ಡೊನಾಲ್ಟ್
ಟ್ರಂಪ್ ತಲೆಗೆ ೮೦ ದಶಲಕ್ಷ ಡಾಲರ್
ಬಹುಮಾನ
ಸೊಲೈಮಾನಿ
ಅಂತ್ಯಸಂಸ್ಕಾರ ಮೆರವಣಿಗೆಯಲ್ಲಿ ಇರಾನ್ ಘೋಷಣೆ
ಟೆಹರಾನ್:
ಇರಾನಿನ ಮೇಜರ್ ಜನರಲ್ ಖಾಸಿಂ ಸೊಲೈಮಾನಿ ಸಾವಿಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಲೆಗೆ ೮೦ ಮಿಲಿಯನ್ (೮೦
ದಶಲಕ್ಷ) ಡಾಲರ್ ಬಹುಮಾನವನ್ನು ಇರಾನ್ 2020 ಜನವರಿ 06ರ ಸೋಮವಾರ ಘೋಷಿಸಿತು.
ಸೊಲೈಮಾನಿ ಅಂತ್ಯಯಾತ್ರೆಯ ವೇಳೆಯಲ್ಲಿ ಇರಾನಿನ ಉನ್ನತ ನಾಯಕರೊಬ್ಬರು ಇರಾನಿನ ಪ್ರತಿಯೊಬ್ಬ ಪ್ರಜೆಯೂ ೧ ಡಾಲರನ್ನು ನೀಡಲಿದ್ದು ಈ ಮೊತ್ತವನ್ನು ಅಮೆರಿಕದ ಅಧ್ಯಕ್ಷನನ್ನು ಕೊಂದ ಯಾವುದೇ ವ್ಯಕ್ತಿಗೆ ನೀಡಲಾಗುವುದು ಎಂದು ಘೋಷಿಸಿರುವುದಾಗಿ ಅಂತ್ಯಯಾತ್ರೆಯ ನೇರಪ್ರಸಾರ ಮಾಡಿದ ಟಿವಿಗಳು ವರದಿ ಮಾಡಿದವು.

‘ಇರಾನ್
೮೦ ದಶಲಕ್ಷ ಪ್ರಜೆಗಳನ್ನು ಹೊಂದಿದೆ. ಇರಾನಿನ ಜನಸಂಖ್ಯೆಯನ್ನು ಆಧರಿಸಿ, ನಾವು ೮೦ ದಶಲಕ್ಷ ಡಾಲರ್
ಸಂಗ್ರಹಿಸಲು ಬಯಸಿದ್ದೇವೆ ಮತ್ತು ಅದನ್ನು
ಅಧ್ಯಕ್ಷ ಟ್ರಂಪ್ ಅವರ ತಲೆ ತೆಗೆದವರಿಗೆ ಬಹುಮಾನವಾಗಿ ನೀಡಲು ಬಯಸಿದ್ದೇವೆ’ ಎಂದು
ಇರಾನೀ ನಾಯಕ ಪ್ರಕಟಿಸಿದರು ಎಂದು ವರದಿಗಳು ತಿಳಿಸಿದವು.
ಟ್ರಂಪ್ ಆದೇಶದ ಮೇರೆಗೆ ಜನವರಿ ೩ರಂದು ನಡೆದ ಡ್ರೋಣ್ ದಾಳಿಯಲ್ಲಿ ಇರಾನಿನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕೋರ್ ನ ಖಡ್ಸ್ ಪಡೆಗಳ ಕಮಾಂಡರ್ ಸೊಲೈಮಾನಿ ಮತ್ತು ಇರಾಕಿನ ಅರೆ ಸೇನಾ ಪಡೆ ಹಶ್ಡ್ ಶಾಬಿ ಪಡೆಗಳ ಉಪ ಮುಖ್ಯಸ್ಥ ಅಬು ಮಹ್ದಿ ಅಲ್-ಮುಹಾಂಡಿಸ್ ಸಾವನ್ನಪ್ಪಿದ್ದರು.

ಇರಾಕಿನ
ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರವಲಯದ ರಸ್ತೆಯಲ್ಲಿ ಈ
ದಾಳಿ ನಡೆದಿತ್ತು.
ದಾಳಿಗೆ ಇರಾನಿನಲ್ಲಿ ವ್ಯಾಪಕ ಆಕ್ರೋಶ, ಖಂಡನೆ ವ್ಯಕ್ತವಾಗಿತ್ತು. ಇರಾನಿನ ಪರಮ ನಾಯಕ ಅಯತೊಲ್ಲಾ ಅಲಿ ಖೊಮೇನಿ ಮತ್ತು ಅಧ್ಯಕ್ಷ ಹಸನ್ ರೌಹಾನಿ ಅವರು ಅಮೆರಿಕದ ವಿರುದ್ಧ ಉಗ್ರ ಪ್ರತೀಕಾರದ ಶಪಥ ಸ್ವೀಕರಿಸಿದ್ದರು.

ಭಾನುವಾರ
ಇದಕ್ಕೂ ಮುನ್ನ ಇರಾನಿನ ಸಂಸತ್ ಸದಸ್ಯ ಅಬೊಲ್ಫಾಜ್ಲ್ ಅಬೌತೊರಬಿ ಅವರು ಅಮೆರಿಕದ ರಾಜಕೀಯ ಹೃದಯ ಭಾಗದ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿದ್ದರು.
‘ನಾವು ಶ್ವೇತಭವನದ ಮೇಲೆಯೇ ದಾಳಿ ನಡೆಸಬಲ್ಲೆವು, ನಾವು ಅವರಿಗೆ ಅಮೆರಿಕದ ನೆಲದಲ್ಲೇ ಪ್ರತಿಕ್ರಿಯಿಸಬಲ್ಲೆವು’ ಎಂದು ಅಬೌತೊರಬಿ ಹೇಳಿಕೆಯನ್ನು ಮಾಧ್ಯಮಗಳು ಉಲ್ಲೇಖಿಸಿದವು.

No comments:
Post a Comment