Thursday, March 12, 2020

ಕೊರೋನಾವೈರಸ್ ಲಸಿಕೆ: ಕಡೆಗೆ ವಿಜ್ಞಾನಿಗಳ ಹೆಜ್ಜೆ, ವೈರಸ್ ಪ್ರತ್ಯೇಕಿಸುವಲ್ಲಿ ಯಶಸ್ಸು

ಕೊರೋನಾವೈರಸ್ ಲಸಿಕೆ: ತಯಾರಿ ಕಡೆಗೆ ವಿಜ್ಞಾನಿಗಳ ಹೆಜ್ಜೆ, ವೈರಸ್ ಪ್ರತ್ಯೇಕಿಸುವಲ್ಲಿ ಯಶಸ್ಸು
ನವದೆಹಲಿ: ಕೊರೋನಾವೈರಸ್ ವಿರುದ್ಧ ಲಸಿಕೆ ತಯಾರಿಸುವ ನಿಟ್ಟಿನಲ್ಲಿ ಭಾರತೀಯ ವಿಜ್ಞಾನಿಗಳು ಅಡಿ ಇಟ್ಟಿದ್ದಾರೆ, ಆದರೆ ಅದನ್ನು ತಯಾರಿಸಲು ಒಂದೂವರೆಯಿಂದ ಎರಡು ವರ್ಷ ಬೇಕಾಗಬಹುದು ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು  2020 ಮಾರ್ಚ್ 13ರ ಗುರುವಾರ ತಿಳಿಸಿದರು.  ಸರ್ಕಾರದ ಬಳಿ ಪ್ರಸುತ ಒಂದು ಲಕ್ಷದಷ್ಟು ಪರೀಕ್ಷಾ ಕಿಟ್ಗಳು ಇವೆ ಎಂದೂ ಅಧಿಕಾರಿಗಳು ಹೇಳಿದರು.

ಲಸಿಕೆಯೇ ಆದರೂ, ಅದನ್ನು ಅರ್ಥ ಮಾಡಿಕೊಳ್ಳಲು ಒಂದೂವರೆಯಿಂದ ಎರಡು ವರ್ಷಕ್ಕಿಂತ ಕಡಿಮೆ ಸಮಯ ಸಾಕಾಗುವುದಿಲ್ಲ. ಕ್ಷಿಪ್ರ ಕ್ಲಿನಿಕಲ್ ಟ್ರಯಲ್ಗಳನ್ನು ನಡೆಸಿ ಮನುಷ್ಯರ ಮೇಲೆ ಪ್ರಯೋಗಿಸಲು ಅನುಮತಿ ಪಡೆಯಲು ಇಷ್ಟು ಸಮಯ ಬೇಕಾಗುತ್ತದೆಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಡಾ. ಗಂಗಾ ಕೇತ್ಕರ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್-೧೯ ಹರಡದಂತೆ ತಡೆಯಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ವಿವರಿಸಿದ ಡಾ. ಕೇತ್ಕರ್, ವಿಜ್ಞಾನಿಗಳು ವೈರಸ್ನ್ನು ಪ್ರತ್ಯೇಕಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂದು ನುಡಿದರು.

ಕೊರೋನಾವೈರಸ್ಸನ್ನು ಪ್ರತ್ಯೇಕಿಸುವುದು ಬಹಳ ಕಷ್ಟ. ಆದರೆ ಅವುಗಳನ್ನು ಪ್ರತ್ಯೇಕಿಸಲು ನಡೆಸಿದ ನಮ್ಮ ಮೊದಲ ಯತ್ನಗಳು ಸಫಲಗೊಂಡಿವೆ. ನಾವು ಈಗ ಸುಮಾರು ೧೧ರಷ್ಟು ಕೊರೋನಾವೈರಸ್ಸಿನ ಪ್ರತ್ಯೇಕಿತ ಮಾದರಿಗಳನ್ನು ಹೊಂದಿದ್ದೇವೆ. ಕೊರೋನಾವೈರಸ್ಸಿಗೆ ಸಂಬಂಧಿಸಿದಂತೆ ಯಾವದೇ ಮಾದರಿಯ ಸಂಶೋಧನೆ ನಡೆಸಲು ಇದು ಮೂಲ ಅಗತ್ಯವಾಗಿದೆ. ವೈರಸ್ ವಿರುದ್ಧ ಪ್ರತಿಜೀವಾಣುಗಳನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿ ಪಡಿಸಲು ಯಾವುದೇ ವೈರಸ್ಸಿನ ಪ್ರತ್ಯೇಕಿತ ಮಾದರಿಯನ್ನು ಮೊದಲು ಕಂಡುಕೊಳ್ಳಬೇಕಾಗುತ್ತದೆ ಎಂದು ಡಾ. ಕೇತ್ಕರ್ ಹೇಳಿದರು.

ಸೋಂಕು ಹರಡುವ ಸಂದರ್ಭಗಳಲ್ಲಿ ಸೋಂಕನ್ನು ತಡೆಯಲು ನಾವು ಲಸಿಕೆ ಒದಗಿಸಿದರೂ, ಸೋಂಕು ಹೆಚ್ವಾಗಿ ಬಿಡುವ ಸಾದ್ಯತೆ ಕೂಡಾ ಇರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ವಾಸ್ತವವಾಗಿ ವೈರಸ್ ಇರುವಾಗ ತೊಂದರೆಗಳಾಗದಂತೆ ಅದನ್ನು ನಿಯಂತ್ರಿಸಬಲ್ಲ ಪ್ರತಿಜೀವಾಣು ಅಭಿವೃದ್ಧಿಗೆ ಸುದೀರ್ಘ ಸಮಯವನ್ನು ತೆಗೆದುಕೊಳ್ಳಬೇಕಾಗುತ್ತದೆಎಂದು ಅವರು ನುಡಿದರು.

ಮೊದಲಿಗೆ ನಾವು ಸೋಂಕು ಹರಡದಂತೆ ತಡೆಯಬೇಕು ಮತ್ತು ಅದನ್ನು ನಿಯಂತ್ರಿಸಬೇಕು, ಬಳಿಕ ಪರಿಣಾಮಕಾರಿ ಲಸಿಕೆ ಕಂಡು ಹಿಡಿಯಲು ಕಾಯಬೇಕುಎಂದು ಅವರು ಹೇಳಿದರು.

ನೂರಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿ ಲಕ್ಷಕ್ಕೂ ಹೆಚ್ಚು ಮಂದಿಗೆ ತಗುಲಿರುವ ಕೊರೋನಾವೈರಸ್ ಸೋಂಕನ್ನು ಹರಡದಂತೆ ತಡೆಯಲು ಭಾರತ ಸೇರಿದಂತೆ ವಿಶ್ವಾದ್ಯಂತ ಸರ್ಕಾರಗಳು ಸಮರೋಪಾದಿ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಭಾರತದಲ್ಲಿ ೫೨ಕ್ಕೂ ಹೆಚ್ಚು ಪರೀಕ್ಷಾ ಸವಲತ್ತುಗಳನ್ನು ಮತ್ತು ೫೬ ಮಾದರಿ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದರು. ನಮ್ಮ ಬಳಿ ಈಗಾಗಲೇ ಲಕ್ಷದಷ್ಟು ಪರೀಕ್ಷಾ ಕಿಟ್ಗಳು ಇವೆ. ಇನ್ನಷ್ಟು ಪರೀಕ್ಷಾ ಕಿಟ್ಗಳಿಗಾಗಿ ಆದೇಶ ನೀಡಲಾಗಿದ್ದು, ಅವುಗಳನ್ನು ದಾಸ್ತಾನಲ್ಮಾಡಿ ಇಡಲಾಗುವುದು ಎಂದು ಅವರು ನುಡಿದರು.

ಅದೃಷ್ಟವಶಾತ್ ಭಾರತದಲ್ಲಿ, ಸೋಂಕು ಎಲ್ಲೂ ಸಾಮುದಾಯಿಕವಾಗಿ ಹರಡಿಲ್ಲ. ನಮ್ಮಲ್ಲಿ  ಕೆಲವೇ ಪ್ರಕರಣಗಳು ವರದಿಯಾಗಿವೆ. ಅದೂ ಹೊರಗಿನ ದೇಶಗಳಿಂದ ಬಂದವರಲ್ಲಿ ಮತ್ತು ಅವರ ನಿಕಟ ಬಂಧುಗಳಲ್ಲಿ ಮಾತ್ರ ಕಂಡು ಬಂದಿದೆ     ಎಂದು  ಅಗರ್ವಾಲ್  ಹೇಳಿದರು.

ವಿದೇಶೀಯರು ಸೇರಿದಂತೆ ಭಾರತದಾದ್ಯಂತ ದೃಢ ಪಟ್ಟಿರುವ ಕೋವಿಡ್-೧೯ ಪ್ರಕರಣಗಳು ೭೩ಕ್ಕೆ ಏರಿವೆ. ೭೩ ಜನರ ಪೈಕಿ ೫೬ ಮಂದಿ ಭಾರತೀಯ ಪ್ರಜೆಗಳು. ಕೊರೋನಾವೈರಸ್ ದೃಢಪಟ್ಟಿರುವ ೧೭ ಪ್ರಕರಣಗಳೊಂದಿಗೆ ಗರಿಷ್ಠ ಪ್ರಕರಣಗಳು ಕೇರಳದಿಂದ ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ೧೧, ಉತ್ತರ ಪ್ರದೇಶದಲ್ಲಿ ೧೦ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢಪಟ್ಟಿದೆ. ಇವರ ಪೈಕಿ ಒಬ್ಬ ವ್ಯಕ್ತಿ ವಿದೇಶೀ ವ್ಯಕ್ತಿಯಾಗಿದ್ದಾನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಒದಗಿಸಿದ ಮಾಹಿತಿ ಹೇಳಿದೆ.

ಕೊರೋನಾವೈರಸ್ ಸಾಂಕ್ರಾಮಿಕ ರೋಗ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್) ಘೋಷಿಸಿದ ಬಳಿಕ, ಸೋಂಕು ಹರಡದಂತೆ ತಡೆಯಲು ಏಪ್ರಿಲ್ ೧೫ರವರೆಗೆ ಭಾರತಕ್ಕೆ ಬರುವ ಎಲ್ಲ ವೀಸಾಗಳ ರದ್ದು ಸೇರಿದಂತೆ ಹಲವಾರು ಕ್ರಮಗಳನ್ನು ಸರ್ಕಾರವು  ಕೈಗೊಂಡಿದೆ.

No comments:

Advertisement