ಕಥೆ ಹೇಳುವೆ… ನನ್ನ ಕಥೆ ಹೇಳುವೆ..!
(ಇದು ಸುವರ್ಣ ನೋಟ..!)
ವ್ಯವಸ್ಥೆ ಮಕಾಡೆ ಮಲಗಿದೆ. ವಾಹನ ಸಂಚಾರಕ್ಕಾಗಿ ನಿರ್ಮಿಸಿದ ರಸ್ತೆಗಳು,ಸೇತುವೆಗಳು
ಬಿಕೋಗುಟ್ಟುತ್ತಿವೆ. ಫ್ಯಾಕ್ಟರಿ, ಕಾರ್ಖಾನೆ, ಅಂಗಡಿ ಮುಂಗಟ್ಟುಗಳು ಬಾಗಿಲೆಳೆದುಕೊಂಡಿವೆ....
ಆದರೆ ಪ್ರಕೃತಿ ಎಂದಿನಂತೆಯೇ ತನ್ನ ಕಾರ್ಯ ನಿರ್ವಹಿಸುತ್ತಿದೆ. ಸೂರ್ಯನ ಎಳೆಬಿಸಿಲು,
ಮಧ್ಯಾಹ್ನದ ಪ್ರಖರತೆ, ಯುಗಾದಿಯ ವೇಳೆಗೆ ಸಾಮಾನ್ಯವಾಗಿ ಮೋರೆ ತೋರಿಸುವ ವರುಣನ ಸಿಂಚನ,
ಮಧ್ಯಾಹ್ನದ ಪ್ರಖರತೆ, ಯುಗಾದಿಯ ವೇಳೆಗೆ ಸಾಮಾನ್ಯವಾಗಿ ಮೋರೆ ತೋರಿಸುವ ವರುಣನ ಸಿಂಚನ,
ವರುಣಸಿಂಚನಕ್ಕೆ ಸಂಭ್ರಮಿಸುವ ಗಿಡಮರಗಳು, ಹೂವುಗಳು ತಮ್ಮ ದಿನಚರಿಗಳನ್ನು ಮಾಡುತ್ತಿವೆ.
ಇತೀಚಿನ ವರುಣ ಸಿಂಚನಕ್ಕೆ ಸಂಭ್ರಮಿಸಿದ ಹೂಗಳು,
ನಿರ್ಜನ ಪಾರ್ಕಿನಲ್ಲಿ ಮರ ಉದುರಿಸಿದ ಹೂವಿನ ಹಾಸಿಗೆಯಲ್ಲಿ ಪವಡಿಸಿದ ವ್ಯಕ್ತಿ, ಅಂತಹುದೇ ಇನ್ನೊಂದು ಮರದ ಬುಡದಲ್ಲಿ ತನ್ನ ಚೀಲ ಇಟ್ಟುಕೊಂಡು ಕುಳಿತ ಮುದುಕಿ...
ಪ್ರಕೃತಿಯ ಸಂಭ್ರಮದ ಜೊತೆಗೆ ಪ್ರಕೃತಿಯನ್ನು ತನ್ನಿಷ್ಟದಂತೆ ಬದಲಾಯಿಸ ಹೊರಟ ಮನುಷ್ಯನ ದುರವಸ್ಥೆಗೆ ಹಿಡಿದ ಕನ್ನಡಿಯಂತೆ ಕಾಣುತ್ತವೆ.
ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾ ಪ್ರಕೃತಿಯ ಸಂಭ್ರಮ ಮತ್ತು ಮನುಷ್ಯನ ದುರವಸ್ಥೆಯ ಕಥೆಯನ್ನು ಹೇಗೆ ಕಟ್ಟಿ ಕೊಟ್ಟಿದೆ ನೋಡಿ.
ಸಮೀಪ ದೃಶ್ಯದ ಅನುಭವಕ್ಕೆ ಫೊಟೋಗಳನ್ನು ಕ್ಲಿಕ್ಕಿಸಿ.
ಸಮೀಪ ದೃಶ್ಯದ ಅನುಭವಕ್ಕೆ ಫೊಟೋಗಳನ್ನು ಕ್ಲಿಕ್ಕಿಸಿ.
No comments:
Post a Comment