Tuesday, July 21, 2020

ಸಾಮಾಜಿಕ ಭದ್ರತಾ ತೆರಿಗೆ ವಾಪಸ್: ಚರ್ಚೆಗೆ ಅಮೆರಿಕ ಅಸ್ತು

ಸಾಮಾಜಿಕ ಭದ್ರತಾ ತೆರಿಗೆ ವಾಪಸ್: ಚರ್ಚೆಗೆ ಅಮೆರಿಕ ಅಸ್ತು

ನವದೆಹಲಿ: ಕಿರಿಕಿರಿ ಉಂಟು ಮಾಡುವ ಸಾಮಾಜಿಕ ಭದ್ರತಾ ತೆರಿಗೆ ಹೊರೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಅಮೆರಿಕವು ಅಂತಿಮವಾಗಿ ಒಪ್ಪಿದ್ದು, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವೃತ್ತಿ ನಿರತರಿಗೆ ಪಾವತಿ ಮಾಡಿದ ಸಾಮಾಜಿಕ ಭದ್ರತಾ ಠೇವಣಿಗಳನ್ನು ಹಿಂಪಡೆಯಲು ಅನುಕೂಲವಾಗುವಂತಹ ಒಪ್ಪಂದ ರೂಪಿಸುವ ನಿಟ್ಟಿನಲ್ಲಿ ಇದು ಮೊದಲ ಮೊದಲ ಹೆಜ್ಜೆಯಾಗಿದೆ.

ಅಮೆರಿಕದಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಪಾವತಿ ಮಾಡುವ ಸಾಮಾಜಿಕ ಭದ್ರತಾ ಠೇವಣಿಗಳನ್ನು ಕೆಲಸದ ವೀಸಾ ಮುಗಿದ ಬಳಿಕ ಹಿಂಪಡೆಯಲು ಅವಕಾಶ ನೀಡುವ ನಿಟ್ಟಿನಲ್ಲಿ ಮಾತುಕತೆ ಅನುಕೂಲಕರವಾಗುವ ಸಾಧ್ಯತೆ ಇದೆ ಎಂದು ಮೂವರು ಅಧಿಕಾರಿಗಳು 2020 ಜುಲೈ 21ರ ಮಂಗಳವಾರ ತಿಳಿಸಿದರು.

ಉದ್ಯಮ ಅಂದಾಜಿನ ಪ್ರಕಾರ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಅಂದಾಜು ಕೋಟಿ ಡಾಲರ್ ( ಬಿಲಿಯನ್ ಡಾಲರ್) ಸಾಮಾಜಿಕ ಭದ್ರತಾ ತೆರಿಗೆ ರೂಪದ ಹಣವನ್ನು ಪ್ರತಿವರ್ಷ ಅಮೆರಿಕ ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ಬಹುತೇಕ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಅಮರಿಕವು ಸಾಮಾಜಿಕ ಭದ್ರತಾ ತೆರಿಗೆಯು ದ್ವಿಪಕ್ಷೀಯ ವಿಷಯ ಎಂಬುದಾಗಿ ಗುರುತಿಸಿ, ಅದರ ಬಗ್ಗೆ ಮಾತುಕತೆಗೆ ಇತ್ತೀಚೆಗೆ ಒಪ್ಪಿಕೊಂಡಿತ್ತು. ಇದೊಂದು ಮಹತ್ವದ ಸಾಧನೆ ಎಂದು ಹೆಸರು ಹೇಳಲು ಇಚ್ಛಿಸದ ಮೂರು ವಿಭಿನ್ನ ಸಚಿವಾಲಯಗಳ ಅಧಿಕಾರಿಗಳು ಹೇಳಿದರು.

ಕಳೆದ ವಾರ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರೋಸ್ಸ್ ಅವರು ಭಾರತದ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರ ಜೊತೆಗೆ ಸಾಮಾಜಿಕ ಭದ್ರತಾ ತೆರಿಗೆ ವಿಷಯದ ಬಗ್ಗೆ ಮಾತನಾಡಬಹುದು ಎಂದು ಹೇಳಿದ್ದರು. ಇದು ಭಾರತ ಮತ್ತು ಅಮೆರಿಕ ಬಾಂಧವ್ಯಗಳನ್ನು ಗಾಢಗೊಳಿಸುವ ನಿಟ್ಟಿನಲ್ಲಿ ಯತ್ನಿಸುತ್ತಿವೆ ಎಂಬುದನ್ನು ಸೂಚಿಸುತ್ತದೆ. ಹಲವಾರು ವರ್ಷಗಳಿಂದ ಯಶಸ್ಸು ಗಳಿಸಲು ಸಾಧ್ಯವಾಗದೇ ಇದ್ದ ವಿಚಾರವನ್ನು ಮಾತುಕತೆಯ ಮೇಜಿಗೆ ತರುವಲ್ಲಿ ಭಾರತ ಯಶಸ್ವಿಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು ನುಡಿದರು.

ಭಾರತೀಯ ಕೆಲಸಗಾರರು, ಮುಖ್ಯವಾಗಿ ಐಟಿ ವೃತ್ತಿ ನಿರತರು ಅಮೆರಿಕದಲ್ಲಿ ದುಡಿಯುವಾಗ ಭಾರೀ ಪ್ರಮಾಣದ ಮೊತ್ತವನ್ನು ಸಾಮಾಜಿಕ ಭದ್ರತಾ ಯೋಜನೆಗೆ ಪಾವತಿ ಮಾಡುತ್ತಾರೆ. ಆದರೆ ಅವರ ಪೈಕಿ ಬಹುತೇಕ ಮಂದಿ ಭಾರತಕ್ಕೆ ವಾಪಸಾಗುವಾಗ ಠೇವಣಿ ಪಕ್ವಗೊಳ್ಳದ ಕಾರಣ (ಅವಧಿ ಮುಗಿಯದ ಕಾರಣ) ತಮ್ಮ ಉಳಿತಾಯವನ್ನು ಅಲ್ಲೇ ಬಿಟ್ಟು ವಾಪಸಾಗುತ್ತಾರೆ. ಉಭಯ ರಾಷ್ಟ್ರಗಳು ಸಹಿ ಹಾಕಬಹುದು ಎಂಬುದಾಗಿ ನಿರೀಕ್ಷಿಸಲಾಗಿರುವ ಒಪ್ಪಂದವು ರೀತಿ ಭಾರತಕ್ಕೆ ವಾಪಸಾಗುವ ನೌಕರರನ್ನ ಆರ್ಥಿಕ ನಷ್ಟದಿಂದ ಪಾರು ಮಾಡಲಿದೆ.

ಜುಲೈ ೧೬ರಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ರೋಸ್ಸ್ ಅವರ ಜೊತೆಗೆ ಟೆಲಿ-ಸಂಭಾಷಣೆ ನಡೆಸಿದ ಸಂದರ್ಭದಲ್ಲಿ  ಗೋಯಲ್ ಅವರು ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ರೋಸ್ಸ್ ಸ್ಪಂದಿಸಿದರು ಮತ್ತು ಅಮೆರಿಕದ ಸಾಮಾಜಿಕ ಭದ್ರತಾ ಆಡಳಿತಗಾರ ಮತ್ತು ಭಾರತೀಯ ಅಧಿಕಾರಿಗಳ ಸಭೆಯನ್ನು ಬಗ್ಗೆ ಚರ್ಚಿಸಲು ನಡೆಸಬಹುದು ಮತ್ತು ಪರಿಹಾರವೊಂದನ್ನು ಕಂಡುಕೊಳ್ಳಬಹುದು ಎಂದು ಸಲಹೆ ಮಾಡಿದರು ಎಂದು ವಾಣಿಜ್ಯ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬ ಅಧಿಕಾರಿ ಹೇಳಿದರು.

ವಿದೇಶಾಂಗ ವ್ಯಹಾರ, ವಾಣಿಜ್ಯ ವ್ಯವಹಾರ ಮತ್ತು ಕಾರ್ಮಿಕ ಇಲಾಖೆಗಳನ್ನು ಪ್ರತಿನಿಧಿಸುವ ಭಾರತೀಯ ಅಧಿಕಾರಿಗಳ ತಂಡವೊಂದು ವಿಷಯವನ್ನು ಇನ್ನಷ್ಟು ಮುಂದಕ್ಕೆ ಒಯ್ಯುವ ನಿರೀಕ್ಷೆ ಇದೆ. ಹಲವಾರು ಸುತ್ತಿನ ಮಾತುಕತೆಗಳ ಬಳಿಕ ಅಂತಿಮ ಪರಿಹಾರ ಸಾದ್ಯವಾಗಬಹುದು. ಪ್ರಕ್ರಿಯೆ ಹಲವು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಆದರೆ, ಕನಿಷ್ಠ ನಾವು ಸರಿಯಾದ ದಿಕ್ಕಿನಲ್ಲಿ ಮುಂದುವರೆಯಲಾರಂಭಿಸಿದ್ದೇವೆಎಂದು ಮೊದಲು ಮಾತನಾಡಿದ ಅಧಿಕಾರಿ ನುಡಿದರು.

ಹಲವಾರು ರಾಷ್ಟ್ರU ಜೊತೆಗೆ ಭಾರತ ಇಂತಹ ಒಪ್ಪಂದಗಳನ್ನು ಹೊಂದಿದೆ. ಅಮೆರಿಕ-ಭಾರತ ಒಪ್ಪಂದವು ರಾಜಕೀಯ ಆಶಯವನ್ನು ಆಧರಿಸಿದ್ದು, s ಕಡೆಗಳಿಂದಲೂ ಧನಾತ್ಮಕ ಸೂಚನೆ ಕಂಡು ಬಂದಿದೆ ಎಂದು ಕಾರ್ಮಿಕ ಸಚಿವಾಲಯದ ಅಧಿಕಾರಿ ಹೇಳಿದರು.

ಭಾರತವು ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಸ್ವಿಜರ್ಲೆಂಡ್, ಲಕ್ಸೆಂಬರ್ಗ್, ನೆದರ್ ಲ್ಯಾಂಡ್ಸ್, ಹಂಗೆರಿ, ಡೆನ್ಮಾರ್ಕ್, ಝೆಕ್ ಗಣರಾಜ್, ಕೊರಿಯಾ ಗಣರಾಜ್ಯ ಮತ್ತು ನಾರ್ವೆ ದೇಶಗಳ ಜೊತೆಗೆ ಇಂತಹ ಒಪ್ಪಂದವನ್ನು ಹೊಂದಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರುವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸುವವರೆಗೆ ವಿಷಯವು ಸಂಪೂರ್ಣವಾಗಿ ಕಳೆದೇ ಹೋಗಿದ್ದ ವಿಷಯವಾಗಿತ್ತು.

No comments:

Advertisement