರಿನಲ್ಲಿ ಪೋಸ್ಟ್ ಮಾಡಿದರು.

"ಇದು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ" ಎಂದು ಅವರು ಬರೆದರು.

ಅಯೋಧ್ಯೆಯಲ್ಲಿ ನಡೆದ ಮಹಾಮಸ್ತಕಾಭಿಷೇಕದ ನೇತೃತ್ವ ವಹಿಸಿದ್ದ ಪ್ರಧಾನಿ ಮೋದಿ, ನಂತರ ತಮ್ಮ ಭಾಷಣದಲ್ಲಿ ಭಗವಾನ್ ರಾಮನು "ಶಕ್ತಿ" ಮತ್ತು ಇಂದು "ಹೊಸ ಯುಗದ ಉದಯ" ಎಂದು ಹೇಳಿದರು.

"ರಾಮನು ಬೆಂಕಿಯಲ್ಲ, ಅವನು ಶಕ್ತಿ. ರಾಮನು ವಿವಾದವಲ್ಲ, ಅವನು ಪರಿಹಾರ. ರಾಮನು ನಮ್ಮವನಲ್ಲ, ಅವನು ಪ್ರತಿಯೊಬ್ಬರಿಗೂ ಸೇರಿದವನು" ಎಂದು ಪ್ರಧಾನಿ ಹೇಳಿದರು.

"ಇಂದು, ನಾವು ಕೇವಲ ರಾ ಲಲ್ಲಾ ಅವರ ವಿಗ್ರಹದ ಪ್ರಾಣ ಪ್ರತಿಷ್ಠೆಯನ್ನು ನೋಡಿದ್ದಲ್ಲ, ಭಾರತದ ಮುರಿಯಲಾಗದ ಏಕತೆಯ ಪ್ರಾಣ ಪ್ರತಿಷ್ಠೆಯನ್ನು ಸಹ ನೋಡಿದ್ದೇವೆ" ಎಂದು ದೆಹಲಿಯ ಮನೆಯಲ್ಲಿ ಹಣತೆ ಬೆಳಗಿ ದೀಪಾವಳಿ ಆಚರಿಸುತ್ತಾ ಸಂಜೆ ಮೋದಿ ಹೇಳಿದರು.

ರಾಮ ಜನ್ಮಭೂಮಿ ಮಂದಿರವು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ರೂಪುಗೊಂಡಿದೆ, 392 ಸ್ತಂಭಗಳೂ ಮತ್ತು 44 ಬಾಗಿಲುಗಳನ್ನು ಹೊಂದಿದೆ. ಸ್ತಂಭಗಳು ಮತ್ತು ಗೋಡೆಗಳು ಹಿಂದೂ ದೇವತೆಗಳ ಕೆತ್ತನೆಯ ಚಿತ್ರಣಗಳನ್ನು ಪ್ರದರ್ಶಿಸಿವೆ.

ಭಕ್ತರಿಗೆ ರಾಮಲಲ್ಲಾ ದರ್ಶನ

ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 23ರ ಮಂಗಳವಾರದಿಂದ ಭಕ್ತರಿಗೆ ಬಾಲರಾಮನ ದರ್ಶನ ಲಭಿಸಲಿದ್ದು ಬೆಳಗ್ಗೆ 7ರಿಂದ 10.30 ಮತ್ತು ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ದರ್ಶನ ಅವಕಾಶ ಒದಗಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

ನಿತ್ಯ ಸಂಜೆ 6.30ಕ್ಕೆ ವಿಶೇಷ ಭಜನೆ, ಶೃಂಗಾರ ಆರತಿ ನಡೆಯಲಿದ್ದು ಭಕ್ತರು ಒಂದು ದಿನ ಮೊದಲೇ ತಮ್ಮ ಸ್ಥಾನ ಕಾಯ್ದಿರಿಸಿಕೊಳ್ಳಬೇಕು ಎಂದು ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ.

ಸಂಜೆ 7 ಗಂಟೆಗೆ ಬಾಲ ರಾಮನಿಗೆ ಆರತಿ ನಡೆಯಲಿದ್ದು, ಆರತಿ ದರ್ಶನಕ್ಕೆ ಬರುವ ಭಕ್ತರು ಮುಂಚಿತವಾಗಿ ಟ್ರಸ್ಟ್‌ ಕಚೇರಿಯಿಂದ ಪಾಸ್‌ ಪಡೆದಿರಬೇಕು ಎಂದು ಹೇಳಿದರು.

ಬಾನಿನಿಂದ ರಾಮ ಮಂದಿರದ ವಿಡಿಯೋ

ಈ ಮಧ್ಯೆ ಹೆಲಿಕಾಪ್ಟರ್‌ ಮೂಲಕ ಇಂದು ಚಿತ್ರಿಸಲಾದ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಸಂದರ್ಭದ ವಿಡಿಯೋ ಒಂದು ವೈರಲ್‌ ಆಗಿದ್ದು ಅದನ್ನು ನೋಡಲು ಕೆಳಗೆ ಕ್ಲಿಕ್‌ ಮಾಡಬಹುದು.


ಈ ಕೆಳಗಿನ ಸುದ್ದಿಗಳನ್ನೂ ಓದಿರಿ:

ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ

ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ

ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ

 ಬಾಲರಾಮನ ಪ್ರಾಣಪ್ರತಿಷ್ಠೆ, ವೇದಘೋಷ, ಸಂಭ್ರಮ ಸಡಗರ

ಯೋಧ್ಯೆ: ವೇದಘೋಷ, ಭಕ್ತಿಗೀತೆಗಳು, ಭಜನೆ, ವಿವಿಧ್ಯ ವಾದ್ಯ ಸೇವೆಗಳ ಮಧ್ಯೆ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ನೂತನವಾಗಿ ನಿರ್ಮಿಸಿದ ಸುಂದರ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯು ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ 2024 ಜನವರಿ 22ರ ಸೋಮವಾರ ಮಧ್ಯಾಹ್ನ 12 ಗಂಟೆ ಬಳಿಕದ ಶುಭ ಮುಹೂರ್ತದಲ್ಲಿ ಸಡಗರೋತ್ಸಾಹದೊಂದಿಗೆ ನೆರವೇರಿತು.

ಇದರೊಂದಿಗೆ ಸುಮಾರು 500 ವರ್ಷಗಳ ಬಳಿಕ ಶ್ರೀ ರಾಮ ಚಂದ್ರನು ಮೂಲಸ್ಥಾನದಲ್ಲಿ ಬಾಲರಾಮನ (ರಾಮಲಲ್ಲಾ) ರೂಪದಲ್ಲಿ ಪುನರ್‌ ಪ್ರತಿಷ್ಠೆಗೊಂಡಿದ್ದಾನೆ. ಇದಕ್ಕೆ ಮುನ್ನ ವಿವಾದಿತ ಕಟ್ಟಡದಲ್ಲಿ ಪೂಜೆಗೊಳ್ಳುತ್ತಿದ್ದ ರಾಮ ಲಲ್ಲಾ ವಿಗ್ರಹಗಳನ್ನೂ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್‌ ಭಾಗ್ವತ್‌, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಮುಖರ ಸಮ್ಮುಖದಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ವಿಧಿ ವಿಧಾನಗಳನ್ನು ನೆರವೇರಿಸಿದರು. ಮೂರ್ತಿಗೆ ಕಮಲದ ಹೂ, ಅಕ್ಷತೆ, ಕುಂಕುಮ ಇತ್ಯಾದಿಗಳನ್ನು ಅರ್ಪಿಸಿದರು. ಪ್ರಾಣ ಪ್ರತಿಷ್ಠಾಪನೆಯ ಬಳಿಕ ಮಂಗಳಾರತಿಯನ್ನೂ ಬೆಳಗಿದರು.

ಪ್ರಾಣಪ್ರತಿಷ್ಠೆಯ ಬಳಿಕ ಪ್ರಧಾನಿಯವರು ಅರ್ಚಕರಿಗೆ ವಸ್ತ್ರದಾನ ಮಾಡಿದರು.

ಪ್ರಾಣಪ್ರತಿಷ್ಠಾ ಸಮಾರಂಭದಲ್ಲಿ ಗರ್ಭಗುಡಿಯೊಳಗೆ ಪ್ರಧಾನಿ ಸೇರಿದಂತೆ ಐವರು ಗಣ್ಯರಿಗೆ ಮಾತ್ರ ಪ್ರವೇಶವಿತ್ತು. ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

ನೂರಾರು ಮಂದಿ ಸಂತರು, ದೇಶ ವಿದೇಶಗಳಿಂದ ಆಗಮಿಸಿದ್ದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಹೊರಭಾಗದಲ್ಲಿ ಸಹಸ್ರಾರು ಮಂದಿ ಭಕ್ತರು ನೆರೆದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಬಳಿಕ ದೇವಾಲಯದ ಹೊರಭಾಗದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿಯವರು ದೇವಾಲಯ ನಿರ್ಮಾಣಕ್ಕಾಗಿ ದುಡಿದ ಕಾರ್ಯಕ್ರಮರಿಗೆ ಗೌರವ ಸಲ್ಲಿಸಿದರು.

ಪ್ರಾಣಪ್ರತಿಷ್ಠೆಯ ಈ ಸಂಭ್ರಮದ ಕ್ಷಣ ವಿಶ್ವಾದ್ಯಂತ ಬೃಹತ್‌ ಪರದೆಗಳಲ್ಲಿ ಪ್ರಸಾರಗೊಂಡಿತು. ಕೋಟ್ಯಂತರ ಭಕ್ತರು ದೇವಾಲಯಗಳಲ್ಲಿ ನೆರೆದು ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಗೊಂಡದ್ದಲ್ಲದೆ, ಪೂಜಾ ಕೈಂಕರ್ಯಗಳನ್ನು ಕೈಗೊಂಡರು.

ಬಾಲರಾಮನ ಪ್ರತಿಷ್ಠಾ ಸಮಾರಂಭದ ಕ್ಷಣಗಳ ಸಮೀಪ ನೋಟಕ್ಕಾಗಿ ಮೇಲಿನ ಚಿತ್ರಗಳನ್ನು ಕ್ಲಿಕ್ಕಿಸಿ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ.

ಈ ಕೆಳಗಿನ ಸುದ್ದಿಗಳನ್ನೂ ಓದಿರಿ:

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ

Sunday, January 21, 2024

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ

ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು,
ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ,

ಋಷಿವಾಕ್ಯದೊಡೆ ವಿಜ್ಞಾನ ಕಲೆ ಮೇಳವಿಸೆ,
ಜಸವು  ಜನ ಜೀವನಕೆ ಮಂಕು ತಿಂಮ್ಮ!

ಕನ್ನಡದ ಖ್ಯಾತ ಕವಿ ಡಿವಿಜಿ ಅವರ ಈ ಕವನವನ್ನು ಕ್ಷಣ ಕ್ಷಣಕ್ಕೂ ನೆನಪಿಸುವಂತೆ ಮೂಡಿ ಬಂದಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ನೂತನ ರಾಮ ಮಂದಿರ. ಭಾರತೀಯ ಚಿಂತನೆ, ವಾಸ್ತು, ಕಲೆ ಮತ್ತು ವಿಜ್ಞಾನ ಇವೆಲ್ಲವೂ ಇಲ್ಲಿ ಮೇಳೈಸಿವೆ.

ಭಾರತದ ಪ್ರಾಚೀನ ಚಿಂತನೆ, ವಾಸ್ತುಶಿಲ್ಪ ಮತ್ತು ಆಧುನಿಕ ವಿಜ್ಞಾನ ಮಿಳಿತವಾದ ಸುಂದರ ಮಂದಿರವನ್ನು ಭಾರತದ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಎತ್ತರ ಕುತುಬ್‌ ಮಿನಾರ್‌ ಕಟ್ಟಡದ ಶೇಕಡಾ 70ರಷ್ಟು ಇದೆ.

ಪ್ರಸಿದ್ಧ ವಾಸ್ತುಶಿಲ್ಪಿ ಚಂದ್ರಕಾಂತ್ ಬಿ ಸೋಂಪುರ ಅವರು ತಮ್ಮ ಮಗ ಆಶಿಶ್ ಸಹಾಯದಿಂದ ವಿನ್ಯಾಸಗೊಳಿಸಿರುವ ರಾಮ ಮಂದಿರದ ಕಲ್ಪನೆಯನ್ನು 30 ವರ್ಷಗಳಷ್ಟು ಹಿಂದೆಯೇ ವಿವರಿಸಿದ್ದರು.

2024 ಜನವರಿ 22ರ  ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಅಯೋಧ್ಯೆಯ ರಾಮಮಂದಿರವು ಇದೀಗ ಅಲಂಕೃತವಾಗಿ ನಿಂತಿದೆ.

ದೇವಾಲಯಗಳ ಪಟ್ಟಣ ಎಂಬುದಾಗಿಯೇ ಹೆಸರು ಪಡೆದಿರುವ ಅಯೋಧ್ಯೆಯಲ್ಲಿ 2.7 ಎಕರೆ ಭೂಮಿಯಲ್ಲಿ ಮೈತಳೆದು ನಿಂತಿರುವ ಈ ದೇವಾಲಯ 161 ಅಡಿ ಎತ್ತರ, 235 ಅಡಿ ಅಗಲ ಮತ್ತು ಒಟ್ಟು 360 ಅಡಿ ಉದ್ದವನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನದ ಸಮ್ಮಿಲನದೊಂದಿಗೆ ಎಲ್ಲ ವೈದಿಕ ಆಚರಣೆಗಳನ್ನು ಅನುಸರಿಸಿ, ಪ್ರಾಚೀನ  ಭಾರತದ ಎರಡು ವಿಶಿಷ್ಟವಾದ ಕಟ್ಟಡ ಶೈಲಿಗಳಲ್ಲಿ ಒಂದಾದ ನಾಗರಾ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ.

ಈ ದೇವಾಲಯದ ನಿರ್ಮಾಣ ಪ್ರದೇಶವು ಸುಮಾರು 57,000 ಚದರ ಅಡಿಗಳು. ಕಟ್ಟಡ ಮೂರು ಅಂತಸ್ತುಗಳನ್ನು ಹೊಂದಿದೆ. ಎತ್ತರಿಸಿದ ಪಾಯದ ಮೇಲೆ ಗರ್ಭಗುಡಿ ನಿರ್ಮಾಣಗೊಂಡಿದೆ. ಮೂರು ಅಂತಸ್ತುಗಳನ್ನು ಹೊಂದಿರುವ ದೇವಾಲಯದ ಗರ್ಭಗುಡಿಯ ಮೇಲೆ ಅತ್ಯಂತ ಎತ್ತರದ ಶಿಖರವಿದೆ. ದೇವಾಲಯ ಹೊಂದಿರುವ ಐದು ಮಂಟಪಗಳು ಒಟ್ಟು ಐದು ಶಿಖರಗಳನ್ನು ಹೊಂದಿವೆ. ಮಂಟಪಗಳು 300 ಸ್ತಂಭಗಳು ಮತ್ತು 44 ತೇಗದ ಬಾಗಿಲುಗಳನ್ನು ಹೊಂದಿವೆ.

ಭಗವಾನ್ ರಾಮನ ಹೆಸರನ್ನು ವಿವಿಧ ಭಾಷೆಗಳಲ್ಲಿ ಕೆತ್ತಿದ ಮತ್ತು 30 ವರ್ಷಗಳಿಂದ ಸಂಗ್ರಹಿಸಲಾದ ಸುಮಾರು ಎರಡು ಲಕ್ಷ ಇಟ್ಟಿಗೆಗಳನ್ನು ದೇವಾಲಯಕ್ಕೆ ಬಳಸಲಾಗಿದೆ. ತಾಜ್‌ ಮಹಲ್‌ ನಿರ್ಮಿಸಲು ಬಳಸಲಾಗಿದ್ದ ಅಮೃತಶಿಲೆಗಳನ್ನೇ ಬಳಸಿ ಗರ್ಭಗುಡಿಯ ಒಳಭಾಗವನ್ನು ಅಲಂಕರಿಸಲಾಗಿದೆ. ಉಕ್ಕು ಮತ್ತು ಕಬ್ಬಿಣವನ್ನು ಒಂದಿಷ್ಟೂ ಬಳಸಿಲ್ಲ ಎಂಬುದು ಇದರ ವಿಶೇಷ. ಹಾಗೆಯೇ ಈ ಮಂದಿರ ನಿರ್ಮಾಣಕ್ಕೆ ಒಂದಿಷ್ಟೂ ಸಿಮೆಂಟ್‌ ಅಥವಾ ಗಾರೆ ಕೂಡಾ ಬಳಸಿಲ್ಲ.

ನಾಗರ ಶೈಲಿಯ ಕಟ್ಟಡಗಳ ನಿರ್ಮಾಣ ಆರಂಭವಾದದ್ದು ಭಾರತವು ಸುವರ್ಣ ಯುಗವನ್ನು ಕಂಡಿದ್ದ ಗುಪ್ತರ ಕಾಲದಲ್ಲಿ. ಕಬ್ಬಿಣದ ಬಾಳಿಕೆ ಸುಮಾರು 80-90 ವರ್ಷ ಮಾತ್ರ. ಹೀಗಾಗಿ ದೇವಾಲಯವನ್ನು ಕನಿಷ್ಠ ಒಂದು ಸಾವಿರ ವರ್ಷ ಕಾಲ ದೃಢವಾಗಿ ನಿಲ್ಲುವಂತೆ ಗ್ರಾನೈಟ್‌, ಮರಳುಗಲ್ಲು, ಅಮೃತಶಿಲೆ ಬಳಸಿ ಲಾಕ್‌ ಮತ್ತು ಕೀ ಯಾಂತ್ರಿಕ ವ್ಯವಸ್ಥೆಯೊಂದಿಗೆ ನಿರ್ಮಿಸಲಾಗಿದೆ.

ರಾಮ ಮಂದಿರ ನಿರ್ಮಾಣಕ್ಕೆ ಮೊದಲು ಈ ಪ್ರದೇಶವನ್ನು 15 ಮೀಟರ್‌ ಆಳಕ್ಕೆ ಅಗೆದು, 47 ಪದರಗಳಲ್ಲಿ ಮಣ್ಣನ್ನು ಗಟ್ಟಿಯಾಗಿ ತುಂಬಿ ಪಾಯವನ್ನು ನಿರ್ಮಿಸಲಾಗಿತ್ತು. ಅದಕ್ಕೆ 1.5 ಮೀಟರ್‌ ದಪ್ಪದ ಎಂ-35 ದರ್ಜೆಯ ಕಾಂಕ್ರೀಟ್‌ ಹಾಕಲಾಯಿತು. ಗಟ್ಟಿಮಟ್ಟು ಆಗಲು 6.3 ಮೀಟರ್‌ ದಪ್ಪದ ಘನ ಗ್ರಾನೈಟ್‌ ಕಲ್ಲನ್ನು ಹೊದಿಸಲಾಯಿತು.

ವಿಜ್ಞಾನದ ಕೊಡುಗೆ

ರಾಮಮಂದಿರವನ್ನು ನಿರ್ಮಿಸಲು ಕೆಲವು ಉನ್ನತ ಭಾರತೀಯ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ. ನಿರ್ಮಾಣದಲ್ಲಿ ಇಸ್ರೋ ತಂತ್ರಜ್ಞಾನವನ್ನೂ ಬಳಸಲಾಗಿದೆ. ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (ಸಿಬಿಆರ್‌ಐ) ನಿರ್ದೇಶಕ ಪ್ರದೀಪ್ ಕುಮಾರ್ ರಾಮಂಚರ್ಲಾ ಅವರು ಯೋಜನೆಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ವಿಶೇಷ ‘ಸೂರ್ಯ ತಿಲಕ್’ ಕನ್ನಡಿ ಎಂಬ ಮಸೂರ ಆಧಾರಿತ ಉಪಕರಣವನ್ನು ಸಿಬಿಆರ್‌ ಐ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ/ IIA) ವಿಜ್ಞಾನಿಗಳ ತಂಡ ವಿನ್ಯಾಸಗೊಳಿಸಿದೆ. ಇದರ ಮೂಲಕ ಪ್ರತಿವರ್ಷ ರಾಮನವಮಿಯ ದಿನದಂದು ಮಧ್ಯಾಹ್ನದ ಸಮಯದಲ್ಲಿ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕಿನ ಅಭಿಷೇಕವಾಗುತ್ತದೆ.

ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


ಇವುಗಳನ್ನೂ ಓದಿ:

ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ

Saturday, January 20, 2024

ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ

 ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ

ಯೋಧ್ಯೆ: ಮುಖ ಸಂಪೂರ್ಣವಾಗಿ ಕಾಣುತ್ತಿದ್ದ ಬಾಲ ರಾಮನ ಚಿತ್ರ ಅಯೋಧ್ಯೆಯ ನೂತನ ರಾಮಲಲ್ಲಾ ವಿಗ್ರಹದ ನೈಜ ಚಿತ್ರವಲ್ಲ ಎಂದು ಅಯೋಧ್ಯಾ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ೨೦೨೪ ಜನವರಿ ೨೦ರ ಶನಿವಾರ ಸ್ಪಷ್ಟ ಪಡಿಸಿದ್ದಾರೆ.

ಈ ಚಿತ್ರವನ್ನು ಪ್ರಚುರ ಪಡಿಸಿದ ಬಗ್ಗೆ ತನಿಖೆ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ. ಪ್ರಾಣಪ್ರತಿಷ್ಠಾಪನೆಗೆ ಮುನ್ನ ವಿಗ್ರಹದ ಕಣ್ಣುಗಳನ್ನು ತೋರಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಬಾಲರಾಮನಿಗೆ ಸಂಬಂಧಿಸಿದಂತೆ ಮೊದಲಿಗೆ ಬಿಡುಗಡೆ ಮಾಡಲಾದ ಚಿತ್ರದಲ್ಲಿ ಬಾಲರಾಮನ ಮುಖವನ್ನು ಸಂಪೂರ್ಣವಾಗಿ ಹಳದಿ ಬಣ್ಣದಿಂದ ಮುಚ್ಚಲಾಗಿತ್ತು. ಆ ಬಳಿಕ ಮಾಧ್ಯಮಗಳಲ್ಲಿ ಪ್ರಕಟವಾದ ಚಿತ್ರಗಳಲ್ಲಿ ಒಂದರಲ್ಲಿ ವಿಗ್ರಹದ ಕಣ್ಣಿಗೆ ಮಾತ್ರ ಬಟ್ಟೆ ಕಟ್ಟಲಾಗಿತ್ತು. ಮತ್ತೊಂದು ಚಿತ್ರದಲ್ಲಿ ಮುಖವನ್ನು ಯಾವುದೇ ಬಟ್ಟೆಯಿಂದ ಮುಚ್ಚಿರಲಿಲ್ಲ. ಜೊತೆಗೆ ಕೈಗಳಲ್ಲಿ ಚಿನ್ನದ ಬಿಲ್ಲು, ಬಾಣಗಳನ್ನೂ ತೋರಿಸಲಾಗಿತ್ತು.

ಬಾಲರಾಮನ ಪ್ರಾಣಪ್ರತಿಷ್ಠಾಪನೆ ಜನವರಿ ೨೨ರಂದು ಮಧ್ಯಾಹ್ನ ನೆರವೇರಲಿದ್ದು, ವಿಶ್ವಾದ್ಯಂತ ಸಂಭ್ರಮ ಮನೆ ಮಾಡಿದೆ. ರಾಮಮಂದಿರ ಅಲಂಕಾರದೊಂದಿಗೆ ಸಜ್ಜುಗೊಂಡಿದೆ. ಅಯೋಧ್ಯೆಯಲ್ಲಿ ಬಿಗಿ ಬಂದೋಬಸ್ತ್‌ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇವುಗಳನ್ನೂ ಓದಿ:

ಚಿನ್ನದ ಬಿಲ್ಲು ಬಾಣ, ಬಾಲರಾಮ ನಿನಗಿದೋ ಪ್ರಣಾಮ.

Friday, January 19, 2024

ಚಿನ್ನದ ಬಿಲ್ಲು ಬಾಣ, ಬಾಲರಾಮ ನಿನಗಿದೋ ಪ್ರಣಾಮ.

 ಚಿನ್ನದ ಬಿಲ್ಲು ಬಾಣ, ಬಾಲರಾಮ ನಿನಗಿದೋ ಪ್ರಣಾಮ.


ವದೆಹಲಿ
: ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆಗೆ ಮುಂಚಿತವಾಗಿ 2024 ಜನವರಿ 19ರ ಶುಕ್ರವಾರ ಸಂಜೆಯ ವೇಳೆಗೆ ಮಂದಿರದಲ್ಲಿ ಪ್ರಾಣಪ್ರತಿಷ್ಠೆಗೆ ಸಜ್ಜಾಗಿರುವ ಬಾಲ ರಾಮನ ವಿಗ್ರಹ ಸಂಪೂರ್ಣವಾಗಿ ಅನಾವರಣಗೊಂಡಿದೆ.

ಅಯೋಧ್ಯೆಯ ದೇಗುಲದಲ್ಲಿ ಇರಿಸಲಾಗಿರುವ ರಾಮನ ವಿಗ್ರಹವನ್ನು ಸೋಮವಾರದ ಪ್ರಾಣಪ್ರತಿಷ್ಠಾ ಸಮಾರಂಭಕ್ಕೆ ಮುಂಚಿತವಾಗಿ ಬಹಿರಂಗಪಡಿಸಲಾಗಿದೆ. ವಿಗ್ರಹವು ಭಗವಾನ್ ರಾಮನನ್ನು ಐದು ವರ್ಷದ ಮಗುವಿನಂತೆ ಚಿತ್ರಿಸಿದ್ದು ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣವನ್ನು ಹಿಡಿದು ನಿಂತಿರುವ ಭಂಗಿಯಲ್ಲಿದೆ. ಮುಗ್ಧ ಮುಖದಲ್ಲಿ ಮುಗುಳುನಗು ಹೊರಸೂಸುತ್ತಿದೆ.

ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಅವರು ಕೆತ್ತಿರುವ 51 ಇಂಚಿನ ರಾಮಲಲ್ಲಾ ವಿಗ್ರಹವನ್ನು ಕಪ್ಪು ಕಲ್ಲಿನಲ್ಲಿ ನಿರ್ಮಿಸಲಾಗಿದೆ.

ಇದಕ್ಕೆ ಮುನ್ನ ಗುರುವಾರ, ಗರ್ಭಗುಡಿಯೊಳಗೆ ವಿಗ್ರಹವನ್ನು ಇರಿಸಿದ ಸಂದರ್ಭದ ಭಾವಚಿತ್ರಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ವಿಗ್ರಹ ಬಟ್ಟೆಯಿಂದ ಮುಚ್ಚಲ್ಪಟ್ಟಿತ್ತು.

ಶುಕ್ರವಾರ ಬೆಳಗ್ಗೆ ಮತ್ತೊಂದು ಚಿತ್ರ ಹೊರಹೊಮ್ಮಿತು, ಅದರಲ್ಲಿ ರಾಮಲಲ್ಲಾನ ಕಣ್ಣುಗಳನ್ನು ಮಾತ್ರ ಬಟ್ಟೆಯಿಂದ ಮುಚ್ಚಲಾಗಿತ್ತು.

ಅಂತಿಮವಾಗಿ ಮಧ್ಯಾಹ್ನ ಸಂಪೂರ್ಣ ನೋಟವನ್ನು ಅನಾವರಣಗೊಳಿಸಲಾಯಿತು, ಇದು ದೇವರ ಮುಖ ಮತ್ತು ಚಿನ್ನದ ಬಿಲ್ಲು ಮತ್ತು ಬಾಣವನ್ನು ತೋರಿಸುತ್ತಿದೆ.

ಇವುಗಳನ್ನೂ ಓದಿ:

ರಾಮಲಲ್ಲಾ: ಇನ್ನೊಂದು ಭವ್ಯನೋಟ..!
ಅಯೋಧ್ಯೆಯ ಬಾಲರಾಮ: ಮೊದಲ ದೃಶ್ಯ ಕಣ್ತುಂಬಿಕೊಳ್ಳಿ.

ಅಯೋಧ್ಯಾ ರಾಮಮಂದಿರ: ಕತ್ತಲ ಬೆಳಕಲ್ಲಿ ಭವ್ಯನೋಟ

ಇಂದಿನ ಇತಿಹಾಸ History Today ಜನವರಿ 19

ಇಂದಿನ ಇತಿಹಾಸ History Today ಜನವರಿ 18 

ರಾಮಲಲ್ಲಾ: ಇನ್ನೊಂದು ಭವ್ಯನೋಟ..!

 ರಾಮಲಲ್ಲಾ: ಇನ್ನೊಂದು ಭವ್ಯನೋಟ..!

ವದೆಹಲಿ: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗಿರುವ ನೂತನ ರಾಮ ಲಲ್ಲಾ ವಿಗ್ರಹದ ಇನ್ನೊಂದು ಚಿತ್ರವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ 2024 ಜನವರಿ 19 ರಂದು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ವಿಗ್ರಹದ ಕಣ್ಣಿಗೆ ಮಾತ್ರ ಪಟ್ಟಿಯನ್ನು ಕಟ್ಟಲಾಗಿದ್ದು, ವಿಗ್ರಹದ ಉಳಿದೆಲ್ಲ ಭಾಗವೂ ಅನಾವರಣಗೊಂಡಿದೆ.

ʼಪ್ರಭು ರಾಮ ಲಲ್ಲಾನ ಮೊದಲ ನೋಟ. ಜೈ ಶ್ರೀರಾಮ್‌ʼ ಎಂಬುದಾಗಿ ಕರಂದ್ಲಾಜೆ ಬರೆದಿದ್ದಾರೆ.

2024 ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.

ಅರುಣ್‌ ಯೋಗಿರಾಜ್‌ ಅವರು ಕಪ್ಪು ಶಿಲೆಯಲ್ಲಿ ಕೆತ್ತಿರುವ ಈ ಬಾಲರಾಮನ ವಿಗ್ರಹ 51 ಅಂಗುಲ ಎತ್ತರವಿದೆ.

ಇವುಗಳನ್ನೂ ಓದಿ:

ಅಯೋಧ್ಯೆಯ ಬಾಲರಾಮ: ಮೊದಲ ದೃಶ್ಯ ಕಣ್ತುಂಬಿಕೊಳ್ಳಿ.

ಅಯೋಧ್ಯಾ ರಾಮಮಂದಿರ: ಕತ್ತಲ ಬೆಳಕಲ್ಲಿ ಭವ್ಯನೋಟ

ಇಂದಿನ ಇತಿಹಾಸ History Today ಜನವರಿ 19

ಇಂದಿನ ಇತಿಹಾಸ History Today ಜನವರಿ 18

ಅಯೋಧ್ಯೆಯ ಬಾಲರಾಮ: ಮೊದಲ ದೃಶ್ಯ ಕಣ್ತುಂಬಿಕೊಳ್ಳಿ.

 ಅಯೋಧ್ಯೆಯ ಬಾಲರಾಮ: ಮೊದಲ ದೃಶ್ಯ ಕಣ್ತುಂಬಿಕೊಳ್ಳಿ.

ಯೋಧ್ಯೆ: ಅಯೋಧ್ಯೆಯ ನೂತನ ರಾಮ ಮಂದಿರದ ಗರ್ಭಗುಡಿಯಲ್ಲಿ 2024 ಜನವರಿ 18ರಂದು ಇರಿಸಲಾದ ನೂತನ ಬಾಲರಾಮನ ವಿಗ್ರಹದ ಮೊದಲ ಚಿತ್ರವನ್ನು ವಿಶ್ವ ಹಿಂದೂ ಪರಿಷತ್‌  2024 ಜನವರಿ 19ರ ಶುಕ್ರವಾರ ಬಿಡುಗಡೆ ಮಾಡಿತು.

ವಿಶ್ವ ಹಿಂದೂ ಪರಿಷತ್ತಿನ ಮಾಧ್ಯಮ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶರದ್‌ ಶರ್ಮ ಅವರು ಈ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ಕನ್ನಡಿಗ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಕೆತ್ತನೆ ಮಾಡಿರುವ ಬಾಲರಾಮನ ವಿಗ್ರಹವನ್ನು ಅಯೋಧ್ಯೆಯ ನೂತನ ರಾಮ ಮಂದಿರದದ ಗರ್ಭಗುಡಿಗೆ 2024 ಜನವರಿ 18ರ ಗುರುವಾರ ತಂದು ಪೀಠದ ಮೇಲೆ ಕೂರಿಸಲಾಗಿತ್ತು.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ನೇತೃತ್ವದಲ್ಲಿ ವೇದಘೋಷಗಳ ನಡುವೆ ಅರ್ಚಕರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಇದರೊಂದಿಗೆ ಭಗವಾನ್‌ ರಾಮನ 500 ವರ್ಷಗಳ ಸುದೀರ್ಘ ವನವಾಸ ಅಂತ್ಯಗೊಂಡಿತ್ತು.

ಈ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದರು.

 2024 ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.

ಅರುಣ್‌ ಯೋಗಿರಾಜ್‌ ಅವರು ಕಪ್ಪು ಶಿಲೆಯಲ್ಲಿ ಕೆತ್ತಿರುವ ಈ ಬಾಲರಾಮನ ವಿಗ್ರಹ 51 ಅಂಗುಲ ಎತ್ತರವಿದೆ.

ಇವುಗಳನ್ನೂ ಓದಿ:

ಅಯೋಧ್ಯಾ ರಾಮಮಂದಿರ: ಕತ್ತಲ ಬೆಳಕಲ್ಲಿ ಭವ್ಯನೋಟ

Thursday, August 6, 2020

ರಾಮಮಂದಿರ ಭೂಮಿ ಪೂಜೆ: ವಿಶ್ವದಾದ್ಯಂತ ವ್ಯಾಪಕ ವೀಕ್ಷಣೆ

ರಾಮಮಂದಿರ ಭೂಮಿ ಪೂಜೆ: ವಿಶ್ವದಾದ್ಯಂತ ವ್ಯಾಪಕ ವೀಕ್ಷಣೆ

ನವದೆಹಲಿ: ಆಗಸ್ಟ್ ರಂದು ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದ ನೇರ ಪ್ರಸಾರವನ್ನು ವಿಶ್ವದಾದ್ಯಂತ ವ್ಯಾಪಕವಾಗಿ ವೀಕ್ಷಿಸಲಾಗಿದ್ದು, ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಥೈಲ್ಯಾಂಡ್, ನೇಪಾಳ ಮತ್ತು ಇತರ ಹಲವಾರು ದೇಶಗಳ ದೂರದರ್ಶನ ಕೇಂದ್ರಗಳು ಪ್ರಸಾರ ಮಾಡಿದ್ದವು.

ಅನೇಕ ಕ್ಯಾಮೆರಾಗಳು, ಹೊರಗಿನ ಪ್ರಸಾರ (ಒಬಿ) ಮತ್ತು ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (ಡಿಜಿಟಲ್ ಉಪಗ್ರಹ ಸುದ್ದಿ ಸಂಗ್ರಹ- ಡಿಎಸ್‌ಎನ್‌ಜಿ) ವ್ಯಾನ್‌ಗಳ ಬಳಕೆಯ ಮೂಲಕ ಮುಖ್ಯ ಪ್ರಸಾರವನ್ನು ದೂರದರ್ಶನ ನಿರ್ವಹಿಸಿತ್ತು.

ಜನರು ಕಾರ್ಯಕ್ರಮವನ್ನು ಯೂಟ್ಯೂಬ್ ಮೂಲಕವೂ ವೀಕ್ಷಿಸಿದರು. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ನೆದರ್‌ಲ್ಯಾಂಡ್ಸ್, ಜಪಾನ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಇ, ಸೌದಿ ಅರೇಬಿಯಾ, ಒಮಾನ್, ಕುವೈತ್, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ, ಇಂಡೋನೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ಸಿಂಗಾಪುರ, ಶ್ರೀಲಂಕಾ ಮತ್ತು ಮಾರಿಷಸ್ ದೇಶಗಳಲ್ಲಿ ಅತ್ಯಂತ ಹೆಚ್ಚು ಮಂದಿ ಕಾರ್‍ಯಕ್ರಮ ವೀಕ್ಷಿಸಿದ್ದಾರೆ ಎಂದು ದೂರದರ್ಶನವು 2020 ಆಗಸ್ಟ್ 06ರ ಗುರುವಾರ ತಿಳಿಸಿತು.

ಭಾರತದಲ್ಲಿ, ೨೦೦ ಕ್ಕೂ ಹೆಚ್ಚು ಚಾನೆಲ್‌ಗಳು ಕಾರ್ಯಕ್ರಮವನ್ನು ಪ್ರಸಾರ ಮಾಡಿವೆ ಎಂದು ದೂರದರ್ಶನ ಹೇಳಿತು.

ಕಾರ್‍ಯಕ್ರಮದ ಸಿಗ್ನಲ್‌ಗಳನ್ನು ಸುದ್ದಿ ಸಂಸ್ಥೆ ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ (ಎಎನ್‌ಐ) ಮೂಲಕ ಸುಮಾರು ೧೨೦೦ ಸ್ಟೇಷನ್‌ಗಳಿಗೆ ಮತ್ತು ಅಸೋಸಿಯೇಟೆಡ್ ಪ್ರೆಸ್ ಟೆಲಿವಿಷನ್ ನ್ಯೂಸ್ (ಎಪಿಟಿಎನ್) ಮೂಲಕ ವಿಶ್ವದ ೪೫೦ ಮಾಧ್ಯಮಗಳಿಗೆ ವಿತರಿಸಲಾಯಿತು. ದೂರದರ್ಶನದ ನ್ಯೂಸ್ ಆರ್ಮ್ ಡಿಡಿ ನ್ಯೂಸ್, ಏಷ್ಯಾ ಪೆಸಿಫಿಕ್ ರಾಷ್ಟ್ರಗಳೊಂದಿಗೆ ಪ್ರತ್ಯೇಕವಾಗಿ ದೃಶ್ಯಗಳನ್ನು ಹಂಚಿಕೊಂಡಿತು.

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಮೂರು ದಶಕಗಳ ಕಾಲ ತನ್ನ ರಾಜಕೀಯವನ್ನು ರೂಪಿಸಿದ್ದ ಬಿಜೆಪಿಯಮಂದಿರ ಆಂದೋಲನವನ್ನು ಫಲಪ್ರದಗೊಳಿಸಿದರು.

ವೇದಘೋಷ, ಶ್ಲೋಕಗಳ ಪಠಣದ ಮಧ್ಯೆ, ಪ್ರಧಾನಿ ಮೋದಿ ಶತಮಾನಗಳಿಂದ ಕಾಯಲಾಗಿರುವ ರಾಮಮಂದಿರಕ್ಕೆ ಮೊತ್ತು ಮೊದಲ ಇಟ್ಟಿಗೆಗಳನ್ನು ಶ್ರೀರಾಮನು ಜನ್ಮತಳೆದ ಸ್ಥಳ ಎಂಬುದಾಗಿ ಭಕ್ತರು ನಂಬುವ ಸ್ಥಳದಲ್ಲಿ ಇರಿಸಿ ಪೂಜೆ ನೆರವೇರಿಸಿದರು.

೧೯೯೨ ರಲ್ಲಿ ಬಾಬರಿ ಮಸೀದಿಯನ್ನು ಕರಸೇವಕರು ನೆಲಸಮಗೊಳಿಸಿದ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲು ಅನುಮತಿ ನೀಡಿ, ಸುಪ್ರೀಂಕೋರ್ಟ್ ಕಳೆದ ವರ್ಷ ತೀರ್ಪಿನಿಂದ ಸಾಧ್ಯವಾದ ಸಮಾರಂಭವು "ಶತಮಾನಗಳ ಕಾಯುವಿಕೆಯನ್ನು ಕೊನೆಗೊಳಿಸಿದೆ ಎಂದು ಪ್ರಧಾನಿ ಹೇಳಿದರು.

ಘಟನೆಯು ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಜನರ ಉತ್ಸಾಹವನ್ನು ವ್ಯಾಖ್ಯಾನಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ರಾಮಮಂದಿರ ನಿರ್ಮಾಣವು ಧಾರ್ಮಿಕ ಸಂಬಂಧಕ್ಕಿಂತ ಹೆಚ್ಚಿನದಾಗಿದೆ ಮತ್ತು ನಿರ್ಮಾಣವು ಮಾನವೀಐ ಮೌಲ್ಯಗಳ ಅತ್ಯುತ್ತಮ ಗೌರವಾಗಿ ನಿಲ್ಲುತ್ತದೆ ಎಂದು ನುಡಿದರು.

ಉತ್ತರ ಪ್ರದೇಶದ ಅಯೋಧ್ಯಾ ದೇಗುಲ ನಗರಿಯಲ್ಲಿ ರಾಮಮಂದಿರ ಶಿಲಾನ್ಯಾಸ ಸಮಾರಂಭ ನಡೆಯಿತು. ಹನುಮಾನ್ ಗರ್ಹಿ ದೇವಸ್ಥಾನದಿಂದ ಸಮಾರಂಭದ ಸ್ಥಳಕ್ಕೆ (ರಾಮ ಜನ್ಮಭೂಮಿ) ಹೋಗುವ ರಸ್ತೆ ಸಂಜೆ ಪ್ರಕಾಶಮಾನವಾದ ದೀಪಗಳಿಂದ ಝಗಮಗಿಸಿತು. ಅಂಗಡಿಗಳು, ಮನೆಗಳು ಮತ್ತು ಅತಿಥಿ ಗೃಹಗಳ ಹೊರಗೆ ಹಣತೆಗಲ್ಲಿ ದೀಪಗಳನ್ನು ಬೆಳಗಿಸಲಾಯಿತು.

ಕೆಲವರು ದೇಗುಲ ನಗರಿಯಲ್ಲಿ ಪಟಾಕಿ ಸಿಡಿಸಿ ಸಂಬ್ರಮ ಆಚರಿಸಿದರು.

೧೯೯೦ರಲ್ಲಿ ರಾಮಮಂದಿರ ನಿರ್ಮಾಣಕ್ಕೆ ಜನ ಬೆಂಬಲ ಕ್ರೋಡೀಕರಿಸಲು ಅಂದಿನ ಬಿಜೆಪಿ ಅಧ್ಯಕ್ಷ ಲಾಲ್ ಕೃಷ್ಣ ಅಡ್ವಾಣಿ ಅವರು ಸೋಮನಾಥದಿಂದ ಅಯೋಧ್ಯೆಯವರೆಗೆ ರಾಮರಥ ಯಾತ್ರೆ ಕೈಗೊಂಡಿದ್ದರು.

Advertisement