Showing posts with label ಪ್ರಧಾನಿ ಮೋದಿ. Show all posts
Showing posts with label ಪ್ರಧಾನಿ ಮೋದಿ. Show all posts

Saturday, August 1, 2026

ಜಂತರ್ ಮಂತರ್ ಪ್ರತಿಭಟನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ

 ಜಂತರ್ ಮಂತರ್ ಪ್ರತಿಭಟನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ

ವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆದರೆ, ಈ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಈ ವಿಡಿಯೋ ಡಿಜಿಟಲ್ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ 'ಡೀಪ್ ಫೇಕ್' (Deepfake) ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB), 2026 ಆಗಸ್ಟ್‌ 01ರ ಶನಿವಾರ ಸ್ಪಷ್ಟಪಡಿಸಿದೆ.

1. ಪ್ರಧಾನಿ ಮೋದಿಯವರ ಹೆಸರಿನಲ್ಲಿದ್ದ ವಿಡಿಯೋ ಸಂಪೂರ್ಣ ನಕಲಿ

PIB ಫ್ಯಾಕ್ಟ್-ಚೆಕ್ ಘಟಕವು ಶನಿವಾರ ಈ ಕುರಿತು ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣ X (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ತಿರುಚಲಾಗಿದೆ ಎಂದು ತಿಳಿಸಿದೆ.

  • ವಿದ್ಯಾರ್ಥಿ ಪ್ರತಿಭಟನಾಕಾರರ ಕುರಿತು ಪ್ರಧಾನಿಯವರು ಇಂತಹ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.
  • ಈ ನಕಲಿ ವಿಡಿಯೋವನ್ನು ಪಾಕಿಸ್ತಾನ ಮೂಲದ ಪ್ರೊಪಗಾಂಡಾ (ಪ್ರಚಾರ) ಖಾತೆಗಳ ಮೂಲಕ ಭಾರತದಲ್ಲಿ ಗೊಂದಲ ಸೃಷ್ಟಿಸಲು ಹರಡಲಾಗುತ್ತಿದೆ ಎಂದು PIB ಬಹಿರಂಗಪಡಿಸಿದೆ.

ಸಾರ್ವಜನಿಕರು ಅಸಲಿ ಮತ್ತು ನಕಲಿ ವಿಡಿಯೋದ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಲು PIB ಅಸಲಿ ವಿಡಿಯೋದ ಲಿಂಕ್ ಅನ್ನು (PIB Fact Check (@PIBFactCheck) / X ) ಸಹ ಹಂಚಿಕೊಂಡಿದೆ.

ಪಿಐಬಿ ಪ್ರಕಟಿಸಿರುವ ವಿಡಿಯೋ ಕೆಳಗಿದೆ.

2. ದೆಹಲಿ ಡಿಸಿಪಿ ರಾಜೀನಾಮೆ ನೀಡಿದರೆಂಬ ಸುದ್ದಿಯೂ ಸುಳ್ಳು!

ಇಷ್ಟೇ ಅಲ್ಲದೆ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ CJP ಬೆಂಬಲಿತ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಒತ್ತಡ ಹೇರುತ್ತಿದ್ದರಿಂದ ದೆಹಲಿ ಪೊಲೀಸ್ ಡಿಸಿಪಿ ಸುಮಿತ್ ಝಾ ರಾಜೀನಾಮೆ ನೀಡಿದ್ದಾರೆ ಎಂಬ ಮತ್ತೊಂದು ವಿಡಿಯೋ ವೈರಲ್ ಆಗಿತ್ತು.

ಆದರೆ 'ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ' (PTI) ನಡೆಸಿದ ತನಿಖೆಯಲ್ಲಿ, ಡಿಸಿಪಿ ಸುಮಿತ್ ಝಾ ಅವರ ಹಳೆಯ ವಿಡಿಯೋ ಒಂದಕ್ಕೆ AI ಮೂಲಕ ಬೇರೆ ಧ್ವನಿಯನ್ನು (Audio) ಸೇರಿಸಿ ನಕಲಿ ವಿಡಿಯೋ ಸೃಷ್ಟಿಸಲಾಗಿದೆ ಎಂದು ತಿಳಿದುಬಂದಿದೆ. ವಾಸ್ತವವಾಗಿ, ದೆಹಲಿ ಪೊಲೀಸರ ಅಧಿಕೃತ ಖಾತೆಯಲ್ಲಿದ್ದ ಈ ಅಸಲಿ ವಿಡಿಯೋದಲ್ಲಿ ಡಿಸಿಪಿ ಅವರು ಪಾಕಿಸ್ತಾನ ಮೂಲದ ಖಾತೆಗಳು ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರು.

3. ಪಾಕಿಸ್ತಾನ ಮೂಲದ 480ಕ್ಕೂ ಹೆಚ್ಚು ನಕಲಿ ಖಾತೆಗಳ ಗುರುತು

ದೆಹಲಿ ಪೊಲೀಸರ ಪ್ರಕಾರ, ಜಂತರ್ ಮಂತರ್ ಪ್ರತಿಭಟನೆಯ ಸಂದರ್ಭದಲ್ಲಿ ಸುಳ್ಳು ಸುದ್ದಿ ಹಾಗೂ ದ್ವೇಷಪೂರಿತ ವಿಷಯಗಳನ್ನು ಹರಡಲು ಪಾಕಿಸ್ತಾನ ಮೂಲದ 480ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣದ ಖಾತೆಗಳು ಸಕ್ರಿಯವಾಗಿದ್ದವು. ಈ ಹಿಂದೆ 'ಆಪರೇಷನ್ ಸಿಂಧೂರ್' ಸಮಯದಲ್ಲೂ ಇದೇ ಖಾತೆಗಳು ಸುಳ್ಳು ಸುದ್ದಿ ಹರಡಲು ಬಳಕೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದು, ಪ್ರಸ್ತುತ ಆ ಎಲ್ಲ ಖಾತೆಗಳನ್ನು ಬ್ಲಾಕ್ (Block) ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ: ಸರ್ಕಾರದ ಮನವಿ

ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಪರಿಶೀಲಿಸದ ಯಾವುದೇ ವಿಡಿಯೋ ಅಥವಾ ಸುದ್ದಿಗಳನ್ನು ತಕ್ಷಣವೇ ನಂಬಬೇಡಿ ಮತ್ತು ಇಂತಹ ವಿಷಯಗಳಿಗೆ ಅಧಿಕೃತ ಸರ್ಕಾರಿ ಮೂಲಗಳನ್ನೇ ಆಶ್ರಯಿಸಿ ಎಂದು PIB ನಾಗರಿಕರಲ್ಲಿ ವಿನಂತಿ ಮಾಡಿದೆ.

ಸಂದೇಹಾಸ್ಪದ ಸುದ್ದಿಗಳನ್ನು ವರದಿ ಮಾಡಲು:

ಭಾರತ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ನಕಲಿ ಅಥವಾ ಸಂದೇಹಾಸ್ಪದ ವಿಷಯಗಳು ಕಂಡುಬಂದಲ್ಲಿ ಸಾರ್ವಜನಿಕರು ಕೆಳಗಿನ ವಿವರಗಳ ಮೂಲಕ PIB ಗೆ ದೂರು ನೀಡಬಹುದು:

  • ವಾಟ್ಸಾಪ್/ಫೋನ್ ಸಂಖ್ಯೆ: +91 8799711259
  • ಇಮೇಲ್: factcheck@pib.gov.in

Sunday, June 8, 2025

ವಿಶ್ವದ ಅತಿ ಎತ್ತರದ ಸೇತುವೆ ಮೇಲೆ ವಂದೇ ಭಾರತ್ ಓಡಾಟ ಶುರು

 ವಿಶ್ವದ ಅತಿ ಎತ್ತರದ ಸೇತುವೆ ಮೇಲೆ ವಂದೇ ಭಾರತ್ ಓಡಾಟ ಶುರು

ಮ್ಮು: ವಿಶ್ವದ ಅತಿ ಎತ್ತರದ ಕಮಾನು ಸೇತುವೆಯಾದ ಚೆನಾಬ್‌ ಸೇತುವೆ ಮೇಲೆ ಸಾಗುವ ಕತ್ರಾ ಮತ್ತು ಶ್ರೀನಗರ ನಡುವಣ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಉತ್ತರ ರೈಲ್ವೆ ೨೦೨೫ ಜೂನ್‌ ೭ರ ಶನಿವಾರ ಆರಂಭಿಸಿದೆ.

೨೦೨೫ ಜೂನ್‌ ಜೂನ್ 6ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕತ್ರಾದಲ್ಲಿ ಹಸಿರು ನಿಶಾನೆ ತೋರಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ರೈಲು ಮೂಲಕ ಸಂಪರ್ಕಿಸುತ್ತದೆ.

ಕತ್ರಾದಿಂದ ಬಾರಾಮುಲ್ಲಾಗೆ ಅಥವಾ ಬಾರಾಮುಲ್ಲಾದಿಂದ ಕತ್ರಾಗೆ ರೈಲುಗಳನ್ನು ಹತ್ತಿದ ಪ್ರಯಾಣಿಕರು ಅಪಾರ ಉತ್ಸಾಹ ವ್ಯಕ್ತಪಡಿಸಿದರು, ಅನೇಕರು ರೈಲಿನಲ್ಲಿ ಕಾಶ್ಮೀರಕ್ಕೆ ಪ್ರಯಾಣಿಸುವ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದೆವು ಎಂದು ಹೇಳಿದರು.

ರೈಲುಗಳಲ್ಲಿ ಸಂಚರಿಸಿದ ಪ್ರಯಾಣಿಕರು ʼಭಾರತ್‌ ಮಾತಾ ಕೀ ಜಯ್‌ʼ, ʼವಂದೇ ಮಾತರಂʼ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತ ಪಡಿಸುತ್ತಿದ್ದ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಂಜೆಯ ವೇಳೆಗೆ ರೈಲುಗಳು ತಮ್ಮ ಗಮ್ಯಸ್ಥಾನಗಳನ್ನು ತಲುಪಿದ್ದರಿಂದ ಮೊದಲ ದಿನದ ವಾಣಿಜ್ಯ ಕಾರ್ಯಾಚರಣೆ ಸರಾಗವಾಗಿ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರ ಉತ್ಸಾಹ ಹೆಚ್ಚಾಗಿದ್ದುದರಿಂದ ರೈಲು ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಹೆಚ್ಚಿನ ಸೀಟುಗಳು ಬುಕ್ ಆಗಿದ್ದವು ಎಂದು ಅಧಿಕಾರಿಗಳೂ ಹೇಳಿದರು.

ಉತ್ತರ ರೈಲ್ವೆಯ ಪ್ರಕಾರ, ಎರಡು ವಂದೇ ಭಾರತ್ ರೈಲುಗಳು ಕತ್ರಾ ಮತ್ತು ಶ್ರೀನಗರ ನಡುವೆ ಹಗಲಿನಲ್ಲಿ ನಾಲ್ಕು ಟ್ರಿಪ್‌ಗಳನ್ನು ಮಾಡಿದ್ದವು.

ಈ ರೈಲಿನಲ್ಲಿ ಚೇರ್ ಕಾರ್ (ಸಿಸಿ) ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ (ಇಸಿ) ಎಂಬ ಎರಡು ಪ್ರಯಾಣ ತರಗತಿಗಳಿದ್ದು, ಟಿಕೆಟ್‌ಗಳ ಬೆಲೆ ಕ್ರಮವಾಗಿ 715 ಮತ್ತು 1,320 ರೂ. ಎಂದು ಅಧಿಕಾರಿಗಳು ಹೇಳಿದರು.

ಕತ್ರಾ ಎಲ್ಲಿದೆ?

ಕತ್ರಾ ಎಂಬುದು ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಒಂದು ನಗರ ಮತ್ತು ತಹಸಿಲ್ ಆಗಿದ್ದು, ಇದು ತ್ರಿಕೂಟ ಪರ್ವತಗಳ ಬುಡದಲ್ಲಿದೆ, ಅಲ್ಲಿ ವೈಷ್ಣೋದೇವಿಯ ದೇವಾಲಯವಿದೆ. ಕತ್ರಾವು ರಿಯಾಸಿ ಪಟ್ಟಣದಿಂದ 24 ಕಿಮೀ (15 ಮೈ) ದೂರದಲ್ಲಿದೆ, ಜಮ್ಮು ನಗರದಿಂದ 42 ಕಿಮೀ (26 ಮೈ) ಮತ್ತು ರಾಷ್ಟ್ರ ರಾಜಧಾನಿ ನವದೆಹಲಿಯ ಉತ್ತರಕ್ಕೆ ಸುಮಾರು 685 ಕಿಮೀ (426 ಮೈ) ದೂರದಲ್ಲಿದೆ ಮತ್ತು ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಿಕರಿಗೆ ನೆಲೆಯಾಗಿದೆ.

ಬಾರಾಮುಲ್ಲಾ ಎಲ್ಲಿದೆ?

ಕಾಶ್ಮೀರಿ ಭಾಷೆಯಲ್ಲಿ ವರ್ಮುಲ್ (ಕಾಶ್ಮೀರಿ ಉಚ್ಚಾರಣೆ: [ʋarmul] ) ಎಂಬುದಾಗಿ ಕರೆಯಲ್ಪಡುವ ಬಾರಾಮುಲ್ಲಾ,  ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಒಂದು ನಗರ ಮತ್ತು ಪುರಸಭೆ. ಇದು ಬಾರಾಮುಲ್ಲಾ ಜಿಲ್ಲೆಯ ಆಡಳಿತ ಕೇಂದ್ರ. ಇದು ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿಯಾದ ಶ್ರೀನಗರದಿಂದ ಕೆಳಕ್ಕೆ ಝೀಲಂ ನದಿಯ ದಡದಲ್ಲಿದೆ . ಬಾರಾಮುಲ್ಲಾ ಪಟ್ಟಣವನ್ನು ಮೊದಲು ಕಾಶ್ಮೀರದ ಗೇಟ್‌ವೇ ಎಂಬುದಾಗಿ ಕರೆಯಲಾಗುತ್ತಿತ್ತು, ಝೀಲಂ ಕಣಿವೆಯ ಬಂಡಿ ರಸ್ತೆಯ ಮೂಲಕ ಕಾಶ್ಮೀರ ಕಣಿವೆಗೆ ಬರುವ ಸರಕುಗಳಿಗೆ ಪ್ರಮುಖ ವಿತರಣಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಇದು ಪೀರ್ ಪಂಜಾಲ್ ಶ್ರೇಣಿಯ ತಪ್ಪಲಿನಲ್ಲಿರುವ ಕಾಶ್ಮೀರ ಕಣಿವೆಯೊಳಗೆ ಇದೆ. ಬಾರಾಮುಲ್ಲಾ ಪಟ್ಟಣವನ್ನು ಮೊದಲು ವರಾಹಮೂಲ ಎಂದು ಕರೆಯಲಾಗುತ್ತಿತ್ತು.

ಚೆನಾಬ್‌ ಸೇತುವೆ ಎಲ್ಲಿದೆ? ವಿಶೇಷತೆ ಏನು?

ಚೆನಾಬ್ ಸೇತುವೆಯು, ಜಮ್ಮು- ಕಾಶ್ಮೀರದಲ್ಲಿ ಅಂಜಿ ನದಿಯ ಮೇಲೆ ನಿರ್ಮಿಸಲಾದ ದೇಶದ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆ. ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ ಇದು. ಇದರ ಎತ್ತರ ನದಿಯಿಂದ 359 ಮೀಟರ್.

ವಾಸ್ತುಶಿಲ್ಪದ ಅದ್ಭುತ ಚೆನಾಬ್ ರೈಲು ಸೇತುವೆಯು ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದೆ. ಇದು ಭೂಕಂಪ ಮತ್ತು ಪ್ರಬಲ ಗಾಳಿಯ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾದ 1,315 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆ.  ಇದು ಜಮ್ಮು-ಶ್ರೀನಗರ ನಡುವಿನ ಸಂಪರ್ಕವನ್ನು ಹೆಚ್ಚಿಸುವುದು.

ಚೆನಾಬ್‌ ಸೇತುವೆಯ ಮೇಲೆ ಚಲಿಸುವ ವಂದೇ ಭಾರತ್ ರೈಲು ಮೂಲಕ, ಕತ್ರಾ ಮತ್ತು ಶ್ರೀನಗರ ನಡುವಣ ಪಯಣ ಸುಮಾರು ೩ ಗಂಟೆಯಷ್ಟು ತಗ್ಗಲಿದೆ.

ವಿಶ್ವದ ಅತಿ ಎತ್ತರದ ಚೆನಾಬ್‌ ಸೇತುವೆ ಇಲ್ಲಿದೆ ನೋಡಿ:

Tuesday, January 14, 2025

ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

 ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

ಇದು ಸುವರ್ಣ ನೋಟ!

ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸ್ಥಳವಾದ ಪ್ರಯಾಗರಾಜ್‌ ಮಹಾ ಕುಂಭಮೇಳದ ಭಕ್ತರಿಂದ ಮೈ ನಡುಗುವ ಚಳಿಯಲ್ಲೂ ಗಿಜಿಗಿಡುತ್ತಿದೆ. ಯಾವ ಚಳಿಯನ್ನೂ ಲೆಕ್ಕಿಸದೆ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ.

ಈ ಭವ್ಯ ಮೇಳದ ಸಂಭ್ರಮದ ಚಿತ್ರಗಳು, ವಿಡಿಯೋಗಳು ಯೂ ಟ್ಯೂಬ್‌, ಪತ್ರಿಕೆ, ಟಿವಿ ಚಾನೆಲ್‌ ಗಳಲ್ಲಿ ರಾರಾಜಿಸುತ್ತಿವೆ    ಮೇಳದ ಭವ್ಯತೆಯ ಕ್ಷಣಗಳ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚಳಿಯಲ್ಲಿ ಗಢಗಢ ನಡುಗುವ ಈ ಹೊತ್ತಿನಲ್ಲಿ ʼಹೊಳೆ – ನದಿʼಗಳಲ್ಲಿ ಮುಳುಗೇಳುವ ಭಕ್ತರ ಸಂಭ್ರಮದ ಹೊತ್ತಿನಲ್ಲಿ, ʼನಾಗರ ಹೊಳೆʼ ಹೇಗಿರುತ್ತದೋ ಏನೋ ಎಂದು ನೋಡುವ ಇಚ್ಛೆಯಾಯಿತು ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರಿಗೆ.

ಯೋಚನೆ ಬಂದ ಬಳಿಕ ಸುಮ್ಮನೇ ಕೂರುವ ಜಾಯಮಾನ ಅವರದಲ್ಲ. ಹೆಗಲಿಗೆ ಕ್ಯಾಮರಾ ಏರಿಸಿ ಹೊರಟೇ ಬಿಟ್ಟರು ಸುವರ್ಣ ʼನಾಗರಹೊಳೆʼಗೆ. ನಾಗರ ಹೊಳೆಯ ಈ ಪಯಣ ʼಮಂಜು ಮುಸುಕಿದ ಹಾದಿʼಯಾಗಿತ್ತು.


ʼನಾಗರ ಹೊಳೆʼಯಲ್ಲಿ ಚಳಿಗಾಲದ ಸಂಭ್ರಮ ಹೇಗಿತ್ತು ಎಂಬುದು ಸುವರ್ಣ ಅವರ ಕ್ಯಾಮರಾದಲ್ಲಿ ಸೆರೆಯಾಯಿತು. ಅದನ್ನು ನೋಡುವ ಅವಕಾಶ ಇಲ್ಲಿದೆ. ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ.

ಬಿಂಬ-ಪ್ರತಿಬಿಂಬ!
ಹಿಮಾಲಯವಲ್ಲ, ಹಿಮದ ನಾಗರ ಹೊಳೆ!
ಮುಸುಕಿದೀ ಮಬ್ಬಿನಲಿ...
    ಹೊಟ್ಟೆ ತಾಳ ಹಾಕದಿರುತ್ತದೆಯೇ..?

-ನೆತ್ರಕೆರೆ ಉದಯಶಂಕರ

ಕೆಳಗಿನವುಗಳನ್ನೂ ಓದಿರಿ: 

ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಕೇವಲ ರೂ. 350/- ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

Tuesday, June 4, 2024

ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?

 ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?

ವದಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಲೋಕಸಭೆಯ 543 ಸ್ಥಾನಗಳಿಗೆ ನಡೆದಿರುವ ಚುನಾವಣೆಯ ಫಲಿತಾಂಶಗಳು ದೇಶವನ್ನು ಕುತೂಹಲಕಾರೀ ಘಟ್ಟಕ್ಕೆ ತಂದು ನಿಲ್ಲಿಸಿವೆ. ಸುಮಾರು 292 ಸ್ಥಾನಗಳ ಸನಿಹದಲ್ಲಿ ಬಂದು ನಿಂತಿರುವ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟವು ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆಯ ಘೋಷಣೆ ಮಾಡಿದೆ.

233 ಸ್ಥಾನಗಳ ಅಂಚಿನಲ್ಲಿ ಇರುವ ಕಾಂಗ್ರೆಸ್‌ ನೇತೃತ್ವದ ‌ʼಇಂಡಿʼ ಐಎನ್‌ ಡಿಐ ಮೈತ್ರಿಕೂಟದೊಂದಿಗೆ ಇಡೀ ದಿನ ಹಾವು -ಏಣಿ ಆಟ ನಡೆಸಿದರೂ, ಅಂತಿಮವಾಗಿ ನಿತೀಶ್‌ ಕುಮಾರ್‌ ನೇತೃತ್ವದ ಜನತಾ ದಳ (ಯು) ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ (ಟಿಡಿಪಿ) ಎನ್‌ ಡಿಎ ಜೊತೆಗೇ ನಿಲ್ಲುವುದಾಗಿ ಸ್ಪಷ್ಟನೆ ನೀಡುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಿ ಮುಂದುವರೆಯುವ ಘೋಷಣೆಯನ್ನು ಬಿಜೆಪಿ ಮಾಡಿದೆ.

ರಾತ್ರಿ ದೆಹಲಿಯ ಪಕ್ಷ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮೂರನೇ ಬಾರಿಗೆ ಆಡಳಿತ ನಡೆಸಲು ಬಿಜೆಪಿ ಹಾಗೂ ಎನ್‌ ಡಿಎ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ್ದಕ್ಕಾಗಿ ದೇಶದ ಜನತೆಗೆ ವಂದನೆಗಳನ್ನು ಸಲ್ಲಿಸಿದ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಅಗತ್ಯ ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಗಳಿಸಿರುವ ಎನ್‌ ಡಿಎ ಸರ್ಕಾರ ರಚಿಸುವುದು ಎಂಬುದಾಗಿ ಸ್ಪಷ್ಟ ಪಡಿಸಿದರು.

(ವಿವರಗಳಿಗೆ ಪಕ್ಕದಲ್ಲಿರುವ ಪ್ರಧಾನಿ ಮೋದಿ ಚಿತ್ರ ಕ್ಲಿಕ್‌ ಮಾಡಿ)

ಸುಮಾರು 240 ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸುವುದರೊಂದಿಗೆ ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ), ಎನ್‌ ಡಿಎ ಮೈತ್ರಿಕೂಟಕ್ಕೆ ಬಹುಮತ (292 ಸ್ಥಾನ) ಲಭಿಸಿದ್ದು ಸರ್ಕಾರ ರಚಿಸುವುದು ಖಚಿತ ಎಂಬುದಾಗಿ ಇದಕ್ಕೂ ಮುನ್ನವೇ ಘೋಷಿಸಿತು. ಇಂಡಿ ಮೈತ್ರಿಕೂಟದಿಂದ ಬಿಹಾರದ ಮುಖ್ಯಮಂತ್ರಿ ಉಪಪ್ರಧಾನಿ ಹುದ್ದೆಯ ಆಮಿಷ ಬಂದಿದ್ದರೂ ಜನತಾಳ (ಯು) ಎನ್‌ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವುದಾಗಿ ಪಕ್ಷದ ನಾಯಕ ಕೆ.ಸಿ. ತ್ಯಾಗಿ ಪ್ರಕಟಿಸಿದರು.

ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಬಿಜೆಪಿಯು ಭಾರೀ ಹಿನ್ನಡೆ ಅನುಭವಿಸಿದ್ದು ದಿಟವಾಗುತ್ತಿದ್ದಂತೆಯೇ ಎನ್‌ ಡಿಎಯ ಅಂಗಪಕ್ಷವಾದ ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಲು ಯತ್ನಿಸಿದ ಇಂಡಿ ಮೈತ್ರಿಕೂಟವು ಆಂದ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಕೊಡುಗೆ ನೀಡುವ ಘೋಷಣೆ ಮಾಡಿದ್ದರೂ, ತೆಲುಗು ದೇಶಂ ಪಕ್ಷ ಕೂಡಾ ಎನ್‌ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವುದಾಗಿ ಘೋಷಿಸಿತು.

ಈ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟವು ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವುದು ಖಚಿತವಾಗುವಂತೆ ಕಂಡು ಬರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಜಯಭೇರಿ ಭಾರಿಸಿದ್ದರೆ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌  ಕೂಡಾ ಜಯಭೇರಿ ಭಾರಿಸಿದ್ದಾರೆ. ಆದರೆ ಅವರ ಸಂಪುಟದ ಸದಸ್ಯರಾದ ಸ್ಮೃತಿ ಇರಾನಿ, ರಾಜೀವ ಚಂದ್ರಶೇಖರ್‌  ಸೋಲುಂಡಿದ್ದಾರೆ.

ಕ್ಲಿಕ್‌ ಮಾಡಿ ನೋಡಿ- ತಪ್ಪದೇ ಓದಿ. ಇ-ಬುಕ್‌ ಕೂಡಾ ಲಭಿಸುತ್ತದೆ.

ಬಿಜೆಪಿಯು ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಂ, ಒಡಿಶಾ, ಬಿಹಾರ,ಗುಜರಾತ್‌, ಕರ್ನಾಟಕ, ಆಂದ್ರ ಪ್ರದೇಶ, ತೆಲಂಗಾಣ ಮತ್ತಿತರ ಕಡೆ ಉತ್ತಮ ಸಾಧನೆ ಮಾಡಿದೆ. ಬಿಜೆಪಿಗೆ ಹಿನ್ನಡೆಯಾಗಿರುವ ರಾಜ್ಯಗಳಲ್ಲಿ ಇಂಡಿ ಮೈತ್ರಿಕೂಟದ ಕಾಂಗ್ರೆಸ್‌, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್‌, ಡಿಎಂಕೆ ಮುನ್ನಡೆ ಸಾಧಿಸಿವೆ. ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತ್ವತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುನ್ನಡೆ/ ಗೆಲುವು ದಾಖಲಿಸಿವೆ.

ಆಂಧ್ರಪ್ರದೇಶ ವಿಧಾನಸಭೆಗೆ ನಡೆದಿರುವ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ, ಬಿಜೆಪಿ ಮತ್ತು ಜನಸೇನಾ ಪಕ್ಷಗಳನ್ನು ಒಳಗೊಂಡ ಎನ್‌ ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಒಡಿಶಾ ವಿಧಾನಸಭೆಯಲ್ಲೂ ಬಿಜೆಪಿ ಜಯಭೇರಿ ದಾಖಲಿಸಿದೆ. ಈ ಎರಡೂ ರಾಜ್ಯಗಳಲ್ಲಿ ಎನ್‌ ಡಿಎ ಸರ್ಕಾರ ರಚನೆಯಾಗಲಿದೆ. ಆಂಧ್ರಪ್ರದೇಶದಲ್ಲಿ ಈ ವಾರದಲ್ಲೇ ಸರ್ಕಾರ ರಚಿಸುವುದಾಗಿ ತೆಲುಗುದೇಶಂ ಪಕ್ಷ (ಟಿಡಿಪಿ) ಘೋಷಿಸಿದೆ.

ಈ ಮಧ್ಯೆ, ಜೆಡಿಯುನ ನಿತೀಶ್‌ ಕುಮಾರ್‌ ಅವರಿಗೆ ಉಪ ಪ್ರಧಾನಿ ಹುದ್ದೆ ನೀಡುವುದಾಗಿ ಹೇಳಿರುವ ಇಂಡಿ ಮೈತ್ರಿಕೂಟಕ್ಕೆ ತನ್ನ ಪ್ರಧಾನಿ ಯಾರು ಎಂಬುದೇ ಸ್ಪಷ್ಟವಾಗಿಲ್ಲ. ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ ಬಣವು ರಾಹುಲ್‌ ಗಾಂಧಿ ಪ್ರಧಾನಿಯಾಗಲಿ ಎಂಬುದಾಗಿ ಹೇಳಿದರೆ, ಸಮಾಜವಾದಿ ಪಕ್ಷವು ಅಖಿಲೇಶ  ಯಾದವ್‌ ಪ್ರಧಾನಿಯಾಗಬೇಕು ಎಂದು ಬಯಸಿದೆ. ಎನ್‌ ಸಿಪಿಯ ನಾಯಕ ಶರದ್‌ ಪವಾರ್‌ ಅವರು ಟಿಡಿಪಿಯ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಿದ್ದಕ್ಕೆ ಅಸಮಾಧಾನ ವ್ಯಕ್ತ ಪಡಿಸಿರುವ ಜಮ್ಮು  ಕಾಶ್ಮೀರದ ಒಮರ್‌ ಅಬ್ದುಲ್ಲ ʼಚುನಾವಣಾ ಪೂರ್ವ ಮೈತ್ರಿಯ ಪ್ರಕಾರವೇ ಮುಂದುವರೆಯೋಣ, ಕುದುರೆ ವ್ಯಾಪಾರ ಬೇಡʼ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ, ಕೇಂದ್ರದಲ್ಲಿ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದ್ದು, ಒಂದು ವಾರದ ಒಳಗೆ ʼಭಾರತವನ್ನು ಆಳುವವವರು ಯಾರು?ʼ ಎಂಬ ಪ್ರಶ್ನೆಗೆ ಉತ್ತರ ಲಭಿಸಲಿದೆ.

ಚುನಾವಣೆಯ ನಿಖರ ಫಲಿತಾಂಶಕ್ಕಾಗಿ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


Thursday, September 8, 2022

ಇಂಡಿಯಾಗೇಟಿನಲ್ಲಿ ನೇತಾಜಿ ಪ್ರತಿಮೆ, ʼರಾಜಪಥʼವಾಯಿತು ʼಕರ್ತವ್ಯಪಥ”

 ಇಂಡಿಯಾಗೇಟಿನಲ್ಲಿ ನೇತಾಜಿ ಪ್ರತಿಮೆ, ʼರಾಜಪಥʼವಾಯಿತು ʼಕರ್ತವ್ಯಪಥ”

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2022 ಸೆಪ್ಟೆಂಬರ್‌ 8 ಗುರುವಾರ ಇಂಡಿಯಾ ಗೇಟಿನಲ್ಲಿ ಸ್ವಾತಂತ್ರ್ಯ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು ಮತ್ತು ಹೊಸದಾಗಿ ನಾಮಕರಣಗೊಂಡ ʼಕರ್ತವ್ಯ ಪಥʼವನ್ನು ಉದ್ಘಾಟಿಸಿದರು. ಇದರೊಂದಿಗೆ ಬ್ರಿಟಿಷ್ವಸಾಹತುಶಾಹಿಯ ಸಂಕೇತಗಳನ್ನು ಭಾರತವು ಅಳಿಸಿಹಾಕಿತು.

ಇಂಡಿಯಾಗೇಟಿನಲ್ಲಿ ಇದುವರೆಗೂ ಜಾರ್ಜ್ದೊರೆಯ ಪ್ರತಿಮೆ ಇತ್ತು. ಅದನ್ನು ತೆಗೆದು ಇದೀಗ 28 ಅಡಿ ಎತ್ತರದ ನೇತಾಜಿ ಅವರ ಭವ್ಯವಾದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ಸಂದರ್ಭಕ್ಕೆ ಸಾಕ್ಷಿಯಾಗಲು ವಿಡಿಯೋ ನೋಡಿ:


ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ʼಕರ್ತವ್ಯಪಥʼವು  ಕೆಂಪು ಗ್ರಾನೈಟ್ ನಡಿಗೆ ಪಥಗಳನ್ನು (ವಾಕ್ವೇ) ಹೊಂದಿದ್ದು, ಸುತ್ತಲೂ ಹಸಿರು, ನವೀಕರಿಸಿದ ಕಾಲುವೆಗಳು, ರಾಜ್ಯವಾರು ಆಹಾರ ಮಳಿಗೆಗಳು, ಹೊಸ ಸೌಕರ್ಯ ಬ್ಲಾಕ್‌ಗಳು ಮತ್ತು ಮಾರಾಟ ಕಿಯೋಸ್ಕ್‌ಗಳನ್ನು ಹೊಂದಿದೆ.

ಸರ್ಕಾರದ ಪ್ರಕಾರ, ಹಿಂದಿನ ರಾಜಪಥವು ಅಧಿಕಾರದ ಐಕಾನ್ ಆಗಿತ್ತು. ಅದೀಗ ʼಕರ್ತವ್ಯ ಪಥʼ ಆಗುವ ಮೂಲಕ ಸಾರ್ವಜನಿಕ ಮಾಲೀಕತ್ವ ಮತ್ತು ಸಬಲೀಕರಣದ ಉದಾಹರಣೆಯಾಗಿರುವುದನ್ನು ಸಂಕೇತಿಸುತ್ತದೆ. ಇದರೊಂದಿಗೆ ಇಂಡಿಯಾ ಗೇಟಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯ ಅನಾವರಣವು ವಸಾಹತುಶಾಹಿ ಮನಸ್ಥಿತಿಯ ಯಾವುದೇ ಕುರುಹುಗಳನ್ನು ಕಿತ್ತುಹಾಕಿʼ ಎಂಬುದಾಗಿ ಹೇಳಿರುವ ಪ್ರಧಾನಿಯ ನವಭಾರತದ  ʼಅಮೃತಕಾಲʼ ಎರಡನೇ ʼಪಂಚಪ್ರಾಣʼ ಎನಿಸಿದೆ.

ಇಂಡಿಯಾ ಗೇಟ್ಸಮೀಪ ಸಿಪಿಡಬ್ಲ್ಯೂಡಿಯು  ಐದು ಮಾರಾಟ ವಲಯಗಳನ್ನು ಸ್ಥಾಪಿಸಿದೆ, ಅಲ್ಲಿ ತಲಾ 40 ಮಾರಾಟಗಾರರಿಗೆ ಅನುಮತಿ ನೀಡಲಾಗುತ್ತದೆ. ಇಂಡಿಯಾ ಗೇಟ್ ಬಳಿ ಎರಡು ಬ್ಲಾಕ್‌ಗಳು ತಲಾ ಎಂಟು ಅಂಗಡಿಗಳನ್ನು ಹೊಂದಿರುತ್ತದೆ. ಕೆಲವು ರಾಜ್ಯಗಳು ತಮ್ಮ ಆಹಾರ ಮಳಿಗೆಗಳನ್ನು ಸ್ಥಾಪಿಸಲು ತಮ್ಮ ಆಸಕ್ತಿಯನ್ನು ತೋರಿಸಿವೆ. ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಂಪೂರ್ಣ ಪ್ರದೇಶವನ್ನು ನವೀಕರಿಸಲಾಗಿದೆ.

ಲ್ಲವನ್ನೂ ಹೊಸದಾಗಿ ಮರುಅಭಿವೃದ್ಧಿಪಡಿಸಿದ ರಾಜಪಥವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ʼಕರ್ತವ್ಯ ಪಥʼ ಎಂಬ ಹೊಸ ಹೆಸರಿನಲ್ಲಿ  ಉದ್ಘಾಟಿಸಿದರು.

ʼಕರ್ತವ್ಯಪಥʼದ ಸೊಬಗನ್ನು ಕೆಳಗೆ  ಕ್ಲಿಕ್‌ ಮಾಡಿ ನೋಡಿ:


  ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಹೊಸದಾಗಿ ನಾಮಕರಣಗೊಂಡ ಕರ್ತವ್ಯ ಪಥವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ನಾವು ವಸಾಹತುಶಾಹಿ ಭೂತಕಾಲವನ್ನು ತೊಡೆದುಹಾಕಿದ್ದೇವೆ. ವಸಾಹತುಶಾಹಿಯ ಪ್ರತೀಕವಾದ ‘ಕಿಂಗ್ಸ್‌ವೇ’ ಒಂದು ಇತಿಹಾಸವಾಗಲಿದೆ ಮತ್ತು ಅದನ್ನು ಶಾಶ್ವತವಾಗಿ ಅಳಿಸಿಹಾಕಲಾಗಿದೆ ಎಂದು ಘೋಷಿಸಿದರು.


ʼಕರ್ತವ್ಯ.ಪಥʼರೂಪದಲ್ಲಿ ಹೊಸ ಯುಗ ಪ್ರಾರಂಭವಾಗಿದೆ. ನಾವು ವಸಾಹತುಶಾಹಿಯ ಮತ್ತೊಂದು ಸಂಕೇತದಿಂದ ಹೊರಬಂದಿರುವುದಕ್ಕಾಗಿ ದೇಶದ ಎಲ್ಲ ಜನರನ್ನು ನಾನು ಅಭಿನಂದಿಸುತ್ತೇನೆ.ʼ ಎಂದು ಹೇಳಿದರು.

ಇಂಡಿಯಾ ಗೇಟಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ, , “ಭಾರತವು ಸುಭಾಷ್ ಚಂದ್ರ ಬೋಸ್ ತೋರಿಸಿದ ಮಾರ್ಗವನ್ನು ಅನುಸರಿಸಿದ್ದರೆ, ದೇಶವು ಹೊಸ ಎತ್ತರವನ್ನು ತಲುಪುತ್ತಿತ್ತು; ಆದರೆ  ಅವರು ಮರೆತುಹೋದದ್ದು ದುಃಖದ ವಿಚಾರ” ಎಂದು ಪ್ರಧಾನಿ ನುಡಿದರು.

 ಇಂದು ದೇಶವು ಬ್ರಿಟಿಷರ ಕಾಲದಿಂದ ಇದ್ದ ವಿವಿಧ ಕಾನೂನುಗಳನ್ನು ಬದಲಾಯಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಈಗ ದೇಶದ ಯುವಕರು ಅನ್ಯ ಭಾಷೆಯ ಒತ್ತಡದಿಂದ ಮುಕ್ತರಾಗುತ್ತಿದ್ದಾರೆ. ಭಾರತದ ಜನರನ್ನು ಗುಲಾಮರಾಗಿಸಿದ್ದ ಬ್ರಿಟಿಷರಿಗೆ ರಾಜಪಥವಾಗಿದ್ದ ಇದು ವಸಾಹತುಶಾಹಿಯ ಸಂಕೇತವಾಗಿತ್ತು. ಆದರೆ ಈಗ, ಭಾರತದ ವಾಸ್ತುಶಿಲ್ಪವು ಬದಲಾಗಿದೆ ಮತ್ತು ಅದರ ಆತ್ಮವೂ ಬದಲಾಗಿದೆ” ಎಂದು ಮೋದಿ ಹೇಳಿದರು.

ಕಳೆದ 8 ವರ್ಷಗಳಲ್ಲಿ ನಾವು ನೇತಾಜಿ ಸುಭಾಷ್ ಚಂದ್ರ ಅವರ ಛಾಪು ಹೊಂದಿರುವ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಬೋಸ್. ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ 'ಅಖಂಡ ಭಾರತ'ದ ಮೊದಲ ಮುಖ್ಯಸ್ಥರಾಗಿದ್ದರು.

ಇಂಡಿಯಾ ಗೇಟಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ದೇಶವು ಸಶಕ್ತ ರಾಷ್ಟ್ರಕ್ಕಾಗಿ ಹೊಸ ಮಾರ್ಗವನ್ನು ಸ್ಥಾಪಿಸಿದೆ ಎಂದು ಪ್ರಧಾನಿ ಹೇಳಿದರು.

 “ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬೃಹತ್ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಇಲ್ಲಿ ಬ್ರಿಟಿಷರ ಪ್ರತಿನಿಧಿಯ ಪ್ರತಿಮೆ ಇತ್ತು. ನೇತಾಜಿ ಅವರ ಪ್ರತಿಮೆ ಸ್ಥಾಪನೆಯೊಂದಿಗೆ, ನಾವು ಸಶಕ್ತ ಭಾರತಕ್ಕಾಗಿ ಹೊಸ ಮಾರ್ಗವನ್ನು ಸ್ಥಾಪಿಸಿದ್ದೇವೆ ಎಂದು ಅವರು ಹೇಳಿದರು.

ಈ ಹಿಂದೆ ರಾಜ್‌ಪಥ್ ಎಂದು ಕರೆಯಲಾಗುತ್ತಿದ್ದ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ರಸ್ತೆಯ ಕರ್ತವ್ಯ ಪಥವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಯೋಜನೆಯಲ್ಲಿ ತೊಡಗಿರುವ ಕಾರ್ಮಿಕರು ಅಥವಾ 'ಶ್ರಮಜೀವಿ'ಗಳಿಗೆ ಧನ್ಯವಾದ ಅರ್ಪಿಸಿದರು.

 “ಅವರು
ದನ್ನು ನಿರ್ಮಿಸಿದ್ದು ಮಾತ್ರವಲ್ಲದೆ ಇತರರಿಗೂ
ʼಕರ್ತವ್ಯʼ
ದಾರಿ ತೋರಿಸಿದ್ದಾರೆ. "ಮರುಅಭಿವೃದ್ಧಿಪಡಿಸಿದ ಸೆಂಟ್ರಲ್ ವಿಸ್ಟಾಕ್ಕಾಗಿ ಇಲ್ಲಿ ಕೆಲಸ ಮಾಡಿದವರು (ಶ್ರಮಜೀವಿಗಳು) ಜನವರಿ 26 ರಂದು ನನ್ನ ವಿಶೇಷ ಅತಿಥಿಯಾಗಿರುತ್ತಾರೆ" ಎಂದು ಮೋದಿ ಹೇಳಿದರು.

Advertisement