ಪದ್ಮವಿಭೂಷಣ ಮಾಧ್ಯಮ ಉದ್ಯಮಿ ರಾಮೋಜಿ ರಾವ್ ನಿಧನ
ಹೈದರಾಬಾದ್: ರಾಮೋಜಿ ಗ್ರೂಪ್‌ನ ಅಧ್ಯಕ್ಷ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಮಾಧ್ಯಮ ಉದ್ಯಮಿ ಚೆರುಕುರಿ ರಾಮೋಜಿ ರಾವ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ 2024 ಜೂನ್ 08ರ ಶನಿವಾರ ಮುಂಜಾನೆ ನಿಧನರಾದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ರಾಮೋಜಿ ರಾವ್ ಅವರಿಗೆ 87
ವರ್ಷ ವಯಸ್ಸಾಗಿತ್ತು. ಅವರು ತಮ್ಮ
ಪತ್ನಿ ರಮಾ ದೇವಿ ಮತ್ತು ಪುತ್ರ ಚಿ ಕಿರಣ್ ಅವರನ್ನು ಅಗಲಿದ್ದಾರೆ.
ಅವರು ಈನಾಡು ಗ್ರೂಪ್ ಆಫ್
ಪಬ್ಲಿಕೇಷನ್ಸ್ ಮತ್ತು ಈಟಿವಿ ಚಾನೆಲ್‌ಗಳ ಮುಖ್ಯಸ್ಥರಾಗಿದ್ದಾರೆ. ಅವರ ಕಿರಿಯ ಮಗ,
ಚೆರುಕುರಿ ಸುಮನ್,
2012 ಸೆಪ್ಟೆಂಬರ್ 7ರಂದು ಲ್ಯುಕೇಮಿಯಾದಿಂದ ನಿಧನರಾಗಿದ್ದರು.
ರಾಮೋಜಿ ರಾವ್
ಅವರು ದೀರ್ಘಕಾಲದ ಅನಾರೋಗ್ಯ ಮತ್ತು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಉಸಿರಾಟದ
ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡದ ಕಾರಣ ಅವರನ್ನು ಜೂನ್ 5 ರಂದು ಮಧ್ಯಾಹ್ನ ಹೈದರಾಬಾದಿನ ನಾನಕ್ರಮ್‌ಗುಡಾದ ಸ್ಟಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
"ಅವರಿಗೆ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬೆಳಗ್ಗೆ 4.50ರ ಸುಮಾರಿಗೆ ನಾನಕ್ರಮ್‌ಗುಡದ ಸ್ಟಾರ್ ಆಸ್ಪತ್ರೆಯಲ್ಲಿ
ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದರು.
1936ರ ನವೆಂಬರ್
16ರಂದು
ಜನಿಸಿದ ರಾಮೋಜಿ ರಾವ್ ಅವರು ಮಾರ್ಗದರ್ಶಿ ಚಿಟ್ ಫಂಡ್ಸ್, ಈನಾಡು ತೆಲುಗು ದಿನಪತ್ರಿಕೆ, ದೂರದರ್ಶನ ಚಾನೆಲ್‌ಗಳ ಇಟಿವಿ
ನೆಟ್‌ವರ್ಕ್,
ಚಲನಚಿತ್ರ ನಿರ್ಮಾಣ ಸಂಸ್ಥೆ
ಉಷಾ ಕಿರಣ್ ಮೂವೀಸ್ ಮತ್ತು ವಿಶ್ವದ ಅತಿದೊಡ್ಡ ಚಲನಚಿತ್ರ ನಿರ್ಮಾಣ ಸೌಲಭ್ಯವನ್ನು ಒಳಗೊಂಡ ರಾಮೋಜಿ
ಫಿಲ್ಮ್ ಸಿಟಿ (RFC) ಸಹಿತ ಬೃಹತ್ ವ್ಯಾಪಾರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು.
ಅವರು ಡಾಲ್ಫಿನ್ ಗ್ರೂಪ್
ಆಫ್ ಹೋಟೆಲ್‌ಗಳು, ಕಲಾಂಜಲಿ
ಸೀರೆ ಶೋರೂಮ್‌ಗಳು, ಪ್ರಿಯಾ
ಫುಡ್ಸ್ ಮತ್ತು ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್‌ಗಳನ್ನು ಹೊಂದಿದ್ದಾರೆ.
ಉಷಾ ಕಿರಣ್ ಮೂವೀಸ್
ಬ್ಯಾನರ್ ಅಡಿಯಲ್ಲಿ ರಾವ್ ಅವರ ಚಲನಚಿತ್ರಗಳು ಹಲವಾರು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು
ಗೆದ್ದವು. 2016 ರಲ್ಲಿ,
ಅವರು ಪತ್ರಿಕೋದ್ಯಮ,
ಸಾಹಿತ್ಯ ಮತ್ತು ಶಿಕ್ಷಣದಲ್ಲಿನ
ಅವರ ಕೊಡುಗೆಗಳಿಗಾಗಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದರು.
ರಾಮೋಜಿ ರಾವ್ ನಿಧನಕ್ಕೆ ನಿಯೋಜಿತ
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.
No comments:
Post a Comment