ಕೊರೋನಾ:
ಭಾರತದಲ್ಲಿ ಮತ್ತೆ ೩ ಮಂದಿಗೆ ಸೋಂಕು
೯೧
ರಾಷ್ಟ್ರಗಳ ೧ ಲಕ್ಷಕ್ಕೂ ಹೆಚ್ಚು
ಮಂದಿಗೆ ಕೋವಿಡ್-೧೯, ವದಂತಿ ನಂಬಬೇಡಿ: ಪ್ರಧಾನಿ ಮೋದಿ
ನವದೆಹಲಿ:
ಭಾರತದಲ್ಲಿ ಹೊಸದಾಗಿ ಇನ್ನೂ ಮೂವರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಖಚಿತಗೊಳ್ಳುವುದರೊಂದಿಗೆ ಮಾರಕ ವ್ಯಾಧಿ ಕೋವಿಡ್ -೧೯ ಸೋಂಕಿತರ ಸಂಖ್ಯೆ 2020 ಮಾರ್ಚ್ 07ರ ಶನಿವಾರ ೩೪ಕ್ಕೆ ಏರಿತು.
ಇದೇ ವೇಳೆಗೆ ವಿಶ್ವಾದ್ಯಂತ ಕೊರೋನಾವೈರಸ್ ಸೋಂಕು ತಗುಲಿದ ದೇಶಗಳ ಸಂಖ್ಯೆ ೯೧ಕ್ಕೇ ಏರಿದ್ದು, ಸೋಂಕು ತಗುಲಿದವರ ಸಂಖ್ಯೆ ೧ ಲಕ್ಷ ದಾಟಿದೆ.
ವಿಶ್ವಾದ್ಯಂತ ಒಟ್ಟು ೩೪೦೦ಕ್ಕೂ ಹೆಚ್ಚು ಮಂದಿಯನ್ನು ಸೋಂಕು ಬಲಿ ತೆಗೆದುಕೊಂಡಿದೆ.
ಭಾರತದಲ್ಲಿ
ಸೋಂಕು ತಗುಲಿದ ೩೪ ಮಂದಿಯ ಪೈಕಿ
ಮೂವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 2020 ಮಾರ್ಚ್ 07ರ ಶನಿವಾರ ಲಡಾಖ್ನಲ್ಲಿ
ಇಬ್ಬರು ಮತ್ತು ತಮಿಳುನಾಡಿನಲ್ಲಿ ಒಬ್ಬರಿಗೆ ಸೋಂಕು ತಗುಲಿದ್ದು ಖಚಿತವಾಗಿದೆ ಎಂದು ವರದಿಗಳು ಹೇಳಿದವು. ಲಡಾಖ್ನಲ್ಲಿ ಸೋಂಕು ತಗುಲಿರುವುದು ಖಚಿತಗೊಂಡಿರುವ ವ್ಯಕ್ತಿಗಳು ಇರಾನ್ ಪಯಣ ಮಾಡಿದ್ದು ಇತ್ತೀಚೆಗೆ ಒಮಾನ್ ನಿಂದ ವಾಪಸಾಗಿದ್ದರು.
ಕೊರೋನಾವೈರಸ್
ಹಿನ್ನೆಲೆಯಲ್ಲಿ ಭಾರತ ಮತ್ತು ಇತರ ೬ ರಾಷ್ಟ್ರಗಳಿಗೆ ತನ್ನ
ವಿಮಾನಯಾನಗಳನ್ನು ಕುವೈಟ್ ಶನಿವಾರ ಅಮಾನತುಗೊಳಿಸಿತು.
ಪ್ರಧಾನಿ
ಮೋದಿ ಸಲಹೆ: ಕೊರೋನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವದಂತಿಗಳನ್ನು ಹರಡುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಎಚ್ಚರಿಸಿದರು.
‘ಜನರು
ತಮ್ಮ ವೈದ್ಯರ ಸಲಹೆ ಪಡೆಯಬೇಕು, ವದಂತಿಗಳಿಗೆ ಕಿವಿಗೊಡಬಾರದು’ ಎಂದು
ಅವರು ನುಡಿದರು.
‘ಇಂತಹ
ಸಮಯದಲ್ಲಿ ವದಂತಿಗಳು ಬಹುಬೇಗ ಹರಡುತ್ತವೆ. ಕೆಲವರು ಅದನ್ನು ತಿನ್ನಬಾರದು, ಇದನ್ನು ಮಾಡಬಾರದು ಎಂದು ಹೇಳುತ್ತಾರೆ. ಇತರ ಕೆಲವರು ಇಂತಹದ್ದನ್ನು ತಿನ್ನದೇ ಇದ್ದರೆ ಕೊರೋನಾವೈರಸ್ನ್ನು ದೂರ ಇಡಬಹುದು ಎಂದು ಹೇಳುತ್ತಾರೆ. ನಾವು ಇಂತಹ ಎಲ್ಲ ವದಂತಿಗಳನ್ನೂ ನಿರ್ಲಕ್ಷಿಸಬೇಕು. ನೀವು ಏನೇ ಮಾಡಿದರೂ ನಿಮ್ಮ ವೈದ್ಯರ ಸಲಹೆಯಂತೆ ಮಾಡಿ’ ಎಂದು ಪ್ರಧಾನಿ ಸೂಚಿಸಿದರು.
ಜಮ್ಮು
ಮತ್ತು ಕಾಶ್ಮೀರ ಹಾಗೂ ಅಮೃತಸರದಿಂದ ಎರಡು ಶಂಕಿತ ಪ್ರಕರಣಗಳ ಬಗ್ಗೆ ವರದಿ ಬರುತ್ತಿದ್ದಂತೆಯೇ ಪ್ರಧಾನಿ ಈ ಸಲಹೆ ಮಾಡಿದರು.
ಸಮುದ್ರದಲ್ಲಿ
ಸಿಕ್ಕಿಹಾಕಿಕೊಂಡ ನೌಕೆ: ಈ ಮಧ್ಯೆ, ಸಾನ್
ಫ್ರಾನ್ಸಿಸ್ಕೋ ಕರಾವಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ವಿಹಾರ ನೌಕೆಯಲ್ಲಿನ ೨೧ ಮಂದಿಗೆ ಕೊರೋನಾವೈರಸ್
ಸೋಂಕು ತಗುಲಿರುವುದು ಖಚಿತಪಟ್ಟಿದೆ ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದರು.
‘ಈ
೨೧ ಮಂದಿಯ ಪೈಕಿ ೧೯ ಮಂದಿ ಸಿಬ್ಬಂದಿಯಾಗಿದ್ದು,
ಇಬ್ಬರು ಪ್ರಯಾಣಿಕರು’ ಎಂದು
ಪೆನ್ಸ್ ನುಡಿದರು.
ನೌಕೆಯನ್ನು
ವಾಣಿಜ್ಯೇತರ ಹಡಗುಕಟ್ಟೆಗೆ ಈವಾರ ತರಲಾಗುವುದು ಮತ್ತು ಅದರಲ್ಲಿ ಇರುವ ಎಲ್ಲ ೩,೫೩೩ ಮಂದಿ
ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಪರೀಕ್ಷಿಸಲಾಗುವುದು ಎಂದು ಪೆನ್ಸ್ ಹೇಳಿದರು. ಕೊರೋನಾವೈರಸ್ಗೆ ಸಂಬಂಧಿಸಿದಂತೆ ಅಮೆರಿಕ
ಸರ್ಕಾರದ ಜೊತೆಗೆ ಸಮನ್ವಯ ಸಾಧಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೆನ್ಸ್ ಅವರಿಗೆ ಸೂಚಿಸಿದ್ದಾರೆ.
‘ಗ್ರ್ಯಾಂಡ್
ಪ್ರಿನ್ಸೆಸ್’ ವಿಹಾರ
ನೌಕೆಯು ಬುಧವಾರದಿಂದ ಸ್ಯಾನ್ ಫ್ರಾನ್ಸಿಸ್ಕೋ ಕರಾವಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ನೌಕೆಯಲ್ಲಿನ ಇಬ್ಬರಿಗೆ ಕೊರೋನಾವೈರಸ್ ಅಂಟಿಕೊಂಡದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ವಿಹಾರ ನೌಕೆಯನ್ನು ಹಡಗು ಕಟ್ಟೆಗೆ ತರದಂತೆ ಸೂಚನೆ ನೀಡಲಾಗಿದೆ. ಹಿಂದಿನ ಪಯಣದಲ್ಲೇ ಸೋಂಕಿಗೆ ತುತ್ತಾಗಿದ್ದರೆನ್ನಲಾದ ಈ ಇಬ್ಬರ ಪೈಕಿ
ಒಬ್ಬ ವ್ಯಕ್ತಿ ಅಸು ನೀಗಿದ್ದಾನೆ.
ಫೇಸ್
ಬುಕ್ ಕಚೇರಿಗಳು ಬಂದ್: ಸೋಂಕು ವಿಶ್ವಾದ್ಯಂತ ತೀವ್ರವಾಗಿ ಹರಡುತ್ತಿದ್ದಂತೆಯೇ ಫೇಸ್ ಬುಕ್ ತಾನು ಲಂಡನ್ ಕಚೇರಿಯನ್ನು ಮುಚ್ಚುತ್ತಿರುವುದಾಗಿ ಘೋಷಿಸಿತು ಮತ್ತು ಏಷ್ಯಾದ ಸಿಂಗಾಪುರ ನಗರದಲ್ಲಿ ತನ್ನ ನೌಕರನೊಬ್ಬನಿಗೆ ಸೋಂಕು ತಗುಲಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಿಂಗಾಪುರ ನೆಲೆಯನ್ನು ಶುಚೀಕರಿಸಲು ಮುಂದಾಯಿತು.
ಅಮೆರಿಕದ
ತಂತ್ರಜ್ಞಾನ ದೈತ್ಯ ಮರೀನಾ ಒನ್ ಸಂಸ್ಥೆಯ ಸಿಂಗಾಪುರ ಕಚೇರಿಯ ಒಬ್ಬ ಸಿಬ್ಬಂದಿಗೆ ಶುಕ್ರವಾರ ಕೋವಿಡ್-೧೯ ತಗುಲಿರುವುದು ಖಚಿತ
ಪಟ್ಟಿದೆ ಎಂದು ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ನಾವು
ತತ್ ಕ್ಷಣವೇ ಬಾಧಿತ ಪ್ರದೇಶಗಳನ್ನು ಶುಚಿಗೊಳಿಸುವ ಸಲುವಾಗಿ ಮುಚ್ಚಿದ್ದೇವೆ. ಸೋಂಕು ತಗುಲಿದ ನೌಕರರಿಗೆ ಮಾರ್ಚ್ ೧೩ರವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದು ವಕ್ತಾರರು ಮಿಂಚಂಚೆ ಹೇಳಿಕೆಯಲ್ಲಿ ತಿಳಿಸಿದರು.
ಕೊರೋನಾವೈರಸ್
ಸೋಂಕಿತ ವ್ಯಕ್ತಿ ಫೆಬ್ರುವರಿ ೨೪ ಮತ್ತು ೨೬ರಂದು
ಫೇಸ್ ಬುಕ್‌ನ ಲಂಡನ್ ಕಚೇರಿಗೆ
ಭೇಟಿ ನೀಡಿದ್ದ. ಹೀಗಾಗಿ ನಾವು ಲಂಡನ್ ಕಚೇರಿಗಳನ್ನೂ ಶುಚೀಕರಣದ ಸಲುವಾಗಿ ಸೋಮವಾರದವರೆಗೆ ಮುಚ್ಚುತ್ತಿದ್ದೇವೆ. ಸಿಬ್ಬಂದಿ ಅಲ್ಲಿಯವರೆಗೆ ಮನೆಯಿಂದಲೇ ಕೆಲಸ ಮಾಡುವರು ಎಂದು ವಕ್ತಾರರು ಹೇಳಿದರು.
No comments:
Post a Comment