ಕೊರೋನಾ: ಭಾರತದಲ್ಲಿ
ಸೋಂಕು ೫,೬೬,೮೪೦
ದೆಹಲಿಯನ್ನು
ಹಿಂದಿಕ್ಕಿದ ತಮಿಳುನಾಡು
ನವದೆಹಲಿ: ಒಂದೇ ದಿನದಲ್ಲಿ ೧೮,೫೨೨ ಜನರಿಗೆ ಕೊರೋನವೈರಸ್ ಸೋಂಕು ದೃಢಪಡುವುದರೊಂದಿಗೆ ಭಾರತದ ಕೋವಿಡ್-೧೯ ಸೊಂಕು ಪ್ರಕರಣಗಳ ಸಂಖ್ಯೆ 2020 ಜೂನ್ 30ರ ಮಂಗಳವಾರ ೫,೬೬,೮೪೦ಕ್ಕೆ ಏರಿತು. ಇದೇ ವೇಳೆಗೆ ಸಾವಿನ ಸಂಖ್ಯೆ ೧೬೮೮೩ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ.
ಕಳೆದ
೨೪ ಗಂಟೆಗಳಲ್ಲಿ ಸುಮಾರು ೪,೦೦೦ ಪ್ರಕರಣಗಳನ್ನು
ದಾಖಲಿಸಿದ ತಮಿಳುನಾಡು ಸಾಂಕ್ರಾಮಿಕ ರೋUದ ಅತಿಬಾಧಿತ
ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಮರಳಿ ಪಡೆಯುವ ಮೂಲಕ ದೆಹಲಿಯನ್ನು ಹಿಂದಕ್ಕೆ ಹಾಕಿತು. ಕರ್ನಾಟಕವು ಹರಿಯಾಣ ಮತ್ತು ಆಂಧ್ರಪ್ರದೇಶವನ್ನು ಹಿಂದಿಕ್ಕಿ ೧,೧೦೦ ಕ್ಕೂ
ಹೆಚ್ಚು ಪ್ರಕರಣಗಳನ್ನು ದಾಖಲಿಸಿತು.
೫,೨೦೦ ಕ್ಕೂ ಹೆಚ್ಚು ಕೊರೋನವೈರಸ್ ಸೋಂಕುಗಳನ್ನು ದಾಖಲಿಸಿದ ಮಹಾರಾಷ್ಟ್ರವು ಏಕದಿನದ ಏರಿಕೆಗೆ ಹೆಚ್ಚಿನ ಕೊಡುಗೆ ನೀಡಿದೆ. ದೆಹಲಿಯಲ್ಲಿ ೨,೦೮೪ ಹೊಸ
ಪ್ರಕರಣಗಳು ದಾಖಲಾದವು.
ಒಟ್ಟು
ಸೋಂಕಿತರ ಪೈಕಿ ೩,೩೪,೮೨೧
ಜನರು ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೨,೧೫,೧೨೫
ಆಗಿದೆ ಎಂದು ಬೆಳಿಗ್ಗೆ ೮ ಗಂಟೆಗೆ ನವೀಕರಿಸಿದ
ಮಾಹಿತಿಯ ತಿಳಿಸಿದೆ.
"ಹೀಗಾಗಿ,
ಇದುವರೆಗೆ ಸುಮಾರು ೫೯.೦೭ ರಷ್ಟು
ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕೊರೋನವೈರಸ್
ಸೋಂಕು ಸತತ ಏಳನೇ ದಿನ ೧೫,೦೦೦ ಕ್ಕಿಂತ
ಹೆಚ್ಚಾಗಿದೆ. ದೇಶವು ಜೂನ್ ೧ ರಿಂದ ಇಲ್ಲಿಯವರೆಗೆ
೩,೭೬,೩೦೫ ಸೋಂಕುಗಳ
ಉಲ್ಬಣವನ್ನು ಕಂಡಿದೆ.
ಐಸಿಎಂಆರ್
ಪ್ರಕಾರ, ಜೂನ್ ೨೯ ರವರೆಗೆ ಒಟ್ಟು
೮೬,೦೮,೬೫೪ ಮಾದರಿಗಳನ್ನು
ಪರೀಕ್ಷಿಸಲಾಗಿದ್ದು, ೨,೧೦,೨೯೨
ಮಾದರಿಗಳನ್ನು ಸೋಮವಾರ ಪರೀಕ್ಷಿಸಲಾಗಿದೆ.
ಕಳೆದ
೨೪ ಗಂಟೆಗಳಲ್ಲಿ ವರದಿಯಾದ ೪೧೮ ಸಾವುಗಳಲ್ಲಿ ಮಹಾರಾಷ್ಟ್ರದಲ್ಲಿ ೧೮೧, ತಮಿಳುನಾಡಿನಲ್ಲಿ ೬೨, ದೆಹಲಿಯಲ್ಲಿ ೫೭,
ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ ೧೯, ಪಶ್ಚಿಮ ಬಂಗಾಳದಲ್ಲಿ ೧೪, ಉತ್ತರಪ್ರದೇದಲ್ಲಿ ೧೨, ಆಂಧ್ರಪ್ರದೇಶದಲ್ಲಿ ೧೧, ಹರಿಯಾಣದಲ್ಲಿ ೯, ಮಧ್ಯಪ್ರದೇಶದಲ್ಲಿ ೭, ರಾಜಸ್ಥಾನ
ಮತ್ತು ತೆಲಂಗಾಣದಲ್ಲಿ ತಲಾ ೬, ಪಂಜಾಬಿನಲ್ಲಿ
೫, ಜಾರ್ಖಂಡ್ನಲ್ಲಿ ೩, ಬಿಹಾರ ಮತ್ತು
ಒಡಿಶಾದಲ್ಲಿ ತಲಾ ಎರಡು ಮತ್ತು ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಈವರೆಗೆ
ವರದಿಯಾದ ಒಟ್ಟು ೧೬,೮೯೩ ಸಾವುಗಳಲ್ಲಿ
೭,೬೧೦ ಸಾವುಗಳು ಮಹಾರಾಷ್ಟ್ರದಲ್ಲಿ ಸಂಭವಿಸಿವೆ. ದೆಹಲಿಯಲ್ಲಿ ೨,೬೮೦, ಗುಜರಾತ್
೧,೮೨೭, ತಮಿಳುನಾಡು ೧,೧೪೧, ಉತ್ತರ
ಪ್ರದೇಶ ೬೭೨, ಪಶ್ಚಿಮ ಬಂಗಾಳ ೬೫೩, ರಾಜಸ್ಥಾನ ೫೬೪, ರಾಜಸ್ಥಾನ ೪೦೫ ಮತ್ತು ತೆಲಂಗಾಣದಲ್ಲಿ ೨೫೩ ಸಾವುಗಳು ಸಂಭವಿಸಿವೆ.
ಕೋವಿಡ್-೧೯ ಸಾವಿನ ಸಂಖ್ಯೆ
ಹರಿಯಾಣದಲ್ಲಿ ೨೩೨, ಕರ್ನಾಟಕದಲ್ಲಿ ೨೨೬, ಆಂಧ್ರಪ್ರದೇಶದಲ್ಲಿ ೧೮೦, ಪಂಜಾಬ್ನಲ್ಲಿ ೧೩೮, ಜಮ್ಮು ಮತ್ತು ಕಾಶ್ಮೀರದಲ್ಲಿ ೯೫, ಬಿಹಾರದಲ್ಲಿ ೬೨, ಉತ್ತರಾಖಂಡದಲ್ಲಿ ೩೯, ಒಡಿಶಾದಲ್ಲಿ ೨೩ ಮತ್ತು ಕೇರಳದಲ್ಲಿ
೨೨ ಕ್ಕೆ ತಲುಪಿದೆ.
ಜಾರ್ಖಂಡ್ನಲ್ಲಿ ೧೫ ಸಾವುಗಳು, ಛತ್ತೀಸ್
ಗಢದಲ್ಲಿ ೧೩, ಅಸ್ಸಾಂ ೧೧, ಪುದುಚೇರಿ ೧೦, ಹಿಮಾಚಲ ಪ್ರದೇಶ ಒಂಬತ್ತು, ಚಂಡೀಗಢ ಆರು, ಗೋವಾ ಮೂರು ಮತ್ತು ಮೇಘಾಲಯ, ತ್ರಿಪುರ, ಲಡಾಖ್ ಮತ್ತು ಅರುಣಾಚಲ ಪ್ರದೇಶಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸಹ
ಆರೋಗ್ಯ ಸಮಸ್ಯೆಗಳಿಂದಾಗಿ ಶೇಕಡಾ ೭೦ ಕ್ಕೂ ಹೆಚ್ಚು
ಸಾವುಗಳು ಸಂಭವಿಸಿವೆ ಎಂದು ಅದು ಹೇಳಿದೆ.
ಮಹಾರಾಷ್ಟ್ರದಲ್ಲಿ
ಅತಿ ಹೆಚ್ಚು ಪ್ರಕರಣಗಳು ೧,೬೯,೮೮೩,
ತಮಿಳುನಾಡು ೮೬,೨೨೪, ದೆಹಲಿ
೮೫,೧೬೧, ಗುಜರಾತ್ ೩೧,೯೩೮, ಉತ್ತರ
ಪ್ರದೇಶ ೨೨,೮೨೮, ಪಶ್ಚಿಮ
ಬಂಗಾಳ ೧೭,೯೦೭, ರಾಜಸ್ಥಾನ
೧೭,೬೬೦ ಪ್ರಕರಣಗಳು ದಾಖಲಾಗಿವೆ ಎಂದು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಕೋವಿಡ್-೧೯ ಪ್ರಕರಣಗಳ ಸಂಖ್ಯೆ
ತೆಲಂಗಾಣದಲ್ಲಿ ೧೫,೩೯೪, ಕರ್ನಾಟಕದಲ್ಲಿ
೧೪,೨೯೫, ಹರಿಯಾಣದಲ್ಲಿ ೧೪,೨೧೦, ಆಂಧ್ರಪ್ರದೇಶದಲ್ಲಿ
೧೩,೮೯೧, ಮತ್ತು ಮಧ್ಯಪ್ರದೇಶದಲ್ಲಿ ೧೩,೩೭೦ ಪ್ರಕರಣಗಳಿಗೆ
ಏರಿದೆ.
ಇದು
ಬಿಹಾರದಲ್ಲಿ ೯,೬೪೦, ಅಸ್ಸಾಂನಲ್ಲಿ
೭,೭೫೨, ಜಮ್ಮು ಮತ್ತು ಕಾಶ್ಮೀರದಲ್ಲಿ ೭,೨೩೭ ಮತ್ತು
ಒಡಿಶಾದಲ್ಲಿ ೬,೮೫೯ ಕ್ಕೆ
ಏರಿದೆ. ಪಂಜಾಬ್ ಇದುವರೆಗೆ ೫,೪೧೮ ಕೊರೋನವೈರಸ್
ಸೋಂಕುಗಳನ್ನು ವರದಿ ಮಾಡಿದ್ದರೆ, ಕೇರಳದಲ್ಲಿ ೪,೧೮೯ ಪ್ರಕರಣಗಳಿವೆ.
ಉತ್ತರಾಖಂಡದಲ್ಲಿ
೨,೮೩೧ ಜನರು, ಛತ್ತೀಸ್ ಗಢದಲ್ಲಿ ೨,೭೬೧, ಜಾರ್ಖಂಡ್ನಲ್ಲಿ ೨,೪೨೬, ತ್ರಿಪುರದಲ್ಲಿ
೧,೩೮೦, ಮಣಿಪುರದಲ್ಲಿ ೧,೨೨೭, ಗೋವಾದಲ್ಲಿ
೧,೧೯೮, ಲಡಾಖ್ನಲ್ಲಿ ೯೬೪ ಮತ್ತು ಹಿಮಾಚಲ ಪ್ರದೇಶದಲ್ಲಿ ೯೪೨ ಜನರು ಈ ವೈರಸ್ಗೆ
ತುತ್ತಾಗಿದ್ದಾರೆ.
ಪುದುಚೇರಿಯಲ್ಲಿ
೬೧೯ ಕೋವಿಡ್ -೧೯, ಚಂಡೀಗಢ ೪೩೫, ನಾಗಾಲ್ಯಾಂಡ್ ೪೩೪ ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಒಟ್ಟಾಗಿ ೨೦೩ ಕೋವಿಡ್ -೧೯ ಪ್ರಕರಣಗಳನ್ನು ದಾಖಲಿಸಿವೆ.
ಅರುಣಾಚಲ
ಪ್ರದೇಶದಲ್ಲಿ ೧೮೭ ಪ್ರಕರಣಗಳು, ಮಿಜೋರಾಂನಲ್ಲಿ ೧೪೮ ಪ್ರಕರಣಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ೯೦, ಸಿಕ್ಕಿಂನಲ್ಲಿ ಇದುವರೆಗೆ ೮೮ ಸೋಂಕುಗಳು ದಾಖಲಾಗಿವೆ,
ಮೇಘಾಲಯದಲ್ಲಿ ೪೭ ಪ್ರಕರಣಗಳು ದಾಖಲಾಗಿವೆ.
ವಿಶ್ವಾದ್ಯಂತ
ಕೊರೋನಾವೈರಸ್ ಸೋಂಕಿತರು ೧,೦೪,೫೧,೦೮೬, ಸಾವು ೫,೦೯,೧೬೪
ಚೇತರಿಸಿಕೊಂಡವರು- ೫೭,೦೬,೮೫೮
ಅಮೆರಿಕ
ಸೋಂಕಿತರು ೨೬,೮೪,೨೩೧,
ಸಾವು ೧,೨೮,೮೫೭
ಸ್ಪೇನ್
ಸೋಂಕಿತರು ೨,೯೬,೦೫೦,
ಸಾವು ೨೮,೩೪೬
ಇಟಲಿ
ಸೋಂಕಿತರು ೨,೪೦,೪೩೬,
ಸಾವು ೩೪,೭೪೪
ಜರ್ಮನಿ
ಸೋಂಕಿತರು ೧,೯೫,೩೯೯,
ಸಾವು ೯,೦೪೧
ಚೀನಾ
ಸೋಂಕಿತರು ೮೩,೫೩೧, ಸಾವು
೪,೬೩೪
ಇಂಗ್ಲೆಂಡ್
ಸೋಂಕಿತರು ೩,೧೧,೯೬೫,
ಸಾವು ೪೩,೫೭೫
ಭಾರತ
ಸೋಂಕಿತರು ೫,೭೩,೫೯೮,
ಸಾವು ೧೭,೦೦೮
ಅಮೆರಿಕದಲ್ಲಿ ೭೪, ಇರಾನಿನಲ್ಲಿ ೧೪೭, ಬ್ರೆಜಿಲ್ನಲ್ಲಿ ೦, ಇಂಡೋನೇಷ್ಯ ೭೧, ನೆದರ್ ಲ್ಯಾಂಡ್ಸ್ನಲ್ಲಿ ೬, ರಶ್ಯಾದಲ್ಲಿ ೧೫೪, ಪಾಕಿಸ್ತಾನದಲ್ಲಿ ೧೩೭, ಮೆಕ್ಸಿಕೋದಲ್ಲಿ ೪೭೩, ಭಾರತದಲ್ಲಿ ೮೧, ಒಟ್ಟಾರೆ ವಿಶ್ವಾದ್ಯಂತ ೧,೬೩೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ೩,೩೯,೧೨೫ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.
No comments:
Post a Comment