Showing posts with label Pinarayi Vijayan. Show all posts
Showing posts with label Pinarayi Vijayan. Show all posts

Thursday, November 19, 2020

ಚಿನ್ನ ಕಳ್ಳಸಾಗಣೆ ಆರೋಪಿಯ ವಾಯ್ಸ್ ಮೇಲ್: ಕೇರಳ ಪೊಲೀಸರಿಂದ ತನಿಖೆ

 ಚಿನ್ನ ಕಳ್ಳಸಾಗಣೆ ಆರೋಪಿಯ ವಾಯ್ಸ್ ಮೇಲ್: ಕೇರಳ ಪೊಲೀಸರಿಂದ ತನಿಖೆ

ತಿರುವಂತಪುರಂ: ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ತನ್ನನ್ನು ಅಪ್ರೂವರ್ ಆಗಿ ಮಾಡುವ ಸಲುವಾಗಿ ಜಾರಿ ನಿರ್ದೆಶನಾಲಯವು (ಇಡಿ) ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು  ದಂಧೆಯಲ್ಲಿ ಷಾಮೀಲಾಗಿದ್ದಾರೆ ಎಂಬುದಾಗಿ ಹೇಳಲು ಒತ್ತಡ ಹೇರುತ್ತಿದೆ  ಎಂದು ಹೇಳಿದ್ದಾರೆ ಎನ್ನಲಾಗಿರುವವಾಯ್ಸ್ ಮೇಲ್ಬಹಿರಂಗಗೊಂಡ ಬಳಿಕ ಬಗ್ಗೆ ತನಿಖೆ ನಡೆಸುವಂತೆ ಕೇರಳ ಪೊಲೀಸರು 2020 ನವೆಂಬರ್ 19ರ  ಗುರುವಾರ ಆಜ್ಞಾಪಿಸಿದ್ದಾರೆ.

ವಾಯ್ಸ್ ಮೇಲ್ನ್ನು  2020 ನವೆಂಬರ್ 19ರ  ಗುರುವಾರ ಬೆಳಗ್ಗೆ ವೆಬ್ ಪೋರ್ಟಲ್ ಬಿಡುಗಡೆ ಮಾಡಿದ್ದು, ತತ್ ಕ್ಷಣವೇ ಅದು ವೈರಲ್ ಆಗಿದೆ.

ಜಾರಿ ನಿರ್ದೇಶನಾಲಯವು ಹೇಳಿಕೆಗೆ ಸಹಿ ಹಾಕುವಂತೆ ತನ್ನನ್ನು ಒತ್ತಾಯಿಸಿತು ಮತ್ತು ಅದನ್ನು ಓದಲು ಕೂಡಾ ಅನುಮತಿ ನೀಡಲಿಲ್ಲ ಎಂದು ಸ್ವಪ್ನಾ ಸುರೇಶ್  ಈ ವಾಯ್ಸ್ ಮೇಲ್ ನಲ್ಲಿ ಆರೋಪಿಸಿದ್ದಾರೆ.

ವಾಯ್ಸ್ ಮೇಲ್ ಟ್ರೆಂಡಿಂಗ್ ಪ್ರಾರಂಭಿಸಿ ವಿವಾದಕ್ಕೆ ನಾಂದಿ ಹಾಡಿದ ಸ್ವಲ್ಪ ಸಮಯದ ನಂತರ, ಪೊಲೀಸ್ ಮಹಾನಿರ್ದೇಶಕ (ಜೈಲು) ರಿಷಿರಾಜ್ ಸಿಂಗ್ ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿದರು.

ಹೊಸ ಬೆಳವಣಿಗೆಯ ಬಗ್ಗೆ ತನಿಖೆ ನಡೆಸುತ್ತಿರುವ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಅಜಯ್ ಕುಮಾರ್, ಸ್ವಪ್ನಾ ಸುರೇಶ್ ಇದು ತಮ್ಮ ಧ್ವನಿಯೆಂದು ಒಪ್ಪಿಕೊಂಡಿದ್ದಾರೆ, ಆದರೆ ಅದನ್ನು ಜೈಲಿನಿಂದ ಕಳುಹಿಸಲಾಗಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.

ಇದನ್ನು ಹೇಳಿದ್ದು ತನಗೆ ನಿಖರವಾಗಿ ನೆನಪಿಲ್ಲ ಎಂದು ತನಿಖಾಧಿಕಾರಿಗೆ ಆಕೆ ಪ್ರಶ್ನಿಸಿದಾಗ ಉತ್ತರಿಸಿದರು.  ಕೋಫೆಪೊಸಾ (ವಿದೇಶಿ ವಿನಿಮಯದ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ) ಅಡಿಯಲ್ಲಿ ಪ್ರಕರಣವನ್ನು  ಈಗ ತಿರುವನಂತಪುರಂನ ಮಹಿಳಾ ಜೈಲಿನಲ್ಲಿ ದಾಖಲಿಸಲಾಗಿದೆ.

ಹಿಂದೆ ಪ್ರಕರಣದ ಮತ್ತೊಬ್ಬ ಆರೋಪಿ ಎಂ.ಶಿವಶಂಕರ್, ಹಿರಿಯ ಅಧಿಕಾರಿ ಮತ್ತು ಮುಖ್ಯಮಂತ್ರಿಯ ಮಾಜಿ ಕಾರ್ಯದರ್ಶಿ ಕೂಡ ಇದೇ ರೀತಿಯ ಆರೋಪವನ್ನು ನ್ಯಾಯಾಲಯದಲ್ಲಿ ಮಾಡಿದ್ದರು. ಜಾರಿ ನಿರ್ದೇಶನಾಲಯವು ಅದನ್ನು ನಿರಾಕರಿಸಿತ್ತು. ಬಹು ಸಂಸ್ಥಾ ತನಿಖೆಯ ಭಾಗವಾಗಿರುವ ಹಿರಿಯ ಅಧಿಕಾರಿಯೊಬ್ಬರು ಕೇಂದ್ರ ಏಜೆನ್ಸಿಗಳ ಮೇಲೆ  ಒತ್ತಡ ಹೇರುವ ತಂತ್ರ ಇದು ಎಂದು ಹೇಳಿದ್ದರು.

ಕೇಂದ್ರ ಸಂಸ್ಥೆಗಳು ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಕಚೇರಿಯನ್ನು ಶಾಮೀಲುಗೊಳಿಸಲು ಉತ್ಸುಕವಾಗಿವೆ, ಆದರೆ  ಪಕ್ಷವು ಕ್ರಮವನ್ನು ವಿರೋಧಿಸುತ್ತದೆ ಎಂದು ಮಧ್ಯೆ ಸಿಪಿಐ (ಎಂ) ರಾಜ್ಯ ಸಚಿವಾಲಯವು ಹೇಳಿಕೆಯನ್ನು ಬಿಡುಗಡೆ ಮಾಡಿತು,

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಕೂಡ ಇತ್ತೀಚೆಗೆ ಪ್ರಕರಣದಲ್ಲಿ ಮಧ್ಯಪ್ರವೇಶಿಸಿಇದು ಮುಖ್ಯಮಂತ್ರಿ ಕಚೇರಿಯಿಂದ ಜಾರಿಗೆ ತರಲಾಗಿರುವ ನಾಟಕಎಂದು ಕರೆದರು.

ಮುಖ್ಯಮಂತ್ರಿಯವರು   ದಿನಗಳಲ್ಲಿ ಕೇಂದ್ರ ಏಜೆನ್ಸಿಗಳನ್ನು ಶ್ಲಾಘಿಸಿದರು ಆದರೆ ಅದು ಅವರ ಕಚೇರಿಯನ್ನು ಸಹ ತನಿಖೆ ಮಾಡಲು ಪ್ರಾರಂಭಿಸಿದಾಗ ಅವರು ಅದರ  ವಿರುದ್ಧ ತಿರುಗಿದರು" ಎಂದು ಮುರಳೀಧರನ್ ಹೇಳಿದರು.

ಪ್ರತಿಪಕ್ಷದ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)  ವಾಯ್ಸ್ ಮೇಲ್ ಚಿನ್ನದ ಕಳ್ಳಸಾಗಣೆ ಪ್ರಕರಣದ ಬಗ್ಗೆ ನಡೆಯುತ್ತಿರುವ ತನಿಖೆಯನ್ನು ಹಾಳುಮಾಡುವ ಕ್ರಮವಾಗಿದೆ ಮತ್ತು ಅದರ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಪ್ರಯತ್ನಿಸಿದೆ ಎಂದು ಹೇಳಿದರು.

ಎರಡು ದಿನಗಳ ಹಿಂದೆ, ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಸುರೇಶನನ್ನು ಜೈಲಿನಲ್ಲಿ ಹಲವರು ಭೇಟಿಯಾಗುತ್ತಿದ್ದಾರೆಂದು ಆರೋಪಿಸಿದ್ದರು ಮತ್ತು ಅಕ್ಟೋಬರ್ ಎರಡನೇ ವಾರದಲ್ಲಿ ಸುರೇಶ್ ಅವರನ್ನು ಜೈಲಿನಲ್ಲಿ ಇಡಲಾದ ಬಳಿಕ ಭೇಟಿಯಾದ ಜನರ ಪಟ್ಟಿಯನ್ನು ನೀಡುವಂತೆ ಕೋರಿದ್ದರು.

"ಇತ್ತೀಚಿನ ಬೆಳವಣಿಗೆ ಹಿಂದೆ ಮುಖ್ಯಮಂತ್ರಿ ಕಚೇರಿ ಇದೆ" ಎಂದು ಕಾಂಗ್ರೆಸ್ ಘಟಕದ ಮುಖ್ಯಸ್ಥ ಮುಲ್ಲಪಲ್ಲಿ ರಾಮಚಂದ್ರನ್ ಹೇಳಿದ್ದಾರೆ. ತನಿಖೆ ತನ್ನನ್ನು ತಲುಪಲಿರುವ ಕಾರಣ ವಿಜಯನ್ ಸ್ವಯಂ ಗೋಲು ಹೊಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಎರಡು ವಾರಗಳ ಹಿಂದೆ, ಮುಖ್ಯಮಂತ್ರಿಯ ಇನ್ನೊಬ್ಬ ಕಾರ್ಯದರ್ಶಿ ಸಿ ಎಂ ರವೀಂದ್ರನ್ ಅವರನ್ನು ಇಡಿ ಕರೆಸಿತ್ತು. ಆದರೆ ಕೋವಿಡ್ -೧೯ ಗೆ ಧನಾತ್ಮಕ ಪರೀಕ್ಷೆ ನಡೆಸಿದ ಕಾರಣ ಅವರಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ರವೀಂದ್ರನ್ ಅವರು ಸಿಎಂಗೆ ತುಂಬಾ ಆಪ್ತರಾಗಿದ್ದಾರೆಂದು ಹೇಳಲಾಗಿದೆ.

ಯುಎಇ ದೂತಾವಾಸಕ್ಕೆ ರಾಜತಾಂತ್ರಿಕ ರವಾನೆ ಎಂದು ಮರೆಮಾಚಿದ ಪ್ಯಾಕೇಜಿನಿಂದ  ೩೦ ಕೆಜಿ ಚಿನ್ನವನ್ನು ಕಸ್ಟಮ್ಸ್ ವಶಪಡಿಸಿಕೊಂಡ ನಂತರ ಜುಲೈ ರಂದು ಚಿನ್ನದ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ.

ನಂತರ ಬ್ಯಾಗೇಜ್ ಸ್ವೀಕರಿಸಲು ಬಂದ ಕಾನ್ಸುಲೇಟ್ ಮಾಜಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿ ಎಸ್ ಸರಿತ್ ಕುಮಾರ್ ಅವರನ್ನು ಕಸ್ಟಮ್ಸ್ ಬಂಧಿಸಿತು.

ಇತರ ಇಬ್ಬರು ಶಂಕಿತರಾದ ಸ್ವಪ್ನಾ ಸುರೇಶ್ ಮತ್ತು ಅವರ ಸಹಚರ ಸಂದೀಪ್ ನಾಯರ್ ಅವರನ್ನು ಐದು ದಿನಗಳ ನಂತರ ಬೆಂಗಳೂರಿನಲ್ಲಿರುವ ಅವರ ಅಡಗುತಾಣದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ. ಹಿರಿಯ ಅಧಿಕಾರಿ ಶಿವಶಂಕರ್ ಅವರನ್ನು ಸುರೇಶ್ ಅವರೊಂದಿಗಿನ ಸಂಪರ್ಕಗಳು ಹೊರಬಿದ್ದ ನಂತರ ಅಮಾನತುಗೊಳಿಸಲಾಗಿದೆ. ೩೬ ಜನರನ್ನು ಬಂಧಿಸಿರುವ ಪ್ರಕರಣವನ್ನು ಐದು ಕೇಂದ್ರ ಸಂಸ್ಥೆಗಳು ತನಿಖೆ ನಡೆಸುತ್ತಿವೆ.

Wednesday, November 4, 2020

ಮಹಾರಾಷ್ಟ್ರದ ಹಾದಿಯಲ್ಲಿ ಕೇರಳ: ಸಿಬಿಐ ತನಿಖಾ ಅನುಮತಿ ವಾಪಸ್

 ಮಹಾರಾಷ್ಟ್ರದ ಹಾದಿಯಲ್ಲಿ ಕೇರಳ: ಸಿಬಿಐ ತನಿಖಾ ಅನುಮತಿ ವಾಪಸ್

ನವದೆಹಲಿ: ರಾಜ್ಯzಲ್ಲಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ತನಿಖೆ ನಡೆಸಲು ನೀಡಲಾಗಿದ್ದ ಸಾಮಾನ್ಯ ಸಮ್ಮತಿಯನ್ನು ಕೇರಳ ಸರ್ಕಾರವು 2020 ನವೆಂಬರ್ 04ರ ಬುಧವಾರ ಹಿಂಪಡೆದುಕೊಂಡಿತು. ಇದರೊಂದಿಗೆ ಇಂತಹುದೇ ಕ್ರಮ ಕೈಗೊಂಡ ಬಿಜೆಪಿಯೇತರ ರಾಜ್ಯಗಳಾದ ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಹಾರಾಷ್ಟ್ರ ರಾಜ್ಯಗಳ ಪಟ್ಟಿಗೆ ಕೇರಳವೂ ಸೇರ್ಪಡೆಯಾಯಿತು.

ಸಿಬಿಐಗೆ ನೀಡಲಾಗಿದ್ದ ಸಾಮಾನ್ಯ ತನಿಖಾ ಸಮ್ಮತಿಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಹಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಬುಧವಾರ ತೆರೆ ಎಳೆಯಲಾಗಿದ್ದು, ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಕುರಿತ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ.

ರಾಜ್ಯ ಸಚಿವ ಸಂಪುಟದ ನಿರ್ಧಾರದಂತೆ ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಪ್ರಕರಣವನ್ನು ದಾಖಲಿಸುವ ಮುನ್ನ ಕೇಂದ್ರೀಯ ತನಿಖಾ ಸಂಸ್ಥೆಯು ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು.

ಇತ್ತೀಚೆಗೆ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಸಿಬಿಐಯನ್ನು ರಾಜ್ಯದಲ್ಲಿ ನಿರ್ಬಂಧಿಸಲು  ನಿರ್ಧರಿಸಿತ್ತು. ಮಹಾರಾಷ್ಟ್ರದಲ್ಲಿ ಟಿಆರ್ಪಿ ಹಗರಣವನ್ನು ಸಿಬಿಐ ಮೂಲಕ ತನಿಖೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ ಮರುದಿನವೇ ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಗೆ ನೀಡಲಾಗಿದ್ದ ಸಾಮಾನ್ಯ ಸಮ್ಮತಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತ್ತು.

ಕೇಂದ್ರ ಸರ್ಕಾರದ ವಿರುದ್ಧ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಹೋರಾಟಗಳನ್ನು ಮಾಡುತ್ತಿರುವ ರಾಜ್ಯ ಸರ್ಕಾರ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಬಿಐಯನ್ನು ನಿರ್ಬಂಧಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಒಂದು ಬಾಣದಂತೆ ಕಂಡುಬಂದಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗೆಗಿನ ಮುಂಬಯಿ ಪೊಲೀಸ್ ತನಿಖೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ ಕೇಂದ್ರ ಸಿಬಿಐ ಮೂಲಕ ಪ್ರಕರಣದ ತನಿಖೆಗೆ ನಿರ್ಧರಿಸುತ್ತಿದ್ದಂತೆಯೇ ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಗೆ ಸಮ್ಮತಿ ಹಿಂತೆಗೆದುಕೊಳ್ಳುವ ಮೂಲಕ ತನ್ನ ಪ್ರತ್ಯಸ್ತ್ರವನ್ನು ಬಿಟ್ಟಿತ್ತು.

ಸಿಬಿಐ ಡಿಎಸ್ಪಿಇ ಕಾಯ್ದೆ ಅಡಿಯಲ್ಲಿ ಬರುತ್ತದೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಗಳು ರಾಜ್ಯ ಸರ್ಕಾರಗಳ ಅಧೀನಕ್ಕೆ ಬರುವುದರಿಂದ ರಾಜ್ಯದೊಳಗಿನ ಕೇಂದ್ರ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರವು ತನಿಖಾ ಸಂಸ್ಥೆಗೆ ಸಾಮಾನ್ಯ ಸಮ್ಮತಿಯನ್ನು ನೀಡುವ ಅಗತ್ಯವಿದೆ. ರಾಜ್ಯ ಸರ್ಕಾರಗಳು ಅನುಮತಿಯನ್ನು ನವೀಕರಿಸುತ್ತಿರುತ್ತವೆ.

೨೦೧೮ರ ಕೊನೆಯಲ್ಲಿ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶಗಳು ಸಿಬಿಐ ತನಿಖೆಗೆ ನೀಡಲಾದ ಸಾಮಾನ್ಯ ಸಮ್ಮತಿಯನ್ನು ಹಿಂತೆಗೆದುಕೊಂಡಿದ್ದವು. ಕೇಂದ್ರ ಸರ್ಕಾರವು ವಿರೋಧಿಗಳಿಗೆ ಕಿರುಕುಳ ನೀಡಲು ಸಂಸ್ಥೆಯನ್ನು ದುರ್ಬಳಕೆ ಮಾಡುತ್ತಿದೆ ಎಂದು ರಾಜ್ಯಗಳು ಆರೋಪಿಸಿದ್ದವು. ಆದರೆ, ಆಂಧ್ರದಲ್ಲಿ ಅಧಿಕಾರಕ್ಕೆ ಬಂದ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡಿತು.

ಕಾಂಗ್ರೆಸ್ ಆಡಳಿತದಲ್ಲಿರುವ ಛತ್ತೀಸ್ ಗಢ, ೨೦೧೯ರ ಜನವರಿಯಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಸಾಮಾನ್ಯ ಸಮ್ಮತಿಯನ್ನು ವಾಪಸ್ ಪಡೆದಿತ್ತು. ೨೦೨೦ರ ಜುಲೈಯಲ್ಲಿ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವೂ ಇದೇ ದಾರಿಯನ್ನು ಹಿಡಿದಿತ್ತು.

ನಿರಾಶ್ರಿv ವಸತಿ ಆಶ್ರಯ ವಸತಿ ಯೋಜನೆಯಾದ ಲೈಫ್ ಮಿಷನ್ ವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಕೇರಳ ಸರ್ಕಾರ ಮತ್ತು ಸಿಬಿಐ ನಡುವೆ ಜಗ್ಗಾಟಗಳಿವೆ. ಯೋಜನೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾg ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಅಕ್ಟೋಬರಿನಲ್ಲಿ ಕೇರಳ ಹೈಕೋರ್ಟ್ ಸಿಬಿಐ ತನಿಖೆಗೆ ತಡೆ ನೀಡಿತ್ತು.

ವಿಪಕ್ಷಗಳ ಟೀಕೆ: ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಲಾಗಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ನಿರ್ಧಾರವನ್ನು ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ಕೇರಳ ಸರ್ಕಾರವು ತನ್ನ ನಾಯಕರನ್ನು ರಕ್ಷಿಸಿಕೊಳ್ಳಲು ಕ್ರಮ ಕೈಗೊಂಡಿದೆ ಎಂದು ಬಿಜೆಪಿ ದೂರಿದೆ.

Saturday, January 4, 2020

೧೧ ಮುಖ್ಯಮಂತ್ರಿಗಳಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ

೧೧ ಮುಖ್ಯಮಂತ್ರಿಗಳಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ
ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಒಂದಾಗಲು ಆಗ್ರಹ
ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ೧೧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಒಂದಾಗುವಂತೆ  2020 ಜನವರಿ 03ರ  ಶುಕ್ರವಾರ ಆಗ್ರಹಿಸಿದರು. ಡಿಸೆಂಬರ್ ತಿಂಗಳಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವಂತೆ ಒತ್ತಡ ತರಬೇಕು ಎಂದು ವಿವಿಧ ಮುಖ್ಯಮಂತ್ರಿಗಳಿಗೆ ವಿಜಯನ್ ಮನವಿ ಮಾಡಿದರು.

೨೦೧೯ರ ಪೌರತ್ವ ತಿದ್ದುಪಡಿ ಕಾಯ್ದೆಯ ಪರಿಣಾಮವಾಗಿ ನಮ್ಮ ಸಮಾಜದ ವಿಶಾಲ ವರ್ಗದಲ್ಲಿ ಭೀತಿಗಳು ಹುಟ್ಟಿವೆ. ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯನ್ನ ರಕ್ಷಿಸಬಯಸುವ ಎಲ್ಲ ಭಾರತೀಯರಲ್ಲಿ ಒಗ್ಗಟ್ಟು ಮೂಡಬೇಕಾದದ್ದು ಸಮಯದ ಅಗತ್ಯವಾಗಿದೆಎಂದು ಪಿಣರಾಯಿ ತಮ್ಮ ಪತ್ರದಲ್ಲಿ ಹೇಳಿದರು.

೨೦೧೯ರ
ಡಿಸೆಂಬರ್ ೩೧ರಂದು ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯದ ಬಗ್ಗೆ ಕೂಡಾ ವಿಜಯನ್ ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ. ಕೇರಳ ವಿಧಾನಸಭೆಯು ಅಂಗೀಕರಿಸಿದ ನಿರ್ಣಯವು ನಮ್ಮ ರಾಷ್ಟ್ರದ ಜಾತ್ಯತೀತ ನೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದ ನಿರ್ಣಯವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು.

೧೨
ರಾಜ್ಯಗಳ ಮುಖ್ಯಮಂತ್ರಿಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದು, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅವರ ಪೈಕಿ ಮುಂಚೂಣಿಯಲ್ಲಿದ್ದಾರೆ.

ಸಿಲಿಗುರಿಯಲ್ಲಿ ಶುಕ್ರವಾರ ನಡೆದ ರ್ಯಾಲಿಯಲ್ಲಿ ಬ್ಯಾನರ್ಜಿ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ್ದಕ್ಕಾಗಿ ಕೇಂದ್ರದ ಮೇಲೆ ಹರಿಹಾಯ್ದು, ಅದರ ವಿರುದ್ಧ ಒಂದಾಗುವಂತೆ ರಾಜ್ಯಗಳಿಗೆ ಕರೆ ನೀಡಿದರು.

ನಾನು ರಾಷ್ಟ್ರೀಯ ಪೌರ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಡುತ್ತಿದ್ದೇನೆ ಮತ್ತು ನನ್ನ ಜೊತೆ ಕೈಜೋಡಿಸುವಂತೆ ಮತ್ತು ನಮ್ಮ ಪ್ರಜಾಪ್ರಭುತ್ವದ ರಕ್ಷಣೆಗೆ ಮುಂದಾಗುವಂತೆ ಜನತೆಗೆ ಮನವಿ ಮಾಡುತ್ತಿದ್ದೇನೆಎಂದು ಬ್ಯಾನರ್ಜಿ ಹೇಳಿದರು.

ಕೇರಳವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವಂತೆ ಕೇಂದ್ರವನ್ನು ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿದ ಮೊದಲ ರಾಜ್ಯವಾಗಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳು ನಿರ್ಣಯವನ್ನು ಬೆಂಬಲಿಸಿದ್ದವು.

ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ನಿರ್ಣಯ ಅಂಗೀಕರಿಸಿದ ಬಳಿಕ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡುವಿಜಯನ್ ಅವರು ಉತ್ತಮ ಕಾನೂನು ಸಲಹೆ ಪಡೆಯಬೇಕು ಎಂದು ಸಲಹೆ ಮಾಡಿದ್ದರು. ಕೇರಳದ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯ ವಿಧಾನಸಭೆ ಅಂಗೀಕರಿಸಿರುವ ನಿರ್ಣಯಕ್ಕೆ ಯಾವುದೇ ಕಾನೂನುಬದ್ಧ ಮಾನ್ಯತೆ ಇಲ್ಲ ಮತ್ತು ಅದು ಸಂವಿಧಾನಬಾಹಿರ ನಿರ್ಣಯವಾಗಿದೆ ಎಂದು ಹೇಳಿದ್ದರು.

ಏನಿದ್ದರೂ
ಕೇರಳ ವಿಧಾನಸಭೆ ನಿರ್ಣಯ ಕುರಿತ ಟೀಕೆಗಳನ್ನು ತಿರಸ್ಕರಿಸಿದ ವಿಜಯನ್ ರಾಜ್ಯ ವಿಧಾನಸಭೆಗಳಿಗೆ ತಮ್ಮದೇ ಹಕ್ಕುಗಳಿವೆ ಎಂದು ಹೇಳಿದ್ದಾರೆ.

ರಾಜ್ಯ ವಿಧಾನಸಭೆಗಳಿಗೆ ತಮ್ಮದೇ ಆದ ಹಕ್ಕುಗಳಿವೆ. ಇಂತಹ ಕ್ರಮಗಳು ಎಲ್ಲೂ ಕೇಳಿ ಬರುವುದೇ ಇಲ್ಲ. ಆದರೆ ನಮ್ಮ ರಾಷ್ಟ್ರದಲ್ಲಿ ಈಗಿನ ದಿನಗಳಲ್ಲಿ ಸಂಭವಿಸುತ್ತಿರುವ ಘಟನಾವಳಿಗಳು ಅಭೂತಪೂರ್ವವಾಗಿರುವುದರಿಂದ ಪ್ರಸ್ತುತ ಪರಿಸ್ಥಿತಿಗಳನ್ನು ಸಾಮಾನ್ಯವೆಂದು ನಾವು ತಳ್ಳಿಹಾಕುವಂತಿಲ್ಲಎಂದು ವಿಜಯನ್ ಬುಧವಾರ ಹೇಳಿದ್ದರು.

Advertisement