Friday, October 9, 2020

‘ರುದ್ರಮ್ -1’ ಶತ್ರು ರಾಡಾರ್‌ಗಳಿಗೆ ಯಮಸ್ವರೂಪಿ

 ‘ರುದ್ರಮ್ -1’ ಶತ್ರು ರಾಡಾರ್ಗಳಿಗೆ ಯಮಸ್ವರೂಪಿ

ಭಾರತದಿಂದ ಚೊಚ್ಚಲ ವಿಕಿರಣ ನಿರೋಧಿ ಕ್ಷಿಪಣಿ ಪರೀಕ್ಷೆ

ನವದೆಹಲಿ: ಶತ್ರು ರಾಡಾರ್ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಛಿದ್ರಗೊಳಿಸಲು ಭಾರತೀಯ ವಾಯುಪಡೆಯು ತನ್ನ ಸುಖೋಯ್ -೩೦ ಎಂಕೆಐ ಫೈಟರ್ ಜೆಟ್ಗಳಿಂದ ಉಡಾಯಿಸಬಹುದಾದ ಯುದ್ಧತಂತ್ರದ ತನ್ನ ಚೊಚ್ಚಲ ವಿಕಿರಣ ನಿರೋಧಿ ಕ್ಷಿಪಣಿ ರುದ್ರಮ್- ನ್ನು ಭಾರತ 2020 ಅಕ್ಟೋಬರ್ 09ರ ಶುಕ್ರವಾರ ಯಶಸ್ವಿಯಾಗಿ ಪರೀಕ್ಷಿಸಿತು.

ರುದ್ರಮ್- ಕ್ಷಿಪಣಿಯು ಮ್ಯಾಕ್ ವರೆಗೆ ಅಂದರೆ ಶಬ್ಧದ ವೇಗದ ಎರಡು ಪಟ್ಟಿನಷ್ಟು ಉಡಾವಣಾ ವೇಗವನ್ನು ಹೊಂದಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಹೊಸ ಪೀಳಿಗೆಯ ಶಸ್ತ್ರವನ್ನು ಅಭಿವೃದ್ಧಿ ಪಡಿಸಿದೆ. ಬೆಳಿಗ್ಗೆ ೧೦.೩೦ ಸುಮಾರಿಗೆ ಬಂಗಾಳಕೊಲ್ಲಿಯಲ್ಲಿನ ಒಡಿಶಾ ತೀರದಲ್ಲಿರುವ ಬಾಲಸೋರ್ ಮಧ್ಯಂತರ ಪರೀಕ್ಷಾ ವಲಯದಲ್ಲಿ ಇದನ್ನು ಪರೀಕ್ಷಿಸಲಾಯಿತು.

"ಇದು ಒಂದು ಬೃಹತ್ ಹೆಜ್ಜೆಯಾಗಿದೆ" ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಡಿಆರ್ಡಿಒದ ಯಸ್ವೀ  ಪರೀಕ್ಷೆ ಬಗ್ಗೆ ಹೇಳಿದರು. "ಭಾರತೀಯ ವಾಯುಪಡೆಯು (ಐಎಎಫ್) ಈಗ ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಮಾಡಲು ಶತ್ರು ಪ್ರದೇಶಕ್ಕೆ ನುಗ್ಗಿ ಸೀಡ್ (ಸಪ್ರೆಷ್ಷನ್ ಆಫ್ ಎನಿಮಿ ಏರ್ ಡಿಫೆನ್ಸ್) ಕಾರ್ಯಾಚರಣೆಯನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿ ಹೇಳಿದರು.

ಇದು ಭಾರತೀಯ ವಾಯುಪಡೆಯ ದಾಳಿ ವಿಮಾನಗಳು ತಮ್ಮ ಕಾರ್ಯಾಚರಣೆಯನ್ನು ಯಾವುದೇ ಅಡೆತಡೆಯಿಲ್ಲದೆ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. "ವಿಕಿರಣ-ನಿರೋಧಿ ಕ್ಷಿಪಣಿಯ ಪರೀಕ್ಷೆಯು ಭಾರತದ ಸಾಮರ್ಥ್ಯವನ್ನು ವರ್ಧಿಸಿದೆ ಎಂದು ಇನ್ನೊಬ್ಬ ಅಧಿಕಾರಿ ನುಡಿದರು.

ಹೊಸ ತಲೆಮಾರಿನ ವಿಕಿರಣ ನಿರೋಧಿ ಕ್ಷಿಪಣಿ ಅಥವಾ ಎನ್ಜಿಎಆರ್ಎಂನ್ನು ಸುಖೋಯ್-೩೦ ಎಂಕೆಐ ಯುದ್ಧ ವಿಮಾನದಲ್ಲಿ ಸಂಯೋಜಿಸಲಾಗಿದೆ. ಇದರ ವ್ಯಾಪ್ತಿಯು ಫೈಟರ್ ಜೆಟ್ ಹಾರುವ ಎತ್ತರವನ್ನು ಅವಲಂಬಿಸಿರುತ್ತದೆ. ಇದನ್ನು ೫೦೦ ಮೀಟರ್ನಿಂದ ೧೫ ಕಿ.ಮೀವರೆಗಿನ ಎತ್ತರದಿಂದ ಉಡಾಯಿಸಬಹುದು ಮತ್ತು ೨೫೦ ಕಿ.ಮೀ ವ್ಯಾಪ್ತಿಯಲ್ಲಿ ವಿಕಿರಣ ಹೊರಸೂಸುವ ಗುರಿಗಳನ್ನು ಹೊಡೆಯಬಹುದು.

ಎಲ್ಲಾ ರಾಡಾರ್ಗಳು ಮತ್ತು ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ವ್ಯವಸ್ಥೆಗಳು ಉಡಾವಣೆ ಮತ್ತು ಅದರ ಪರಿಣಾಮದ ಬಿಂದುವನ್ನು ಪತ್ತೆ ಮಾಡಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಯುದ್ಧತಂತ್ರzಲ್ಲಿ ಪರಿಣಾಮಕಾರಿ ಪಾತ್ರ ವಹಿಸಬಲ್ಲ, ಗಾಳಿಯಿಂದ ಮೇಲ್ಮೈಗೆ ನೆಗೆಯಬಲ್ಲ ವಿಕಿರಣ ನಿರೋಧಿ ಕ್ಷಿಪಣಿಯು ಪ್ಯಾಸಿವ್ ಹೋಮಿಂಗ್ ಹೆಡ್ನ್ನು ಹೊಂದಿದ್ದು ಇದು ವ್ಯಾಪಕ ಶ್ರೇಣಿಯ ಆವರ್ತನಗಳ ವಿಕಿರಣದ ಮೂಲಗಳನ್ನು ಪತ್ತೆ ಮಾಡುತ್ತದೆ. ಇದು ಉಡಾವಣೆಯ ಮೊದಲು ಮಾತ್ರವಲ್ಲದೆ ಅದನ್ನು ಉಡಾವಣೆಯ ಬಳಿಕವೂ ಗುರಿಯನ್ನು ನಿರ್ಧರಿಸಬಲ್ಲುದು.

ಯುದ್ಧ ತಂತ್ರದಲ್ಲಿ ಬಳಸಲಾಗುವ ಗಾಳಿಯಿಂದ ಮೇಲ್ಮೈಗೆ ಹಾರುವ ಅಮೆರಿಕದ ನೌಕಾಪಡೆಗೆ ೨೦೧೭ರಲ್ಲಿ ಸೇರ್ಪಡೆ ಮಾಡಲಾದ ಎಜಿಎಂ-೮೮ಇ ವಿಕಿರಣ ನಿರೋಧಿ ಗೈಡೆಡ್ ಕ್ಷಿಪಣಿಗೆ ಭಾರತದ ಕ್ಷಿಪಣಿಯನ್ನು ಹೋಲಿಸಬಹುದು. ಅಮೆರಿಕದ ನೌಕಾಪಡೆಗೆ ಸೇರ್ಪಡೆಯಾಗಿರುವ ಎಜಿಎಂ -೮೮ಇ ಕ್ಷಿಪಣಿಯು ಸ್ಥಳಾಂತರಿಸಬಹುದಾದ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ಗುರಿಗಳು ಮತ್ತು ಸ್ಥಗಿತಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಇತರ ಗುರಿಗಳ ಮೇಲೆ ದಾಳಿ ನಡೆಸಬಲ್ಲುದು. ಅಂದರೆ ಕ್ಷಿಪಣಿ ಉಡಾವಣೆಯ ನಂತರ ಶತ್ರುಗಳು ರಾಡಾರನ್ನು ಸ್ಥಗಿತಗೊಳಿಸಿದರೂ ಕ್ಷಿಪಣಿಯು ತನ್ನ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ.

. ಮ್ಯಾಕ್ನಿಂದ ಮ್ಯಾಕ್ವರೆಗಿನ ವೇಗದಲ್ಲಿ ಉಡಾಯಿಸಬಹುದಾದ ಸೂಪರ್ಸಾನಿಕ್ ಸಾಮರ್ಥ್ಯದ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ ಡಿಆರ್ಡಿಒ ತಂಡಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಟ್ವೀಟ್ ಮೂಲಕ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಭಾರತೀಯ ವಾಯುಪಡೆಗಾಗಿ ಡಿಆರ್ಡಿಒ ಅಭಿವೃದ್ಧಿಪಡಿಸಿದ ಭಾರತದ ಹೊಸ ಪೀಳಿಗೆಯ ಮೊದಲ ದೇಶೀಯ ವಿಕಿರಣ ನಿರೋಧಿ ಕ್ಷಿಪಣಿ ರುದ್ರಮ್ - ಈದಿನ ಬಾಲಸೋರ್ ಸಮಗ್ರ ಪರೀಕ್ಷಾ ವಲಯದಲ್ಲಿ  ಯಶಸ್ವಿಯಾಗಿ ಪರೀಕ್ಷಿಸಲ್ಪಟ್ಟಿತು. ಗಮನಾರ್ಹ ಸಾಧನೆಗಾಗಿ ಡಿಆರ್ಡಿಒ ಮತ್ತು ಇತರ ಪಾಲುದಾರರಿಗೆ ಅಭಿನಂದನೆಗಳು ಎಂದು ರಾಜನಾಥ್ ಸಿಂಗ್ ಟ್ವೀಟಿನಲ್ಲಿ ತಿಳಿಸಿದ್ದಾರೆ.

No comments:

Advertisement