Showing posts with label Isreal. Show all posts
Showing posts with label Isreal. Show all posts

Sunday, March 1, 2026

ಇರಾನ್ ಸುಪ್ರೀಂ ಲೀಡರ್ ಖಮೇನಿ ಹತ: 40 ದಿನ ಶೋಕಾಚರಣೆ

 ಇರಾನ್ ಸುಪ್ರೀಂ ಲೀಡರ್ ಖಮೇನಿ ಹತ: 40 ದಿನ ಶೋಕಾಚರಣೆ

ಟೆಹ್ರಾನ್: 1989 ರಿಂದ ಇಸ್ಲಾಮಿಕ್ ಗಣರಾಜ್ಯವನ್ನು ಮುನ್ನಡೆಸುತ್ತಿದ್ದ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ (86) ಕುಟುಂಬದ ಇತರ ಸದಸ್ಯರ ಜೊತೆಗೆ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ದಾಳಿಯಲ್ಲಿ  2026 ಫೆಬ್ರುವರಿ 28ರ ಶನಿವಾರ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಖಚಿತಪಡಿಸಿವೆ.

ಈ ಬೆಳವಣಿಗೆಯು ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಪ್ರಮುಖ ತಿರುವೆಂದು ಪರಿಗಣಿಸಲಾಗಿದೆ. 86 ವರ್ಷದ ಖಮೇನಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಇರಾನ್‌ನ ರಾಜಕೀಯ, ಮಿಲಿಟರಿ ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿದ್ದರು.

40 ದಿನಗಳ ರಾಷ್ಟ್ರೀಯ ಶೋಕಾಚರಣೆ

ಖಮೇನಿ ನಿಧನದ ಹಿನ್ನೆಲೆಯಲ್ಲಿ ಇರಾನ್ ಸರ್ಕಾರವು ದೇಶಾದ್ಯಂತ 40 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಅಮೆರಿಕ-ಇಸ್ರೇಲ್ ದಾಳಿಯಲ್ಲಿ ನಾಯಕನ ಸಾವಿನ ನಂತರ ಇಡೀ ಇಸ್ಲಾಮಿಕ್ ಗಣರಾಜ್ಯದಲ್ಲಿ ಅಧಿಕೃತ ಶೋಕದ ಅವಧಿ ಪ್ರಾರಂಭವಾಗಿದೆ ಎಂದು ವರದಿಯಾಗಿದೆ.

1989 ರಿಂದ ಇರಾನ್‌ನ ಸಾರ್ವಭೌಮತ್ವದ ಸಂಕೇತವಾಗಿದ್ದ ಖಮೇನಿ ಅವರ ನಿಧನವು ದೇಶವನ್ನು ಸೂಕ್ಷ್ಮ ಸಂಕ್ರಮಣ ಹಂತಕ್ಕೆ ತಳ್ಳಿದೆ.

ಇತರ ಹಲವರ ಸಾವು

ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸಂಘಟಿತ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಜೊತೆಗೆ ಇತರ ನಾಯಕರಾದ ಶಮ್ಖಾನಿ ಮತ್ತು ಪಾಕ್‌ಪೋರ್ ಹತರಾಗಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಇರಾನ್ ಸಶಸ್ತ್ರ ಪಡೆಗಳ ಇತರ ಹಿರಿಯ ಕಮಾಂಡರ್‌ಗಳು ಸಹ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಖಮೇನಿ ಸ್ಥಾನಕ್ಕೆ ನೂತನ ನಾಯಕ

ಈ ಮಧ್ಯೆ, ಅಯತೊಲ್ಲ ಅಲಿ ಖಮೇನಿ ಸ್ಥಾನಕ್ಕೆ ಹಂಗಾಮಿಯಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಅವರನ್ನು ನೇಮಕ ಮಾಡಲಾಗಿದೆ. ಅರಾಫಿ ಅವರು ಗಾರ್ಡಿಯನ್‌ ಕೌನ್ಸಿಲಿನ ಧರ್ಮಗುರು ಎಂದು ವರದಿಗಳು ಹೇಳಿವೆ.

ಇರಾನ್ ಎಚ್ಚರಿಕೆ: ತನ್ನ ಉನ್ನತ ನಾಯಕರ ಹತ್ಯೆಗೆ ಪ್ರತಿಕ್ರಿಯೆಯಾಗಿ, ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸುವುದಾಗಿ ಇರಾನ್ ಘೋಷಿಸಿದೆ. ಇದನ್ನು "ಬಲವಾದ ಮತ್ತು ನಿರ್ಣಾಯಕ ಪ್ರತಿಕ್ರಿಯೆ" ಎಂದು ಇರಾನ್ ಅಧಿಕಾರಿಗಳು ಬಣ್ಣಿಸಿದ್ದಾರೆ.

ದಾಳಿ ವಿಡಿಯೋ ಬಿಡುಗಡೆ

ಅಯತೊಲ್ಲಾ ಅಲಿ ಖಮೇನಿ ಮತ್ತು ಇತರರು ಇದ್ದ ಸ್ಥಳದ ಮೇಲಿನ ವಾಯುದಾಳಿಯ ವಿಡಿಯೋವನ್ನು ಇಸ್ರೇಲಿ ವಾಯುಪಡೆ ಬಿಡುಗಡೆ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  ಆ ವಿಡಿಯೋ ಇಲ್ಲಿದೆ.

ಡೊನಾಲ್ಡ್ ಟ್ರಂಪ್ ಅವರಿಂದ ಕಠಿಣ ಎಚ್ಚರಿಕೆ

ಇರಾನ್‌ ಎಚ್ಚರಿಕೆಯ ಕುರಿತು ಕುರಿತು ಡೊನಾಲ್ಡ್ ಟ್ರಂಪ್ ತಮ್ಮ 'ಟ್ರುತ್ ಸೋಶಿಯಲ್' (Truth Social) ಖಾತೆಯಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ:

"ಇರಾನ್ ಇಂದು ಹಿಂದೆಂದಿಗಿಂತಲೂ ಕಠಿಣವಾಗಿ ದಾಳಿ ಮಾಡುವುದಾಗಿ ಹೇಳಿಕೊಂಡಿದೆ. ಆದರೆ ಅವರು ಹಾಗೆ ಮಾಡದಿರುವುದು ಒಳಿತು. ಒಂದು ವೇಳೆ ಅವರು ದಾಳಿ ಮಾಡಿದರೆ, ನಾವು ಹಿಂದೆಂದೂ ಕಾಣದ ಅತಿದೊಡ್ಡ ಶಕ್ತಿಯೊಂದಿಗೆ ಅವರ ಮೇಲೆ ಪ್ರಹಾರ ಮಾಡುತ್ತೇವೆ!" ಎಂದು ಎಚ್ಚರಿಸಿದ್ದಾರೆ.

ಜಾಗತಿಕ ಪ್ರತಿಕ್ರಿಯೆ ಮತ್ತು ಭಾರತದ ಕಳವಳ

  • ಗಲ್ಫ್ ರಾಷ್ಟ್ರಗಳು: ಅಮೆರಿಕ-ಇಸ್ರೇಲ್ ನಡೆಸಿದ ಈ ದಾಳಿಯನ್ನು ಗಲ್ಫ್ ದೇಶಗಳು ಟೀಕಿಸಿವೆ ಮತ್ತು ತಕ್ಷಣವೇ ಸಂಘರ್ಷವನ್ನು ನಿಲ್ಲಿಸುವಂತೆ ಕರೆ ನೀಡಿವೆ.
  • ಯುರೋಪ್: ಹಲವು ಯುರೋಪಿಯನ್ ರಾಷ್ಟ್ರಗಳು ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ಒತ್ತಾಯಿಸಿವೆ ಮತ್ತು ಶೀಘ್ರದಲ್ಲೇ ತುರ್ತು ಸಭೆ ನಡೆಸುವ ಸಾಧ್ಯತೆಯಿದೆ.
  • ಭಾರತ: ಮಧ್ಯಪ್ರಾಚ್ಯದ ಪರಿಸ್ಥಿತಿಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿರುವ ಭಾರತ ಸರ್ಕಾರ, ಅಲ್ಲಿರುವ ತನ್ನ ನಾಗರಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಮತ್ತು ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸೂಚಿಸಿದೆ.

Saturday, August 30, 2025

ಇಸ್ರೇಲ್ ವೈಮಾನಿಕ ದಾಳಿಗೆ ಹೌತಿ ಪ್ರಧಾನ ಮಂತ್ರಿ ಬಲಿ

 ಇಸ್ರೇಲ್ ವೈಮಾನಿಕ ದಾಳಿಗೆ ಹೌತಿ ಪ್ರಧಾನ ಮಂತ್ರಿ ಬಲಿ

ನವದೆಹಲಿ: ಯೆಮೆನ್‌ನ ಬಂಡುಕೋರರ ನಿಯಂತ್ರಣದಲ್ಲಿರುವ ರಾಜಧಾನಿ ಸನಾದಲ್ಲಿ ೨೦೨೫ ಆಗಸ್ಟ್‌ ೩೦ರ ಶನಿವಾರ ನಡೆದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಅಲ್ಲಿಯ ಸರ್ಕಾರದ ಪ್ರಧಾನ ಮಂತ್ರಿ ಸಾವನ್ನಪ್ಪಿದ್ದಾರೆ ಎಂದು ಹೌತಿಗಳು ತಿಳಿಸಿದ್ದಾರೆ.

ಗುರುವಾರ ಸನಾದಲ್ಲಿ ನಡೆದ ಇಸ್ರೇಲಿ ದಾಳಿಯಲ್ಲಿ ಪ್ರಧಾನಿ ಅಹ್ಮದ್ ಅಲ್-ರಹಾವಿ ಮತ್ತು ಅವರೊಂದಿಗೆ ಹಲವಾರು ಮಂತ್ರಿಗಳು ಸಾವನ್ನಪ್ಪಿದ್ದಾರೆ ಎಂದು ಬಂಡುಕೋರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ದಾಳಿಯ ಬಗ್ಗೆ ಇಸ್ರೇಲ್ ಸೇನೆಯು "ಯೆಮೆನ್‌ನ ಸನಾ ಪ್ರದೇಶದಲ್ಲಿನ ಹೌತಿ ಭಯೋತ್ಪಾದಕ ಆಡಳಿತದ ಸೇನಾ ಗುರಿಯ ಮೇಲೆ ನಿಖರವಾಗಿ ದಾಳಿ ನಡೆಸಿದೆ" ಎಂದು ಹೇಳಿದೆ.

ಎಎಫ್‌ಪಿ ಪ್ರಕಾರ, "ನಾವು ನಮ್ಮ ಹೋರಾಟಗಾರ ಅಹ್ಮದ್ ಘಾಲೆಬ್ ನಾಸರ್ ಅಲ್-ರಹಾವಿ ಮತ್ತು ಅವರ ಹಲವಾರು ಸಹೋದ್ಯೋಗಿಗಳು ಹುತಾತ್ಮರಾಗಿದ್ದಾರೆ ಎಂದು ಘೋಷಿಸುತ್ತೇವೆ. ಅವರು ಇಸ್ರೇಲ್‌ನ ಕುಟಿಲ ಮತ್ತು ಕ್ರಿಮಿನಲ್ ಶತ್ರುಗಳಿಂದ ಗುರಿಯಾಗಿಸಲ್ಪಟ್ಟಿದ್ದಾರೆ" ಎಂದು ಹೌತಿಗಳ ಹೇಳಿಕೆ ತಿಳಿಸಿದೆ.

"ಪ್ರಧಾನಿಯವರ ಇತರ ಸಂಪುಟ ಸಹೋದ್ಯೋಗಿಗಳು ಕೂಡ ಗಾಯಗೊಂಡಿದ್ದು, ಗುರುವಾರ ಮಧ್ಯಾಹ್ನದಿಂದ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದಾರೆ" ಎಂದು ಹೇಳಿಕೆ ತಿಳಿಸಿದೆ.

ಅಲ್-ರಹಾವಿ ಅವರು ಆಗಸ್ಟ್ 2024ರಿಂದ ಹೌತಿ ನೇತೃತ್ವದ ಸರ್ಕಾರದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸರ್ಕಾರದ ನಿಯಮಿತ ಕಾರ್ಯಾಗಾರದ ವೇಳೆ ಅವರ ಮತ್ತು ಇತರ ಮಂತ್ರಿಗಳ ಮೇಲೆ ದಾಳಿ ಮಾಡಲಾಗಿದೆ. ಇಸ್ರೇಲ್ ಗಾಜಾ ಯುದ್ಧದ ನಂತರ ಮಾಡಿದ ದಾಳಿಗಳಲ್ಲಿ ಸತ್ತ ಉನ್ನತ ಮಟ್ಟದ ಅಧಿಕಾರಿ ಇವರೇ ಆಗಿದ್ದಾರೆ.

ಇಸ್ರೇಲ್ ಸೇನೆಯು ಗುರುವಾರ ಹೌತಿಗಳ ನಿಯಂತ್ರಣದಲ್ಲಿರುವ ಸನಾ ರಾಜಧಾನಿಯ ಮೇಲೆ ದಾಳಿ ನಡೆಸಿದೆ. ಇರಾನ್ ಬೆಂಬಲಿತ ಹೌತಿಗಳು 22 ತಿಂಗಳುಗಳಿಂದ ಇಸ್ರೇಲ್ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದಾಳಿ ನಡೆಸುತ್ತಿದ್ದಾರೆ ಮತ್ತು ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಗುರಿಯಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಹೌತಿಗಳ ಮೇಲೆ ದಾಳಿ ನಡೆಸುತ್ತಿದೆ. ಗಾಜಾ ಯುದ್ಧದ ನಡುವೆ ಪ್ಯಾಲೆಸ್ಟೀನಿಯನ್ನರಿಗೆ ಬೆಂಬಲವಾಗಿ ತಾವು ದಾಳಿ ನಡೆಸುತ್ತಿರುವುದಾಗಿ ಹೌತಿಗಳು ಹೇಳಿದ್ದಾರೆ. 

Wednesday, May 6, 2020

ಕೊರೋನಾವೈರಸ್ಸಿಗೆ ಇಸ್ರೇಲ್‌ನಿಂದ ಔಷಧ; ವಿಶ್ವಕ್ಕೆ ಹಂಚುವ ಭರವಸೆ

ಕೊರೋನಾವೈರಸ್ಸಿಗೆ  ಇಸ್ರೇಲ್‌ನಿಂದ ಔಷಧ;
ವಿಶ್ವಕ್ಕೆ ಹಂಚುವ ಭರವಸೆ
ಟೆಲ್ ಅವೀವ್/ ನವದೆಹಲಿ: ವಿಶ್ವಾದ್ಯಂತ ಮಾನವರನ್ನು ಹೈರಾಣಗೊಳಿಸಿರುವ ಕೊರೋನಾವೈರಸ್ಸಿಗೆ ಇಸ್ರೇಲ್ ವಿಜ್ಞಾನಿಗಳು ಔಷಧ ಅಭಿವೃದ್ಧಿ ಪಡಿಸಿದ್ದು, ಶೀಘ್ರದಲ್ಲೇ ನಾವು ಅದನ್ನು ವಿಶ್ವದ ಜೊತೆಗೆ ಹಂಚಿಕೊಳ್ಳಲಿದ್ದೇವೆ ಎಂದು ಇಸ್ರೇಲ್  ಪ್ರಕಟಿಸಿತು.

ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೋನ್ ಮಲ್ಕಾ ಅವರು ಬುಧವಾರ ಕೋವಿಡ್-೧೯ ಪ್ರತಿಕಾಯಗಳನ್ನು ಅಭಿವೃದ್ಧಿ ಪಡಿಸಿರುವ ಇಸ್ರೇಲಿನ ಸಾಧನೆ ಬಗ್ಗೆ ಪ್ರತಿಕ್ರಿಯಿಸುತ್ತಾ ತಾವು ಈ ಔಷಧದ ವಿವರಗಳಿಗಾಗಿ ಕಾದಿರುವುದಾಗಿ ನುಡಿದರು.

ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ, ನಾವು ಅತ್ಯಂತ ಮುಂದುವರೆದ ಹಂತದಲ್ಲಿ ಇದ್ದೇವೆ. ಹೌದು, ಖಂಡಿತವಾಗಿ, ನಾವು ಅದನ್ನು ವಿಶ್ವದ ಜೊತೆಗೆ ಹಂಚಿಕೊಳ್ಳಲಿದ್ದೇವೆ’ ಎಂದು ಮಲ್ಕಾ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಕೊರೋನಾವೈರಸ್ ಬಿಕ್ಕಟ್ಟು ಭಾರತ ಮತ್ತು ಇಸ್ರೇಲನ್ನು ಅತ್ಯಂತ ಸನಿಹಕ್ಕೆ ತಂದಿದೆ. ಕೊರೋನಾವೈರಸ್ ನಿಗ್ರಹದ ಉತ್ತಮ ವಿಧಾನಗಳನ್ನು ನಾವು ಪರಸ್ಪರ ಹಂಚಿಕೊಳ್ಳುತ್ತಿದ್ದೇವೆ ಮತ್ತು ಹೊಸ ಹೊಸ ಪ್ರಕ್ರಿಯೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದು ಅವರು ನುಡಿದರು.

ವಿಶ್ವಾದ್ಯಂತ ವಿಜ್ಞಾನಿಗಳು ಕೊರೋನಾ ವೈರಸ್ ಔಷಧ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಹಲವು ಕಡೆಗಳಲ್ಲಿ ಔಧದ ಪರೀಕ್ಷೆಗಳೂ ಆರಂಭವಾಗಿವೆ. ಕೊರೋನಾಕ್ಕೆ  ಸಂಬಂಧಿಸಿದಂತೆ ಸದ್ಯ ವಿಶ್ವಾದ್ಯಂತ ಸುಮಾರು ೧೦೦ಕ್ಕೂ ಅಧಿಕ ವ್ಯಾಕ್ಸಿನ್‌ಗಳು ಕ್ಲಿನಿಕ್ ಪೂರ್ವ ಪರೀಕ್ಷಾ ಹಂತದಲ್ಲಿವೆ.
ಇಂಗ್ಲೆಂಡ್
ಮತ್ತು ಅಮೆರಿಕದಲ್ಲಿ ಪ್ರತಿಯೊಂದು ಲಸಿಕೆಯನ್ನು ಮಾನವರ ಮೇಲೆ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಇದುವರೆಗೂ ಯಾವುದೇ ಪರಿಣಾಮಕಾರಿ ವ್ಯಾಕ್ಸಿನ್ ಸಿಕ್ಕಿಲ್ಲ.

ಈ ನಡುವೆ ಇಸ್ರೇಲ್ ವಿಜ್ಞಾನಿಗಳು ಕೊರೋನಾ ವೈರಸ್ ಔಷಧಿ ತಯಾರಿಕಾ ಪ್ರಕ್ರಿಯೆಯಲ್ಲಿ ಮಹತ್ವ ಯಶಸ್ಸು ಸಾಧಿಸಿದ್ದಾರೆ ಎಂದು ವರದಿಗಳು ಹೇಳಿವೆ. ಇಸ್ರೇಲ್ ಇನ್ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ಸಂಸ್ಥೆಯು ಕೊರೋನಾ ವೈರಸ್ ವಿರುದ್ಧ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಹೇಳಿದ್ದಾರೆ.

ಕೊರೋನಾ ವೈರಸ್ಸನ್ನು ಪ್ರತಿಕಾಯಗಳು ಹೇಗೆ ನಿವಾರಿಸಲಿವೆ ಎಂಬುದರ ಬಗ್ಗೆ ನಫ್ತಾಲಿ ಬೆನೆಟ್ ಮಾಹಿತಿಯನ್ನು ನೀಡಿದ್ದು, ’ಇಸ್ರೇಲಿನ  ಐಐಬಿಆರ್ ಸಂಸ್ಥೆಯಲ್ಲಿ ಲಸಿಕೆ ಅಭಿವೃದ್ಧಿಪಡಿಸುವ ಹಂತ ಈಗ ಪೂರ್ಣಗೊಂಡಿದೆ. ಐಐಬಿಆರ್ ಅಭಿವೃದ್ಧಿ ಪಡಿಸಿರುವ ಪ್ರತಿಕಾಯವು ಕೊರೋನಾ ವೈರಸ್ಸಿನ ವಿರುದ್ಧ ಮೊನೊಕ್ಲೋನಲ್ ರೀತಿಯಲ್ಲಿ ಆಕ್ರಮಣ ಮಾಡುತ್ತದೆ ಮತ್ತು ಅನಾರೋಗ್ಯ ಪೀಡಿತ ಜನರ ದೇಹದೊಳಗಿನ ಕೊರೋನಾವೈರಸ್ಸನ್ನು  ನಿರ್ಮೂಲನೆ ಮಾಡುತ್ತದೆ ಅಥವಾ ಕಾರ್ಯ ನಿರ್ವಹಿಸದಂತೆ ತಟಸ್ಥ ಗೊಳಿಸುತ್ತದೆ ಎಂದು ಬೆನೆಟ್ ಹೇಳಿದ್ದಾರೆ.

 
ಇದರಿಂದ ಈ ಮಾರಕ ವೈರಸ್ ದೇಹದ ಇನ್ನೊಂದು ಭಾಗಕ್ಕೆ ಅಥವಾ ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ ಎಂಬುದನ್ನು ನಾನು ನಿಖರವಾಗಿ ಹೇಳಬಲ್ಲೆ. ಸದ್ಯ ವಿಶ್ವಾದ್ಯಂತ ಇರುವ ವಿವಿಧ ಕಂಪನಿಗಳ ಜೊತೆಗೆ ಈ ಔಷಧಿಯ ಉತ್ಪಾದನೆಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆ ನಡೆಸಲಾಗುತ್ತಿದೆ ಎಂದು ಬೆನೆಟ್ ಹೇಳಿದ್ದಾರೆ.

Thursday, July 6, 2017

Another green revolution is possible with help of Israel.

Another green revolution is possible with help of Israel, PM Modi 

Jerusalem: Another Green Revolution is possible with the help of Isreal. PM Netanyahu and we agree that science, innovation and research is going to be the crux of our ties, said Prime Minister Narendra Modi here on Wednesday, 5th July 2017.
He was addressing the Indian Diaspore.  In the field of technology and defence also both countries can work together, He said.
Indian Government is making consistent efforts to double farmers' income by 2022, policies being formulated, Prime Minister said.
PM Netanyahu and we agree that science, innovation and research is going to be the crux of our ties Modi added.
 Prime Minister talked about soil health cards and ENAM scheme for formers. He explained how his government is working for the benefit of farmers.
Foreign investment is being done in India at a record pace.  Make in India has become a brand now, taking everyone by surprise, Modi said. adds.
Modi also talked about labour reforms. States have been asked to make changes in Factory Act so that women can work at night. The contribution of women will help in the development of the country, Prime Minister said. We are giving 26 weeks maternity leave to woman employees, Prime Ministe said.
Our ties with Israel are about mutual trust and friendship, He said. Earlier, Prime Minister Narendra Modi  held talks with his Israeli counterpart Benjamin Netanyahu on the second day of his landmark Israel visit, the first by an Indian premier.
Ahead of the restricted talks with Netanyahu, PM Modi called on Israeli President Reuven Rivlin and discussed ways to strengthen bilateral ties and how Israel's cutting-edge technology could help the 'Make in India' initiative.
PM Modi arrived in Tel Aviv yesterday for a three-day visit. He met Moshe, the Israeli boy who survived in the Mumbai Terror attack in 2009.

Wednesday, July 5, 2017

PM Modi in Land of Jews

PM Modi in Land of Jews

Tel Aviv: Narendra Modi on Tuesday became the first-ever Indian Prime Minister to step on Israeli soil, undertaking a 'ground breaking' visit and receiving an extraordinary welcome by the Jewish nation.
Israel rolled out a red carpet welcome as the Air India One aircraft landed at Tel Aviv's International Airport on a warm afternoon with Israeli Prime Minister Benjamin Netanyahu setting aside protocol and receiving PM Modi with a handshake and a hug. 
In his welcome address, Netanyahu said Israel has been waiting for a long time for this visit.
"Apka swagat hai mere dost. We have been waiting almost 70 years, in fact, because your's is a truly historic visit. It is the first time that an Indian Prime Minister is visiting Israel. We receive you with open arms. We love India. We admire your culture, your democracy and your commitment to progress," he said.
Recalling his first meeting with PM Modi three years ago at the United Nations, Netanyahu said both of them agreed to breakdown the remaining walls between India and Israel. 
"We shook each others' hand and forged a historic relationship. We met again in Paris and since then we have spoken many times on the phone. But I remember my friend what you said in that first meeting," he said.
"You said when it comes to India-Israel relations, the sky is the limit. But actually my friend the sky isn't the limit because today even our space programmes are working towards reaching even greater heights," the Israeli PM added.
He said that the ties between the talented and innovative peoples of both the countries is natural.
"It is so natural that we can ask what took so long for them to blossom. Well, it took a meeting of minds and hearts. it took a commitment of our governments we have that today," he also said.
Netanyahu further said in this visit PM Modi's 'Make in India' initiative meets his 'Make with India' policy.
"We are setting up a $40 million innovation fund as the seed for even greater cooperation on technology between us," he said, as per IANS.
Hailing PM Modi as a great leader of India and a great world leader, Netanyahu said, "Your visit to Israel is a testimony to that."
Speaking later, PM Modi said, "It is my honour to be the the first ever Indian Prime Minister to undertake this ground-breaking visit to Israel."
He said his visit was about the strength of the two societies and their strong partnership.
"Building a strong and resilient relationship with Israel will be my intent and focus. We have to secure our societies against the common threat of terrorism," PM Modi said.
"Together, we can do even more and even better (for India-Israel ties)," he added.
Noting that India is an old civilisation but a young nation, PM Modi said, "We have a talented and skilled youth, who are our driving force."
Describing Israel as an "important development partner", he said, "This is an exciting journey that we will undertake together, for the good of our people and our society," as per PTI.
PM Modi said his visit celebrates the strength of centuries-old links between the two societies and "based on these bonds, our partnership has mantained a strong and sustained upswing since the establishment of full relationship, diplomatic relations, 25 years ago." 
Earlier, the two leaders inspected a guard of honour by Israeli defence forces in honour of PM Modi.
Netanyahu introduced his ministers, officials, including the present and former ambassadors of Israel in India and his National Security Advisor.
From the airport, PM Modi visited the  Danziger flower farm in Moshav Mishmar Hashiva along with Netanyahu and Agriculture Minister Uri Ariel to learn about latest innovations and advancements in floriculture.
The farm, about 56 km from Jerusalem, is one of Israel's leading floriculture companies with approximately 80,000 square meters of state-of-the-art greenhouses specialising in reproduction of plants.
The farm named a breed of chrysanthemum after PM Modi.
He also visited the Yad Vashem Memorial Museum to honour the memory of the victims of the holocaust that counts among the greatest tragedies in human history.
The museum occupies over 4,200 square metres - mainly underground - and emphasises the experiences of the individual victims through original artifacts, survivor testimonies and personal possessions.
The Holocaust was the killing of nearly six million Jews, including some 1.5 million children, by Adolf Hitler's Nazi Germany. Though the persecution of Jews began in 1933, the mass murder was committed during the more than four years of World War II.

-Agencies

Advertisement