ಬಿಜೆಪಿ ಪುರುಚ್ಚಾರ: ಎಲ್‌ಜೆಪಿ ಮೈತ್ರಿಯ ಭಾಗವಲ್ಲ
ಪಾಟ್ನಾ: ಬಿಹಾರ ವಿಧಾನಸಭೆಯ ೭೧ ಸ್ಥಾನಗಳಿಗೆ ಅಕ್ಟೋಬರ್ ೨೮ ರಂದು ನಡೆಯಲಿರುವ ಮೊದಲ ಹಂತದ ಮತದಾನಕ್ಕೆ ಕೇವಲ ೧೦ ದಿನಗಳು ಬಾಕಿ ಇರುವಾಗ, ಎಲ್‌ಜೆಪಿ ತಮ್ಮ ಮೈತ್ರಿಕೂಟದ ಭಾಗವಲ್ಲ ಎಂಬ ಮತದಾರರಲ್ಲಿ ಅನುಮಾನಗಳನ್ನು ಹೋಗಲಾಡಿಸಲು ಬಿಜೆಪಿಯು 2020 ಅಕ್ಟೋಬರ್ 17ರ ಶನಿವಾರ ಮತ್ತೊಮ್ಮೆ ಸ್ಪಷ್ಟೀಕರಣವನ್ನು ನೀಡಿದೆ.
‘ಬಿಜೆಪಿ ತನ್ನ ನಿಲುವಿನಲ್ಲಿ ಬಹಳ ಸ್ಪಷ್ಟವಾಗಿದೆ. ಎಲ್‌ಜೆಪಿ ನಮ್ಮ ಮೈತ್ರಿಯ ಭಾಗವಲ್ಲ. ಚಿರಾಗ್ ಪಾಸ್ವಾನ್ ಅವರು ಯಾವುದೇ ಭ್ರಮೆಯನ್ನು ಇಟ್ಟುಕೊಳ್ಳಬಾರದು ಎಂದು ನಾವು ಹೇಳಲು ಬಯಸುತ್ತೇವೆ. ಬಿಜೆಪಿ-ಜೆಡಿಯು ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುತ್ತಿವೆ ಮತ್ತು ನಿತೀಶ್ ಕುಮಾರ್ ಜಿ ಮುಖ್ಯಮಂತ್ರಿಯಾಗಲಿದ್ದಾg’
ಎಂದು ಬಿಹಾರ ಬಿಜೆಪಿ ಉಸ್ತುವಾರಿ ಭೂಪೇಂದರ್ ಯಾದವ್ ಶನಿವಾರ ಹೇಳಿದರು.
’ನಾನು ಪ್ರಧಾನಿ ನರೇಂದ್ರ ಮೋದಿಯವರ ‘ಹನುಮಂತ’ ಮತ್ತು ಬಿಜೆಪಿಯ ಹಿರಿಯ ನಾಯಕನೊಂದಿಗಿನ ನನ್ನ ಸಂಬಂಧವು ಕೇಂದ್ರ ಮತ್ತು ಬಿಹಾರದಲ್ಲಿನ ಆಡಳಿತ ಪಕ್ಷದ ಇತರ ನಾಯಕರ ಹೇಳಿಕೆUಳಿಂದ ಪ್ರಭಾವಿತವಾಗುವುದಿಲ್ಲ’ ಎಂಬುದಾಗಿ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಶುಕ್ರವಾರ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಯಾದವ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಎಲ್‌ಜೆಪಿಯು
ಬಿಹಾರ ಚುನಾವಣೆಯಲ್ಲಿ ಉಳಿವಿಗಾಗಿ ಹೋರಾಡುತ್ತಿರುವ ಆರ್‌ಎಲ್‌ಎಸ್‌ಪಿ ಮತ್ತು ಮತ್ತು ಪಪ್ಪು ಯಾದವ್ ಅವರ ಜೆಎಪಿಯ ಹಾಗಿದೆ’ ಎಂದು ಯಾದವ್ ಹೇಳಿದರು.
ಎಲ್‌ಜೆಪಿ ಸ್ವಂತ ನೆಲೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಪಕ್ಷವು ಈ ಹಿಂದೆ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲವಿಲ್ಲದೆ ಸ್ಪರ್ಧಿಸಿತ್ತು ಮತ್ತು ಬಹಳ ಕೆಟ್ಟದಾಗಿ ಸೋತಿತ್ತು.
ಚಿರಾಗ್ ಅವರ ಹನುಮಂತ ಹೇಳಿಕೆಯು ಜೆಡಿಯು ಜೊತೆಗಿನ ಬಿಜೆಪಿ ಮೈತ್ರಿಯ ಮೇಲೇನೂ ಪರಿಣಾಮ ಬೀರುವುದಿಲ್ಲ. ಅವರು ಎನ್‌ಡಿಎಯನ್ನು ವಿರೋಧಿಸಬಯಸುವ ಕಲಿಯುಗದ (ಆಧುನಿಕ) ಹನುಮಂತ ಎಂದು ಜೆಡಿ (ಯು) ಪ್ರಧಾನ ಪ್ರಧಾನ ಕಾರ್ಯದರ್ಶಿ ಕೆ ಸಿ ತ್ಯಾಗಿ ಹೇಳಿದರು.
ಚಿರಾಗ್ ಅವರ ಪ್ರತಿಪಾದನೆಯನ್ನು ಬಿಜೆಪಿ ನಾಯಕರು ನಿಭಾಯಿಸಿದ ಬಗ್ಗೆ ಜೆಡಿಯು ನಾಯಕ ತೃಪ್ತಿ ವ್ಯಕ್ತಪಡಿಸಿದರು. "ಚಿರಾಗ್
ರಾಜಕೀಯ ಹರಾ-ಕಿರಿ ಮಾಡಿದ್ದಾರೆ. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ ಕುಮಾರ್ ಜಂಟಿ ರಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಬಿಜೆಪಿಯೊಂದಿಗಿನ ನಮ್ಮ ಮೈತ್ರಿಯ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ’ ಎಂದು ತ್ಯಾಗಿ ಹೇಳಿದರು.
ಚಿರಾಗ್ ಮತ್ತು ಬಿಜೆಪಿಯ ಮೇಲಿನ ಅವರ ಪ್ರೀತಿಯನ್ನು ಎದುರಿಸಲು ತಾವು ಹೇಳಿಕೆಗಳನ್ನು ನೀಡಬೇಕಾಗಿರುವುದು ಮತದಾರರು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಖಂಡಿತವಾಗಿಯೂ ಕೆಲವು ಗೊಂದಲಗಳನ್ನು ಸೃಷ್ಟಿಸುತ್ತ್ತದೆ ಎಂದು ಎನ್‌ಡಿಎ ನಾಯಕರು ಖಾಸಗಿಯಾಗಿ ಒಪ್ಪಿಕೊಂಡರು. "ಬಿಜೆಪಿ
ನಾಯಕರ ಸಮಯೋಚಿತ ನಿರಾಕರಣೆ ಸ್ವಲ್ಪ ಮಟ್ಟಿಗೆ ಗೊಂದಲವನ್ನು ತೆರವುಗೊಳಿಸಲು ಸಹಾಯ ಮಾಡಿದೆ" ಎಂದು
ಎನ್‌ಡಿಎ ಕಾರ್ಯಕರ್ತರೊಬ್ಬರು ಹೇಳಿದರು.
ಬಿಜೆಪಿ ನಾಯಕರಾದ ಭೂಪೇಂದರ್ ಯಾದವ್, ಮನೋಜ್ ತಿವಾರಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ಸಂಜಯ್ ಜೈಸ್ವಾಲ್ ಅವರು ಹಿಂದಿನ ದಿನ ‘ಇ-ಕಮಲ್’ ವೆಬ್‌ಸೈಟ್ ಮತ್ತು ಪಕ್ಷದ ಮುಖಂಡ ಮತ್ತು ನಟ ದಿನೇಶ್ ಲಾಲ್ ಯಾದವ್ ‘ನೀರಾಹುವಾ’ ಒಳಗೊಂಡ ‘ಮೋದಿ ಜಿ ಕಿ ಲೆಹರ್’ ಚುನಾವಣಾ ಗೀತೆಯನ್ನು ಪ್ರಾರಂಭಿಸಿದರು.
ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖಂಡ ತೇಜಶ್ವಿ ಯಾದವ್ ಅವರನ್ನು ಟೀಕಿಸಿದ ಯಾದವ್ ಅಧಿಕಾರಕ್ಕೆ ಬಂದರೆ ೧೦ ಲಕ್ಷ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಉದ್ಯೋಗಕ್ಕೆ ಅರ್ಹತೆ ಇಲ್ಲದವರು ಉದ್ಯೋಗ ಒದಗಿಸುವ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಚುಚ್ಚಿದರು.
‘ಉದ್ಯೋಗಕ್ಕೆ ಅರ್ಹರಾದವರು ಉದ್ಯೋಗವನ್ನು ಒದಗಿಸಬಹುದು. ಹಲವು ಶಾಲೆಗಳು ಮತ್ತು ಮುಕ್ತ ವಿಶ್ವವಿದ್ಯಾಲಯಗಳಿವೆ. ಕನಿಷ್ಠ ಅವರು ಉದ್ಯೋಗ ಪಡೆಯಲು ಅರ್ಹರಾಗಿರಬೇಕು ಮತ್ತು ನಂತರ ಉದ್ಯೋಗಗಳ ಬಗ್ಗೆ ಮಾತನಾಡಬೇಕು’ ಎಂದು ಯಾದವ್ ಹೇಳಿದರು.
ಬಿಜೆಪಿ ಸಂಸದರು ತೇಜಸ್ವಿಯನ್ನು ‘ದುರ್ಬಲ ನಾಯಕ’ ಎಂದೂ ಕರೆದರು. "ತೇಜಶ್ವಿ
ಯಾದವ್ ಅವರ ನೇತೃತ್ವದಲ್ಲಿ ದುರ್ಬಲ ನಾಯಕತ್ವವನ್ನು ನೀಡಿದ ಆರ್‌ಜೆಡಿ ಮೂಲಕ ಅಲ್ಟ್ರಾ-ಎಡಪಂಥೀಯ ಶಕ್ತಿಗಳು ಮತ್ತೆ ಬಿಹಾರದಲ್ಲಿ ತಮ್ಮ ರೆಕ್ಕೆಗಳನ್ನು ಹರಡಲು ಬಯಸುತ್ತವೆ. ಈ ಪಕ್ಷಗಳ ವರ್ಗ ಯುದ್ಧವನ್ನು ಯಾರೂ ಮರೆಯಬಾರದು’ ಎಂದು ಯಾದವ್ ಹೇಳಿದರು.
ಇದಕ್ಕೆ ಮುನ್ನ ಚಿರಾಗ್ ಪಾಸ್ವಾನ್ ಅವರು ಬಿಹಾರದಲ್ಲಿ ನಿತೀಶ ಕುಮಾರ್ ಅವರನ್ನು ಅಧಿಕಾರದಿಂದ ಇಳಿಸಿ, ಬಿಜೆಪಿ-ಎಲ್‌ಜೆಪಿ ಸರ್ಕಾರ ಸ್ಥಾಪನೆಗೊಳ್ಳಲಿದೆ ಎಂದೂ ಹೇಳಿದ್ದರು.
No comments:
Post a Comment