ಫುಟ್ಬಾಲ್ ದಿಗ್ಗಜ ಡಿಯಾಗೊ ಮರಡೋನಾ ನಿಧನ
ಬ್ಯೂನಸ್ ಐರಿಸ್ (ಅರ್ಜೆಂಟೀನಾ): ಫುಟ್ಬಾಲ್ ದಿಗ್ಗಜ ಡಿಯಾಗೊ ಮರಡೋನಾ ಅವರು ಹೃದಯ ಸ್ತಂಭನದಿಂದ 2020 ನವೆಂಬರ್ 25ರ ಬುಧವಾರ ಸಂಜೆ ನಿಧನರಾದರು. ಅವರಿಗೆ ೬೦ ವರ್ಷ ವಯಸ್ಸಾಗಿತ್ತು
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಎರಡು ವಾರಗಳ ಹಿಂದೆಯಷ್ಟೇ ಮನೆಗೆ ಮರಳಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಇವರಿಗೆ ವಿಥ್ಡ್ರಾವಲ್ ಸಿಂಡ್ರೋಮ್ ಕಾಣಿಸಿಕೊಂಡಿತ್ತು.
ಬ್ಯೂನಸ್ ಐರಿಸ್ ಗಲ್ಲಿಗಳಿಂದ ಫುಟ್ಬಾಲ್ ಜಗತ್ತಿನ ’ಕಿರೀಟವಿಲ್ಲದ ಮಹಾರಾಜ’ ಎಂಬ ಗರಿಮೆಯ ಡಿಯಾಗೊ ಮರಡೋನಾ ಅವರ ಪ್ರತಿಭೆಯಿಂದಲೇ ೧೯೮೬ರಲ್ಲಿ ಅರ್ಜೆಂಟೀನಾ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು. ೧೯೮೬ರ ವಿಶ್ವಕಪ್ ಟೂರ್ನಿಯಲ್ಲಿ ಮರಡೋನಾ ನಾಯಕತ್ವದ ತಂಡವು ಪಶ್ಚಿಮ ಜರ್ಮನಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಮೆಕ್ಸಿಕೊದಲ್ಲಿ ಈ ಟೂರ್ನಿ ನಡೆದಿತ್ತು.
ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ’ದೇವರ ಕೈ’ (ಖಿhe hಚಿಟಿಜ oಜಿ ಉoಜ) ಎಂದೇ ಅರಿಯಲ್ಪಡುವ ವಿವಾದಿತ ಗೋಲು ಸೇರಿದಂತೆ ೨ ಗೋಲುಗಳು ಜಗತ್ಪ್ರಸಿದ್ಧವಾದುದು. ವಿರುದ್ಧ ತಂಡದ ೬ ಆಟಗಾರರನ್ನು ಹಿಂದೆ ತಳ್ಳಿ ೬೦ ಮೀಟರ್ ದೂರದಿಂದ ಹೊಡೆದ ಆ ಒಂದು ಗೋಲು ’ಶತಮಾನದ ಗೋಲು’ ಎಂದೇ ಕರೆಯಲ್ಪಡುತ್ತದೆ. ಫುಟ್ಬಾಲ್ ಮಾತ್ರವಲ್ಲದೆ ವಿವಾದಗಳು, ಮಾದಕ ವಸ್ತುಸೇವನೆಗಳಿಂದ ಮರಡೋನಾ ಸದಾ ಸುದ್ದಿಯಲ್ಲಿರುತ್ತಿದ್ದರು.
ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರದೇಶದ ಲಾನ್ಸ್ ಎಂಬಲ್ಲಿ ೧೯೬೦ ಅಕ್ಟೋಬರ್ ೩೦ರಂದು ಮರಡೋನಾ ಜನಿಸಿದರು. ಬರಿಗಾಲಿನಲ್ಲೇ ಚೆಂಡುಗಳನ್ನು ಒದೆಯುತ್ತಾ ಬಡತನದಿಂದಲೇ ಬೆಳೆದು ಬಂದವರು ಅವರು. ೧೯೭೭ ಫೆಬ್ರುವರಿ ೨೭ರಂದು ಹಂಗೇರಿ ವಿರುದ್ಧ ಪುಟ್ಬಾಲ್ ಪಂದ್ಯವಾಡುವ ಮೂಲಕ ಅಂತರರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಿದರು. ಆಗ ಅವರ ವಯಸ್ಸು ೧೬. ಕುಳ್ಳಗಿದ್ದರೂ ಮಿಡ್ಫೀಲ್ಡ್ನಲ್ಲಿ ಪ್ರತಿಭಾವಂತ ಆಟಗಾರನಾಗಿ ಮರಡೋನಾ ಹೊರಹೊಮ್ಮಿದರು. ೧೯೭೮ರಲ್ಲಿ ಅರ್ಜೆಂಟೀನಾ ’ಯೂತ್ ವರ್ಲ್ಡ್ ಕಪ್’ ಗೆದ್ದಾಗ ಮರಡೋನಾ ನಾಯಕನಾಗಿದ್ದರು.
೧೯೭೯ ಮತ್ತು ೧೯೮೦ರಲ್ಲಿ ’ಸೌತ್ ಅಮೆರಿಕನ್ ಪ್ಲೇಯರ್ ಆಫ್ ದಿ ಇಯರ್’ ಪ್ರಶಸ್ತಿಗೂ ಭಾಜನರಾದರು. ೧೯೮೨ರಲ್ಲಿ ವಿಶ್ವಕಪ್ ಪಂದ್ಯಕ್ಕೆ ಪ್ರವೇಶ ಪಡೆದ ಅವರು ಒಟ್ಟು ೪ ವಿಶ್ವಕಪ್ ಪಂದ್ಯಗಳನ್ನಾಡಿದ್ದಾರೆ.
೧೯೮೬ರಲ್ಲಿ ಅರ್ಜೆಂಟಿನಾವನ್ನು ವಿಶ್ವ ಚಾಂಪಿಯನ್ ಮಾಡಿದ್ದು ಇದೇ ಪ್ರತಿಭೆ. ಈ ಪಂದ್ಯದಲ್ಲಿ ಜಗತ್ತಿನ ಶ್ರೇಷ್ಠ ಆಟಗಾರನಿಗಿರುವ ಫಿಫಾ ಗೋಲ್ಡನ್ ಬೂಟ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.
೧೯೯೪ರಲ್ಲಿ ಮಾದಕ ವಸ್ತುಸೇವನೆಯಿಂದಾಗಿ ಪಂದ್ಯದಿಂದ ಹೊರನಡೆಯಬೇಕಾಗಿ ಬಂತು. ಅರ್ಜೆಂಟೀನಾ ಪರವಾಗಿ ವಿಶ್ವಕಪ್ ಟೂರ್ನಿಯ ೨೧ ಪಂದ್ಯಗಳಲ್ಲಿ ೮ ಗೋಲು ದಾಖಲಿಸಿದ್ದಾರೆ ಮರಡೋನಾ. ನಾಲ್ಕು ವಿಶ್ವಕಪ್ ಪಂದ್ಯಗಳನ್ನಾಡಿದ್ದ ಇವರು ೯೧ ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ೩೪ ಗೋಲು ಬಾರಿಸಿದ್ದಾರೆ. ೨೦೧೦ರ ವಿಶ್ವಕಪ್ನಲ್ಲಿ ಅರ್ಜೆಂಟಿನಾದ ಪ್ರಮುಖ ಕೋಚ್ ಆಗಿದ್ದರು.
ಡಿಯಾಗೊ ಮರಡೋನಾ
ಜನನ: ೧೯೬೦ ಅಕ್ಟೋಬರ್ ೩೦
ಅಂತರರಾಷ್ಟ್ರೀಯ ಪಂದ್ಯಗಳು - ೯೧, ಗೋಲ್ - ೩೪
ವಿಶ್ವಕಪ್ ಪಂದ್ಯಗಳು- ೧೯೮೨, ೮೬,೧೯೯೦,೧೯೯೪
ವಿಶ್ವಕಪ್ ಪಂದ್ಯಗಳು- ೨೧, ಗೋಲ್- ೮
ಕ್ಲಬ್ ಪಂದ್ಯಗಳು- ೫೮೮, ಗೋಲ್ - ೩೧೨
No comments:
Post a Comment