Showing posts with label Madhya Pradesh. Show all posts
Showing posts with label Madhya Pradesh. Show all posts

Saturday, December 26, 2020

‘ಲವ್ ಜಿಹಾದ್’ ಕಾನೂನಿಗೆ ಮಧ್ಯಪ್ರದೇಶ ಅಸ್ತು

 ‘ಲವ್ ಜಿಹಾದ್ ಕಾನೂನಿಗೆ ಮಧ್ಯಪ್ರದೇಶ ಅಸ್ತು

ಭೋಪಾಲ್: ಉತ್ತರ ಪ್ರದೇದ ಹಾದಿಯಲ್ಲಿಯೇ ಮುಂದಕ್ಕೆ ಸಾಗಿರುವ ಮಧ್ಯಪ್ರದೇಶವು 2020 ಡಿಸೆಂಬರ್ 26ರ ಶನಿವಾರ  ಲವ್ ಜಿಹಾದ್ ನಿಷೇಧ ಕಾಯ್ದೆಗೆ ತನ್ನ ಒಪ್ಪಿಗೆ ನೀಡಿದೆ. ಬಲವಂತದ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಮಸೂದೆಗೆ ಮಧ್ಯಪ್ರದೇಶ ಸಚಿವ ಸಂಪುಟವು ತನ್ನ ಸಮ್ಮತಿಯ ಮುದ್ರೆಯನ್ನು ಒತ್ತಿದೆ.

"ಹೊಸ ಮಸೂದೆಯ ಅಡಿಯಲ್ಲಿ, ಯಾರೊಬ್ಬರ ಮೇಲೆ ಧಾರ್ಮಿಕ ಮತಾಂತರವನ್ನು ಒತ್ತಾಯಿಸುವುದು ಒಂದರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ ೨೫ ಸಾವಿರ ರೂ.ಗಳ ದಂಡಕ್ಕೆ ಕಾರಣವಾಗುತ್ತದೆ. ಅಪ್ರಾಪ್ತ ವಯಸ್ಕ, ಮಹಿಳೆ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವ್ಯಕ್ತಿಯನ್ನು ಬಲವಂತವಾಗಿ ಮತಾಂತರಗೊಳಿಸುವವರಿಗೆ ದುಪ್ಪಟ್ಟು ಜೈಲು ಶಿಕ್ಷೆ ಅಂದರೆ ಕನಿಷ್ಠ ೨ರಿಂದ ೧೦ ವರ್ಷಗಳ ಸೆರೆವಾಸ ಮತ್ತು ಕನಿಷ್ಠ ೫೦,೦೦೦ ರೂಪಾಯಿಗಳ ದಂಡ ವಿಧಿಸಲಾಗುವುದು ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರ ಸಂಪುಟ ಸಭೆಯ ಬಳಿಕ ಹೇಳಿದರು.

ಸಂಪುಟದ ಅನುಮೋದನೆ ಪಡೆದಿರುವ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಹೊಸ ಕಾಯ್ದೆಯು ಮಧ್ಯಪ್ರದೇಶದಲ್ಲಿ ಈಗ ಜಾರಿಯಲ್ಲಿರುವ ಮಧ್ಯಪ್ರದೇಶ ಧರ್ಮ ಸ್ವಾತಂತ್ರ್ಯ ಅಧಿಕಾರ ೧೯೬೮ರ ಕಾನೂನನ್ನು ಬದಲಾಯಿಸಲು ಸಜ್ಜಾಗಿದೆ.

ವರದಿಗಳ ಪ್ರಕಾರ ೧೯೬೮ ಕಾನೂನು ಹಳೆಯದಾಗಿದ್ದು, ಬಲವಂತದ ಮತಾಂತರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಕಳೆದ ೫೦ ವರ್ಷಗಳ ಅನುಭವದ ಬೆಳಕಿನಲ್ಲಿ ಅದನ್ನು ಪುನರ್ರಚಿಸಲಾಗುತ್ತಿದೆ ಎಂದು ಬಿಜೆಪಿ ಸರ್ಕಾರ ಪ್ರತಿಪಾದಿಸಿದೆ.

ವಿಶೇಷವಾಗಿ ವಿವಾಹದ ನೆಪದಲ್ಲಿ ಧಾರ್ಮಿಕ ಮತಾಂತರಗಳನ್ನು ಒತ್ತಾಯಿಸುವಂತ ಪ್ರಕರಣಗಳಲ್ಲಿ ಅಂತಹ ಅಪರಾಧಗಳನ್ನು ನಿಷೇಧಿಸಲು ಸುಧಾರಿತ ವ್ಯಾಖ್ಯಾನಗಳು ಮತ್ತು ಹೆಚ್ಚಿನ ದಂಡಗಳ ಅಗತ್ಯವಿದೆ.

ಆದರೆ, ಉತ್ತರ ಪ್ರದೇಶದ ಕಾನೂನುಬಾಹಿರ ಧಾರ್ಮಿಕ ಮತಾಂತರದ ಸುಗ್ರೀವಾಜ್ಞೆಗೆ ಹೋಲಿಸಿದರೆ, ಮಧ್ಯಪ್ರದೇಶದ ಕಾನೂನಿನ ಪ್ರಕಾರ, ಸ್ವ ಇಚ್ಛೆಯಿಂದ ಮತಾಂತರಗೊಳ್ಳುವ ವ್ಯಕ್ತಿ ಅದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ವರದಿ ಮಾಡಬೇಕಾಗಿಲ್ಲ. ಅಂತಹ ಮತಾಂತರಕ್ಕಾಗಿ ಒಬ್ಬ ವ್ಯಕ್ತಿಯು ಧಾರ್ಮಿಕ ಮುಖ್ಯಸ್ಥರನ್ನು ಸಂಪರ್ಕಿಸಿದರೆ, ಸಂಬಂಧಪಟ್ಟ ಧಾರ್ಮಿಕ ಮುಖ್ಯಸ್ಥ ಜಿಲ್ಲಾಡಳಿತಕ್ಕೆ ತಿಳಿಸಬೇಕಾಗುತ್ತದೆ.

ವ್ಯಕ್ತಿಯನ್ನು ಮತಾಂತರಗೊಳಿಸುವ ಉದ್ದೇಶದಿಂದ ಮಾತ್ರ ನಡೆಯುವ ಯಾವುದೇ ವಿವಾಹವನ್ನು ಉದ್ದೇಶಿತ ಶಾಸನದ ನಿಬಂಧನೆಗಳ ಅಡಿಯಲ್ಲಿ ಶೂನ್ಯ ಮತ್ತು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ ಎಂದು ಮಿಶ್ರ  ಹೇಳಿದರು.

ಮತಾಂತರಗೊಳ್ಳಲು ಇಚ್ಛಿಸುವವರು ಎರಡು ತಿಂಗಳ ಮೊದಲು ಜಿಲ್ಲಾಡಳಿತದ ಮುಂದೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿದೆ ಎಂದು ಅವರು ನುಡಿದರು.

Tuesday, November 17, 2020

‘ಲವ್ ಜಿಹಾದ್’ ವಿರುದ್ಧ ಮಧ್ಯಪ್ರದೇಶದಲ್ಲೂ ಕಾನೂನು

 ‘ಲವ್ ಜಿಹಾದ್’ ವಿರುದ್ಧ ಮಧ್ಯಪ್ರದೇಶದಲ್ಲೂ ಕಾನೂನು

ಭೋಪಾಲ್: ಬಿಜೆಪಿ ಆಳ್ವಿಕೆ ಇರುವ ಹರಿಯಾಣ ಮತ್ತು ಕರ್ನಾಟಕ ಸರ್ಕಾರಗಳುಲವ್ ಜಿಹಾದ್ವಿರುದ್ಧ ಕಾನೂನು ರೂಪಿಸುವ ಬಗ್ಗೆ ಪರಿಗಣಿಸುತ್ತಿರುವುದಾಗಿ ಪ್ರಕಟಿಸಿದ ವಾರಗಳ ಬಳಿಕ ಇದೀಗ ಮಧ್ಯಪ್ರದೇಶ ಸರ್ಕಾರ ಕೂಡಾ ಸಾಲಿಗೆ ಸೇರುತ್ತಿದ್ದು, ’ಲವ್ ಜಿಹಾದ್ ತಡೆಗಟ್ಟಲು ಕಾನೂನು ರೂಪಿಸುವ ಬಗ್ಗೆ ಯೋಜಿಸುತ್ತಿದೆಎಂದು ಪ್ರಕಟಿಸಿದೆ.

ಲವ್ ಜಿಹಾದ್ತಡೆಯಲು ಶೀಘ್ರದಲ್ಲೇ ಕಾನೂನನ್ನು ರೂಪಿಸುವ ಯೋಜನೆ ನಡೆಯುತ್ತಿದೆ, ಸದರಿ ಶಾಸನವು ಮತಾಂತರಗಳನ್ನು ಕಠಿಣವಾದ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲಿದೆ ಎಂದು ಸಂಸದ ಗೃಹ ಸಚಿವ ನರೋತ್ತಮ್ ಮಿಶ್ರಾ 2020 ನವೆಂಬರ್ 17ರ ಮಂಗಳವಾರ ಹೇಳಿದರು.

ಲವ್ ಜಿಹಾದ್ ಎನ್ನುವುದು ಬಲಪಂಥೀಯ ಗುಂಪುಗಳು ಹೇಳುವ ಪ್ರತಿಪಾದಿಸುವಫಿತೂರಿ ಸಿದ್ಧಾಂತವಾಗಿದ್ದು, ಇದರಲ್ಲಿ ಮುಸ್ಲಿಂ ಪುರುಷರು ಮುಸ್ಲಿಮೇತರ ಸಮುದಾಯಗಳಿಗೆ ಸೇರಿದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಇಸ್ಲಾಮಿಗೆ ಮತಾಂತರ ಮಾಡುವುದನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಆಪಾದನೆ ಇದೆ.

"ನಾವು ಮಧ್ಯಪ್ರದೇಶದ ಧರ್ಮ ಸ್ವಾತಂತ್ರ ಮಸೂದೆ, ೨೦೨೦ (ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಮಸೂದೆ, ೨೦೨೦) ಅನ್ನು ವಿಧಾನಸಭೆಯಲ್ಲಿ ಮಂಡಿಸಲು ಯೋಜಿಸುತ್ತಿದ್ದೇವೆಎಂದು ಮಿಶ್ರಾ ಹೇಳಿದರು. ಮಸೂದೆಯುಲವ್ ಜಿಹಾದ್ವಿಷಯವನ್ನು ಒಳಗೊಂಡಿರುತ್ತದೆ ಎಂದು ಅವರು ನುಡಿದರು.

ಕಾನೂನು ಪ್ರಕಾರ ಪೋಷಕರಿಂದ ಕಡ್ಡಾಯ ದೂರು ಅಗತ್ಯವಿರುತ್ತದೆ ಮತ್ತು ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುವುದರೊಂದಿಗೆ ಉದ್ದೇಶಿತ ಅಪರಾಧವನ್ನು ಅದು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುತ್ತದೆ.

ಬಲವಂತದ ಮತಾಂತರಕ್ಕೆ ಸೆರೆವಾಸದ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಮದುವೆಗಾಗಿ ಮತಾಂತರಕ್ಕೆ ಪ್ರಚೋದನೆ ನೀಡುವವರನ್ನು ಕೂಡಾ ಕಾಯ್ದೆಯ ವ್ಯಾಪ್ತಿಗೆ ತರಲಾಗುತ್ತದೆ. ಸ್ವ ಇಚ್ಚೆಯಿಂದ ಮದುವೆಯಾಗಲು ಬಯಸುವವರು ಮದುವೆಗಿಂತ ಒಂದು ತಿಂಗಳು ಮುಂಚಿತವಾಗಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.

ಮಸೂದೆಯ ಹೊಸ ನಿಬಂಧನೆಗಳು "ಬಲವಂತದ ಮತ್ತು ಮೋಸದಮದುವೆಯನ್ನು ನಿಷ್ಫಲ ಮತ್ತು ಅನೂರ್ಜಿತಗೊಳಿಸುತ್ತವೆ ಎಂದು ಸಚಿವರು ಹೇಳಿದರು.

ಲವ್ ಜಿಹಾದ್ಪ್ರಕರಣಗಳನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚೆಗೆ ಹೇಳಿದ್ದರು ಮತ್ತು ಅಂತಹ ಪ್ರಕರಣಗಳನ್ನು ತಡೆಗಟ್ಟುವ ಕ್ರಮಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು.

ಬಲವಂತದ ಮತಾಂತರದಲ್ಲಿ ಭಾಗಿಯಾಗಿರುವವರನ್ನು ತಮ್ಮರಾಮ್ ನಾಮ್ ಸತ್ಯಪ್ರಯಾಣಕ್ಕೆ ಕಳುಹಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘೋಷಿಸಿದ್ದರು. ’ಲವ್ ಜಿಹಾದ್ನಿಗ್ರಹಕ್ಕಾಗಿ ಮತ್ತು ನಿಟ್ಟಿನಲ್ಲಿ ಕಾನೂನು ರೂಪಿಸಲು ರಾಜ್ಯ ಸರ್ಕಾರ ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದರು.

Tuesday, November 3, 2020

ಕರ್ನಾಟಕ, ಮ.ಪ್ರ.ದಲ್ಲೂ ಮದುವೆಗಾಗಿ ಮತಾಂತರ ವಿರುದ್ಧ ಕಾನೂನು

 ಕರ್ನಾಟಕ, ಮ.ಪ್ರ.ದಲ್ಲೂ ಮದುವೆಗಾಗಿ ಮತಾಂತರ ವಿರುದ್ಧ ಕಾನೂನು

ನವದೆಹಲಿ: ’ಲವ್ ಜಿಹಾದ್ತಡೆಗಾಗಿ ಕಾನೂನು ರೂಪಿಸುವುದಾಗಿ ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಪ್ರಕಟಿಸಿದ ಬೆನ್ನಲ್ಲೇ ಕರ್ನಾಟಕ ಮತ್ತು ಮಧ್ಯಪ್ರದೇಶ ಕೂಡಾ ನಿಟ್ಟಿನಲ್ಲಿ ಸಾಗಿವೆ.

ಮದುವೆ ಸಲುವಾಗಿ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಕಾನೂನು ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ 2020 ನವೆಂಬರ್ 03ರ ಮಂಗಳವಾರ ಹೇಳಿದರು. ಇದೇ ಮಾದರಿಯ ಪ್ರಕಟಣೆಯನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಡಿದರು.

ಜಿಹಾದಿಗಳುರಾಜ್ಯದ ಮಹಿಳೆಯರ ಘನತೆಯನ್ನು ತೆಗೆದುಹಾಕಿದಾಗ ಸರ್ಕಾರ ಮೌನವಾಗಿರುವುದಿಲ್ಲ ಎಂದು ಕರ್ನಾಟಕ ಸಚಿವ ಸಿಟಿ ರವಿ ಹೇಳಿದರು.

ವಿವಾಹದ ಉದ್ದೇಶಕ್ಕಾಗಿ ಧರ್ಮವನ್ನು ಪರಿವರ್ತಿಸುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟ ಕೆಲವೇ ದಿನಗಳ ನಂತರ ಹೇಳಿಕೆ ಬಂದಿತು. ಹಿಂದೆ ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶಗಳುಲವ್ ಜಿಹಾದ್ವಿರುದ್ಧ ಕಾನೂನು ತರುವ  ಉದ್ದೇಶವನ್ನು ಪ್ರಕಟಿಸಿದ್ದವು.

"ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ಕರ್ನಾಟಕವು ಮದುವೆಗಾಗಿ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಲಿದೆ. ಜಿಹಾದಿಗಳು ನಮ್ಮ ಸಹೋದರಿಯರ ಘನತೆಯನ್ನು ತೆಗೆದುಹಾಕಿದಾಗ ನಾವು ಮೌನವಾಗಿರುವುದಿಲ್ಲಎಂದು ರವಿ ಟ್ವೀಟ್ ಮಾಡಿದ್ದಾರೆ. ಯಾವುದೇ ಮತಾಂತರದ ಕೃತ್ಯದಲ್ಲಿ ಭಾಗಿಯಾದ ಯಾರಾದರೂ ಕಠಿಣ ಮತ್ತು ತ್ವರಿತ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಅಕ್ಟೋಬರ್ ೩೧ ರಂದು ಅಲಹಾಬಾದ್ ಹೈಕೋರ್ಟ್ ತನ್ನ ಆದೇಶದಲ್ಲಿ ಕೇವಲ ವಿವಾಹದ ಉದ್ದೇಶದಿಂದ ನಡೆಯುವ ಧಾರ್ಮಿಕ ಮತಾಂತರವು ಮಾನ್ಯವಲ್ಲ ಎಂದು ಹೇಳಿದೆ. ಉತ್ತರಪ್ರದೇಶದಲ್ಲಿ ಹೊಸದಾಗಿ ವಿವಾಹಿತರಾದ ದಂಪತಿ ರಕ್ಷಣೆ ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯವು ತಳ್ಳಿಹಾಕಿತ್ತು. ತಮ್ಮ ವೈವಾಹಿಕ ಜೀವನಕ್ಕೆ ತೊಂದರೆ ಮಾಡದಂತೆ ಪೊಲೀಸರು ಮತ್ತು ಮಹಿಳೆಯ ತಂದೆಗೆ ನಿರ್ದೇಶನ ನೀಡುವಂತೆ ವಿವಾಹಿತ ದಂಪತಿ ನ್ಯಾಯಾಲಯವನ್ನು ಕೋರಿದ್ದರು.

ಪ್ರಸ್ತುತ ವರ್ಷದ ಜುಲೈ ತಿಂಗಳಲ್ಲಿ ದಂಪತಿ ವಿವಾಹವಾಗಿದ್ದಾರೆ, ಆದರೆ ಮಹಿಳೆಯ ಕುಟುಂಬ ಸದಸ್ಯರು ತಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಮಧ್ಯಪ್ರದೇಶದ ಮುಖ್ಯಮಂತ್ರಿ ಹೇಳಿಕೆ

ಭೋಪಾಲ್ ವರದಿ: ಉತ್ತರ ಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ಅಂತರ್ ಧರ್ಮ ವಿವಾಹಗಳ ವಿರುದ್ಧ ಕಾನೂನು ರೂಪಿಸುವ ಪ್ರಸ್ತಾಪ ಮಾಡಿದ ಬೆನ್ನಲ್ಲೇ ಮಧ್ಯಪ್ರದೇಶವೂ ಅಂತರ್ ಧರ್ಮದ ವಿವಾಹಗಳ ವಿರುದ್ಧ ಕಾನೂನು ರೂಪಿಸಲು ಸಜ್ಜಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಅಗತ್ಯವಿದ್ದಲ್ಲಿ ಅಂತರ್ ಧರ್ಮ ವಿವಾಹಗಳನ್ನು ತಡೆಯಲು ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ಚೌಹಾಣ್ ವಿಧಾನಸಭಾ ಉಪಚುನಾವಣೆಯ ಮುನ್ನಾದಿ ಹೇಳಿಕೆ ನೀಡಿದರು.

ಪ್ರೀತಿಯ ಹೆಸರಿನಲ್ಲಿ ಯಾವುದೇ ಜಿಹಾದ್ ಇರುವುದಿಲ್ಲ. ಯಾರಾದರೂ ಅಂತಹ ಅಭ್ಯಾಸದಲ್ಲಿ ತೊಡಗಿದರೆ, ಅವರಿಗೆ ಪಾಠ ಕಲಿಸಲಾಗುತ್ತದೆ ಮತ್ತು ಇದಕ್ಕಾಗಿ ಕಾನೂನು ಜಾರಿಗೆ ತರಲಾಗುವುದುಎಂದು ಮುಖ್ಯಮಂತ್ರಿ ಹೇಳಿದರು.

ಬಿಜೆಪಿ ಆಳ್ವಿಕೆಯ ಉತ್ತರ ಪ್ರದೇಶ (ಯುಪಿ) ಮತ್ತು ಹರಿಯಾಣ ಇದಕ್ಕೆ ಮುನ್ನವೇ ಅಂತರ್ ಧರ್ಮ ವಿವಾಹಗಳ ವಿರುದ್ಧ ಕಾನೂನು ಜಾರಿಗೆ ತರಲು ಯೋಚಿಸುತ್ತಿರುವುದಾಗಿ ಪ್ರಕಟಿಸಿದ್ದವು.

ಕಳೆದ ಗುರುವಾರ ಭೋಪಾಲ್ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೊನ್ ವಿರುದ್ಧ ಕೆರಳಿದ ಕಾರ್ಟೂನ್ ಬಿಕ್ಕಟ್ಟು ಕುರಿತು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಚೌಹಾಣ್,’ಅನುಮತಿಯಿಲ್ಲದೆ ಯಾವುದೇ ಪ್ರದರ್ಶನ ನಡೆಸಲು ಮಧ್ಯಪ್ರದೇದಲ್ಲ್ಲಿ ಅನುಮತಿ ನೀಡಲಾಗುವುದಿಲ್ಲ. ರಾಜ್ಯದಲ್ಲಿ ಶಾಂತಿಯನ್ನು ಭಂಗಗೊಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ನುಡಿದರು.

Advertisement