Friday, April 24, 2020

ಡಾ. ರಾಜಕುಮಾರ್ ಆರೋಗ್ಯ ಸೂತ್ರ…!

ಡಾ. ರಾಜಕುಮಾರ್  ಆರೋಗ್ಯ ಸೂತ್ರ…!
(ಸುವರ್ಣ ನೋಟ)
ಏಪ್ರಿಲ್ 24 – ಕನ್ನಡದ ವರನಟ ಡಾ. ರಾಜಕುಮಾರ್ ಅವರ  ಜನ್ಮದಿನ.  ರಾಜಕುಮಾರ್  ಅವರು ತಮ್ಮ ಜೀವನದುದ್ದಕ್ಕೂ ಅತ್ಯಂತ ಸರಳವಾಗಿ ಬದುಕಿ ಬಾಳಿದ ವ್ಯಕ್ತಿ. ಬೆಂಗಳೂರಿನ ಸದಾಶಿವ ನಗರದ ಅವರ ಮನೆಯಲ್ಲಿ ಪ್ರತಿದಿನವೂ ನೂರಾರು ಮಂದಿಗೆ ಅನ್ನದಾಸೋಹ ನಡೆಯುತ್ತಿತ್ತು.
ಆದರೆ
, ಅತಿಥಿಗಳ ಜೊತೆಗೆ ಉಪಾಹಾರ ಸೇವನೆ, ಊಟ ಮಾಡಬೇಕಾಗಿ ಬಂದರೆ ಮಾತ್ರ ಮೇಜಿನಲ್ಲಿ ಕುಳಿತು ಉಪಾಹಾರ ಸೇವನೆ, ಊಟ ಮಾಡುತ್ತಿದ್ದ ರಾಜಕುಮಾರ್  ತಾವೊಬ್ಬರೇ ಉಪಾಹಾರ ಸೇವನೆ, ಊಟ ಮಾಡಬೇಕಾಗಿ ಬಂದಾಗ ಕೂರುತ್ತಿದ್ದುದು ಮೇಜಿನ ಮೇಲೆ ಅಲ್ಲ, ಅಡುಗೆ ಕೋಣೆ ಇಲ್ಲವೇ ಅದರ ಸಮೀಪದ ಕೊಠಡಿಯಲ್ಲಿ ನೆಲದ ಮೇಲೆ. ‘ನೆಲದ ಮೇಲೆ ಚಕ್ಕಳಮಕ್ಕಳ (ಚಟ್ಟೆಮುಟ್ಡೆ) ಹಾಕಿಕೊಂಡು ಕುಳಿತು ಊಟ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದುಎಂದು ಅವರು ಆರೋಗ್ಯ ಸೂತ್ರವನ್ನು ಬೋಧಿಸುತ್ತಿದ್ದರು.

ಡಾ. ರಾಜಕುಮಾರ್ ಜೊತೆಗೆ ಅತ್ಯಂತ ಸಲುಗೆ ಹೊಂದಿದ್ದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ  ಅವರು 1980 ದಶಕದಲ್ಲಿ ಒಂದು ದಿನ ಬೆಳಗ್ಗೆ ಭೇಟಿ ನೀಡಿದಾಗ ರಾಜಕುಮಾರ್ ಅವರು ಉಪಾಹಾರ ಸವಿಯುತ್ತಿದ್ದ ಸಂದರ್ಭವನ್ನು ಸೆರೆ ಹಿಡಿದ ಬಗೆ ಇದು.

ಸಮೀಪ ದೃಶ್ಯದ ಅನುಭವಕ್ಕೆ ಫೊಟೋ ಗಳನ್ನು ಕ್ಲಿಕ್ಕಿಸಿ.

No comments:

Advertisement