Saturday, August 15, 2020

ಚೀನಾದಲ್ಲಿ ಸ್ವಾತಂತ್ರ್ಯೋತ್ಸವ

 ಚೀನಾದಲ್ಲಿ ಸ್ವಾತಂತ್ರ್ಯೋತ್ಸವ

ಬೀಜಿಂಗ್: ದೇಶದಲ್ಲಿ ಮತ್ತು ಚೀನಾದಲ್ಲಿ ಭಾರತೀಯರು ಕೊರೋನಾ ಸಾಂಕ್ರಾಮಿಕ ಮತ್ತು ಗಡಿಭಾಗದಲ್ಲಿನ ಆಕ್ರಮಣಶೀಲತೆಯ ಅವಳಿ ಸವಾಲುಗಳನ್ನು ಎದುರಿಸುತ್ತಿದ್ದಾರೆ, ಸವಾಲುಗಳನ್ನು ಎದುರಿಸಲು ಭಾರತೀಯ ನಾಗರಿಕರು ಒಗ್ಗೂಡಬೇಕಾಗಿದೆ ಎಂದು ಚೀನಾಕ್ಕೆ ಭಾರತದ ರಾಯಭಾರಿಯಾಗಿರುವ ವಿಕ್ರಮ್ ಮಿಶ್ರಿ 2020 ಆಗಸ್ಟ್ 15ರ ಶನಿವಾರ ಹೇಳಿದರು.

ಭಾರತದ ೭೪ ನೇ ಸ್ವಾತಂತ್ರ್ಯ ದಿನಾಚರಣೆಯಂದು ಬೀಜಿಂಗಿನ ಇಂಡಿಯಾ ಹೌಸ್‌ನಲ್ಲಿ ನಡೆದ ಭಾರತೀಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಿಸ್ರಿ, ‘ನೀವು ರಾಷ್ಟ್ರಪತಿಗಳ (ಅಧ್ಯಕ್ಷ ರಾಮನಾಥ್ ಕೋವಿಂದ್ ಅವರ ಸ್ವಾತಂತ್ರ್ಯ ದಿನಾಚರಣೆ ಮುನ್ನಾದಿನದ) ಭಾಷಣ ಕೇಳಿದ್ದೀರಿ, ೨೦೨೦ ಬಹಳ ಅಸಾಮಾನ್ಯವಾದ ವರ್ಷವಾಗಿದೆ. ಚೀನಾದಲ್ಲಿ ನಾವು ಸೇರಿದಂತೆ. ಇಲಿನ ಭಾರತೀಯರು ಕೋವಿಡ್ -೧೯ ಮತ್ತು ನಮ್ಮ ಗಡಿಯಲ್ಲಿನ ಆಕ್ರಮಣಶೀಲತೆಯ ಅವಳಿ ಸವಾಲುಗಳನ್ನು ಎದುರಿಸಬೇಕಾಯಿತು ಎಂದು ನುಡಿದರು.

ಅವಳಿ ಸವಾಲುಗಳನ್ನು ಎದುರಿಸಲು ಪ್ರಯತ್ನ ಮತ್ತು ತ್ಯಾಗ ಎರಡೂ ಅಗತ್ಯವಿದೆ ಎಂದು ಮಿಸ್ರಿ ಹೇಳಿದರು.

ಚೀನಾದಲ್ಲಿ ಭಾರತದ ರಾಯಭಾರಿಯಾಗಿ, ಚೀನಾದ ರಾಜಧಾನಿಯಲ್ಲಿನ ಅಧಿಕಾರದ ಅಪಾರದರ್ಶಕ ಕಾರಿಡಾರ್‌ಗಳಲ್ಲಿ ಗಡಿ ಪ್ರಶ್ನೆಯ ವಿಚಾರವಾಗಿ ಸಂವಹನ ಮಾರ್ಗಗಳನ್ನು ಮುಕ್ತವಾಗಿಡುವ ಭಾರತದ ಪ್ರಯತ್ನಗಳ ಕೇಂದ್ರದಲ್ಲಿ ಮಿಸ್ರಿ ಇದ್ದಾರೆ.

ಗಡಿಯಲ್ಲಿ ನವದೆಹಲಿಯ ಸ್ಥಾನದಲ್ಲಿರುವ ಬೀಜಿಂಗಿನಲ್ಲಿ ಬೀಡುಬಿಟ್ಟಿರುವ ಇತರ ರಾಯಭಾರ ಕಚೇರಿಗಳು ಮತ್ತು ರಾಜತಾಂತ್ರಿಕರನ್ನು ಸಂಪರ್ಕಿಸುವುದರ ಜೊತೆಗೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ (ಸಿಪಿಸಿ) ಹಿರಿಯ ಕಾರ್ಯಕರ್ತ ಮತ್ತು ಚೀನಾದ ಸಶಸ್ತ್ರ ಪಡೆಗಳನ್ನು ನಿರ್ವಹಿಸುವ ಕೇಂದ್ರ ಮಿಲಿಟರಿ ಆಯೋಗದ (ಸಿಎಮ್‌ಸಿ) ಹಿರಿಯ ಅಧಿಕಾರಿ ಜೊತೆಗೆ ವಾರ ಎರಡು ಸಭೆಗಳನ್ನು ಮಿಸ್ರಿ ನಡೆಸಿದ್ದಾರೆ.

ಸಿಪಿಸಿ ಕೇಂದ್ರ ಸಮಿತಿಯ ವಿದೇಶಾಂಗ ವ್ಯವಹಾರಗಳ ಆಯೋಗದ ಉಪನಿರ್ದೇಶಕ ಲಿಯು ಜಿಯಾಂಚಾವೊ ಅವರನ್ನು ದೂತರು ಭೇಟಿಯಾದ ಎರಡು ದಿನಗಳ ನಂತರ ಶುಕ್ರವಾರ ಸಿಎಂಸಿಯ ಅಂತಾರಾಷ್ಟ್ರೀಯ ಸೇನಾ ಸಹಕಾರ ಕಚೇರಿಯ ನಿರ್ದೇಶಕರಾದ ಮೇಜರ್ ಜನರಲ್ ಸಿ ಗುವೆ ಅವರನ್ನು ಮಿಸ್ರಿ ಭೇಟಿಯಾದರು.

ಸಭೆಗಳು ಬಿಕ್ಕಟ್ಟಿನ ಇತ್ಯರ್ಥಕ್ಕಾಗಿ ಚೀನಾದ ನಾಯಕತ್ವವನ್ನು ಸಂಪರ್ಕಿಸುವ ಭಾರತದ ಯತ್ನದ ಭಾಗವಾಗಿವೆ.

ಚೀನಾದಲ್ಲಿ ಕೋವಿಡ್ -೧೯ ಸಾಂಕ್ರಾಮಿಕ ಸಂಭವಿಸಿದ ಹಿನ್ನೆಲೆಯಲ್ಲಿ, ಭಾರತೀಯ ರಾಯಭಾರ ಕಚೇರಿ ಮತ್ತು ಮಿಸ್ರಿ ಸಹ ಫೆಬ್ರವರಿಯಲ್ಲಿ ಭಾರತೀಯರನ್ನು ಸ್ಥಳಾಂತರಿಸುವ ವಿಮಾನಗಳಿಗೆ ವ್ಯವಸ್ಥೆ ಮಾಡಿದ್ದರು. ಕಳೆದ ವರ್ಷ ಡಿಸೆಂಬರಿನಲ್ಲಿ ಸಾಂಕ್ರಾಮಿಕ ರೋಗದ ಕೇಂದ್ರ ಬಿಂದುವಾದ ಚೀನಾದ ವುಹಾನ್ ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದ  ಅಲ್ಲಿ ಅಧ್ಯಯನ ಮಾಡುತ್ತಿರುವ ಮತ್ತು ಕೆಲಸ ಮಾಡುತ್ತಿರುವ ನೂರಾರು ಭಾರತೀಯರನ್ನು ವಿಮಾನಗಳ ಮೂಲಕ ವೂಹಾನ್‌ನಿಂದ ಭಾರತಕ್ಕೆ ಮರಳಿ ಕರೆತಂದಿದ್ದವು.

"ನೀವು ಚೀನಾದಲ್ಲಿದ್ದೀರಿ, ವಿಷಯಗಳು ಅಗೋಚರ ರೂಪದಲ್ಲಿ ಬದಲಾಗಿವೆ ಮತ್ತು ಕೆಲವು ಸಂದರ್ಭಗಳಲ್ಲಿ, ಬದಲಾವಣೆಯು ನಿಮ್ಮಲ್ಲಿ ಅನೇಕರ ಮೇಲೆ ದೈನಂದಿನ ಜೀವನz ಮೇಲೆ ಪರಿಣಾಮ ಬೀರುತ್ತಿದೆ ಎಂದು ನನಗೆ ಖಾತ್ರಿಯಿದೆ" ಎಂದು ಕೋವಿಡ್ -೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಿಸ್ರಿ ಭಾರತೀಯ ವಲಸೆಗಾರರಿಗೆ ಹೇಳಿದರು.

ಭಾರತೀಯ ವಲಸೆಗಾರರಿಗೆ ಸಹಾಯದ ಭರವಸೆ ನೀಡಿದ ಮಿಸ್ರಿ, ಸಾಂಕ್ರಾಮಿಕ ಪರಿಸ್ಥಿತಿಗೆ ಸ್ಪಂದಿಸುವ ಸಲುವಾಗಿ ಚೀನಾ ಸರ್ಕಾರವೂ ವಿಭಿನ್ನ ನೀತಿಗಳನ್ನು ರೂಪಿಸುತ್ತಿದೆ ಮತ್ತುನಾವು ನೀತಿಗಳಿಗೆ ನಮ್ಮನ್ನು ಹೊಂದಿಸಿಕೊಳ್ಳಬೇಕು ಮತ್ತು ನಮ್ಮ ನಾಗರಿಕರಿಗೆ ಉತ್ತಮವಾದದ್ದನ್ನು ಮಾಡಬೇಕು ಎಂದು ಹೇಳಿದರು.

No comments:

Advertisement