ಭಾರತ: ಕೊರೋನಾ ಸೋಂಕು ೧,೧೨,೩೫೯, ಚೇತರಿಕೆ ೪೫,೨೯೯
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು 2020 ಮೇ 21ರ ಗುರುವಾರ ೧.೧ ಲಕ್ಷವನ್ನು ದಾಟಿದವು. ಕಳೆದ
೨೪ ಗಂಟೆಗಳ ಅವಧಿಯಲ್ಲಿ ೫,೬೦೯ ಹೊಸ
ಪ್ರಕರಣಗಳು ದಾಖಲಾದವು.
ಇದು
ದೇಶದಲ್ಲಿ ಒಂದೇ ದಿನದಲ್ಲಿ ದಾಖಲಾದ ಎರಡನೇ ಅತಿ
ಹೆಚ್ಚಿನ ಸೋಂಕು ಪ್ರಕರಣಗಳ ಸಂಖ್ಯೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ
ಸಂಖ್ಯೆಗಳ ಪ್ರಕಾರ ರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ೧,೧೨,೩೫೯ಕ್ಕೆ ಏರಿದೆ. ಈ ಪೈಕಿ
೪೫,೨೯೯ ಮಂದಿ
ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೬೩,೬೨೪.
ಕೊರೋನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ರಾಷ್ಟ್ರಗಳು ವಿಶ್ವಾದ್ಯಂತ ಕ್ರಮೇಣ ತೆರವುಗೊಳಿಸುತ್ತಿವೆ.
ಜಗತ್ತಿನಾದ್ಯಂತ ೩ ಲಕ್ಷ ಜನರ
ಸಾವು ಮತ್ತು ೫೦ ಲಕ್ಷ ಸೋಂಕಿನ ಪ್ರಕರಣಗಳ ದಾಖಲಾತಿಯೊಂದಿಗೆ ಕೋವಿಡ್ ೧೯ ಇನ್ನೂ ತನ್ನ
ರುದ್ರ ನರ್ತನವನ್ನು ಮುಂದುವರೆಸಿದೆ ಸೋಂಕಿತ ೫೦ ಲಕ್ಷ
ಮಂದಿಯ ಪೈಕಿ ೨೦ ಲಕ್ಷ ಮಂದಿ
ಗುಣಮುಖರಾಗುವುದರೊಂದಿಗೆ ಜಾಗತಿಕ ಚೇತರಿಕೆ ಪ್ರಮಾಣ ಶೇಕಡಾ ೪೦ರ
ಸಮೀಪಕ್ಕೆ ಬಂದಿದೆ.
ಈ ಮಧ್ಯೆ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗ
ಹರಡುವನ್ನು ತಡೆಗಟ್ಟುವಲ್ಲಿ ಹಾಗೂ
ವಿಪತ್ತನ್ನು ಎದುರಿಸುವಲ್ಲಿ ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬುದಾಗಿ ಗಂಭೀg ಆರೋಪ
ಮಾಡಿರುವ ಬಿಜೆಪಿ ಮೇ ೨೨ರ ಶುಕ್ರವಾರ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಕರೆ
ನೀಡಿದೆ.
ಕೇರಳ ಮಾದರಿಯನ್ನು ಹೋಲಿಸಿದ ಬಿಜೆಪಿ, ಸಾವಿನ ಪ್ರಮಾಣ ನಿಯಂತ್ರಿಸುವಲ್ಲಿ ಮಹಾರಾಷ್ಟ್ರ ವೈಫಲ್ಯ ಅನುಭವಿಸಿದೆ ಎಂದು ಟೀಕಿಸಿತು.
ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಸಾವು ನೋವಿನ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಇದುವರೆಗೆ ೩೭,೧೩೬
ಮಂದಿಗೆ ಸೋಂಕು ತಗುಲಿದ್ದು, ೧೩೨೫ ಮಂದಿ ಬಲಿಯಾಗಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿದ ಬಿಜೆಪಿ ರಾಜ್ಯ
ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್, ’ಆರೋಗ್ಯ ಮೂಲಸೌಲಭ್ಯ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದೆ. ಹಾಗೆಯೇ ಬಡ ಹಾಗೂ
ನಿರ್ಗತಿಕರಿಗೆ ವಿಶೇಷ ಕೊಡುಗೆ ಘೋಷಿಸಲು ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಟೀಕಿಸಿದರು.
ವಾಣಿಜ್ಯ ನಗರಿ ಮುಂಬಯಿಯೊಂದರಲ್ಲೇ ೨೨,೫೬೩ ಸೋಂಕು
ಪ್ರಕರಣಗಳು ಕಾಣಸಿದ್ದು, ೮೦೦
ಮಂದಿ ಸಾವನ್ನಪ್ಪಿದ್ದಾರೆ.
ಮಾರ್ಚ್ ೯ ಮಹಾರಾಷ್ಟ್ರದಲ್ಲಿ ಮೊದಲ
ಕೋವಿಡ್ ಪ್ರಕರಣ ದಾಖಲಾಗಿತ್ತು. ಇದೀಗ ೪೦,೦೦೦
ಸನಿಹವನ್ನು ತಲುಪುತ್ತಿದೆ. ಕೇರಳದಲ್ಲೂ ಮೊದಲು ಪ್ರಕರಣ ಮಾರ್ಚ್ ೯ರಂದು ದಾಖಲಾಗಿತ್ತು. ಆದರೆ
೭೦ ದಿನಗಳ ಅಂತರದಲ್ಲಿ ಕೇರಳದಲ್ಲಿ ೧೦೦೦ಕ್ಕೂ ಕಡಿಮೆ
ಪ್ರಕರಣಗಳು ಮಾತ್ರ ದಾಖಲಾಗಿದ್ದು, ಸಂಪೂರ್ಣ ನಿಯಂತ್ರಣವನ್ನು ಸಾಧಿಸಿದೆ.
ಇಂತಹ
ಪರಿಸ್ಥಿತಿಯಲ್ಲಿ ಜನರು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಚಂದ್ರಕಾಂತ್ ಆರೋಪಿಸಿದರು.
ಸರ್ಕಾರದ ವೈಫಲ್ಯವನ್ನು ಪ್ರತಿಭಟಿಸಲು ಶುಕ್ರವಾg ಜನರು ಮನೆಯ
ಹೊರಗೆ ಬಂದು ರಿಬ್ಬನ್, ಕಪ್ಪು ಫಲಕ ಹಾಗೂ
ಕಪ್ಪು ಮಾಸ್ಕ್ ಧರಿಸಿ
ಪ್ರತಿಭಟನೆ ನಡೆಸಬೇಕು ಎಂದು
ಪಾಟೀಲ್ ಕರೆ ನೀಡಿದರು.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೫೧,೨೩,೪೧೪,
ಸಾವು ೩,೩೦,೭೯೦
ಚೇತರಿಸಿಕೊಂಡವರು- ೨೦,೪೩,೭೯೮
ಅಮೆರಿಕ ಸೋಂಕಿತರು ೧೫,೯೫,೦೮೧, ಸಾವು
೯೫,೦೧೬
ಸ್ಪೇನ್ ಸೋಂಕಿತರು ೨,೭೯,೫೨೪, ಸಾವು
೨೭,೮೮೮
ಇಟಲಿ
ಸೋಂಕಿತರು ೨,೨೭,೩೬೪, ಸಾವು
೩೨,೩೩೦
ಜರ್ಮನಿ ಸೋಂಕಿತರು ೧,೭೮,೫೬೮, ಸಾವು
೮,೨೭೧
ಚೀನಾ
ಸೋಂಕಿತರು ೮೨,೯೬೭,
ಸಾವು ೪,೬೩೪
ಇಂಗ್ಲೆಂಡ್ ಸೋಂಕಿತರು ೨,೫೦,೯೦೮, ಸಾವು
೩೬,೦೪೨
ಅಮೆರಿಕದಲ್ಲಿ ೮೦, ಇರಾನಿನಲ್ಲಿ ೬೬,
ಬೆಲ್ಜಿಯಂನಲ್ಲಿ ೩೬, ಇಂಡೋನೇಷ್ಯ ೩೬, ನೆದರ್ ಲ್ಯಾಂಡ್ಸ್‌ನಲ್ಲಿ ೨೭, ರಶ್ಯಾದಲ್ಲಿ ೧೨೭,
ಸ್ವೀಡನ್‌ನಲ್ಲಿ ೪೦, ಮೆಕ್ಸಿಕೋದಲ್ಲಿ ೪೨೪ ಒಟ್ಟಾರೆ ವಿಶ್ವಾದ್ಯಂತ ೧೫೫೯ ಮಂದಿ ಒಂದೇ
ದಿನ ಸಾವನ್ನಪ್ಪಿದ್ದಾರೆ.
No comments:
Post a Comment