Showing posts with label ಪ್ರಕಾಶವಾಣಿ. Show all posts
Showing posts with label ಪ್ರಕಾಶವಾಣಿ. Show all posts

Monday, June 15, 2020

ಇದು 'ಪ್ರಕಾಶವಾಣಿ' ವರ್ಕ್ ಫ್ರಮ್ ಹೋಮ್..?

ಇದು ಪ್ರಕಾಶವಾಣಿ

ವರ್ಕ್ ಫ್ರಮ್ ಹೋಮ್..?

ಪ್ರಕಾಶವಾಣಿ’ ಈ ಬಾರಿ ‘ವರ್ಕ್ ಫ್ರಮ್ ಹೋಮ್’ ಕಷ್ಟ ಸುಖವನ್ನು ಬಿಚ್ಚಿಟ್ಟಿದೆ.

ಈ ' ವರ್ಕ್ ಫ್ರಮ್ ಹೋಮ್ ' ಅನುಭವ ಕೇಳಿದ ಮೇಲೆ ನೀವು ಮನೆಯಿಂದಲೇ 'ಪ್ರಕಾಶವಾಣಿ-11  ಫಾರ್ವರ್ಡ್ ಮಾಡುವ ಕೆಲಸ ಮಾಡಬಹುದು ಎಂದು ಹೆಚ್ ಆರ್ ಡಿ,  ವಾಟ್ಸ್ಯಾಪ್ ತಿಳಿಸಿದೆ.🙏 

ಪ್ರಕಾಶ ಶೆಟ್ಟಿ ಅವರ ‘ವರ್ಕ್ ಫ್ರಮ್ ಹೋಮ್ ಗೆಳೆಯ ಬಿಚ್ಚಿಟ್ಟ ಕಥೆಯನ್ನು ಕೇಳಲು ಮೇಲಿನ ಚಿತ್ರ/ ಕೆಳಗೆ ಕ್ಲಿಕ್ ಮಾಡಿರಿ.

https://youtu.be/GEU57dEeW-o

Thursday, June 11, 2020

ಪ್ರಕಾಶವಾಣಿ ಪುರಾಣ ಕತೆ!

ಪ್ರಕಾಶವಾಣಿ

ಪುರಾಣ ಕತೆ!

ಪ್ರಕಾಶವಾಣಿ ದಿಢೀರನೆ 'ವರ್ತಮಾನ'ದಿಂದ 'ಭೂತ'ಕ್ಕೆ ಹೋಗಿದೆ…

ಹೌದು..  ಮತ್ತೆ ಇವನದ್ದು ಎಂಥಾ ಪುರಾಣ ಅಂದುಕೊಳ್ಳುವವರಿಗೆ ಪ್ರಕಾಶ ಶೆಟ್ಟಿಯವರು ವಾರ ಪುರಾಣ ಕತೆ  ಹೇಳುವುದಕ್ಕೇ ಬಂದಿದ್ದಾರೆ.

ಕೆಳಗೆ ಕ್ಲಿಕ್  ಮಾಡುವ ಮೂಲಕ ಪುರಾಣ ಶ್ರವಣ ಮಾಡುವಂಥವರಾಗಿ, ಇತರರಿಗೂ ಕೇಳಿಸುವಂಥವರಾಗಿ-


Sunday, May 24, 2020

ಪ್ರಕಾಶವಾಣಿ ....! ‘ಸೆವೆನ್ ಟು ಸೆವೆನ್ ಬದುಕು’..

ಪ್ರಕಾಶವಾಣಿ ....!
ಸೆವೆನ್ ಟು ಸೆವೆನ್ ಬದುಕು’..

ಪ್ರಕಾಶವಾಣಿ’ ಮತ್ತೆ ಹಾಜರು... ಅಂತೂ ಕೊರೋನಾ ಲಾಕ್ ಡೌನ್ ಸಡಿಲಿಕೆ ಆಯಿತಲ್ಲ ಅಂತ ಪ್ರಕಾಶ್ ಶೆಟ್ಟಿ ಅವರು ಬೀದಿಗೆ ಇಳಿದರು
ಬೆನ್ನಿಗೆ ಬಿದ್ದ ಕರಿಯಪ್ಪನ ಜೊತೆಗೆ ಅವರ ಮಾತು ಮೊದಲಾಯಿತು.

ವಾಹ್ ! ಅದೆಂಥ ಮಾತುಅದೆಂಥ ಕಥೆ?

ತಿಳಿಯಬೇಕೆಂದರೆ  ಕೆಳಗೆ ಕ್ಲಿಕ್ ಮಾಡಿ...


Wednesday, May 20, 2020

ಪ್ರಕಾಶವಾಣಿ ' ಪ್ಯಾಕೇಜ್..

ಪ್ರಕಾಶವಾಣಿ '  ಪ್ಯಾಕೇಜ್..
ಕೊರೋನಾ  ದಿಗ್ಬಂಧನ (ಲಾಕ್ ಡೌನ್)  ಪರಿಣಾಮವಾಗಿ ತೊಂದರೆಗೆ ಒಳಗಾದವರ ಸಾಂತ್ವನಕ್ಕಾಗಿ ಕೇಂದ್ರ ಸರ್ಕಾರ ‘ಸಾಂತ್ವನ ಪ್ಯಾಕೇಜ್’ ಪ್ರಕಟಿಸಿದೆ.

ಆದರೆ  ಅದು  ಪ್ರಕಟಿಸಬಹುದಾದ ಕೆಲವೊಂದು ಪ್ಯಾಕೇಜುಗಳನ್ನು ಮರೆತಿದೆ.

ಪ್ರಕಾಶ್ ಶೆಟ್ಟಿ ಅವರು ಅವುಗಳನ್ನು ನೆನಪಿಸುವ ಕೆಲಸ ಮಾಡಿದ್ದಾರೆ.

ಪ್ರಕಾಶರು ‘ಪ್ರಕಾಶ’ ಬೀರಿದ ಕೆಲವೊಂದು  ಪ್ಯಾಕೇಜುಗಳ ವಿವರ ಈ ಬಾರಿಯ ಪ್ರಕಾಶವಾಣಿಯಲ್ಲಿ ಇದೆ.

ಕೆಳಗೆ ಕ್ಲಿಕ್  ಮಾಡಿ ಕೇಳಿಕೊಳ್ಳುವಂಥವರಾಗಿ:


Monday, May 4, 2020

‘ಪ್ರಕಾಶವಾಣಿ’ ಕೇಳಿದಿರಾ? ಮದ್ಯ ಅಂತರ ಕಾಪಾಡಿಕೊಂಡವರು..!

ಪ್ರಕಾಶವಾಣಿ  ಕೇಳಿದಿರಾ?
ಮದ್ಯ ಅಂತರ ಕಾಪಾಡಿಕೊಂಡವರು..!
ಕೊರೋನಾವೈರಸ್ ವಿರುದ್ಧದ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್ ) ಮೂರನೇ ಆವೃತ್ತಿ ಆರಂಭವಾಗಿದೆ.  ಕೆಂಪುಕಿತ್ತಳೆಹಸಿರು ವಲಯಗಳನ್ನು ಸೃಷ್ಟಿಸಿಹಲವಾರು ನಿರ್ಬಂಧಗಳನ್ನು ಸಡಿಲಿಸಿ ಸರ್ಕಾರ  ಆದೇಶಗಳನ್ನು ಹೊರಡಿಸಿದ್ದರೂ,  ದೇಶಾದ್ಯಂತ ಬಹಳಷ್ಟು ಸದ್ದು ಮಾಡುತ್ತಿರುವುದು ಕುಡುಕರ ಸುದ್ದಿ.
ದಿನ ಮುಂಚಿತವಾಗಿಯೇಸಾಲುಗಟ್ಟಿ ಮದ್ಯದಂಗಡಿಗಳ ಮುಂದೆ ನಿಂತವರು,  ಸಾಲಿನಲ್ಲಿ ‘ಗಟ್ಟಿ’ ಇಲ್ಲದಿದ್ದವರು ಕುಸಿದು ಬಿದ್ದದ್ದುಮದ್ಯದಂಗಡಿಗಳು ದೀಪಾರತಿ ಮಾಡಿದ್ದು ಇತ್ಯಾದಿ ವರದಿಗಳ ಮಧ್ಯೆಸಾಮಾಜಿಕ ಅಂತರ ಮರೆತು ಮುಗಿಬಿದ್ದ ಕುಡುಕರನ್ನು ನಿಯಂತ್ರಿಸಲಾಗದೆ ದೆಹಲಿಯಲ್ಲಿ ಅಂಗಡಿಗಳನ್ನೇ ಮುಚ್ಚಿಸಿದ ವರ್ತಮಾನ ಬಂದರೆಕೆಲವೆಡೆಗಳಲ್ಲಿ ಕುಡುಕರು ‘ಶಿಸ್ತಿನ’ ಸೈನಿಕರಂತೆ ನಿಂತ ಚಿತ್ರಗಳೂ ವಾಟ್ಸಪ್ಟ್ವಿಟ್ಟರುಗಳಲ್ಲಿ ಹರಿದಾಡುತ್ತಿವೆ
  ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕುಡುಕರ ಶಿಸ್ತಿನ ಚಿತ್ರವೊಂದನ್ನು ಇಲ್ಲಿ ಗಮನಿಸಬಹುದು(ಚಿತ್ರ: ಶ್ರೀಪ್ರಕಾಶ, ವಿಟ್ಲ ಸುದ್ದಿಗಳು)

ಕೊರೋನಾವೈರಸ್  ಸೋಂಕಿನಿಂದಾಗಿ  ಗೃಹ ಬಂಧನಕ್ಕೆ ಒಳಗಾಗಿರುವ ಮಂದಿಗೆ  ಕಾಲ ಕಳೆಯಲುಪ್ರಕಾಶವಾಣಿಆರಂಭಿಸಿರುವ ಹಿರಿಯ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರು ಬಗ್ಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಗೊತ್ತೇ?

ಕೇಳಿಸಿಕೊಳ್ಳಿ. ಇದು ಮೂರನೇ ಲಾಕ್ ಡೌನ್ ಗೆ ಐದನೇ ಪ್ರಕಾಶವಾಣಿ. ‘ಮದ್ಯ ಅಂತರ ಕಾಪಾಡಿಕೊಂಡವರು ಸಂಚಿಕೆಯ ವಿಷಯ ವಿಶೇಷ ಅಂದಿದ್ದಾರೆ. ಪ್ರಕಾಶ್.

ಕೆಳಗೆ ಕ್ಲಿಕ್ ಮಾಡಿ ಪ್ರಕಾಶವಾಣಿ’ ಕೇಳಿಸಿಕೊಳ್ಳಿ.  ನಿಮ್ಮ ಅನಿಸಿಕೆಯನ್ನು ಪ್ರತಿಕ್ರಿಯೆಯಲ್ಲಿ  ನಮೂದಿಸಿ

(ಹಿಂದಿನ ಪ್ರಕಾಶವಾಣಿ ಕೇಳಬೇಕಿದ್ದರೆ  ಇಲ್ಲಿ  ಕ್ಲಿಕ್  ಮಾಡಿರಿ)

-ಉದಯನೆ

Tuesday, April 28, 2020

‘ಪ್ರಕಾಶವಾಣಿ’ ಕೇಳಿದಿರಾ?

‘ಪ್ರಕಾಶವಾಣಿ’  ಕೇಳಿದಿರಾ?
ಕೊರೋನಾವೈರಸ್  ಸೋಂಕಿನಿಂದಾಗಿ  ಗೃಹ ಬಂಧನಕ್ಕೆ ಒಳಗಾಗಿರುವ ಮಂದಿಗೆ  ಕಾಲ ಕಳೆಯಲು ಏನಾದರೂ ಬೇಕು.  ಅದು ಹೊಸ ಕಲ್ಪನೆಯಾಗಿದ್ದರೆ ಬಹಳ ಖುಷಿ. ತಮ್ಮ ವ್ಯಂಗ್ಯ ಚಿತ್ರಗಳ ಮೂಲಕ  ತರಂಗ, ಮುಂಗಾರು, ಪ್ರಜಾಪ್ರಭುತ್ವ, ಟೈಮ್ಸ್ ಆಫ್ ಡೆಕ್ಕನ್,ವೀಕ್,  ಪ್ರಜಾವಾಣಿ ಹೀಗೆ ಹಲವಾರು ಪತ್ರಿಕೆಗಳಲ್ಲಿ ಮಾತ್ರವೇ ಅಲ್ಲದೆ  ತಮ್ಮದೇ ವಾರೆಕೋರೆ  ಪತ್ರಿಕೆಯ ಮೂಲಕವೂ  ಗಮನ ಸೆಳೆದಿದ್ದ  ಪ್ರಕಾಶ್ ಶೆಟ್ಟಿ  ಅವರಿಗೆ  ಕೋರೋನಾ ಗೃಹ ಬಂಧನವು  ಜನರನ್ನು ತಲುಪಲು ಹೊಸ ಮಾರ್ಗವನ್ನು ತೋರಿಸಿಕೊಟ್ಟಿದೆ.

ಅದುವೇಪ್ರಕಾಶವಾಣಿ’.

ಪತ್ರಿಕೆಗಳಲ್ಲಿ ವ್ಯಂಗ್ಯ ಚಿತ್ರದ ಜೊತೆಗೆ  ಆಗೊಮ್ಮೆ ಈಗೊಮ್ಮೆ ವ್ಯಂಗ್ಯ ಬರಹಗಳನ್ನೂ ಬರೆಯುತ್ತಿದ್ದ ಪ್ರಕಾಶ  ಹಾಸ್ಯ ಚಿಂತನೆಗಳು ಇದೀಗ  ಪ್ರಕಾಶವಾಣಿಮೂಲಕ ನಿಮ್ಮ ಕಣ್ಣಿನ ಬದಲಿಗೆ ಮೆದುಳಿಗೆ ತಂಪರೆಯಲು ಸಜ್ಜಾಗಿವೆ.ಸಾಮಾನ್ಯವಾಗಿ ಪ್ರತಿ ಶನಿವಾರ ಬರುವ  ‘ಪ್ರಕಾಶವಾಣಿ  ವಾರದ ಕಂತು ಇಲ್ಲಿದೆ.  
ಕೆಳಗೆ
 ಕ್ಲಿಕ್ ಮಾಡಿ ಕೇಳಿಸಿಕೊಳ್ಳಿ

ನಿಮ್ಮ ಅನಿಸಿಕೆಯನ್ನು ಪ್ರತಿಕ್ರಿಯೆಯಲ್ಲಿ  ನಮೂದಿಸಿ.


Advertisement