Tuesday, June 30, 2020

ಚೀನಾದಿಂದ ಭಾರತದ ವೆಬ್‌ಸೈಟ್‌ಗಳಿಗೆ ಅಡ್ಡಗಾಲು

ಚೀನಾದಿಂದ ಭಾರತದ ವೆಬ್ಸೈಟ್ಗಳಿಗೆ ಅಡ್ಡಗಾಲು

ನವದೆಹಲಿ/ ಬೀಜಿಂಗ್: ತನ್ ೫೯ ಆಪ್ಗಳನ್ನು ಭಾರತ ನಿಷೇಧಿದ್ದಕ್ಕೆ ಪ್ರತಿಯಾಗಿ, ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ತಡೆ ಹಿಡಿಯುವ ಮೂಲಕ ತನ್ನ ದೇಶದಲ್ಲಿ ಭಾರತದ ವೆಬ್ಸೈಟ್ಗಳನ್ನೇ ನೋಡಲು ಸಾಧ್ಯವಾಗದಂತೆ ಮಾಡುವ ಮೂಲಕ ಸೇಡು ತೀರಿಸಿಕೊಂಡಿದೆ.

ಭಾರತವು ೫೯ ಆಪ್ಗಳ ಮೇಲೆ ನಿಷೇಧ ಹೇರಿದ ಬೆನ್ನಲ್ಲೇ ಚೀನಾ ಕ್ರಮ ಕೈಗೊಂಡಿದೆ ಎಂದು 2020 ಜೂನ್ 30ರ ಮಂಗಳವಾರ ವರದಿ ಬಂದಿತು.

ಭಾರತದ ಟಿವಿ ಚಾನೆಲ್ಲುಗಳನ್ನು ಈಗಿನಂತೆಯೇ ಐಪಿ ಟಿವಿ ಮೂಲಕ ನೋಡಬಹುದಾಗಿದ್ದರೂ, ಕಳೆದೆರಡು ದಿನಗಳಿಂದ ಐಫೋನ್ ಮತ್ತು ಡೆಸ್ಕ್ ಟಾಪ್ಗಳಲ್ಲಿ ಎಕ್ಸ್ ಪ್ರೆಸ್ ವಿಪಿಎನ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೀಜಿಂಗಿನಲ್ಲಿರುವ ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿತು.

ಸೆನ್ಸಾರ್ಶಿಪ್ ಮೀರಿ ನಿರ್ದಿಷ್ಟ ವೆಬ್ಸೈಟುಗಳಿಗೆ  ಭೇಟಿ ನೀಡಲು ಅನುವು ಮಾಡಿಕೊಡುವ ವಿಪಿಎನ್ಗಳನ್ನೇ ತಡೆ ಹಿಡಿಯಬಲ್ಲ ಅತ್ಯಾಧುನಿಕ ಫೈರ್ವಾಲ್ನ್ನು ಚೀನಾ ಸೃಷ್ಟಿಸಿದೆ ಎಂದು ಹೇಳಲಾಗುತ್ತಿದೆ.

ಆನ್ಲೈನ್ ಸೆನ್ಸಾರ್ ಶಿಪ್ ವಿಷಯಕ್ಕೆ ಸಂಬಂಧಿಸಿದಂತೆ ಚೀನಾ ಕುಖ್ಯಾತಿ ಪಡೆದಿದೆ. ಕ್ಸಿ ಜಿನ್ಪಿಂಗ್ ಸರ್ಕಾರವು ಇದನ್ನು ಹೈಟೆಕ್ ವಿಧಾನಗಳೊಂದಿಗೆ ಜಾರಿಗೊಳಿಸುತ್ತಿದೆ.

ಉದಾಹರಣೆಯನ್ನು ಕೊಡಬೇಕು ಎಂದರೆ ಸಿಎನ್ ಎನ್ ಅಥವಾ ಬಿಬಿಸಿಯಲ್ಲಿ ಹಾಂಕಾಂಗ್ ಪ್ರತಿಭಟನೆಯ ವಿಷಾರ ಪ್ರಸ್ತಾಪವಾಯಿತು ಎಂದಾದರೆ, ತತ್ಕ್ಷಣವೇ  ವೆಬ್ ಸೈಟುಗಳ ಪರದೆ ಚೀನಾದಲ್ಲಿ ಖಾಲಿಯಾಗಿ ಕಾಣಿಸುತ್ತದೆ. ನಿರ್ದಿಷ್ಟ ವಿಷಯ ಮರೆಯಾದ ಬಳಿಕವಷ್ಟೇ ವೆಬ್ ಸೈಟ್ ಪರದೆ ಕಾಣಿಸಿಕೊಳ್ಳುತ್ತದೆ ಎಂದು ವರದಿ ತಿಳಿಸಿತು.

ಚೀನಾದ ಟಿಕ್ ಟಾಕ್, ಶೇರ್ಇಟ್, ಹೆಲೊ, ಲೀಕೀ, ಯುಸಿ ಬ್ರೌಸರ್ ಮತ್ತು ವಿಚಾಟ್ ಸೇರಿದಂತೆ ೫೯ ಮೊಬೈಲ್ ಆಪ್ಗಳನ್ನು ನಿಷೇಧಿಸಿ ಭಾರತ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು.

ಅಸಮಾಧಾನ: ಭದ್ರತಾ ವಿಚಾರಗಳ ಕಾರಣಕ್ಕಾಗಿ ಚೀನಾ ಮೂಲದ ಅಥವಾ ಚೀನಾ ಕಂಪೆನಿಗಳು ಅಭಿವೃದ್ಧಿಪಡಿಸಿರುವ ೫೯ ಮೊಬೈಲ್ ಆಪ್ಗಳನ್ನು ಭಾರತ ಸರ್ಕಾರ ನಿಷೇಧಿಸಿದ್ದಕ್ಕೆ ಚೀನಾ ಸರ್ಕಾರ ಮಂಗಳವಾರ ತನ್ನ ಅಸಮಾಧಾನ ಹೊರಹಾಕಿತು.

ಭಾರತ ಸರ್ಕಾರದ ನಿರ್ಧಾರದ ಸಾಧಕಬಾಧಕಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ವಸ್ತುಸ್ಥಿತಿಯನ್ನು ವಿಮರ್ಶಿಸುತ್ತಿದ್ದೇವೆಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಝ್ವಾ ಲಿಜಿಯಾನ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು ಎಂದು ಸುದಿ ಸಂಸ್ಥೆ ವರದಿ ಮಾಡಿದೆ.

ವಿದೇಶಗಳಲ್ಲಿ ವ್ಯಾಪಾರ ಮಾಡುತ್ತಿರುವ ಚೀನಾದ ಕಂಪನಿಗಳು ಅಂತಾರಾಷ್ಟ್ರೀಯ ನಿಯಮಗಳು ಮತ್ತು ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರಬೇಕು. ಚೀನಾ ಸೇರಿದಂತೆ ಎಲ್ಲ ಅಂತಾರಾಷ್ಟ್ರೀಯ ಹೂಡಿಕೆದಾರರ ನ್ಯಾಯಬದ್ಧ ಹಕ್ಕುಗಳನ್ನು ಕಾಪಾಡುವುದು ಭಾರತ ಸರ್ಕಾರದ ಕರ್ತವ್ಯಎಂದು ಲಿಜಿಯಾನ್ ಹೇಳಿದರು.

ಎರಡೂ ದೇಶಗಳ ನಡುವೆ ಗಡಿ ಸಂಘರ್ಷ ಉದ್ಭವಿಸಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಚೀನಾದ ಟಿಕ್ ಟಾಕ್, ಶೇರ್ಇಟ್, ಹೆಲೊ, ಲೀಕೀ, ಯುಸಿ ಬ್ರೌಸರ್ ಮತ್ತು ವಿ-ಚಾಟ್ ಸೇರಿದಂತೆ ೫೯ ಮೊಬೈಲ್ ಆಪ್ಗಳನ್ನು ನಿಷೇಧಿಸಿತ್ತು.

ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುತಿದ್ದ ಕಾರಣ ಇವುಗಳನ್ನು ನಿಷೇಧಿಸಲಾಗಿದೆಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿತು.

೫೯ ಆಪ್ಗಳಲ್ಲಿ ಬಹುತೇಕ ಎಲ್ಲವೂ ಚೀನಾದ ಕಂಪನಿಗಳಿಗೆ ಸೇರಿವೆ. ಗಡಿ ಸಂಘರ್ಷಕ್ಕೆ ಪ್ರತೀಕಾರವಾಗಿ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ಫಾರ್ಮ್ ನಲ್ಲಿ ಇರುವ ಆಪ್ಗಳ ಸರ್ವರ್ಗಳು ವಿದೇಶದಲ್ಲಿ ಇವೆ. ಆಪ್ಗಳು ದತ್ತಾಂಶ ಸಂಗ್ರಹ, ಬಳಕೆದಾರರ ಪ್ರೊಫೈಲಿಂಗ್ ಮಾಡಿ ಅವನ್ನು ಅನಧಿಕೃತವಾಗಿ ಸರ್ವರ್ಗಳಿಗೆ  ರವಾನಿಸುತ್ತಿದ್ದವು. ಅಲ್ಲದೆ, ಜನರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದವು. ಸಂಬಂಧ ಹಲವು ದೂರುಗಳು ಬಂದಿದ್ದವು. ಇದು ಅತ್ಯಂತ ಕಳವಳದ ವಿಚಾರವಾಗಿತ್ತು. ಹೀಗಾಗಿ ಆಪ್ಗಳನ್ನು ನಿಷೇಧಿಸಲಾಗಿದೆಎಂದು ಸಚಿವಾಲಯ ತಿಳಿಸಿತ್ತು.

ಜೂನ್ ೧೫ರಂದು ಲಡಾಖ್ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ ೨೦ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಬಳಿಕ ಚೀನಾ ವಿರುದ್ಧ ದೇಶದಲ್ಲಿ ಆಕ್ರೋಶ ಹೆಚ್ಚಾಗಿತ್ತು. ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ದೇಶದಾದ್ಯಂತ ಆಗ್ರಹ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಅಭಿಯಾನ ನಡೆದಿತ್ತು. ತೀರಾ ಅಗತ್ಯವಿಲ್ಲದ ಚೀನಾ ವಸ್ತುಗಳ ಆಮದು ನಿಷೇಧಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು. ಕುರಿತು ಕೈಗಾರಿಕೋದ್ಯಮಿಗಳ ಅಭಿಪ್ರಾಯವನ್ನೂ ಕೇಳಿತ್ತು. ಚೀನಾದಿಂದ ಆಮದಾಗುವ ಅಗತ್ಯ ವಸ್ತುಗಳ, ಕಚ್ಚಾ ವಸ್ತುಗಳ ಪಟ್ಟಿ ಒದಗಿಸುವಂತೆಯೂ ಅದಕ್ಕೆ ಪರ್ಯಾಯಗಳ ಬಗ್ಗೆ ಸಲಹೆ ನೀಡುವಂತೆಯೂ ಸೂಚಿಸಿತ್ತು.

No comments:

Advertisement