ಭಾರತೀಯ ನೌಕಾಪಡೆಯ ಅಗ್ಗದ ಪಿಪಿಇಗೆ ಪೇಟೆಂಟ್
ಭಾರತದಲ್ಲಿ ಸೋಂಕು ೭೮,೦೦೩, ಸಾವು ೩೭೨೨, ಚೇತರಿಕೆ ೨೬,೨೩೪
ನವದೆಹಲಿ: ತಾನು ತಯಾರಿಸಿದ ಅಗ್ಗದ ವೈಯಕ್ತಿಕ ರಕ್ಷಣಾ ಸಲಕರಣೆಗೆ (ಪಿಪಿಇ) ರಕ್ಷಣಾ ಸಚಿವಾಲಯವು ಯಶಸ್ವಿಯಾಗಿ ಪೇಟೆಂಟ್ ಪಡೆದುಕೊಂಡಿದೆ ಎಂದು ಭಾರತೀಯ ನೌಕಾಪಡೆಯು 2020 ಮೇ 14ರ ಗುರುವಾರ ಪ್ರಕಟಿಸಿತು.
ಭಾರತೀಯ ನೌಕಾಪಡೆಯ ವೈದ್ಯರೊಬ್ಬರು ಅತ್ಯಂತ ಅಗ್ಗದ ವೈಯಕ್ತಿಕ ರಕ್ಷಣಾ ಉಪಕರಣವನ್ನು (ಪಿಪಿಇ) ಮುಂಬಯಿಯ ಇನ್ಸ್ಟಿಟ್ಯೂಟ್ ಆಫ್ ನೇವಲ್ ಮೆಡಿಸಿನ್ನ (ಐಎನ್ ಎಂ) ಇನ್ನೋವೇಷನ್ ಸೆಲ್ ಇತ್ತೀಚೆಗೆ ನಿರ್ಮಿಸಿದೆ.
ಮುಂಬಯಿಯ ನೌಕಾ ಹಡಗುಕಟ್ಟೆಯಲ್ಲಿ ಪಿಪಿಇಗಳ ಮೊದಲ ಕಂತನ್ನು ಯಶಸ್ವಿಯಾಗಿ ಉತ್ಪಾದಿಸಲಾಗಿದೆ. ಶೀಘ್ರದಲ್ಲೇ ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ಉತ್ಪಾದಿಸಲಾಗುವುದು ಎಂದು ನೌಕಾ ಪಡೆ ಹೇಳಿಕೆಯೊಂದು ತಿಳಿಸಿತು.
ಕೊರೋನಾವೈರಸ್ ಚಿಕಿತ್ಸೆಯಲ್ಲಿ ಸಿಬ್ಬಂದಿ ರಕ್ಷಣೆಗೆ ವೈಯಕ್ತಿಕ ರಕ್ಷಣ ಉಪಕರಣ (ಪಿಪಿಇ) ಅತ್ಯಗತ್ಯವಾಗಿ ಬೇಕಾದ ಸಾಧನವಾಗಿದೆ.
ಕೋವಿಡ್ ಸೋಂಕಿನ ಸಂಖ್ಯೆ ೭೮,೦೦೦ಕ್ಕೆ
ಭಾರತದಲ್ಲಿ ೨,೫೪೯ ಹೊಸ ಪ್ರಕರಣಗಳೊಂದಿಗೆ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಗುರುವಾರ ೭೮,೦೦೩ಕ್ಕೆ ತಲುಪಿದೆ. ಕಳೆದ ೨೪ ಗಂಟೆಗಳಲ್ಲಿ ೧೩೪ ಸಾವಿನೊಂದಿಗೆ ಸಾವಿನ ಸಂಖ್ಯೆ ೩,೭೨೨ಕ್ಕೆ ತಲುಪಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಒಟ್ಟು ಸೋಂಕಿನ ಪ್ರಕರಣಗಳಲ್ಲಿ ೨೬,೨೩೪ ಮಂದಿ ಗುಣಮುಖರಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ೪೯,೨೧೯. ಇದರೊಂದಿಗೆ ಚೇತರಿಕೆಯ ಪ್ರಮಾಣ ಶೇಕಡಾ ೩೩.೬೩ಕ್ಕೆ ಏರಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ದೆಹಲಿ ನಿರ್ಬಂಧ ಸಡಿಲಿಕೆಗೆ ಆಗ್ರಹ
ದೆಹಲಿಯ ೫ ಲಕ್ಷಕ್ಕೂ ಹೆಚ್ಚು ಮಂದಿ ನಿವಾಸಿUಳ ನೀಡಿರುವ ಸಲಹೆಗಳ ಪೈಕಿ ಬಹುತೇಕ ಸಲಹೆಗಳು ರಾಜಧಾನಿಯಲ್ಲಿ ಮೇ ೧೭ರಂದು ೩ನೇ ಹಂತದ ದಿಗ್ಬಂಧನ (ಲಾಕ್ ಡೌನ್) ಸಡಿಲಿಕೆಯ ಬಳಿಕ ನಿರ್ಬಂಧಗಳನ್ನು ಸಡಿಲಿಸಬೇಕು ಎಂಬುದಾಗಿ ಹೇಳಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಾಮಾಜಿಕ ಅಂತರದ ನಿರ್ಬಂಧದೊಂದಿಗೆ ಸಾರ್ವಜನಿಕ ಸಾರಿಗೆ - ಬಸ್ಸುಗಳು ಮತ್ತು ಮೆಟ್ರೋ ಆರಂಭವಾಗಬೇಕು ಎಂದು ಬಹುತೇಕ ಪ್ರತಿಯೊಬ್ಬರೂ ಬಯಸಿದ್ದಾರೆ ಎಂದು ಅವರು ನುಡಿದರು.
ಆದಾಗ್ಯೂ, ಶಾಲೆ, ಕಾಲೇಜುಗಳು, ಕ್ಷೌರದ ಅಂಗಡಿಗಳು ಮತ್ತು ಸ್ಪಾಗಳನ್ನು ತೆರೆಯಬಾರದು ಎಂದು ಬಹುತೇಕರು ಹೇಳಿದ್ದಾರೆ ಎಂದು ಅವರು ನುಡಿದರು.
೧೬೭ ರೈಲು ಪ್ರಯಾಣಕರು ಕಣ್ಮರೆ
ಗುಜರಾತಿನ ಸೂರತ್ ನಿಂದ ಹರಿದ್ವಾರಕ್ಕೆ ಹೊರಟಿದ್ದ ವಿಶೇಷ ರೈಲಿನಿಂದ ಸುಮಾರು ೧೬೭ ಮಂದಿ ಪ್ರಯಾಣಿಕರು ಕಣ್ಮರೆಯಾಗಿದ್ದು, ಅಧಿಕಾರಿಗಳು ಚಿಂತಾಕ್ರಾಂತರಾಗಿದ್ದಾರೆ ಎಂದು ವರದಿಗಳು ಹೇಳಿವೆ.
ರೈಲಿನಿಂದ ಇಳಿದುಹೋಗಿರುವ ಇಷ್ಟೊಂದು ಪ್ರಯಾಣಿಕರ ಸಂಖ್ಯೆಯು ಸೂರತ್ತಿನಿಂದ ಬಂದಿರುವ ಪ್ರಯಾಣಿಕರ ಪಟ್ಟಿಯೊಂದಿಗೆ ತಾಳೆಯಾಗುತ್ತಿಲ್ಲ ಎಂದು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ ರವಿಶಂಕರ್ ಹೇಳಿದ್ದಾರೆ.
ಲೋಪದೋಷಗಳು ಏನಾದರೂ ಆಗಿವೆಯೇ ಎಂಬುದಾಗಿ ಪರಿಶೀಲಿಸಲಾಗುತ್ತಿದೆ. ಈ ಪ್ರಯಾಣಿಕರೇನಾದರೂ ಸೂರತ್ತಿನಲ್ಲಿ ರೈಲು ಏರಿದ ಬಳಿಕ ಕಣ್ಮರೆಯಾಗಿದ್ದರೆ ಇದು ಅತ್ಯಂತ ಗಂಭೀರ ವಿಷಯವಾಗುತ್ತದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೪೪,೬೬,೯೪೪, ಸಾವು ೨,೯೯,೫೦೭
ಚೇತರಿಸಿಕೊಂಡವರು- ೧೬,೭೮,೫೬೩
ಅಮೆರಿಕ ಸೋಂಕಿತರು ೧೪,೩೩,೬೧೩, ಸಾವು ೮೫,೩೪೨
ಸ್ಪೇನ್ ಸೋಂಕಿತರು ೨,೭೨,೬೪೬, ಸಾವು ೨೭,೩೨೧
ಇಟಲಿ ಸೋಂಕಿತರು ೨,೨೨,೧೦೪, ಸಾವು ೩೧,೧೦೬
ಜರ್ಮನಿ ಸೋಂಕಿತರು ೧,೭೪,೦೯೮, ಸಾವು ೭,೮೬೧
ಚೀನಾ ಸೋಂಕಿತರು ೮೨,೯೨೯, ಸಾವು ೪,೬೩೩
ಇಂಗ್ಲೆಂಡ್ ಸೋಂಕಿತರು ೨,೩೩,೧೫೧, ಸಾವು ೩೩,೬೧೪
ಅಮೆರಿಕದಲ್ಲಿ ೧೪೫, ಇರಾನಿನಲ್ಲಿ ೭೧, ಬೆಲ್ಜಿಯಂನಲ್ಲಿ ೬೦, ಸ್ಪೇನಿನಲ್ಲಿ ೨೧೭, ನೆದರ್ ಲ್ಯಾಂಡ್ಸ್ನಲ್ಲಿ ೨೮, ರಶ್ಯಾದಲ್ಲಿ ೯೩, ಸ್ವೀಡನ್ನಲ್ಲಿ ೬೯, ಮೆಕ್ಸಿಕೋದಲ್ಲಿ ೨೯೪, ಇಂಗ್ಲೆಂಡಿನಲ್ಲಿ ೪೨೮ ಒಟ್ಟಾರೆ ವಿಶ್ವಾದ್ಯಂತ ೧,೭೪೨ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment