Monday, July 13, 2015

The Dog Driver..! ಶ್ವಾನ ಚಾಲಕ..!

The Dog Driver..!


 The Dog Driver

Kuala lumpur: : You might have seen animals riding bicycles in Circus. But have you seen Dog riding motorbike on road? One video shows a Dog riding the motorbike on Road! And for allowing his dog to ride motorbike, owner of the Dog is now in trouble.
 
The Hanoi police are looking for the man who let his dog “ride” his motorbike on the street after observing the said video of the incident which was uploaded online.

The video shows the man with his dog in front letting go of the handlebars while his dog has its paws on them.

This goes on for around half a minute as he keeps telling the dog “Good!”

Many viewers have slammed the man for being reckless for putting himself and other people on the street in danger.

Traffic police officers called the act “extremely dangerous.”

Nguyen Van Quy, a Hanoi traffic police officer, said: “The act must deserves harsh criticism and punishment.”

He said if arrested the man would be fined VND5-7 million (US$230-320), the designated penalty for “releasing both hands while driving a motorbike.”

The officer said he would also lose his drivers’ license for two months and his motorbike for a week.

Besides, the man was not wearing a crash helmet, which attracts another VND200,000 (nearly $10) fine.

Lawyers said he would bear criminal responsibility if he killed or injured someone.
You can view the Video by clicling the above image.

metro.co.uk reported this incident.

ಶ್ವಾನ ಚಾಲಕ..!ಕ್ವಾಲಾಲಂಪುರ:  ಸರ್ಕಸ್ಸಿನಲ್ಲಿ ಪ್ರಾಣಿಗಳು ಸೈಕಲ್, ಬೈಕ್  ಓಡಿಸುವುದನ್ನು ನೀವು ಕಂಡಿರಬಹುದು. ಆದರೆ ನಡುರಸ್ತೆಯಲ್ಲಿ ನಾಯಿ ಬೈಕ್ ಬಿಡುವುದನ್ನು ಕಂಡಿದ್ದೀರಾ? ಅಂತಹ ವಿಡಿಯೋ ಒಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಆದರೆ  ಅತ್ಯಂತ ಅಪಾಯಕಾರಿಯಾದ  ರೀತಿಯಲ್ಲಿ ‘ಶ್ವಾನ ಚಾಲನೆ’ಗೆ ಅನುವು ಮಾಡಿಕೊಟ್ಟ ವಿಯೆಟ್ನಾಂ ವ್ಯಕ್ತಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಈ ವ್ಯಕ್ತಿ ಕಾನೂನು ಪ್ರಕಾರ 320 ಅಮೆರಿಕನ್ ಡಾಲರ್ ದಂಡ ತೆರಬೇಕಾಗಿ ಬರಬಹುದು.

ಈ ಕುತೂಹಲಕಾರಿ ಘಟನೆಯಲ್ಲಿ ನಾಯಿಯು ತನ್ನ ಮುಂಭಾಗದ ಕಾಲುಗಳಿಂದ ಹ್ಯಾಂಡಲ್ ಹಿಡಿದುಕೊಂಡು ಬೈಕ್ ಓಡಿಸುವುದನ್ನು ಚಿತ್ರೀಕರಿಸಲಾಗಿದ್ದು ಅದನ್ನು ಅಂತರ್ಜಾಲದಲ್ಲಿ ಅಪ್​ಲೋಡ್ ಮಾಡಲಾಗಿದೆ.

ವಾಹನದ ಮಾಲೀಕ ಮೋಟಾರ್ ಬೈಕ್​ನಲ್ಲಿ ನಾಯಿಯ ಹಿಂಭಾಗದಲ್ಲಿ ಕುಳಿತುಕೊಂಡು ಶ್ವಾನಚಾಲನೆಗೆ ಅನುವು ಮಾಡಿಕೊಟ್ಟದ್ದು ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕಂಡು ಬರುತ್ತಿದೆ. ಹನೋಯಿಯಲ್ಲಿ ಈ ಘಟನೆ ಘಟಿಸಿದೆ.

‘ವಿಯೆಟ್ನಾಂನ ರಾಜಧಾನಿ ನಗರದ ರಸ್ತೆಯೊಂದರಲ್ಲಿ ಘಟಿಸಿರುವ ಈ ಘಟನೆಯ ವಿಡಿಯೋದಲ್ಲಿ ಮೋಟಾರ್ ಬೈಕ್​ನಲ್ಲಿ ಕುಳಿತ ವ್ಯಕ್ತಿ ಮುಂಭಾಗದಲ್ಲಿದ್ದ ತನ್ನ ನಾಯಿಗೆ ನಿಂತುಕೊಂಡು ಮುಂದಿನ ಕಾಲುಗಳಿಂದ ಮೋಟಾರ್ ಬೈಕ್​ನ ಹ್ಯಾಂಡಲ್ ಹಿಡಿದು ವಾಹನ ಓಡಿಸಲು ಅನುವು ಮಾಡಿಕೊಡುತ್ತಾನೆ. ಶ್ವಾನವು ಹ್ಯಾಂಡಲ್ ಹಿಡಿದುಕೊಂಡ ಸ್ಥಿತಿಯಲ್ಲೇ ವಾಹನ ಅತಿವೇಗವಾಗಿ ಸಾಗುವುದು ಕಾಣಿಸುತ್ತದೆ’ ಎಂದು ಮೆಟ್ರೊ.ಕೊ.ಯುಕೆ ವರದಿ ಮಾಡಿದೆ.

ಈ ನಡವಳಿಕೆಯನ್ನು ಸ್ಥಳೀಯ ಪೊಲೀಸರು ‘ಅತ್ಯಂತ ಅಪಾಯಕಾರಿ’ ಎಂದು ಬಣ್ಣಿಸಿದ್ದಾರೆ.

ಕಾಯ್ದೆ ಪ್ರಕಾರ ಈ ವರ್ತನೆಯು ತೀವ್ರ ವಾಕ್ದಂಡನೆ ಹಾಗೂ ಶಿಕ್ಷೆಗೆ ಯೋಗ್ಯವಾದುದು ಎಂದು ಹನೋಯ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಈ ವ್ಯಕ್ತಿಗೆ ಮೋಟಾರ್ ಬೈಕ್ ಚಲಾಯಿಸುತ್ತಿದ್ದಾಗ ಎರಡೂ ಕೈಗಳನ್ನು ಹ್ಯಾಂಡಲ್​ನಿಂದ ಬಿಟ್ಟದ್ದಕ್ಕಾಗಿ 230ರಿಂದ 320 ಅಮೆರಿಕನ್ ಡಾಲರ್ ದಂಡ ವಿಧಿಸಬಹುದು. ಹೆಲ್ಮೆಟ್ ಧರಿಸದೇ ಇದ್ದುದಕ್ಕಾಗಿ ದಂಡದ ಮೊತ್ತವನ್ನು ಇನ್ನಷ್ಟು ಹೆಚ್ಚಿಸಬಹುದು’ ಎಂದು ಅವರು ನುಡಿದರು.

No comments:

Advertisement