Friday, July 10, 2020

ಸಾಮಾಜಿಕ ಮಾಧ್ಯಮ ಬಳಕೆಗೆ ಮಾರ್ಗಸೂಚಿ: ಸುಪ್ರೀಂ

ಸಾಮಾಜಿಕ ಮಾಧ್ಯಮ ಬಳಕೆಗೆ ಮಾರ್ಗಸೂಚಿ: ಸುಪ್ರೀಂ

ನವದೆಹಲಿ: ಕೈಯಲ್ಲಿ ಹಿಡಿದ ಬಂದೂಕಿನಂತೆ ಸಾಮಾಜಿಕ ಮಾಧ್ಯಮವನ್ನು ಬಳಸುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ 2020 ಜುಲೈ 10ರ ಶುಕ್ರವಾರ ಹೇಳಿದ್ದು, ಕ್ರಿಮಿನಲ್ ಪ್ರಕರಣಗಳಲ್ಲಿ ವಿಶೇಷವಾಗಿ ಜಾಮೀನು ವಿಚಾರಗಳಲ್ಲಿ ಮಾಧ್ಯಮವನ್ನು ಬಳಸುವ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಲು ತೀರ್ಮಾನಿಸಿತು.

ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡರೊಬ್ಬರಿಗೆ ಕನಿಷ್ಠ ೧೮ ತಿಂಗಳು ಸಾಮಾಜಿಕ ಮಾಧ್ಯಮದಿಂದ ದೂರವಿರುವಂತೆ ಆದೇಶ ನೀಡಿದ ಪೀಠ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿರು ಬಂದೂಕನ್ನು ಬಳಸುವಂತೆಯೇ ಸಾಮಾಜಿಕ ಮಾಧ್ಯಮವನ್ನು ಬಳಸಬಹುದು ಎಂದು ಹೇಳಿತು.

ಕ್ರಿಮಿನಲ್ ಪ್ರಕರಣಗಳಲ್ಲಿ, ವಿಶೇಷವಾಗಿ ಜಾಮೀನು ವಿಷಯಗಳಲ್ಲಿ ಸಾಮಾಜಿಕ ಮಾಧ್ಯಮವನ್ನು ಬಳಸುವ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಲು ಉನ್ನತ ನ್ಯಾಯಾಲಯ ನಿರ್ಧರಿಸಿತು.

"ಸಾಮಾಜಿಕ ಮಾಧ್ಯಮವನ್ನು (ಸೋಶಿಯಲ್ ಮೀಡಿಯಾ) ಬಳಸದಂತೆ ಸೂಚಿಸುವ ಆದೇಶದಲ್ಲಿ ಏನು ತಪ್ಪಾಗಿದೆ? ನ್ಯಾಯಾಲಯವು ಆರೋಪಿಯನ್ನು ಬಂದೂಕಿನಿಂದ ದೂರವಿರಲು ಆದೇಶಿಸಬಹುದಾದರೆ, ಅದೇ ರೀತಿ ನಿಮ್ಮನ್ನು ಸಾಮಾಜಿಕ ಮಾಧ್ಯಮದಿಂದ ದೂರವಿರಲು ಕೇಳಬಹುದು" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್..ಬಾಬ್ಡೆ ಹೇಳಿದರು.

ಕೇಂದ್ರ ಮತ್ತು  ಉತ್ತರ ಪ್ರದೇಶ ಸರ್ಕಾರಗಳನ್ನು ಟೀಕಿಸಲು ದಿಗ್ಬಂಧನ (ಲಾಕ್ಡೌನ್) ನಿಯಮಗಳನ್ನು ಉಲ್ಲಂಘಿಸಿ ಪತ್ರಿಕಾಗೋಷ್ಠಿ ನಡೆಸಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ರಾಜಕಾರಣಿ ಸಚಿನ್ ಚೌಧರಿ ಅವರ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ತಪ್ಪಾಗಿ ನಿರ್ವಹಿಸಿದ ಆರೋವನ್ನು ಹೊರಿಸಿ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸಲು ಅಮ್ರೋಹಾದ ರಾಜಕಾರಣಿ ಸಾಮಾಜಿಕ ಮಾಧ್ಯಮವನ್ನು ಬಳಸಿದ್ದರು.

ಲಾಕ್ಡೌನ್ ಮಾನದಂಡಗಳನ್ನು ಮೀರಿದ ಕಾರಣಕ್ಕಾಗಿ, ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸಿದ್ದಕ್ಕಾಗಿ ಮತ್ತು ಇತರ ಅಪರಾಧಗಳಿಗಾಗಿ ಭಾರತೀಯ ದಂಡ ಸಂಹಿತೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಏಪ್ರಿಲ್ ೧೧ ರಂದು ಚೌಧರಿಯ ಅವರನ್ನು ಬಂಧಿಸಲಾಗಿತ್ತು.

ವಿಚಾರಣೆ ಮುಗಿಯುವವರೆಗೂ ಸೋಷಿಯಲ್ ಮೀಡಿಯಾವನ್ನು ಬಳಸಬಾರದು ಎಂಬ ಷರತ್ತಿನ ಮೇರೆಗೆ ಅಲಹಾಬಾದ್ ಹೈಕೋರ್ಟ್ ಚೌಧರಿ ಅವರಿಗೆ ಜಾಮೀನು ನೀಡಿತ್ತು.

ಷರತ್ತನ್ನು ಮಾರ್ಪಾಡು ಮಾಡುವಂತೆ ಚೌಧರಿ ಅವರು ಕೋರಿದಾಗ, ೧೮ ತಿಂಗಳವರೆಗೆ ಅಥವಾ ವಿಚಾರಣೆ ಮುಗಿಯುವವರೆಗೆ, ಯಾವುದು ಮೊದಲು ಆಗುವುದೋ ಅಲ್ಲಿಯವರೆಗೆ ಸಾಮಾಜಿಕ ಮಾಧ್ಯಮವನ್ನು ಬಳಸಬಾರದು ಎಂದು ಹೈಕೋರ್ಟ್ ಆಜ್ಞಾಪಿಸಿತ್ತು.

ಹೈಕೋರ್ಟಿನ ಆದೇಶದ ವಿರುದ್ಧ ವಾದಿಸಿದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ಅವರು ಜಾಮೀನು ಆದೇಶದಲ್ಲಿ ಅಂತಹ ಷರತ್ತು ಸೇರಿಸಬಾರದಿತ್ತು. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಧಿಸಿದ ಕಡಿವಾಣ ಎಂದು ಅವರು ವಾದಿಸಿದರು.

ಆದರೆ ಪೀಠವು ಪ್ರಭಾವಿತನಾಗಿರಲಿಲ್ಲ. " ಆದೇಶದಲ್ಲಿ ನಮಗೆ ಯಾವುದೇ ಸಮಸ್ಯೆ ಕಾಣುವುದಿಲ್ಲ. ನಿಮ್ಮ ವಿರುದ್ಧದ ಅಪರಾಧಗಳು ನೀವು ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸಿದ್ದೀರಿ ಎಂಬುದರ ಬಗ್ಗೆಯೂ ಇದ್ದರೆ, ಏಕೆ ಮಿತಿ ಹಾಕಬಾರದು? ಎಂದು ಪೀಠ ಅದು ಖುರ್ಷಿದ್ ಅವರನ್ನು ಕೇಳಿತು.

ಸಮಸ್ಯೆಗಳನ್ನು ಸೃಷ್ಟಿಸಲು ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ವಿಷಯವನ್ನು ಪೀಠವು ವಿವರವಾಗಿ ಪರಿಶೀಲಿಸಲಿದೆ ಎಂದು ನ್ಯಾಯಾಲಯ ಹೇಳಿತು.

ಷರತ್ತನ್ನು ತೆಗೆದುಹಾಕಲು ಚೌಧರಿಯ ಮಾಡಿದ ಮಧ್ಯಂತರ ಮನವಿಯನ್ನು ಪೀಠ ತಿರಸ್ಕರಿಸಿತು. ಅದೇ ಸಮಯದಲ್ಲಿ, ಸೂಕ್ತ ಮಾರ್ಗಸೂಚಿಗಳನ್ನು ರವಾನಿಸುವ ಉದ್ದೇಶಗಳಿಗಾಗಿ ಉನ್ನತ ನ್ಯಾಯಾಲಯವು ವಿಷಯವನ್ನು ವಿವರವಾಗಿ ಪರಿಶೀಲಿಸುತ್ತದೆ ಎಂದು ನ್ಯಾಯಪೀಠ ಹೇಳಿತು.

"ನಿಮ್ಮ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ನಾವು ಒಲವು ತೋರುತ್ತಿದ್ದೇವೆ ಆದರೆ ನಾವು ಸಾಮಾಜಿಕ ಮಾಧ್ಯಮಗಳ ವಿಷಯದಲ್ಲಿ ಸರಿಯಾದ ಮಾರ್ಗಸೂಚಿಗಳನ್ನು ತಿಳಿಸಲು ನಾವು ನೋಟಿಸ್ ನೀಡುತ್ತೇವೆ. ಎಲ್ಲಾ ಪಕ್ಷಗಳ ವಿಚಾರಣೆಯ ನಂತರ ನಾವು ಆದೇಶ ನೀಡುತ್ತೇವೆ ಎಂದು ಪೀಠ ತಿಳಿಸಿತು.

ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಪೀಠವು ಮುಂದಿನ ವಿಚಾರಣೆಯನ್ನು ಆಗಸ್ಟ್ ೨೮ಕ್ಕೆ ನಿಗದಿ ಪಡಿಸಿತು.

No comments:

Advertisement