Showing posts with label Video. Show all posts
Showing posts with label Video. Show all posts

Monday, November 2, 2026

ರಾಜ್ಯೋತ್ಸವ ಪ್ರಶಸ್ತಿ: ಸಂಭ್ರಮದ ಕ್ಷಣಗಳು

 ರಾಜ್ಯೋತ್ಸವ ಪ್ರಶಸ್ತಿ: ಸಂಭ್ರಮದ ಕ್ಷಣಗಳು

೨೦೨೬ ನವೆಂಬರ್‌ ೦೧ರ ಭಾನುವಾರ ನಡೆದ ಪ್ರಸ್ತುತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂಭ್ರಮದ ಕ್ಷಣಗಳು ಇಲ್ಲಿವೆ. (ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್‌ ಮಾಡಿ).

ಇದನ್ನೂ ಓದಿರಿ:

ಅಭಿನಂದನೆಗಳು ವಿಶ್ವನಾಥ ಸುವರ್ಣ…

ಕನ್ನಡ ರಾಜ್ಯೋತ್ಸವ ಸಂಭ್ರಮ

Sunday, November 1, 2026

ಕನ್ನಡ ರಾಜ್ಯೋತ್ಸವ ಸಂಭ್ರಮ

 ಕನ್ನಡ ರಾಜ್ಯೋತ್ಸವ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ನವೆಂಬರ್‌ ೦೧ರ ಭಾನುವಾರ ೭೧ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಬಡಾವಣೆಯ ಹಿರಿಯ ಸದಸ್ಯ, ಹೋಟೆಲ್‌ ಉದ್ಯಮಿ, ಶಿವಮೊಗ್ಗ ಜಿಲ್ಲೆ ತೀರ್ಥ ಹಳ್ಳಿ ತಾಲೂಕಿನ ಕಾಸರವಳ್ಳಿ ಮೂಲದ ಕೆ.ಎಂ. ನಾಗರಾಜ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ʼಪ್ರತಿದಿನವೂ ಕನ್ನಡ ಮಾತನಾಡುವ ಮೂಲಕ ಕನ್ನಡವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಭಾಷೆಯನ್ನು ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಬಡಾವಣೆಯ ನಿವಾಸಿ ಭಾಸ್ಕರ್‌ ಅವರು ಭಾಷೆಯನ್ನು ನಿತ್ಯ ಮಾತನಾಡುವ ಕೆಲಸ ಪ್ರತಿಯೊಬ್ಬರ ಮನೆ ಮನೆಗಳಲ್ಲಿ ಮಾತೃಭಾಷೆ ಬಳಕೆಗೆ ಆದ್ಯತೆ ನೀಡುವಲ್ಲಿಂದಲೇ ಆರಂಭವಾಗಬೇಕು ಎಂದು ಹೇಳಿದರು.

ಬಡಾವಣೆಯ ಹಿರಿಯ ಸದಸ್ಯ, ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಚೌಡರೆಡ್ಡಿ, ಮೊಗ್ತೇಸರರಾದ ಶ್ರೀ ಮುನಿರಾಜು, ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ರಾಜೇಶ ಹೆಗಡೆ ಮುಖ್ಯ ಅತಿಥಿ ನಾಗರಾಜ್‌- ಶಕುಂತಲಾ ದಂಪತಿಯನ್ನು ಸನ್ಮಾನಿಸಿದರು. ರಾಜೇಶ್‌ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.

ದೇವಸ್ಥಾನ ಸೇವಾ ಸಮಿತಿಯ ಮೊಕ್ತೇಸರ ಎಚ್.ವಿ. ಉದಯಶಂಕರ್‌, ನಾಗೇಶ್‌ ರಾಘವಯ್ಯ, ಪ್ರವೀಣ್‌, ಕೆ.ಪಿ. ಸುಗುಣನ್‌, ಹಂಪಣ್ಣ, ಮತ್ತಿತರರು ಪಾಲ್ಗೊಂಡಿದ್ದರು. ನೆತ್ರಕೆರೆ ಉದಯಶಂಕರ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ್‌ ಅವರು ಕಾರ್ಯಕ್ರಮದ ಬಳಿಕ ಲಘು ಉಪಾಹಾರದ ವ್ಯವಸ್ಥೆ ಮಾಡಿದ್ದರು.




Saturday, October 31, 2026

ಅಭಿನಂದನೆಗಳು ವಿಶ್ವನಾಥ ಸುವರ್ಣ…

 ಅಭಿನಂದನೆಗಳು ವಿಶ್ವನಾಥ ಸುವರ್ಣ…

೨೦೨೬ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ರಾಜ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಹೆಸರು ಸೇರ್ಪಡೆಯಾಗಿರುವುದಕ್ಕೆ ಅಭಿನಂದನೆಗಳು.

ವಿಶ್ವನಾಥ ಸುವರ್ಣ ಅವರು ಈ ಪ್ರಶಸ್ತಿಗೆ ಅತ್ಯಂತ ಯೋಗ್ಯ ವ್ಯಕ್ತಿ. ಏಕೆಂದರೆ ಒಂದು ಸರ್ಕಾರ ಮಾಡಬೇಕಾಗಿದ್ದ ಕೆಲಸವನ್ನು ಅವರು ಮಾಡಿದ್ದಾರೆ.

ಕರ್ನಾಟಕ ರಾಜ್ಯದ ೧೧೬ ಕೋಟೆಗಳ ಛಾಯಾಚಿತ್ರಗಳನ್ನು ತೆಗೆದು ಸಂಗ್ರಹಿಸಿ ʼಕರುನಾಡಿನ ಕೋಟೆಗಳುʼ ಎಂಬ ವಿಶಿಷ್ಟ ಪುಸ್ತಕವನ್ನು ಪ್ರಕಟಿಸಿದ್ದಾರೆ. ಹಳೆಯ ಕೋಟೆಗಳ ಚಿತ್ರಗಳು ಮರೆತುಹೋಗದಂತೆ ಜೀವಂತವಾಗಿ ಇರಿಸಿದ್ದಾರೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಬಲ್ಲಾಳ್‌ ಬಾಗ್‌ ನಿವಾಸಿಯಾದ ಸುವರ್ಣ, ಈ ಪುಸ್ತಕಕ್ಕಾಗಿ ಸುಮಾರು ೧೮ ತಿಂಗಳ ಕಾಲ ಇಡೀ ರಾಜ್ಯವನ್ನು ಸುತ್ತಾಡಿದ್ದರು.ದುರ್ಗಮ ಕೋಟೆಗಳು ಇರುವ ಸ್ಥಳಗಳನ್ನು ಹುಡುಕಿಕೊಂಡು ಹೋಗಿ ತಮ್ಮ ಕ್ಯಾಮರಾದಲ್ಲಿ ಅವುಗಳನ್ನು ಸೆರೆ ಹಿಡಿದಿದ್ದರು. ಕನ್ನಡದಲ್ಲಿ ಆ ಕೋಟೆಗಳ ಬಗೆಗಿನ ವಿವರವನ್ನೂ ದಾಖಲಿಸಿದ್ದರು.

ಬಳಿಕ ಈ ೨೦೧೭ರಲ್ಲಿ ಈ ಪುಸ್ತಕದ ಇಂಗ್ಲಿಷ್‌ ಆವೃತ್ತಿಯನ್ನು ಹೊರತಂದಿದ್ದಾರೆ. ಕರ್ನಾಟಕದ ಕೋಟೆ ಪರಂಪರೆಯನ್ನು ಛಾಯಾಚಿತ್ರಗಳ ಮೂಲಕ ಪರಿಚಯಿಸುವ ಈ ಕಾರ್ಯ ನಿಜಕ್ಕೂ ಅಪೂರ್ವವಾದದ್ದು.

ಪತ್ರಿಕಾ ಛಾಯಾಗ್ರಾಹಕರಾಗಿ ಸುಮಾರು ನಾಲ್ಕೂವರೆ ದಶಕಗಳ ಸೇವೆ ಸಲ್ಲಿಸಿರುವ ಸುವರ್ಣ ಅವರಿಗೆ ಪ್ರಕೃತಿ, ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಸೆರೆ ಹಿಡಿಯುವ ವಿಶಿಷ್ಟ ಆಸಕ್ತಿ ಇದೆ. ಅವರ ಈ ಆಸಕ್ತಿ ʼಕನ್ನಡ ನಾಡಿನ ಬಣ್ಣದ ಬಾನಾಡಿಗಳುʼ ಪುಸ್ತಕದಲ್ಲಿ ಪಡಿಮೂಡಿದೆ. ಈ ಛಾಯಾ ಸಂಪುಟ ಪಕ್ಷಿ ಲೋಕದ ಜೀವನದ ಪಕ್ಷಿಗಳ ಬದುಕಿನ ಸುಂದರ ಚಿತ್ರಣವನ್ನು ನೀಡುತ್ತದೆ.

ʼಪ್ರಜಾವಾಣಿʼ ದಿನಪತ್ರಿಕೆಯಲ್ಲಿ ಮುಖ್ಯ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು ಅದಕ್ಕೂ ಮುನ್ನ ʼಅಭಿಮಾನಿʼ ʼಅರಗಿಣಿʼ ಇತ್ಯಾದಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದವರು. ತಮ್ಮ ವೃತ್ತಿ ಜೀವನದಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾರ್ವಜನಿಕ ಜೀವನದ ಅನೇಕ ಘಟನೆಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ʼಪರ್ಯಾಯ.ಕಾಮ್‌ʼ ವಿಶ್ವನಾಥ ಸುವರ್ಣ ಅವರ ಚಿತ್ರಗಳ ಸಂಪುಟಗಳನ್ನು  ʼಇದು ಸುವರ್ಣ ನೋಟʼ ಶೀರ್ಷಿಕೆಯಲ್ಲಿ ಪ್ರಕಟಿಸುತ್ತಾ ಬಂದಿದೆ. ಅವುಗಳನ್ನು ಇಲ್ಲಿ ನೋಡಬಹುದು.

ಇತ್ತೀಚೆಗೆ ಕುಂದಾಪುರಕ್ಕೆ ಭೇಟಿ ನೀಡಿದ್ದಾಗ ಸೂರ್ಯಾಸ್ತ ಕಾಲದಲ್ಲಿ ತೆಗೆದ ಸುಂದರ ಚಿತ್ರಗಳ ಜೊತೆಗೆ, ಮೊನ್ನೆ ಮೊನ್ನೆ ಕಳೆದ ʼವಿಶ್ವ ವಿಖ್ಯಾತ ಮೈಸೂರುʼ ದಸರ ಸಂದರ್ಭದ ಕೆಲವು ಸುಂದರ ಚಿತ್ರಗಳು ಇಲ್ಲಿವೆ.
ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.

ಜೊತೆಗೇ ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಇತರ ಎಲ್ಲರಿಗೂ ಪರ್ಯಾಯದ ಅಭಿನಂದನೆಗಳು.

-ನೆತ್ರಕೆರೆಉದಯಶಂಕರ












ಇನ್ನಷ್ಟು ಲೇಖನಗಳಿಗೆ ಇಲ್ಲಿ ಕ್ಲಿಕ್‌ ಮಾಡಿರಿ

Tuesday, October 20, 2026

ದುರ್ಗಾದೇವಿ - ಮಹಿಷಾಸುರ ಸಮರ

 ದುರ್ಗಾದೇವಿ - ಮಹಿಷಾಸುರ ಸಮರ

ಶರನ್ನವರಾತ್ರಿ ಉತ್ಸವದ ಆಚರಣೆಯ ಹಿಂದೆ ಹಲವಾರು ಪೌರಾಣಿಕ ಕಥೆಗಳಿವೆ. ಅಂತಹ ಕಥೆಗಳಲ್ಲಿ ಒಂದು ದುರ್ಗಾದೇವಿ-ಮಹಿಷಾಸುರ ಸಮರ. ದುರ್ಗಾದೇವಿ ಮತ್ತು ಮಹಿಷಾಸುರನ ಮಧ್ಯೆ ಯುದ್ಧ ನಡೆದದ್ದು ಏಕೆ? ನವರಾತ್ರಿಯ ಹೊತ್ತಿನಲ್ಲಿ ಒಂದು ರೋಚಕ ಕಥೆಯನ್ನು ಮೇಲಿನಚಿತ್ರ ಕ್ಲಿಕ್‌ ಮಾಡಿ ಕೊನೆತನಕ ನೋಡಿ.

ಇದೇ ಕಥೆಯನ್ನು ಹಿಂದಿಯಲ್ಲಿ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


दुर्गा
देवी - महिषासुर समर (युद्ध) शारदीय नवरात्रि उत्सव के मनाने के पीछे कई पौराणिक कथाएँ हैं। ऐसी ही कथाओं में से एक है दुर्गा देवी - महिषासुर का समर (युद्ध)। दुर्गा देवी और महिषासुर के बीच युद्ध क्यों हुआ? नवरात्रि के अवसर पर इस रोमांचक कहानी को अंत तक देखिए।

Monday, October 19, 2026

ಬಾಲಾಜಿ ಮಹಾಗಣಪತಿಗೆ ಹಣ್ಣುಗಳ ಅಲಂಕಾರ

 ಬಾಲಾಜಿ ಮಹಾಗಣಪತಿಗೆ ಹಣ್ಣುಗಳ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಒಂಭತ್ತನೇ ದಿನವಾದ ಸೋಮವಾರ (೧೯ಅಕ್ಟೋಬರ್‌ ೨೦೨೬) ಬಾಲಾಜಿ ಮಹಾಗಣಪತಿಗೆ ಹಣ್ಣುಗಳ  ಅಲಂಕಾರ ಮಾಡಲಾಯಿತು.

ರಾಘವೇಂದ್ರ ಕಾಮತ್‌, ವೀಣಾ ಕಾಮತ್ ಮತ್ತು ಕುಟುಂಬದವರು ಹಾಗೂ ಲತಾದೀಪ ಮತ್ತು ಕುಟುಂಬದವರು ಬಾಲಾಜಿ ಮಹಾಗಣಪತಿಗೆ ಹಣ್ಣುಗಳ ಅಲಂಕಾರ ಸೇವೆ ಮಾಡಿದರೆ, ಜೆ-೨೪ ಅಂಗಡಿಯ ಸಿದ್ದಪ್ಪ ಮತ್ತು ಕುಟುಂಬದವರು ಪ್ರಸಾದ ಸೇವೆ ಸಲ್ಲಿಸಿದರು.

ಲಕ್ಷ್ಮಿ ದೇವಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ದೇವಾಲಯದ ಭಕ್ತರಿಂದ ಭಜನಾ ಸೇವೆ ನಡೆಯಿತು.

ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.






ಇವುಗಳನ್ನೂ ನೋಡಿರಿ:

Sunday, October 18, 2026

ವೆಂಕಟೇಶ್ವರನಿಗೆ ನಾಣ್ಯ ಅಲಂಕಾರ

 ವೆಂಕಟೇಶ್ವರನಿಗೆ ನಾಣ್ಯ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಎಂಟನೇ ದಿನವಾದ ಭಾನುವಾರ (೧೮ಅಕ್ಟೋಬರ್‌ ೨೦೨೬) ವೆಂಕಟೇಶ್ವರ ಸ್ವಾಮಿಗೆ ನಾಣ್ಯಗಳ  ಅಲಂಕಾರ ಮಾಡಲಾಯಿತು.

ಎಚ್.ವಿ. ಉದಯಶಂಕರ್, ಗೀತಾ ಉದಯಶಂಕರ್ ಮತ್ತು ಕುಟುಂಬದವರು ಮತ್ತು ವೆಂಕಟೇಶ್ವರ ಸ್ವಾಮಿಗೆ  ನಾಣ್ಯಗಳ ಅಲಂಕಾರ ಸೇವೆ ಮಾಡಿದರೆ, ಉದಯಶಂಕರ್‌ ಕುಟುಂಬದವರೊಂದಿಗೆ ಶಿವಪ್ಪ ಶಾಂತಪ್ಪನವರ ಮತ್ತು ಕುಟುಂಬದವರು ಪ್ರಸಾದ ಸೇವೆ ಸಲ್ಲಿಸಿದರು.

ಲಕ್ಷ್ಮಿ ದೇವಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ದೇವಾಲಯದ ಭಕ್ತರಿಂದ ಭಜನಾ ಸೇವೆ ನಡೆಯಿತು.

ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.




ಇವುಗಳನ್ನೂ ನೋಡಿರಿ:

ಆಂಜನೇಯನಿಗೆ ಒಣಹಣ್ಣುಗಳ ಅಲಂಕಾರ  

ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದ ವೆಂಕಟೇಶ್ವರ
ಶರನ್ನವರಾತ್ರಿ: ತ್ರಿಮೂರ್ತಿಗಳಿಗೆ ವಿವಿಧಾಲಂಕಾರ
ಶರನ್ನವರಾತ್ರಿ: ವಿಭೂತಿಯಲ್ಲಿ ಮಿಂದೆದ್ದ ಹನುಮ
ಶರನ್ನವರಾತ್ರಿ: ಮಹಾಗಣಪತಿಗೆ ಕುಂಕುಮ ಅಲಂಕಾರ
ಶರನ್ನವರಾತ್ರಿ ೨೦೨೬: ಉತ್ಸವದ ಮೊದಲ ದಿನ

Saturday, October 17, 2026

ವಿಭೂತಿ, ಶ್ರೀಗಂಧ, ಕುಂಕುಮ ಅಲಂಕಾರ

 ವಿಭೂತಿ, ಶ್ರೀಗಂಧ, ಕುಂಕುಮ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಏಳನೇ ದಿನವಾದ ಶನಿವಾರ (೧೭ಅಕ್ಟೋಬರ್‌ ೨೦೨೬) ಬಾಲಾಜಿ ಮಹಾಗಣಪತಿಗೆ ವಿಭೂತಿ, ವೆಂಕಟೇಶ್ವರನಿಗೆ ಶ್ರೀಗಂಧ ಮತ್ತು ಅಭಯ ಆಂಜನೇಯ ಸ್ವಾಮಿಗೆ ಕುಂಕುಮ  ಅಲಂಕಾರ ಮಾಡಲಾಯಿತು.

ಶ್ರೀ ನಾಗೇಶ್ ರಾಘವಯ್ಯ, ಶ್ರೀಮತಿ ಸರಸ್ವತಿ ಮತ್ತು ಕುಟುಂಬದವರು ಮತ್ತು ವೆಂಕಟೇಶ್ವರ ಸ್ವಾಮಿಗೆ  ಶ್ರೀಗಂಧದ ಅಲಂಕಾರ ಸೇವೆ ಮಾಡಿದರೆ, ಶ್ರೀ ಚಂದ್ರಶೇಖರ್, ಶ್ರೀಮತಿ ಅನುರಾಧಾ ಮತ್ತು ಕುಟುಂಬದವರು ಬಾಲಾಜಿ ಮಹಾಗಣಪತಿಗೆ ವಿಭೂತಿ ಅಲಂಕಾರ ಹಾಗೂ ಅಭಯ ಆಂಜನೇಯನಿಗೆ ಕುಂಕುಮ ಅಲಂಕಾರವನ್ನು ಸಲ್ಲಿಸಿದರು.

ಶ್ರೀ ಕೃಷ್ಣೋಜಿ ರಾವ್‌ ಮತ್ತು ಕುಟುಂಬದವರಿಂದ ಪುಷ್ಪಾಲಂಕಾರ, ಶ್ರೀ ದಾಗಾ ಮತ್ತು ಕುಟುಂಬದವರಿಂದ ಪ್ರಸಾದ ಸೇವೆ ಮತ್ತು ನಿಖಲ್‌ ಮತ್ತು ಕುಟುಂಬದವರಿಂದ ಆಂಜನೇಯನಿಗೆ ವಡಾಹಾರ ಸೇವೆ ನಡೆಯಿತು.

ಇದೇ ಸಂದರ್ಭದಲ್ಲಿ ಲಕ್ಷ್ಮಿ ದೇವಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ದೇವಾಲಯದ ಭಕ್ತರಿಂದ ಭಜನಾ ಸೇವೆ ನಡೆಯಿತು.

ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


Friday, October 16, 2026

ಆಂಜನೇಯನಿಗೆ ಒಣಹಣ್ಣುಗಳ ಅಲಂಕಾರ

 ಆಂಜನೇಯನಿಗೆ ಒಣಹಣ್ಣುಗಳ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಆರನೇ ದಿನವಾದ ಶುಕ್ರವಾರ (೧೬ ಅಕ್ಟೋಬರ್‌ ೨೦೨೬) ಅಭಯ ಆಂಜನೇಯ ಸ್ವಾಮಿಗೆ ಒಣ ಹಣ್ಣುಗಳ ಅಲಂಕಾರ ಮಾಡಲಾಯಿತು.

ಶ್ರೀ ಎಚ್‌,ಆರ್.‌ ಸೇತೂರಾಂ- ಶ್ರೀಮತಿ ಶಾಂತಲಕ್ಷ್ಮಿ ಮತ್ತು ಕುಟುಂಬದವರು ಸ್ವಾಮಿಗೆ  ಒಣ ಹಣ್ಣುಗಳ ಅಲಂಕಾರ ಸೇವೆ ಮಾಡಿದರೆ, ಸೇತೂರಾಂ ಮತ್ತು ರವಿ ಚಂದ್ರನ್‌ ಕುಟುಂಬದವರು ಪ್ರಸಾದ ಸೇವೆಯನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಲಕ್ಷ್ಮಿ ದೇವಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ದೇವಾಲಯದ ಮಹಿಳಾ ಭಕ್ತರಿಂದ ಭಜನಾ ಸೇವೆ ನಡೆಯಿತು.

ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.





ಇವುಗಳನ್ನೂ ನೋಡಿರಿ:
ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದ ವೆಂಕಟೇಶ್ವರ
ಶರನ್ನವರಾತ್ರಿ: ತ್ರಿಮೂರ್ತಿಗಳಿಗೆ ವಿವಿಧಾಲಂಕಾರ
ಶರನ್ನವರಾತ್ರಿ: ವಿಭೂತಿಯಲ್ಲಿ ಮಿಂದೆದ್ದ ಹನುಮ
ಶರನ್ನವರಾತ್ರಿ: ಮಹಾಗಣಪತಿಗೆ ಕುಂಕುಮ ಅಲಂಕಾರ
ಶರನ್ನವರಾತ್ರಿ ೨೦೨೬: ಉತ್ಸವದ ಮೊದಲ ದಿನ

Thursday, October 15, 2026

ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದ ವೆಂಕಟೇಶ್ವರ

 ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದ ವೆಂಕಟೇಶ್ವರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ  ನಾಲ್ಕನೇ ದಿನವಾದ ಬುಧವಾರ (೧೪ ಅಕ್ಟೋಬರ್‌ ೨೦೨೬) ವೆಂಕಟೇಶ್ವರ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಲಾಯಿತು.

ಶ್ರೀ ಪಾರ್ಥಸಾರಥಿ ಮತ್ತು ಕುಟುಂಬ ಮತ್ತು ಸುಜಾತಾ ರೆಡ್ಡಿ ಮತ್ತು ಕುಟುಂಬದವರು ಸ್ವಾಮಿಗೆ ಬೆಣ್ಣೆ ಅಲಂಕಾರ ಸೇವೆ ಮಾಡಿದರೆ, ಕಿರಣ್‌ ಮತ್ತು ಕುಟುಂಬದವರು ಪ್ರಸಾದ ಸೇವೆಯನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಲಕ್ಷ್ಮಿ ದೇವಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ದೇವಾಲಯದ ಮಹಿಳಾ ಭಕ್ತರಿಂದ ಭಜನಾ ಸೇವೆ ನಡೆಯಿತು.

ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 




Wednesday, October 14, 2026

ಶರನ್ನವರಾತ್ರಿ: ತ್ರಿಮೂರ್ತಿಗಳಿಗೆ ವಿವಿಧಾಲಂಕಾರ

 ಶರನ್ನವರಾತ್ರಿ: ತ್ರಿಮೂರ್ತಿಗಳಿಗೆ ವಿವಿಧಾಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ  ನಾಲ್ಕನೇ ದಿನವಾದ ಬುಧವಾರ (೧೪ ಅಕ್ಟೋಬರ್‌ ೨೦೨೬) ತ್ರಿಮೂರ್ತಿಗಳಿಗೆ ವಿವಿಧ ಅಲಂಕಾರ ಮಾಡಲಾಯಿತು.

ಶ್ರೀ ಬಾಲಾಜಿ ಮಹಾಗಣಪತಿ ಹಣ್ಣುಗಳ ಅಲಂಕಾರದಲ್ಲಿ, ಶ್ರೀ ವೆಂಕಟೇಶ್ವರನು ನವಧಾನ್ಯ ಅಲಂಕಾರದಲ್ಲಿ, ಶ್ರೀ ಅಭಯ ಆಂಜನೇಯ ಸ್ವಾಮಿ ತರಕಾರಿ ಅಲಂಕಾರದಲ್ಲಿ ಗಮನ ಸೆಳೆದರು.

ಶ್ರೀ ಮುನಿರಾಜು ಮತ್ತು ಕುಟುಂಬದವರು ಮೂರೂ ದೇವರಿಗೆ ಅಲಂಕಾರ ಸೇವೆಯನ್ನು ಹಾಗೂ ಪ್ರದೀಪ ಶಾಸ್ತ್ರಿ  ಮತ್ತು ಕುಟುಂಬದವರು ಪ್ರಸಾದ ಸೇವೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಕೆಂಪೇಗೌಡ ಬಡಾವಣೆಯ ಶ್ರೀ ಸತೀಶ ಅವರು ದೇವರಿಗೆ ಹೊಸ ಒಡವೆಗಳನ್ನು ಸಮರ್ಪಿಸಿದರು.

ಇದೇ ಸಂದರ್ಭದಲ್ಲಿ ಭಕ್ತರಿಂದ ಭಜನೆ, ಲಕ್ಷ್ಮಿ ದೇವಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.

ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 



Tuesday, October 13, 2026

ಶರನ್ನವರಾತ್ರಿ: ವಿಭೂತಿಯಲ್ಲಿ ಮಿಂದೆದ್ದ ಹನುಮ

 ಶರನ್ನವರಾತ್ರಿ: ವಿಭೂತಿಯಲ್ಲಿ ಮಿಂದೆದ್ದ ಹನುಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ  ಮೂರನೇ ದಿನವಾದ ಮಂಗಳವಾರ (೧೩ ಅಕ್ಟೋಬರ್‌ ೨೦೨೬) ಅಭಯ ಆಂಜನೇಯಸ್ವಾಮಿಗೆ ವಿಭೂತಿ ಅಲಂಕಾರ ಮಾಡಲಾಯಿತು.

ಶ್ರೀ ಮಧು ನಾಯರ್ ಮತ್ತು ಕುಟುಂಬದವರು ಅಲಂಕಾರ ಸೇವೆಯನ್ನು ಹಾಗೂ ಶಾರದಾ ಮತ್ತು ಕುಟುಂಬದವರು ಪ್ರಸಾದ ಸೇವೆಯಲ್ಲಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಲಕ್ಷ್ಮಿ ದೇವಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.

ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.



ಇವುಗಳನ್ನೂ ಓದಿರಿ:

ಶರನ್ನವರಾತ್ರಿ: ಮಹಾಗಣಪತಿಗೆ ಕುಂಕುಮ ಅಲಂಕಾರ

Advertisement