Tuesday, December 8, 2020

ಇದು ಮೌಂಟ್ ಎವರೆಸ್ಟ್‌ನ ಹೊಸ ಎತ್ತರ

 ಇದು ಮೌಂಟ್ ಎವರೆಸ್ಟ್ ಹೊಸ ಎತ್ತರ

ನವದೆಹಲಿ: ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಎತ್ತರ ೮೮೪೮.೮೬ ಮೀಟರ್ ಎಂಬುದಾಗಿ ನಿಗದಿ ಪಡಿಸಿರುವ ನೇಪಾಳ ಮತ್ತು ಚೀನಾ ವಿಶ್ವದ ಅತಿ ಎತ್ತರದ ಪರ್ವತದ ಎತ್ತರದ ಬಗೆಗಿನ ದೀರ್ಘಕಾಲದ ಚರ್ಚೆಯನ್ನು ಕೊನೆಗೊಳಿಸುವುದಾಗಿ 2020 ಡಿಸೆಂಬರ್ 08ರ ಮಂಗಳವಾರ ಜಂಟಿಯಾಗಿ ಪ್ರಕಟಿಸಿದವು.

ಹೊಸ ಎತ್ತರವು ಹಿಂದಿನ ಅಳತೆಗಿಂತ ೮೬ ಸೆಂ.ಮೀನಷ್ಟು ( ಅಡಿಗಿಂತ ಸ್ವಲ್ಪ ಕಡಿಮೆ) ಹೆಚ್ಚು ಎಂದು ದೇಶದ ವಿದೇಶಾಂಗ ಸಚಿವ ಪ್ರದೀಪ್ ಗಯಾವಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನೇಪಾಳ-ಚೀನಾ ಗಡಿಯನ್ನು ವ್ಯಾಪಿಸಿರುವ ಪರ್ವತ ಶಿಖರದ ಎತ್ತರವನ್ನು ಏಕಕಾಲದಲ್ಲಿ ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಗಯಾವಲಿ ಮತ್ತು ಕಠ್ಮಂಡು ಮತ್ತು ಬೀಜಿಂಗ್ನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಘೋಷಿಸಿದ್ದಾರೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

"ಇದು ಒಂದು ಐತಿಹಾಸಿಕ ದಿನ" ಎಂದು ವಿದೇಶಾಂಗ ಸಚಿವ ಗಯಾವಲಿ ಮಂಗಳವಾರ ಬಹುನಿರೀಕ್ಷಿತ ಘೋಷಣೆ ಮಾಡುತ್ತಾ ಹೇಳಿದರು.

ನೇಪಾಳ ೨೦೧೧ ರಿಂದ ಮೌಂಟ್ ಎವರೆಸ್ಟ್ ಎತ್ತರವನ್ನು ಅಳೆಯುವ ಕೆಲಸ ಮಾಡುತ್ತಿತ್ತು.

ಅಧಿಕೃತ ಎವರೆಸ್ಟ್ ಹಿಮಶಿಖರದ ಎತ್ತರವನ್ನು ,೮೪೮ ಮೀಟರ್ (೨೯,೦೨೮ ಅಡಿ) ಎಂಬುದಾಗಿ ೧೯೫೪ ರಲ್ಲಿ ಭಾರತೀಯ ಸರ್ವೇಕ್ಷಣಾ (ಸರ್ವೆ ಆಫ್ ಇಂಡಿಯಾ) ಮಾಪನ ಮಾಡಿತ್ತು.

ಭಾರತದ ಬ್ರಿಟಿಷ್ ಸರ್ವೇಯರ್ಗಳ ಗುಂಪೊಂದು ಪೀಕ್ ಎಕ್ಸ್ವಿಯ (ಪ್ರಾರಂಭದಲ್ಲಿ ಶಿಖರವನ್ನು ಹೀಗೆ ಕರೆಯಲಾಗುತ್ತಿತ್ತು) ಎತ್ತರವನ್ನು ೧೮೪೭ ರಲ್ಲಿ ,೭೭೮ ಮೀಟರ್ ಎಂದು ಹೇಳಿತ್ತು. ಹೀಗಾಗಿ ಎವರೆಸ್ಟ್ ಪರ್ವತದ ನಿಖರವಾದ ಎತ್ತರವನ್ನು ಪ್ರಶ್ನಿಸಲಾಗಿತ್ತು.

೧೮೪೯ ಮತ್ತು ೧೮೫೫ ನಡುವೆ, ಭಾರತದ ಸಮೀಕ್ಷೆಯು ಡೆಹ್ರಾಡೂನ್ ನೆಲೆಯಿಂದ ಬಿಹಾರದ ಸೋನಾಖೋಡಾ ನೆಲೆಯವರೆಗೆ ಅವಲೋಕನಗಳನ್ನು ಮಾಡಿತು. ಸಮಯದಲ್ಲಿ ನೇಪಾಳದ ಹಿಮಾಲಯನ್ ಶಿಖರಗಳನ್ನು ಸಹ ಗಮನಿಸಲಾಯಿತು.

ವೇಳೆಯಲ್ಲಿ ಹಿಮಾಲಯದ ಶಿಖರವು ವಿಶ್ವದಲ್ಲೇ ಅತಿ ಹೆಚ್ಚು ಎತ್ತರದ್ದು ಎಂದು ತಿಳಿದಿರಲಿಲ್ಲ. ಗಣನೆಯ ಸಮಯದಲ್ಲಿ, ಪೀಕ್ ಎಕ್ಸ್ವಿಯ ಲೆಕ್ಕ ಹಾಕಲಾದ ಸರಾಸರಿ ಎತ್ತರವು ೮೮೩೯.೮೦ ಮೀಟರ್ ಎಂದು ಪರಿಗಣಿಸಲಾಯಿತು.

ನಂತರ ಪರ್ವತಕ್ಕೆ ಭಾರತದ ಮಾಜಿ ಸರ್ವೇಯರ್-ಜನರಲ್ ಸರ್ ಜಾರ್ಜ್ ಎವರೆಸ್ಟ್ ಅವರ ಹೆಸರನ್ನು ಇಡಲಾಯಿತು.

೧೯೫೪ ರಲ್ಲಿ ಸರ್ವೆ ಆಫ್ ಇಂಡಿಯಾ ತ್ರಿಕೋನಮಿತಿಯ ವಿಧಾನವನ್ನು ಬಳಸಿಕೊಂಡು ಬಿಹಾರದಿಂದ ಲೆಕ್ಕಹಾಕಿ ತಿಳಿಸಿದ ,೮೪೮ ಮೀಟರ್ ಎತ್ತರವನ್ನು ವ್ಯಾಪಕವಾಗಿ ಅಂಗೀಕರಿಸಲಾಗಿತ್ತು.

No comments:

Advertisement