Wednesday, August 5, 2020

ಸಂಕಲ್ಪ ಪೂರೈಸಿದ್ದೇವೆ: ಮೋಹನ ಭಾಗವತ್

ಸಂಕಲ್ಪ ಪೂರೈಸಿದ್ದೇವೆ: ಮೋಹನ ಭಾಗವತ್

ಅಯೋಧ್ಯೆ: ದಶಕಗಳ ಹೋರಾಟದ ಬಳಿಕ ನಡೆದ ಈದಿನದ ರಾಮಮಂದಿರದ ಶಿಲಾನ್ಯಾಸ ಸಮಾರಂದ ಕ್ಷಣವು ತೃಪ್ತಿಯನ್ನು ತಂದಿದ್ದು, ನಾವು ಸಂಕಲ್ಪವನ್ನು ಪೂರೈಸಿದ್ದೇವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ 2020  ಆಗಸ್ಟ್ 05ರ ಬುಧವಾರ ಇಲ್ಲಿ ಹೇಳಿದರು.

ಭೂಮಿ ಪೂಜೆಯ ಬಳಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ದೇವಾಲಯವನ್ನು ನಿರ್ಮಿಸುವ ಸಂಕಲ್ಪದ ನೆರವೇರಿಕೆಗಾಗಿ ಸಂಸ್ಥೆಯು ಸುಮಾರು ೩೦ ವರ್ಷ ಕೆಲಸ ಮಾಡಿದೆ ಎಂದು ನುಡಿದರು.

"ನಾವು ನಿರ್ಣಯವನ್ನು ತೆಗೆದುಕೊಂಡಿದ್ದೆವು. ಆಗಿನ ಆರ್ಎಸ್ಎಸ್ ಮುಖ್ಯಸ್ಥ ಬಾಲಾಸಾಹೇಬ್ ದೇವರಸ್ ಅವರು ೨೦ ರಿಂದ ೩೦ ವರ್ಷಗಳ ಕಾಲ ಹೋರಾಡಬೇಕಾಗುತ್ತದೆ ಎಂದು ಹೇಳಿದ್ದು ನನಗೆ ನೆನಪಿದೆ, ಆಗ ಮಾತ್ರ ಇದು ನೆರವೇರುತ್ತದೆ. ನಾವು ಪ್ರಯಾಸಪಟ್ಟಿದ್ದೇವೆ ಮತ್ತು ೩೦ ನೇ ವರ್ಷದ ಆರಂಭದಲ್ಲಿ, ನಮ್ಮ ನಿರ್ಣಯವನ್ನು ಈಡೇರಿಸಿದ ಸಂತೋಷವನ್ನು ಪಡೆದುಕೊಂಡಿದ್ದೇವೆ ಎಂದು ಭಾಗವತ್ ಹೇಳಿದರು.

ಮೂರು ದಶಕಗಳ ಕಾಲ ತನ್ನ ರಾಜಕೀಯವನ್ನು ವ್ಯಾಖ್ಯಾನಿಸಿದ ಬಿಜೆಪಿಯ ಚಳವಳಿಯನ್ನು ಫಲಪ್ರದಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ರಾಮ ಮಂದಿರದ  ಭೂಮಿ ಪೂಜೆಯನ್ನು ನಡೆಸಿದ ನಂತರ ಅವರು ಮಾತನಾಡಿದರು.

ಇಂದು ಇಡೀ ದೇಶದಲ್ಲಿ ಸಂತೋಷದ ಅಲೆಯಿದೆ. ಶತಮಾನಗಳ ಭರವಸೆಯ ನೆರವೇರಿಕೆಯ ಬಗ್ಗೆ ಒಂದು ಸಂತೋಷವಿದೆ. ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೊರತೆಯಿದ್ದ ಆತ್ಮವಿಶ್ವಾಸವನ್ನು ಇಂದು ಸ್ಥಾಪಿಸಿದ್ದರಿಂದ ಅತ್ಯಂತ ಸಂತೋಷವಾಗಿದೆ ಎಂದು ಅವರು ಹೇಳಿದರು.

ರಾಮ ಮಂದಿರ ಭೂಮಿ ಪೂಜೆಯ ಅದ್ಭುತ ಸಮಾರಂದ ನೇರ ಪ್ರಸಾರವನ್ನು ಉಲ್ಲೇಖಿಸಿದ ಅವರುಎಷ್ಟೋ ಜನರು ತ್ಯಾಗ ಮಾಡಿದ್ದಾರೆ. ಆದರೆ ಅವರು ದೈಹಿಕವಾಗಿ ಇಲ್ಲಿರಲು ಸಾಧ್ಯವಿಲ್ಲ. ಇಲ್ಲಿಗೆ ಬರಲು ಸಾಧ್ಯವಾಗದ ಕೆಲವರು ಇದ್ದಾರೆ, ಅಡ್ವಾಣಿ ಜಿ ಇದನ್ನು ತಮ್ಮ ಮನೆಯಲ್ಲಿಯೇ ನೋಡುತ್ತಿರಬಹುದು. ಸಾಕಷ್ಟು ನಾಯಕರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿಲ್ಲ. ಪರಿಸ್ಥಿತಿಯೇ ಹಾಗಿದೆ. ಕೊರೊನಾ ಕಾಲದಿಂದ ವಿಶ್ವ ಅಂತರ್ಮುಖಿಯಾಗಿದೆ. ಏನಾದರೂ ದಾರಿಯಿದೆಯೇ ಎಂದು ಎದುರು ನೋಡುತ್ತಿದೆ. ನಮಗೆ ವಿಶ್ವಾಸವಿದೆ. ರಾಮನ ಹಾದಿಯಲ್ಲಿ ಪರಿಹಾರವಿದೆ ಎಂದು ಅವರು ಹೇಳಿದರು.

ಎಲ್ಲರೂ ರಾಮರೇ, ಎಲ್ಲರಲ್ಲೂ ರಾಮನೇ ಇದ್ದಾನೆ. ರಾಮ ಮಂದಿರವನ್ನು ಇಲ್ಲಿಯೇ ಕಟ್ಟೋಣ. ನಮ್ಮ ಹೃದಯಗಳನ್ನು ಅಯೋಧ್ಯೆ ಮಾಡಿಕೊಳ್ಳೋಣ ಎಂದು ಆರ್ಎಸ್ಎಸ್ ಮುಖ್ಯಸ್ಥ ನುಡಿದರು.

ಧರ್ಮ ಎಲ್ಲರನ್ನೂ ಮೇಲಕ್ಕೆ ತರುತ್ತದೆ. ವಿಶ್ವಕ್ಕೇ ಭಾರತವು ಸುಖ ಶಾಂತಿ ತರಬಲ್ಲದು. ನಾವು ಅಯೋಧ್ಯೆಯಲ್ಲಿ ಮಂದಿರ ಕಟ್ಟಿ ಸುಮ್ಮನಾಗಬಾರದು. ಅದಕ್ಕೂ ಮೊದಲು ಮನಮಮಂದಿರ ಕಟ್ಟಬೇಕು ಎಂದು ಭಾಗವತ್ ಹೇಳಿದರು.

ದೇಶದಲ್ಲಿ ಈಗಾಗಲೇ ಲಕ್ಷಾಂತರ ಮಂದಿರಗಳಿವೆ. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಎನ್ನುವುದು ಅವೆಲ್ಲಕ್ಕಿಂತಲೂ ಭಿನ್ನ. ಇಲ್ಲಿ ಮಂದಿರ ನಿರ್ಮಾಣವಾಗುವ ಮೊದಲು ನಮ್ಮ ಮನಮಂದಿರಗಳನ್ನು ನಿರ್ಮಿಸಿಕೊಳ್ಳೋಣ ಎಂದು ಭಾಗವತ್ ಹೇಳಿದರು.

ಅತಿಆಸೆ, ವಿಪರೀತ ಸಿಟ್ಟು, ಜಿಪುಣತನದಂಥ ಸಮಾಜಕಂಟಕ ಸ್ವಭಾಗಳನ್ನು ದೂರವಿಡಲು ರಾಮನ ಆದರ್ಶಗಳಿಂದ ಸ್ಪೂರ್ತಿ ಪಡೆಯೋಣ ಎಂದು ಕರೆ ನೀಡಿದರು.

No comments:

Advertisement