Thursday, April 9, 2020

ಕೊರೋನಾ ವಿರುದ್ಧ ಸಮರ: ಕೇಂದ್ರದಿಂದ ೧೫,೦೦೦ ಕೋಟಿ ರೂ. ಪ್ಯಾಕೇಜ್

ಕೊರೋನಾ ವಿರುದ್ಧ ಸಮರ: ಕೇಂದ್ರದಿಂದ ೧೫,೦೦೦ ಕೋಟಿ ರೂ. ಪ್ಯಾಕೇಜ್
ನವದೆಹಲಿ: ದೇಶದಲ್ಲಿ ೧೬೬ ಜೀವಗಳನ್ನು ಬಲಿತೆಗೆದುಕೊಂಡಿರುವ ಕೊರೋನಾವೈರಸ್ (ಕೋವಿಡ್-೧೯) ಸಾಂಕ್ರಾಮಿಕದ ವಿರುದ್ಧ ಸಮರ ಹೂಡಲು ರಾಜ್ಯಗಳಿಗೆ ೧೫,೦೦೦ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಕೇಂದ್ರ ಸರ್ಕಾರವು 2020 ಏಪ್ರಿಲ್ 09ರ ಗುರುವಾರ ಮಂಜೂರು ಮಾಡಿತು.

ಕೇಂದ್ರ ಸರ್ಕಾರವು  ಮಂಜೂರು ಮಾಡಿರುವ ಪ್ಯಾಕೇಜ್ ಹಣವನ್ನು ಕೋವಿಡ್-೧೯ರ ವಿರುದ್ಧದ ಹೋರಾಟದಲ್ಲಿ ತುರ್ತು ಸ್ಪಂದನೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆಗಳಿಗಾಗಿ ವ್ಯಯಿಸಲಾಗುವುದು. ಕೊರೋನಾ ಹರಡದಂತೆ ತಡೆಯುವ ಸಲುವಾಗಿ ಮೂರು ವಾರಗಳ ದಿಗ್ಬಂಧನವನ್ನು ಪ್ರಧಾನಿಯವರು ಘೋಷಿಸಿದ ಎರಡು ವಾರಗಳ ಬಳಿಕ ಪ್ಯಾಕೇಜನ್ನು ಪ್ರಕಟಿಸಲಾಯಿತು.

೧೫,೦೦೦ ಕೋಟಿ ರೂಪಾಯಿಗಳ ಪೈಕಿ ,೭೭೪ ಕೋಟಿ ರೂಪಾಯಿಗಳನ್ನು ಕೋವಿಡ್-೧೯ ತುರ್ತು ಸ್ಪಂದನೆಗಾಗಿ ಮತ್ತು ಉಳಿದ ಹಣವನ್ನು ೨೦೨೦ರ ಜನವರಿಯಿಂದ ೨೦೨೪ರ ಮಾರ್ಚ್ವರೆಗಿನ ವರ್ಷಗಳ ಅವಧಿಗೆ  ಮಧ್ಯಮಾವಧಿ ಬೆಂಬಲಧನವಾಗಿ ಒದಗಿಸಲಾಗುವುದು.

ರೋಗ ನಿರ್ಣಯ (ಡಯಾಗ್ನಾಸ್ಟಿಕ್) ಉಪಕರಣಗಳ ಅಭಿವೃದ್ಧಿ, ಕೋವಿಡ್-೧೯ಕ್ಕೆ ಮೀಸಲಾದ ಚಿಕಿತ್ಸಾ ಸವಲತ್ತುಗಳು, ಅಗತ್ಯ ವೈದ್ಯಕೀಯ ಉಪಕರಣಗಳ ಕೇಂದ್ರೀಕೃತ ದಾಸ್ತಾನು ಮತ್ತು ಸೋಂಕಿತ ರೋಗಿಗಳಿಗೆ ಚಿಕಿತ್ಸೆಗೆ ಬೇಕಾದ ಔಷಧ, ಭವಿಷ್ಯದಲ್ಲಿ ರೋಗವನ್ನು ತಡೆಯುವ ನಿಟ್ಟಿನಲ್ಲಿ ಸಜ್ಜಾಗಿರಲು ಸ್ಥಿತಿಸ್ಥಾಪಕ ಸ್ವರೂಪದ ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ವ್ಯವಸ್ಥೆಯ ಬಲವರ್ಧನೆ ಮತ್ತು ನಿರ್ಮಾಣ - ಇವುಗಳಿಗೆ ಒತ್ತುಕೊಟ್ಟು ಹಣವನ್ನು ಬಳಸಲಾಗುವುದು.

ಕೇಂದ್ರ ಸರ್ಕಾರವು ಈವರೆಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ,೧೧೩ ಕೋಟಿ ರೂಪಾಯಿಗಳನ್ನು ಕೋವಿಡ್ಗೆ ಸಂಬಂಧಿಸಿದಂತೆ ಬಳಸಲು ತುರ್ತು ನಿಧಿಯಾಗಿ ವಿತರಿಸಿದೆ.
ಕೇಂದ್ರವು ೧೦ ಉನ್ನತ ಮಟ್ಟದ ಬಹು ಕ್ಷೇತ್ರ ಪರಿಣತರ ಕೇಂದ್ರೀಯ ತಂಡಗಳನ್ನು ಹೆಚ್ಚಿನ ಪ್ರಕರಣಗಳು ವರದಿಯಾಗಿರುವ ರಾಜ್ಯಗಳ ನೆರವಿಗಾಗಿ ರಚಿಸಿದೆ. ತಂಡಗಳು ಬಿಹಾರ, ರಾಜಸ್ಥಾನ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಈಗಾಗಲೇ ಧಾವಿಸಿದ್ದು ರೋಗ ಹತೋಟಿ ಸಿದ್ಧತೆ, ಆಸ್ಪತ್ರೆ ಸಿದ್ಧತೆ ಮತ್ತು ವೆಂಟಿಲೇಟರ್ ನಿರ್ವಹಣೆಯಲ್ಲಿ ನೆರವು ನೀಡಲಿವೆ.

ಇತರ ಕೇಂದ್ರೀಯ ಸಚಿವಾಲಯಗಳ ಜೊತೆಗೆ ರೈಲ್ವೇ ಸಚಿವಾಲಯ ಕೂಡಾ ೫೦೦೦ ಬೋಗಿಗಳನ್ನು ಐಸೋಲೇಷನ್ ಸವಲತ್ತುಗಳಿಗೆ ಅನುಕೂಲವಾಗುವಂತೆ ಮಾರ್ಪಡಿಸಲು ಮುಂದೆ ಬಂದಿದೆ. ಇದರಿಂದ ೮೦,೦೦೦ ಹೆಚ್ಚುವರಿ ಹಾಸಿಗೆಗಳು ಲಭ್ಯವಾಗಲಿವೆ.

೫೦೦೦ ಬೋಗಿಗಳ ಪೈಕಿ ೩೨೫೦ ಬೋಗಿಗಳನ್ನು ಈಗಾಗಲೇ ಐಸೋಲೇಷನ್ ಸವಲತ್ತು ಘಟಕಗಳಾಗಿ ಪರಿವರ್ತಿಸಲಾಗಿದೆ.

ಇದರ ಹೊರತಾಗಿ ರೈಲ್ವೇಯು ,೫೦೦ ಮಂದಿ ವೈದ್ಯರು, ೩೫,೦೦೦ ಮಂದಿ ಅರೆ ವೈದ್ಯ ಸಿಬ್ಬಂದಿ, ೫೮೬ ಆರೋಗ್ಯ ಘಟಕಗಲು, ೪೫ ಉಪ ವಿಭಾಗೀಯ ಆಸ್ಪತ್ರೆಗು, ೫೬ ವಿಭಾಗೀಯ ಆಸ್ಪತ್ರೆಗಳು, ಪ್ರೊಡಕ್ಷನ್ ಯುನಿಟ್ ಆಸ್ಪತ್ರೆಗಳು ಮತ್ತು ೧೬ ವಲಯ ಆಸ್ಪತ್ರೆಗಳನ್ನು ವ್ಯವಸ್ಥೆ ಮಾಡಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ತಿಳಿಸಿದರು.

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಕೇಂದ್ರ ಆರೋಗ್ಯ ಇಲಾಖೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ತಿಳಿಸಿದ ಅಗರವಾಲ್, ’ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ) ಮುಖಗವಸುಗಳು ಮತ್ತು ವೆಂಟಿಲೇಟರ್ಗಳ ಸರಬರಾಜು ಈಗ ಪ್ರಾರಂಭವಾಗಿದ್ದು, ೨೦ ದೇಶಿ ತಯಾರಕ ಕಂಪನಿಗಳು ಸಾಧನಗಳನ್ನು ಅಭಿವೃದ್ಧಿಪಡಿಸಿವೆ. . ಕೋಟಿ ವೈಯಕ್ತಿಕ ರಕ್ಷಣಾ ಸಾಧನ ಮತ್ತು ೪೯,೦೦೦ ವೆಂಟಿಲೇಟರ್ ತಯಾರಿಕೆಗೆ ಆದೇಶಿಸಲಾಗಿದೆ ಎಂದರು.

ದೇಶದಲ್ಲಿ ಈವರೆಗೂ ೪೭೩ ಜನರು ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಾರೆ. ೫೭೩೪ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕಳೆದ ೨೪ ಗಂಟೆಗಳಲ್ಲಿ ೫೪೯ ಹೊಸ ಪ್ರಕರಣಗಳು ದಾಖಲಾಗಿವೆ. ೧೬೬ ಸಾವು ಸಂಭವಿಸಿವೆ ಎಂದು ಅವರು ನುಡಿದರು.

ದೇಶದಲ್ಲಿ ಅತಿ ಹೆಚ್ಚು ಮಹಾರಾಷ್ಟ್ರದಲ್ಲಿ ,೧೩೫ ಪ್ರಕರಗಳು ದಾಖಲಾಗಿದ್ದು, ೭೨ ಮಂದಿ ಸಾವಿಗೀಡಾಗಿದ್ದಾರೆ. ಕರ್ನಾಟಕದಲ್ಲಿ ೧೮೧ ಪ್ರಕರಣಗಳು ವರದಿಯಾಗಿವೆ ಹಾಗೂ ಮಂದಿ ಸೋಂಕಿತರು ಮೃತರಾಗಿದ್ದಾರೆ ಎಂದು ಅವರು ತಿಳಿಸಿದರು.

ಭಾರತವು ಪ್ರಸ್ತುತ ಮೂರುವಾರಗಳ ರಾಷ್ಟ್ರವ್ಯಾಪಿ ದಿಗ್ಬಂಧನದಲ್ಲಿ (ಲಾಕ್ ಡೌನ) ಇದೆ. ಸೋಂಕು ಹರಡದಂತೆ ತಡೆಯುವ ಸಲುವಾಗಿ ಹೇರಲಾಗಿರುವ ದಿಗ್ಬಂಧದ ಅವಧಿ ಏಪ್ರಿಲ್ ೧೪ರವರೆಗೆ ಇದ್ದು, ಅದು ಏಪ್ರಿಲ್ ಮಾಸಾಂತ್ಯದವರೆಗೂ ಮುಂದುವರೆಯುವ ಸಾಧ್ಯತೆಗಳು ಹೆಚ್ಚು ಎಂದು ಸರ್ಕಾರಿ ಮೂಲಗಳು ಹೇಳಿವೆ.

ವಿಶ್ಯಾದ್ಯಂತ ಕೊರೋನಾ ಸಾವು-ನೋವು
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೧೫,೩೮,೪೮೬, ಸಾವು ೮೯,೯೭೫
ಚೇತರಿಸಿಕೊಂಡರವರು- ,೪೦,೫೨೧
ಅಮೆರಿಕದಲ್ಲಿ ಸೋಂಕಿತರು ,೩೫,೯೪೧, ಸಾವು ೧೪,೮೬೫
ಸ್ಪೇನಿನಲ್ಲಿ ಸೋಂಕಿತರು ,೫೨,೪೪೬, ಸಾವು ೧೫,೨೩೮
ಇಟಲಿಯಲ್ಲಿ ಸೋಂಕಿತರು ,೩೯,೪೨೨, ಸಾವು ೧೭೬೬೯
ಜರ್ಮನಿಯಲ್ಲಿ ಸೋಂಕಿತರು ,೧೩,೬೧೫, ಸಾವು ,೩೪೯
ಚೀನಾದಲ್ಲಿ ಸೋಂಕಿತರು ೮೧,೮೬೫, ಸಾವು ,೩೩೫
ಸ್ಪೇನಿನಲ್ಲಿ ೪೪೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement