Tuesday, April 28, 2020

ವಿದೇಶಗಳಲ್ಲಿನ ಭಾರತೀಯರ ಸ್ಥಳಾಂತರ: ಬಡ ಕಾರ್ಮಿಕರಿಗೆ ಪ್ರಧಾನಿ ಆದ್ಯತೆ

ವಿದೇಶಗಳಲ್ಲಿನ ಭಾರತೀಯರ ಸ್ಥಳಾಂತರ: ಬಡ ಕಾರ್ಮಿಕರಿಗೆ ಪ್ರಧಾನಿ ಆದ್ಯತೆ
ನವದೆಹಲಿ: ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಹಿಂದಕ್ಕೆ ಕರೆತರುವ ಯೋಜನೆಯ ಬಗ್ಗೆ ವಿದೇಶಿ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳು ಕೆಲಸ ಪ್ರಾರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳಾಂತರಿಸುವ ಯೋಜನೆಯ ನಿಯಮಗಳನ್ನು ಸ್ಪಷ ಪಡಿಸಿದ್ದಾರೆ.
ವಿದೇಶದಲ್ಲಿ ಸಿಲುಕಿರುವ ಭಾರತದ ಬಡ ಬ್ಲೂ ಕಾಲರ್ ಕಾರ್ಮಿಕರು ವಿಶೇಷ ವಿಮಾನಗಳಲ್ಲಿ ಮೊದಲ ಸ್ಥಾನಗಳನ್ನು ಪಡೆಯಲಿದ್ದು, ಮೊದಲು ಅವರನ್ನು ತಾಯ್ನಾಡಿಗೆ ತಲುಪಿಸುವ ಕಾರ್ಯವನ್ನು ಹಮ್ಮಿಕೊಂಡಿದೆ.

ಬ್ಲೂ ಕಾಲರ್ ಕಾರ್ಮಿಕರ ಬಳಿಕ, ವಿವಿಧ ದೇಶಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು, ನಂತರ ಕೆಲಸಕ್ಕಾಗಿ ಪ್ರಯಾಣಿಸಿದ್ದ ಭಾರತೀಯರು ಹಾಗೂ ಬಳಿಕ ಉಳಿದ ಎಲ್ಲರನ್ನೂ ಭಾರತಕ್ಕೆ ಕರೆತರುವ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ.

"ಪ್ರಧಾನ ಮಂತ್ರಿ ಬಹಳ ಸ್ಪಷ್ಟವಾಗಿದ್ದಾರೆ. ... ಭಾರತೀಯ ವಲಸಿಗ ಉದ್ಯೋಗಿಗಳಿಗೆ ಮರಳಲು ಮೊದಲ ಆಯ್ಕೆ ಸಿಗಬೇಕು ಎಂಬುದಾಗಿ ಅವರು ಹೇಳಿದ್ದಾರೆ" ಎಂದು ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

೧೯೯೮ರಲ್ಲಿ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ೧೯೯೮ರ ಮೇ ತಿಂಗಳಲ್ಲಿ ಐದು ಭೂಗತ ಪರಮಾಣು ಬಾಂಬ್ಗಳನ್ನು ಪೋಖಾನ್ನಲ್ಲಿ ಸ್ಫೋಟಿಸಿದ ನಂತರ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಭಾರತದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದಾಗ ಭಾರತದ ವಲಸೆ ಕಾರ್ಮಿಕರಲ್ಲಿ - ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳಲ್ಲಿರುವವರು - ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಭಾರತಕ್ಕೆ ಹೇಗೆ ಸಹಾಯ ಮಾಡಿದ್ದಾರೆಂದು ಪ್ರಧಾನಿ ಮೋದಿಯವರು ಸಭೆಯೊಂದರಲ್ಲಿ ವಿವರಿಸಿದ್ದರು.

ಬಿಲಿಯನ್ (೨೦೦ ಕೋಟಿ) ಡಾಲರ್ ಸಂಗ್ರಹಿಸುವ ಸಲುವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುನರುತ್ಥಾನ ಭಾರತ ಬಾಂಡ್ ಹೊರಡಿಸಿತ್ತು. ಇದು ಬಿಲಿಯನ್ ಗಳಿಗಿಂತ ಹೆಚ್ಚು ಹಣವನ್ನು ಒದಗಿಸಿಕೊಟ್ಟಿತ್ತ್ತು ಎಂದು ಮೋದಿ ವಿವರಿಸಿದ್ದರು.

 ಎರಡು ದಶಕಗಳ ನಂತgವೂ, ಭಾರತದ ಬೃಹತ್ ಸಂಖ್ಯೆಯ ವಲಸೆಗಾರರು ಇನ್ನೂ ಹಣವನ್ನು ಸ್ವದೇಶಕ್ಕೆ ಕಳುಹಿಸುತ್ತಿದ್ದಾರೆ. ವಿಶ್ವಬ್ಯಾಂಕ್ ಪ್ರಕಾರ, ೨೦೧೯ ರಲ್ಲಿ ಕೂಡಾ ಭಾರತವು ಇನ್ನೂ ಹಣ ಪಡೆಯುವಲ್ಲಿ ವಿಶ್ವದಲ್ಲೇ  ಅಗ್ರಸ್ಥಾನದಲ್ಲಿತ್ತು. ವಲಸೆಗಾರರು ೮೨ ಬಿಲಿಯನ್ ಡಾಲರುಗಳನ್ನು ಕಳುಹಿಸಿದ್ದಾರೆ ಇದು ಪಶ್ಚಿಮ ಏಷ್ಯಾದ ವಲಸೆ ಕಾರ್ಮಿಕರು ಕಳುಹಿಸಿದ ಹಣದ ಸುಮಾರು ಅರ್ಧದಷ್ಟು ಆಗುತ್ತದೆ.

ಆದರೆ ಕೋವಿಡ್ -೧೯ ಸಾಂಕ್ರಾಮಿಕ ರೋಗವು ಪಶ್ಚಿಮ ಏಷ್ಯಾದ ಭಾರತೀಯ ಕಾರ್ಮಿಕರನ್ನು ತೀವ್ರವಾಗಿ ಬಾದಿಸಿದೆ. ಯೋಜನೆಗಳು ಸ್ಥಗಿತಗೊಂಡಿರುವುದರಿಂದ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ.

ಹೆಚ್ಚಿನ ಸಂಖ್ಯೆಯ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ರಾಜ್ಯಗಳಿಗೆ ಇಲ್ಲದಿರುವುದರಿಂದ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಭಾರತೀಯರನ್ನು ನೋಡಿಕೊಳ್ಳುವಂತೆ ಕೇಳಲು ಗಲ್ಫ್ ರಾಷ್ಟ್ರಗಳಿಗೆ ಫೋನ್ಗಳನ್ನು ಮಾಡಿದ್ದರು.

ಆರು ಕೊಲ್ಲಿ ರಾಷ್ಟ್ರಗಳಲ್ಲಿ ಇರುವ  ಭಾರತೀಯ ಕಾರ್ಮಿಕರ ಸಂಖ್ಯೆ ವಿದೇಶದಲ್ಲಿರುವ ೧೨. ಮಿಲಿಯನ್ (೧೨೬ ಲಕ್ಷ) ಭಾರತೀಯರಲ್ಲಿ ಶೇಕಡಾ ೭೦ರಷ್ಟಿದೆ, ಯುನೈಟೆಡ್ ಅರಬ್ ಎಮಿರೇಟ್ಸ್ . ಮಿಲಿಯನ್ (೩೪ ಲಕ್ಷ) ಭಾರತೀಯರಿಗೆ ನೆಲೆಯಾಗಿದ್ದರೆ, . ಮಿಲಿಯನ್ (೨೬ ಲಕ್ಷ) ಜನರು ಸೌದಿ ಅರೇಬಿಯಾದಲ್ಲಿದ್ದಾರೆ. ಕುವೈತ್, ಒಮಾನ್, ಕತಾರ್ ಮತ್ತು ಬಹ್ರೇನ್ನಲ್ಲಿ . ಮಿಲಿಯನ್ (೨೯ ಲಕ್ಷ) ಎನ್ಆರ್ಐಗಳು ಇದ್ದಾರೆ.

ಕೊಲ್ಲಿ ರಾಷ್ಟ್ರಗಳ ಹೊರತಾಗಿ ಇಂಗ್ಲೆಂಡ್, ಕೆನಡಾ, ಅಮೆರಿಕ, ರಶ್ಯಾ, ಸಿಂಗಾಪುರ, ಫಿಲಿಪ್ಪೈನ್ಸ್  ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸಹಸ್ರಾರು ಮಂದಿ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳುವ ಸಲುವಾಗಿ ಭಾರತೀಯ ರಾಜತಾಂತ್ರಿಕ ಕಚೇರಿಗಳನ್ನು ಸಂಪರ್ಕಿಸಿದ್ದಾರೆ. ರಶ್ಯಾ ಒಂದರಲ್ಲೇ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ೧೫,೦೦೦ ದಷ್ಟು ಇದೆ. ಎಲ್ಲರನ್ನೂ ಭಾರತಕ್ಕೆ ಮರಳಿ ಕರೆತರುವುದು ಅತ್ಯಂತ ಕ್ಲಿಷ್ಟ ಕೆಲಸವಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಕ್ವಾರಂಟೈನ್ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ.

No comments:

Advertisement