ಏರ್ ಇಂಡಿಯಾ ಮೂಲಕ ದುಬೈಯಿಂದ ೧೭೭ ಭಾರತೀಯರು ಭಾರತದತ್ತ
ದುಬೈ: ಒಟ್ಟು ೧೭೭ ಮಂದಿ ಭಾರತೀಯರನ್ನು ಹೊತ್ತ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ನ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 2020 ಮೇ 07ರ ಗುರುವಾರ ಭಾರತದತ್ತ ಪಯಣ ಹೊರಟಿತು.
ವಿಮಾನವು ಕೇರಳದ ಕೋಯಿಕ್ಕೋಡಿನಲ್ಲಿ ಬಂದು ಇಳಿಯಲಿದೆ. ಕೊರೋನಾವೈರಸ್ ದಿಗ್ಬಂಧನದ ಪರಿಣಾಮವಾಗಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರುವ ಭಾರತ ಸರ್ಕಾರದ ಉಪಕ್ರಮದ ಅಡಿಯಲ್ಲಿ ಭಾರತಕ್ಕೆ ವಾಪಸಾಗುತ್ತಿರುವ ಮೊದಲ ತಂಡ ಇದಾಗಿದೆ.
No comments:
Post a Comment