Saturday, June 13, 2020

ಝಾನ್ಸಿಯಲ್ಲಿ ಭೂತಚೇಷ್ಟೆ..! ಪೊಲೀಸರಿಗೆ ಕಂಡದ್ದೇನು?

ಝಾನ್ಸಿಯಲ್ಲಿ ಭೂತಚೇಷ್ಟೆ..! ಪೊಲೀಸರಿಗೆ ಕಂಡದ್ದೇನು?

ನವದೆಹಲಿ: ಉತ್ತರ ಪ್ರದೇಶದ ಝಾನ್ಸಿಯಲ್ಲಿನ ಜಿಮ್ನಾಷಿಯಂ ಒಂದರಲ್ಲಿ ಭೂತ ಚೇಷ್ಟೆ ಕಂಡು ಬಂದಿದ್ದು, ಉಪಕರಣವೊಂದು ತಾನೇ ತಾನಾಗಿ ಅಲುಗಾಲುತ್ತಿದೆ ಎಂಬ ಸುದ್ದಿಯೊಂದು ನಗರವಾಸಿಗಳಲ್ಲಿ 2020 ಜೂನ್ 13ರ ಶನಿವಾರ ಕುತೂಹಲದ ಜೊತೆಗೆ ಭಯವನ್ನೂ ಹುಟ್ಟುಹಾಕಿತ್ತು.

ಜಿಮ್ನಾಷಿಯಂನಲ್ಲಿ ಉಪಕರಣ ತಾನೇ ತಾನಾಗಿ ಅಲುಗಾಡುತ್ತಿದ್ದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಜಿಮ್ನಾಷಿಯಂನ ಉಪಕರಣ ತಾನೇ ತಾನಾಗಿ ಅಲುಗಾಡುತ್ತಿರುವ ಬಗೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲಿ ವೈರಲ್ ಆಗುತ್ತಿದ್ದಂತೆಯೇ ಝಾನ್ಸಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದರು.

ತನಿಖೆಯ ಬಳಿಕ, ಶೋಲ್ಡರ್ ಪ್ರೆಸ್ ಯಂತ್ರವು ಲೆಕ್ಕಕ್ಕಿಂತ ಹೆಚ್ಚು ಗ್ರೀಸ್ ಬಳಿದ ಪರಿಣಾಮವಾಗಿ ಕೆಲವು ಸೆಕೆಂಡ್ಗಳ ಕಾಲ ತಾನೇ ತಾನಾಗಿ ಅಲುಗಾಡುತ್ತಿದೆ ಎಂಬುದು ಬೆಳಕಿಗೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಯಾವ ಭೂತವೂ ಇಲ್ಲ, ಚೇಷ್ಟೆಯೂ ಇಲ್ಲ, ಇದೆಲ್ಲ ಬರೀ ಪುಕಾರುಎಂದು ಝಾನ್ಸಿ ಪೊಲೀಸರು ಬಳಿಕ ಟ್ವೀಟ್ ಮಾಡಿದರು.

ಯಾರೋ ಕೆಲವು ಕಿಡಿಗೇಡಿಗಳು ಶೋಲ್ಡರ್ ಪ್ರೆಸ್ ಯಂತ್ರಕ್ಕೆ ಅತಿಯಾಗಿ ಗ್ರೀಸ್ ಹಚ್ಚಿದ್ದಾರೆ. ಮತ್ತು ಅದನ್ನು ತಳ್ಳಿದ್ದಾರೆ. ನಂತರ ಕೆಲವು ಸೆಕೆಂಡುಗಳ ಕಾಲ ಯಂತ್ರವು ತಾನೇ ತಾನಾಗಿ ಅಲುಗಾಡುತ್ತಿತ್ತು. ವೇಳೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆಎಂದು ಪೊಲೀಸರು ಸ್ಪಷ್ಟ ಪಡಿಸಿದರು.

ಭೂತಚೇಷ್ಟೆಯ ಕಾರಣಕರ್ತನಾದ ಕಿಡಿಗೇಡಿಯನ್ನು ಹುಡುಕಾಡುತ್ತಿದ್ದೇವೆ. ಇಲ್ಲಿ ಯಾವ ಭೂತವೂ ಇಲ್ಲ. ಎಲ್ಲವೂ ಬರೀ ವದಂತಿಎಂದು ಝಾನ್ಸಿ ಪೊಲೀಸರ ಟ್ವೀಟ್ ತಿಳಿಸಿತು.

ವಿಡಿಯೋವನ್ನು ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಪ್ರಕಟಿಸಿದ ಉತ್ತರ ಪ್ರದೇಶದ ಉನ್ನತ ಪೊಲೀಸ್ ಅಧಿಕಾರಿ ರಾಹುಲ್ ಶ್ರೀವಾಸ್ತವ ಅವರು ಅದಕ್ಕೆಫಿಟ್ನೆಸ್ ಫ್ರೀಕ್ ಗೋಸ್ಟ್ (ಫಿಟ್ನೆಸ್ ಹುಚ್ಚಾಟಿಕೆಯ ಭೂತ)?’ ಎಂಬುದಾಗಿ ಶೀರ್ಷಿಕೆ ನೀಡಿದರು.

ಕಿಡಿಗೇಡಿಗಳನ್ನು ಶೀಘ್ರವೇ ಬೇಟೆಯಾಡಿ ಲಾಕಪ್ಗೆ ತಳ್ಳಲಾಗುವುದುಎಂದು ಶ್ರೀವಾಸ್ತವ್ ಟ್ವೀಟ್ ಮಾಡಿದರು.

ಇದಕ್ಕೆ ಮುನ್ನ ಶ್ರೀವಾಸ್ತವ್ ಅವರುಮದುವೆಗಳಲ್ಲಿ ಬಳಸಲಾಗುವಡಿಜೆ ವಾಹನ ನೆರವಿನೊಂದಿಗೆ ದೊಡ್ಡದಾಗಿ ಸಂಗೀತ ನುಡಿಸುವ ಮೂಲಕ ಗಿಡಗಳನ್ನು ಭಕ್ಷಿಸುವ ಮಿಡತೆ ದಂಡನ್ನು ಓಡಿಸಲು ರೈತರು ಝಾನ್ಸಿಯಲ್ಲಿ ಯತ್ನಿಸುತ್ತಿದ್ದ ವಿಡಿಯೋವನ್ನು ಪ್ರಕಟಿಸಿದ್ದರು.

ಡಿಜೆ ಪಾರ್ಟಿಗಳಲ್ಲಿ ಮಾತ್ರವೇ ಪರಿಣಾಮಕಾರಿಯಲ್ಲ, ಮಿಡತೆಗಳ ವಿರುದ್ಧ ಹೋರಾಡುವಲ್ಲೂ ಡಿಜೆ ಪರಿಣಾಮಕಾರಿ. ದಿನಗಳು ಎಲ್ಲರನ್ನೂ ಬದಲಾಯಿಸುತ್ತವೆ. ನೀವು ಸದ್ದು ಮಾಡಬಹುದು ಅಥವಾ ತಟ್ಟೆಗಳನ್ನೂ ಭಾರಿಸಬಹುದುಎಂದು ಶ್ರೀವಾಸ್ತವ್ ಅವರು ವಿಡಿಯೋ ದೃಶ್ಯಾವಳಿಯನ್ನು ಲಗತ್ತಿಸಿದ ಟ್ವೀಟಿನಲ್ಲಿ ಬರೆದಿದ್ದರು.

ಭೂತಚೇಷ್ಟೆ ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ:


No comments:

Advertisement