ಮಥುರಾದಲ್ಲಿ
ಮಂಗಗಳ ಕಾಟ: ಲೋಕಸಭೆಯಲ್ಲಿ ಹೇಮಾಮಾಲಿನಿ ಅಳಲು
ನವದೆಹಲಿ: ತಮ್ಮ ಕ್ಷೇತ್ರವಾದ ಮಥುರಾದಲ್ಲಿ ಮಂಗಗಳ ಕಾಟ ಅತಿಯಾಗಿರುವ ಬಗ್ಗೆ ಲೋಕಸಭೆಯಲ್ಲಿ 2019 ನವೆಂಬರ್ 21ರ ಗುರುವಾರ ಗಮನ ಸೆಳೆದ ಬಿಜೆಪಿ ಸಂಸತ್ ಸದಸ್ಯೆ ಹಾಗೂ ಬಾಲಿವುಡ್ ನಟಿ ಹೇಮಾ ಮಾಲಿನಿ ’ಕಪಿ ಕಾಟದಿಂದಾಗಿ ಹಲವಾರು ಸಾವುನೋವುಗಳು ಸಂಭವಿಸಿವೆ. ಈ ಬಗ್ಗೆ ಗಮನ
ಹರಿಸಿ ಸರ್ಕಾರವು ಮಂಗಗಳಿಗೆ ಸಫಾರಿ ನಿರ್ಮಿಸಬೇಕು’ ಎಂದು
ಆಗ್ರಹಿಸಿದರು.
ಶೂನ್ಯ
ವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಹೇಮಾ ಮಾಲಿನಿ ಅವರನ್ನು ಸದಸ್ಯರು ಪಕ್ಷಾತೀತವಾಗಿ ಬೆಂಬಲಿಸಿದರು. ಮಂಗಗಳ ಕಾಟ ಎಲ್ಲೆಡೆಯಲ್ಲೂ ತೀವ್ರಗೊಂಡಿದ್ದು ಗಂಭೀರ ಸಮಸ್ಯೆಯಾಗಿದೆ. ಈ ಹಾವಳಿ ನಿವಾರಣೆಗೆ
ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.
ವಿಷಯವನ್ನು
ಪ್ರಸ್ತಾಪಿಸಿದ ಹೇಮಾ ಮಾಲಿನಿ ಅವರು ತಮ್ಮ ಕ್ಷೇತ್ರವಾದ ಮಥುರಾ ಮತ್ತು ಸಮೀಪದ ವೃಂದಾವನದಂತಹ ಪ್ರದೇಶಗಳಲ್ಲಿ ಕೋತಿ ಕಾಟಕ್ಕೆ ಹಲವರು ಬಲಿಯಾಗಿದ್ದಾರೆ ಎಂದು ಹೇಳಿದರು.
ಮಂಗಗಳ
ಸಹಜ ವಾಸದ ಸ್ಥಳಗಳು ಕ್ಷೀಣಿಸಿವೆ ಹೀಗಾಗಿ ಅವುಗಳು ನಗರಗಳಿಗೆ ದಾಂಗುಡಿ ಇಡುತ್ತಿವೆ. ಆಹಾರ ಅರಸಿ ತಮ್ಮ ಮನೆಗಳತ್ತ ಬರುವ ವಾನರ ಗುಂಪುಗಳ ಜೊತೆಗೆ ಜನರು ಕಠಿಣವಾಗಿ ವ್ಯವಹರಿಸುತ್ತಾರೆ. ಯಾತ್ರಾರ್ಥಿಗಳು ಮಂಗಗಳಿಗೆ ’ಕಚೋರಿ’ ಮತ್ತು ’ಸಮೋಸಾ’ಗಳಂತಹ ಆಹಾರಗಳನ್ನು ನೀಡುತ್ತಾರೆ. ಈ ಅಸಹಜ ಆಹಾರ
ತಿಂದು ಅವುಗಳು ಅಸ್ವಸ್ಥಗೊಳ್ಳುತ್ತವೆ. ಇದರ ಪರಿಣಾಮ ಜನರ ಸ್ವಾಸ್ಥ್ಯದ ಮೇಲೂ ಆಗುತ್ತಿದೆ’
ಎಂದು ಹೇಮಾ ಮಾಲಿನಿ ನುಡಿದರು.
ಕೋತಿಗಳ
ಸಂತಾನಶಕ್ತಿ ಹರಣ ಯತ್ನಗಳು ನಡೆದಿದ್ದು, ಇದರಿಂದಾಗಿ ಅವುಗಳು ತೀವ್ರ ವ್ಯಗ್ರಗೊಂಡಿವೆ. ಕೋಪಿಷ್ಠ ಕೋತಿಗಳು ಮಾರಕ ದಾಳಿ ನಡೆಸುತ್ತಿದ್ದು, ವೃಂದಾವನದಲ್ಲಿ ಇಂತಹ ದಾಳಿಗೆ ಹಲವರು ಬಲಿಯಾಗಿದ್ದಾರೆ’ ಎಂದು
ಬಾಲಿವುಡ್ ನಟಿ ವಿವರಿಸಿದರು.
‘ಪ್ರಾಣಿಗಳಿಗೆ
ಕೂಡಾ ಬದುಕುವ ಹಕ್ಕು ಇದೆ. ಅರಣ್ಯ ಇಲಾಖೆಯು ಅವುಗಳಿಗಾಗಿ ’ಕೋತಿ ಸಫಾರಿ’ಗಳನ್ನು ನಿರ್ಮಿಸಬೇಕು. ಇದರಿಂದ ಕೋತಿಕಾಟ ತಪ್ಪಬಹುದು’
ಎಂದು ಸಂಸದೆ ಪರಿಹಾರ ಸೂಚಿಸಿದರು.
‘ದಯವಿಟ್ಟು
ಈ ವಿಷಯವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಇದು ಅತ್ಯಂತ ಅತ್ಯಂತ ಮಹತ್ವದ ವಿಚಾರ’ ಎಂದೂ ಅವರು ಮಾತು ಸೇರಿಸಿದರು.
ಲೋಕಜನಶಕ್ತಿ
ಪಕ್ಷದ (ಎಲ್ಜೆಪಿ) ಸದಸ್ಯ ಚಿರಾಗ್ ಪಾಸ್ವಾನ್ ಅವರು ಹೇಮಾ ಅವರ ಭಾವನೆಗಳನ್ನು ಪ್ರತಿಧ್ವನಿಸಿದರು. ಲ್ಯುಟಿಯೆನ್ಸ್ ಡೆಲ್ಲಿಯ ಕಪಿ ಸಮಸ್ಯೆ ಕೂಡಾ ಸಣ್ಣದಲ್ಲ ಎಂದು ಅವರು ಹೇಳಿದರು. ’ಲ್ಯುಟಿಯೆನ್ಸ್ ಡೆಲ್ಲಿಯಲ್ಲಿ ಮಂಗಗಳ ಭಯೋತ್ಪಾದನೆ ವಿಪರೀತವಾಗಿದೆ. ಮಂಗಗಳ ಹಾವಳಿ ಪರಿಣಾಮವಾಗಿ ಮಕ್ಕಳು ಉದ್ಯಾನಗಳಲ್ಲಿ ಕೂರಲೂ ಸಾಧ್ಯವಾಗುತ್ತಿಲ್ಲ’ ಎಂದು
ಪಾಸ್ವಾನ್ ವಿವರಿಸಿದರು.
ಅರಣ್ಯ
ನಾಶದ ಪರಿಣಾಮವಾಗಿ ಕಾಡುಗಳು ಕಡಿಮೆಯಾಗುತ್ತಿರುವುದರಿಂದ ಮಂಗಗಳು ಜನರ ವಾಸಸ್ಥಳಗಳತ್ತ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರವು ಮಂಗಗಳ ವಾಸಸ್ಥಾನ ರಕ್ಷಣೆಗೆ ಗಮನ ಹರಿಸಬೇಕು. ಆಗ ಅವುಗಳು ಜನ
ವಸತಿ ಪ್ರದೇಶಗಳತ್ತ ಬರುವುದಿಲ್ಲ ಎಂದು ಪಾಸ್ವಾನ್ ಹೇಳಿದರು.
ತೃಣಮೂಲ
ಕಾಂಗ್ರೆಸ್ ಸಂಸದ ಸುದೀಪ್ ಬಂದೋಪಾಧ್ಯಾಯ ಅವರು ಮಥುರಾಕ್ಕೆ ಭೇಟಿ ನೀಡಿದ್ದಾಗ ತಮ್ಮ ಕನ್ನಡಕಗಳನ್ನು ಮಂಗಗಳು ದಿಢೀರನೆ ಹೇಗೆ ಕಿತ್ತುಕೊಂಡವು ಎಂದು ವಿವರಿಸಿದರು. ಮಂಗಗಳಿಗೆ ’ಫ್ರೂಟಿ’ ಕೊಟ್ಟ ಬಳಿಕ ಅವು ಕನ್ನಡಕವನ್ನು ವಾಪಸ್ ಬಿಸಾಡಿದವು ಎಂದು ಸುದೀಪ್ ನುಡಿದರು.
‘ನಾನು
ವೃಂದವನದ ರಾಮಕೃಷ್ಣ ಮಿಷನ್ಗೆ ಯಾವಾಗಲೂ ಭೇಟಿ
ನೀಡುತ್ತೇನೆ. ಒಮ್ಮೆ ಹೀಗೆ ಭೇಟಿ ನೀಡಿದಾಗ ಬಂಕೆ ಬಿಹಾರಿ ಮಂದಿರದಲ್ಲಿ ನಾನು ಧರಿಸಿದ್ದ ಕನ್ನಡಕವನ್ನು ಮಂಗಗಳು ಸೆಳೆದುಕೊಂಡಿದ್ದವು’ ಎಂದು
ಅವರು ನುಡಿದರು.
‘ನಾನು
ಒಂದೆರಡು ಹೆಜ್ಜೆ ಇಟ್ಟಿದ್ದೆನಷ್ಟೆ. ನನಗೆ ಮುಖವನ್ನು ಯಾರೋ ಮುಟ್ಟಿದಂತೆ ಭಾಸವಾಯಿತು. ಮತ್ತೆ ನೋಡಿದರೆ ನನ್ನ ಕಣ್ಣುಗಳಿಗೆ ಹಾಕಿದ್ದ ಕನ್ನಡಕವೇ ನಾಪತ್ತೆಯಾಗಿತ್ತು. ಇದು ನಂಬಲಸಾಧ್ಯವಾದ ಘಟನೆಯಾಗಿತ್ತು’ ಎಂದು
ಬಂದೋಪಾಧ್ಯಾಯ ವಿವರಿಸಿದರು. ಫ್ರೂಟಿ ಪ್ಯಾಕ್ ತೋರಿಸಿದಾಗ ಮಂಗಗಳು ಕನ್ನಡಕ ಹಿಂದಿರುಗಿಸಿದವು ಎಂದು ಅವರು ಹೇಳಿದರು.
ಕನ್ನಡಕಗಳನ್ನು
ಕಿಸೆಯೊಳಗೆ ಇಟ್ಟುಕೊಳ್ಳುವಂತೆ ಪ್ರದೇಶದಲ್ಲಿ ಫಲಕಗಳನ್ನು ಹಾಕಲಾಗಿದೆ. ಏನಿದ್ದರೂ ಇಂತಹ ಪರಿಸ್ಥಿತಿ ತುಂಬಾ ಅಪಾಯಕಾರಿ. ಸರ್ಕಾರ ಈ ಸಮಸ್ಯೆ ಬಗೆಹರಿಸಲು
ಕ್ರಮ ಕೈಗೊಳ್ಳಬೇಕು ಎಂದು ಅವರು ನುಡಿದರು.
No comments:
Post a Comment