Tuesday, March 24, 2020

ಕೊರೋನಾ ವಕ್ರದೃಷ್ಟಿ: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷ ಮುಂದಕ್ಕೆ

ಕೊರೋನಾ ವಕ್ರದೃಷ್ಟಿ: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷ ಮುಂದಕ್ಕೆ
ನವದೆಹಲಿ: ಇಡೀ ವಿಶ್ವವು ಕೊರೋನಾವೈರಸ್ ಸಾಂಕ್ರಾಮಿಕ ವಿರುದ್ಧ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆಯಬೇಕಾಗಿದ್ದ ೨೦೨೦ರ ಒಲಿಂಪಿಕ್ಸ್  ಕ್ರೀಡಾ ಕೂಟವನ್ನು ಒಂದು ವರ್ಷ ಅವಧಿಗೆ ಮುಂದೂಡಲು ಜಪಾನ್ ಪ್ರಧಾನಿ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷರು 2020 ಮಾರ್ಚ್ 24ರ  ಮಂಗಳವಾರ ಒಪ್ಪಿದ್ದು, ಅಸಾಧಾರಣ ಕ್ರಮವಾಗಿ ಇದೇ ಮೊದಲ ಬಾರಿಗೆ ಶಾಂತಿಕಾಲದಲ್ಲಿ ಒಲಿಂಪಿಕ್ ಆಟೋಟವನ್ನು ಮುಂದೂಡಲು ತೀರ್ಮಾನಿಸಲಾಯಿತು.

ಒಲಿಂಪಿಕ್ಸ್ ಕ್ರೀಡಾಕೂಟವನ್ನು ಒಂದು ವರ್ಷದ ಅವಧಿಗೆ ಮುಂದೂಡುವ ಪ್ರಸ್ತಾಪವನ್ನು ನಾನು ಮುಂದಿಟ್ಟಿದ್ದು, ಅಧ್ಯಕ್ಷ ಒಲಿಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಚ್ ಅವರು ಅದಕ್ಕೆ ಶೇಕಡಾ ೧೦೦ರಷ್ಟು ಒಪ್ಪಿದ್ದಾರೆ ಎಂದು ಜಪಾನ್ ಪ್ರಧಾನಿ ಶಿಂಝೋ ಅಬೆ ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಕ್ರೀಡಾಕೂಟ ಮುಂದೂಡಿಕೆಯ ಕ್ರಮವು ಟೋಕಿಯೋ ನಗರಕ್ಕೆ ಭಾರೀ ದೊಡ್ಡ ಹೊಡೆತವಾಗಿದೆ. ಟೋಕಿಯೋ ನಗರವು ಕ್ರೀಡಾಕೂಟದ ಸಲುವಾಗಿ ಸಕಲ ಸಿದ್ಧತೆಗಳನ್ನೂ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಮುಗಿಸಿದ್ದಲ್ಲದೆ ವ್ಯಾಪಕ ಟಿಕೆಟ್ ಮಾರಾಟಕ್ಕೂ ವ್ಯವಸ್ಥೆ ಮಾಡಿತ್ತು.

ಬಹಿಷ್ಕಾರಗಳು, ಭಯೋತ್ಪಾದನೆ ದಾಳಿಗಳು ಮತ್ತು ಪ್ರತಿಭಟನೆಗಳನ್ನು ಎದುರಿಸಿದ್ದರೂ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟ ೧೯೪೮ರಿಂದ ಇಲ್ಲಿಯವರೆಗೆ ಮುಂದೂಡಿಕೆಯಾದ ಉದಾಹರಣೆಯಿಲ್ಲ. ಆದರೆ ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾವೈರಸ್ ಬಾರಿ ಸಹಸ್ರಾರು ಮಂದಿಯನ್ನು ಬಲಿ ಪಡೆದುಕೊಂಡು ವಿಶ್ವಾದ್ಯಂತ ಕ್ರೀಡಾ ಸ್ಪರ್ಧೆಗಳನ್ನೇ ಸ್ಥಗಿತಗೊಳಿಸಿದೆ.

ವಿಶ್ವಾದ್ಯಂತ ವ್ಯಾಪಿಸಿರುವ ಕೋವಿಡ್ -೧೯ ಸೋಂಕು ಇನ್ನಷ್ಟು ಹರಡದಂತೆ ಕೈಗೊಳ್ಳಲಾಗಿರುವ ಲಾಕ್ ಡೌನ್ಗಳಲ್ಲಿ ವಿಶ್ವದ . ಬಿಲಿಯನ್ (. ಶತಕೋಟಿ) ಜನರು ಸಿಕ್ಕಿಹಾಕಿಕೊಂಡಿರುವ ಹೊತ್ತಿನಲ್ಲಿ ಜುಲೈ ೨೭ರಂದು ಆರಂಭವಾಗಬೇಕಾಗಿರುವ ಜಾಗತಿಕ ಕ್ರೀಡಾಕೂಟವನ್ನು ಮುಂದೂಡಬೇಕು ಎಂಬ ತೀವ್ರ ಒತ್ತಡ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮೇಲೆ ಬಿದ್ದಿತ್ತು.  
ಕೊರೋನಾವೈರಸ್ ಸೋಂಕು ಹರಡುವ ಭೀತಿಗೆ ಒಳಗಾಗಿರುವುದರಿಂದ ವಿಶ್ವಾದ್ಯಂತ ಹಲವಾರು ಕ್ರೀಡಾಪಟುಗಳಿಗೆ ತರಬೇತಿ ಪಡೆಯುವುದು ಕೂಡಾ ಅಸಾಧ್ಯವಾಗಿ ಪರಿಣಮಿಸಿತ್ತು.
ಅಂತಾರಾಷ್ಟ್ರೀಯ
ಪ್ರವಾಸಗಳು ರದ್ದಾಗಿರುವ ಕಾರಣ ಅರ್ಹತಾ ಸುತ್ತಿನ ಸ್ಪರ್ಧೆಗಳು ಕೂಡಾ ಹಲವಡೆ ರದ್ದಾಗಿದ್ದವು.

No comments:

Advertisement