Showing posts with label ಮಳೆ. Show all posts
Showing posts with label ಮಳೆ. Show all posts

Thursday, May 14, 2026

ಭೀಕರ ಬಿರುಗಾಳಿಗೆ ಹಾರಿ ಹೋದ ಯುವಕ!

 ಭೀಕರ ಬಿರುಗಾಳಿಗೆ ಹಾರಿ ಹೋದ ಯುವಕ!

ಉತ್ತರ ಪ್ರದೇಶ ವರುಣ ಅಟ್ಟಹಾಸ: 89 ಬಲಿ

ರೇಲಿ: ಪ್ರಕೃತಿಯ ವಿಕೋಪಕ್ಕೆ ಉತ್ತರ ಪ್ರದೇಶ ತತ್ತರಿಸಿ ಹೋಗಿದೆ. 2026 ಮೇ 13ರ ಬುಧವಾರ ರಾಜ್ಯದಾದ್ಯಂತ ಸಂಭವಿಸಿದ ಭೀಕರ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿಗೆ ಬರೋಬ್ಬರಿ 89 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರತೆಯ ನಡುವೆ, ಬರೇಲಿಯಲ್ಲಿ ವ್ಯಕ್ತಿಯೊಬ್ಬ ಗಾಳಿಯಲ್ಲಿ ಹಾರಿ ಹೋದ ಎದೆನಡುಗಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

300 ಮೀಟರ್ ದೂರಕ್ಕೆ ಹಾರಿ ಬಿದ್ದ ವ್ಯಕ್ತಿ!

ಬರೇಲಿಯ ಭಮೋರಾ ಭಾಗದ ಬಾಬಿಯಾನಾ ಗ್ರಾಮದ ನಿವಾಸಿ ನನ್ಹೆ-ಮಿಯಾನ್ ಎಂಬುವವರು ಈ ಘೋರ ಘಟನೆಗೆ ಸಾಕ್ಷಿಯಾದವರು. ಬಿರುಗಾಳಿ ಶುರುವಾದಾಗ ರಕ್ಷಣೆಗಾಗಿ ಅವರು ಸಮೀಪದ ಕಲ್ಯಾಣ ಮಂಟಪವೊಂದರ ಒಳಗೆ ಆಶ್ರಯ ಪಡೆದಿದ್ದರು. ಗಾಳಿಯ ವೇಗ ಹೆಚ್ಚಾದಂತೆ, ಅಲ್ಲಿನ ಟಿನ್ ಶೆಡ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಕೆಳಗೆ ಕ್ಲಿಕ್‌ ಮಾಡಿ ವಿಡಿಯೋ ನೋಡಿ:

 ಗಾಳಿಯ ರಭಸ ಎಷ್ಟಿತ್ತೆಂದರೆ:

  • ಬೃಹತ್ ಟಿನ್ ಶೆಡ್ ಅನ್ನೇ ಕಿತ್ತೆಸೆದ ಬಿರುಗಾಳಿ.
  • ಶೆಡ್ ಹಿಡಿದಿದ್ದ ನನ್ಹೆ-ಮಿಯಾನ್ ಅವರು ಸುಮಾರು 300 ಮೀಟರ್‌ಗಳಷ್ಟು ದೂರ ಗಾಳಿಯಲ್ಲೇ ತೇಲುತ್ತಾ ಹೋಗಿದ್ದಾರೆ.
  • ಅಂತಿಮವಾಗಿ ಸಮೀಪದ ಹೊಲವೊಂದಕ್ಕೆ ಅಪ್ಪಳಿಸಿದ್ದು, ಅವರ ಕೈಕಾಲುಗಳು ಮುರಿದಿವೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಹಾನಿಯ ಅಂಕಿ-ಅಂಶಗಳು

ಕೇವಲ ಜೀವಹಾನಿಯಲ್ಲದೆ, ಆಸ್ತಿಪಾಸ್ತಿಗೂ ಭಾರೀ ನಷ್ಟ ಉಂಟಾಗಿದೆ. ಸರ್ಕಾರದ ಅಧಿಕೃತ ವರದಿಯ ಪ್ರಕಾರ:

ವಿವರ

ಹಾನಿಯ ಪ್ರಮಾಣ

ಮೃತಪಟ್ಟವರು

89 ಜನರು

ಗಾಯಗೊಂಡವರು

53 ಜನರು

ಮೃತಪಟ್ಟ ಪ್ರಾಣಿಗಳು

114

ಕಾರಣಗಳು

ಗೋಡೆ ಕುಸಿತ, ಮರಗಳ ಉರುಳುವಿಕೆ, ಸಿಡಿಲು

 "ರಸ್ತೆಯೇ ಕಾಣಿಸುತ್ತಿರಲಿಲ್ಲ!"  ಪ್ರತ್ಯಕ್ಷದರ್ಶಿಗಳ ಹೇಳಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ. "ನಾನು ಕಾರಿನಲ್ಲಿದ್ದಾಗ ಮರಗಳು ಬೀಳುತ್ತಿದ್ದವು, ಧೂಳಿನಿಂದಾಗಿ ರಸ್ತೆಯೇ ಕಾಣಿಸುತ್ತಿರಲಿಲ್ಲ. ಜೀವ ಭಯದಿಂದ ಕಾರನ್ನು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿದೆ," ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಹವಾಮಾನ ಇಲಾಖೆ ಎಚ್ಚರಿಕೆ: ಪಶ್ಚಿಮದ ಮಾರುತಗಳ ಪ್ರಭಾವದಿಂದಾಗಿ ಉತ್ತರ ಭಾರತದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮೊದಲೇ ಮುನ್ಸೂಚನೆ ನೀಡಿತ್ತು.

ಈ ಭೀಕರ ಬಿರುಗಾಳಿಯು ಉತ್ತರ ಪ್ರದೇಶದ ಮೂಲಸೌಕರ್ಯ ಹಾಗೂ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಲು ಇನ್ನೂ ಕೆಲವು ದಿನಗಳು ಬೇಕಾಗಬಹುದು.

Saturday, April 25, 2026

ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು, ಮಳೆ ಬಂದರೂ ಕರೆಂಟು!

 ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟುಮಳೆ ಬಂದರೂ ಕರೆಂಟು!

ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು,
  
ಮಳೆ ಬಂದರೂ ಕರೆಂಟು!

ಬ್ಯಾಟ್ರಿಯ ಚಾರ್ಜು ಮಾಡಿ ಉಪಯೋಗಿಸುವ ಹಾಂಗೆ ಮತ್ತೆ ಮತ್ತೆ ಉಪಯೋಗಿಸುಲೆ ಸಾಧ್ಯ ಅಪ್ಪಂತ ಇಂಧನದ ವಿಷಯಲ್ಲಿ ಹವಾಮಾನ ಹೇಳ್ತದು ಯಾವಾಗಲೂ ಒಂದು ದೊಡ್ಡ ಸವಾಲು. ಸಾಧಾರಣ ಮೋಡ ಕವಿದ ವಾತಾವರಣ ಇಪ್ಪಗ ಅಥವಾ ಮಳೆ ಬಪ್ಪಗ ಸೋಲಾರ್ ಪ್ಯಾನೆಲುಗ ಕೈಕೊಡ್ತವು ಹೇಳ್ತದು ಎಂಗೊಗೆಲ್ಲ ಗೊಂತಿಪ್ಪ ವಿಷಯವೇ. ಆದರೆ ಈಗ ವಿಜ್ಞಾನಿಗೋ ಇದಕ್ಕೆ ಒಂದು ಬಾರಿ ಲಾಯ್ಕದ ಉಪಾಯ ಕಂಡುಹಿಡುದ್ದವು. ಬೆಶಿಲು ಇಪ್ಪಗ ಸೂರ್ಯಂದ, ಮಳೆ ಬಪ್ಪಗ ಮಳೆ ನೀರ ಹನಿಂದ ಕರೆಂಟ್ ತಯಾರು ಮಾಡುವ ಹೈಬ್ರಿಡ್ []

ಮುಂದೆ ಓದಿ »

 ಇಲ್ಲವೇ ಪರ್ಯಾಯ.ಕಾಮ್‌ ವೆಬ್‌ ಸೈಟಿನ ಹವ್ಯಕ ಪುಟ ನೋಡಿ.

ಚಂದ್ರನ ಪ್ರವಾಸ ಯಶಸ್ವಿ

ಮೊನ್ನೆ ನಾವೊಂದು ಸುದ್ದಿ ಮಾತಾಡಿದ್ದಪ್ಪೋ, ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ, ನಾಸಾ ಚಂದ್ರನ ಪ್ರವಾಸಕ್ಕೆ ಹೇಳಿ ನಾಲ್ಕು ಜನರ ಕಳಿಸಿದ್ದು ಹೇಳಿ. ಪ್ರವಾಸ ಯಶಸ್ವಿ ಆಯಿದು. ನಾಲ್ಕು ಜೆನವೂ ಯಶಸ್ವಿಯಾಗಿ ಭೂಮಿಗೆ ಬೈಂದವು. ಇದು ಜಗತ್ತಿನ ಬಾಹ್ಯಾಕಾಶ ಕ್ಷೇತ್ರಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು. 2028ಕ್ಕೆ ಚಂದ್ರನ ನೆಲಲ್ಲಿ ಇಳಿವಲೆ, ನಂತ್ರ ಮಂಗಳ ಗ್ರಹದ ಹೊಡೆಂಗೆ ಹೋಪಲೆ ಪ್ರವಾಸಂದ ನಾಸಾಕ್ಕೆ ಅನುಕೂಲ ಆವುತ್ತು. ಆರ್ಟೆಮಿಸ್‌-2 ಹೇಳ್ತ ಯೋಜನೆಯ ಭಾಗವಾಗಿ ಕ್ರಿಸ್ಟಿನಾ ಕೋಚ್‌, ಜೆರೆಮಿ ಹ್ಯಾನ್ಸನ್‌, […]

ಮುಂದೆ ಓದಿ »

 ಇಲ್ಲವೇ ಪರ್ಯಾಯ.ಕಾಮ್‌ ವೆಬ್‌ ಸೈಟಿನ ಹವ್ಯಕ ಪುಟ ನೋಡಿ

Saturday, March 22, 2025

ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ

 ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ

ಬೆಂಗಳೂರು: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸು ಪಾಸಿನ ಪ್ರದೇಶಗಳಲ್ಲಿ ಈದಿನ (೨೦೨೫ ಮಾರ್ಚ್‌ ೨೨) ಮುಂಗಾರು ಪೂರ್ವ ಮಳೆ ಸುರಿದು ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನ್ನೆರೆಯಿತು.

ಸಂಜೆ ೪.೨೦ಕ್ಕೆ ಗುಡುಗು ಸಹಿತವಾಗಿ ಸುರಿದ ಮಳೆ ಸುಮಾರು ೪೦ ನಿಮಿಷಗಳಿಗೂ ಹೆಚ್ಚು ಕಾಲ ಭೂಮಿಯನ್ನು ತೋಯಿಸಿತು.

ಮಳೆಯ ಎರಡು ವಿಡಿಯೋಗಳು ಇಲ್ಲಿವೆ.


Tuesday, October 22, 2024

ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ಕುಸಿದು 3 ಸಾವು

 ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ಕುಸಿದು 3 ಸಾವು

ಬೆಂಗಳೂರು: ಬೆಂಗಳೂರಿನ ಪೂರ್ವ ಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡವೊಂದು 2024 ಅಕ್ಟೋಬರ್‌ 22 ಮಂಗಳವಾರ ಕುಸಿದು ಮೂವರು ಸಾವನ್ನಪ್ಪಿದ್ದು, ಇನ್ನೂ ಹಲವರು ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಹೆಣ್ಣೂರು ಸಮೀಪದ ಹೊರಮಾವು ಅಗರದ ಅಂಜನಾದ್ರಿ ಲೇಔಟ್‌ನಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿದಿದೆ. ಕಟ್ಟಡದಲ್ಲಿ ಒಟ್ಟು 15 ರಿಂದ 17 ಮಂದಿ ಇದ್ದರೆನ್ನಲಾಗಿದೆ.

ಮೃತರಲ್ಲಿ ಒಬ್ಬನನ್ನು ಬಿಹಾರ ಮೂಲದ ಹನುಮಾನ್ (25) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಓರ್ವ ಮಹಿಳೆ ಸೇರಿದಂತೆ 9 ಮಂದಿಯನ್ನು ರಕ್ಷಿಸಲಾಗಿದೆ.


ಮಾಲೀಕ ಮುನಿ ರೆಡ್ಡಿ ತಲೆಮರೆಸಿಕೊಂಡಿದ್ದು, ಪತ್ತೆಯಾಗಿಲ್ಲ.

ಎನ್‌ಡಿಆರ್‌ಎಫ್ ಸೇರಿದಂತೆ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದ್ದು, ಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

Thursday, May 30, 2024

ಕೇರಳಕ್ಕೆ ಬಂತು ಮುಂಗಾರು, ಭಾರೀ ಮಳೆ, ಯೆಲ್ಲೋ ಅಲರ್ಟ್‌

 ಕೇರಳಕ್ಕೆ ಬಂತು ಮುಂಗಾರು, ಭಾರೀ ಮಳೆ, ಯೆಲ್ಲೋ ಅಲರ್ಟ್‌

ತಿರುವನಂತಪುರಂ: ಕೇರಳ ಮತ್ತು ಈಶಾನ್ಯ ಭಾರತದ ಬಹುತೇಕ ಭಾಗಗಳಿಗೆ  ಈದಿನ (30 ಮೇ 2024) ನೈಋತ್ಯ ಮುಂಗಾರು ಆಗಮಿಸಿದೆ, ಕೇರಳದಲ್ಲಿ ಮತ್ತು ಮಣಿಪುರದಲ್ಲಿ ಭಾರೀ ಮಳೆ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಟಿಸಿದೆ.

ಮೇ 31 ರ ವೇಳೆಗೆ ಕೇರಳದ ಮೇಲೆ ಮುಂಗಾರು ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ಇದಕ್ಕೆ ಮುನ್ನ ಮೊದಲು ಘೋಷಿಸಿತ್ತು. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ, ಇದರ ಪರಿಣಾಮವಾಗಿ ಮೇ ತಿಂಗಳಲ್ಲಿ ಹೆಚ್ಚುವರಿ ಮಳೆಯಾಗಿದೆ ಎಂದು ಹವಾಮಾನ ಕಚೇರಿಯ ಅಂಕಿಅಂಶಗಳು ಹೇಳಿವೆ.

ಕೇರಳಕ್ಕೆ ಸಾಮಾನ್ಯವಾಗಿ ನೈಋತ್ಯ ಮುಂಗಾರು ಜೂನ್‌ 1ರಂದು ಪ್ರಾರಂಭವಾಗುತ್ತದೆ. ಹಾಗೆಯೇ ಈಶಾನ್ಯ ಭಾರತದ  ಅರುಣಾಚಲ ಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನಲ್ಲಿ ಜೂನ್ 5 ರಂದು ಮುಂಗಾರು ಆಗಮಿಸುವುದು ವಾಡಿಕೆಯಾಗಿದೆ..

ಮುಂಗಾರು ಆಗಮನದ ಹಿನ್ನೆಲೆಯಲ್ಲಿ ಐಎಂಡಿಯು ತನ್ನ ಮುನ್ಸೂಚನೆಯನ್ನು ಪರಿಷ್ಕರಿಸಿದೆ ಮತ್ತು ಗುರುವಾರ ಕೇರಳದ 14 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆಯನ್ನು ನೀಡಿದೆ. ಹಳದಿ ಎಚ್ಚರಿಕೆಯ ಪ್ರಕಾರ 64.5 ಎಂಎಂನಿಂದ 115.5 ಎಂಎಂವರೆಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.

ಯಾವ ಯಾವ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ?

ಮೇ 31: ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್

ಜೂನ್ 1: ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು, ಕಾಸರಗೋಡು

ಜೂನ್ 2: ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು, ಕಾಸರಗೋಡು.

Advertisement